ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ (USA) ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಯುನೆಸ್ಕೋದಿಂದ (UNESCO) ಹೊರ ಬಂದಿದೆ.
ಡೊನಾಲ್ಡ್ ಟ್ರಂಪ್ ಮೊದಲಿನಿಂದಲೂ ಯುನೆಸ್ಕೋ ನಡೆಯನ್ನು ಟೀಕಿಸುತ್ತಾ ಬಂದಿದ್ದರು. ಯುನೆಸ್ಕೋ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಇಲ್ಲ ಮತ್ತು ಇಸ್ರೇಲ್ (Isreal) ವಿರೋಧಿ ಧೋರಣೆ, ಚೀನಾ ಪರ ನೀತಿಯಿಂದ ನಾವು ಹೊರ ಬಂದಿದ್ದೇವೆ ಎಂದು ಅಮೆರಿಕ ಹೇಳಿದೆ.
ಡೊನಾಲ್ಡ್ ಟ್ರಂಪ್ (Donald Trump) ಅವರ ಮೊದಲ ಆಡಳಿತದ ಅವಧಿಯಲ್ಲಿ ಅಮೆರಿಕ 2018 ರಲ್ಲಿ ಯುನೆಸ್ಕೋದಿಂದ ಹೊರ ಬಂದಿತ್ತು. ಜುಲೈ 2023 ರ ಬೈಡನ್ ಅವಧಿಯಲ್ಲಿ ಮತ್ತೆ ಯುನೆಸ್ಕೋವನ್ನು ಅಮೆರಿಕ ಸೇರಿತ್ತು.
ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್ ಪ್ರತಿಕ್ರಿಯಿಸಿ, ಪ್ಯಾಲೆಸ್ಟೈನ್‌ನ್ನು ಸದಸ್ಯ ರಾಷ್ಟ್ರವಾಗಿ ಒಪ್ಪಿಕೊಳ್ಳುವ ಯುನೆಸ್ಕೋದ ನಿರ್ಧಾರವು ಹೆಚ್ಚು ಸಮಸ್ಯಾತ್ಮಕವಾಗಿದೆ ಮತ್ತು ಇದು ಅಮೆರಿಕದ ನೀತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂಓದಿ: ಬಾಂಗ್ಲಾದೇಶದ ವಾಯುಪಡೆ ವಿಮಾನ ದುರಂತ –ಸಾವಿನ ಸಂಖ್ಯೆ 27ಕ್ಕೆ ಏರಿಕೆ
ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO), UN ಮಾನವ ಹಕ್ಕುಗಳ ಮಂಡಳಿ, ಪ್ಯಾರಿಸ್ ಹವಾಮಾನ ಒಪ್ಪಂದ ಮತ್ತು ಇರಾನ್ ಪರಮಾಣು ಒಪ್ಪಂದ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕ ಹೊರಬಂದಿತ್ತು. ಎರಡನೇ ಅವಧಿಯಲ್ಲಿ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವಂತೆ ಆದೇಶಿಸಿದ್ದಾರೆ ಮತ್ತು ಪ್ಯಾಲೆಸ್ಟೀನಿಯನ್ ಪರಿಹಾರ ಸಂಸ್ಥೆ UNRWA ಗೆ ಹಣವನ್ನು ನಿಲ್ಲಿಸಿದ್ದಾರೆ.
ಹಣಕಾಸಿನ ದುರುಪಯೋಗ ಮತ್ತು ಅದು ಅಮೇರಿಕನ್ ವಿರೋಧಿ ಪಕ್ಷಪಾತವೆಂದು ಪರಿಗಣಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿ 1984 ರಲ್ಲಿ ರೇಗನ್ ಅವಧಿಯಲ್ಲಿ ಮೊದಲು ಹಿಂದೆ ಸರಿಯಿತು. ಸುಧಾರಣೆಗಳನ್ನು ಮಾಡಿದ ನಂತರ 2003 ರಲ್ಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ನೇತೃತ್ವದಲ್ಲಿ ಅಮೆರಿಕ ಮತ್ತೆ ಯುನೆಸ್ಕೋವನ್ನು ಸೇರ್ಪಡೆಯಾಗಿತ್ತು.
– ಕಾನೂನಿಗಿಂತ ಯಾರೂ ದೊಡ್ಡವರಲ್ಲ ಅಂತ ಮಾಜಿ ಅಧ್ಯಕ್ಷರಿಗೆ ಹಾಲಿ ಅಧ್ಯಕ್ಷ ಟಾಂಗ್
ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಬರಕ್ ಒಬಾಮಾ (Donald Trump) ಅವರನ್ನು ಬಂಧಿಸುವ ಎಐ (ಕೃತಕ ಬುದ್ದಿಮತ್ತೆ) ಆಧಾರಿತ ವೀಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊ, ‘ಒಬಾಮಾ ಕಾನೂನಿಗಿಂತ ಮೇಲಿದ್ದಾರೆ’ ಎಂದು ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಇದು ಅನೇಕ ಅಮೆರಿಕನ್ ರಾಜಕಾರಣಿಗಳು ‘ಯಾರೂ ಕಾನೂನಿಗಿಂತ ಮೇಲಲ್ಲ’ ಎಂದು ಹೇಳುವುದನ್ನು ಒಳಗೊಂಡಿದೆ. ನಂತರದ ಕ್ಲಿಪ್, ಒಬಾಮಾ ಅವರು ಒಮ್ಮೆ ಅಧ್ಯಕ್ಷರಾಗಿದ್ದ ಅದೇ ಕಚೇರಿಯಲ್ಲಿ ಇಬ್ಬರು ಎಫ್‌ಬಿಐ ಏಜೆಂಟ್‌ಗಳಿಂದ ಕೈಕೋಳ ಹಾಕಿರುವ AI ಆಧಾರಿತ ವೀಡಿಯೊಗೆ ಬದಲಾಗುತ್ತದೆ. ಬಂಧನದ ಸಮಯದಲ್ಲಿ ಟ್ರಂಪ್ ನಗುತ್ತಾ ಕುಳಿತಿರುವುದು ವೀಡಿಯೋದಲ್ಲಿದೆ. ಇದನ್ನೂ ಓದಿ: ತಿರುಪತಿ-ಹೈದರಾಬಾದ್ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ – 40 ನಿಮಿಷ ಆಕಾಶದಲ್ಲೇ ಗಿರಕಿ ಹೊಡೆದ ಫ್ಲೈಟ್
— Fan Donald J. Trump Posts From Truth Social (@TrumpDailyPosts) July 20, 2025
ಈ ನಕಲಿ ವಿಡಿಯೋ ಒಬಾಮಾ ಜೈಲಿನೊಳಗೆ ಕಿತ್ತಳೆ ಬಣ್ಣದ ಜಂಪ್‌ಸೂಟ್ ಧರಿಸಿ ಕುಳಿತಿರುವ ದೃಶ್ಯಕ್ಕೆ ಕೊನೆಗೊಳ್ಳುತ್ತದೆ. ಒಬಮಾ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದ ವಾರದ ನಂತರ ಈ ವೀಡಿಯೋ ಬಂದಿದೆ.
2016 ರ ಅಮೆರಿಕದ ಅಧ್ಯಕ್ಷೀಯ ಗೆಲುವಿನಲ್ಲಿ ರಷ್ಯಾದ ಪ್ರಭಾವವಿದೆ ಎಂಬ ಆರೋಪಗಳ ಮೇಲೆ ಒಬಾಮಾ ಆಡಳಿತವನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹೇಳಿಕೆ ನೀಡಿದ್ದರು. ಅದಾದ, ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತ – 17 ಮಂದಿ ಸಾವು
– ಕದನ ವಿರಾಮ ನನ್ನಿಂದಲೇ ಆಗಿದ್ದು: ಅಮೆರಿಕ ಅಧ್ಯಕ್ಷ ಪುನರುಚ್ಚಾರ
ವಾಷಿಂಗ್ಟನ್: ವ್ಯಾಪಾರ ಬೆದರಿಕೆ ಹಾಕಿ ಭಾರತ ಮತ್ತು ಪಾಕಿಸ್ತಾನ (India Pakistan Conflict) ಯುದ್ಧ ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪುನರುಚ್ಚಾರ ಮಾಡಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರಾರಂಭಿಸಿತು. ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಸಮಯದಲ್ಲಿ ಸುಮಾರು 4-5 ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಜೆಟ್‌ಗಳು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ಎಂಬುದನ್ನು ನಿರ್ದಿಷ್ಟಪಡಿಸಲಿಲ್ಲ.
ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡ ಕೆಲವು ದಿನಗಳ ನಂತರ, ಏರ್ ಮಾರ್ಷಲ್ ಎ.ಕೆ.ಭಾರ್ತಿ, ಅನೇಕ ‘ಹೈಟೆಕ್’ ಪಾಕಿಸ್ತಾನಿ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದರು.
ನವದೆಹಲಿ: ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನ ಖರೀದಿಸುವುದನ್ನು ಮುಂದುವರಿಸಿದ್ರೆ ಶೇ.100 ರಷ್ಟು ದ್ವಿತೀಯ ಸುಂಕ ವಿಧಿಸುವ ಸಾಧ್ಯತೆಯಿದೆ ಎಂಬ ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಅವರ ಬೆದರಿಕೆಯನ್ನು ಭಾರತ ತಳ್ಳಿಹಾಕಿದೆ. ಜೊತೆಗೆ ದೇಶದ ಇಂಧನ ಅಗತ್ಯತೆಗಳನ್ನು ಭದ್ರಪಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಿರುವುದಾಗಿಯೂ ತಿಳಿಸಿದೆ.
ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂ ನಂತಹ ಇಂಧನ ಉತ್ಪನ್ನಗಳನ್ನ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ (Tariff) ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ 100% ದ್ವಿತೀಯ ಸುಂಕ ವಿಧಿಸುವುದಾಗಿ ರುಟ್ಟೆ ಬೆದರಿಕೆಹಾಕಿದ್ದರು.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಪ್ರತಿಕ್ರಿಯಿಸಿದ್ದಾರೆ. ತೈಲ ಪೂರೈಕೆಯ ಅಗತ್ಯತೆಗಳನ್ನು ಭದ್ರಪಡಿಸಿಕೊಳ್ಳುವುದು ರಾಷ್ಟ್ರ ರಾಜಧಾನಿಗೆ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರಲ್ಲದೇ ದ್ವಿಮುಖ ಮಾನದಂಡ ಅಳವಡಿಸಿಕೊಳ್ಳದಂತೆಯೂ ಎಚ್ಚರಿಕೆ ನೀಡಿದ್ದಾರೆ. ಮಾರುಕಟ್ಟೆಗಳಲ್ಲಿ ಏನು ಲಭ್ಯವಾಗುತ್ತಿದೆ, ಜಾಗತಿಕ ಪರಿಸ್ಥಿತಿ ಹೇಗಿದೆ? ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಈ ವಿಷಯದ ಕುರಿತು ಅನೇಕ ವರದಿಗಳನ್ನು ನಾವು ನೋಡಿದ್ದೇವೆ. ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿಯೂ ಗಮನಿಸಿದ್ದೇವೆ. ನಮ್ಮ ಜನಕ್ಕೆ ಬೇಕಾದ ಇಂಧನದ ಅಗತ್ಯತೆಗಳನ್ನ ಭದ್ರಪಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ. ಜಾಗತಿಕ ಪರಿಸ್ಥಿತಿಗಳು ನಮ್ಮನ್ನ ಗೈಡ್ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ರುಟ್ಟೆ ಹೇಳಿದ್ದೇನು?
50 ದಿನಗಳಲ್ಲಿ ಶಾಂತಿ ಒಪ್ಪಂದದ ಹೊರತು ರಷ್ಯಾದಿಂದ ರಫ್ತು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 100ರಷ್ಟು ದ್ವಿತೀಯ ಸುಂಕದ ಬೆದರಿಕೆಯನ್ನು ಟ್ರಂಪ್ ಹಾಕಿದ್ದರು. 2022 ರಲ್ಲಿ ಉಕ್ರೇನ್ ವಿರುದ್ಧ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದ ಪ್ರಮುಖ ವ್ಯಾಪಾರ ಪಾಲುದಾರನಾದ ಭಾರತ, ಬ್ರೆಜಿಲ್ ಮತ್ತು ಚೀನಾಗಳಿಗೆ ರುಟ್ಟೆ ಎಚ್ಚರಿಕೆ ನೀಡಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿ, ಚೀನಾ, ಭಾರತ ಮತ್ತು ಬ್ರೆಜಿಲ್ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಇದರಿಂದ ನಿಮಗೆ ತೀವ್ರ ತೊಂದರೆಯಾಗಬಹುದು. ವ್ಲಾಡಿಮಿರ್ ಪುಟಿನ್ ಅವರಿಗೆ ಫೋನ್ ಮಾಡಿ, ಉಕ್ರೇನ್ ವಿರುದ್ಧದ ಶಾಂತಿ ಮಾತುಕತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಹೇಳಿ, ಇಲ್ಲದಿದ್ದರೆ ಇದು ಬ್ರೆಜಿಲ್, ಭಾರತ ಮತ್ತು ಚೀನಾದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಲಿದೆ ಎಂದು ಹೇಳಿದ್ದರು.
ತನ್ನ ದೇಶದ ವ್ಯಾಪಾರ ಸುಧಾರಿಸುವ ದೃಷ್ಟಿಯಲ್ಲಿ ಹಲವು ದೇಶಗಳ ಮೇಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಂಕ ಸಮರ ಸಾರಿದ್ದಾರೆ. ಕೆನಡಾ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಸುಂಕು ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಒಂದರ ಮೇಲೆ ಒಂದರಂತೆ ವಿವಿಧ ದೇಶಗಳ ಮೇಲೆ ಸುಂಕ ಹೇರಿಕೆ ಸಂಬಂಧ ಆದೇಶ ಪತ್ರಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಟ್ರಂಪ್ ಟ್ಯಾರಿಫ್‌ನಿಂದ ಸದ್ಯ ಭಾರತ ತಪ್ಪಿಸಿಕೊಂಡಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಅದೇನು ಅಂತ ಇಲ್ಲಿ ವಿವರಿಸಲಾಗಿದೆ.
ಭಾರತ ಸೇರಿ ಹಲವು ದೇಶಗಳ ಮೇಲೆ ಟ್ಯಾರಿಫ್ ಸಮರ
ಏಪ್ರಿಲ್ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಟ್ಯಾರಿಫ್ (Tariff) ಹಾಕಿದ್ದರು. ಮೋದಿ ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಲೇ ಭಾರತಕ್ಕೆ ಶೇ.26 ಪ್ರತಿಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಅದಾಗ್ಯೂ, ನಂತರ 90 ದಿನಗಳ ವರೆಗೆ ತಮ್ಮ ಆದೇಶವನ್ನು ಅಮಾನತಿನಲ್ಲಿಟ್ಟರು. ಆಗಲೂ ಭಾರತ ಪ್ರತಿಸುಂಕದಿಂದ ತಪ್ಪಿಸಿಕೊಂಡಿತು. ಇದಾದ ಬಳಿಕ ಭಾರತದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸೋ ದೇಶಗಳ ಮೇಲೆ 500% ಸುಂಕ – ಭಾರತ, ಚೀನಾಗೆ ಟ್ರಂಪ್ ಶಾಕ್?
ಭಾರತ-ಪಾಕ್ ಸಂಘರ್ಷ; ಟ್ರಂಪ್ ಹೇಳಿದ್ದೇನು?
ಕಾಶ್ಮೀರದ ಪಹಲ್ಗಾಮ್ ಮೇಲೆ ಉಗ್ರರು ನಡೆಸಿದ ದಾಳಿಗೆ 26 ಪ್ರವಾಸಿಗರು ಬಲಿಯಾದರು. ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕ್‌ನಲ್ಲಿ ಉಗ್ರರ ತಾಣಗಳನ್ನು ಗುರಿಯಾಗಿಸಿ ಭಾರತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತು. ಇದರ ಬೆನ್ನಲ್ಲೇ ಪಾಕ್ ಮತ್ತು ಭಾರತ ನಡುವೆ ಯುದ್ಧ ಸನ್ನಿವೇಶ ಸೃಷ್ಟಿಯಾಯಿತು. ಉಭಯ ದೇಶಗಳು ಪರಸ್ಪರ ವೈಮಾನಿಕ ದಾಳಿ ನಡೆಸಿದವು. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಬಹುದು ಎಂಬುದನ್ನರಿತ ಟ್ರಂಪ್ ಭಾರತ-ಪಾಕ್ ನಡುವೆ ಕದನ ವಿರಾಮಕ್ಕೆ ಒತ್ತಾಯಿಸಿದರು. ಮಾತುಕತೆ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮೊದಲು ಟ್ರಂಪ್ ಘೋಷಿಸಿದರು. ನಾವು ವ್ಯಾಪಾರ ಒಪ್ಪಂದಕ್ಕಾಗಿ ಸಂಘರ್ಷ ತಡೆದಿದ್ದೇವೆ. ನೀವಿಬ್ಬರು ಯುದ್ಧ ಮುಂದುವರಿಸಿದರೆ, ನಾವು ನಿಮ್ಮೊಂದಿಗೆ ವ್ಯವಹರಿಸುವುದಿಲ್ಲ ಎಂದು ಎಚ್ಚರಿಸಿದ್ದಾಗಿ ಟ್ರಂಪ್ ತಿಳಿಸಿದ್ದರು. ಅದಾದ ಬಳಿಕ, ಈಚೆಗೆ ಭಾರತದ ಜೊತೆ ಬಿಗ್ ಡೀಲ್ ಇದೆ ಎಂದು ಟ್ರಂಪ್ ಸುಳಿವು ಕೊಟ್ಟಿದ್ದರು. ಅದೇನಂತ ಕಾದುನೋಡಬೇಕಿದೆ.
14 ದೇಶಗಳ ಮೇಲೆ ಹೊಸ ಸುಂಕ
ಏಟಿಗೆ ಎದುರೇಟು ಎಂಬಂತೆ ಜಗತ್ತಿನ 14 ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ ಹೊಸ ಸುಂಕ ವಿಧಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತವನ್ನು ಹೊರಗಿಟ್ಟಿದ್ದಾರೆ. ಆಗಸ್ಟ್ 1 ರಿಂದಲೇ ಹೊಸ ಸುಂಕ ಜಾರಿಗೆ ಬರಲಿದೆ. ನಿಮ್ಮ ದೇಶಗಳೊಂದಿಗಿನ ನಮ್ಮ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಸುಂಕದ ಪ್ರಮಾಣವನ್ನು ಮಾರ್ಪಡಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ. ಹೊಸ ಸುಂಕಗಳಿಂದ ಯಾವ ದೇಶಗಳು ಹೆಚ್ಚು ಹಾನಿಗೊಳಗಾಗುತ್ತವೆ? ಯಾವ ದೇಶಗಳನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ? ಇಲ್ಲಿಂದ ಮುಂದಿನ ಹಾದಿ ಏನು ಎಂಬುದಕ್ಕೆ ವಿವರ ಇಲ್ಲಿದೆ.
AI ಚಿತ್ರ
ಯಾವ ದೇಶಕ್ಕೆ ಎಷ್ಟು ಸುಂಕ?
ಬಾಂಗ್ಲಾದೇಶ 35%, ಬೋಸ್ನಿಯಾ ಮತ್ತು ಹರ್ಜೆಗೋವಿನಾ 30%, ಕಾಂಬೋಡಿಯಾ 36, ಇಂಡೋನೇಷಿಯಾ 32, ಜಪಾನ್ 25, ಕಜಕಿಸ್ತಾನ್ 25, ಲಾವೋಸ್ 40, ಮಲೇಷ್ಯಾ 25, ಮ್ಯಾನ್ಮಾರ್ 40, ಸೆರ್ಬಿಯಾ 35, ದಕ್ಷಿಣ ಆಫ್ರಿಕಾ 30, ದಕ್ಷಿಣ ಕೊರಿಯಾ 25, ಥೈಲ್ಯಾಂಡ್ 36, ಟುನೀಶಿಯಾಗೆ 25% ಸುಂಕವನ್ನು ವಿಧಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ, ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳಾದ ಜಪಾನ್ & ದಕ್ಷಿಣ ಕೊರಿಯಾಗಳ ಮೇಲೆ ಶೇ.25 ಸುಂಕ ವಿಧಿಸಲಾಗಿದೆ. ಮ್ಯಾನ್ಮಾರ್ ಮತ್ತು ಲಾವೋಸ್‌ಗೆ ಅತಿ ಹೆಚ್ಚು ಸುಂಕ ಹೇರಲಾಗಿದೆ. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್
ಯುಎಸ್ ಪತ್ರ ರವಾನೆ
ಟ್ಯಾರಿಫ್ ಹೇರಲ್ಪಟ್ಟ ದೇಶಗಳಿಗೆ ಅಮೆರಿಕ ಪತ್ರಗಳನ್ನು ಬರೆದಿದೆ. ಅಮೆರಿಕವು ತಮ್ಮೊಂದಿಗಿನ ವ್ಯಾಪಾರ ಕೊರತೆಯನ್ನು ಸರಿಪಡಿಸಲು ಬಯಸುತ್ತದೆ. ಯುಎಸ್ ರಫ್ತು ಮಾಡುವುದಕ್ಕಿಂತ ಈ ದೇಶಗಳಿಂದ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ, ಹೊಸ ದರದಲ್ಲಿ ತೆರಿಗೆ ವಿಧಿಸುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇದು ಅಮೆರಿಕ ಘೋಷಿಸಿರುವ ವಲಯ ಸುಂಕಗಳಿಂದ (ಆಟೋಮೊಬೈಲ್, ಉಕ್ಕು ಇತ್ಯಾದಿ..) ಪ್ರತ್ಯೇಕವಾಗಿದೆ. ಟ್ರಾನ್ಸ್ಶಿಪ್ ಮಾಡಲಾದ ಸರಕುಗಳು ಸಹ ಆ ಹೆಚ್ಚಿನ ಸುಂಕಕ್ಕೆ ಒಳಪಟ್ಟಿರುತ್ತವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಟ್ರಾನ್ಸ್ಶಿಪ್‌ಮೆಂಟ್ ಎಂದರೆ, ಹೆಚ್ಚಿನ ಸುಂಕಗಳನ್ನು ಎದುರಿಸುತ್ತಿರುವ ದೇಶಗಳು ಕಡಿಮೆ ಸುಂಕಗಳನ್ನು ಎದುರಿಸುತ್ತಿರುವ ಮೂರನೇ ದೇಶದ ಮೂಲಕ ತಮ್ಮ ಸರಕುಗಳನ್ನು ಯುಎಸ್‌ಗೆ ಸಾಗಿಸಬಹುದು.
ಈ ದೇಶಗಳನ್ನೇ ಆಯ್ಕೆ ಮಾಡಿದ್ದೇಕೆ?
ಏಪ್ರಿಲ್‌ನಲ್ಲಿ ಟ್ರಂಪ್ ಹಲವು ದೇಶಗಳ ಮೇಲೆ ಪ್ರತಿಸುಂಕ ವಿಧಿಸಿದ್ದರು. ಅದರ ಬೆನ್ನಲ್ಲೇ 90 ದಿನಗಳ ಗಡುವು ವಿಧಿಸಿ ತಮ್ಮ ಪ್ರತಿಸುಂಕ ಆದೇಶವನ್ನು ಅಮಾನತಿನಲ್ಲಿಟ್ಟರು. ಈ ಅವಧಿಯಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ದೇಶಗಳಿಗೆ ಸೂಚಿಸಿದ್ದರು. ಈ 90 ದಿನಗಳ ಗಡುವು ಮುಕ್ತಾಯವಾಗಿದೆ. ಆದರೆ, ಯುಕೆ ಮತ್ತು ವಿಯೆಟ್ನಾಂನೊಂದಿಗೆ ಕೇವಲ 2 ಅಸ್ಪಷ್ಟ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನಂತರದ ದಿನಗಳಲ್ಲಿ ಕೆನಡಾ ಕೂಡ ಈ ಲಿಸ್ಟ್‌ಗೆ ಸೇರಿದೆ.
ಈ 14 ದೇಶಗಳನ್ನೇ ಏಕೆ ಆರಿಸಿಕೊಂಡೆ ಎಂಬುದನ್ನು ಅಮೆರಿಕ ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಮಾತುಕತೆಗಳಲ್ಲಿನ ನಿಧಾನಗತಿಯ ಪ್ರಗತಿಗಾಗಿ ಟ್ರಂಪ್ ಇತ್ತೀಚೆಗೆ ಜಪಾನ್ ಅನ್ನು ಟೀಕಿಸುತ್ತಿದ್ದರು. ‘ನಾವು ಜಪಾನ್‌ನೊಂದಿಗೆ ವ್ಯವಹರಿಸಿದ್ದೇವೆ. ನಾವು ಒಪ್ಪಂದ ಮಾಡಿಕೊಳ್ಳುತ್ತೇವೆಯೇ ಎಂದು ನನಗೆ ಖಚಿತವಿಲ್ಲ. ಜಪಾನ್‌ನೊಂದಿಗೆ ನನಗೆ ಅನುಮಾನವಿದೆ. ಅವರು ತುಂಬಾ ಕಠಿಣರು. ಅವರು ತುಂಬಾ ಹಾಳಾಗಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಭಾರತದಂತೆಯೇ ಜಪಾನ್ ಕೂಡ ತನ್ನ ಕೃಷಿ ವಲಯವನ್ನು ಅಮೆರಿಕದ ಆಮದುಗಳಿಗೆ ತೆರೆಯಲು ಬಯಸುವುದಿಲ್ಲ’ ಎಂದು ಟ್ರಂಪ್ ಹೇಳಿದ್ದರು. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?
ಅದೇ ರೀತಿ, ದಕ್ಷಿಣ ಕೊರಿಯಾದೊಂದಿಗಿನ ಒಪ್ಪಂದವೂ ಪ್ರಗತಿಯಲ್ಲಿಲ್ಲ. ಈ ದೇಶಗಳು ಅಮೆರಿಕಕ್ಕೆ ದೊಡ್ಡ ವ್ಯಾಪಾರ ಪಾಲುದಾರರಾಗಿದ್ದರೂ, ಕಾರುಗಳಂತಹ ನಿರ್ದಿಷ್ಟ ವಲಯಗಳಲ್ಲಿ ವಿನಾಯಿತಿಗಳನ್ನು ಬಯಸಿದ್ದವು. ಅಮೆರಿಕವು ಆಟೋಮೊಬೈಲ್‌ಗಳ ದೊಡ್ಡ ಆಮದುದಾರರಾಗಿದ್ದರೆ, ದೇಶೀಯ ಕಾರು ಉತ್ಪಾದನಾ ಉದ್ಯಮವು ತನ್ನ ಕಳೆದುಹೋದ ಪ್ರಾಬಲ್ಯವನ್ನು ಮರಳಿ ಪಡೆಯಬೇಕೆಂದು ಟ್ರಂಪ್ ಬಯಸುತ್ತಾರೆ. ‘ಅಮೆರಿಕದ ಆಮದುಗಳಿಗೆ ಕೊರಿಯಾದ ಬಹುತೇಕ ಎಲ್ಲಾ ಸುಂಕಗಳು ಶೂನ್ಯದಲ್ಲಿವೆ. ಇದರಿಂದಾಗಿ ಅವರು ಭಾರತ ಅಥವಾ ವಿಯೆಟ್ನಾಂಗಿಂತ ಹೆಚ್ಚಿನ ಸುಂಕಗಳೊಂದಿಗೆ ಅಮೆರಿಕಕ್ಕೆ ನೀಡಲು ಕಡಿಮೆ ಅವಕಾಶವನ್ನು ಹೊಂದಿದ್ದಾರೆ’ ಎಂದು ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಉಪಾಧ್ಯಕ್ಷ ಮತ್ತು ದಕ್ಷಿಣ ಕೊರಿಯಾ-ಯುಎಸ್ ಮುಕ್ತ ವ್ಯಾಪಾರ ಒಪ್ಪಂದದ ಮಾಜಿ ಸಮಾಲೋಚಕ ವೆಂಡಿ ಕಟ್ಲರ್ ಹೇಳಿದ್ದಾರೆ.
ಚೀನಾ ಫ್ರೆಂಡ್ಸ್‌ಗೆ ಶಾಕ್!
ಟ್ರಂಪ್ ಟ್ಯಾರಿಫ್ ಹಾಕಿರುವ 14 ದೇಶಗಳಲ್ಲಿ ಆರು (ಮ್ಯಾನ್ಮಾರ್, ಲಾವೋಸ್, ಇಂಡೋನೇಷ್ಯಾ, ಕಾಂಬೋಡಿಯಾ, ಮಲೇಷ್ಯಾ, ಥೈಲ್ಯಾಂಡ್) ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಆಸಿಯಾನ್ ಗುಂಪಿನ ಸದಸ್ಯರಾಗಿದ್ದಾರೆ. ರಫ್ತು ಮತ್ತು ಆಮದು ವಿಚಾರದಲ್ಲಿ ಹಲವು ದೇಶಗಳು ಲಾಭವನ್ನು ಪಡೆದುಕೊಳ್ಳುತ್ತಿವೆ. ಅಮೆರಿಕ ಜೊತೆಗಿನ ವ್ಯಾಪಾರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿವೆ. ಹೀಗಾಗಿ, ಹೊಸ ಸುಂಕದ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಮುಂದೇನು?
ಟ್ರಂಪ್ ಆಗಾಗ್ಗೆ ತಪ್ಪುಗಳನ್ನು ಮಾಡುವುದರಿಂದ ಮತ್ತು ಈ ಸುಂಕಗಳನ್ನು ಮೊದಲು ವಿಧಿಸುವ ಅವರ ಅಧಿಕಾರವು ಅಮೆರಿಕದಲ್ಲಿ ಕಾನೂನು ಸವಾಲನ್ನು ಎದುರಿಸುತ್ತಿರುವುದರಿಂದ ಇದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಸುಂಕಗಳು ಇತರ ದೇಶಗಳು ಅಮೆರಿಕದೊಂದಿಗೆ ಒಪ್ಪಂದಗಳನ್ನು ವೇಗವಾಗಿ ತೀರ್ಮಾನಿಸಲು ಪ್ರೇರೇಪಿಸುವ ಸಾಧ್ಯತೆಯಿದೆ. ಸುಂಕಕ್ಕೆ ಗುರಿಯಾಗಿಸಿಕೊಂಡ ದೇಶಗಳು ಮಾತುಕತೆಗಳನ್ನು ಮುಂದುವರಿಸಲು ಇಚ್ಛೆ ವ್ಯಕ್ತಪಡಿಸಿವೆ. ಇದನ್ನೂ ಓದಿ: ಟ್ರಂಪ್ 25% ಸುಂಕ ಹೇರಿದ್ರೂ ಭಾರತದ ಐಫೋನ್ ಚೀಪ್ – ಅಮೆರಿಕದ್ದು ದುಬಾರಿ
ಸುಂಕಗಳು ಎಂದರೆ ದೇಶದ ಹೊರಗಿನಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ವ್ಯಾಪಾರಿಗಳು ಪಾವತಿಸುವ ಹೆಚ್ಚುವರಿ ತೆರಿಗೆಗಳು. ಹೆಚ್ಚಿನವು ಈ ಹೆಚ್ಚಿದ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಎಲ್ಲಾ ಸುಂಕಗಳು ಜಾರಿಗೆ ಬಂದರೆ, ಅಮೆರಿಕದ ಗ್ರಾಹಕರು ಇತರ ದೇಶಗಳಿಂದ ಅಮೆರಿಕಕ್ಕೆ ಹೋಗುವ ಹಲವಾರು ಸರಕುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ನಂತರ ಅವರು ಆ ಸರಕುಗಳನ್ನು ಖರೀದಿಸದಿರಲು ಅಥವಾ ಕಡಿಮೆ ಪ್ರಮಾಣದಲ್ಲಿ ಖರೀದಿಸಲು ಮುಂದಾಗಬಹುದು. ಇದು ರಫ್ತುದಾರರಿಗೆ ನಷ್ಟಕ್ಕೆ ಕಾರಣವಾಗಬಹುದು. ಬಾಂಗ್ಲಾದೇಶದಂತಹ ರಫ್ತು-ಚಾಲಿತ ಆರ್ಥಿಕತೆಗಳನ್ನು ಹೊಂದಿರುವ ದೇಶಗಳು ಈ ಸುಂಕಗಳಿಂದಾಗಿ ತೀವ್ರವಾಗಿ ಪರಿಣಾಮ ಬೀರುತ್ತವೆ. ಇತರ ರಾಷ್ಟ್ರಗಳಿಗೆ ಸ್ವಲ್ಪ ಪರಿಣಾಮ ಬೀರಬಹುದು.
ವಾಷಿಂಗ್ಟನ್: ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ (Tariff) ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗಂಭೀರವಾಗಿ ಪರಿಗಣಿಸಿದ್ದಾರೆ.
ಸೆನೆಟರ್ ಲಿಂಡ್ಸೆ ಗ್ರಹಾಂ ಅವರಂತಹ ಪ್ರಭಾವಿ ವ್ಯಕ್ತಿಗಳು ಈ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ. ‘ನೀವು ರಷ್ಯಾದಿಂದ ಇಂಧನವನ್ನು ಖರೀದಿಸುತ್ತಿದ್ದರೆ ಮತ್ತು ಉಕ್ರೇನ್‌ಗೆ ಸಹಾಯ ಮಾಡದಿದ್ದರೆ, ಅಮೆರಿಕದಲ್ಲಿರುವ ನಿಮ್ಮ ಸರಕುಗಳಿಗೆ 500% ಸುಂಕ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು.
ಒಂದು ವೇಳೆ ಈ ನಿರ್ಣಯ ಅಂಗೀಕಾರವಾದರೆ, ಜಾಗತಿಕ ನಿರ್ಬಂಧಗಳ ಸಮಯದಲ್ಲಿ ರಷ್ಯಾದ ತೈಲ ಮತ್ತು ಅನಿಲದ ಆಮದನ್ನು ಹೆಚ್ಚಿಸಿರುವ ಭಾರತ ಮತ್ತು ಚೀನಾದಂತಹ ದೇಶಗಳು, ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ತಮ್ಮ ಉತ್ಪನ್ನಗಳ ಮೇಲೆ 500% ವರೆಗಿನ ಅಭೂತಪೂರ್ವ ಸುಂಕವನ್ನು ಎದುರಿಸಬೇಕಾಗುತ್ತದೆ. ಈ ಕ್ರಮವು ವ್ಯಾಪಾರ ಸಂಬಂಧಗಳಲ್ಲಿ, ವಿಶೇಷವಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರ ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?
ಈಚೆಗೆ 14 ದೇಶಗಳ ಮೇಲೆ ಹೊಸ ಸುಂಕ ವಿಧಿಸಿ ಟ್ರಂಪ್ ಆದೇಶ ಹೊರಡಿಸಿದ್ದರು. ರಷ್ಯಾದ ಇಂಧನ ಆಮದುದಾರರ ಮೇಲಿನ 500% ತೆರಿಗೆ ಸೇರಿದಂತೆ ಹೊಸ ಸುಂಕಗಳು 2025ರ ಆಗಸ್ಟ್ 1ರಿಂದ ಜಾರಿಗೆ ಬರಲಿವೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ (Tariffs War) ಮತ್ತೆ ಮುಂದುವರಿದಿದೆ. ಮುಂದಿನ ತಿಂಗಳು ಕೆನಡಾದಿಂದ (Canada) ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 35% ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ (Donald trump) ಘೋಷಣೆ ಮಾಡಿದ್ದಾರೆ. ಅಲ್ಲದೇ ಇತರ ಹೆಚ್ಚಿನ ವ್ಯಾಪಾರ ಪಾಲುದಾರರ ಮೇಲೆ 15 ರಿಂದ 20% ಸಂಪೂರ್ಣ ಸುಂಕ ವಿಧಿಸಲು ಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತ ಪತ್ರವನ್ನು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಟ್ರೂತ್ ಸೋಶಿಯಲ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಡುಗಡೆ ಮಾಡಿದ ಪತ್ರದಲ್ಲಿ, ಟ್ರಂಪ್ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ (Mark Carney) ಅವರಿಗೆ ಹೊಸ ದರ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಹೊಸ ಸುಂಕವು (Tariff) ಅಮೆರಿಕಕ್ಕೆ ಪ್ರವೇಶಿಸುವ ಕೆನಡಾದ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ. ಮುಂದುವರಿದು.. ಉಳಿದ ವ್ಯಾಪಾರ ಪಾಲುದಾರರ ಮೇಲೆ ಶೇ.15 ಅಥವಾ ಶೇ.20 ರಷ್ಟು ಸುಂಕ ವಿಧಿಸಲು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ.
ಸುಂಕ ಏರಿಕೆಗೆ ಕಾರಣವನ್ನೂ ಟ್ರಂಪ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೆನಡಾ ಪ್ರಮುಖ ವಿಷಯಗಳಲ್ಲಿ ಸಹಕರಿಸಲು ವಿಫಲವಾಗಿದೆ. ಈ ಕಾರಣದಿಂದಾಗಿ ಸುಂಕ ವಿಧಿಸಲಾಗುತ್ತಿದೆ. ಒಂದು ವೇಳೆ ಕೆನಡಾ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ್ರೆ ದುಪ್ಪಟ್ಟು ಸುಂಕ ವಿಧಿಸಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ.
ಇಲ್ಲಿಯವರೆಗೆ, ಟ್ರಂಪ್ 22 ದೇಶಗಳಿಗೆ ಹೊಸ ಸುಂಕ ವಿಧಿಸುವ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಜಪಾನ್, ಸೌತ್ ಕೊರಿಯಾ, ಮಯನ್ಮಾರ್, ಲಾವೋಸ್, ಥಾಯ್ಲೆಂಡ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಕಜಕಸ್ತಾನ್, ಇಂಡೋನೇಷ್ಯಾ, ಟುನಿಶಿಯಾ, ಮಲೇಷ್ಯಾ, ಸರ್ಬಿಯಾ, ಕಾಂಬೋಡಿಯಾ, ಬೋಸ್ನಿಯಾ ಹರ್ಜೆಗೊವಿನಾ ದೇಶಗಳಿಗೆ ಅಮೆರಿಕ ಹೊಸ ಆಮದು ಸುಂಕಗಳನ್ನು ಪ್ರಕಟಿಸಿದೆ. ಆಗಸ್ಟ್ 1ರಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ. ಅಲ್ಲದೇ ಇದು ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.
ವಾಷಿಂಗ್ಟನ್: 14 ದೇಶಗಳ ಜೊತೆ ತೆರಿಗೆ ಸಮರ (Tariff War) ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಸುಂಕ ವಿಧಿಸಿದ ಬೆನ್ನಲ್ಲೇ ತಾಮ್ರದ ಮೇಲೆ 50% ಸುಂಕ (Tariff on Copper) ಘೋಷಿಸಿದ್ದಾರೆ. ಜೊತೆಗೆ ಅಮೆರಿಕಕ್ಕೆ ಆಮದಾಗುವ ಫಾರ್ಮಾ ಔಷಧಗಳ ಮೇಲೆ 200% ಸುಂಕ (Tariff) ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಕ್ಯಾಬಿನೆಟ್ ಸಭೆಗೆ ಟ್ರಂಪ್ ಈ ವಿಷಯ ತಿಳಿಸಿದ್ದಾರೆ. ನಾವು ತಾಮ್ರದ ಮೇಲೆ 50% ಸುಂಕ ವಿಧಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಅಲ್ಲದೇ 1 ವರ್ಷದ ನಂತರ ಅಮೆರಿಕ ಆಮದು ಮಾಡಿಕೊಳ್ಳುವ ಔಷಧಗಳ ಮೇಲಿನ ಸುಂಕ 200% ರಷ್ಟು ಹೆಚ್ಚಾಗಬಹುದು. ಸೆಮಿಕಂಡಕ್ಟರ್ ಚಿಪ್‌ಗಳಂತಹ ನಿರ್ದಿಷ್ಟ ಉತ್ಪನ್ನಗಳ ಮೇಲೂ ಹೆಚ್ಚಿನ ಸುಂಕ ಬರಬಹುದು ಎಂದು ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆ ರಫೇಲ್ ಯುದ್ಧ ವಿಮಾನ ಕಳೆದುಕೊಂಡಿಲ್ಲ: ಡಸಾಲ್ಟ್ ಏವಿಯೇಷನ್ ಸ್ಪಷ್ಟನೆ
ಅಮೆರಿಕ ಶೀಘ್ರದಲ್ಲೇ ಫಾರ್ಮಾ ಔಷಧಿಗಳ (Pharma Medicines) ಮೇಲಿನ ಸುಂಕ ಘೋಷಣೆ ಮಾಡಲಿದೆ. ಆದ್ರೆ ತಯಾರಕ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನ ಸ್ಥಳಾಂತರಿಸಿಕೊಳ್ಳಲು ಸಮಯ ಕೇಳಿದ್ದಾರೆ. ಅದಕ್ಕಾಗಿ 1 ವರ್ಷ, ಹೆಚ್ಚೆಂದರೆ ಒಂದೂವರೆ ವರ್ಷ ಸಮಯಾವಕಾಶ ನೀಡಲಿದ್ದೇವೆ. ಅದರ ಬಳಿಕ ಅವರೂ ಸುಂಕಕ್ಕೆ ಒಳಗಾಗುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ಗೆ ಜು.16ಕ್ಕೆ ನೇಣು
ಹೊಸ ಸುಂಕ ನೀತಿಯು ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಏಕೆಂದ್ರೆ ಅಮೆರಿಕವು ಭಾರತದ ಔಷಧಗಳಿಗೆ ಅತಿ ದೊಡ್ಡ ವಿದೇಶಿ ಮಾರುಕಟ್ಟೆಯಾಗಿದೆ. ಅಲ್ಲದೇ ತಾಮ್ರ ಮತ್ತು ತಾಮ್ರ ಉತ್ಪನ್ನಗಳ ಪ್ರಮುಖ ರಫ್ತು ಮಾಡುವ ರಾಷ್ಟ್ರವಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ
ಭಾರತದ ಮೇಲೆ ಏನು ಪರಿಣಾಮ?
2024-2025ರ ವರ್ಷದಲ್ಲಿ ಭಾರತವು ವಿಶ್ವದಾದ್ಯಂತ ಸುಮಾರು 2 ಶತಕೋಟಿ ಡಾಲರ್ ಮೌಲ್ಯದಷ್ಟು ತಾಮ್ರ ಮತ್ತು ತಾಮ್ರದ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಈ ಪೈಕಿ ಅಮೆರಿಕದ ಮಾರುಕಟ್ಟೆಗಳಿಗೆ 360 ದಶಲಕ್ಷ ಡಾಲರ್ ಮೌಲ್ಯದಷ್ಟು ಅಥವಾ ಶೇ.17ರಷ್ಷು ರಫ್ತು ಮಾಡಿತ್ತು. ಅದೇ ರೀತಿ ಸೌದಿ ಅರೇಬಿಯಾಗೆ ಶೇ.26, ಚೀನಾಗೆ ಶೇ.18ರಷ್ಟು ರಫ್ತು ಮಾಡಿತ್ತು. ಇದೀಗ ಅಮೆರಿಕ 50% ಸುಂಕ ನೀತಿಯು ಈ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ವಾಷಿಂಗ್ಟನ್: 14 ದೇಶಗಳ ಜೊತೆ ತೆರಿಗೆ ಸಮರ (Tariff War) ಆರಂಭಿಸಿದ ಟ್ರಂಪ್ ಭಾರತದ (India) ಜೊತೆ ಒಪ್ಪಂದ ಮಾಡಿಕೊಳ್ಳಲು ನಾವು ಬಹಳ ಹತ್ತಿರದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ತಾತ್ಕಾಲಿಕವಾಗಿ ತಡೆ ಹಿಡಿದಿದ್ದ ತೆರಿಗೆ ಸಮರವನ್ನು ಮತ್ತೆ ಟ್ರಂಪ್ ಆರಂಭಿಸಿದ್ದು ಆಗಸ್ಟ್ 1 ರಿಂದ 14 ದೇಶಗಳಿಂದ ಅಮೆರಿಕಕ್ಕೆ (USA) ಬರುವ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ.
ನಾವು ಯುನೈಟೆಡ್ ಕಿಂಗ್‌ಡಮ್, ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಹಳ ಹತ್ತಿರದಲ್ಲಿದ್ದೇವೆ ಎಂದು ಟ್ರಂಪ್ (Donald Trump) ಹೇಳಿದರು. ಇದನ್ನೂಓದಿ: ನೊಬೆಲ್ ಶಾಂತಿಪ್ರಶಸ್ತಿಗೆಟ್ರಂಪ್ ಹೆಸರುನಾಮನಿರ್ದೇಶನಮಾಡಿದಇಸ್ರೇಲ್
#WATCH | On trade deals, US President Donald Trump says, “…We are close to making a deal with India. We’ve made a deal with the United Kingdom. We’ve made a deal with China. Others we met with, and we don’t think we’re going to be able to make a deal, so we just send them a… pic.twitter.com/p5EWU1aeSU
ತೆರಿಗೆ ವಿಧಿಸಿದ ಬಳಿಕ ಹಲವು ದೇಶಗಳು ತಮ್ಮ ಅಮೆರಿಕದ ಬಳಿ ಮಾತುಕತೆ ನಡೆಸುತ್ತಿವೆ. ಈ 14 ದೇಶಗಳಿಗೆ ಈಗಲೂ ಮಾತನಾಡುವ ಆಯ್ಕೆ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್ ತೆರಿಗೆ ಪೈಕಿ ಮ್ಯಾನ್ಮಾರ್ ಮತ್ತು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಮೇಲೆ ಅತ್ಯಧಿಕ 40% ರಷ್ಟಿದೆ.
ವಾಷಿಂಗ್ಟನ್: ಇಸ್ರೇಲ್ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ನೊಬೆಲ್ ಶಾಂತಿ (Nobel Peace Prize) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.
ಸೋಮವಾರ ಶ್ವೇತಭವನದಲ್ಲಿ ನಡೆದ ಭೋಜನಕೂಟದ ಸಂದರ್ಭದಲ್ಲಿ, ನೆತನ್ಯಾಹು ಅವರು ನೊಬೆಲ್ ಸಮಿತಿಗೆ ಕಳುಹಿಸಿದ ನಾಮನಿರ್ದೇಶನ ಪತ್ರದ ಪ್ರತಿಯನ್ನು ಸಹ ಹಸ್ತಾಂತರಿಸಿದರು.
ಟ್ರಂಪ್ ಅವರು ಜಗತ್ತಿನಲ್ಲಿ ಈಗ ಶಾಂತಿ ಮಂತ್ರವನ್ನು ಜಪಿಸುತ್ತಿದ್ದಾರೆ. ವಿಶೇಷವಾಗಿ ಈಗ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಟ್ರಂಪ್ ಬಹಳಷ್ಟು ಶ್ರಮಿಸುತ್ತಿದ್ದಾರೆ. ಟ್ರಂಪ್ ಅವರ ಈ ಕೆಲಸಕ್ಕೆ ಎಲ್ಲಾ ಇಸ್ರೇಲಿಗಳು ಮಾತ್ರವಲ್ಲದೆ,ಯಹೂದಿ ಜನರು ಮತ್ತು ಪ್ರಪಂಚದಾದ್ಯಂತದ ಅನೇಕ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ – 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್ ವೀಸಾ’ ಪರಿಚಯಿಸಿದ ಯುಎಇ
President Trump hosts Israeli Prime Minister Benjamin Netanyahu for dinner at the White House.
Prime Minister Netanyahu presents President Trump with a letter he sent to the Nobel Prize Committee nominating President Trump for the Noble Peace Prize. pic.twitter.com/1vOpAxCUk7
ನೆತನ್ಯಾಹು ಅವರು ತನ್ನನ್ನು ನೊಬೆಲ್‌ಗೆ ನಾಮನಿರ್ದೇಶನ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಇದು ನನಗೆ ತಿಳಿದಿರಲಿಲ್ಲ. ವಿಶೇಷವಾಗಿ ನಿಮ್ಮಿಂದ ಈ ಮಾತು ಬಂದಿರುವುದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿದರು.
ಟ್ರಂಪ್ ತಮ್ಮ ಬೆಂಬಲಿಗರು ಮತ್ತು ನಿಷ್ಠಾವಂತ ಅಮೆರಿಕದ ಸಂಸದರಿಂದ ಹಲವು ವರ್ಷಗಳಿಂದ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತದ ಜೊತೆಗಿನ ಯುದ್ಧವನ್ನು ನಿಲ್ಲಿಸಿದ್ದಕ್ಕೆ ಪಾಕಿಸ್ತಾನ ಸಹ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಇದನ್ನೂಓದಿ: ಬ್ರಿಕ್ಸ್ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್ ವಾರ್ನಿಂಗ್
ಇಲ್ಲಿಯವರೆಗೆ ಅಮೆರಿಕದ ಮೂವರು ಅಧ್ಯಕ್ಷರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. 1906 ರಲ್ಲಿ ಥಿಯೋಡರ್ ರೂಸ್‌ವೆಲ್ಟ್, 1919 ರಲ್ಲಿ ವುಡ್ರೋ ವಿಲ್ಸನ್ ಮತ್ತು 2009 ರಲ್ಲಿ ಬರಾಕ್ ಒಬಾಮಾ ಅವರಿಗೆ ನೊಬೆಲ್ ಸಿಕ್ಕಿದೆ.