Tag: Dollar

  • ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

    ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

    ನವದೆಹಲಿ: ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತ ಕಾಣುತ್ತಿರುವ ಕಳವಳದ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರೂ. ಮೌಲ್ಯ ಕುಸಿಯುತ್ತಿಲ್ಲ. ಅದು ತನ್ನ ಸ್ವಾಭಾವಿಕ ಹಾದಿಯನ್ನು ಕಂಡುಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದರು.

    ರಾಜ್ಯಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ರೂ. ಮೌಲ್ಯ ಕುಸಿತದ ಬಗ್ಗೆ ಮಾತನಾಡಿದ ಸೀತಾರಾಮನ್, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸ್ಥಳೀಯ ಕರೆನ್ಸಿ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಒಂದು ವೇಳೆ ಅಸ್ಥಿರತೆ ಕಂಡುಬಂದಲ್ಲಿ ಮಾತ್ರವೇ ಮಧ್ಯಪ್ರವೇಶಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶದಲ್ಲಿ ʻಪ.ಬಂಗಾಳ ಪಡಿತರ ಮಾದರಿʼ ಜಾರಿಗೊಳಿಸಿ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಮೋದಿ ಸಹೋದರ ಪ್ರತಿಭಟನೆ

    ಆರ್‌ಬಿಐ ಮಧ್ಯಸ್ಥಿಕೆಯಿಂದ ರೂ. ಮೌಲ್ಯದ ಏರಿಕೆ ಅಥವಾ ಇಳಿಕೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದು ಕೇವಲ ಅಸ್ಥಿರತೆಯನ್ನು ತಪ್ಪಿಸಲು ಹಾಗೂ ಅದರ ಹಾದಿಯನ್ನು ಕಂಡುಕೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿದರು.

    ಭಾರತವೂ ಕೂಡಾ ಇತರ ಹಲವು ದೇಶಗಳಂತೆ. ಅದು ತನ್ನ ಕರೆನ್ಸಿಯ ಮೌಲ್ಯವನ್ನು ಇತರ ದೇಶಗಳೊಂದಿಗೆ ತನಗೆ ಬೇಕಿದ್ದಂತೆ ಏರಿಕೆ ಅಥವಾ ಇಳಿಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾವು ರೂ. ಮೌಲ್ಯವನ್ನು ಬಲಪಡಿಸಲು ಸಾಧ್ಯವಿರುವ ಮಾರ್ಗಗಳನ್ನು ಕಂಡುಕೊಂಡು ಆರ್‌ಬಿಐ ಹಾಗೂ ಸಚಿವಾಲಯಗಳೊಂದಿಗೆ ತಕ್ಕಮಟ್ಟಿನ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: NIA ಕಚೇರಿ ವ್ಯಾಪ್ತಿ ಬೆಂಗಳೂರಿಗೆ ವಿಸ್ತರಿಸಲು ಶೋಭಾ ಕರಂದ್ಲಾಜೆ ಮನವಿ

    ಭಾರತೀಯ ರೂ. ತನ್ನ ಇತರ ದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ವಾಸ್ತವವಾಗಿ ಭಾರತೀಯ ರೂಪಯಿಯನ್ನು ಇತರ ಕರೆನ್ಸಿಗಳಿಗೆ ಹೋಲಿಸಿದರೆ ಅದರ ಮೌಲ್ಯ ಹೆಚ್ಚಾಗಿರುವುದು ಕಂಡುಬರುತ್ತದೆ ಎಂದು ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ: ಬಾಲಿವುಡ್ ಸಿಲಿಬ್ರಿಟಿಗಳನ್ನು ಎಚ್ಚರಿಸಿದ ಪ್ರಕಾಶ್ ರೈ

    ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ: ಬಾಲಿವುಡ್ ಸಿಲಿಬ್ರಿಟಿಗಳನ್ನು ಎಚ್ಚರಿಸಿದ ಪ್ರಕಾಶ್ ರೈ

    ರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಧೋರಣೆಗಳ ಬಗ್ಗೆ ಈವರೆಗೂ ಪ್ರಶ್ನೆ ಮಾಡುತ್ತಲೇ ಬಂದಿರುವ ಬಹುಭಾಷಾ ನಟ ಪ್ರಕಾಶ್ ರೈ, ಈ ಬಾರಿ ಬಾಲಿವುಡ್ ನಟ ನಟಿಯರಿಗೆ ಪ್ರಶ್ನೆ ಮಾಡಿದ್ದಾರೆ. ಅವರ ದೇಶಭಕ್ತಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಡಾಲರ್ ಮುಂದೆ ನಿರಂತರವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯದ ಬಗ್ಗೆ ಟ್ವಿಟ್ ಮಾಡಿರುವ ಪ್ರಕಾಶ್ ರೈ, ಈ ಹಿಂದಿನ ಕೇಂದ್ರ ಸರಕಾರವಿದ್ದಾಗ ರೂಪಾಯಿ ಮೌಲ್ಯ ಕುಸಿದ ಸಂದರ್ಭದಲ್ಲಿ ಟ್ವಿಟ್ ಮಾಡಿದ್ದ ಬಾಲಿವುಡ್ ಸಿಲಿಬ್ರಿಟಿಗಳ ನಡೆಯನ್ನು ನೆನಪಿಸಿದ್ದಾರೆ.

    ಕಾಂಗ್ರೆಸ್ ಸರಕಾರ ಇದ್ದಾಗಲೂ ರೂಪಾಯಿ ಮೌಲ್ಯ ಕುಸಿದಿದೆ. ಆ ಸಂದರ್ಭದಲ್ಲಿ ಬಾಲಿವುಟ್ ಸಿಲೆಬ್ರಿಟಿಗಳಾದ ಅಮಿತಾಭ್ ಬಚ್ಚನ್, ಜೂಹಿ ಚಾವ್ಲಾ, ಅನುಪಮ್ ಖೇರ್, ಶಿಲ್ಪಾ ಶೆಟ್ಟಿ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಹಲವರು ಟ್ವಿಟ್ ಮಾಡಿದ್ದರು. ಅದರಲ್ಲೂ ಜೂಹಿ ಚಾವ್ಲಾ ರೂಪಾಯಿ ಮೌಲ್ಯದ ಕುಸಿತವನ್ನು ಒಳ ಉಡುಪಿಗೆ ಹೋಲಿಸಿದ್ದರು. ಈಗ ಅದೆಲ್ಲ ಟ್ವಿಟ್ ಅನ್ನು ಒಟ್ಟುಗೂಡಿಸಿ ಮತ್ತೆ ಅವರಿಗೆ ನೆನಪಿಸಿದ್ದಾರೆ. ಇದನ್ನೂ ಓದಿ: ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು: ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಈಶ್ವರಪ್ಪ ಸಂಭ್ರಮಾಚರಣೆ

    ಈ ಸಿಲಿಬ್ರಿಟಿಗಳೆಲ್ಲ ಹಿಂದೆ ಮಾಡಿದ್ದ ಟ್ವಿಟ್ ಸ್ಕ್ರಿನ್ ಶಾಟ್ ಗಳನ್ನು ಶೇರ್ ಮಾಡಿರುವ ಪ್ರಕಾಶ್ ರಾಜ್ ‘ಆ ಒಂದು ಕಾಲದಲ್ಲಿ ನನ್ನ ದೇಶದಲ್ಲಿ ಎಂದು ಬರೆದು, ಜಸ್ಟ್ ಆಸ್ಕಿಂಗ್ ಹ್ಯಾಶ್ ಅಡಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಪ್ರಕಾಶ್ ರೈ ಈ ಟ್ವಿಟ್ ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಅಲ್ಲದೇ, ಅಷ್ಟೇ ಜನರು ಕೂಡ ಅವರಿಗೂ ಪ್ರಶ್ನೆ ಮಾಡಿದ್ದಾರೆ. ಒಂದು ರೀತಿಯಲ್ಲಿ ಈ ಟ್ವಿಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದಂತೂ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ರೂಪಾಯಿ ಮೌಲ್ಯ ಪಾತಾಳಕ್ಕೆ – 1 ಡಾಲರ್ = 80.13 ರೂ.

    ರೂಪಾಯಿ ಮೌಲ್ಯ ಪಾತಾಳಕ್ಕೆ – 1 ಡಾಲರ್ = 80.13 ರೂ.

    ನವದೆಹಲಿ: ಇದೇ ಮೊದಲ ಬಾರಿಗೆ ಅಮೆರಿಕದ ಡಾಲರ್ ಎದುರು ರೂಪಾಯಿಯ ಮೌಲ್ಯ ದಾಖಲೆಯ ಕುಸಿತ ಕಂಡಿದೆ. ಮಧ್ಯದಲ್ಲಿ ತುಸು ಚೇತರಿಕೆ ಕಂಡಿದ್ದ ರೂಪಾಯಿ ಮತ್ತೆ 80 ರೂ. ಗಡಿ ದಾಟಿದೆ. ನಿನ್ನೆ ದಿನದ ಕೊನೆಗೆ 79.98 ರೂಪಾಯಿ ಇದ್ದ ಮೌಲ್ಯ ಇಂದು 80.13 ರೂ.ಗಳಿಗೆ ಕುಸಿದಿದೆ.

    ಕಚ್ಚಾ ತೈಲದ ಬೆಲೆ ಏರಿಕೆ, ವಿದೇಶಿ ಬಂಡವಾಳ ಹೂಡಿಕೆದಾರರ ಹೊರ ಹರಿವು ಮೊದಲಾದ ಕಾರಣಗಳು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಇದು ಈ ವರ್ಷ ಯುಎಸ್ ಡಾಲರ್ ವಿರುದ್ಧ ಸುಮಾರು ಶೇ.7 ರಷ್ಟು ಕುಸಿದಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದ್ದಾರೆ. ಇದನ್ನೂ ಓದಿ: ಜೀವ ಬೆದರಿಕೆ, ಮಾನಸಿಕ ಚಿತ್ರಹಿಂಸೆ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR

    ವಿದೇಶಿ ಹೂಡಿಕೆದಾರರು 2022-23 ರಲ್ಲಿ ಇದುವರೆಗೆ ಭಾರತೀಯ ಈಕ್ವಿಟಿ ಮಾರುಕಟ್ಟೆಗಳಿಂದ ಸುಮಾರು 14 ಬಿಲಿಯನ್ ಡಾಲರ್ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಬಂಡವಾಳದ ಹೊರಹರಿವಿನಿಂದ ರೂಪಾಯಿ ಮೌಲ್ಯ ಕುಸಿತವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 11ರಂದು ಹೇಳಿದ್ದರು. ಇದನ್ನೂ ಓದಿ: NEET ಪರೀಕ್ಷಾರ್ಥಿಗಳಿಗೆ ಒಳಉಡುಪು ತೆಗೆಯಲು ಒತ್ತಾಯ- ತನಿಖೆ ಆರಂಭಿಸಿದ ಪೊಲೀಸರು

    2014ರ ಡಿಸೆಂಬರ್ 31 ರಂದು ಡಾಲರ್ ಮುಂದೆ ರೂಪಾಯಿಯ ಬೆಲೆ 79.41 ರೂ.ಗೆ ಏರಿಕೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ರೂಪಾಯಿ ಬೀಳುತ್ತಿದೆ, ಸಿಂಹ ಘರ್ಜಿಸುತ್ತಿದೆ – ಡಿಕೆಶಿ ವ್ಯಂಗ್ಯ

    ರೂಪಾಯಿ ಬೀಳುತ್ತಿದೆ, ಸಿಂಹ ಘರ್ಜಿಸುತ್ತಿದೆ – ಡಿಕೆಶಿ ವ್ಯಂಗ್ಯ

    ಬೆಂಗಳೂರು: ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 80ರ ಗಡಿ ತಲುಪಿದೆ. 10 ಪೈಸೆಯ ಅಂತರವಷ್ಟೇ ಬಾಕಿ ಉಳಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರದ ಅಂತ್ಯಕ್ಕೆ ರೂಪಾಯಿ ಮೌಲ್ಯವು 79.99ಕ್ಕೆ ತಲುಪಿತ್ತು. ಆದರೆ ಇಂದು ಸ್ವಲ್ಪ ಏರಿಕೆಯಾಗಿ 7.90ಕ್ಕೆ ಇಳಿಕೆ ಆಗಿದೆ.

    ರೂಪಾಯಿ ಮೌಲ್ಯ ಏರಿಳಿತವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೌನ ಮತ್ತು ಘರ್ಜನೆಗೆ ಹೋಲಿಸಿದ್ದಾರೆ. ಇನ್ನೂ ಓದಿ: ಲಕ್ನೋನಲ್ಲಿ ಇಂದಿನಿಂದ ವಯಸ್ಕರಿಗೆ ಬೂಸ್ಟರ್ ಡೋಸ್ ಉಚಿತ

    ಈ ಕುರಿತು ಟ್ವೀಟ್ ಮಾಡಿರುವ ಅವರು `ಮೌನ ಮತ್ತು ಘರ್ಜನೆ ನಡುವಿನ ವ್ಯತ್ಯಾಸ..! ರೂಪಾಯಿ ಘರ್ಜಿಸುವಾಗ ಸಿಂಹ ಮೌನವಾಗಿತ್ತು. ಈಗ ರೂಪಾಯಿ ಬೀಳುತ್ತಿದೆ ಆದರೆ ಸಿಂಹ ಘರ್ಜಿಸುತ್ತಿದೆ’ ಎಂದು ಕುಟುಕಿದ್ದಾರೆ. ಇನ್ನೂ ಓದಿ: ಬಿಬಿಎಂಪಿಯ ಸಹಾಯ ಆ್ಯಪ್ ಹೆಸರಿಗಷ್ಟೇ- ದೂರು ದಾಖಲಿಸಿದ್ರೆ ತಿಂಗಳಾದ್ರೂ ಪರಿಹಾರವೇ ಇಲ್ಲ!

    ವಿಪಕ್ಷಗಳು ಈ ಹಿಂದೆ ಮೋದಿ ಮಾಡಿದ ಭಾಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಮುಂಬೈ: ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ನಿರಂತರ ವಿದೇಶಿ ಬಂಡವಾಳದ ಹೊರಹರಿವಿನಿಂದಾಗಿ ರೂಪಾಯಿಯ ಮೌಲ್ಯ ಗುರುವಾರ ಅಮೆರಿಕನ್ ಡಾಲರ್ ಎದುರು 77.81ರಷ್ಟಕ್ಕೆ ಕುಸಿತವಾಗಿದೆ.

    ಬುಧವಾರ ರೂಪಾಯಿ ಮೌಲ್ಯ 77.68ರಷ್ಟು ಇದ್ದು, ದಿನದ ಅಂತರದ (ಇಂಟ್ರಾ ಡೇ) ದಾಖಲೆಯ ಕನಿಷ್ಠ ಮಟ್ಟ 13 ಪೈಸೆಯಷ್ಟು ಕುಸಿದಿದೆ. ಈ ಮೂಲಕ ಡಾಲರ್ ಎದುರು ರೂಪಾಯಿ ಮೌಲ್ಯ 77.81ಕ್ಕೆ ತಲುಪಿದೆ. ಇದನ್ನೂ ಓದಿ: ಇಂದಿನಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ

    ಮೇ 4 ರಂದು ನಡೆದ ನಿಗದಿತ ಸಭೆಯಲ್ಲಿ ಆರ್‌ಬಿಐ 40 ಬಿಪಿಎಸ್ ಹೆಚ್ಚಿಸಿದ್ದು, ಇದು ದರದ ಏರಿಕೆಗೆ ಕಾರಣವಾಗಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 123.43 ಡಾಲರ್ ಇದ್ದು, 0.12 ರಷ್ಟು ಕುಸಿದಿದೆ. ಇದನ್ನೂ ಓದಿ: ಕೋಮು ದ್ವೇಷಭಾಷಣ – ಓವೈಸಿ, ನೂಪುರ್ ಶರ್ಮಾ ವಿರುದ್ಧ FIR

    ದೇಶೀಯ ಈಕ್ವಿಟಿ ಮಾರುಕಟ್ಟೆಯ ಎದುರು 30 ಷೇರುಗಳ ಸೆನ್ಸೆಕ್ಸ್ 10.05 ಪಾಯಿಂಟ್ ಅಥವಾ 0.02 ರಷ್ಟು ಹೆಚ್ಚಿ 54,902.54 ರಲ್ಲಿ ವಹಿವಾಟು ನಡೆಸುತ್ತಿದೆ. ಆದರೆ ನಿಫ್ಟಿ 5.65 ಪಾಯಿಂಟ್ ಅಥವಾ ಶೇಕಡಾ 0.03 ರಷ್ಟು ಮುನ್ನಡೆ ಸಾಧಿಸಿ ಶೇಕಡಾ 0.03 ತಲುಪಿದೆ.

  • ನಮ್ಮಲ್ಲಿ ಪೆಟ್ರೋಲ್ ಮುಗಿದಿದೆ: ಶ್ರೀಲಂಕಾ

    ನಮ್ಮಲ್ಲಿ ಪೆಟ್ರೋಲ್ ಮುಗಿದಿದೆ: ಶ್ರೀಲಂಕಾ

    ಕೊಲಂಬೋ: ತೀವ್ರವಾದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಅಗತ್ಯ ವಸ್ತುಗಳ ಆಮದಿಗೆ ನಮ್ಮಲ್ಲಿ ಡಾಲರ್ ಕೊರತೆಯಿದೆ ಎಂದು ಲಂಕಾ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸೋಮವಾರ ತಿಳಿಸಿದ್ದಾರೆ.

    ನಮ್ಮಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಸದ್ಯ ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ. ಮುಂದಿನ ತಿಂಗಳುಗಳಲ್ಲಿ ದೇಶದ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗತಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಲಂಕಾ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್‌ನನ್ನು ಬಂಧಿಸಿದ್ರೆ ಪಾಕಿಸ್ತಾನ ಶ್ರೀಲಂಕಾವಾಗುತ್ತದೆ: ಪಾಕ್ ಮಾಜಿ ಸಚಿವ

    ನಮ್ಮಲ್ಲಿ ಈಗಾಗಲೇ 3 ಸೆಟ್ ಕಚ್ಚಾತೈಲ ಸಾಗಿಸುವ ಹಡಗುಗಳು ಕೊಲಂಬೋ ಬಂದರಿನ ಹೊರಗೆ ಪಾವತಿಗಾಗಿ ಕಾಯುತ್ತಿವೆ. ಆದರೆ ಪಾವತಿಗೆ ನಮ್ಮ ಸರ್ಕಾರದಿಂದ ಡಾಲರ್ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಕ್ರಮಸಿಂಘೆ ದೇಶದ ಆರ್ಥಿಕ ಸಂಕಷ್ಟವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ನೇಪಾಳ ಪ್ರವಾಸ – ಲುಂಬಿನಿಗೆ ಪ್ರಧಾನಿ ಮೋದಿ ಭೇಟಿ, ಬುದ್ಧನಿಗೆ ಭಕ್ತಿಭಾವದ ನಮನ

    ದ್ವೀಪ ರಾಷ್ಟ್ರ ತನ್ನ ಸ್ವಾತಂತ್ರ್ಯದ ಬಳಿಕ ಎಂದೂ ಸಂಭವಿಸದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿನ 2 ಕೋಟಿಗೂ ಅಧಿಕ ಜನರು ಆಹಾರ, ಇಂಧನ ಹಾಗೂ ಔಷಧಕ್ಕಾಗಿ ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದೇಶ ಭಾರೀ ಹಣದುಬ್ಬರ ಹಾಗೂ ಸುದೀರ್ಘ ವಿದ್ಯುತ್ ಕಡಿತವನ್ನೂ ಎದುರಿಸುತ್ತಿದೆ.

  • ಡಾಲರ್‌ ಮುಂದೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಡಾಲರ್‌ ಮುಂದೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

    ಮುಂಬೈ: ಡಾಲರ್‌ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇಂದು 51 ಪೈಸೆ ಇಳಿಕೆ ಕಂಡಿದ್ದು, ಒಂದು ಡಾಲರ್‌ ಮುಂದೆ ರೂಪಾಯಿ ಮೌಲ್ಯ 77.42 ವಿನಿಮಯವಾಗಿದೆ.

    ಹಣದುಬ್ಬರವನ್ನು ತಡೆಗಟ್ಟಲು ಅಮೆರಿಕ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಬಡ್ಡಿದರ ಏರಿಕೆ ಮಾಡಿತ್ತು. ಇದರ ನೇರ ಪರಿಣಾಮ ಮಾರುಕಟ್ಟೆಯ ಮೇಲೆ ಬಿದ್ದಿದ್ದು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಇದನ್ನೂ ಓದಿ: ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

    ಕಳೆದ ಶುಕ್ರವಾರ ರೂಪಾಯಿ ಮೌಲ್ಯ 55 ಪೈಸೆ ಇಳಿಕೆ ಕಂಡು 76.90ಗೆ ಕೊನೆಯಾಗಿತ್ತು. ವಿದೇಶ ಬಂಡವಾಳದ ಹೊರ ಹರಿವು, ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ.

    ರಷ್ಯಾ ಉಕ್ರೇನ್‌ ಯುದ್ಧದಿಂದ ತೈಲ ಬೆಲೆ ಏರಿಕೆಯಾಗಿದೆ. ಸೋಮವಾರ ಮತ್ತಷ್ಟು ದರ ಏರಿಕೆಯಾಗಿದ್ದು ಒಂದು ಬ್ಯಾರೆಲ್‌ ತೈಲದ ದರ 112.25 ಡಾಲರ್‌ಗೆ(8,690 ರೂ.) ಏರಿಕೆಯಾಗಿದೆ. ಇದನ್ನೂ ಓದಿ: ಕೆಜಿಎಫ್ 2 ಕಲೆಕ್ಷನ್ 1129.38 ಕೋಟಿ : ಆರ್.ಆರ್.ಆರ್ ದಾಖಲೆ ಉಡಿಸ್

    ಚೀನಾದಲ್ಲಿ ಕೊರೊನಾ ಲಾಕ್‌ಡೌನ್‌, ತೈಲ ಬೆಲೆ ಏರಿಕೆ, ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ ಮಾಡಿದ್ದರಿಂದ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿದ್ದು ಬಿಎಸ್‌ಇ ಸೆನ್ಸೆಕ್ಸ್‌ ಇಂದು 364.91 ಅಂಶ ಕುಸಿದಿದ್ದು 54,470 ರಲ್ಲಿ ಕೊನೆಯಾಗಿದೆ.

  • ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!

    ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!

    ನವದೆಹಲಿ: ಪೆಟ್ರೋಲ್, ಡಿಸೇಲ್ ದರ ಸತತ 6ನೇ ದಿನವೂ ಏರಿಕೆಯಾಗಿದ್ದು, ಈ ಮೂಲಕ ಕಳೆದ ಒಂದೇ ವಾರದಲ್ಲಿ 6ನೇ ಬಾರಿಗೆ ಏರಿಕೆಯಾಗಿದೆ. ಸೋಮವಾರವೂ ಪ್ರತಿ ಲೀಟರ್ ಪೆಟ್ರೋಲ್‌ಗೆ 30 ಪೈಸೆ, ಡೀಸೆಲ್ 35 ಪೈಸೆ ಏರಿಕೆಯಾಗಿದ್ದು, ಒಂದು ವಾರದಲ್ಲಿ 4.40ರೂ. ನಷ್ಟು ಏರಿಕೆಯಾಗಿರುವುದು ಕಂಡುಬಂದಿದೆ.

    petrol

    ಕಳೆದ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮದ ನಂತರ ಮಾರ್ಚ್ 22ರಂದು ಪೆಟ್ರೋಲ್ ಬೆಲೆ ಏರಿಕೆ ಕಂಡಿದ್ದು ಒಂದೇ ವಾರಕ್ಕೆ ೬ನೇ ಬಾರಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.76ರೂ. ಆಗಿದ್ದರೆ ಡೀಸೆಲ್ ಬೆಲೆ 89 ರೂ. ತಲುಪಿದೆ. ಇದನ್ನೂ ಓದಿ: ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್‌ ಬೆಲೆ

    ದೆಹಲಿಯಲ್ಲಿ 99.11ರೂ. ಇದ್ದ ಪೆಟ್ರೋಲ್ ದರವು 99.41 ರೂ., 90.42 ರೂ. ಇದ್ದ ಡೀಸೆಲ್ ಬೆಲೆ 35 ಪೈಸೆ ಏರಿಕೆಯಿಂದ 90.77 ರೂ.ಗೆ ಮಾರಾಟವಾಗುತ್ತಿದೆ. ಮೊದಲ 4 ದಿನಗಳಲ್ಲಿ 80- 84 ಪೈಸೆಗೆ ಎರಿಕೆಯಾಗಿದ್ದ ದರ, ಸೋಮವಾರ 30 – 35 ಪೈಸೆಗೆ ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ಬೆಲೆ ೪ ರೂ. ಹಾಗೂ ಡೀಸೆಲ್ ಬೆಲೆ ೪.೧೦ ರೂ. ಹೆಚ್ಚಾಗಿರುವುದು ಕಂಡುಬಂದಿದೆ.

    petrol

    ಪಂಚರಾಜ್ಯ ಚುನಾವಣಾ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವುದನ್ನು ತಡೆಹಿಡಿಯಲಾಗಿದ್ದು, ಚಿಲ್ಲರೆ ವ್ಯಾಪಾರಿಗಳು ಒಟ್ಟಾಗಿ 2.25 ಶತಕೋಟಿ (19,000 ಕೋಟಿ ರೂ.) ಆದಾಯ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಪೆಟ್ರೋಲ್ ಬೆಲೆ ಏರಿಕೆ ಮಾಡುವುದು ಅವಶ್ಯಕವಾಗಿದೆ. ಅಲ್ಲದೆ ಪ್ರತಿ ಬ್ಯಾರಲ್‌ನ ಕಚ್ಚಾತೈಲ ದರ 100 ರಿಂದ 110 ಡಾಲರ್‌ಗೆ ಏರಿಕೆಯಾದರೆ ಪ್ರತಿ ಲೀಟರ್‌ಗೆ 15 ರಿಂದ 20 ರೂ. ಹೆಚ್ಚಳವಾಗಲಿದೆ. ಹಾಗೆಯೇ ಚಿಲ್ಲರೆ ವ್ಯಾಪಾರಿಗಳ ದರದಲ್ಲಿ ಲೀಟರ್‌ಗೆ 9 ರಿಂದ 12 ರೂ. ಹೆಚ್ಚಾಗಲಿದೆ ಎಂದು ಸಿಆರ್‌ಐಎಸ್‌ಐಎಲ್ ಸಂಶೋಧನೆ ಹೇಳಿದೆ. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ: ಗಡ್ಕರಿ 

  • 100 ಕೋಟಿಯ ಹೆಲಿಕಾಪ್ಟರ್ ಖರೀದಿಸಿದ ಮೊದಲ ಭಾರತೀಯ: ವಿಶೇಷತೆ ಏನು?

    100 ಕೋಟಿಯ ಹೆಲಿಕಾಪ್ಟರ್ ಖರೀದಿಸಿದ ಮೊದಲ ಭಾರತೀಯ: ವಿಶೇಷತೆ ಏನು?

    ತಿರುವನಂತಪುರಂ: ಇಲ್ಲಿನ ಆರ್ ಪಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ರವಿ ಪಿಳೈ ಅವರು 100 ಕೋಟಿ ರೂ. ಮೌಲ್ಯದ ಏರ್ ಬಸ್ಸ್ ಹೆಲಿಕಾಪ್ಟರ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಮೂಲಕ ದೇಶದಲ್ಲೇ ಅತ್ಯಂತ ಐಷಾರಾಮಿ ಚಾಪರ್ ಅನ್ನು ಹೊಂದಿದ ಮೊದಲ ಭಾರತೀಯ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

    ಪ್ರಸ್ತುತ 1,500 ಎಚ್145 ಹೆಲಿಕಾಪ್ಟರ್ ಪ್ರಪಂಚದಾದ್ಯಂತ ಹಾರುತ್ತಿವೆ. ಇದೀಗ ಈ ಹೆಲಿಕಾಪ್ಟರ್‌ನ ಸೇರ್ಪಡೆಯು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎನ್ನಲಾಗಿದೆ. ಇದನ್ನೂ ಓದಿ: ಡಿಎಂಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ತಮಿಳುನಾಡಿಗೆ ಪಾದಯತ್ರೆ ಯಾವಾಗ: ಡಿಕೆಶಿಗೆ ಬಿಜೆಪಿ ಪ್ರಶ್ನೆ

    Helicopter

     

    68 ವರ್ಷದ ಬಿಲಿಯನೇರ್ ಪ್ರಸ್ತುತ 2.5 ಶತಕೋಟಿ ಡಾಲರ್ (19,10,18,750.00 ರೂ.) ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವರ ವಿವಿಧ ಕಂಪನಿಗಳಲ್ಲಿ ಸುಮಾರು 70 ಸಾವಿರ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಅವರು ರಾಜ್ಯದಾದ್ಯಂತ ಐಷಾರಾಮಿ ಹೋಟೆಲ್‍ಗಳನ್ನು ಹೊಂದಿದ್ದು, ತಮ್ಮ ಅಥಿತಿಗಳನ್ನು ಕರೆದೊಯ್ಯಲು ಈ ಹೆಲಿಕಾಪ್ಟರ್ ಬಳಸುವುದರಿಂದ ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಆರ್ ಪಿ ಗ್ರೂಪ್‍ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಏನಿದರ ವಿಶೇಷತೆ?
    * ಎಲ್ಲ ರೀತಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಾಧುನಿಕ ಹೆಲಿಕಾಪ್ಟರ್‌ನಲ್ಲಿ ಒಬ್ಬ ಪೈಲಟ್ ಸೇರಿ 7 ಪ್ರಯಾಣಿಕರು ಪ್ರಯಾಣಿಸಬಹುದು.
    * ಹೆಲಿಕಾಪ್ಟರ್ ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಿಂದ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಮಾಡುವ ಸಾಮಥ್ರ್ಯವನ್ನು ಹೊಂದಿದೆ.
    * ಈ ಚಾಪರ್ ಅಪಘಾತ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಅತ್ಯುನ್ನತ ಸುರಕ್ಷತೆಯನ್ನು ನೀಡುತ್ತದೆ.
    * ಅಲ್ಲದೆ ಎಚ್145 ಸುಧಾರಿತ ವೈರ್‍ಲೆಸ್ ಸಂವಹನ ವ್ಯವಸ್ಥೆಯನ್ನೂ ಹೊಂದಿದೆ. ಇದನ್ನೂ ಓದಿ: ಚುನಾವಣೆವರಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ

  • 3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    ನವದೆಹಲಿ: ಭಾರತಕ್ಕೆ 3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ರಷ್ಯಾದ ತೈಲ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಇದು ಸರ್ಕಾರದ ಮಟ್ಟದಲ್ಲಿ ನಡೆದ ಒಪ್ಪಂದವಲ್ಲ, ತೈಲ ಕಂಪನಿಗಳ ನಡುವೆ ಮಾಡಿಕೊಂಡಿರುವ ಒಪ್ಪಂದ ಆಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಉಕ್ರೇನ್ ಮೇಲಿನ ದಾಳಿಗೆ ಪ್ರತಿಯಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ನಿಬರ್ಂಧಗಳನ್ನು ವಿಧಿಸಿದ್ದರೂ, ರಷ್ಯಾದ ತೈಲ ಕಂಪನಿಗಳಿಂದ ಕಚ್ಚಾ ತೈಲ ಖರೀದಿಸಲು ಭಾರತೀಯ ತೈಲ ಕಂಪನಿಗಳಿಗೆ ಯಾವುದೇ ನಿಬರ್ಂಧಗಳಿಲ್ಲ. ಆದ್ದರಿಂದ ಎರಡೂ ಕಂಪನಿಗಳ ನಡುವೆ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಭಾರತದ ಬಹುತೇಕ ಕಂಪನಿಗಳು ಸಹ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಸಹಮತ ವ್ಯಕ್ತಪಡಿಸಿವೆ ಎಂದು ಐಇಸಿಎಲ್ ಮೂಲಗಳು ತಿಳಿಸಿವೆ.

    ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಒಂದು ಬ್ಯಾರಲ್‍ಗೆ ಗರಿಷ್ಠ 100 ಡಾಲರ್ (ಸುಮಾರು 7,594.67 ರೂ.) ಇರುತ್ತಿತ್ತು. ಆದರೆ ಉಕ್ರೇನ್ ಆಕ್ರಮಣದ ನಂತರ ಕಚ್ಚಾ ತೈಲವು ಬ್ಯಾರಲ್‍ಗೆ 140 ಡಾಲರ್ (ಸುಮಾರು 10,632.53 ರೂ.) ತಲುಪಿದೆ. ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ಕಂಪನಿಗಳು ಅಂದಾಜಿಸಿವೆ. ಇದನ್ನೂ ಓದಿ: ಭಾರತೀಯ ಮೂಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗ್ಲೆನ್ ಮ್ಯಾಕ್ಸ್‌ವೆಲ್

    ಅಮೆರಿಕದ ಆಮದು ಶೇ.11 ಹೆಚ್ಚಳ
    ರಷ್ಯಾದ ಮೇಲಿನ ನಿರ್ಬಂಧವನ್ನು ತಿರಸ್ಕರಿಸಿರುವ ಭಾರತವು ಪ್ರಸಕ್ತ ವರ್ಷದಲ್ಲಿ ಅಮೆರಿಕದಿಂದಲೂ ಶೇ.11 ರಷ್ಟು ಕಚ್ಚಾ ತೈಲ ಆಮದು ಮಾಡಿಕೊಂಡಿರುವುದು ಕಂಡುಬಂದಿದೆ. ಈಗಾಗಲೇ ಭಾರತವು ಇರಾಕ್‍ನಿಂದÀ ಶೇ.23, ಸೌದಿ ಅರೇಬಿಯಾದಿಂದ ಶೇ.18ರಷ್ಟು ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‍ನಿಂದ ಶೇ.11ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ನಡುವೆ ಭಾರತೀಯ ಮಾರುಕಟ್ಟೆಯ ಯುಎಸ್ ಪಾಲು ಶೇ.8ಕ್ಕೆ ಏರಲಿದೆ ಎಂದು ಹೇಳಲಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಶೇ.11 ರಷ್ಟು ಆಮದು ಮಾಡಿಕೊಂಡಿರುವುದು ಗಮನಾರ್ಹ ಅಂಶವಾಗಿದೆ.