Tag: dog

  • ತನಗೆ ಬೊಗಳಿತೆಂದು ನಾಯಿ ತಲೆ, ಕುತ್ತಿಗೆ, ದವಡೆಗೆ ಚಾಕುವಿನಿಂದ ಇರಿದ!

    ತನಗೆ ಬೊಗಳಿತೆಂದು ನಾಯಿ ತಲೆ, ಕುತ್ತಿಗೆ, ದವಡೆಗೆ ಚಾಕುವಿನಿಂದ ಇರಿದ!

    ಮೈಸೂರು: ನಾಯಿ ಬೊಗಳಿದರೆ ಜೋರಾಗಿ ಗದರಿಸಿ ಓಡಿಸುವುದನ್ನು ನೋಡಿದ್ದೇವೆ. ಹೆಚ್ಚು ಎಂದರೆ ಕಲ್ಲಲ್ಲಿ ಹೊಡೆದು ಓಡಿಸುವುದನ್ನು ನೋಡಿದ್ದೀರಿ. ಆದರೆ, ನಾಯಿ ಬೊಗಳಿತು ಅಂತಾ ಅದನ್ನು ಹಿಡಿದು ಚಾಕುವಿನಿಂದ ಇರಿಯುವುದನ್ನು ನೋಡಿದ್ದೀರಾ, ಕೇಳಿದ್ದೀರಾ. ಇಂತಹದೊಂದು ವಿಚಿತ್ರ ಪ್ರಕರಣ ಈಗ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಎನ್‍ಆರ್ ಮೊಹಲ್ಲಾದ ನಿವಾಸಿ ಆರೋಕ್ಯಮೇರಿ ಎಂಬವರು ತಮ್ಮ ಮನೆಯಲ್ಲಿ ನಾಯಿ ಸಾಕಿದ್ದಾರೆ. ಮನೆಯ ಮುಂಭಾಗ ಇದ್ದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ನೆರೆ ಮನೆಯ ನಿವಾಸಿ ಜುಲ್ಫಿಕರ್ ಎಂಬ ವ್ಯಕ್ತಿಯನ್ನು ಕಂಡು ನಾಯಿ ಜೋರಾಗಿ ಬೊಗಳಿದೆ. ಇದರಿಂದ, ಕುಪಿತಗೊಂಡ ಜುಲ್ಫಿಕರ್, ನಾಯಿ ಸಾಕಿದ ಮನೆಯವರಿಗೆ ಬೈದಿದ್ದಾನೆ.

    ತಕ್ಷಣ, ಮನೆಯವರು ನಾಯಿಯನ್ನು ಮನೆಯ ಟೆರೇಸ್‍ಗೆ ಕರೆದುಕೊಂಡು ಹೋಗಿ ಜುಲ್ಫಿಕರ್‍ಗೆ ಕ್ಷಮೆ ಕೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಜುಲ್ಫಿಕರ್, ನಂತರ ತನ್ನ ಇಬ್ಬರು ಸ್ನೇಹಿತರ ಜೊತೆ ಬಂದು ಟೆರೇಸ್‍ನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಹಿಡಿದು ತಲೆ, ಕುತ್ತಿಗೆ ಹಾಗೂ ದವಡೆ ಭಾಗಕ್ಕೆ ಚಾಕುವಿನಿಂದ ಇರಿದು ತನ್ನ ಕೋಪ ತೀರಿಸಿಕೊಂಡಿದ್ದಾನೆ.

    ಇದರಿಂದ ಬೇಸರಗೊಂಡ ನಾಯಿ ಮಾಲೀಕ ಆರೋಕ್ಯಮೇರಿ ತನ್ನ ನಾಯಿಗೆ ಚಾಕುವಿನಿಂದ ಇರಿದ ಜುಲ್ಫಿಕರ್ ವಿರುದ್ಧ ಎನ್‍ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಬೆಂಗಳೂರು: ಯುವಕನಿಂದ ಕಳೆದುಹೋದ ಜಾನಿಗಾಗಿ ಹಗಲು ರಾತ್ರಿ ಹುಡುಕಾಟ

    ಬೆಂಗಳೂರು: ಯುವಕನಿಂದ ಕಳೆದುಹೋದ ಜಾನಿಗಾಗಿ ಹಗಲು ರಾತ್ರಿ ಹುಡುಕಾಟ

    ಬೆಂಗಳೂರು: ಯಾರಾದರು ಕಾಣೆಯಾದ್ರೆ ಅವರ ಕುಟುಂಬಸ್ಥರು ಆ ವ್ಯಕ್ತಿಯನ್ನು ರಾತ್ರಿ ಹಗಲು ಎನ್ನದೇ ಹುಡುಕೋದನ್ನು ನೋಡಿದ್ದೀರಿ. ಆದ್ರೆ ಇಲ್ಲೊಬ್ಬ ಯುವಕ ಕಳೆದು ಹೋದ ತನ್ನ ನಾಯಿಗೊಸ್ಕರ ಇಡೀ ರಾತ್ರಿ ಹುಡುಕಾಟ ನಡೆಸ್ತಿದ್ದಾರೆ.

    ಹೌದು. ನಗರದ ನಂದಿನಿಲೇಔಟ್ ನಿವಾಸಿ ಮಹೇಶ್ ಅನ್ನೋರು ನಾಲ್ಕು ವರ್ಷಗಳ ಹಿಂದೆ ಎರಡು ನಾಯಿಗಳನ್ನು ತೆಗೆದುಕೊಂಡು ಬಂದು ಅದಕ್ಕೆ ಜಾನಿ, ಮತ್ತು ಶಾಲು ಅಂತಾ ಹೆಸರಿಟ್ಟಿದ್ರು. ಆದ್ರೆ ಇದೀಗ ಜಾನಿ ಕಳೆದ ನಾಲ್ಕು ದಿನಗಳ ಹಿಂದೆ ಕಳೆದು ಹೋಗಿದೆ. ಇದರಿಂದ ಬೇಸತ್ತ ಕುಟುಂಬ ಚಿಂತೆಯಲ್ಲಿ ಮುಳುಗಿದ್ದು, ಮಹೇಶ್ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡೋಕೆ ಹೋಗಿದ್ದಾರೆ.

    ಆದ್ರೆ ಪೊಲೀಸರು ನಾಯಿ ಇದ್ದಕ್ಕೆ ಲೈಸನ್ಸ್ ಬೇಕು ಇಲ್ಲವಾದ್ರೆ ಕೇಸ್ ತೆಗೆದುಕೊಳ್ಳೋಕೆ ಆಗಲ್ಲ ಅಂತೀದ್ದಾರೆ. ಪರಿಣಾಮ ಮಹೇಶ್ ನಾಯಿ ಫೋಟೋ ಹಿಡಿದು, ಇಡೀ ರಾತ್ರಿ ಜಾನಿ ಜಾನಿ ಅಂತಾ ಹುಡುಕಾಟ ನಡೆಸುತ್ತಿದ್ದಾರೆ.

  • ಚರ್ಚೆಗೆ ಗ್ರಾಸವಾಯ್ತು ಸೈಬೀರಿಯನ್ ಹಸ್ಕಿ ನಾಯಿಯ ಈ ವೈರಲ್ ಫೋಟೋ

    ಚರ್ಚೆಗೆ ಗ್ರಾಸವಾಯ್ತು ಸೈಬೀರಿಯನ್ ಹಸ್ಕಿ ನಾಯಿಯ ಈ ವೈರಲ್ ಫೋಟೋ

    ಮೈಮೇಲಿನ ಕೂದಲನ್ನ ಶೇವ್ ಮಾಡಲಾದ ಸೈಬೀರಿಯನ್ ಹಸ್ಕಿ ನಾಯಿಯ ಫೋಟೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಾಯಿಯ ಕೂದಲು ತೆಗೆದಿರುವುದಕ್ಕೆ ಟ್ವಿಟ್ಟರ್‍ನಲ್ಲಿ ಈಗ ಪರ ವಿರೋಧ ಚರ್ಚೆ ಎದ್ದಿದೆ.

    ನಾಯಿಯ ತಲೆ ಭಾಗವನ್ನ ಹೊರತುಪಡಿಸಿ ಮೈ ಮೇಲಿನ ಕೂದಲನ್ನ ಶೇವ್ ಮಾಡಲಾಗಿದ್ದು ಇದನ್ನ ಒಮೊನಾಕಾಮಿ ಎಂಬ ಟ್ವಿಟ್ಟರ್ ಖಾತೆಯಲ್ಲಿ ಜೂನ್ 8 ರಂದು ಹಂಚಿಕೊಳ್ಳಲಾಗಿದೆ. ಈ ಫೋಟೋಗೆ ಈಗಾಗಲೇ 73 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದ್ದು, 32 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    ಫೋಟೋ ನೋಡಿ ಕೆಲವರು ಇದು ಕ್ಯೂಟ್ ಆಗಿದೆ ಅಂದ್ರೆ ಇನ್ನೂ ಕೆಲವರು ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ನಾಯಿಯ ಕೂದಲನ್ನ ಈ ರೀತಿ ಶೇವ್ ಮಾಡಿದ್ರೆ ಅದರ ಕೂದಲ ಬೆಳವಣಿಗೆ ಕುಂಠಿತವಾಗುತ್ತದೆ. ನಾಯಿಗೆ ಕಾಯಿಲೆ ಬರಬಹುದು ಎಂದು ಇನ್ನೂ ಕೆಲವರು ವಾದಿಸಿದ್ದಾರೆ.

    https://twitter.com/OmonaKami/status/872634620692582403?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fviral-pic-of-shaved-husky-prompts-debate-on-twitter-1711257

    https://twitter.com/tedgeoghegan/status/873045137479290880?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fviral-pic-of-shaved-husky-prompts-debate-on-twitter-1711257

    https://twitter.com/kellyleighi/status/872821590873874433?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fviral-pic-of-shaved-husky-prompts-debate-on-twitter-1711257

  • ನಾಯಿ ದಾಳಿಯಿಂದ ಗಂಭೀರ ಗಾಯಗೊಂಡ ಕೋತಿಯ ಮನಕಲಕುವ ವಿಡಿಯೋ ನೋಡಿ

    ನಾಯಿ ದಾಳಿಯಿಂದ ಗಂಭೀರ ಗಾಯಗೊಂಡ ಕೋತಿಯ ಮನಕಲಕುವ ವಿಡಿಯೋ ನೋಡಿ

    ಬೀದರ್: ನಾಯಿಗಳ ದಾಳಿಗೊಳಗಾಗಿ ರಕ್ತದ ಮಡುವಿನಲ್ಲಿ ಕೋತಿಯೊಂದು ಒದ್ದಾಡುತ್ತಿರೋ ಮನಕಲಕುವ ಘಟನೆಯೊಂದು ಬೀದರ್ ನಗರದ ಸಾಯಿ ದೇವಸ್ಥಾನದ ಬಳಿ ನಡೆದಿದೆ.

    ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶ್ವಾನಗಳ ದಾಳಿಗೆ ಸಿಲುಕಿ ಕೋತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ದೃಶ್ಯ ನೆರೆದವರ ಕಣ್ಣಂಚಲ್ಲಿ ನೀರು ತರಿಸಿದೆ. ಕೋತಿ ತನ್ನ ಪ್ರಾಣ
    ಸಂಕಟದಿಂದ ಒದ್ದಾಡುತ್ತಿರೋ ಈ ದೃಶ್ಯವನ್ನು ಸ್ಥಳೀಯರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಬೀದರ್ ನಗರದಲ್ಲಿ ಬೀದಿ ಶ್ವಾನಗಳ ಕಾಟ ವಿಪರೀತವಾಗಿದ್ದು, ಇಂದು 8 ರಿಂದ 10 ಶ್ವಾನಗಳು ಗುಂಪೊಂದು ಕೋತಿ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ. ಗಂಭೀರವಾಗಿ ಗಾಯಗೊಂಡ ಕೋತಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿತ್ತು. ಹಲವು ತಿಂಗಳುಗಳಿಂದ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಹಲವು ಬಾರಿ ಹಸುಗೂಸುಗಳ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದವು. ಇಂತಹ ಘಟನೆ ನಡೆದಿದ್ರೂ ನಗರಸಭೆ ಅಧಿಕಾರಿಗಳು ಮಾತ್ರ ಎಚ್ಚರಗೊಂಡಿಲ್ಲಾ ಅನಿಸುತ್ತೆ. ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸ್ಥಳೀಯರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಶು ಇಲಾಖೆಯ ಅಧಿಕಾರಿಗಳಿಗೆ ಹಲವು ಗಂಟೆಗಳಿಂದ ಸ್ಥಳೀಯರು ಫೋನ್ ಮಾಡಿದ್ರು ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೆ ಬೇಜಾಬ್ದಾರಿತನ ವರ್ತಿಸಿದ್ದಾರೆ. ಇದರಿಂದ ಮಾನವೀಯತೆ ಇಲ್ಲದ ಅಧಿಕಾರಿಗಳ ವಿರುದ್ಧವೂ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=3qiWAXpVnVc

  • ಬೀದಿನಾಯಿ ಕೊಂದವರ ವಿರುದ್ಧ ಎಫ್‍ಐಆರ್!

    ಬೀದಿನಾಯಿ ಕೊಂದವರ ವಿರುದ್ಧ ಎಫ್‍ಐಆರ್!

    ಬೆಂಗಳೂರು: ಬೀದಿನಾಯಿನ್ನು ಕೊಂದ ಇಬ್ಬರು ದುಷ್ಕರ್ಮಿಗಳ ವಿರುದ್ಧ ಪ್ರಾಣಿಪ್ರಿಯರೊಬ್ಬರು ದೂರು ದಾಖಲಿಸಿದ್ದಾರೆ.

    ವರ್ತೂರು ರಸ್ತೆಯ ದೊಮ್ಮಸಂದ್ರದಲ್ಲಿ ಇಬ್ಬರು ದುಷ್ಕರ್ಮಿಗಳು ಮೇ 26ರಂದು ಬೀದಿನಾಯಿಯನ್ನು ಅಮಾನವೀಯವಾಗಿ ಕೊಂದು ರಸ್ತೆ ಪಕ್ಕದ ಜಮೀನಿನಲ್ಲಿ ಎಸೆಯುತ್ತಿದ್ದರು. ಈ ವೇಳೆ ಪ್ರತ್ಯಕ್ಷದರ್ಶಿ ಹರೀಶ್ ಕೆ.ಬಿ. ಇದನ್ನು ಪ್ರಶ್ನಿಸಿದಾಗ ಸರಿಯಾದ ಉತ್ತರ ಕೊಡದೆ ಕಾರಿನಲ್ಲಿ ಪರಾರಿಯಾಗಿದ್ದರು.

    ಇದೀಗ ಹರೀಶ್ ಆರೋಪಿಗಳ ಕಾರ್ ನಂಬರ್‍ನೊಂದಿಗೆ ದೂರು ದಾಖಲಿಸಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 429 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ.

    ಸದ್ಯ ಬೀದಿ ನಾಯಿ ಕೊಂದ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಈ ಕಾರ್ ಶೋ ರೂಮ್‍ನಲ್ಲಿ ಟೈ, ಸೂಟು ಹಾಕಿದ ನಾಯಿಯೇ ಸೇಲ್ಸ್ ಮನ್

    ಈ ಕಾರ್ ಶೋ ರೂಮ್‍ನಲ್ಲಿ ಟೈ, ಸೂಟು ಹಾಕಿದ ನಾಯಿಯೇ ಸೇಲ್ಸ್ ಮನ್

    ಸೂಟು, ಬೂಟು, ಟೈ ಧರಿಸಿ ಶೋರೂಮ್‍ಗಳಲ್ಲಿ ಮನುಷ್ಯರು ಕಾರು ಮಾರಾಟ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ನಾಯಿ ಸೂಟು, ಟೈ ಧರಿಸಿ ಕಾರ್‍ಶೋರೂಮಿನ ಪ್ರಮೋಷನಲ್ ವಿಡಿಯೋದಲ್ಲಿ ಸೇಲ್ಸ್ ಮನ್ ಆಗಿ ಕಾಣಿಸಿಕೊಂಡಿದ್ದು, ಈಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

    ಗಿಲ್ಡಾ ಅಲಿಯಾಸ್ ಬ್ರೂಸ್ ಗ್ರಿಫಿನ್ ಹೆಸರಿನ ನಾಲ್ಕು ವರ್ಷದ ನಾಯಿ ಇದೀಗ ಯೂಟ್ಯೂಬ್ ವಿಡಿಯೋದ ಸ್ಟಾರ್ ಆಗಿದೆ. ನನಗೆ ಓದಲು ಬರಲ್ಲ, ಹೀಗಾಗಿ ನಮ್ಮ ದರಗಳು ಸಿಕ್ಕಾಪಟ್ಟೆ ಕಡಿಮೆ ಅಂತ ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಾಗಿದ್ದು, ಯೂಟ್ಯೂಬ್‍ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಹಿಟ್ ಆಗಿದೆ.

    https://www.instagram.com/p/BSrhqIrhzGe/

    ಹೇ ರಿಲ್ಯಾಕ್ಸ್ ಪ್ಲೀಸ್…. ಬ್ರೂಸ್ ಗ್ರಿಫಿನ್ ಮೋಟಾರ್ ಒಂದು ಕಾಲ್ಪನಿಕ ಶೋರೂಮ್ ಆಗಿದ್ದು ಗಿಲ್ಡಾ ಇಲ್ಲಿ ನಿಜವಾಗಿಯೂ ಸೇಲ್ಸ್ ಮನ್ ಅಲ್ಲ. ಇದರ ಮಾಲಿಕರು ತಾವು ತಂದ ಮಕ್ಕಳ ಸೈಜಿನ ಸೂಟ್ ಹಾಗೂ ಟೈ ಅನ್ನು ನಾಯಿಗೆ ಹಾಕಿ ಅದನ್ನ ಅನೇಕ ಕಾಲ್ಪನಿಕ ಪಾತ್ರಗಳಲ್ಲಿ ತೋರಿಸಿದ್ದಾರೆ.

    ಇನ್ನು ನಾಯಿ ಸೂಟ್ ಹಾಕಿರೋ ಫೋಟೋವನ್ನ ಅನೇಕ ಜನ ಫೋಟೋಶಾಪ್ ಮಾಡಲ ಕೂಡ ಬಳಸಿಕೊಂಡಿದ್ದಾರೆ.

     

    https://www.instagram.com/p/BUP_O5mhVWW/?taken-by=mister_griff

    https://www.instagram.com/p/BUNPPMPBs7v/?taken-by=mister_griff

    https://www.instagram.com/p/BT96b92hLLJ/?taken-by=mister_griff

    https://www.instagram.com/p/BUAEhykBlJc/?taken-by=mister_griff

    https://www.instagram.com/p/BUSgYsQh-n9/?taken-by=mister_griff

    https://www.instagram.com/p/BUU2Y8LhP7B/?taken-by=mister_griff

    https://www.instagram.com/p/BUVYU9uBCC9/?taken-by=mister_griff

    https://www.instagram.com/p/BUXj9pHBCsl/?taken-by=mister_griff

  • ಬಾಲಕಿಯನ್ನು ಕಚ್ಚಿದ್ದ ನಾಯಿಗೆ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆ

    ಬಾಲಕಿಯನ್ನು ಕಚ್ಚಿದ್ದ ನಾಯಿಗೆ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆ

    ಲಾಹೋರ್: ಭಾರತದ ಪ್ರಜೆ ಕುಲಭೂಷಣ್ ಜಾಧವ್‍ಗೆ ಗಲ್ಲು ಶಿಕ್ಷೆ ನೀಡಿದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಈ ನಡುವೆ ನಾಯಿಯೊಂದಕ್ಕೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಪಾಕಿಸ್ತಾನ ವಿಶ್ವದಾದ್ಯಂತ ಸುದ್ದಿಯಲ್ಲಿದೆ.

    ಆಗಿದ್ದು ಇಷ್ಟೇ, ಪಂಜಾಬ್ ಪ್ರಾಂತ್ಯದಲ್ಲಿ ನಾಯಿಯೊಂದು ಬಾಲಕಿಗೆ ಕಚ್ಚಿತ್ತು. ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ನಾಯಿಯ ವಿರುದ್ಧ ದೂರು ನೀಡಿದ್ದರು. ವಿಚಾರಣೆ ನಡೆಸಿದ ಸಹಾಯ ಪೊಲೀಸ್ ಆಯುಕ್ತ ಸಲೀಂ, ಬಾಲಕಿಯನ್ನು ನಾಯಿ ಗಾಯಗೊಳಿಸಿದ ಕಾರಣ ಅದನ್ನು ಹತ್ಯೆ ಮಾಡಲೇಬೇಕು ಎಂದು ಹೇಳಿ ಗಲ್ಲು ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

    ನಾಯಿ ಈಗಾಗಲೇ ಒಂದು ವಾರಗಳ ಕಾಲ ಜೈಲುಶಿಕ್ಷೆಯನ್ನು ಅನುಭವಿಸಿದೆ. ಈಗ ಸಹಾಯಕ ಕಮೀಷನರ್ ಅವರ ತೀರ್ಪನ್ನು ಪ್ರಶ್ನಿಸಿ, ಹೆಚ್ಚುವರಿ ಕಮೀಷನರ್ ಅವರನ್ನು ಭೇಟಿಯಾಗಲಿದ್ದೇನೆ ಎಂದು ನಾಯಿ ಮಾಲೀಕ ಹೇಳಿದ್ದಾರೆ ಎಂದು ಜಿಯೋ ಟಿವಿ ಸುದ್ದಿ ಪ್ರಸಾರ ಮಾಡಿದೆ.

    ಗಲ್ಲು ಶಿಕ್ಷೆಯಿಂದ ನನ್ನ ಮುದ್ದಿನ ನಾಯಿಯನ್ನು ಪಾರು ಮಾಡಲು ನಾನು ಎಲ್ಲ ಕೋರ್ಟ್ ಗಳ ಮೆಟ್ಟಿಲೇರಲು ಸಿದ್ಧನಿದ್ದೇನೆ ಎಂದು ನಾಯಿಯ ಮಾಲೀಕ ಜಮೀಲ್ ತಿಳಿಸಿದ್ದಾರೆ.

    ಇದನ್ನೂ ಓದಿ: ಜಾಗತಿಕ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಕಪಾಳ ಮೋಕ್ಷವಾದ ಕಥೆಯನ್ನು ಓದಿ

  • ಉಡುಪಿ ಬಾವಿಯಲ್ಲಿ ಬಿದ್ದ ಕರಿ ಚಿರತೆ ಏಣಿ ಹತ್ತಿಕೊಂಡು ಮೇಲೆ ಬಂತು ವಿಡಿಯೋ ನೋಡಿ

    ಉಡುಪಿ ಬಾವಿಯಲ್ಲಿ ಬಿದ್ದ ಕರಿ ಚಿರತೆ ಏಣಿ ಹತ್ತಿಕೊಂಡು ಮೇಲೆ ಬಂತು ವಿಡಿಯೋ ನೋಡಿ

    ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಕರಿ ಚಿರತೆಯೊಂದು ನಾಯಿಯನ್ನು ಬೆನ್ನಟ್ಟಿ ಬಂದು ದಾರಿ ತಿಳಿಯದೇ ಬಾವಿಯಲ್ಲಿ ಬದ್ದಿದೆ.

    ಹಿರ್ಗಾನದ ರಾಜಾರಾಮ್ ಕಡಂಬ ಎಂಬವರ ಮನೆಯ ಬಾವಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಯನ್ನು ಬೆನ್ನತ್ತಿ ಬಂದಿದ್ದ ಕರಿ ಚಿರತೆ ನಾಯಿಯ ಜೊತೆಗೆ ಭಾರೀ ಆಳದ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದ ರಭಸಕ್ಕೆ ನಾಯಿ ಸತ್ತಿದೆ.

    ಚಿರತೆ ನೀರಿಗೆ ಬಿದ್ದು ಒದ್ದಾಡುತ್ತಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಬಾವಿಯ ಮೇಲೆ ಬೋನನ್ನು ಅಳವಡಿಸಿದ್ದಾರೆ. ಬಾವಿಗೆ ಏಣಿಯನ್ನು ಇಳಿಯಬಿಡಲಾಯ್ತು. ಏಣಿಯ ಮೂಲಕ ಅಪರೂಪದ ಕರಿ ಚಿರತೆಯನ್ನು ಮೇಲಕ್ಕೆತ್ತಲಾಯ್ತು.

    ಸ್ವತಃ ಚಿರತೆಯೇ ಏಣಿಯಲ್ಲಿ ಏರಿಕೊಂಡು ಬಂದಿದ್ದು ವಿಶೇಷವಾಗಿತ್ತು. ಏಣಿಯ ತುದಿಗೆ ಬೋನನ್ನು ಅರಣ್ಯಾಧಿಕಾರಿಗಳು ಅಳವಡಿಸಿದ್ದರು. ಏಣಿಯೇರಿ ಬಂದ ಚಿರತೆ ಸೀದಾ ಬೋನೊಳಗೆ ಬಿದ್ದಿದೆ. ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕರಿ ಚಿರತೆಯನ್ನು ರಕ್ಷಿಸಿದ್ದಾರೆ.

    ಬಾವಿಗೆ ಬಿದ್ದ ರಭಸಕ್ಕೆ ಚಿರತೆಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಚಿರತೆ ಸಂಪೂರ್ಣವಾಗಿ ಗುಣಮುಖವಾದ ನಂತರ ಪಶ್ಚಿಮ ಘಟ್ಟಕ್ಕೆ ಸುರಕ್ಷಿತವಾಗಿ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

    ಅಪರೂಪದ ಕರಿ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಮೂರು ವರ್ಷದ ಹಿಂದೆ ಮಣಿಪಾಲದಲ್ಲಿ ಕರಿಚಿರತೆ ಕಾಣಿಸಿಕೊಂಡಿತ್ತು. ಇದೀಗ ಕಾರ್ಕಳದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದೆ.

    https://youtu.be/8jb4PBan1-A

     

  • ವಿಡಿಯೋ: 3 ವರ್ಷದ ಬಾಲಕನನ್ನ ಕಚ್ಚಿ ರಸ್ತೆಯಲ್ಲಿ ಎಳೆದಾಡಿತು ನಾಯಿ

    ವಿಡಿಯೋ: 3 ವರ್ಷದ ಬಾಲಕನನ್ನ ಕಚ್ಚಿ ರಸ್ತೆಯಲ್ಲಿ ಎಳೆದಾಡಿತು ನಾಯಿ

    ನ್ಯೂಯಾರ್ಕ್: ನಾಯಿಯೊಂದು 3 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ ಘಟನೆ ನ್ಯೂಯಾರ್ಕ್‍ನಲ್ಲಿ ನಡೆದಿದ್ದು ಇದೀಗ ಇದರ ವಿಡಿಯೋ ವೈರಲ್ ಆಗಿದೆ.

    ಇಲ್ಲಿನ ರಾಕ್‍ಲ್ಯಾಂಡ್ ಕೌಂಟಿಯ ಸ್ಪ್ರಿಂಗ್ ವ್ಯಾಲಿ ನಿವಾಸದ ಹೊರಗೆ 3 ವರ್ಷದ ಬಾಲಕ ತನ್ನ ಗೆಳೆಯರೊಂದಿಗೆ ಆಟವಾಡ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಕಪ್ಪು ಬಣ್ಣದ ಪೀಟ್‍ಬುಲ್ ನಾಯಿಯೊಂದು ಬಾಲಕನ ಮೇಲೆ ದಾಳಿ ಮಾಡಿದೆ. ಬಾಲಕನನ್ನು ರಸ್ತೆಯಲ್ಲೇ ಕಚ್ಚಿ ಎಳೆದಾಡಿದೆ. ಬಾಲಕ ನಾಯಿಯಿಂದ ತಪ್ಪಿಸಿಕೊಂಡು ತೆವಳಿಕೊಂಡೇ ಹೋಗಲು ಯತ್ನಿಸಿದ್ರೂ ಮತ್ತೊಮ್ಮೆ ಅದು ಆತನ ಮೇಲೆ ದಾಳಿ ಮಾಡುತ್ತದೆ. ಸ್ಥಳದಲ್ಲಿದ್ದವರು ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

    ಕೊನೆಗೆ ಕೆಲವರು ಬಂದು ನಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬಾಲಕನನ್ನು ರಕ್ಷಿಸಿದ್ದಾರೆ. ನಾಯಿ ದಾಳಿಯಿಂದ ಬಾಲಕನ ಕುತ್ತಿಗೆ ಹಾಗು ಕೆನ್ನೆಯ ಮೇಲೆ ಗಾಯಗಳಾಗಿವೆ.

    ನಾಯಿಯ ಮಾಲೀಕ ಅದರ ಕುತ್ತಿಗೆಗೆ ಬೆಲ್ಟ್ ಹಾಕದೆ ಕಳೆದ ಹಲವು ವಾರಗಳಿಂದ ಹಾಗೇ ಬಿಟ್ಟಿದ್ದಾರೆ. ಈ ಬಗ್ಗೆ ಸ್ಪ್ರಿಂಗ್ ವ್ಯಾಲಿ ಪೊಲೀಸರಿಗೆ ಅನೇಕ ಬಾರಿ ಮಾಹಿತಿ ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ಕೌನ್ಸಿಲ್ ಹೇಳಿರುವುದಾಗಿ ವರದಿಯಾಗಿದೆ.

    https://www.youtube.com/watch?v=sLZG61vHfac

  • ನಾಯಿಗಿಂತ ಕಡಿಮೆಯಿಲ್ಲ ಎಂಬಂತೆ ಮನೆ ಕಾಯುತ್ತೆ ಈ ಹುಂಜಗಳು!

    ನಾಯಿಗಿಂತ ಕಡಿಮೆಯಿಲ್ಲ ಎಂಬಂತೆ ಮನೆ ಕಾಯುತ್ತೆ ಈ ಹುಂಜಗಳು!

    ಬೆಂಗಳೂರು: ಸಾಕು ಪ್ರಾಣಿ ಅಂದ್ರೆ ಥಟ್ ಅಂತಾ ನೆನಪಾಗೋದು ಮುದ್ದಾದ ನಾಯಿಗಳು. ಆದರೆ ಇಲ್ಲೊಬ್ರು ತಮ್ಮ ಮನೆಯಲ್ಲಿ ನಾಯಿಗಿಂತ ಏನೂ ಕಮ್ಮಿ ಇಲ್ಲ ಅನ್ನೋ ಹಾಗೆ ಹುಂಜಗಳನ್ನ ಸಾಕಿದ್ದಾರೆ.

    ಹೌದು. ಬಸವೇಶ್ವರ ನಗರದ ನಿವಾಸಿ ರೇಖಾ ಅವರು ತಮ್ಮ ಮನೆಯಲ್ಲಿ ಹುಂಜಗಳನ್ನು ಸಾಕಿದ್ದಾರೆ. ಬಾಲ್ ಬಿಸಾಕಿದ್ರೆ ಹೇಗೆ ನಾಯಿ ಅದನ್ನ ಹಿಡಿಯುತ್ತೋ ಹಾಗೆಯೇ ಈ ಹುಂಜಗಳು ಚೆಂಡನ್ನು ಹಿಡಿದು ತರುತ್ತವೆ. ಈ ಹುಂಜಗಳ ಮತ್ತೊಂದು ವಿಶೇಷವೆಂದ್ರೆ ಮನೆಯ ಗೇಟ್ ಸದ್ದಾದ್ರೆ ಕೂಗಿ, ಯಾರೋ ಬಂದಿದ್ದಾರೆ ಅನ್ನೋದನ್ನ ಮನೆಯವ್ರಿಗೆ ತಿಳಿಸುತ್ತವೆ. ಜೊತೆಗೆ ಮನೆಯವರು ಊಟ ತಿನ್ನಿಸಿದ್ರೆ ಮಾತ್ರ ಇವುಗಳು ತಿನ್ನುವುದು.

    ಈ ಹುಂಜಗಳ ಜೊತೆ ಮನೆ ಮಕ್ಕಳೆಲ್ಲಾ ಸೇರಿ ಆಟವಾಡುತ್ತಾರೆ. ಈ ಮನೆಯ ಮಕ್ಕಳಿಗೆ ಹುಂಜಗಳ ಬೆಸ್ಟ್ ಫ್ರೆಂಡ್. ರೇಖಾ ಅವರು ಒಂದು ವರ್ಷದ ಹಿಂದೆ ಮಕ್ಕಳ ಬಲವಂತಕ್ಕೆ ಹುಂಜಗಳನ್ನ ತಂದಿದ್ದರು. ಹೆಚ್ಚು ದಿನ ಬದುಕಲ್ಲಾ ಅಂತಾ ತಿಳಿದಿದ್ದ ಹುಂಜಗಳು ಈಗ ಮನೆಯ ಸದಸ್ಯರಾಗಿವೆ.