Tag: dog

  • ಬೆಂಗ್ಳೂರಲ್ಲಿ ವಾಕಿಂಗ್‌ಗೆ ಬಿಟ್ಟಿದ್ದ ನಾಯಿಯನ್ನು ಕದ್ದು ಪರಾರಿಯಾದ ಕಳ್ಳರು

    ಬೆಂಗ್ಳೂರಲ್ಲಿ ವಾಕಿಂಗ್‌ಗೆ ಬಿಟ್ಟಿದ್ದ ನಾಯಿಯನ್ನು ಕದ್ದು ಪರಾರಿಯಾದ ಕಳ್ಳರು

    ಬೆಂಗಳೂರು: ವಾಕಿಂಗ್‌ಗೆ ಬಿಟ್ಟಿದ್ದ ಶ್ವಾನವೊಂದನ್ನು ಬೈಕ್‌ನಲ್ಲಿ (Bike) ಬಂದ ಮೂವರು ಯುವಕರು ತಮ್ಮದೇ ನಾಯಿ (Dog) ಎನ್ನುವಂತೆ ಕರೆದುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಸೈಯದ್ ಎಂಬುವವರಿಗೆ ಸೇರಿದ ಜೋಯಿ ಎನ್ನುವ ನಾಯಿಯನ್ನು ಕಳವು ಮಾಡಿದ್ದಾರೆ. ಬೆಂಗಳೂರಿನ ಫ್ರೆಜರ್‌ ಟೌನ್‌ನಲ್ಲಿ ಈ ಘಟನೆ ನಡೆದಿದೆ. ಸೈಬಿರಿಯನ್‌ ಹಸ್ಕಿ ತಳಿಯ ಜೋಯಿಯನ್ನು ಸಂಜೆ ವೇಳೆ ಹೊರಗಡೆ ವಾಕಿಂಗ್‌ಗೆ ಬಿಡಲಾಗಿತ್ತು. ಆದರೆ ಬೈಕ್‌ನಲ್ಲಿ ಬಂದಿದ್ದ ಮೂವರು ಯುವಕರು, ತಮ್ಮದೇ ನಾಯಿ ಎನ್ನುವಂತೆ ಮುದ್ದು ಮಾಡಿಕೊಂಡು ಸಾರ್ವಜನಿಕರ ಎದುರೇ ಬೈಕ್‌ನಲ್ಲಿ ಕರೆದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸೋಮವಾರ ಬೆಂಗಳೂರಿನಲ್ಲಿ ಸಂಪೂರ್ಣ ಆಟೋ ಬಂದ್

    ಸಮಯವಾದರೂ ನಾಯಿ ಮನೆಗೆ ಬಾರದಿದ್ದನ್ನು ಗಮನಿಸಿದ ಸೈಯದ್‌ ಸಿಸಿಟಿವಿ ವೀಕ್ಷಿಸಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಮೂವರು ಯುವಕರು ನಾಯಿಯನ್ನು ಕಳವು ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ಮಾಲೀಕ ಸೈಯದ್‌ ಟ್ವೀಟ್‌ ಮಾಡಿ ಸಿಸಿಟಿವಿ ದೃಶ್ಯಾವಳಿಯ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿ ಶ್ವಾನ ಪತ್ತೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ ಕೇಸ್ – ಎಚ್ಚರಿಕೆ ನೀಡಿ ಯುವಕನಿಗೆ ಜಾಮೀನು ನೀಡಿದ ಪೊಲೀಸರು

  • ಲೆದರ್ ಬೆಲ್ಟ್‌ನಲ್ಲಿ ಶ್ವಾನಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ- ಭಾರೀ ಆಕ್ರೋಶ

    ಲೆದರ್ ಬೆಲ್ಟ್‌ನಲ್ಲಿ ಶ್ವಾನಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ- ಭಾರೀ ಆಕ್ರೋಶ

    ರೋಹ್ಟಕ್: ಪಾಪಿ ವ್ಯಕ್ತಿಯೊಬ್ಬ ಶ್ವಾನಕ್ಕೆ ಲೆದರ್ ಬೆಲ್ಟ್ ನಿಂದ ಮನಬಂದಂತೆ ಥಳಿಸಿದ ಘಟನೆ ಹರಿಯಾಣದ ರೋಹ್ಟಕ್‍ನಲ್ಲಿ ನಡೆದಿದೆ.

    ಶ್ವಾನದ ಮೇಲೆ ಮೃಗೀಯ ವರ್ತನೆ ತೋರಿದ ವ್ಯಕ್ತಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ವ್ಯಕ್ತಿ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ.

    ವೀಡಿಯೋದಲ್ಲೇನಿದೆ..?: ವ್ಯಕ್ತಿಯೊಬ್ಬ ಮನೆಯ ಛಾವಣಿಯ ಮೇಲೆ ಮನಬಂದಂತೆ ಬೆಲ್ಟ್‍ನಲ್ಲಿ ಮಲಗಿದ್ದ ಶ್ವಾನಕ್ಕೆ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಬಳಿಕ ಶ್ವಾನವನ್ನು ಛಾವಣಿಯಿಂದ ಎಸೆದಿದ್ದಾನೆ. ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ನಾಯಿಯ ಎರಡು ಮೂಳೆಗಳು ಮುರಿದಿವೆ.

    ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದಾಗಿದ್ದು, ವೀಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರೋಹ್ಟಕ್‍ನ ಆರ್ಯನಗರ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಟ್ಟಡದ ಮೇಲಿನಿಂದ ಬಿದ್ದು ಮಗು ಸಾವು

    ಆರೋಪಿಯನ್ನು ಸಿಟು ಎಂದು ಗುರುತಿಸಲಾಗಿದೆ. ಕಾರ್ಯಕರ್ತ ಅರವಿಂದ್ ಕುಮಾರ್ ಪ್ರಕಾರ, ಆರೋಪಿ ಈ ಹಿಂದೆಯೂ ನಾಯಿಯನ್ನು ಥಳಿಸಿದ್ದರು. ಇದೀಗ ಮತ್ತೆ ನಡೆದ ಪ್ರಕರಣದಲ್ಲಿ ನಾಯಿಗೆ ಮತ್ತೆ ನಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

  • ಬೆಕ್ಕು ಕಿಡ್ನ್ಯಾಪ್ ಮಾಡಿ ಮಂಗಳೂರಿಗೆ ಕಳುಹಿಸಿದ್ದರು: ಪತ್ತೆಯಾಯ್ತು ದೀಪಿಕಾ ದಾಸ್ ಶ್ಯಾಡೋ

    ಬೆಕ್ಕು ಕಿಡ್ನ್ಯಾಪ್ ಮಾಡಿ ಮಂಗಳೂರಿಗೆ ಕಳುಹಿಸಿದ್ದರು: ಪತ್ತೆಯಾಯ್ತು ದೀಪಿಕಾ ದಾಸ್ ಶ್ಯಾಡೋ

    ಕಿರುತೆರೆ ನಟಿಯ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ (Deepika Das) ಮೊನ್ನೆಯಷ್ಟೇ ತಮ್ಮ ಮನೆಯ ಬೆಕ್ಕು (cat) ಶ್ಯಾಡೋ (Shadow) ಕಾಣಿಯಾಗಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಪ್ರಕಟಿಸಿದ್ದರು. ಇದೀಗ ಬೆಕ್ಕು ಪತ್ತೆಯಾಗಿದೆ. ಅದು ಮಂಗಳೂರಿನಲ್ಲಿ (Mangalore) ಎನ್ನುವುದು ವಿಶೇಷ. ಬೆಂಗಳೂರಿನಿಂದ ಮಂಗಳೂರಿಗೆ ಅದು ಹೇಗೆ ಹೋಯಿತು? ಸದ್ಯಕ್ಕೆ ಸಸ್ಪೆನ್ಸ್.

    ತಮ್ಮ ಶ್ಯಾಡೋ ಅನ್ನು ಬೆಂಗಳೂರಿನಲ್ಲಿ ಕಿಡ್ನ್ಯಾಪ್ (Kidnap) ಮಾಡಿ ಮಂಗಳೂರಿಗೆ ಕಳುಹಿಸಿದ್ದರ ಬಗ್ಗೆ ಸ್ವತಃ ದೀಪಿಕಾ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದನ್ನು ಕದ್ದವರು ಯಾರು? ಮಂಗಳೂರಿಗೆ ಹೋಗಿದ್ದು ಹೇಗೆ? ಅದನ್ನು ಹುಡುಕಿದ ಕಥೆ ಏನು? ಹೀಗೆ ಎಲ್ಲವನ್ನೂ ಮುಂದಿನ ದಿನಗಳಲ್ಲಿ ಹೇಳಲಿದ್ದಾರಂತೆ ದೀಪಿಕಾ ದಾಸ್. ಸದ್ಯಕ್ಕೆ ಬೆಕ್ಕು ಸಿಕ್ಕಿದೆ. ಹಾಗಾಗಿ ಬಹುಮಾನ ಅವರಲ್ಲೇ ಉಳಿದಿದೆ. ಇದನ್ನೂ ಓದಿ: ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್

    ದೀಪಿಕಾ ದಾಸ್ ಅವರಿಗೆ ಬೆಕ್ಕು ಮತ್ತು ಶ್ವಾನ ಎಂದರೆ ತುಂಬಾ ಇಷ್ಟ. ಅವರ ಮನೆಯಲ್ಲಿ ಪ್ರಾಣಿಗಳು ಕೂಡ ಕುಟುಂಬದ ಸದಸ್ಯರಾಗಿದ್ದಾರೆ. ಮನೆಯವರಿಗೆ ಕೊಡುವಷ್ಟೇ ಪ್ರೀತಿಯನ್ನು ಬೆಕ್ಕಿ-ಶ್ವಾನಕ್ಕೆ ಕೊಡುತ್ತಿದ್ದಾರೆ. ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದ ಶ್ಯಾಡೋ (Shadow) ಕಾಣೆಯಾಗಿದ್ದರ ಬಗ್ಗೆ ಅವರು ತುಂಬಾನೇ ನೊಂದುಕೊಂಡಿದ್ದರು.

     ಫೆ.18ರಂದು ರಾತ್ರಿಯಿಂದ ವಿಶ್ವೇಶ್ವರಯ್ಯ ಲೇಔಟ್, 3ನೇ ಬ್ಲಾಕ್, ಉಲ್ಲಾಳು, ಬೆಂಗಳೂರಿನಲ್ಲಿ  ಶ್ಯಾಡೋ ಕಾಣೆಯಾಗಿತ್ತು ಎಂದು ನಟಿ ಅಳಲು ತೊಡಿಕೊಂಡಿದ್ದರು. ಈ ಕುರಿತು ಮಾಹಿತಿಯನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಶ್ಯಾಡೋ ಅನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡಲಾಗುವುದು ಎಂದು ಹತ್ತು ಸಾವಿರದಿಂದ ಹದಿನೈದು ಸಾವಿರ ರೂಪಾಯಿವರೆಗೂ  ಹಣವನ್ನು ಘೋಷಣೆ ಮಾಡಿದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೇಮಿಗಳ ದಿನಕ್ಕೆ ವಿರೋಧ – ನಾಯಿಗಳಿಗೆ ಮದುವೆ ಮಾಡಿಸಿದ ಹಿಂದೂ ಸಂಘಟನೆ

    ಪ್ರೇಮಿಗಳ ದಿನಕ್ಕೆ ವಿರೋಧ – ನಾಯಿಗಳಿಗೆ ಮದುವೆ ಮಾಡಿಸಿದ ಹಿಂದೂ ಸಂಘಟನೆ

    ಚೆನ್ನೈ: ಪ್ರೇಮಿಗಳ ದಿನವನ್ನು (Valentine’s Day) ವಿರೋಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ನಾಯಿಗಳಿಗೆ (Dog) ಮದುವೆ (Marriage) ಮಾಡಿಸುವ ಮೂಲಕ ವಿನೂತನವಾಗಿ ತಮಿಳುನಾಡಿನಲ್ಲಿ (Tamil Nadu) ಪ್ರತಿಭಟನೆ ನಡೆಸಿದರು.

    ತಮಿಳುನಾಡಿನ ಶಿವಗಂಗಾದಲ್ಲಿ ಈ ಪ್ರತಿಭಟನೆ ನಡೆದಿದೆ. ವಿವಿಧ ಹಿಂದೂ ಸಂಘಟನೆಗಳು ಪ್ರೇಮಿಗಳ ದಿನವನ್ನು ವಿರೋಧಿಸಿದ್ದು, ಇದು ದೇಶದ ಸಂಸ್ಕೃತಿಗೆ ವಿರುದ್ಧವಾದ ಆಚರಣೆಯಾಗಿದೆ ಎಂದು ಕಿಡಿಕಾರಿದರು.

    ಹಿಂದೂ ಸಂಘಟನೆಯ ಕಾರ್ಯಕರ್ತರು 2 ನಾಯಿಗಳನ್ನು ಕರೆತಂದು ಅದಕ್ಕೆ ವಧು ವರರ ರೀತಿಯಲ್ಲಿ ಸಿಂಗರಿಸಿ ಹಾರವನ್ನು ಹಾಕಿದರು. ನಂತರ ನಾಯಿಗಳಿಗೆ ಮದುವೆ ಮಾಡಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಡೇಟಿಂಗ್‌ ಮಾಡುತ್ತಿದ್ದ 25ರ ಯುವತಿಯನ್ನು ಕೊಲೆ ಮಾಡಿ ಢಾಬಾದ ಫ್ರಿಜರ್‌ನಲ್ಲಿ ಬಚ್ಚಿಟ್ಟ

    ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ನಾಯಿಗಳಿಗೆ ಮದುವೆ ಮಾಡಲಾಗಿದೆ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಹೇಳಿದರು. ಇದನ್ನೂ ಓದಿ: ಪಕ್ಷದ ರೈತ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ – ಕಾರ್ಯಕರ್ತರಿಗೆ ಭರ್ಜರಿ ಬಾಡೂಟ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೇಮಿಗಳ ದಿನ ವಿರೋಧಿಸಿ ನಾಯಿಗಳಿಗೆ ಮದುವೆ ಮಾಡಿಸಿದ ಹಿಂದೂ ಸಂಘಟನೆ

    ಪ್ರೇಮಿಗಳ ದಿನ ವಿರೋಧಿಸಿ ನಾಯಿಗಳಿಗೆ ಮದುವೆ ಮಾಡಿಸಿದ ಹಿಂದೂ ಸಂಘಟನೆ

    ಚೆನ್ನೈ: ಪ್ರೇಮಿಗಳ ದಿನಾಚರಣೆಯನ್ನು (Valentine’s Day) ವಿರೋಧಿಸಿ ಹಿಂದೂ ಸಂಘಟನೆಯೊಂದು ಬೀದಿ ನಾಯಿಗಳಿಗೆ (Dog) ಮದುವೆ (Marriage) ಮಾಡಿಸಿರುವ ಘಟನೆ ತಮಿಳುನಾಡಿನ (Tamil Nadu) ಶಿವಗಂಗಾದಲ್ಲಿ (Sivaganga) ನಡೆದಿದೆ.

    ತಮಿಳುನಾಡಿನ ಹಿಂದೂ ಮುನ್ನಾನಿ ಸಂಘಟನೆ ಪ್ರೇಮಿಗಳ ದಿನವನ್ನು ವಿರೋಧಿಸಿದ್ದು, ಇದು ಭಾರತದ ಸಂಸ್ಕೃತಿಗೆ ವಿರೋಧವಾಗಿದೆ ಎಂದು ಹೇಳಿದೆ. ಈ ಹಿಂದೆಯೂ ಸಂಘಟನೆ ಪ್ರತಿ ವರ್ಷ ಪ್ರೇಮಿಗಳ ದಿನವನ್ನು ವಿರೋಧಿಸಿ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಲಾಬಿಗೆ ಫುಲ್ ಡಿಮ್ಯಾಂಡ್- ಒಂದು ಕೆಂಗುಲಾಬಿಗೆ 60 ರೂ.!

    ಸೋಮವಾರ ಹಿಂದೂ ಮುನ್ನಾನಿಯ ಕಾರ್ಯಕರ್ತರು 2 ಬೀದಿ ನಾಯಿಗಳನ್ನು ಕರೆತಂದು, ಅದಕ್ಕೆ ಬಟ್ಟೆ ಹೊದಿಸಿ, ಹಾರ ಹಾಕಿ, ಅಣುಕು ಮದುವೆ ಮಾಡಿಸಿದ್ದಾರೆ.

    ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ. ಇದನ್ನು ವಿರೋಧಿಸಿ ಬೀದಿ ನಾಯಿಗಳ ಮದುವೆಯನ್ನು ಮಾಡಲಾಗಿದೆ ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ. ಇದನ್ನೂ ಓದಿ: ರಿಯಲ್ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ರೀಲ್ ಪೊಲೀಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು

    ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು

    ಬಳ್ಳಾರಿ: ನಗರದಲ್ಲಿ ಕಳೆದ 2 ತಿಂಗಳ ಹಿಂದೆ ಅಷ್ಟೇ ನಾಯಿ ಕಡಿತಕ್ಕೆ (Dog Bite) ಇಬ್ಬರು ಅಮಾಯಕ ಬಾಲಕರು ಬಲಿಯಾಗಿದ್ದರು. ಘಟನೆ ಮಾಸುವ ಮುನ್ನವೇ ಮತ್ತೊಂದು ಹುಚ್ಚು ನಾಯಿ ದಾಳಿ ಘಟನೆ ವರದಿಯಾಗಿದೆ.

    ರಾತ್ರಿ ತಮ್ಮ ಮನೆ ಮುಂದೆ ಮಲಗಿದ್ದವರ ಮೇಲೆ ನಾಯಿ ದಾಳಿ ಮಾಡಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಕಳೆದ 2 ತಿಂಗಳ ಹಿಂದೆ ಬಳ್ಳಾರಿ (Bellary) ಬಾದನಟ್ಟಿ ಗ್ರಾಮದಲ್ಲಿ ಇಬ್ಬರು ಮಕ್ಕಳ ಮೇಲೆ ನಾಯಿ ದಾಳಿ ಮಾಡಿದ್ದು, ಇದರಿಂದ ಇಬ್ಬರು ಮಕ್ಕಳು ಅಸುನೀಗಿದ್ದರು. ಈಗ ಮತ್ತೆ ನಾಯಿ ದಾಳಿಯಿಂದಾಗಿ ಬಳ್ಳಾರಿಯ ಜನತೆ ಬೆಚ್ಚಿ ಬಿದ್ದಿದೆ. ಮಂಗಳವಾರ ಮುಂಜಾನೆ ಬಳ್ಳಾರಿಯ ಕೌಲ್ ಬಜಾರ್ ವ್ಯಾಪ್ತಿಯ ವಾರ್ಡ್ ನಂಬರ್ 30 ರಲ್ಲಿ ವಟ್ಟಲಗೇರಿ ಏರಿಯಾದಲ್ಲಿ ನಾಯಿ ದಾಳಿ ಮಾಡಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಹುಚ್ಚು ನಾಯಿ ದಾಳಿ ಮಾಡಿದ್ದು, 25 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮನೆ ಮುಂದೆ ರಾತ್ರಿ ಮಲಗಿದ್ದ ಜನರ ಮೇಲೆ ನಾಯಿ ದಾಳಿ ಮಾಡಿದ್ದು, 6 ಮಹಿಳೆಯರು 7 ಮಕ್ಕಳು ಸೇರಿದಂತೆ ಒಟ್ಟು 25 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ. ನಾಯಿ ಕಡಿತದ ಬಳಿಕ ಬಳ್ಳಾರಿ ಜಿಲ್ಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ನಾಯಿ ದಾಳಿಗೊಳಗಾದ ಜನರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಸರ್ಕಾರದಿಂದ ಮಹತ್ವದ ನಿರ್ಧಾರ

    ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಕ್ಕಳಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 21 ಜನರಿಗೆ ವಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದಾಜಿನ ಪ್ರಕಾರ ಬಳ್ಳಾರಿಯಲ್ಲಿ ಸುಮಾರು 10,000ಕ್ಕೂ ಅಧಿಕ ಬೀದಿ ನಾಯಿಗಳಿವೆ. ನಾಯಿಗಳ ಸಂತಾನ ತಡೆಗಟ್ಟಲು ಬಳ್ಳಾರಿ ಮಹಾನಗರ ಪಾಲಿಕೆ ವಿಫಲವಾಗಿದೆ. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆ ದರೋಡೆಗೆ ಬಂದವನಿಗೆ ಬೀದಿನಾಯಿಗಳು ಟಕ್ಕರ್- ಎದ್ನೊ ಬಿದ್ನೊ ಅಂತಾ ಓಡಿದ ಕಳ್ಳ

    ಮನೆ ದರೋಡೆಗೆ ಬಂದವನಿಗೆ ಬೀದಿನಾಯಿಗಳು ಟಕ್ಕರ್- ಎದ್ನೊ ಬಿದ್ನೊ ಅಂತಾ ಓಡಿದ ಕಳ್ಳ

    ಬೆಂಗಳೂರು: ಬೆಳ್ಳಂದೂರು (Bellandur) ಪೊಲೀಸ್ ಠಾಣಾ ವ್ಯಾಪ್ತಿಯ ಕೊಡತಿ ಎಂಬ ಗ್ರಾಮದಲ್ಲಿ ಹೊಂಚು ಹಾಕಿ ಸಂಚು ರೂಪಿಸಿದ್ದ ಕಳ್ಳನಿಗೆ ಬೀದಿನಾಯಿಗಳು ಟಕ್ಕರ್ ಕೊಟ್ಟಿವೆ. ನಾಯಿಗಳ ಅಬ್ಬರ ಕಂಡು ಕಾಲಿಗೆ ಬುದ್ಧಿ ಹೇಳಿದ ಕಳ್ಳ ಬೈಕ್, ಡ್ರಿಲ್ಲಿಂಗ್ ಮೆಷಿನ್ ಬಿಟ್ಟು ಪರಾರಿಯಾಗಿದ್ದಾನೆ. ಕಳ್ಳನ ಕರಾಮತ್ತು ಹಾಗೂ ನಾಯಿಗಳ ಅಬ್ಬರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಫೆಬ್ರವರಿ 2ರ ರಾತ್ರಿ ಸರ್ಜಾಪುರ ರಸ್ತೆಯ ಕೊಡತಿಯಲ್ಲಿ ಡ್ರಿಲ್ಲಿಂಗ್ ಮೆಷಿನ್ ಸಮೇತ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಕಳ್ಳ. ಮನೆ ಗೋಡೆ ಕೊರೆದು ಒಳ ಹೋಗಲು ತಯಾರಿ ನಡೆಸುತ್ತಿದ್ದ. ಆದರೆ ಈ ವೇಳೆ ಕಳ್ಳನ ಚಲನವಲನ ಕಂಡ ಬೀದಿನಾಯಿಗಳು (Street Dogs) ಜೋರಾಗಿ ಬೋಗಳಲು ಶುರುಮಾಡಿವೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು

    ನಾಯಿಗಳ ಶಬ್ದ ಕೇಳಿ ನಿವಾಸಿಗಳು, ಮನೆಯವರು ಹೊರ ಬರುತ್ತಿದ್ದಂತೆ ಕಳ್ಳ ಕಾಲ್ಕಿತ್ತಿದ್ದ. ಮೊದಲಿಗೆ ಸಿಸಿಟಿವಿಗಳನ್ನ ಡ್ಯಾಮೇಜ್ ಮಾಡಿ ಕಳ್ಳತನಕ್ಕೆ ಯತ್ನಿಸಿದ್ದ. ಅಲ್ಲದೆ ಕಳ್ಳತನಕ್ಕೂ ಮುನ್ನ ಮನೆ ಬಳಿ ಎರಡು ದಿನ ಸುತ್ತಾಡಿದ್ದ. ನಂತರ ಶನಿವಾರ ಒಂದೇ ದಿನ ಎರಡು ಬಾರಿ ಕಳ್ಳತನಕ್ಕೆ ಯತ್ನಿಸಿದ್ದಾನೆ.

    ನಾಯಿಗಳ ಸಮಯಪ್ರಜ್ಞೆಯಿಂದ ಮನೆ ಕಳ್ಳತನ ತಪ್ಪಿದೆ. ಡ್ರಿಲ್ಲಿಂಗ್ ಮೆಷಿನ್ ಸಮೇತ ಸ್ಥಳೀಯರು ದೂರು ನೀಡಿದ್ದು, ಕಳ್ಳ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರಿಗೆ ಡಿಕ್ಕಿ ಹೊಡೆದ ನಾಯಿ ಕ್ಷಣ ಮಾತ್ರದಲ್ಲಿ ಮಾಯ – 70 ಕಿ.ಮೀ ಸಾಗಿ ಮನೆ ತಲುಪಿದಾಗ ಪ್ರತ್ಯಕ್ಷ!

    ಕಾರಿಗೆ ಡಿಕ್ಕಿ ಹೊಡೆದ ನಾಯಿ ಕ್ಷಣ ಮಾತ್ರದಲ್ಲಿ ಮಾಯ – 70 ಕಿ.ಮೀ ಸಾಗಿ ಮನೆ ತಲುಪಿದಾಗ ಪ್ರತ್ಯಕ್ಷ!

    ಮಂಗಳೂರು: ಕಾರಿಗೆ (Car) ಡಿಕ್ಕಿಯಾದ ನಾಯಿ (Dog) ಕಾರಿನ ಬಂಪರಿನೊಳಗೆ ಸುಮಾರು 70 ಕಿಲೋಮೀಟರ್ ಸಾಗಿ ಕಾರ್ ನಿಲ್ಲಿಸಿದ ಬಳಿಕ ಪ್ರತ್ಯಕ್ಷವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur) ನಡೆದಿದೆ.

    ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ (Kukke Subramanya Temple)  ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿದ್ದು, ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಡಿದ್ದಾರೆ. ಆದರೆ ನಾಯಿ ಅಲ್ಲಿಂದ ಎಲ್ಲಿ ಹೋಗಿದೆ ಎನ್ನುವುದನ್ನು ಊಹಿಸಲೂ ಸುಬ್ರಹ್ಮಣ್ಯ ಅವರಿಗೆ ಕಷ್ಟವಾಗಿತ್ತು. ಇದನ್ನೂ ಓದಿ: NIAಗೆ ತಾಲಿಬಾನ್ ಹೆಸರಲ್ಲಿ ಭಯೋತ್ಪಾದನಾ ದಾಳಿ ಸಂದೇಶ – ದೇಶಾದ್ಯಂತ ಹೈಅಲರ್ಟ್ ಘೋಷಣೆ

    ಅಲ್ಲಿಂದ ನೇರವಾಗಿ ಕಬಕದ ತನ್ನ ಮನೆಗೆ ಬಂದು ಕಾರನ್ನು ಪರಿಶೀಲಿಸಿದಾಗ ಬಂಪರ್‌ನ ಗ್ರಿಲ್ ತುಂಡಾಗಿರುವುದು ಗಮನಕ್ಕೆ ಬಂದಿತ್ತು. ಇದನ್ನು ಗಮನಿಸಿದಾಗ ತುಂಡಾದ ಗ್ರಿಲ್ ಮಧ್ಯೆ 70 ಕಿ.ಮೀ ಹಿಂದೆ ಕಾರ್‌ಗೆ ಡಿಕ್ಕಿಯಾದ ನಾಯಿ ಪ್ರತ್ಯಕ್ಷವಾಗಿದೆ. ನಾಯಿಯನ್ನು ಬಂಪರ್ ಒಳಗಿಂದ ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್‍ಗೆ ತೆರಳಿ ನಾಯಿಯನ್ನು ಹೊರ ತೆಗೆಯಲು ವಿನಂತಿಸಿದ್ದಾರೆ. ಗ್ಯಾರೇಜ್ ಸಿಬ್ಬಂದಿ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಕಾರಿಂದ ಹೊರ ತೆಗೆದಿದ್ದಾರೆ. ಸುಮಾರು 70 ಕಿ.ಮೀ ವರೆಗೆ ಕಾರಿನ ಬಂಪರ್ ಒಳಗೇ ಇದ್ದ ನಾಯಿ ಆರಾಮವಾಗಿ ಹೊರಗೆ ಬಂದು ಇಳಿದು ಹೋಗಿದೆ. ಇದನ್ನೂ ಓದಿ: ಕೆಲಸ ಕೊಡಿಸುವ ಆಸೆ ತೋರಿಸಿ ಸೆಕ್ಸ್- ಟೆಕ್ಕಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿತ್ರೀಕರಣಕ್ಕೆ ಬಂದ ನಾಯಿಯನ್ನು ಕಾಡುಪ್ರಾಣಿ ಎಂದು ತಪಾಸಣೆ ಮಾಡಿದ ಅರಣ್ಯ ಸಿಬ್ಬಂದಿ

    ಚಿತ್ರೀಕರಣಕ್ಕೆ ಬಂದ ನಾಯಿಯನ್ನು ಕಾಡುಪ್ರಾಣಿ ಎಂದು ತಪಾಸಣೆ ಮಾಡಿದ ಅರಣ್ಯ ಸಿಬ್ಬಂದಿ

    ತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ 20 ಕೋಟಿ ಬೆಲೆಬಾಳುವ ಕಕೇಶಿಯ್ ಶೆಫರ್ಡ್ (, Caucasian Shepherd) ಶ್ವಾನವನ್ನು ಖ್ಯಾತ ನಟ ರವಿಚಂದ್ರನ್ (Ravichandran) ನಾಯಕ ನಟನಾಗಿ ನಟಿಸುತ್ತಿರುವ ‘ಗೌರಿಶಂಕರ’ (Gauri Shankar) ಸಿನಿಮಾ ಚಿತ್ರೀಕರಣಕ್ಕೆ ತರಲಾಗಿದ್ದು ಈ ವೇಳೆ ದಾಂಡೇಲಿಯಲ್ಲಿ  ಶ್ವಾನವನ್ನು ನೋಡಿದ ಅರಣ್ಯ ಸಿಬ್ಬಂದಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಲ್ಲದೇ ಇದೊಂದು ಕಾಡುಪ್ರಾಣಿ ಎಂದು ತಿಳಿದು ವಶಕ್ಕೆ ಪಡೆಯಲು ಮುಂದಾಗಿದ್ದರು. ಕೊನೆಗೆ ನಾಯಿ ಮಾಲೀಕ ಸತೀಶ್ ಕ್ಯಾಡಬಮ್ಸ್ ಇದು ಶ್ವಾನ, ತೋಳ ಅಥವಾ ಇನ್ಯಾವುದೇ ಕಾಡುಪ್ರಾಣಿಯಲ್ಲಾ ಎಂದು ಅರಣ್ಯ ಸಿಬ್ಬಂದಿಗಳಿಗೆ ಫೋಟೋವನ್ನು ತೋರಿಸುವ ಮೂಲಕ ಅರಣ್ಯ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟರು.

    ಇದೇ ಮೊದಲಬಾರಿಗೆ ಸತೀಶ್ ರವರು ಸಾಕಿರುವ 20 ಕೋಟಿ ಬೆಲೆಬಾಳುವ ಹೈದರ್ ಹೆಸರಿನ ಈ ಶ್ವಾನವನ್ನು ಕನ್ನಡದ ಸಿನಿಮಾದಲ್ಲಿ ಬಳಸಲಾಗುತ್ತಿದ್ದು ದಾಂಡೇಲಿ, ಜೋಯಿಡಾ ,ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನು ಶ್ವಾನಕ್ಕೆ ತಂಗಲು ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಸಹ ಮಾಡಲಾಗಿದ್ದು 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ಈ ಸಿನಿಮಾದ ಶೂಟಿಂಗ್ ಗಾಗಿಯೇ ನಾಯಿಗೆ ಸಂಭಾವನೆಯನ್ನು ಕೂಡ ನೀಡಲಾಗುತ್ತಿದ್ದು, ಹತ್ತು ಲಕ್ಷ ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಈ ಪ್ರಮಾಣದ ಹಣವನ್ನು ಸಂಭಾವನೆಯಾಗಿ ಪಡೆದ ಮೊದಲ ಪ್ರಾಣಿ ಇದಾಗಿದೆ. ಈಗಾಗಲೇ ಮೂರು ದಿನಗಳ ಕಾಲ ಚಿತ್ರೀಕರಣದಲ್ಲೂ ಅದು ಭಾಗಿಯಾಗಿದೆ. ಕೇವಲ ಮೂರೇ ಮೂರು ಪಾತ್ರಗಳು ಸಿನಿಮಾದಲ್ಲಿದ್ದು, ನಾಯಿ ಮತ್ತು ಹುಲಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶ್ವಾನವನ್ನು ಮುದ್ದಾಡಿದ್ದೇ ತಪ್ಪಾಯ್ತಾ?- ಕಾಲೇಜಿನ ಆವರಣದಲ್ಲೇ ಹೊಡೆದು ಕೊಂದ ವಾರ್ಡನ್!

    ಶ್ವಾನವನ್ನು ಮುದ್ದಾಡಿದ್ದೇ ತಪ್ಪಾಯ್ತಾ?- ಕಾಲೇಜಿನ ಆವರಣದಲ್ಲೇ ಹೊಡೆದು ಕೊಂದ ವಾರ್ಡನ್!

    ಉಡುಪಿ: ಕಳೆದ ಎರಡು ತಿಂಗಳಿನಿಂದ ಮುದ್ದು ನಾಯಿಮರಿಯೊಂದು ಎಲ್ಲರ ಪ್ರೀತಿಗಳಿಸಿತ್ತು. ಕಾಲೇಜಿನ ಕ್ಯಾಂಪಸ್ ನಲ್ಲೆಲ್ಲ ಓಡಾಡಿ ನೂರಾರು ವಿದ್ಯಾರ್ಥಿಗಳ ಅಕ್ಕರೆ ಗಳಿಸಿತ್ತು. ಆದರೆ ವರಾಂಡದಲ್ಲಿ ಓಡಾಡುತ್ತಿರೋದು ಆಡಳಿತ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಮಾನವೀಯತೆ ಮರೆತ ವಾರ್ಡನ್ (College Warden) ಮಾಡಬಾರದ ಹೇಯ ಕೃತ್ಯ ಮಾಡಿ ಕೇಸು ಹಾಕಿಸಿಕೊಂಡಿದ್ದಾನೆ.

    ಹೌದು. ಉಡುಪಿ (Udupi) ಯ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿ (Bantakal Engineering College) ನ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಬೀದಿ ನಾಯಿಯ ಜೊತೆ ಇಷ್ಟಪಟ್ಟು ಆಟವಾಡುತ್ತಿದ್ದಳು. ಹಲವರಿಗೆ ಈ ನಾಯಿ (Dog Murder) ಪ್ರಿಯವಾಗಿತ್ತು. ಹಾಸ್ಟೆಲ್ ಆವರಣದಲ್ಲಿ ನಾಯಿಯ ಓಡಾಟ ಅದ್ಯಾಕೋ ವಾರ್ಡನ್ ಗೆ ಸರಿ ಕಂಡು ಬರಲಿಲ್ಲ. ವಾರ್ಡನ್ ಗಳಿಬ್ಬರು ಸೇರಿ ದೊಣ್ಣೆ ಬಳಸಿ ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ. ಬಳಿಕ ಚೀಲದಲ್ಲಿ ನಾಯಿಯ ಕಳೆ ಬರವನ್ನು ತೆಗೆದುಕೊಂಡು ಎಸೆದಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ವೃದ್ಧ ಮಹಿಳೆಯರನ್ನೇ ರೇಪ್ ಮಾಡಿ, ಕೊಲೆ ಮಾಡ್ತಿದ್ದ 20ರ ಯುವಕ- ಸೈಕೋ ಕಿಲ್ಲರ್ ಅರೆಸ್ಟ್

    ವಾರ್ಡನ್ ನಡೆಸಿದ ಈ ಅಮಾನುಷ ಕೃತ್ಯ ಕಾಲೇಜು ಅವರಣದಲ್ಲಿದ್ದ ಯಾವುದೋ ವಿದ್ಯಾರ್ಥಿ ಸೆರೆ ಹಿಡಿದಿದ್ದಾರೆ. ಸದ್ಯ ಆ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಕ್ರಮೇಣ ಈ ವಿಷಯ ಪ್ರಾಣಿ ಪ್ರಿಯರ ಗಮನಕ್ಕೂ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಸ್ಥಳೀಯ ಶಿರ್ವ ಪೊಲೀಸ್ ಠಾಣೆ (Shirva Police Station) ಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ವಿಕೃತಿ ಮೆರೆದ ವಾರ್ಡನ್ ಅನ್ನು ರಾಜೇಶ್ ಎಂದು ಗುರುತಿಸಲಾಗಿದೆ. ನಾಗರಾಜ್ ಎಂಬಾತ ಈ ಕೃತ್ಯಕ್ಕೆ ಸಾಥ್ ನೀಡಿದ್ದಾನೆ.

    ಮಂಜುಳಾ ಕರ್ಕೇರ ಶಿರ್ವ ಠಾಣೆಯಲ್ಲಿ ದೂರ ನೀಡಿದ್ದಾರೆ. ಉಡುಪಿಯ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ (Animal Care Trust) ಮುಖ್ಯಸ್ಥೆ ಬಬಿತಾ ಮಧ್ವರಾಜ್ ಇದನ್ನು ಒಂದು ಅಭಿಯಾನದ ರೀತಿಯಲ್ಲಿ ಮುಂದುವರಿಸಿದ್ದಾರೆ ಐಪಿಸಿ ಸೆಕ್ಷನ್ 428-29 ಮತ್ತು ಪಿಸಿಎ ಆಕ್ಟ್-11 ಪ್ರಕಾರ ದೂರು ದಾಖಲಾಗಿದೆ. ಇದೊಂದು ಅಮಾನವೀಯ ಮತ್ತು ಕ್ರೂರ ಕೃತ್ಯ.ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಈ ನಾಯಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸಂಸ್ಥೆ ತಾಂತ್ರಿಕ ಶಿಕ್ಷಣದ ಜೊತೆ ಮಾನವೀಯ ಮೌಲ್ಯ ಕಲಿಸಬೇಕು ಎಂದು ಅನಿಮಲ್ ಕೇರ್ ಟ್ರಸ್ಟ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k