Tag: Dominar 400 cc

  • ಮಗನ ಹೊಸ ಬೈಕ್ ಎಕ್ಸ್ ಚೇಂಜ್ ಮಾಡಿಕೊಡದ್ದಕ್ಕೆ ವಿಷ ಕುಡಿದ ತಾಯಿ

    ಮಗನ ಹೊಸ ಬೈಕ್ ಎಕ್ಸ್ ಚೇಂಜ್ ಮಾಡಿಕೊಡದ್ದಕ್ಕೆ ವಿಷ ಕುಡಿದ ತಾಯಿ

    ಬೆಂಗಳೂರು: ಮಗನ ಹೊಸ ಬೈಕ್ ಎಕ್ಸ್ ಚೇಂಜ್ ಮಾಡಿಕೊಡಲು ಶೋ ರೂಮ್ ಸಿಬ್ಬಂದಿ ನಿರಾಕರಿಸಿದ್ದಕ್ಕೆ ಮನನೊಂದ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸರೋಜಮ್ಮ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಸರೋಜಮ್ಮರ ಮಗ ಶ್ರೀಪಾದ ರಾಘವ್ ಎರಡು ತಿಂಗಳ ಹಿಂದೆ ಕಸ್ತೂರ್ ಬಾ ರಸ್ತೆಯ ಖಿವ್ ರಾಜ್ ಮೋಟರ್ಸ್ ಶೋ ರೂಮ್ ನಲ್ಲಿ ಡೋಮಿನರ್ 400 ಸಿಸಿ ಬೈಕ್ ಖರೀದಿಸಿದ್ದರು. ಆದರೆ ಹೊಸ ಬೈಕ್ ಎರಡೇ ತಿಂಗಳಲ್ಲಿ ಕೆಟ್ಟು ಹೋಗಿತ್ತು.

    ಬೈಕ್ ಎಕ್ಸ್ ಚೇಂಜ್ ಮಾಡಿಕೊಡುವಂತೆ ಶ್ರೀಪಾದ ಮನವಿ ಮಾಡಿಕೊಂಡಿದ್ದರು. ಆದರೆ ಶೋ ರೂಮ್ ಸಿಬ್ಬಂದಿ ಬೈಕ್ ಎಕ್ಸ್ ಚೇಂಜ್ ಮಾಡಿಕೊಡಲು ನಿರಾಕರಿಸಿದ್ದರು. ಇದರಿಂದ ಮನನೊಂದ ಸರೋಜಮ್ಮ ಶೋ ರೂಮ್ ಗೆ ಬಂದು ವಿಷ ಸೇವಿಸಿದ್ದಾರೆ.

    ಸದ್ಯ ಸರೋಜಮ್ಮ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸರೋಜಮ್ಮ ಸ್ಥಿತಿ ಗಂಭೀರವಾಗಿದ್ದು, ಇನ್ನೂ ಹತ್ತು ದಿನ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.