Tag: dogs

  • ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ಬೆಂಗಳೂರು: ವಿಧಾನಸೌಧದಲ್ಲಿರೋ ನಾಯಿಗಳ ರಕ್ಷಣೆ ಸಂಬಂಧ ಸರ್ಕಾರಕ್ಕೆ ವಿವರವಾದ ಮಾಹಿತಿ ಜೊತೆಗೆ ಪ್ರಸ್ತಾವನೆ ಕಳಿಸಿದ್ದೇವೆ. ಸರ್ಕಾರ ನಮಗೆ ಅನುಮತಿ ಕೊಟ್ಟರೆ ನಾಯಿಗಳಿಗೆ ಪ್ರತ್ಯೇಕ ನಿರ್ವಹಣೆ ಮಾಡೋ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಸ್ಪೀಕರ್ ಯು.ಟಿ.ಖಾದರ್ (U T Khader) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ 53 ನಾಯಿಗಳು (Dogs) ಇವೆ. ನಾಯಿಗಳು ವಿಧಾನಸೌಧದ ಒಳಗೆ ಬಾರದಂತೆ ತಡೆಯಲು ಗೇಟ್ ವ್ಯವಸ್ಥೆ ಇಲ್ಲ. ಶಾಸಕರು ವಾಕಿಂಗ್ ಮಾಡಬೇಕಾದ್ರೆ, ಜನರು ವಿಸಿಟ್ ಮಾಡಿದಾಗ ತೊಂದರೆ ಆಗ್ತಿದೆ. ಹೀಗಾಗಿ ನಾವು ಅವುಗಳ ರಕ್ಷಣೆಗೆ ಶೆಡ್ ನಿರ್ಮಾಣ ಮಾಡೋ ಪ್ಲ್ಯಾನ್ ಇದೆ ಎಂದಿದ್ದಾರೆ. ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಸರ್ಕಾರ ಆದೇಶ – ಅನಿರುದ್ಧ ರಿಯಾಕ್ಷನ್ ಏನು?

    ಖಾಸಗಿ ಎಸ್‌ಜಿಒಗೆ ಕೊಟ್ಟು ಇವುಗಳಲ್ಲಿ ಸಾಕುವ ವ್ಯವಸ್ಥೆ ಮಾಡುವ ತೀರ್ಮಾನವಾಗಿ ಚರ್ಚೆ ಆಗಿವೆ.ನಾಯಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನ ಸರ್ಕಾರಕ್ಕೆ ರವಾನೆ ಮಾಡಿದ್ದೇವೆ. ಸರ್ಕಾರ ಅದಕ್ಕೆ ಒಪ್ಪಿಗೆ ಕೊಟ್ಟರೆ ಅನುಷ್ಟಾನ ಮಾಡ್ತೇವೆ ಎಂದು ತಿಳಿಸಿದ್ದಾರೆ.

  • ನಾಯಿಗಳ ಕಾದಾಟದ ಮೇಲೆ ಬೆಟ್ಟಿಂಗ್‌ – 81 ಮಂದಿ ಅರೆಸ್ಟ್‌, 19 ವಿದೇಶಿ ತಳಿ ಶ್ವಾನಗಳು ವಶಕ್ಕೆ

    ನಾಯಿಗಳ ಕಾದಾಟದ ಮೇಲೆ ಬೆಟ್ಟಿಂಗ್‌ – 81 ಮಂದಿ ಅರೆಸ್ಟ್‌, 19 ವಿದೇಶಿ ತಳಿ ಶ್ವಾನಗಳು ವಶಕ್ಕೆ

    ಜೈಪುರ: ನಾಯಿಗಳ ಕಾದಾಟದ (Dog Fight) ಮೇಲೆ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 81 ಜನರನ್ನು ಬಂಧಿಸಿರುವ ಘಟನೆ ರಾಜಸ್ಥಾನದ (Rajasthan) ಹನುಮಾನ್‌ಗಢ ಜಿಲ್ಲೆಯಲ್ಲಿ ನಡೆದಿದೆ.

    ಫಾರ್ಮ್‌ಹೌಸ್‌ವೊಂದರ ಮೇಲೆ ದಾಳಿ ನಡೆಸಿದ್ದು, 19 ವಿದೇಶಿ ತಳಿಯ ನಾಯಿಗಳು ಹಾಗೂ 15 ವಾಹನಗಳನ್ನ ಜಪ್ತಿ ಮಾಡಿದ್ದು, ಘಟನೆ ವೇಳೆ 81 ಮಂದಿಯನ್ನ ಬಂಧಿಸಿರುವುದಾಗಿ ಹನುಮಾನ್‌ಗಢ ಎಸ್ಪಿ ಅರ್ಷದ್ ಅಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವು – ಕಣ್ಣೆದುರೇ ತಾಯಿ ಕಳೆದುಕೊಂಡ ಮಕ್ಕಳ ಆಕ್ರಂದನ

    ಪೊಲೀಸರು ದಾಳಿ ಮಾಡಿದ ತಕ್ಷಣ ಕೆಲವರು ಗೋಡೆ ಹಾರಿ ಎಸ್ಕೇಪ್‌ ಆದ್ರು. ಕೆಲವರು ಪರವಾನಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು, ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನ ಬಂಧಿಸಲಾಗಿದೆ. ಬೆಟ್ಟಿಂಗ್‌ ಆರೋಪದ ಮೇಲೆ ಸಿಕ್ಕಿಬಿದ್ದವರ ಪೈಕಿ ಹೆಚ್ಚಿನವರು ಪಂಜಾಬ್‌, ಹರಿಯಾಣ ಮೂಲದವರಾಗಿದ್ದಾರೆ. ಅವರೆಲ್ಲರೂ ಖಾಸಗಿ ವಾಹನದಲ್ಲಿ ತಮ್ಮ ನಾಯಿಗಳನ್ನ ತಂದಿದ್ದರು. ಕಾದಾಟದ ವೇಳೆ ಕೆಲವು ನಾಯಿಗಳು ಗಾಯಗೊಂಡಿದ್ದು, ಅವುಗಳನ್ನು ಚಿಕಿತ್ಸೆಗಾಗಿ ಶ್ವಾನಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಅರ್ಷದ್‌ ಅಲಿ ಹೇಳಿದ್ದಾರೆ. ಇದನ್ನೂ ಓದಿ: ಮರ ಕತ್ತರಿಸುವ ಯಂತ್ರದಿಂದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ – ಅಪರಿಚಿತನಿಂದ ಕೃತ್ಯ

    ಆರೋಪಿಗಳ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಜೂಜಾಟ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸುಮಾರು 250 ಸದಸ್ಯರನ್ನು ಹೊಂದಿರುವ ಸೋಷಿಯಲ್‌ ಮೀಡಿಯಾ ಗ್ರೂಪ್‌ ಸಹ ಮಾಡಿಕೊಂಡಿದ್ದರು ಎಸ್ಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಕ್ರಿಸ್‌ಮಸ್‌ ಆಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ – Photo Gallery

  • ಶ್ವಾನ ಪ್ರಿಯರೇ ಗಮನಿಸಿ – ನಾಯಿ ಸಾಕಣೆಗೆ ಹೊಸ ರೂಲ್ಸ್ ಜಾರಿಗೊಳಿಸಲು BBMP ಪ್ಲ್ಯಾನ್‌

    ಶ್ವಾನ ಪ್ರಿಯರೇ ಗಮನಿಸಿ – ನಾಯಿ ಸಾಕಣೆಗೆ ಹೊಸ ರೂಲ್ಸ್ ಜಾರಿಗೊಳಿಸಲು BBMP ಪ್ಲ್ಯಾನ್‌

    ಬೆಂಗಳೂರು: ಮನೆಗಳಲ್ಲಿ ಮತ್ತು ಮಾರಾಟ ಕೇಂದ್ರಗಳಲ್ಲಿ ನಾಯಿ ಸಾಕಾಣಿಕೆ (Dog Breeding) ಮಾಡುವ ಬೆಂಗಳೂರಿನ ಶ್ವಾನಪ್ರಿಯರಿಗೆ BBMP ಹೊಸ ರೂಲ್ಸ್ ಜಾರಿಗೊಳಿಸಲು ಮುಂದಾಗಿದೆ. ಮನೆಯಲ್ಲಿ ಒಂದೇ ಒಂದು ನಾಯಿ ಸಾಕಿದ್ದರೂ ಈ ರೂಲ್ಸ್ ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗುತ್ತದೆ.

    ಈ ಹೊಸ ನಿಯಮಗಳನ್ನ ಜಾರಿಗೊಳಿಸುವ ಪ್ರಸ್ತಾವನೆಯನ್ನ ಬಿಬಿಎಂಪಿ ಸರ್ಕಾರದ (Government) ಮುಂದಿಟ್ಟಿದ್ದು, ಯಾವಾಗ ಅನುಷ್ಠಾನಕ್ಕೆ ಬರುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.

    ಹೌದು. ಸಿಲಿಕಾನ್ ಸಿಟಿಯಂತಹ ಮಹಾನಗರದಲ್ಲಿ ITBT ಮಂದಿ ಪ್ರತಿ ಮನೆಯಲ್ಲೂ ನಾಯಿಯನ್ನ ಸಾಕಿರುತ್ತಾರೆ, ಆದ್ರೆ ಅದಕ್ಕೆ ನಿಯಮಗಳೇ ಇರೋದಿಲ್ಲ. ಇದರೊಂದಿಗೆ ನಾಯಿ ಸಾಕಾಣಿಕೆ ಮಾಡಿ ಮಾರಾಟ ಮಾಡುವ ವ್ಯವಹಾರ ಕೂಡ ಜೋರಾಗಿದೆ. ಈ ನಾಯಿ ಸಾಕಾಣಿಕೆಯಲ್ಲಿ ಮತ್ತು ಮಾರಾಟ ಮಾಡುವಲ್ಲಿ ಅವ್ಯವಹಾರ ಆಗಲಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಹೊಸ ರೂಲ್ಸ್ ಜಾರಿಗೆ ತರೋಕೆ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ – ಸೂಕ್ತ ಸಮಯದ ಆಟೋ ಸೇವೆಗೆ ‘ಮೆಟ್ರೋ ಮಿತ್ರ’

    ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿ ಗಣತಿ ಆಗಿದ್ದು, ನಾಯಿಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದೆ. ಆದ್ದರಿಂದ ಸಾಕಾಣಿಕೆಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಇದನ್ನೂ ಓದಿ: KRSನಿಂದ 7ನೇ ದಿನವೂ ತಮಿಳುನಾಡಿಗೆ ನೀರು – ಮಂಡ್ಯದಲ್ಲಿ ಮುಂದುವರಿದ ಪ್ರತಿಭಟನೆಗಳು

    ಹೊಸ ನಿಯಮಗಳೇನು?
    * ನಾಯಿ ಸಾಕಣೆ, ಮಾರಾಟಕ್ಕೆ ಲೈಸೆನ್ಸ್ (ಪರವಾನಗಿ) ಕಡ್ಡಾಯ
    * ಮನೆಯಲ್ಲಿ ಮತ್ತು ಮಾರಾಟ ಕೇಂದ್ರದ ಶ್ವಾನಗಳಿಗೆ ರೇಬಿಸ್ ಲಸಿಕೆ ಕಡ್ಡಾಯ
    * ಮನೆಗೆ ಒಂದೇ ನಾಯಿ ಸಾಕಬೇಕು
    * ನಾಯಿಯನ್ನ ಸಾಕಿ ಬೀದಿಗೆ ಬಿಡುವಂತಿಲ್ಲ
    * ಪ್ರತಿ ತಿಂಗಳು ನಾಯಿಗೆ ಸುರಕ್ಷತೆ ದೃಷ್ಟಿಯಿಂದ ಲಸಿಕೆ ಹಾಕಿಸಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ

    ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) Weekend With Ramesh-5 ಶೋನಲ್ಲಿ ಭಾಗವಹಿಸಿದ ಮೇಲೆ ಹಲವು ವಿಚಾರಗಳು ಹೊರಬಿದ್ದಿದೆ. ಸಿನಿಮಾ, ರಾಜಕೀಯ, ಅವರ ಇಷ್ಟಗಳು ಹೀಗೆ ಸಾಕಷ್ಟು ವಿಚಾರಗಳನ್ನ ನಟಿ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಶ್ವಾನಗಳೆಂದರೆ ರಮ್ಯಾಗೆ ಎಲ್ಲಿಲ್ಲದ ಪ್ರೀತಿ. ನನನ್ನ ಮಕ್ಕಳಿಲ್ಲ ಆದರೆ ಶ್ವಾನಗಳೇ(Dogs) ನನ್ನ ಮಕ್ಕಳ ಸಮಾನ ಎಂದು ನಟಿ ಭಾವುಕರಾಗಿದ್ದಾರೆ. ಇದನ್ನೂ ಓದಿ:ಹೊಸ ಫೋಟೋಶೂಟ್‌ನಿಂದ ಇಂಟರ್‌ನೆಟ್‌ ಬೆಂಕಿ ಹಚ್ಚಿದ ರಶ್ಮಿಕಾ ಮಂದಣ್ಣ

    ಯಶ್ (Yash) ಜೊತೆ Lucky ಎಂಬ ಸಿನಿಮಾದಲ್ಲಿ ರಮ್ಯಾ ಶ್ವಾನ (Dog) ಪ್ರೇಮಿಯಾಗಿ ಕಾಣಿಸಿಕೊಂಡಿದ್ದರು. ರೀಲ್ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಅವರಿಗೆ ಶ್ವಾನ ಅಂದರೆ ಅಚ್ಚುಮೆಚ್ಚು. ಶ್ವಾನ ತನ್ನ ಬದುಕಿನಲ್ಲಿ ಅದೆಷ್ಟು ಮುಖ್ಯ ಎಂಬುದನ್ನ Weekend With Ramesh ಶೋನಲ್ಲಿ ಹಂಚಿಕೊಂಡಿದ್ದಾರೆ.

    ನಟಿ ರಮ್ಯಾ, ನನಗೆ ಮಕ್ಕಳು ಇಲ್ಲದೇ ಇರಬಹುದು. ಆದರೆ, ಶ್ವಾನಗಳೇ ನನಗೆ ಮಕ್ಕಳ ಸಮಾನ. ಶ್ವಾನಗಳು ಅಂದ್ರೆ ನನಗೆ ತುಂಬಾ ಇಷ್ಟ. ನನ್ನ ಬಳಿ ಈಗ ಎರಡು ಶ್ವಾನಗಳಿವೆ. ಒಂದರ ಹೆಸರು ಚಾಂಪ್. ಅವನಿಗೀಗ 16 ವರ್ಷ ವಯಸ್ಸು. ಅವನಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಇನ್ನೊಂದು ಹೆಸರು ರಾಣಿ. ಗೋವಾದಲ್ಲಿ ರಾಣಿ ಮೇಲೆ ಯಾರೋ ಗಾಡಿ ಹತ್ತಿಸಿದ್ದರು. ಅವಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದೆ. ಒಂದು ತಿಂಗಳ ಬಳಿಕ ರಾಣಿ ನನ್ನ ಬಳಿಯೇ ಬಂದಳು. ಅವಳಿಗೆ ನಾನು ರಾಣಿ ಅಂತ ಹೆಸರಿಟ್ಟಿದ್ದೇನೆ. ಐ ಲವ್ ರಾಣಿ. ಅವಳು ನನ್ನ ಜೀವನವನ್ನೇ ಬದಲಾಯಿಸಿದ್ದಾಳೆ ಎಂದರು.

    ಶ್ವಾನ ಬ್ರ‍್ಯಾಂಡಿ ಫೋಟೋವನ್ನು ರಮ್ಯಾಗೆ ಉಡುಗೊರೆಯಾಗಿ ನೀಡಲಾಯಿತು. ಅದನ್ನ ನೋಡಿದ ರಮ್ಯಾ, ಬ್ರ‍್ಯಾಂಡಿ ನನಗೆ ತುಂಬಾ ಸ್ಪೆಷಲ್. ಒಂದು ವರ್ಷ ಆಯ್ತು ಅವಳು ತೀರಿಕೊಂಡು. ಕಳೆದ ವರ್ಷದ ಮಾರ್ಚ್ 14ರಂದು ಅವಳು ತೀರಿಕೊಂಡಳು. ಅಂಬರೀಶ್ (Ambareesh) ಅವರು ನನಗೆ ಬ್ರ‍್ಯಾಂಡಿಯನ್ನ ಕೊಟ್ಟಿದ್ದು ಎಂದು ಸ್ಮರಿಸಿದರು.

  • ವಿಧಾನಸಭೆಯಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಪ್ರಸ್ತಾಪ – ನಾವು ನಾಯಿಗಳಾಗುವುದು ಉತ್ತಮ ಎಂದ ಶಾಸಕ

    ವಿಧಾನಸಭೆಯಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಪ್ರಸ್ತಾಪ – ನಾವು ನಾಯಿಗಳಾಗುವುದು ಉತ್ತಮ ಎಂದ ಶಾಸಕ

    ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಯ್ತು. ಈ ವೇಳೆ ಮಾತನಾಡಿದ ಶಾಸಕ ಸುರೇಶ್ ಕುಮಾರ್, ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೋಡಿದರೆ ನಾವು ನಾಯಿಗಳಾಗುವುದು ಉತ್ತಮ ಎನ್ನಿಸುತ್ತದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಮಾರ್ಮಿಕವಾಗಿ ಆಕ್ರೋಶ ಹೊರಹಾಕಿದರು.

    ಬೀದಿ ನಾಯಿಗಳ ಹಾವಳಿ ವಿಚಾರವಾಗಿ ಆಡಳಿತ ಪಕ್ಷದ ಸದಸ್ಯರೇ ಸರ್ಕಾರವನ್ನು ತಿವಿದು ಕ್ರಮ ವಹಿಸುವಂತೆ ಆಗ್ರಹಿಸಿದ್ರು. ಪ್ರಶ್ನೋತ್ತರ ಕಲಾಪದಲ್ಲಿ ಬೆಂಗಳೂರಿನ ಬೀದಿನಾಯಿಗಳ ಸಮಸ್ಯೆ ಬಗ್ಗೆ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಪ್ರಶ್ನೆ ಮಾಡಿದರು. ಬೆಂಗಳೂರು ಹೊರ ವಲಯದಲ್ಲಿ ಜಾಗ ನೀಡಿ ಗೋ ಶಾಲೆಗಳ ಮಾದರಿ ನಾಯಿ ಶಾಲೆ ಮಾಡುವ ಬಗ್ಗೆ ಆದರೂ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಇದೇ ವೇಳೆ ಶಾಸಕ ಸುರೇಶ್‍ಕುಮಾರ್ ಮಾತನಾಡಿ, ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೋಡಿದರೆ ನಾವು ನಾಯಿಗಳಾಗುವುದು ಉತ್ತಮ ಎನ್ನಿಸುತ್ತದೆ ಎಂದು ಮಾರ್ಮಿಕವಾಗಿ ಆಕ್ರೋಶ ಹೊರಹಾಕಿದ್ರು. ಮುಖ್ಯ ಸಚೇತಕ ಸತೀಶ್ ರೆಡ್ಡಿ ಕೂಡ ನಾಯಿಗಳ ಹಾವಳಿಗೆ ಕ್ರಮ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಇದನ್ನೂ ಓದಿ: 36 ಸಾವಿರ ಮತದಿಂದ ಸೋತವರು ಮೋದಿ ಬಗ್ಗೆ ಮಾತಾಡ್ತಾರೆ: ಸಿದ್ದುಗೆ ವಿಶ್ವನಾಥ್ ಟಾಂಗ್

    ಗೋ ಶಾಲೆ ರೀತಿ ನಾಯಿ ಶಾಲೆ ಮಾಡುವ ಬಗ್ಗೆ ಸಿಎಂ ಜೊತೆ ಕುಳಿತು ಚರ್ಚೆ ಮಾಡುವುದು ಒಳಿತು ಎಂದು ಮಾಧುಸ್ವಾಮಿ ಹೇಳಿದ್ರು. ಸರ್ಕಾರದ ಪರವಾಗಿ ಉತ್ತರಿಸಿ ನಾಯಿ ಸಂತಾನಹರಣ ಪ್ರಕ್ರಿಯೆ ಬಿಬಿಎಂಪಿಯಿಂದ ನಡೆಯುತ್ತಲೇ ಇದೆ. ಸುಪ್ರೀಂ ಕೋರ್ಟ್‍ಗೆ ಅರ್ಜಿ ಹಾಕಿಕೊಳ್ಳುವ ವಿಚಾರದ ಬಗ್ಗೆ ಕೂಡಾ ಚರ್ಚೆ ಮಾಡುತ್ತೇವೆ. ಬೆಂಗಳೂರು ಹೊರವಲಯದಲ್ಲಿ ಜಾಗ ಕೊಟ್ಟು ವ್ಯವಸ್ಥೆ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಜಬ್‌ ವಿವಾದದ ಹಿಂದೆ ಕಾಣದ ಕೈಗಳ ಕೈವಾಡ: ಹೈಕೋರ್ಟ್‌ ಶಂಕೆ

  • ಸಾಕು ನಾಯಿ ಬಾಯಿಗೆ ಆಹಾರವಾದ ಮಂಗನಮರಿ- ಕಂದನ ಕಳೆದುಕೊಂಡ ನೋವಿನಲ್ಲಿ ಗ್ರಾಮಸ್ಥರ ಮೇಲೆ ದಾಳಿ

    ಸಾಕು ನಾಯಿ ಬಾಯಿಗೆ ಆಹಾರವಾದ ಮಂಗನಮರಿ- ಕಂದನ ಕಳೆದುಕೊಂಡ ನೋವಿನಲ್ಲಿ ಗ್ರಾಮಸ್ಥರ ಮೇಲೆ ದಾಳಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಮಂಗಗಳು ಊರಿನ ಜನರ ಮೇಲೆ ದಾಳಿ ಇಡುತ್ತಿದ್ದು, ಮಂಗನ ದಾಳಿಯಿಂದಾಗಿ ಗ್ರಾಮದ ಹತ್ತಕ್ಕೂ ಹೆಚ್ಚು ಜನರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಇಡೀ ಕಿನ್ನರ ಗ್ರಾಮದ ರಸ್ತೆಗಳಲ್ಲಿ ಜನರು ಓಡಾಡಿದರೆ ಮಂಗಗಳು ಮರದಿಂದ ಹಾರಿ ಬಂದು ಜನರ ಮೇಲೆ ಎರಗುತಗತ್ತಿವೆ. ಹಲವರಿಗೆ ಕಾಲು, ಕೈಗಳಿಗೆ ಕಚ್ಚಿ ಗಾಸಿ ಮಾಡಿದರೆ, ಇನ್ನೂ ಕೆಲವರಿಗೆ ಗಂಭೀರ ಸ್ವರೂಪದ ಗಾಯ ಮಾಡಿವೆ. ಈ ಮಂಗಗಳ ವಿಚಿತ್ರ ವರ್ತನೆಗೆ ಬೆದರಿದ ಗ್ರಾಮಸ್ಥರು, ಕಾರವಾರದ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಮಂಗಗಳನ್ನು ಹಿಡಿದು ಬೇರೆಡೆ ಬಿಡುವಂತೆ ಒತ್ತಾಯಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮಂಗನ ಹಿಡಿಯಲು ಬೋನ್ ಇಟ್ಟಿದ್ದು, ಕಾರ್ಯಾಚರಣೆಗೆ ಇಳಿದಿದ್ದಾರೆ.

    ಏಕಾ ಏಕಿ ಮಂಗಗಳ ದಾಳಿಗೆ ಕಾರಣವೇನು?
    ಕಿನ್ನರ ಗ್ರಾಮದ ಭಾಗದಲ್ಲಿ ಒಂದುಕಡೆ ಕಾಳಿ ನದಿ ಹರಿಯುತ್ತದೆ, ಮತ್ತೊಂದು ಕಡೆ ದಟ್ಟ ಅರಣ್ಯವಿದ್ದು, ಕಾಡುಪ್ರಾಣಿಗಳ ವಾಸ ಸ್ಥಳವಾಗಿದೆ. ಇದು ಕಪ್ಪು ಹಾಗೂ ಕೆಂಪು ಮಂಗಗಳ ಆವಾಸ ಸ್ಥಾನ ಕೂಡ. ಹೀಗಾಗಿ ಈ ಭಾಗದ ಅರಣ್ಯ ಭಾಗದಲ್ಲಿ ಮಂಗಗಳು ಸಾಮಾನ್ಯ. ಇನ್ನು ಮಳೆಗಾಲವಾದ್ದರಿಂದ ಕಾಡಿನಿಂದ ಅಲ್ಲಿಯೇ ಇರುವ ಅಕ್ಕ ಪಕ್ಕದ ಗ್ರಾಮಗಳಿಗೆ ಮಂಗಗಳು ಆಹಾರ ಅರಸಿ ಬರುತ್ತವೆ. ಹೀಗಿರುವಾಗ ಮಂಗಗಳ ದಾಳಿ ತಪ್ಪಿಸಲು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಮಂಗಗಳು ಬಂದಾಗ ನಾಯಿಗಳನ್ನು ಬಿಟ್ಟು ಓಡಿಸುವುದು ಸಾಮಾನ್ಯ.

    ಕಳೆದ ಕೆಲವು ದಿನಗಳ ಹಿಂದೆ ಹೀಗೆ ಆಹಾರ ಅರಸಿ ಗ್ರಾಮದ ಕಡೆ ಬಂದಿದ್ದ ಮಂಗಗಳ ಗುಂಪೊಂದರಲ್ಲಿ ಮಂಗನ ಮರಿಗಳನ್ನು ನಾಯಿಗಳು ಬೇಟೆಯಾಡಿವೆ. ತಮ್ಮ ಕರುಳು ಬಳ್ಳಿಯನ್ನು ಕಣ್ಣೆದುರೇ ಕಳೆದುಕೊಂಡ ಮಂಗಗಳು ಇದೀಗ ಗ್ರಾಮದಲ್ಲಿ ಯಾರೇ ಓಡಾಡಿದರೂ ದಾಳಿ ಇಡುತ್ತಿದ್ದು, ಹಲವರಿಗೆ ಗಾಯ ಮಾಡಿವೆ. ಇದರಿಂದಾಗಿ ಇದೀಗ ಗ್ರಾಮದ ಜನರು ಮಂಗಗಳು ಎಂದರೆ ಭಯ ಪಡುವಂತಾಗಿದೆ. ಸದ್ಯ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನು ಹಿಡಿದು ಬೇರೆಡೆ ಬಿಡಲು ಹರಸಾಹಸ ಪಡುತಿದ್ದಾರೆ.

  • ತಾಯಿ ಮಡಿಲು ಸೇರಿದ ನಾಯಿ ಮರಿಗಳು – ಸಿಬ್ಬಂದಿಗೆ ಸ್ಥಳೀಯರು ಧನ್ಯವಾದ

    ತಾಯಿ ಮಡಿಲು ಸೇರಿದ ನಾಯಿ ಮರಿಗಳು – ಸಿಬ್ಬಂದಿಗೆ ಸ್ಥಳೀಯರು ಧನ್ಯವಾದ

    ಹಾವೇರಿ: ಹಾವೇರಿಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಚರಂಡಿ ನೀರಿಗೆ ಸಂಪರ್ಕ ಕಲ್ಪಿಸೋ ಪೈಪ್‍ನಲ್ಲಿ ಮೂರು ನಾಯಿ ಮರಿಗಳು ಸಿಕ್ಕು ಒದ್ದಾಡ್ತಿದ್ದ ಮರಿಗಳನ್ನ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹಾವೇರಿ ನಗರದ ಹರ್ಷಾವರ್ಷಾ ಕಾಂಪ್ಲೆಕ್ಸ್ ನ ನೆಲಮಹಡಿಯ ಪೈಪ್ ನಲ್ಲಿ ಸಿಕ್ಕು ಒದ್ದಾಡುತ್ತಿದ್ದವು.

    ಬೀದಿ ನಾಯಿ ಕೆಲವು ದಿನಗಳ ಹಿಂದೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಮಳೆ ನೀರು ಕಾಂಪ್ಲೆಕ್ಸ್ ಗೆ ನುಗ್ಗಿದ್ದರಿಂದ ಪೈಪ್‍ನಲ್ಲಿ ನೀರು ತುಂಬಿಕೊಂಡಿತು. ಮರಿಗಳು ಸಹ ನೀರಲ್ಲಿ ಸಿಕ್ಕು ಒದ್ದಾಡ್ತಿದ್ದು ಕಂಡು ತಾಯಿ ಚೀರಾಡುತ್ತಿತ್ತು. ನಾಯಿಯ ಚೀರಾಟ ಕಂಡು ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

    ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಮೂರು ಮರಿಗಳನ್ನ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬದುಕಿದೆಯಾ ಬಡಜೀವವೆ ಅಂತಾ ಮೂರು ಮರಿಗಳು ತಾಯಿ ಮಡಿಲು ಸೇರಿದವು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದರು.

  • 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿ ವೆಡ್ಡಿಂಗ್ ಡೇ ಆಚರಿಸಿಕೊಂಡ ದಂಪತಿ

    500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿ ವೆಡ್ಡಿಂಗ್ ಡೇ ಆಚರಿಸಿಕೊಂಡ ದಂಪತಿ

    ಭುವನೇಶ್ವರ್: ಸಾಮಾನ್ಯವಾಗಿ ವಿವಾಹ ಮಹೋತ್ಸವವನ್ನು ತಮ್ಮ ಹತ್ತಿರದ ಸಂಬಂಧಿಗಳಿಗೆ ಪಾರ್ಟಿಗಳನ್ನು ಆಯೋಜಿಸುವ ಮೂಲಕ ಸೆಲೆಬ್ರೆಟ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ಮಾತ್ರ ವಿವಾಹವಾದ ದಿನವನ್ನು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

    ಹೌದು. ಒಡಿಶಾ ಮೂಲದ ಯುರೇಕಾ ಅಪ್ತಾ ಹಾಗೂ ಜೋವಾನ್ನಾ ವಾಂಗ್ ದಂಪತಿ ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೆಪ್ಟೆಂಬರ್ 25ರಂದು ದಂಪತಿ ಭುವನೇಶ್ವರದಲ್ಲಿ ವಿವಾಹವಾಗಿದ್ದಾರೆ. ಇದೇ ದಿನದಂದು ಅವರು ಪ್ರಾಣಿ ಸಂರಕ್ಷಣಾ ಸಂಸ್ಥೆಯ ಸಹಾಯದಿಂದ ನಗರದ ಸುಮಾರು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿದ್ದಾರೆ.

    ಟ್ಯಾಂಗಿ ಬಳಿಯ ದೇವಸ್ಥಾನವೊಂದರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಾಣಿ ಸಂರಕ್ಷಣಾ ಸಂಸ್ಥೆ ಶ್ವಾನಗಳಿಗೆ ಆಹಾರ ನೀಡಿದೆ. ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡಗೆಯನ್ನು ನಿಡಬೇಕು ಎಂದು ಇಬ್ಬರೂ ತೀರ್ಮಾನ ಮಾಡಿದ್ದೆವು ಎಂದು ಜೋವಾನ್ನಾ ವಾಂಗ್ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ನಾವು ಪ್ರಾಣಿ ಸಂರಕ್ಷಣಾ ಸಂಸ್ಥೆಯ(ಎಡಬ್ಲ್ಯೂಟಿಇ) ಸಂಸ್ಥಾಪಕಿ ಪೂರ್ವಿ ಅವರೊಂದಿಗೆ ಭುವನೇಶ್ವರದಾದ್ಯಂತ ಸುಮಾರು 500ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಹಾರ ನೀಡಲು ನಿರ್ಧರಿಸಿದೆವು ಎಂದು ಹೇಳಿದರು.

    ಎಡಬ್ಲ್ಯೂಟಿಇನಿಂದ ಮಾಡಲ್ಪಟ್ಟ ಕೆಲಸದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ದಂಪತಿ ತಮ್ಮ ಮದುವೆಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದರು. ಪ್ರತಿಯೊಬ್ಬರೂ ಆಪ್ತಾ ಮತ್ತು ವಾಂಗ್‍ನಂತೆಯೇ ಯೋಚಿಸಲು ಪ್ರಾರಂಭಿಸಿದರೆ, ಈ ಜಗತ್ತಿನಲ್ಲಿ ಒಂದು ಬದಲಾವಣೆ ಸಂಭವಿಸುತ್ತದೆ. ಅಲ್ಲದೆ ಅದು ಅನೇಕ ಪ್ರಾಣಿಗಳ ಜೀವ ಉಳಿಸುವಂತಹ ಕೆಲಸವಗುತ್ತದೆ ಎಂದು ಸ್ಥಳೀಯರು ಹೇಳಿದರು.

  • ಚಿರತೆಯಿಂದ ಟ್ರಕ್ ಚಾಲಕನನ್ನ ಉಳಿಸಿದ ನಾಯಿಗಳು- ವಿಡಿಯೋ

    ಚಿರತೆಯಿಂದ ಟ್ರಕ್ ಚಾಲಕನನ್ನ ಉಳಿಸಿದ ನಾಯಿಗಳು- ವಿಡಿಯೋ

    ಹೈದರಾಬಾದ್: ಚಿರತೆ ದಾಳಿಯಿಂದ ಓರ್ವ ಟ್ರಕ್ ಚಾಲಕನನ್ನು ನಾಯಿಗಳು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೈದರಾಬಾದ್‍ನ ಕಟೇಡನ್‍ನಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‍ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಶನಿವಾರ ಟ್ವೀಟ್ ಮಾಡಿದ್ದಾರೆ.

    ಚಿರತೆಯನ್ನು ನೋಡಿ ಇಬ್ಬರು ಟ್ರಕ್ ಚಾಲಕರು ತಪ್ಪಿಸಿಕೊಳ್ಳಲು ಮುಂದಾಗುತ್ತಾರೆ. ಈ ಪೈಕಿ ಓರ್ವ ಟ್ರಕ್ ಏರಿ ಕೂರುತ್ತಾನೆ. ಮತ್ತೊಬ್ಬ ಶೆಡ್ ಒಳಗೆ ಹೋಗಲು ಯತ್ನಿಸಿ ವಿಫಲನಾಗಿ ತಕ್ಷಣವೇ ಟ್ರಕ್ ಏರಲು ಮುಂದಾಗುತ್ತಾರೆ. ಈ ವೇಳೆ ದಾಳಿ ನಡೆಸಿ ಚಿರತೆ ಆತನ ಪ್ಯಾಂಟ್ ಹಿಡಿದು ಎಳೆಯಲು ಆರಂಭಿಸುತ್ತದೆ. ಇದನ್ನು ನೋಡಿದ ಕೆಲ ನಾಯಿಗಳು ಚಿರತೆಯ ಮೇಲೆ ದಾಳಿ ನಡೆಸಿ ಟ್ರಕ್ ಚಾಲಕನನ್ನು ರಕ್ಷಿಸುತ್ತವೆ.

    https://twitter.com/ParveenKaswan/status/1261620405648982016

    ಚಿರತೆ ನಾಯಿಗಳಿಂದ ತಪ್ಪಿಸಿಕೊಳ್ಳಲು ಶೆಟ್ ಒಳಗೆ ನುಗ್ಗಲು ಯತ್ನಿಸುತ್ತದೆ. ಅದು ಸಾದ್ಯವಾಗದೇ ಇದ್ದಾಗ ಚಿರತೆ ನಾಯಿಗಳನ್ನು ಭಯ ಮೂಡಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ. ಪರ್ವೀನ್ ಕಸ್ವಾನ್ ಅವರು ಟ್ವೀಟ್ ಮಾಡಿದ ಈ ವಿಡಿಯೋವನ್ನು 23 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲವರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

    “ಇದು ಅರಣ್ಯನಾಶದ ಪರಿಣಾಮ. ಅರಣ್ಯ ವ್ಯಾಪ್ತಿಯು ಕಣ್ಮರೆಯಾಗುತ್ತಿದೆ. ಹೀಗಾಗಿ ಕಾಡು ಪ್ರಾಣಿಗಳು ಅರಣ್ಯದಿಂದ ಹೊರ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

  • ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಬೀದರ್: ಕ್ರೂರಿ ತಾಯಿಯೊಬ್ಬಳು ರಸ್ತೆಯಲ್ಲೇ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ನಾಯಿಗಳ ದಾಳಿಯಿಂದ ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಡೋಣಗಾಂವ್ ಗ್ರಾಮದಲ್ಲಿ ಶ್ವಾನಗಳಿಗೆ ಬಲಿಯಾಗುತ್ತಿದ್ದ ನವಜಾತ ಶಿಶುವನ್ನು ರಕ್ಷಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಹೆಣ್ಣು ಶಿಶು ಎಂಬ ಕಾರಣಕ್ಕೆ ಕ್ರೂರಿ ತಾಯಿ ಮಗುವನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾಳೆ. ರಸ್ತೆ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಗುವನ್ನು ನಾಯಿಗಳು ಕಚ್ಚುತ್ತಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳಿಂದ ಶಿಶುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಶಿಶುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಶು ಆರೋಗ್ಯವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾಳೆ. ಆದರೆ ಈಗಲೂ ಹೆಣ್ಣು ಶಿಶುಗಳ ಮಾರಣಹೋಮ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

    ಹೆಣ್ಣು ಮಗು ಹುಟ್ಟಿದರೆ ನಮಗೆ ಹೊರೆ ಎಂದು ಪ್ರತಿಕ್ರಿಯೆ ನೀಡುವ ಕ್ರೂರಿಗಳಿಗೆ ಎಷ್ಟೇ ಅರಿವು ನೀಡಿದರು ಬದಲಾಗುತ್ತಿಲ್ಲ. ಬೀದರ್ ನ ಈ ಕ್ರೂರಿ ತಾಯಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಮುಂದೆಯಾದರು ಈ ರೀತಿಯ ಘಟನೆಗಳು ಮರುಕಳಿಸದೆ ಇರಲಿ ಎಂಬುವುದೇ ಪ್ರಜ್ಞಾವಂತ ಸಮಾಜದ ಕಳಕಳಿಯಾಗಿದೆ. ಕಮಲಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.