Tag: dog

  • ನೀರು ಕುಡಿಯಲು ಹೋಗಿ ನಾಯಿಯಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿತು ಕೋತಿ!

    ನೀರು ಕುಡಿಯಲು ಹೋಗಿ ನಾಯಿಯಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿತು ಕೋತಿ!

    ಧಾರವಾಡ: ಜಿಲ್ಲೆಯಲ್ಲಿ ಈ ಬಾರಿ ಎಲ್ಲಿ ನೋಡಿದ್ರೂ ಬಿರುಕು ಬಿಟ್ಟ ಭೂಮಿ, ನೆತ್ತಿಯ ಮೇಲೆ ಮೈಸುಡುವ ಬಿಸಿಲು, ಎಲ್ಲಿ ನೋಡಿದ್ರು ಬತ್ತಿ ಹೋದ ಕೆರೆ ಕಟ್ಟೆಗಳು. ಜಿಲ್ಲೆಯಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ. ಈ ನಡುವೆ ನೀರಿಗಾಗಿ ಕಾಡಿನಿಂದ ನಾಡಿಗೆ ಬಂದ ಕೋತಿಯೊಂದು ನೀರು ಕುಡಿಯುತ್ತಿದ್ದ ವೇಳೆ ನಾಯಿ ಕಚ್ಚಿ ಆಸ್ಪತ್ರೆ ಸೇರಿದೆ.

    ಕಳೆದ 5 ದಿನಗಳ ಹಿಂದೆ ಕೋತಿ ಬಾಲಕ್ಕೆ ಹಾಗೂ ಮೈಗೆ ನಾಯಿ ಕಚ್ಚಿದ್ದರ ಪರಿಣಾಮ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿರೋದನ್ನು ಕಂಡು ಧಾರವಾಡ ಲಕ್ಷ್ಮಿನಗರ ನಿವಾಸಿಯೊಬ್ಬರು ಸ್ನೇಕ್ ಎಲ್ಲಪ್ಪನವರಿಗೆ ಈ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಎಲ್ಲಪ್ಪ, ಕೋತಿಯನ್ನು ಕೃಷಿ ವಿವಿಯ ಪಶು ಚಿಕಿತ್ಸಾಲಯಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಈ ಕೋತಿಗೆ ಆಸ್ಪತ್ರೆ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದಾರೆ. ಕೋತಿಯ ಬಾಲದ ಗಾಯ ಹೆಚ್ಚಾಗಿದ್ದರಿಂದ ಬಾಲವನ್ನ ಕಡಿದು ಹಾಕಲಾಗಿದೆ. ಇನ್ನುಳಿದಂತೆ ಮೈಮೇಲೆ ಇದ್ದ ಗಾಯಗಳಿಗೆ ಕೂಡಾ ಔಷಧ ಹಚ್ಚಿದ ವೈದ್ಯರು, ಕೃಷಿ ವಿವಿಯ ಪಶು ಆಸ್ಪತ್ರೆಯಲ್ಲಿ ಕೋತಿಯನ್ನು ಒಳ ರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. 4 ದಿನಗಳ ಕಾಲ ಇಲ್ಲೇ ಔಷಧೋಪಚಾರ ಪಡೆಯಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಕೋತಿಯನ್ನು ಮತ್ತೇ ಕಾಡಿನಲ್ಲಿ ಬಿಡುವುದಾಗಿ ಕೃಷಿ ವಿವಿ ಪಶು ಚಿಕಿತ್ಸೆಯ ವೈದ್ಯರಾದ ಎಎಸ್ ಪಾಟೀಲ್ ತಿಳಿಸಿದ್ದಾರೆ.

    ಇಂತಹ ಬಿಸಿಲಿಗೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳು ಕೂಡಾ ನೀರಿನ ದಾಹ ತಿರಿಸಿಕೊಳ್ಳಲು ಬಂದು ಇಕ್ಕಟ್ಟಿಗೆ ಸಿಲುಕುತ್ತಿವೆ. ಸದ್ಯ ಪ್ರಾಣಿ ಪ್ರಿಯರೊಬ್ಬರು ಈ ಕೋತಿಗೆ ಪ್ರಾಣ ಉಳಿಸಿ ಪುಣ್ಯ ಕಟ್ಟಿಕೊಂಡಿದ್ದಾರೆ.

  • ನಾಯಿ ಜೊತೆ ಸೆಕ್ಸ್ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!

    ನಾಯಿ ಜೊತೆ ಸೆಕ್ಸ್ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!

    ಬೆಳಗಾವಿ: ನೀನು ನಾಯಿಗಿಂತ ಕಡೆ ಅದರ ಜೊತೆಯಲ್ಲೆ ಮಲಗು ಎಂದು ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ ಪತ್ನಿಗೆ ಪತಿರಾಯನೊಬ್ಬ ಚಿತ್ರಹಿಂಸೆ ಕೊಡುತ್ತಿದ್ದ ಪ್ರಕರಣ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸಂಜೀವ ಭಾಗೋಜಿ ಕಳೆದ ಆರು ತಿಂಗಳಿನಿಂದ ತನ್ನ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದನು. ಪ್ರತಿದಿನ ಅಶ್ಲೀಲ ಚಿತ್ರ ಮತ್ತು ವೀಡಿಯೋಗಳನ್ನು ತೋರಿಸಿ ಅನೈಸರ್ಗಿಕವಾಗಿ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಭಾನುವಾರ ತನ್ನ ಪತ್ನಿಗೆ ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿದ್ದಾನೆ. ಪತಿಯ ವಿಕೃತಿಯನ್ನು ನಿರಾಕರಿಸಿದಕ್ಕೆ ಪತ್ನಿ ಮತ್ತು ತನ್ನ ಎರಡು ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದಾನೆ.

    ಸಂಜೀವ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡುತ್ತಿದ್ದ ಸಂಜೀವ 6 ತಿಂಗಳಿನಿಂದ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಿದ್ದನು. ತನ್ನ ಪತಿ ವಿಕೃತಿಯನ್ನು ಸಹಿಸಲಾರದ ಪತ್ನಿ ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸದ್ಯ ಪೊಲೀಸರು ಸಂಜೀವನ ವಿರುದ್ಧ ಕಲಂ 498 (ಎ), 504, 506, 377 ಅನ್ವಯ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಸಂತ್ರಸ್ತ ಮಹಿಳೆಗೆ ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

     

  • KSRTC ಬಸ್‍ಗಳಲ್ಲಿ ಇನ್ಮುಂದೆ ನಾಯಿಗಳಿಗೂ ಟಿಕೆಟ್!

    KSRTC ಬಸ್‍ಗಳಲ್ಲಿ ಇನ್ಮುಂದೆ ನಾಯಿಗಳಿಗೂ ಟಿಕೆಟ್!

    ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಇನ್ಮುಂದೆ ಸಾಕುಪ್ರಾಣಿಗಳ ಜೊತೆ ಪ್ರಯಾಣ ಬೆಳೆಸೋಕೆ ಅವಕಾಶ ನೀಡಲಾಗಿದೆ. ನಾಯಿಗಳನ್ನ ಜೊತೆಗೆ ಕೊಂಡೊಯ್ಯಲು ಮನಷ್ಯರಿಗೆ ನೀಡಲಾಗುವ ಬೆಲೆಯಷ್ಟೇ ಟಿಕೆಟ್ ಪಡೆಯಬೇಕಿದೆ.

    ಕೆಎಸ್‍ಆರ್‍ಟಿಸಿ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಆಯಾಯ ಊರಿಗೆ ವಯಸ್ಕರಿಗೆ ಎಷ್ಟು ಬೆಲೆಯ ಟಿಕೆಟ್ ನೀಡಲಾಗುತ್ತದೆಯೋ ಅಷ್ಟೇ ಬೆಲೆಯ ಟಿಕೆಟ್ ದೊಡ್ಡ ನಾಯಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದೆ. ಇನ್ನು ಮರಿ ನಾಯಿಗಳಿಗೆ ಮಕ್ಕಳ ಟಿಕೆಟ್ ದರ ಅನ್ವಯವಾಗಲಿದೆ.

    ಕೇವಲ ನಾಯಿಗಳು ಮಾತ್ರವಲ್ಲದೇ ಬೆಕ್ಕು, ಮೊಲದ ಜೊತೆಯೂ ಪ್ರಯಾಣ ಬೆಳೆಸಬಹುದು. ಆದ್ರೆ ಇವುಗಳಿಗೆ ಮಕ್ಕಳ ಟಿಕೆಟ್ ಅಂದ್ರೆ ಹಾಫ್ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಕೆಎಸ್‍ಆರ್‍ಟಿಸಿಯಿಂದ ಇಂದು ಅಧಿಕೃತವಾಗಿ ಸುತ್ತೊಲೆ ಹೊರಡಿಸಲಾಗಿದೆ. ಇದರ ಜೊತೆಗೆ ಸರಕು ಸಾಗಾಣೆಯ ದರವೂ ಕೂಡ ಪರಿಷ್ಕರಣೆ ಮಾಡಲಾಗಿದೆ.

  • ವಿಡಿಯೋ: ಲ್ಯಾಬ್ರಡಾರ್ ನಾಯಿಯನ್ನು ಖದೀಮರು ಹೇಗೆ ಕಳವು ಮಾಡ್ತಾರೆ ನೋಡಿ!

    ವಿಡಿಯೋ: ಲ್ಯಾಬ್ರಡಾರ್ ನಾಯಿಯನ್ನು ಖದೀಮರು ಹೇಗೆ ಕಳವು ಮಾಡ್ತಾರೆ ನೋಡಿ!

    ಕಾರವಾರ: ಕಳ್ಳತನ ಆಗುತ್ತೆ ಅಂತ ರಕ್ಷಣೆಗೆ ನಾಯಿ ಸಾಕಿದ್ರೆ ಆ ನಾಯಿಯನ್ನೇ ಕಳವು ಮಾಡೋ ಮಂದಿ ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಾಕು ನಾಯಿಗಳು ಕಳ್ಳತನವಾಗುತ್ತಿವೆ.

    ಕಾರವಾರ ನಗರದ ಮುಖ್ಯಭಾಗವಾದ ಎಂಜಿ ರೋಡ್ ಬಳಿ ಇರುವ ಮಹಾಲಕ್ಷ್ಮಿ ಶೂರೂಂ ಬಳಿ ಇರುವ ಮನೆಯೊಂದರಲ್ಲಿ ಸಾಕಿದ್ದ ಲ್ಯಾಬ್ರಡಾರ್ ತಳಿಯ ನಾಯಿ ಮರಿಯನ್ನ ಕಳ್ಳರು ಯಾಮಾರಿಸಿ ಕಳ್ಳತನ ಮಾಡಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ರೀತಿ ಹಲವು ತಳಿಗಳ ನಾಯಿಗಳು ಕಳ್ಳತನವಾಗಿದ್ದು ಕಾರವಾರ ನಗರ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ನಾಯಿ ಕಳವು ಮಾಡೋ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    https://www.youtube.com/watch?v=dkVwpWN8Fqw

  • ನಾಯಿಗಳ ದಾಳಿಗೆ ಹೆದರಿ ಸ್ಥಳದಿಂದ ಓಡಿದ ಚಿರತೆ: ವಿಡಿಯೋ ನೋಡಿ

    ನಾಯಿಗಳ ದಾಳಿಗೆ ಹೆದರಿ ಸ್ಥಳದಿಂದ ಓಡಿದ ಚಿರತೆ: ವಿಡಿಯೋ ನೋಡಿ

    ಮುಂಬೈ: ಸಾಮಾನ್ಯವಾಗಿ ಚಿರತೆಗಳು ನಾಯಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತವೆ. ಆದರೆ ಮಹಾರಾಷ್ಟ್ರದಲ್ಲಿ ಮೂರು ನಾಯಿಗಳು ಚಿರತೆ ಮೇಲೆ ದಾಳಿ ನಡೆಸಿ ಅದನ್ನು ಸ್ಥಳದಿಂದ ಓಡಿಸುವಲ್ಲಿ ಯಶಸ್ವಿಯಾಗಿದೆ.

    ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ (ಎಸ್‍ಜಿಎನ್‍ಪಿ) ಸಮೀಪದ ಇರುವ ದಿಂದೋಶಿ ಎಂಬಲ್ಲಿ ಮಂಗಳವಾರ ರಾತ್ರಿ ನಾಯಿಗಳು ಚಿರತೆಯನ್ನು ಓಡಿಸುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಜನವರಿ ಕೊನೆಯ ವಾರ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ಚಿರತೆ ರಸ್ತೆಯನ್ನು ದಾಟುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿತ್ತು. ಆದರೆ ಮನೆ ಹತ್ತಿರ ಇದೂವರೆಗೆ ಬಂದಿರಲಿಲ್ಲ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.

    2014ರ ಡಿಸೆಂಬರ್‍ನಿಂದ ಏಪ್ರಿಲ್ 2015ರ ವರೆಗೆ ವೈಲ್ಡ್ ಲೈಫ್ ಇನ್‍ಸ್ಟಿಟ್ಯೂಟ್ ಜೊತೆ ಎಸ್‍ಜಿಎನ್‍ಪಿ ಅಧ್ಯಯನ ನಡೆಸಿದ್ದು, ಈ ವೇಳೆ 140 ಚದರ. ಕಿ.ಮೀ ವ್ಯಾಪ್ತಿಯಲ್ಲಿ 35 ಚಿರತೆಗಳು ವಿಹರಿಸುತ್ತಿರುವುದು ವಿಚಾರ ಬೆಳಕಿಗೆ ಬಂದಿತ್ತು.

    2012ರಲ್ಲಿ ಚಿರತೆಯೊಂದು ಅಪಾರ್ಟ್‍ಮೆಂಟ್‍ಗೆ ನುಗ್ಗಿ ನಾಯಿಯ ಮೇಲೆ ದಾಳಿ ಮಾಡಿತ್ತು. ಈ ಘಟನೆಯ ಬಳಿಕ ಯಾವೊಂದು ಚಿರತೆ ಈ ಸ್ಥಳಕ್ಕೆ ಬಂದಿಲ್ಲ ಎಂದು ಮತ್ತೊಬ್ಬ ಸ್ಥಳಿಯ ನಿವಾಸಿ ತಿಳಿಸಿದ್ದಾರೆ.

  • ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಪೇಪರ್ ತಂದು ಕೊಡುವುದು, ಕೆಲವೊಂದು ಬಾರಿ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದನ್ನು ನೋಡಿರ್ತೀರ. ಆದ್ರೆ ನಾಯಿಗಳು ಡ್ಯಾನ್ಸ್ ಮಾಡೋದನ್ನು ಕೇವಲ ಸರ್ಕಸ್‍ನಲ್ಲಿ ಮಾತ್ರ ನೋಡಬಹುದು. ಆದ್ರೆ ಇಲ್ಲೊಂದು ಸಾಕುನಾಯಿ ಮಾಲಕಿಯಂತೆಯೇ ಡ್ಯಾನ್ಸ್ ಮಾಡಿ ಗಮನ ಸೆಳೆದಿದೆ.

    ವಾಷಿಂಗ್ಟನ್‍ನ ಬೆಲ್ಲಿಂಗ್‍ಹ್ಯಾಮ್ ನಿವಾಸಿಯಾದ 16 ವರ್ಷದ ಯುವತಿ ಮೇರಿ, ತನ್ನ ಆಸ್ಟ್ರೇಲಿಯನ್ ಶೆಫರ್ಡ್ ತಳಿಯ 2 ವರ್ಷದ ಮುದ್ದು ನಾಯಿಮರಿ ಜೊತೆ ಐರಿಶ್ ಡ್ಯಾನ್ಸ್ ಸ್ಟೆಪ್ ಕಲಿಯುತ್ತಿರುವ ವಿಡಿಯೋವನ್ನ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಗೆಳೆಯರೊಬ್ಬರು ಈ ನಾಯಿಗಾಗಿಯೇ ಕೊರಿಯಾಗ್ರಫಿ ಮಾಡಿದ ಸ್ಟೆಪ್ ಕಲಿಯುತ್ತಿದ್ದೇವೆ ಅಂತ ಮೇರಿ ತನ್ನ ಪೋಸ್ಟ್‍ನಲ್ಲಿ ಹೇಳಿದ್ದಾರೆ.

    ಸೀಕ್ರೆಟ್ ಎಂಬ ಹೆಸರಿನ ಈ ನಾಯಿ ಮಾಲಕಿಯೊಂದಿಗೆ ಯೋಗಾಭ್ಯಾಸ ಕೂಡ ಮಾಡಿರುವ ವೀಡಿಯೋಗಳನ್ನ ಮೇರಿ ಹಂಚಿಕೊಂಡಿದ್ದು ಈಗಾಗಲೇ ಈ ನಾಯಿಗೆ ಇನ್ಸ್ಟಾಗ್ರಾಮ್‍ನಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಸುಮಾರು 65 ಸಾವಿರಕ್ಕೂ ಹೆಚ್ಚು ಮಂದಿ ಮೇರಿಯ ಅಕೌಂಟನ್ನ ಫಾಲೋ ಮಾಡ್ತಿದ್ದಾರೆ.

    ಮೇರಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ನಾಯಿ ಹೇಗೆ ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನಿಟ್ಟು ಡ್ಯಾನ್ಸ್ ಕಲಿಯುತ್ತಿದೆ ಎಂಬುವುದನ್ನು ಗಮನಿಸಬಹುದು. ಈ ವೀಡಿಯೋವನ್ನು ಇದುವರೆಗೆ 17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ವಿಡಿಯೋಗೆ ಸಾಕಷ್ಟು ಜನ ಕಮೆಂಟ್‍ಗಳನ್ನು ಮಾಡಿದ್ದಾರೆ. ಅದರಲ್ಲಿ ಕೆಲವರು ಓ ಮೈ ಗಾಡ್ ನಾಯಿ ಎಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡುತ್ತೆ ಅಂದ್ರೆ ಇನ್ನೂ ಕೆಲವರು ಇದು ನಿಜಕ್ಕೂ ಅದ್ಭುತವಾಗಿದೆ ಅಂತಾ ಹೇಳಿದ್ದಾರೆ.

    https://www.youtube.com/watch?v=ILmfmHevjBk

     

  • ನವದಂಪತಿಯ ಜೊತೆ ಸಪ್ತಪದಿ ತುಳಿದ ನಾಯಿ!

    ನವದಂಪತಿಯ ಜೊತೆ ಸಪ್ತಪದಿ ತುಳಿದ ನಾಯಿ!

    ನವದೆಹಲಿ: ಮದುವೆಯ ವೇಳೆ ಮಾಲಕಿಯ ಜೊತೆ ಸಾಕುನಾಯಿಯೊಂದು ಸಪ್ತಪದಿ ತುಳಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಮದುವೆ ನಡೆದಿತ್ತು. ಒಡತಿ ಮಾನಸಿಗೆ ಮದುವೆ ವೇಳೆಯೂ ತಾನು ಸಾಕಿದ್ದ ಸಾಕುನಾಯಿ ಸುಲ್ತಾನ್ ತನ್ನ ಜೊತೆ ಇರಬೇಕೆಂದು ಬಯಸಿದ್ದರು. ಅದರಂತೆ ಮದುವೆ ವೇಳೆ ಸುಲ್ತಾನ್ ವಿಶೇಷ ಬಟ್ಟೆಗಳಿಂದ ಶೃಂಗರಿಸಿದ್ದರು.

     

    ಬಂದತಹ ಅತಿಥಿಗಳನ್ನು ಸ್ವಾಗತಿಸುತ್ತಿದ್ದ ಈ ಸುಲ್ತಾನ್ ಮದುವೆ ವೇಳೆ ಮಂಟಪವನ್ನು ಏರಿದ್ದ. ಅಷ್ಟೇ ಅಲ್ಲದೇ ಸಪ್ತಪದಿ ತುಳಿಯು ವೇಳೆ ಈ ಸುಲ್ತಾನ್ ವಧು- ವರರನ್ನು ಹಿಂಬಾಲಿಸಿದೆ. ನಾಯಿ ಇವರ ಸುತ್ತುವುದನ್ನು ನೋಡಿ ಅತಿಥಿಗಳು ಆಶ್ಚರ್ಯಗೊಂಡು ನಕ್ಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದೂವರೆಗೂ 3.73 ಲಕ್ಷ ವ್ಯೂ ಕಂಡಿದ್ದು, 1600ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

  • ಹುಚ್ಚು ನಾಯಿ ಕಚ್ಚಿ ಮಕ್ಕಳಿಗೆ ಗಂಭೀರ ಗಾಯ

    ಹುಚ್ಚು ನಾಯಿ ಕಚ್ಚಿ ಮಕ್ಕಳಿಗೆ ಗಂಭೀರ ಗಾಯ

    ರಾಯಚೂರು: ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಹುಚ್ಚುನಾಯಿಯೊಂದು ಇಬ್ಬರು ಮಕ್ಕಳಿಗೆ ಕಡಿದು ಗಂಭೀರ ಗಾಯಗೊಳಿಸಿದೆ.

    6 ವರ್ಷದ ಅಜಯ್ ಮತ್ತು 4 ವರ್ಷದ ಕಾವೇರಿ ಹುಚ್ಚು ನಾಯಿ ಕಡಿತಕ್ಕೊಳಗಾಗಿರುವ ಮಕ್ಕಳು. ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿದ ಹುಚ್ಚುನಾಯಿ ಸಿಕ್ಕಸಿಕ್ಕಲ್ಲಿ ಕಚ್ಚಿ ಗಾಯಗೊಳಿಸಿದೆ. ಅಜಯ್‍ನ ಕುತ್ತಿಗೆ ಭಾಗಕ್ಕೆ ಬಲವಾಗಿದೆ ಕಚ್ಚಿದೆ. ಕಾವೇರಿಯ ತಲೆ ಹಾಗೂ ಮುಖಕ್ಕೆ ಕಚ್ಚಿದ್ದು ಮಕ್ಕಳ ಸ್ಥಿತಿ ಗಂಭೀರವಾಗಿದೆ.

    ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಇಬ್ಬರನ್ನೂ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಹುಚ್ಚುನಾಯಿ ಗ್ರಾಮದ ಸುತ್ತಮುತ್ತ ಇನ್ನೂ ಓಡಾಡಿಕೊಂಡಿದ್ದು ಗ್ರಾಮದ ಜನರು ಭಯಭೀತರಾಗಿದ್ದಾರೆ. ತಕ್ಷಣ ಸಂಬಂಧಪಟ್ಟವರು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

     

  • ಧೋನಿ ಸಾಕುನಾಯಿಗಳು ಬಾಲನ್ನು ಹಾರಿ ಹಿಡಿಯೋದನ್ನು ನೋಡಿ

    ಧೋನಿ ಸಾಕುನಾಯಿಗಳು ಬಾಲನ್ನು ಹಾರಿ ಹಿಡಿಯೋದನ್ನು ನೋಡಿ

    ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದುಗಡೆ ಹೇಗೆ ಬಾಲ್‍ಗಳನ್ನು ಹಾರಿ ಹಿಡಿಯುತ್ತಾರೆ ಎನ್ನುವುದು ನಿಮಗೆ ಗೊತ್ತೆ ಇದೆ. ಈಗ ಇವರ ಸಾಕು ನಾಯಿಗಳು ಸಹ ಬಾಲನ್ನು ಹಾರಿ ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

    ಧೋನಿ ನಮ್ಮ ಸಾಕು ನಾಯಿಗಳಿಗೆ ಬಾಲ್ ಹಿಡಿಯುವ ತರಬೇತಿ ನೀಡಿದ್ದಾರೆ. ನಾಯಿಗಳು ಹಿಡಿಯುತ್ತಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

    https://www.instagram.com/p/BQmf7enjHGd/?taken-by=mahi7781