Tag: dominos

  • ವೆಜ್ ಬದಲು ಚಿಕನ್ ಪಿಜ್ಜಾ ಕಳಿಸಿದ ಡಾಮಿನೋಸ್ – 50,000 ರೂ. ದಂಡ

    ವೆಜ್ ಬದಲು ಚಿಕನ್ ಪಿಜ್ಜಾ ಕಳಿಸಿದ ಡಾಮಿನೋಸ್ – 50,000 ರೂ. ದಂಡ

    ಧಾರವಾಡ: ಸಸ್ಯಾಹಾರ ಬದಲು ಮಾಂಸಾಹಾರ ಪಿಜ್ಜಾ (Nonveg Pizza) ಕಳಿಸಿದ ಡಾಮಿನೋಸ್‌ಗೆ (Domino’s) 50 ಸಾವಿರ ದಂಡ (Penalty) ವಿಧಿಸಿ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಮಾಡಿದೆ.

    ಧಾರವಾಡ ವಿದ್ಯಾಗಿರಿಯ ಪ್ರದ್ಯುಮ್ನ ಇನಾಮದಾರ್ ಎಂಬ ವಿದ್ಯಾರ್ಥಿ ಕಳೆದ ಜನವರಿಯಲ್ಲಿ ಧಾರವಾಡ ಡಾಮಿನೋಸ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದ. ಸಸ್ಯಾಹಾರಿ ಆದಕಾರಣ ಡಾಮಿನೋಸ್‌ಗೆ ತಂದೂರಿ ಪನ್ನೀರ್ ಪಿಜ್ಜಾ, ಪನ್ನೀರ್ ಟಿಕ್ಕಾ, ಸ್ಟಫ್ಡ್ಗಾರ್ಲಿಕ್ ಬ್ರೆಡ್ ಮತ್ತು ವೆಜ್ ಜಿಂಗಿ ಪಾರ್ಸಲ್ ಆರ್ಡರ್ ಮಾಡಿದ್ದ. ಇದಕ್ಕೆ ಆನ್‌ಲೈನ್ ಮೂಲಕ 555 ರೂ. ಪಾವತಿ ಕೂಡಾ ಮಾಡಿದ್ದ. ಆದರೆ ಆರ್ಡರ್ ಮಾಡಿದ್ದರಲ್ಲಿ ಪನ್ನೀರ್ ಪಿಜ್ಜಾ ಸಸ್ಯಾಹಾರಿ ಬದಲು ಡಾಮಿನೋಸ್ ಮಾಂಸಾಹಾರಿ ಚಿಕನ್ ಪಿಜ್ಜಾ ಕಳಿಸಿತ್ತು. ಇದನ್ನ ಡಾಮಿನೋಸ್ ಗಮನಕ್ಕೆ ತರಲಾಗಿತ್ತು. ಇದಕ್ಕೆ ಡಾಮಿನೋಸ್‌ನವರು ಪೇಮೆಂಟ್ ವಾಪಸ್ ಕೊಟ್ಟು ಇದೇ ಆರ್ಡರ್ ಮತ್ತೆ ಕಾಂಪ್ಲಿಮೆಂಟರಿಯಾಗಿ ಕೊಡುವುದಾಗಿ ಹೇಳಿದ್ದರು. ಇದನ್ನೂ ಓದಿ: ಬೈಕ್‌ನಲ್ಲಿ ಬಿಯರ್‌ ಕುಡಿದು ಹುಚ್ಚಾಟ – ಆರೋಪಿ ಅರೆಸ್ಟ್‌

    ಆದರೆ ಮಾಂಸಾಹಾರಿ ಪಿಜ್ಜಾ ಕಳಿಸಿ ಧರ್ಮ ಭ್ರಷ್ಟ ಮಾಡಿದ್ದಾರೆ ಎಂದು ಗ್ರಾಹಕ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಕಳೆದ ಜನವರಿಯಲ್ಲಿ ದೂರು ನೀಡಿದ್ದ. ಇನ್ನೊಮ್ಮೆ ಈ ರೀತಿ ಡಾಮಿನೋಸ್ ಮತ್ತೊಬ್ಬ ಗ್ರಾಹಕರಿಗೆ ಮಾಡದಿರಲಿ ಎಂದು ಗ್ರಾಹಕರ ಆಯೋಗಕ್ಕೆ ದೂರು ನೀಡಲಾಗಿತ್ತು. ಪ್ರಕರಣದ ಕೂಲಂಕಷವಾಗಿ ವಿಚಾರಣೆ ಮಾಡಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ, ಡಾಮಿನೋಸ್ ಸೇವಾ ನೂನ್ಯತೆ ಮಾಡಿದೆ ಎಂದು ಡೋಮಿನೋಸ್‌ಗೆ 50 ಸಾವಿರ ದಂಡ ಹಾಗೂ ಪ್ರಕರಣದ ಖರ್ಚು 10 ಸಾವಿರ ನೀಡುವಂತೆ ಡಾಮಿನೋಸ್‌ಗೆ ಆದೇಶಿಸಿದೆ.‌ ಇದನ್ನೂ ಓದಿ: ಕೆಲವರು ಉದ್ದೇಶಪೂರ್ವಕವಾಗಿ ಧರ್ಮಸ್ಥಳದ ತೇಜೋವಧೆ ಮಾಡುತ್ತಿರಬಹುದು: ದಿನೇಶ್‌ ಗುಂಡೂರಾವ್‌

  • ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್  ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

    ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

    ಟೋಕಿಯೋ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಮೀರಾಬಾಯಿ ಅವರಿಗೆ ಡೊಮಿನೊಸ್ ಪಿಜ್ಜಾವನ್ನು ಜೀವನ ಪೂರ್ತಿಯಾಗಿ ಉಚಿತವಾಗಿ ಕೊಡುವುದಾಗಿ ಡೊಮಿನೊಸ್ ಇಂಡಿಯಾ ಟ್ವೀಟ್ ಮಾಡಿದೆ.

    ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಸಂದರ್ಶನವೊಂದರಲ್ಲಿ ಇಷ್ಟದ ತಿನಿಸಿನ ಬಗ್ಗೆ ಮಾತನಾಡಿದ್ದಾರೆ. ಈ ಮೆಡಲ್ ಸಿಕ್ಕ ಬಳಿಕ ನಿಮ್ಮ ಮೊದಲ ಕೆಲಸ ಏನಾಗಿರುತ್ತೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಮೀರಾಬಾಯಿ ಪಿಜ್ಜಾ ತಿನ್ನೋದೇ ನನ್ನ ಮೊದಲ ಅಸೆ ಅಂತ ಹೇಳಿದ್ದಾರೆ. ನನಗೆ ಪಿಜ್ಜಾ ಅಂದ್ರೆ ತುಂಬಾನೇ ಇಷ್ಟ. ಆದರೆ ಕೆಲ ದಿನಗಳಿಂದ ಪಿಜ್ಜಾ ತಿನ್ನದೇ ಇರೋದ್ರಿಂದ ಕೊಂಚ ಜಾಸ್ತಿನೇ ತಿಂತೀನಿ ಅಂತ ಮೀರಾ ನಗೆ ಚಟಾಕಿ ಹಾರಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೊಮಿನೊಸ್ ಇಂಡಿಯಾ ಮೀರಾಬಾಯಿ ಚಾನು ಹೇಳಿದ್ದು ನಮಗೆ ಕೇಳಿಸಿದೆ. ಇನ್ನು ಮುಂದೆ ಮೀರಾಬಾಯಿ ಚಾನು ಪಿಜ್ಜಾಗಾಗಿ ಕಾಯುವುದು ಬೇಡ. ಅವರಿಗೆ ಜೀವನ ಪೂರ್ತಿ ಉಚಿತ ಪಿಜ್ಜಾವನ್ನು ನೀಡಲಿದ್ದೇವೆ ಎಂದು ಹೇಳಿದೆ. ಈ ಕುರಿತು ಟ್ವಿಟರ್‍ನಲ್ಲಿ ಡೊಮಿನೊಸ್ ಇಂಡಿಯಾ ಬರೆದುಕೊಂಡಿದೆ. ಅಲ್ಲದೇ ಇಂಫಾಲ್‍ನಲ್ಲಿರುವ ಅವರ ಮನೆಗೆ ಚಾನು ಅವರ ಗೆಲುವನ್ನು ಸಂಭ್ರಮಿಸಲು ಪಿಜ್ಜಾ ಕಳುಹಿಸಿಕೊಟ್ಟಿದೆ. ಡೊಮಿನೊಸ್ ಸಂಸ್ಥೆ ಮಾಡಿರೋ ಟ್ವೀಟ್‍ಗೆ ಸಾವಿರಾರು ಜನ ಪ್ರತಿಕ್ರಿಯೆ ನೀಡಿದ್ದು, ದೇಶಕ್ಕೆ ಕೀರ್ತಿ ತಂದ ಮೀರಾಬಾಯಿ ಚಾನು ಅವರ ಆಸೆಯನ್ನ ಪೂರ್ತಿ ಮಾಡೋ ನಿಟ್ಟಿನ ಕೆಲಸ ಮಾಡುತ್ತಿರೋದಕ್ಕೆ ಧನ್ಯವಾದಗಳನ್ನ ಹೇಳಿದ್ದಾರೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ಮೀರಾಬಾಯಿ ಚಾನು ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಭಾರತೀಯರ ನಿರೀಕ್ಷೆ ಹುಸಿಗೊಳಿಸದ ಮೀರಾ ಅವರು ಮೊದಲ ದಿನವೇ ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದ್ದಾರೆ. ಮೀರಾ ಅವರ ಗೆಲುವು ಭಾರತದ ಎಲ್ಲ ಕ್ರೀಡಾಪಟುಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬುವಂತೆ ಮಾಡಿದೆ. ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮೀರಾಬಾಯಿ ಚಾನು ಅವರು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

    49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟಿದ್ದಾರೆ. ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದರು.

    84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಣರ್ಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕಣರ್ಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.