Tag: donal trump

  • ದೀಪಾವಳಿ ಶುಭಾಶಯ ತಿಳಿಸಿದ ಟ್ರಂಪ್, ಬೈಡನ್, ಕಮಲಾ ಹ್ಯಾರಿಸ್

    ದೀಪಾವಳಿ ಶುಭಾಶಯ ತಿಳಿಸಿದ ಟ್ರಂಪ್, ಬೈಡನ್, ಕಮಲಾ ಹ್ಯಾರಿಸ್

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಆಯ್ಕೆಯಾದ ಅಮೆರಿಕ ಅಧ್ಯಕ್ಷ ಜೊ ಬೈಡನ್,  ಆಯ್ಕೆಯಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ದೀಪಾವಳಿ ಶುಭಾಶಯ ತಿಳಿಸಿದ್ದಾರೆ. ಇಂದಿನಿಂದ ಭಾರತ ಸೇರಿದಂತೆ ಜಗತ್ತಿನಲ್ಲಡೆ ದೀಪಾವಳಿ ಆಚರಿಸಲಾಗುತ್ತಿದೆ.

    ಬೆಳಕಿನ ಹಬ್ಬ ದೀಪಾವಳಿಯಂದು ಸ್ನೇಹಿತರು, ಕುಟುಂಬಸ್ಥರು, ನೆರೆಹೊರೆಯವರು, ಸಮುದಾಯದವರು ಒಂದೆಡೆ ಸೇರಿ ಒಳ್ಳೆಯದರ ಬಗ್ಗೆ ಚಿಂತಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕತ್ತಲ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನದ ಬೆಳಕು ಪಸರಿಸಲಿ ಎಂದು ಟ್ರಂಪ್ ಜನತೆಗೆ ದೀಪಾವಳಿ ಸಂದೇಶ ರವಾನಿಸಿದ್ದಾರೆ.

    ಡೊನಾಲ್ಡ್ ಟ್ರಂಪ್ 2019ರಲ್ಲಿ ಜನತೆಗೆ ದೀಪಾವಳಿಯ ಶುಭಾಶಯ ತಿಳಿಸಿದ್ದರು. ಅಂದು ವೀಡಿಯೋ ಶೇರ್ ಮಾಡಿಕೊಂಡಿದ್ದ ಟ್ರಂಪ್, ಪವಿತ್ರ ಪರಂಪರೆಗಳು ನಮ್ಮ ದೇಶವನ್ನು ಬಲಿಷ್ಠ ಮಾಡುತ್ತವೆ. ಜೊತೆಗೆ ಹಬ್ಬಗಳು ನಮ್ಮನ್ನು ಒಂದು ಮಾಡುತ್ತೇವೆ ಎಂದು ಬರೆದುಕೊಂಡಿದ್ದರು.

    ಅಮೆರಿಕಾದ ಖ್ಯಾತ ಗಾಯಕಿ ಕಮ್ ನಟಿ ಮೇರಿ ಮಿಲ್‍ಬೆನ್, ಹಿಂದೂಗಳ ಓಂ ಜೈ ಜಗದೀಶ್ ಹರೇ ಹಾಡನ್ನು ಪ್ರಸ್ತುತಿ ಪಡಿಸಿದ್ದಾರೆ. ಪಿಂಕ್ ಬಣ್ಣದ ಲೆಹಂಗಾ, ಹಣೆಗೆ ಬಿಂದಿ ಇಟ್ಟುಕೊಂಡು ಅಪ್ಪಟ ಭಾರತೀಯ ಸಂಪ್ರದಾಯ ನಾರಿಯಂತೆ ಭಕ್ತಿ ಮರೆದಿದ್ದಾರೆ. ಭಾರತ ಅಂದ್ರೆ ನಂಗಿಷ್ಟ. ಅಲ್ಲಿನ ಭಾಷೆ, ಸಂಸ್ಕೃತಿ, ಸಿನಿಮಾ, ಸಂಗೀತ ತಮ್ಮ ಮೇಲೆ ಪ್ರಭಾವ ಬೀರಿದೆ ಎಂದು ಮಿಲ್‍ಬೆನ್ ಹೇಳಿದ್ದಾರೆ.

  • ಟ್ರಂಪ್ ಆರೋಗ್ಯಕ್ಕಾಗಿ ಉಪವಾಸ ಮಾಡಿದ್ದ ರೈತ ಸಾವು

    ಟ್ರಂಪ್ ಆರೋಗ್ಯಕ್ಕಾಗಿ ಉಪವಾಸ ಮಾಡಿದ್ದ ರೈತ ಸಾವು

    – ಬೇಗ ಗುಣಮುಖರಾಗುವಂತೆ ಪ್ರಾರ್ಥನೆ
    – ಕೊರೊನಾ ವೈರಸ್‍ಗೆ ತುತ್ತಾಗಿದ್ದ ಟ್ರಂಪ್

    ಹೈದರಾಬಾದ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊರೊನಾ ವೈರಸ್ ನಿಂದ ಬೇಗ ಗುಣಮುಖರಾಗುವಂತೆ ಉಪವಾಸ ಮಾಡಿದ್ದ ತೆಲಂಗಾಣದ ರೈತ ಸಾವನ್ನಪ್ಪಿದ್ದಾರೆ.

    ಮೃತ ರೈತನನ್ನು ಬುಸ್ಸಾ ಕೃಷ್ಣ ರಾಜು ಎಂದು ಗುರುತಿಸಲಾಗಿದೆ. ಇವರು ಭಾನುವಾರ ಮೆಡಕ್ ನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

    ರಾಜು ಅವರು ಡೋನಾಲ್ಡ್ ಟ್ರಂಪ್ ಪಕ್ಕಾ ಅಭಿಮಾನಿ. ಹೀಗಾಗಿ ಟ್ರಂಪ್ ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಸುದ್ದಿ ಕೇಳಿದ ಕೂಡಲೇ ರಾಜು, ಟ್ರಂಪ್ ಆರೋಗ್ಯಕ್ಕಾಗಿ ಉಪವಾಸ ಕುಳಿತು ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೆ ಅನ್ನ-ನೀರು ಹಾಗೂ ನಿದ್ದೆ ಇಲ್ಲದೆ ಕೆಲವು ರಾತ್ರಿಗಳನ್ನು ಕಳೆದಿದ್ದಾರೆ.

    ಟ್ರಂಪ್ ಗೆ ಕೊರೊನಾ ಬಂದ ಸುದ್ದಿ ಕೇಳದ ಕೂಡಲೇ ರಾಜು ಅವರು ಶಾಕ್ ಗೆ ಒಳಗಾಗಿದ್ದಾರೆ ಎಂದು ಗೆಳೆಯರು ತಿಳಿಸಿದ್ದಾರೆ. ಕಳೆದ ವರ್ಷ ಟ್ರಂಪ್‍ನ 6 ಅಡಿಗಳ ಪ್ರತಿಮೆಯನ್ನು ಸ್ಥಾಪಿಸಿದ್ದರು. ಅಲ್ಲದೆ ಅವರನ್ನು ಪೂಜಿಸುತ್ತಿದ್ದರು ಎಂದು ರಾಜು ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

    ಟ್ರಂಪ್ ಗೆ ಕೊರೊನಾ ಪಾಸಿಟಿವ್ ಪರೀಕ್ಷೆಯ ಬಗ್ಗೆ ತಿಳಿದಾಗ ಅವರು ಅಸಮಾಧಾನಗೊಂಡರು. ಅವರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದರು, ಹಸಿವಿನಿಂದ ಬಳಲುತ್ತಿದ್ದರು ಮತ್ತು ಕಳೆದ ಮೂರು-ನಾಲ್ಕು ದಿನಗಳಿಂದ ಅಮೆರಿಕ ಅಧ್ಯಕ್ಷ ಟ್ರಂಪ್ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದರು. ಆದರೆ ಅವರು ಭಾನುವಾರ ಮಧ್ಯಾಹ್ನ ಹಾರ್ಟ್ ಅಟ್ಯಾಕ್ ನಿಂದ ನಿಧನ ಹೊಂದಿದರು ಎಂದು ರಾಜು ಆಪ್ತ ತಿಳಿಸಿದ್ದಾರೆ.