Tag: dog

  • ಬೀದಿನಾಯಿಗೆ ತಿಂಡಿ ನೀಡಲು ಹೋಗಿದ್ದ ಯುವತಿಯ ಮೇಲೆ ಹರಿದ ಕಾರು – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೀದಿನಾಯಿಗೆ ತಿಂಡಿ ನೀಡಲು ಹೋಗಿದ್ದ ಯುವತಿಯ ಮೇಲೆ ಹರಿದ ಕಾರು – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಚಂಡೀಗಢ: ರಸ್ತೆ ಬದಿಯಲ್ಲಿ ನಾಯಿಗೆ ತಿಂಡಿ ನೀಡುತ್ತಿದ್ದ ಯುವತಿಯ (Woman) ಮೇಲೆ ಕಾರೊಂದು (Car) ಹರಿದ ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ.

    ತೇಜಸ್ವಿತಾ (25) ಗಂಭೀರ ಗಾಯಗೊಂಡ ಯುವತಿ. ತೇಜಸ್ವಿನಿ ರಸ್ತೆ ಬದಿಯಲ್ಲಿ ಬೀದಿ ನಾಯಿಗೆ (Dog) ಆಹಾರ ನೀಡುತ್ತಿದ್ದಳು. ಈ ವೇಳೆ ಅತಿವೇಗವಾಗಿ ಬಂದ ಕಾರೊಂದು ತೇಜಸ್ವಿತಾ ಮೇಲೆ ಹರಿದಿದೆ. ಈ ವೇಳೆ ರಕ್ತದ ಮಡುವಿನಲ್ಲಿ ಮಲಗಿದ್ದ ತೇಜಸ್ವಿತಾಳನ್ನು ನೋಡಿದ ತಾಯಿ ಪೊಲೀಸರಿಗೆ ಹಾಗೂ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    crime

    ಈ ಹಿನ್ನೆಲೆಯಲ್ಲಿ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಹೆಚ್ಚಿನ ಚಿಕಿತ್ಸೆಯ ಪಡೆಯುತ್ತಿದ್ದಾಳೆ. ಘಟನೆ ವೇಳೆ ತೇಜಸ್ವಿತಾ ಆಕೆಯ ತಲೆಗೆ ಗಂಭೀರ ಗಾಯವಾಗಿದ್ದು, ವೈದ್ಯರು ಆಕೆಯ ತಲೆ 2 ಬದಿಯಲ್ಲೂ ಹೊಲಿಗೆ ಹಾಕಿದ್ದಾರೆ.

    ಕುಟುಂಬಸ್ಥರ ಪ್ರಕಾರ ತೇಜಸ್ವಿತಾ ಆರ್ಕಿಟೆಕ್ಟ್ ಪದವೀಧರರಾಗಿದ್ದು, ಯುಪಿಎಸ್‍ಸಿಗೆ ತಯಾರಿ ನಡೆಸುತ್ತಿದ್ದಾಳೆ. ತೇಜಸ್ವಿತಾ ತಾಯಿಯೊಂದಿಗೆ ಬೀದಿನಾಯಿಗೆ ತಿಂಡಿ ನೀಡಲು ಮಾರುಕಟ್ಟೆಗೆ ಹೋಗಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲಿಜಿಯಂನಲ್ಲಿ ಸರ್ಕಾರಿ ಪ್ರತಿನಿಧಿಗೂ ಅವಕಾಶ ನೀಡಿ: ಸಿಜೆಐಗೆ ಕಿರಣ್‌ ರಿಜಿಜು ಪತ್ರ

    ಇನ್ನೂ ಈ ಭಯಾನಕ ವೀಡಿಯೋ ಸಿಸಿ ಟಿವಿಯಲ್ಲಿ (CC TV) ಸೆರೆಯಾಗಿದ್ದು, ಘಟನೆಗೆ ಸಂಬಂಧಿಸಿ ತೇಜಸ್ವಿನಿಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಹನ ಹಾಗೂ ಚಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ವೆಬ್ ಸೈಟ್‍ನಲ್ಲಿ ಯುವತಿಯರ ಫೋಟೋ ಅಪ್ಲೋಡ್ ಮಾಡಿ ವಂಚನೆ- ಐವರ ಬಂಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಬರಿಮಲೆಗೆ ಶ್ವಾನ ಪಾದಯಾತ್ರೆ

    ಶಬರಿಮಲೆಗೆ ಶ್ವಾನ ಪಾದಯಾತ್ರೆ

    ಹಾಸನ: ಶಬರಿಮಲೆ (Sabarimale) ಗೆ ಪಾದಯಾತ್ರೆ ಆರಂಭಿಸಿದ್ದ ಹಾಸನ ಮಾಲಾಧಾರಿಗಳ ತಂಡಕ್ಕೆ ಶ್ವಾನವೊಂದು ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ.

    ಹಾಸನ ಜಿಲ್ಲೆ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿ ಗ್ರಾಮದಿಂದ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದರು. ಕಳೆದ 9 ವರ್ಷಗಳಿಂದ ದೇವಿಹಳ್ಳಿ ಗ್ರಾಮದಿಂದ ಮಂಜೇಗೌಡ, ವಿಶ್ವನಾಥ್, ಮೋಹನ್, ರವಿ ಸೇರಿದಂತೆ ಹಲವರು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಈ ಬಾರಿ ಹಾಸನದಿಂದ ಹೊರಟ ತಂಡ ಮೈಸೂರು ತಲುಪುತ್ತಿದ್ದಂತೆ, ಶ್ವಾನ (Dog) ವೊಂದು ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ.

    ಕಳೆದ ಡಿಸೆಂಬರ್ 25 ರಂದು ಮಂಜೇಗೌಡರ ನೇತೃತ್ವದ 6 ಮಾಲಾಧಾರಿಗಳ ತಂಡ ಹಾಸನದಿಂದ ಪಾದಯಾತ್ರೆ ಆರಂಭಿಸಿದ್ದರು. ಮೈಸೂರು ತಲುಪುತ್ತಿದ್ದಂತೆ ಜೊತೆಯಾದ ಈ ಶ್ವಾನ ಇದುವರೆಗೆ ಸುಮಾರು 500 ಕಿಲೋ ಮೀಟರ್ ಸಾಗಿದೆ. ಅಯ್ಯಪ್ಪನ ಮಾಲಾಧಾರಿ ತಂಡದೊಂದಿಗೆ ಭೋಜನ ಕೂಡ ಸ್ವೀಕರಿಸುತ್ತಿದ್ದು, ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಈಗಾಗ್ಲೆ ಮಾಲಾಧಾರಿಗಳು ಪಂಪಾ ತಲುಪಿದ್ದಾರೆ. ಕಳೆದ 15 ದಿನಗಳಿಂದ ಶ್ವಾನ ಈ ತಂಡದ ಜೊತೆ ಸೇರಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು – ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

    ಶ್ವಾನ ಭಕ್ತಿ, ಪ್ರೀತಿಗೆ ಮನಸೋತ ಅಯ್ಯಪ್ಪ ಭಕ್ತರು ವಾಪಸ್ ಊರಿಗೆ ಬರುವಾಗ ಶ್ವಾನವನ್ನೂ ಜೊತೆಯಲ್ಲೇ ಕರೆದುಕೊಂಡು ಬರಲು ನಿರ್ಧರಿಸಿದ್ದಾರೆ. ನಾಳೆ ಅಯ್ಯಪ್ಪ (Sabarimale Ayyappa) ನ ದರ್ಶನ ಪಡೆದು, ಶಬರಿಮಲೆಯ ಸುಪ್ರಸಿದ್ಧ ಜ್ಯೋತಿದರ್ಶನದ ಬಳಿಕ ತಂಡ ವಾಪಸ್ ಹಾಸನಕ್ಕೆ ಮರಳಲಿದೆ. ಹಾಸನಕ್ಕೆ ಹಿಂದಿರುಗಲು ಇವರು ವಿಮಾನ ಟಿಕೆಟ್ (Flight Ticket) ಬುಕ್ ಮಾಡಿದ್ದರಂತೆ, ಆದ್ರೀಗ ಶ್ವಾನಕ್ಕಾಗಿ ವಿಮಾನ ಪ್ರಯಾಣ ರದ್ದು ಮಾಡಿದ್ದಾರೆ.

    ಈ ಶ್ವಾನ ಹೀಗೆ ಮಾಲಾಧಾರಿಗಳೊಂದಿಗೆ ತೆರಳುತ್ತಿರುವ ವಿಚಾರ ತಿಳಿದು ಮಾರ್ಗ ಮಧ್ಯೆಯ ಎಲ್ಲಾ ಜನರು ಬಂದು ಶ್ವಾನದ ದರ್ಶನ ಪಡೆದಿದ್ದು ಮತ್ತೊಂದು ವಿಶೇಷ. ಶ್ವಾನ ಅಯ್ಯಪ್ಪ ಭಕ್ತನಾದ ಬಗೆ ನೋಡಿ, ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಗಲಿದ ಮುದ್ದು ನಾಯಿಗೆ 47ನೇ ಅರ್ಧಶತಕವನ್ನು ಅರ್ಪಿಸಿದ ರೋಹಿತ್ ಶರ್ಮಾ

    ಅಗಲಿದ ಮುದ್ದು ನಾಯಿಗೆ 47ನೇ ಅರ್ಧಶತಕವನ್ನು ಅರ್ಪಿಸಿದ ರೋಹಿತ್ ಶರ್ಮಾ

    ಗುವಾಹಟಿ: ಅಗಲಿದ ತಮ್ಮ ಮುದ್ದು ನಾಯಿಗೆ (Dog) ತಮ್ಮ 47ನೇ ಅರ್ಧಶತಕವನ್ನು (Half Century) ನಾಯಕ ರೋಹಿತ್ ಶರ್ಮಾ (Rohit Sharma) ಅರ್ಪಿಸಿದ್ದಾರೆ.

    ಶ್ರೀಲಂಕಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತದ ಪರ ಮೊದಲ ವಿಕೆಟಿಗೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 118 ಎಸೆತಗಳಿಗೆ 143 ರನ್ ಜೊತೆಯಾಟ ನೀಡಿದರು. ಶುಭಮನ್ ಗಿಲ್ 70 ರನ್(60 ಎಸೆತ, 11 ಬೌಂಡರಿ) ಹೊಡೆದರೆ ರೋಹಿತ್ ಶರ್ಮಾ 83 ರನ್( 67 ಎಸೆತ, 9 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.

    ಈ ಹಿಂದೆ ಬಾಂಗ್ಲಾದೇಶದ ಸರಣಿಯಲ್ಲಿ ಗಾಯಗೊಂಡು ಪಂದ್ಯಕ್ಕೆ ಕಂಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ (ಒಡಿಐ) 47ನೇ ಅರ್ಧ ಶತಕ ಬಾರಿಸಿದ ಬಳಿಕ ಆಕಾಶದತ್ತ ನೋಡುತ್ತಾ ತಮ್ಮ ಪ್ರೀತಿಯ ನಾಯಿಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಶತಕ ಹೊಡೆದು ಸಚಿನ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ

     

    View this post on Instagram

     

    A post shared by Ritika Sajdeh (@ritssajdeh)

    ಈ ಬಗ್ಗೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಾಕು ನಾಯಿಯ ಭಾವನಾತ್ಮಕ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸೋಮವಾರ ನಮ್ಮ ಜೀವನದ ಅತ್ಯಂತ ಕಠಿಣವಾದ ದಿನವಾಗಿತ್ತು. ನಾವು ನಮ್ಮ ಜೀವನದ ಪ್ರೀತಿಯ ನಾಯಿಗೆ ವಿದಾಯ ಹೇಳಿದೆವು. ನಮ್ಮ ಮೊದಲ ಪ್ರೀತಿ, ಮೊದಲ ಮಗು, ಇದುವರೆಗೆ ಬದುಕಿದ್ದ ಅತ್ಯಂತ ಸೌಮ್ಯವಾದ ಜೀವ. ನಿನ್ನನ್ನು ಮತ್ತೆ ಭೇಟಿಯಾಗುವವರೆಗೆ ನಮ್ಮ ಜೀವನದಲ್ಲಿ ಸಂತೋಷ ಕಡಿಮೆಯಿರುತ್ತದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುದ್ದಿನ ಶ್ವಾನ ಹುಡುಕಿಕೊಡಿ- 10 ಸಾವಿರ ಬಹುಮಾನ ಘೋಷಿಸಿದ ಕುಟುಂಬ!

    ಮುದ್ದಿನ ಶ್ವಾನ ಹುಡುಕಿಕೊಡಿ- 10 ಸಾವಿರ ಬಹುಮಾನ ಘೋಷಿಸಿದ ಕುಟುಂಬ!

    ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಶ್ವಾನ (Dog) ಪ್ರಿಯರು. ಸಾಕಿದ ನಾಯಿಗಳನ್ನ ಮನೆಯ ಸದಸ್ಯನಂತೆಯೇ ನೋಡಿಕೊಳ್ತಾರೆ. ಒಂದು ಕ್ಷಣವೂ ಅವುಗಳನ್ನ ಬಿಟ್ಟಿರಲಾರದಷ್ಟು ಪ್ರೀತಿ ತೋರಿಸ್ತಾರೆ. ಹಾಗಾಗಿಯೇ ಇಲ್ಲೊಂದು ಕುಟುಂಬ ತಮ್ಮ ಪ್ರೀತಿಯ ಶ್ವಾನವನ್ನು ಕಳೆದುಕೊಂಡು, ಹುಡುಕಿಕೊಡುವಂತೆ ಅಲವತ್ತುಕೊಂಡಿದ್ದಾರೆ.

    ಕಳೆದ ಡಿಸೆಂಬರ್ 7ರ ಬೆಳಗ್ಗಿನ ಜಾವ ಅರುಣ್ ಹಾಗೂ ಡೀನಾ ದಂಪತಿ `ಲುಕಾ’ ಹೆಸರಿನ ತಮ್ಮ ಮುದ್ದಿನ ಶ್ವಾನವನ್ನು ಕಳೆದುಕೊಂಡಿದ್ದಾರೆ. ಅಂದು ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದಾಗ ಬೀದಿಯಲ್ಲಿ ಓಡಿಹೋದ ಶ್ವಾನ ಮನೆಗೆ ಹಿಂದಿರುಗಲೇ ಇಲ್ಲ. ಶ್ವಾನ ಕಳೆದುಕೊಂಡು ಒಂದು ತಿಂಗಳಾದ್ರೂ ಸಿಕ್ಕಿಲ್ಲ. ಇಡೀ OMRB ಬಡಾವಣೆ ಹುಡುಕಾಡಿದ್ರೂ ಕಳೆದುಹೋದ ಶ್ವಾನದ ಸುಳಿವು ಮಾತ್ರ ಸಿಕ್ಕಿಲ್ಲ. ಹೀಗಾಗಿ ಮುದ್ದಿನ ಶ್ವಾನ ಕಳೆದುಕೊಂಡು ಮನೆಮಂದಿಯೆಲ್ಲಾ ಕಣ್ಣೀರಿಡುತ್ತಿದ್ದಾರೆ. ಇದನ್ನೂ ಓದಿ: ಹಲವು ಜಿಲ್ಲೆಗಳಲ್ಲಿ ಬೃಹತ್ ಕಾರ್ಯಕ್ರಮದಲ್ಲಿ `ಸಿದ್ದು ನಿಜಕನಸುಗಳು’ ಕೃತಿ ಬಿಡುಗಡೆಗೆ ಪ್ಲಾನ್?

    ಪೊಲೀಸ್ ಠಾಣೆಗೆ (Police Station) ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ತಾವೇ ಹುಟುಕಾಟಕ್ಕೆ ಮುಂದಾಗಿದ್ದಾರೆ. ಇದೀಗ ತಮ್ಮ ಮುದ್ದಿನ ಶ್ವಾನ ಹುಡುಕಿಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ನೀಡೋದಾಗಿ ಘೋಷಿಸಿದೆ. ಸದ್ಯ ತಮ್ಮ ಪ್ರೀತಿಯ ಶ್ವಾನ ಮತ್ತೆ ಮನೆಗೆ ಮರಳಿ ಬರಲಿ ಅಂತಾ ಆ ಕುಟುಂಬ ಕಾದುಕುಳಿತಿದೆ. ಮನೆಯಿಂದ ತಪ್ಪಿಸಿಕೊಂಡ ಲೂಕಾ, ಮತ್ತೆ ಮನೆಯವರ ಮಡಿಲು ಸೇರುತ್ತಾ ಅನ್ನೋದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಸಿಬ್ಬಂದಿ ಕೊರತೆ, ಸ್ಥಳದ ಕೊರತೆ ನೆಪ- ಬೆಂಗಳೂರಿಗೆ ಸದ್ಯಕ್ಕಿಲ್ಲ ನಮ್ಮ ಕ್ಲಿನಿಕ್ ಭಾಗ್ಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನ್ನನ್ನ `ಟಗರು’ ಅಂತಾರೆ, ನಾನು ಯಾರಿಗೆ ಗುಮ್ಮಿದ್ದೇನೆ – ಸಿದ್ದು ಪ್ರಶ್ನೆ

    ನನ್ನನ್ನ `ಟಗರು’ ಅಂತಾರೆ, ನಾನು ಯಾರಿಗೆ ಗುಮ್ಮಿದ್ದೇನೆ – ಸಿದ್ದು ಪ್ರಶ್ನೆ

    ಬೆಂಗಳೂರು: ಪ್ರತಿದಿನ ನನ್ನನ್ನು `ಟಗರು’ `ಟಗರು’ ಎಂದು ಹಾಡು ಕಟ್ಟಿ ತೋರಿಸುತ್ತಾರೆ. ಟಗರು ಗುಮ್ಮುತ್ತೆ, ಆದರೆ ನಾನು ಯಾರಿಗೆ ಗುಮ್ಮಿದ್ದೇನೆ? ನಾನೂ ಅವಮಾನ ಮಾಡಿದ್ದಾರೆ ಅಂತಾ ಕೋಪಮಾಡಿಕೊಳ್ಳಬಹುದಲ್ಲಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.

    ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ನಾಯಿ ಮರಿಗೆ ಹೋಲಿಕೆ ಮಾಡಿ ಟೀಕಿಸಿದ್ದರು. ಇದರಿಂದ ಮುಗಿಬಿದ್ದ ಬಿಜೆಪಿ (BJP) ನಾಯಕರು ಕಾಂಗ್ರೆಸ್ ಪಕ್ಷವನ್ನ ನಾಯಿ, ಬೆಕ್ಕು, ಇಲಿಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದರು. ಸಿಎಂ ಬೊಮ್ಮಾಯಿ ಸಹ ನಾನು ರಾಜ್ಯದ ಜನರ ಹಿತಕಾಯುವ ನಿಯತ್ತಿನ ನಾಯಿ, ಅಧಿಕಾರ ಸಿಕ್ಕಿದೆ ಎಂದು ಜನರನ್ನು ತಿನ್ನುವ ತೋಳ ಅಲ್ಲ ಎಂದು ತಿರುಗೇಟು ನೀಡಿದ್ದರು. ಆದರೂ ತಮ್ಮ ಹೇಳಿಕೆಯನ್ನು ಸಿದ್ದರಾಮಯ್ಯ (Siddaramaiah) ಅವರು ಸಮರ್ಥಿಸಿಕೊಂಡಿದ್ದು, ಸರಣಿ ಟ್ವೀಟ್‌ಗಳ ಮೂಲಕ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮುಂದಿನ ತಿಂಗಳು ಪ್ರಧಾನಿ, ರಾಷ್ಟ್ರಪತಿಗಳಿಂದ ದಶಪಥ ರಸ್ತೆ ಲೋಕಾರ್ಪಣೆ

    ಟ್ವೀಟ್‌ನಲ್ಲಿ ಏನಿದೆ?
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೆದುರು ಮಾತನಾಡುವ ಧೈರ್ಯ ಇಲ್ಲ, ಬೇರೆಯವರ ಧಮ್, ತಾಕತ್ ಪ್ರಶ್ನಿಸುವ ಬೊಮ್ಮಾಯಿಯೇ ಸ್ವತಃ ಮೋದಿಯವರನ್ನ ಕಂಡ್ರೆ ಹೆದರುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದೆ. ಇದನ್ನು ಅನವಶ್ಯಕವಾಗಿ ವಿವಾದ ಮಾಡಲಾಗಿದೆ. ಇದನ್ನೂ ಓದಿ: ಒಟ್ಟಾಗಿ ‘ಹಾಸ್ಟೆಲ್ ಹುಡುಗರ’ ಸಾಂಗ್ ರಿಲೀಸ್ ಮಾಡಿದ ಸ್ಯಾಂಡಲ್ ವುಡ್ ತಾರೆಯರು

    ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿ ಮರಿ (Dog) ಎಂದಿದ್ದೇ ಹೊರತು ಕರ್ನಾಟಕದ ಮುಖ್ಯಮಂತ್ರಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತಾ ಇರಲಿಲ್ಲ. ಪ್ರಾಣಿ-ಪಕ್ಷಿ-ಹೂ-ಹಣ್ಣುಗಳನ್ನು ಅವುಗಳ ಸ್ವಭಾವಗಳ ಸಾಮ್ಯತೆಗೆ ಅನುಗುಣವಾಗಿ ಮನುಷ್ಯರಿಗೆ ಹೋಲಿಸುವುದು ಜನಪದ ಸಂಸ್ಕೃತಿ. ಯಾವ ಪ್ರಾಣಿ-ಪಕ್ಷಿಯೂ ಕೀಳೂ ಅಲ್ಲ, ಮೇಲೂ ಅಲ್ಲ.

    ಹುಲಿ ಮನುಷ್ಯರನ್ನು ಕೊಂದು ತಿನ್ನುವ ಪ್ರಾಣಿ. ಬಿಜೆಪಿ ನಾಯಕರೇ ಬಿ.ಎಸ್ ಯಡಿಯೂರಪ್ಪ ಅವರನ್ನು `ರಾಜಾ ಹುಲಿ’ ಎಂದು ಬಣ್ಣಿಸುತ್ತಾರೆ. ಇದನ್ನೂ ಅವಮಾನ ಎಂದು ತಿಳಿದುಕೊಳ್ಳಬಹುದಲ್ಲಾ? ಪ್ರತಿದಿನ ನನ್ನನ್ನು `ಟಗರು’ ‘ಟಗರು’ ಎಂದು ಹಾಡು ಕಟ್ಟಿ ತೋರಿಸುತ್ತಾರೆ. ಟಗರು ಗುಮ್ಮುತ್ತೆ, ನಾನು ಯಾರಿಗೆ ಗುಮ್ಮಿದ್ದೇನೆ? ನಾನು ಅವಮಾನ ಮಾಡಿದ್ದಾರೆ ಎಂದು ಕೋಪಮಾಡಿಕೊಳ್ಳಬಹುದಲ್ಲಾ?

    ಸಾವಿರಾರು ಮಂದಿ ಹತ್ಯೆಗೀಡಾದ ಗುಜರಾತ್ ಗಲಭೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ `ಕಾರಿಗೆ ಅಡ್ಡಬಂದು ನಾಯಿಮರಿ ಸತ್ತರೆ ಏನು ಮಾಡೋಣ’ ಎಂದು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಇದೂ ವಿವಾದವಾಗಿತ್ತಲ್ಲವೇ?

    ನಾಯಿ ಸ್ವಾಮಿ ನಿಷ್ಠೆಗೆ ಹೆಸರಾದರೆ, ನಾಯಿಮರಿ ಪುಕ್ಕಲು ಸ್ವಭಾವಕ್ಕೆ ಕುಖ್ಯಾತಿ ಪಡೆದಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನರೇಂದ್ರ ಮೋದಿ ಅವರ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ? ನಾಯಿ ಮರಿ, ಬೆಕ್ಕಿನ ಮರಿಗಳಿಗೆ ಹೋಲಿಸಬೇಕಲ್ಲಾ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫ್ಲೈಟ್‌ನಲ್ಲಿ ನಾಯಿಯನ್ನು ಬಿಡದ ಪೈಲೆಟ್ – ಕ್ಯಾನ್ಸಲ್ ಆಯ್ತು 12 ದಿನದ ಟ್ರಿಪ್

    ಫ್ಲೈಟ್‌ನಲ್ಲಿ ನಾಯಿಯನ್ನು ಬಿಡದ ಪೈಲೆಟ್ – ಕ್ಯಾನ್ಸಲ್ ಆಯ್ತು 12 ದಿನದ ಟ್ರಿಪ್

    ಬೆಂಗಳೂರು: ಫ್ಲೈಟ್‌ನಲ್ಲಿ (Flight) ಪ್ರೀತಿಯ ಶ್ವಾನವನ್ನು (Dog) ಪೈಲೆಟ್ ಬಿಡದಿದ್ದಕ್ಕೆ ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬ 4 ಲಕ್ಷ ರೂ. ಟ್ರಿಪ್‌ನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾನೆ.

    ಬೆಂಗಳೂರಿನ ವರ್ತೂರಿನ ನಿವಾಸಿ ಸಚಿನ್ ಶೆಣೈ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡ ವ್ಯಕ್ತಿ. ಬೆಂಗಳೂರಿನಲ್ಲಿ ಐಟಿ ಕಂಪನಿಯ HR ಆಗಿ ಕೆಲಸ ಮಾಡುತ್ತಿದ್ದ ಸಚಿನ್ ನಾಯಿಯೊಂದನ್ನು ಪ್ರೀತಿಯಿಂದ ಸಾಕಿಕೊಂಡಿದ್ದ. ಆತನ ಕುಟುಂಬಸ್ಥರು ಇಯರ್ ಎಂಡ್ ಟ್ರಿಪ್‌ಗಾಗಿ 12 ದಿನದ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ವೇಳೆ ಸಚಿನ್‌ ತನ್ನ ಸಾಕು ನಾಯಿಯನ್ನು ಜೊತೆಗೆ ಕರೆದೊಯ್ಯುವ ಪ್ಲ್ಯಾನ್‌ ಮಾಡಿಕೊಂಡಿದ್ದ. ಹೀಗೆ ಪ್ಲ್ಯಾನ್‌ ಮಾಡಿದ್ದ ಸಚಿನ್‌ ಕುಟುಂಬ 4 ಲಕ್ಷ ಖರ್ಚು ಮಾಡಿ ಬೆಂಗಳೂರು ಟು ಅಮೃತಸರಕ್ಕೆ ಹೋಗಬೇಕೆಂದುಕೊಂಡಿದ್ದರು. ಇದಕ್ಕಾಗಿ ಅಮೃತಸರದಲ್ಲಿ ಹೋಟೆಲ್, ಕ್ಯಾಬ್ ಬುಕ್ ಮಾಡಿಕೊಂಡಿದ್ದರು.

    ಮೂರು ತಿಂಗಳ ಹಿಂದೆ ಫ್ಲೈಟ್ ಬುಕ್ ಆಗಿತ್ತು. ಜೊತೆಗೆ ನಾಯಿಗಾಗಿ ಬೋರ್ಡಿಂಗ್ ಪಾಸ್ ಪಿಟ್ ಟು ಫ್ಲೈ ಸರ್ಟಿಫಿಕೇಟ್ ಕೂಡ ತೆಗೆದುಕೊಂಡಿದ್ದರು. ಆದರೆ ಇನ್ನೇನೂ ಪ್ಲೈಟ್ ಹತ್ತಬೇಕು ಅನ್ನುವಷ್ಟರಲ್ಲಿ ನಾಯಿಯ ಗೂಡು ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ಪೈಲೆಟ್ ನಿರಾಕರಿಸಿದ್ದಾರೆ. ಅದೆಷ್ಟು ಮನವೊಲಿಸಿದರೂ ಪೈಲೆಟ್ ನಾಯಿಯನ್ನು ಹತ್ತಿಸಿಕೊಳ್ಳಲು ತಯಾರಿರಲಿಲ್ಲ. ನಾಯಿಯನ್ನು ಬಿಟ್ಟು ಬಂದರೆ ಮಾತ್ರ ನೀವು ದೆಹಲಿಗೆ ಹೋಗಬಹುದು ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿನ್ ಎಲ್ಲ ರೂಲ್ಸ್ ಪಾಲನೆ ಮಾಡಿ, ಹಣ ಕಟ್ಟಿದ ಮೇಲೆ ಪೈಲೆಟ್ ಕಿರಿಕಿರಿ ಮಾಡಿದ ಬಗ್ಗೆ ಅಸಮಾಧಾನ ತೋರಿಸಿದ್ದಾನೆ. ಅಷ್ಟೇ ಅಲ್ಲದೇ ಇಡೀ ಟ್ರಿಪ್ ಕ್ಯಾನ್ಸಲ್‌ ಮಾಡಿಕೊಂಡು ಏರ್‌ಪೋರ್ಟ್‌ನಿಂದ ಸಚಿನ್ ಕುಟುಂಬ ವಾಪಸಾಗಿದೆ. ಇದನ್ನೂ ಓದಿ: MES ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ : ಬೊಮ್ಮಾಯಿ

    ಇನ್ನೂ ಘಟನೆಗೆ ಸಂಬಂಧಿಸಿ ಸಚಿನ್‌ ವೀಡಿಯೋವೊಂದನ್ನು ಮಾಡಿದ್ದು, ಏರ್‌ಪೋರ್ಟ್‌ನಲ್ಲಿ ನಡೆದ ಘಟನೆ ಬಗ್ಗೆ ಶೇರ್‌ ಮಾಡಿಕೊಂಡು, ಇದ್ಯಾವ ರೀತಿಯ ನ್ಯಾಯ ಅಂತಾ ಸಚಿನ್ ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೇ ಶ್ವಾನವನ್ನು ಬಿಡದಿದ್ದಕ್ಕೆ 4 ಲಕ್ಷ ವೆಚ್ಚದ ಟ್ರಿಪ್‌ನ್ನು ಕ್ಯಾನ್ಸಲ್ ಮಾಡಿಕೊಳ್ಳಬೇಕಾಗಿ ಬಂತು ಎಂದು ಏರ್‌ಪೋರ್ಟ್‌ನಲ್ಲಿ ವೀಡಿಯೋ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    Live Tv
    [brid partner=56869869 player=32851 video=960834 autoplay=true]

  • ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿದ ಮಹಿಳೆ – ಹೃದಯಸ್ಪರ್ಶಿ ವೀಡಿಯೋ ವೈರಲ್

    ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿದ ಮಹಿಳೆ – ಹೃದಯಸ್ಪರ್ಶಿ ವೀಡಿಯೋ ವೈರಲ್

    ನವದೆಹಲಿ: ಬಹುತೇಕ ಜನರು ಸಾಕು ಪ್ರಾಣಿಗಳನ್ನು (Animals) ತಮ್ಮ ಕುಟುಂಬದ ಸದಸ್ಯರಂತೆಯೇ ಭಾವಿಸುತ್ತಾರೆ. ಅದರಲ್ಲೂ ಮುದ್ದಿನ ನಾಯಿಗಳೆಂದರೇ (Dog) ಎಲ್ಲರಿಗೂ ಅಚ್ಚುಮೆಚ್ಚು.

    `ಚಾರ್ಲಿ-777′ (Charlie777 Movie) ಸಿನಿಮಾ ರಿಲೀಸ್ ಆದ್ಮೇಲೆ ಸಾಕು ನಾಯಿಗಳ (Dog) ಮೇಲಿನ ಪ್ರೀತಿ ಮಾಲೀಕರಲ್ಲಿ ಇನ್ನಷ್ಟು ಹೆಚ್ಚಾಗಿದೆ. ಕೆಲವರು ತಮ್ಮ ಶ್ವಾನಗಳಿಗೆ ಆಧಾರ್ ಕಾರ್ಡ್ ಮಾಡಿಸಿದ್ದೂ ಉಂಟು. ಹಾಗೆಯೇ ಇಲ್ಲೊಬ್ಬರು ಮಹಿಳೆ ತಮ್ಮ ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿ ಸಂತಸ ಪಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಸಾಧನೆ ಎಲ್ಲರಿಗೂ ಗೊತ್ತು – ರೊನಾಲ್ಡೊಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ

     

    View this post on Instagram

     

    A post shared by Sujatha Bharathi (@suja_housemate)

    ತನ್ನ ನೆಚ್ಚಿನ ಸಾಕು ನಾಯಿಗೆ ಸೀಮಂತ ಮಾಡಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮನಗೆದ್ದಿದೆ. ಸುಜಾ ಹೌಸ್‌ಮೇಟ್ ಎನ್ನುವ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಮಹಿಳೆ, ಶ್ವಾನದ ಕುತ್ತಿಗೆಗೆ ಹಾರ ಹಾಕಿ, ಹಣೆಗೆ ಸಿಂಧೂರವಿಟ್ಟು, ಮಿರಿ ಮಿರಿ ಮಿಂಚುವ ಬಟ್ಟೆ ತೊಡಿಸಿ ಖುಷಿ ಪಟ್ಟಿದ್ದಾರೆ. ವೀಡಿಯೋ ಕಂಡು ಫಿದಾ ಆಗಿರುವ ನೆಟ್ಟಿಗರು ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಮನದುಂಬಿ ಹಾರೈಸಿದ್ದಾರೆ.

    ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ಇನ್ಸ್ಟಾಗ್ರಾಮ್‌ ಗ್ರಾಮ್‌ನಲ್ಲಿ ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮನ್ನು ಬೇರ್ಪಡಿಸಬೇಡಿ- ಡೆತ್‍ನೋಟ್ ಬರೆದಿಟ್ಟು ಪ್ರೇಮಿಗಳು ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಒಂದೇ ದಿನ 10 ಜನರಿಗೆ ಕಡಿದ ಹುಚ್ಚುನಾಯಿ

    ಒಂದೇ ದಿನ 10 ಜನರಿಗೆ ಕಡಿದ ಹುಚ್ಚುನಾಯಿ

    ಕೊಪ್ಪಳ: ಹುಚ್ಚುನಾಯಿ ಒಂದೇ ದಿನ ಮಕ್ಕಳು ಸೇರಿದಂತೆ 10 ಮಂದಿಗೆ ಕಡಿದಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.

    ಸುಜಾತ ಮಲ್ಲಾಪೂರ (4), ಶಿವಕುಮಾರ ಮಲ್ಲಾಪೂರ (11), ಶಿವಕುಮಾರ ಕಡಿವಾಲ (15), ಗಿರಿಯಪ್ಪ ನೆಲ್ಲೂರು (62), ಶರಣಪ್ಪ ಮಲ್ಲಾಪೂರ (54) ಸೇರಿದಂತೆ ಇನ್ನೂ 5 ಜನರಿಗೆ ಹುಚ್ಚುನಾಯಿ ಕಡಿದಿದೆ. ಇದನ್ನೂ ಓದಿ: ಮುಂದುವರಿದ ಮಾಂಡಸ್ ಅಬ್ಬರ: ಇನ್ನೂ 3 ದಿನ ಮಳೆ, ಚಳಿ – ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಗಾಯಗೊಂಡ ಸುಜಾತ ಮಲ್ಲಾಪೂರ ಹಾಗೂ ಶಿವಕುಮಾರ ಮಲ್ಲಾಪೂರ ಎಂಬವರು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರರಿಗೆ ಹನುಮನಾಳ ಆಸ್ಪತ್ರೆ ಹಾಗೂ ಇನ್ನೂ ಕೆಲವರಿಗೆ ಬಾದಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಉಪಟಳ ತಪ್ಪಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅಲ್ಲದೇ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹೊಟೇಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ – ನಾಲಿಗೆ ಸುಡಲಿದೆ ಹೊಸ ದರ

    Live Tv
    [brid partner=56869869 player=32851 video=960834 autoplay=true]

  • ತೋಟದ ಮನೆಯಲ್ಲಿದ್ದ ಸಾಕು ನಾಯಿ ಕೊಂದ ಚಿರತೆ- ಮನೆಯಿಂದ ಹೊರಬರಲು ಅನ್ನದಾತರು ಹಿಂದೇಟು

    ತೋಟದ ಮನೆಯಲ್ಲಿದ್ದ ಸಾಕು ನಾಯಿ ಕೊಂದ ಚಿರತೆ- ಮನೆಯಿಂದ ಹೊರಬರಲು ಅನ್ನದಾತರು ಹಿಂದೇಟು

    ಚಿಕ್ಕಬಳ್ಳಾಪುರ/ಹಾವೇರಿ: ಬೆಂಗಳೂರು ಅಷ್ಟೇ ಅಲ್ಲದೆ ರಾಜಧಾನಿ ಪಕ್ಕದ ಆ ಜಿಲ್ಲೆಯಲ್ಲೂ ಚಿರತೆ ಹಾವಳಿ ಜೋರಾಗಿದೆ. ತೋಟದ ಮನೆ ಮೇಲೆ ದಾಳಿ ಮಾಡಿರೋ ಚಿರತೆ (Leopard) ಸಾಕು ನಾಯಿಯನ್ನು ಕೊಂದು ತಿಂದು ತೇಗಿ ಹೋಗಿದ್ದು ಚಿರತೆ ಭಯದಿಂದ ಜನ ಮನೆಯಿಂದ ಹೊರಬರೋಕೆ ಹೆದರುವಂತಾಗಿದೆ.

    ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗುಡಿಬಂಡೆ ತಾಲೂಕಿನ ವರಲಕೊಂಡ ಬೆಟ್ಟದ ಬುಡದಲ್ಲೇ ಮೇಡಿಮಾಕಲಪಲ್ಲಿ ಗ್ರಾಮದ ಚಂದ್ರಶೇಖರ್ ರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ ಎಂಬ ರೈತರು ತೋಟದ ಮನೆ ಮಾಡಿಕೊಂಡು ಅಲ್ಲೇ ಕೃಷಿಕಾಯಕ ಮಾಡಿಕೊಂಡು ಜೀವನ ಮಾಡ್ತಿದ್ರು. ಆದರೆ ಇದೇ ವರಲಕೊಂಡ ಬೆಟ್ಟದಲ್ಲಿರುವ ಚಿರತೆ ತೋಟದ ಮನೆ ಮೇಲೆ ದಾಳಿ ಮಾಡಿ ಸಾಕು ನಾಯಿಯನ್ನ ಕೊಂದು ಅರ್ಧಂಬರ್ದ ತಿಂದು ಹೋಗಿದೆ. ಇದ್ರಿಂದ ರೈತರ ಸೇರಿದಂತೆ ಮನೆಯಲ್ಲಿರುವ ಮಹಿಳೆಯರು ಮನೆಯಿಂದ ಹೊರಬರೋಕೆ ಹೆದರುವಂತಾಗಿದೆ. ಇದನ್ನೂ ಓದಿ: ಬೆಂಗ್ಳೂರು ಹೊರವಲಯದಲ್ಲಿ ಆಂಧ್ರ ಬಿಲ್ಡರ್‌ಗೆ ಗುಂಡೇಟು

    ರೈತರು ತಮ್ಮ ತೋಟದ ಮನೆಯಲ್ಲಿ ಕುರಿ, ಕೋಳಿ, ಮೇಕೆ ಸೇರಿದಂತೆ ಹಸು ಸಾಕಾಣಿಕೆ ಮಾಡೋದರ ಜೊತೆಗೆ ಕೃಷಿ ಕಾಯಕ ಮಾಡುತ್ತಿದ್ದಾರೆ. ಇವುಗಳ ಕಾವಲಿಗೆ ಅಂತ ಎರಡು ನಾಯಿಗಳನ್ನ ಸಾಕುಕೊಂಡಿದ್ದರು. ಆದರೆ ಅದರಲ್ಲಿ ಈಗ ಒಂದು ನಾಯಿಯನ್ನ ಚಿರತೆ ಕೊಂದು ಹಾಕಿದೆ. ಇರೋ ಒಂದು ನಾಯಿ ಮೇಲೂ ಚಿರತೆ ಅದ್ಯಾವಾಗ ಅಟ್ಯಾಕ್ ಮಾಡುತ್ತೋ ಅನ್ನೋ ಭಯ ಒಂದು ಕಡೆಯಾದ್ರೆ, ಬೆಳೆಗೆ ನೀರು ಹಾಯಿಸಲು ರಸಗೊಬ್ಬರ ಸಿಂಪಡಣೆ ಮಾಡಲು ಸಹ 3-4 ಮಂದಿ ಕೈಯಲ್ಲಿ ದೊಣ್ಣೆ ಮಚ್ಚು ಹಿಡಿದು ಜೀವಭಯದಲ್ಲೇ ಕೃಷಿ ಕೆಲಸಗಳನ್ನ ಮಾಡುವಂತಾಗಿದೆ. ಇನ್ನೂ ಕುರಿ ಮೇಕೆಗಳನ್ನ ಸಹ ಬೆಟ್ಟದ ಕಡೆ ಮೇಯಲು ಕರೆದುಕೊಂಡು ಹೋಗಲು ಆಗುತ್ತಿಲ್ಲ.

    ಹಾವೇರಿ (Havri) ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಚಿರತೆ ಹಸು ತಿಂದು ಹಾಕಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆಂಜನೇಯ ಓಲೇಕಾರ ಎಂಬವರಿಗೆ ಸೇರಿದ ಕುರಿ ಫಾರ್ಮ್‍ಗೆ ನುಗ್ಗಿ ಹಸು ತಿಂದು ಹಾಕಿದ್ರಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕೃಷಿ ಕೆಲಸಕ್ಕೆ ಹೋಗುವ ರೈತರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

    ಒಟ್ಟಿನಲ್ಲಿ ಚಿರತೆ ಕಾಟ ರೈತಾಪಿ ಜನರ ನಿದ್ದೆಗೆಡಿಸಿದೆ. ಇನ್ನಾದ್ರೂ ಅರಣ್ಯ ಇಲಾಖೆ ಎಚ್ಚೆತ್ತು ರೈತರಿಗೆ ಅನುಕೂಲ ಮಾಡ್ಬೇಕಿದೆ. ಇದನ್ನೂ ಓದಿ: ಬಂಟಿ ಸಜ್ದೇಹ್ ಜೊತೆ ಸುಶಾಂತ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಡೇಟಿಂಗ್

    Live Tv
    [brid partner=56869869 player=32851 video=960834 autoplay=true]

  • ‘ನಾಯಿಮರಿ’ಗಾಗಿ ಹುಟ್ಟಿತು ವಸಿಷ್ಠ-ಹರಿಪ್ರಿಯ ನಡುವಿನ ಪ್ರೇಮ

    ‘ನಾಯಿಮರಿ’ಗಾಗಿ ಹುಟ್ಟಿತು ವಸಿಷ್ಠ-ಹರಿಪ್ರಿಯ ನಡುವಿನ ಪ್ರೇಮ

    ಮೊನ್ನೆಯಷ್ಟೇ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಸ್ವತಃ ವಸಿಷ್ಠ ಸಿಂಹ ಅವರೇ ಉಪಸ್ಥಿತರಿದ್ದು, ಮೂಗು ಚುಚ್ಚಿಸಿದ್ದರು. ಆನಂತರ ಅನೇಕ ವಿಡಿಯೋಗಳಲ್ಲಿ ಇಬ್ಬರೂ ಒಟ್ಟಾಗಿ ಡಾನ್ಸ್ ಮಾಡಿದ್ದರು. ವಿಡಿಯೋಗಳಿಗೆ ‘ಪಾರ್ಟನರ್’ ಎಂದೆಲ್ಲ ಬರೆದುಕೊಂಡಿದ್ದರು. ಇತ್ತೀಚೆಗೆ ಮತ್ತೊಂದು ಸುದ್ದಿ ಕೂಡ ಹೊರ ಬಂದಿತ್ತು. ಇಬ್ಬರೂ ಈಗಾಗಲೇ ದುಬೈ ಪ್ರವಾಸ ಮಾಡಿ ಶಾಪಿಂಗ್ ಕೂಡ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಫೋಟೋ ಕೂಡ ಹೊರ ಬಂದಿದೆ. ನಂತರ ಅಚ್ಚರಿ ಎನ್ನುವಂತೆ ಅವರು ನಿಶ್ಚಿತಾರ್ಥ ಕೂಡ ಮಾಡಿಕೊಂಡರು.

    ಯಾವುದೇ ಸುಳಿವು ಕೊಡದೇ ಏಕಾಏಕಿಯಾಗಿ ಇಂಥದ್ದೊಂದು ಸುದ್ದಿ ಕೊಟ್ಟ ತಾರೆಯರು, ಭೇಟಿಯಾಗಿದ್ದು ಎಲ್ಲಿ? ಪ್ರೇಮ ಶುರುವಾಗಿದ್ದು ಯಾವಾಗ? ಮೊದಲು ಪ್ರಪೋಸ್ ಮಾಡಿದ್ದು ಯಾರು ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಇವರಿಬ್ಬರೂ ಪರಸ್ಪರ ಪ್ರೇಮಿಸೋಕೆ ಶುರು ಮಾಡಿದ್ದು ತೆಲುಗು ಸಿನಿಮಾವೊಂದರಿಂದ ಎಂದು ಹೇಳಲಾಗಿತ್ತು. ಇದನ್ನೂ ಓದಿ: ತಮಿಳಿನತ್ತ ಹೊಂಬಾಳೆ ಫಿಲ್ಮ್ಸ್:ಕೀರ್ತಿ ಸುರೇಶ್ ನಟನೆಯ `ರಘುತಥಾ’ ಚಿತ್ರ ನಿರ್ಮಾಣಕ್ಕೆ ಸಾಥ್

    ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲೇ ಇವರಿಬ್ಬರೂ ಪರಸ್ಪರ  ಅರ್ಥ ಮಾಡಿಕೊಂಡರು ಎಂದು ಹೇಳಲಾಗಿತ್ತು. ಅಲ್ಲದೇ, ಗೆಳೆತನ ಗಟ್ಟಿಯಾಗಿ ಆ ನಂತರವಷ್ಟೇ ಮದುವೆ ಆಗುವ ನಿರ್ಧಾರವನ್ನು ತಗೆದುಕೊಂಡಿದ್ದಾರೆ ಎನ್ನುತ್ತಾರೆ ಆಪ್ತರು. ಮದುವೆ ಕುರಿತಾಗಿ ಇಷ್ಟೊಂದು ಸುದ್ದಿಯಾದರೂ, ವಸಿಷ್ಠ ಆಗಲಿ ಅಥವಾ ಹರಿಪ್ರಿಯಾ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಆದರೆ, ಇದೀಗ ಹರಿಪ್ರಿಯಾ ತಮ್ಮ ಪ್ರೀತಿ ಹುಟ್ಟಿದ್ದು ಹೇಗೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ತಮ್ಮ ಮತ್ತು ವಸಿಷ್ಠಿ ನಡುವೆ ಪ್ರೇಮ ಅಂಕುರವಾಗಲು ಕಾರಣ ನಾಯಿ ಮರಿ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹರಿಪ್ರಿಯಾ ಮನೆಯಲ್ಲಿ ಈಗಾಗಲೇ ಲಕ್ಕಿ ಮತ್ತು ಹ್ಯಾಪಿ ಎಂಬ ಎರಡು ನಾಯಿಗಳಿವೆ. ಲಕ್ಕಿ ಸತ್ತ ನಂತರ ಹ್ಯಾಪಿಗಾಗಿ ಮತ್ತೊಂದು ನಾಯಿಯನ್ನು ತಂದುಕೊಟ್ಟಿದ್ದರಂತೆ ವಸಿಷ್ಠ. ಅದರ ಹೆಸರು ಕ್ರಿಸ್ಟಲ್. ಈ ಕಿಸ್ಟಲ್‍ ಕಾರಣಕ್ಕಾಗಿಯೇ ಹರಿಪ್ರಿಯಾ ಪ್ರೇಮಿಸೋಕೆ ಶುರು ಮಾಡಿದರಂತೆ.

    Live Tv
    [brid partner=56869869 player=32851 video=960834 autoplay=true]