Tag: Dollars

  • ಹಪ್ಪಳದ ಪ್ಯಾಕೆಟ್‍ನಲ್ಲಿ 15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್‌ – ವ್ಯಕ್ತಿ ಬಂಧನ

    ಹಪ್ಪಳದ ಪ್ಯಾಕೆಟ್‍ನಲ್ಲಿ 15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್‌ – ವ್ಯಕ್ತಿ ಬಂಧನ

    ನವದೆಹಲಿ: ಬ್ಯಾಂಕಾಕ್‍ಗೆ ತೆರಳುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬ 15 ಲಕ್ಷ ರೂ ಮೌಲ್ಯದ ಅಮೆರಿಕನ್ ಡಾಲರ್‌ಗಳನ್ನು ಹಪ್ಪಳದ ಪ್ಯಾಕೆಟ್‍ನಲ್ಲಿ ಬಚ್ಚಿಟ್ಟಿದ್ದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಇಂದಿರಾಗಾಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಗಳು ತಪಾಸಣೆ ನಡೆಸುವ ಸಮಯದಲ್ಲಿ ಹಪ್ಪಳ ಇರುವ ಪ್ಯಾಕೆಟ್‍ನಲ್ಲಿ ಭಾರಿ ಮೊತ್ತದ ಅಮೆರಿಕನ್ ಡಾಲರ್‌ಗಳು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

    ಬ್ಯಾಂಕಾಕ್‍ಗೆ ಪ್ರಯಾಣಿಸುವ ವೇಳೆ ತನ್ನ ಲಗೇಜ್ ಬ್ಯಾಗ್‍ನಲ್ಲಿರುವ ಹಪ್ಪಳ ತುಂಬಿದ ಪ್ಯಾಕೆಟ್‍ನಲ್ಲಿ 19,900 ಡಾಲರ್(14.5 ಲಕ್ಷ ರೂ.) ವನ್ನು ಇಟ್ಟುಕೊಂಡಿದ್ದ. ಇದು ತಪಾಸಣೆ ವೇಳೆ ಸಿಬ್ಬಂದಿಗೆ ದೊರಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

    ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಿಂದ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ದೇಶದಲ್ಲಿ ʻಪ.ಬಂಗಾಳ ಪಡಿತರ ಮಾದರಿʼ ಜಾರಿಗೊಳಿಸಿ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಮೋದಿ ಸಹೋದರ ಪ್ರತಿಭಟನೆ

    Live Tv
    [brid partner=56869869 player=32851 video=960834 autoplay=true]

  • ಹಬ್ಬಕ್ಕೆ ಆಭರಣ ಖರೀದಿ ಜೋರು- ಚಿನ್ನ, ಬೆಳ್ಳಿ ಬೆಲೆ ಏರಿಕೆ

    ಹಬ್ಬಕ್ಕೆ ಆಭರಣ ಖರೀದಿ ಜೋರು- ಚಿನ್ನ, ಬೆಳ್ಳಿ ಬೆಲೆ ಏರಿಕೆ

    ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆಭರಣ ಖರೀದಿ ಜೋರಾಗುತ್ತಿದ್ದಂತೆ ಚಿನ್ನ, ಬೆಳ್ಳಿಯ ದರವೂ ಸ್ವಲ್ಪ ಏರಿಕೆಯಾಗಿದೆ.

    ಚಿನ್ನದ ದರ ಪ್ರತಿ ಗ್ರಾಂಗೆ 20 ರೂ. ಏರಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಶೇ.99.9 ಶುದ್ಧ ಚಿನ್ನಕ್ಕೆ 32,650 ರೂ. ನಿಗದಿಯಾಗಿದ್ದರೆ, ಶೇ.99.5 ಕ್ಯಾರೆಟ್ ಚಿನ್ನದ ಬೆಲೆ 32,500 ರೂ. ಆಗಿದೆ. ಶುಕ್ರವಾರ ಚಿನ್ನದ ಬೆಲೆ 150 ರೂ. ಇಳಿಕೆಯಾಗಿತ್ತು.

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ವಾರದ ಚಿನ್ನದ ಬೆಲೆಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. ಕಳೆದ ವಾರ 1 ಔನ್ಸ್ ಗೆ 1,233.80 ಡಾಲರ್ ಇದ್ದರೆ ಈ ವಾರ 1,233.20 ಡಾಲರ್ ಇದೆ. ಬೆಳ್ಳಿ 1 ಔನ್ಸ್ ಗೆ 14.82 ಡಾಲರ್ ಬೆಲೆ ಇದೆ.

    ಶುಕ್ರವಾರ 1 ಕೆಜಿ ಶುದ್ಧ ಬೆಳ್ಳಿಗೆ 39,500 ರೂ. ಇದ್ದರೆ ಶನಿವಾರ 30 ರೂ. ಏರಿಕೆಯಾಗಿ 30,530 ರೂ.ಗೆ ತಲುಪಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv