Tag: Doll Festival

  • ನೋಡ ಬನ್ನಿ ಬೊಂಬೆ ಸೊಬಗ – ಬೆಂಗ್ಳೂರಿನ ಶ್ರೀವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ವೈಭವ

    ನೋಡ ಬನ್ನಿ ಬೊಂಬೆ ಸೊಬಗ – ಬೆಂಗ್ಳೂರಿನ ಶ್ರೀವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ವೈಭವ

    ಬೆಂಗಳೂರು: ಇಲ್ಲಿನ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ (Sri Vidyamanya Vidya Kendra) ದಸರಾ ಹಬ್ಬದ (Dasara Festival) ಸೊಬಗು ಕಳೆಗಟ್ಟಿದ್ದು, ಭಾರತೀಯ ಸಂಸ್ಕೃತಿಯೇ ಅಲ್ಲಿ ಅನಾವರಣಗೊಂಡಿದೆ.

    ಆಡಳಿತ ಮಂಡಳಿ ಸಹಯೋಗದೊಂದಿಗೆ ಬೋಧಕ ಸಿಬ್ಬಂದಿಯೇ ಆಯೋಜಿಸಿರುವ ಈ ಬೊಂಬೆ ಪ್ರದರ್ಶನದಲ್ಲಿ (Doll Festival) ರಾಮಾಯಣದ ಗತವೈಭವದೊಂದಿಗೆ ಮೈಸೂರಿನ ದಸರಾ (Mysuru Dasara) ಸೊಬಗೇ ಬೊಂಬೆ ಲೋಕದಲ್ಲಿ ಅನಾವರಣಗೊಳಿಸಿದೆ. ಇದನ್ನೂ ಓದಿ: ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

    ಏನೇನು ವಿಶೇಷತೆ?
    ಸಂಪೂರ್ಣ ರಾಮಾಯಣ ದೃಶ್ಯಗಳಾದ ರಾಮನ ಹುಟ್ಟು, ವನವಾಸ, ಶ್ರೀರಾಮನ ಪಟ್ಟಾಭಿಷೇಕ, ಲವಕುಶರ ಜನನ, ಲವಕುಶರ ಪಟ್ಟಾಭೀಷೇಕ, ಮೈಸೂರು ದಸರಾ ಜಂಬೂ ಸವಾರಿ ಗೊಂಬೆಗಳು, ಶ್ರೀ ಕೃಷ್ಣ ಲೀಲಾ, ನವದುರ್ಗೆಯರು, ಮದುವೆ ಮಂಟಪ, ಚೆನ್ನಪಟ್ಟಣದ ಬೊಂಬೆಗಳು, ಪಟ್ಟದ ಬೊಂಬೆಗಳು, ತೋಪುಗಳು, ಕಾಮದೇನು, ಹಳ್ಳಿಗಾಡು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದು, ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಇದನ್ನೂ ಓದಿ: ರಷ್ಯಾದ ಶಾಲೆಯಲ್ಲಿ ಮನಸ್ಸೋಇಚ್ಛೆ ಗುಂಡು ಹಾರಿಸಿದ ಬಂದೂಕುಧಾರಿ- 5 ಮಕ್ಕಳು ಸೇರಿ 9 ಮಂದಿ ದುರ್ಮರಣ

    ಕಳೆದ 7 ವರ್ಷಗಳಿಂದಲೂ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ದಸರಾ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಹಾಗೆಯೇ ಈ ಬಾರಿ ಸಂಪೂರ್ಣ ರಾಮಾಯಣ (Sri Ramayana), ಕೃಷ್ಣ ಲೀಲೆ, ಮಹಾಭಾರತದ ಸನ್ನಿವೇಷಗಳು, ಪೂರಿ ಜಗನ್ನಾಥ ರಥಯಾತ್ರೆ, ಮೈಸೂರು ದಸರಾ ಪ್ರದರ್ಶನದ ದೃಶ್ಯಗಳನ್ನು ಬೊಂಬೆ ಲೋಕದಲ್ಲಿ ಕಟ್ಟಿಕೊಟ್ಟಿದ್ದೇವೆ. ನಾಡ ಹಬ್ಬವನ್ನು ಉಳಿಸುವುದು ನಮ್ಮ ಸಂಸ್ಕೃತಿ ಹಾಗೂ ಜವಾಬ್ದಾರಿಯಾಗಿದೆ. ನಾವೆಲ್ಲರೂ ಒಟ್ಟಾಗಿ ದಸರಾ ಸಂಭ್ರಮಿಸೋಣ ಎಂದು ಪ್ರಾಂಶುಪಾಲರಾದ ಶಾರದಾ ಮನವಿ ಮಾಡಿದ್ದಾರೆ.

    ಬೊಂಬೆ ಪ್ರರ್ದಶನ ಇಂದಿನಿಂದ ಶುರುವಾಗಿದ್ದು, ಅಕ್ಟೋಬರ್‌ 5ರ ವರೆಗೂ ನಡೆಯಲಿದೆ. ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 6.30ರ ವರೆಗೆ ವೀಕ್ಷಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    ನ್ನೇನು ಗೊಂಬೆಗಳ ಹಬ್ಬ ಬಂದೇ ಬಿಡ್ತು. ಗೊಂಬೆ ಕೂರಿಸುವವರು ಈಗಾಗಲೇ ಎಲ್ಲಾ ಪ್ರೀಪರೇಷನ್ ಮಾಡಿಕೊಳ್ಳುತ್ತಿದ್ದಾರೆ. ನಾವು ಈ ಸಲ ಲಾಸ್ಟ್ ಟೈಂಗಿಂತ ಚೆನ್ನಾಗಿ ಹಬ್ಬ ಮಾಡಬೇಕು. ಆ ರೀತಿ ಗೊಂಬೆ ತರಬೇಕು, ಈ ರೀತಿ ಗೊಂಬೆ ಡೆಕೊರೇಷನ್ ಮಾಡಬೇಕು. ಎಲ್ಲರೂ ಮಾಡುವಂತೆ ನಾವು ಹಬ್ಬ ಮಾಡಿದ್ರೆ ಮಜಾ ಇರಲ್ಲ ಅನ್ನೋರು ಇರ್ತಾರೆ. ಅವರಿಗೆಲ್ಲಾ ಸೇರಿ ನೆಚ್ಚಿನ ಗೊಂಬೆಗಳನ್ನು ಹೇಗೆ ಕೂರಿಸಿದ್ರೆ ಚೆಂದ. ಹೇಗೆ ಅಲಂಕರಿಸಿದ್ರೆ ಅಂದ ಅನ್ನೋದನ್ನ ನೋಡೋಣ..

    ಈ ಹಿಂದೆ ಗೊಂಬೆಗಳ ಹಬ್ಬ ಅಂದರೆ ಮನೆಯಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ ಮನೆ ಮಾಡಿರುತ್ತಿತ್ತು.. ಮನೆಯ ಅಟ್ಟದಲ್ಲಿ ಜೋಡಿಸಿಟ್ಟಿದ್ದ ಮಣ್ಣಿನ ಗೊಂಬೆಗಳನ್ನು ಕೆಳಗಿಳಿಸಿ, ಶುದ್ಧಗೊಳಿಸುವುದಕ್ಕೆ ವಾರವಾದರೂ ಬೇಕಾಗಿತ್ತು. ಸದ್ಯದ ಪೀಳಿಗೆಯವರಿಗೆ ಎಲ್ಲಿದೆ? ಇಷ್ಟೊಂದು ಟೈಮ್. ಕೆಲವರು ಹಬ್ಬದ ದಿನ ಹಬ್ಬದೂಟ ಮಾಡಿ ತಿಂದರೆ ಸಾಕು ಅಂತಿರುತ್ತಾರೆ. ಇನ್ನೂ ಕೆಲವರು ಯಾರಾದ್ರೂ ಫ್ರೆಂಡ್ಸ್, ಸಂಬಂಧಿಕರು ಕರೆದರೆ ಸಾಕಾಪ್ಪ ಅಂತಿರುತ್ತಾರೆ. ಹೀಗಿರುವಾಗ ಗೊಂಬೆ ಕೂರಿಸಲು ಸಾಕಷ್ಟು ಸಮಯ ವ್ಯಯಿಸಲು ಆಗುವುದಿಲ್ಲ. ಗೊಂಬೆ ಜೋಡಿಸುವುದು, ಕೂರಿಸುವುದು ಒಂದು ಕಲೆ. ಅದು ಎಲ್ಲರಿಗೂ ಒಲಿದಿರುವುದಿಲ್ಲ. ಹಾಗಾಗಿ ಈ ಒಂದು ಸಿಂಪಲ್ ಟಿಪ್ಸ್ ಗಳನ್ನು ಒಮ್ಮೆ ಕಣ್ಣಾಡಿಸಿ. ಗೊಂಬೆ ಕೂರಿಸಿ ನೋಡಿ.

    * ನಿಮ್ಮ ಮನೆಯಲ್ಲಿ ಮೊದಲಿನಿಂದಲೂ ಗೊಂಬೆ ಕೂರಿಸುವ ರೂಡಿ ಇದ್ದರೆ ಚೆಂದ.
    * ಎತ್ತಿಟ್ಟಿದ್ದ ಮಣ್ಣಿನ ಗೊಂಬೆಗಳನ್ನೆಲ್ಲ ಒಣಗಿದ ಕಾಟನ್ ಬಟ್ಟೆಯಲ್ಲಿ ಒರೆಸಿ ಇಡಿ.
    * ಗೊಂಬೆ ಕೂರಿಸುವ ಮೊದಲು ಯಾವ ಥೀಮ್‍ನಲ್ಲಿ ಕೂರಿಸಬೇಕೆಂದು ಪ್ಲಾನ್ ಮಾಡಿ.
    (ಪೌರಾಣಿಕ, ಐತಿಹಾಸಿಕ, ಸಣ್ಣ ಕಥೆಯಾಧಾರಿತ, ನೀತಿ ಕಥೆ, ಜೀವನಶೈಲಿ, ಆಧುನಿಕ ವಿಷಯಗಳು. ಹೀಗೆ ಯಾವುದು ಇಷ್ಟವೋ ಅದನ್ನ ಸೆಲೆಕ್ಟ್ ಮಾಡಿ)

    ಸೀತೆ ಸ್ವಯಂವರ, ಸೀತೆ ವನವಾಸ, ಶ್ರೀನಿವಾಸ ಕಲ್ಯಾಣ, ಕೃಷ್ಣನ ಆಟ-ತುಂಟಾಟ, ಗಣೇಶನಿಗೆ ಆನೆ ಮುಖ ಬಂದಿದ್ದು, ಕ್ರಿಸ್ತನ ಹುಟ್ಟು ಈ ಪೌರಾಣಿಕ ರೀತಿಯಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಇತಿಹಾಸದ ಒಲವು ಹೊಂದಿರುವವರು ವಿಜಯನಗರ ಆಡಳಿತ, ಮೈಸೂರು ಒಡೆಯರ್ ಆಡಳಿತ, ವಂಶಾವೃಕ್ಷ, ಕದಂಬ ಸಾಮ್ರಾಜ್ಯ ಎಂಬುದರ ಬಗ್ಗೆಯೂ ಚಿಂತಿಸುತ್ತಾರೆ. ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ ಪಾಠ, ಐತಿಹಾಸಿಕ ಪುರುಷರ ಜೀವನಗಾಥೆ, ಪ್ರೇರಣೆ ನೀಡಬಲ್ಲಂತಹ ಗಣ್ಣರ ಜೀವನ ಶೈಲಿ ತೋರಿಸುವ ರೀತಿಯಲ್ಲಿ ಗೊಂಬೆಗಳನ್ನು ಅಲಂಕರಿಸಬಹುದು. ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ? ಯಾವುದು ನಿಮಗೆ ಹೆಚ್ಚು ತಿಳಿದಿದೆಯೋ ಅಂತಹ ಥೀಮ್ ಸೆಲೆಕ್ಟ್ ಮಾಡಿಕೊಳ್ಳಬೇಕು.

    * ಅವರು ಹೇಳಿದ್ರು ಅಂತಾಗಲಿ.. ಅವರು ಮಾಡಿದ್ದಾರೆ ನಾವು ಮಾಡಬೇಕು ಎಂದು ಗೊತ್ತಿಲ್ಲದ, ಮಾಹಿತಿ ಇಲ್ಲದೇ ಗೊಂಬೆ ಕೂರಿಸಿ ಆಭಾಸಕ್ಕೊಳಗಾಗಬೇಡಿ.
    * ಗೊಂಬೆ ಕೂರಿಸಲು ಸ್ಥಳದ ಆಯ್ಕೆ ಸೂಕ್ತವಾಗಿರಲಿ. ಗೊಂಬೆಯನ್ನು ಒಮ್ಮೆ ಕೂರಿಸಿದರೆ 9 ದಿನಗಳ ಕಾಲ ಅದೇ ಸ್ಥಳದಲ್ಲಿರುತ್ತದೆ. ಹೀಗಾಗಿ ಗೊಂಬೆಯನ್ನು ಮೆಟ್ಟಿಲುಗಳ ರೀತಿಯೂ ಕೂರಿಸಬಹುದು. ಇಲ್ಲವಾದಲ್ಲಿ ಒಂದು ವಿಶಾಲವಾದ ಸ್ಥಳದಲ್ಲಿ ಕೂರಿಸಬಹುದು.

    * ಗೊಂಬೆಗಳಿಗೆ ಹೆಚ್ಚಿನ ಹೂವಿನ ಅಲಂಕಾರ ಬೇಡ. 9 ದಿನಗಳವರೆಗೆ ಹೂವು ತಾಜಾವಾಗಿರುವುದಿಲ್ಲ. ಕ್ಲೀನ್ ಮಾಡುವಾಗ ಗೊಂಬೆಗಳು ಡ್ಯಾಮೇಜ್ ಆದ್ರೆ ಕಷ್ಟ.
    * ಹೆಚ್ಚಿನ ಸೀರಿಯಲ್ ಸೆಟ್ ಲೈಟ್‍ಗಳು, ಕಣ್ಣಿಗೆ ರಾಚುವಂತಹ ಲೈಟ್ ಬಳಸಬೇಡಿ.
    * ಸಣ್ಣದಾಗಿದ್ರೂ ಸಿಂಪಲ್ ಆಗಿದ್ರೆ ಗೊಂಬೆಗಳನ್ನು ನೋಡಲು ಚೆಂದ.
    * ಎಷ್ಟೊಂದು ಗೊಂಬೆಗಳಿದೆ ಎಂದು ಎಲ್ಲಾವನ್ನು ತುಂಬಬೇಡಿ. ಅಗತ್ಯಕ್ಕನುಗುಣವಾಗಿ ಜೋಡಿಸಿ.
    * ಚಿಕ್ಕದಾಗಿದ್ರೂ ಚೊಕ್ಕವಾಗಿದ್ರೆ ಎಲ್ಲರನ್ನೂ ಆಕರ್ಷಿಸಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

  • ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಗೊಂಬೆಗಳ ಉತ್ಸವ

    ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಗೊಂಬೆಗಳ ಉತ್ಸವ

    ಬೆಂಗಳೂರು: ಗೊಂಬೆಗಳ ಸಂಭ್ರಮದ ಹಬ್ಬ ನವರಾತ್ರಿಗೆ ಬೆಂಗಳೂರು ನಗರ ಸಿದ್ಧವಾಗುತ್ತಿದೆ. ವಿವಿಧ ಶೈಲಿಯ ದಸರಾ ಗೊಂಬೆಗಳ ಉತ್ಸವ ನಡೆಯುತ್ತಿದ್ದು, ಬೆಂಗಳೂರು ಜನರು ಗೊಂಬೆಗಳ ಖರೀದಿ ಮಾಡುತ್ತಿದ್ದಾರೆ.

    ದಸರಾ ಹಬ್ಬದ ಪ್ರಯುಕ್ತ ಮಲ್ಲೇಶ್ವರಂನ ವರ್ಣ ಸ್ಟೋರ್ ಗೊಂಬೆಗಳ ಉತ್ಸವ ಆಯೋಜಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಮಂದಿ ಗೊಂಬೆಗಳನ್ನ ಖರೀದಿಸಲು ಮುಗಿಬಿದ್ದಿದ್ದಾರೆ. ಈ ಉತ್ಸವದಲ್ಲಿ ಬಣ್ಣ ಬಣ್ಣದ ಗೊಂಬೆ, ದೀಪಗಳಿಂದ ಕಂಗೊಳಿಸುತ್ತಿರುವ ಪುಟಾಣಿ ಅರಮನೆ, ಅಂಬಾರಿ, ವಿಧಾನಸೌಧ, ಮದುವೆ ಸೆಟ್ಟು ಮತ್ತು ಅನ್ನದಾತ ಗೊಂಬೆಗಳನ್ನು ಕಾಣಬಹುದಾಗಿದೆ.

    ಈ ಉತ್ಸವದಲ್ಲಿ 500 ಬಗೆಯ ಗೊಂಬೆಗಳಿದ್ದು, ಚನ್ನಪಟ್ಟಣ ಸೇರಿದಂತೆ ಬೇರೆ ಬೇರೆ ರಾಜ್ಯದಿಂದಲೂ ತರಲಾಗುತ್ತಿದೆ. ಈ ಬಾರಿ ಮಕ್ಕಳಿಗೆ ಇಷ್ಟವಾಗುವ ಕಾರ್ಟೂನ್‍ನಲ್ಲಿ ಬರುವ ಚಿತ್ರಗಳ ಗೊಂಬೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ ಎಂದು ಗೊಂಬೆ ಉತ್ಸವದ ಆಯೋಜಕರು ಅರುಣ್ ಹೇಳಿದ್ದಾರೆ.

    ಮೈಸೂರು ಅಷ್ಟೇ ಅಲ್ಲ ಸಿಲಿಕಾನ್ ಸಿಟಿಯಲ್ಲೂ ದಸರಾ ಉತ್ಸವ ಕಳೆಗಟ್ಟುತ್ತಿದ್ದು, ಈ ಉತ್ಸವ ಅಕ್ಟೋಬರ್ 19ರ ವರೆಗೂ ಇರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv