Tag: Dogs attack

  • ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ!

    ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ!

    ಚಿಕ್ಕಬಳ್ಳಾಪುರ: ಬೀದಿನಾಯಿಗಳ ದಾಳಿಯಿಂದಾಗಿ ಬಾಲಕ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಸಂತೋಷ ನಗರದಲ್ಲಿ ನಡೆದಿದೆ.

    BOY DEAD

    ಕಲಂದರ್ ಖಾನ್ (11) ನಾಯಿಗಳ ದಾಳಿಗೆ ಬಲಿಯಾದ ಬಾಲಕ. ಇದನ್ನೂ ಓದಿ: ಫಿಶ್ ಕರಿ ಬೇಕು ಎಂದ ಸ್ನೇಹಿತನ ಬರ್ಬರ ಹತ್ಯೆ

    ತಂದೆ ಬಾಬಾಜಾನ್ ಖಾನ್ ಬಳಿಗೆ ಹೋಗುತ್ತಿದ್ದಾಗ ಬಾಲಕನ ಮೇಲೆ ಏಕಾಏಕಿ 20-30 ನಾಯಿಗಳ ಹಿಂಡು ದಾಳಿ ನಡೆಸಿವೆ. ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್

    DOGS ATTACK

    ಸಂತೋಷ ನಗರದ ಚಿಕನ್, ಮಟನ್ ಅಂಗಡಿಗಳ ತ್ಯಾಜ್ಯಕ್ಕಾಗಿ ಬಿಡಾಡಿ ನಾಯಿಗಳು ಹಿಂಡು ಹಿಂಡಾಗಿ ಗುಂಪು ಸೇರಲಿವೆ. ಮಾಂಸದಂಗಡಿಗಳಲ್ಲಿ ಆಹಾರಕ್ಕಾಗಿ ಬಂದು ಸೇರಿದ್ದ ನಾಯಿಗಳು ಭಾನುವಾರ ಬಾಲಕನನ್ನು ಬಲಿ ಪಡೆದಿವೆ. ಮಾಂಸದಂಗಡಿಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • 10ರ ಬಾಲೆಯನ್ನು ಕಚ್ಚಿ ಕಚ್ಚಿ ಕೊಂದ ಬೀದಿ ನಾಯಿಗಳು

    10ರ ಬಾಲೆಯನ್ನು ಕಚ್ಚಿ ಕಚ್ಚಿ ಕೊಂದ ಬೀದಿ ನಾಯಿಗಳು

    ತುಮಕೂರು: ಬಟ್ಟೆ ತೊಳೆಯಲು ತಾಯಿಯೊಂದಿಗೆ ಕೆರೆಗೆ ಹೋಗಿದ್ದ ಬಾಲಕಿಯೊಬ್ಬಳು ಬೀದಿ ನಾಯಿಗಳ ದಾಳಿಗೆ ಬಲಿಯಾದ ಘಟನೆ ಕುಣಿಗಲ್ ತಾಲೂಕಿನ ಅರಸರ ಪಾಳ್ಯದಲ್ಲಿ ನಡೆದಿದೆ.

    ಅರಸರ ಪಾಳ್ಯ ಗ್ರಾಮದ ಗಂಗಾಧರಯ್ಯ ಎಂಬವರ ಪುತ್ರಿ ತೇಜಸ್ವಿನಿ (10) ಮೃತ ಬಾಲಕಿ. ತೇಜಸ್ವಿನಿ ಕುಣಿಗಲ್ ಸೇಂಡ್ ರಿಡಾ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಳು. ಭಾನುವಾರ ಶಾಲೆಗೆ ರಜೆ ಇದ್ದಿದ್ದರಿಂದ ತಾಯಿ ಗಂಗಮ್ಮ ಜೊತೆಗೆ ಬಟ್ಟೆ ತೊಳೆಯಲು ಹೋಗಿದ್ದಾಳೆ.

    ಕೆರೆಯ ದಂಡೆಯ ಮೇಲೆ ಬೆಳೆದಿದ್ದ ಅಣಬೆಯನ್ನು ಕೀಳುತ್ತಿದ್ದಾಗ, ಐದಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿವೆ. ಆದರೆ ಗಂಗಮ್ಮ ಅವರು ಮಗಳು ಹಿಂದೆ ಬರುತ್ತಿದ್ದಾಳೆ ಎಂದು ಮನೆಗೆ ಹೋಗಿದ್ದಾರೆ.

    ತಾವು ಮನೆಗೆ ಬಂದರೂ ಮಗಳು ಇನ್ನು ಬಾರದಿಂದ್ದಾಗ ಗಾಬರಿಗೊಂಡೆ ಗಂಗಮ್ಮ, ಪತಿಗೆ ಮಗಳನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಕೆರೆಯ ಬಳಿ ಹೋಗಿ ನೋಡಿದಾಗ ತೇಜಸ್ವಿನಿ ರಕ್ತಸ್ರಾವದಿಂದ ಬಿದ್ದಿರುವುದು ಪತ್ತೆಯಾಗಿದೆ.

    ನಾಯಿಯ ದಾಳಿಯಿಂದಾಗಿ ರಕ್ತಸ್ರಾವಕ್ಕೆ ಒಳಗಾಗಿದ್ದ ತೇಜಸ್ವಿನಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv