Tag: dog

  • ನಾಯಿಗೆ ಡಿಕ್ಕಿ ಆಗೋದನ್ನು ತಪ್ಪಿಸಲು ಹೋಗಿ ಟಂಟಂ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ

    ನಾಯಿಗೆ ಡಿಕ್ಕಿ ಆಗೋದನ್ನು ತಪ್ಪಿಸಲು ಹೋಗಿ ಟಂಟಂ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ

    ರಾಯಚೂರು: ನಾಯಿಗೆ ಡಿಕ್ಕಿ ಆಗೋದನ್ನು ತಪ್ಪಿಸಲು ಹೋಗಿ ಟಂಟಂ ವೊಂದು ಪಲ್ಟಿಯಾಗಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಾಳ ಕ್ರಾಸ್ ಹತ್ತಿರ ನಡೆದಿದೆ.

    ಗಾಯಾಳುಗಳಾದ ಹನುಮಂತ, ಲಕ್ಷ್ಮವ್ವ ಸ್ಥಿತಿ ಗಂಭೀರವಾಗಿದ್ದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಮೂವರು ಗಾಯಾಳುಗಳಿಗೆ ಮುದಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಆಶಿಹಾಳ ತಾಂಡದಿಂದ ಮುದಗಲ್ ಗೆ ಬರುತ್ತಿದ್ದ ಟಂಟಂಗೆ ನಾಯಿ ಅಡ್ಡ ಬಂದಿದೆ. ಹೀಗಾಗಿ ನಾಯಿಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ. ಈ ವೇಳೆ ನಿಯಯಂತ್ರಣ ಕಳೆದುಕೊಂಡ ಟಂಟಂ ಪಲ್ಟಿ ಹೊಡೆದಿದೆ. ಈ ಬಗ್ಗೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವ್ಯಕ್ತಿಯ ರುಂಡ, ಗುಪ್ತಾಂಗ ಕತ್ತರಿಸಿ ಕೊಲೆ: ಕೇಸ್ ಬೇಧಿಸಿದ ಬುದ್ಧಿವಂತ ಶ್ವಾನ ಜಿಮ್ಮಿ

    ವ್ಯಕ್ತಿಯ ರುಂಡ, ಗುಪ್ತಾಂಗ ಕತ್ತರಿಸಿ ಕೊಲೆ: ಕೇಸ್ ಬೇಧಿಸಿದ ಬುದ್ಧಿವಂತ ಶ್ವಾನ ಜಿಮ್ಮಿ

    ಬೆಂಗಳೂರು: ಇತ್ತೀಚೆಗಷ್ಟೇ ನಗರದಲ್ಲಿ ರುಂಡ ಮತ್ತು ಗುಪ್ತಾಂಗವನ್ನು ಕತ್ತರಿಸಿ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಶ್ವಾನ ಜಿಮ್ಮಿ ಪತ್ತೆಹಚ್ಚಿದ್ದು, ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

    ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು. ಒಡಿಶಾ ಮೂಲದ ಗಾಂಧಿ ಜೆರಾಯ್ ಮತ್ತು ಮಧು ಜೆರಾಯ್ ಬಂಧಿತರು.

    ಏನಿದು ಘಟನೆ?: ಇದೇ ತಿಂಗಳ 11 ರಂದು ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೋಗೂರಿನ ನೈಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿತ್ತು. ಕೊಲೆಯ ಬಳಿಕ ದುಷ್ಕರ್ಮಿಗಳು ಮೃತ ವ್ಯಕ್ತಿಯ ರುಂಡ ಮತ್ತು ಗುಪ್ತಾಂಗವನ್ನ ಕತ್ತರಿಸಿಕೊಂಡು ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು, ಇದೀಗ ಸ್ಥಳಕ್ಕೆ ಬಂದ ಶ್ವಾನ ಜಿಮ್ಮಿ ಸಹಾಯದಿಂದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಶ್ವಾನ ಪತ್ತೆ ಹಚ್ಚಿದ್ದು ಹೇಗೆ?: ಆರೋಪಿಗಳು ಮೊದಲು ಕಬ್ಬಿಣದ ರಾಡ್ ನಿಂದ ಮಾಂಜಿಯ ತಲೆಗೆ ಹೊಡೆದಿದ್ರು. ಈ ವೇಳೆ ಹುಲ್ಲಿನೊಳಗೆ ಮರೆಯಾಗಿದ್ದ ತಲೆಯ ಚಿಪ್ಪನ್ನು ಶ್ವಾನ ಜಿಮ್ಮಿ ಪತ್ತೆ ಹಚ್ಚಿದೆ. ಮಾಂಜಿಯ ಕತ್ತು ಕೊಯ್ಯುವ ಮುನ್ನ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ ಅನ್ನೋದು ಕನ್ಫರ್ಮ್ ಆಗುತ್ತಿದ್ದಂತೆಯೇ ಜಿಮ್ಮಿ ಆರೋಪಿಗಳ ಮನೆಯ ಬೀದಿಯನ್ನ ತೋರಿಸಿತ್ತು. ಹೀಗಾಗಿ ಕೊಲೆ ಆರೋಪಿಗಳನ್ನ ಶೀಘ್ರದಲ್ಲಿ ಪತ್ತೆಹಚ್ಚಲು ಜಿಮ್ಮಿ ನೆರವಾಯ್ತು.

    ಕೊಲೆ ರಹಸ್ಯ ಬಯಲು: ಆರೋಪಿಗಳು ಬಿರಾಂಚಿ ಮಾಂಜಿ ಎಂಬವನ ಜೊತೆಯಲ್ಲಿ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ರು. ಮೂವರು ಹೊಸೂರು ರಸ್ತೆಯ ಶಾಹಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ರು. ಆರೋಪಿಗಳ ಸಹೋದರಿಯರಿಬ್ಬರು ಸಹ ಒಡಿಶಾದಿಂದ ಬಂದು ಪಿಜಿಯಲ್ಲಿದ್ದುಕೊಂಡು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ರು. ಕಳೆದ ಜುಲೈನಲ್ಲಿ ಆರೋಪಿಗಳ ಸಹೋದರಿ ಸಾವಿತ್ರಿ ಜೆರಾಯ್ ಹೊಟ್ಟೆ ನೋವು ಅಂತಾ ಒರಿಸ್ಸಾಗೆ ವಾಪಸ್ ಹೋಗಿದ್ದಳು. ಎರಡು ತಿಂಗಳ ನಂತರ ಆಕೆಗೆ ಹೊಟ್ಟೆ ನೋವು ಜಾಸ್ತಿಯಾದಾಗ ಆಸ್ಪತ್ರೆಗೆ ತೋರಿಸಲಾಗಿತ್ತು. ಈ ವೇಳೆ ಮದುವೆಗೂ ಮುಂಚೆಯೇ ಸಾವಿತ್ರಿ ಜೆರಾಯ್ ಗರ್ಭಿಣಿಯಾಗಿರೋದು ತಿಳಿದುಬಂತು.

     

    ಇಡೀ ಊರಿಗೆ ಸುದ್ದಿ ಗೊತ್ತಾಗಿ ಕುಟುಂಬದ ಮಾನ ಮರ್ಯಾದೆ ಹೋಗಿರುತ್ತೆ. ಇದಕ್ಕೆಲ್ಲಾ ಕಾರಣ ಜೊತೆಯಲ್ಲಿದ್ದ ಸ್ನೇಹಿತ ಬಿರಾಂಚಿ ಮಾಂಜಿ ಅಂತ ಆರೋಪಿಗಳಿಗೆ ಗೊತ್ತಾಗುತ್ತದೆ. ಹೀಗಾಗಿ ಒಡಿಶಾ ಆರೋಪಿಗಳ ಸಂಬಂಧಿ ಕಾಶೀರಾಮ್ ಬೆಂಗಳೂರಿಗೆ ಬಂದು ಬಿರಾಂಚಿ ಮಾಂಜಿಯನ್ನ ಕೊಲೆ ಮಾಡಲು ಸ್ಕೆಚ್ ಹಾಕ್ತಾರೆ. ಅದರಂತೆ ಇದೇ ತಿಂಗಳ 11ರಂದು ಎಣ್ಣೆ ಹೊಡಿಯೋಕೆ ಅಂತಾ ಮಾಂಜಿಯನ್ನ ಹೊರಗೆ ಕರೆದುಕೊಂಡು ಹೋಗ್ತಾರೆ. ಬಾರ್ ನಲ್ಲಿ ಸ್ವಲ್ಪ ಹೊತ್ತು ಕುಡಿದ ನಂತರ ಬಯಲಿನಲ್ಲಿ ಕುಡಿಯೋಣವೆಂದು ಮಾಂಜಿಯನ್ನ ಕರೆದೊಯ್ತಾರೆ. ಈ ವೇಳೆ ಮಾಂಜಿ ಕುಡಿಯೋದಕ್ಕೆ ತಲೆ ಬಗ್ಗಿಸಿದಾಗ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡ್ತಾರೆ. ನಂತರ ಹುಲ್ಲಿನ ಮೇಲೆ ಶವವನ್ನು ಎಳೆದೊಯ್ದು ಕತ್ತು ಕತ್ತರಿಸ್ತಾರೆ. ತಮ್ಮ ಅಕ್ಕನನ್ನು ಗರ್ಭಿಣಿ ಮಾಡಿ ಊರಿನಲ್ಲಿ ಮಾನ ಮರ್ಯಾದೆ ಕಳೆದರು ಅಂತಾ ಮರ್ಮಾಂಗ ಕತ್ತರಿಸಿರುವುದಾಗಿ ತನಿಖೆಯ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

    ಸದ್ಯ ಆರೋಪಿಗಳಿಂದ ಕೊಲೆಯಾದ ಮಾಂಜಿಯ ರುಂಡವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಕಾಶೀರಾಮ್ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.

  • ಹೆಸರಿಗೆ ಖಾಸಗಿ ಬಸ್ ಚಾಲಕ- ಬೀದಿನಾಯಿ, ಕೋತಿಗಳ ಪಾಲಿನ ಅನ್ನದಾತ ಕೋಲಾರದ ಮನೋಹರ್ ಲಾಲ್

    ಹೆಸರಿಗೆ ಖಾಸಗಿ ಬಸ್ ಚಾಲಕ- ಬೀದಿನಾಯಿ, ಕೋತಿಗಳ ಪಾಲಿನ ಅನ್ನದಾತ ಕೋಲಾರದ ಮನೋಹರ್ ಲಾಲ್

    ಕೋಲಾರ: ಬರದ ನಾಡು ಕೋಲಾರ ಜಿಲ್ಲೆಯಲ್ಲಿ ಹನಿ ನೀರಿಗೂ ಪ್ರಾಣಿ, ಪಕ್ಷಿಗಳು ಪರದಾಡುವ ಪರಿಸ್ಥಿತಿ. ಇಂತದ್ರಲ್ಲಿ ಇಲ್ಲೊಬ್ರು ಪ್ರತಿದಿನ ಮುಂಜಾನೆ ನೂರಾರು ನಾಯಿ-ಕೋತಿಗಳಿಗೆ ಹಾಲು, ಬ್ರೆಡ್, ಬಾಳೆ ಹಣ್ಣುಗಳನ್ನ ನೀಡುತ್ತಾ ಪ್ರಾಣಿಗಳ ಆರೈಕೆಯಲ್ಲಿ ತೊಡಗಿದ್ದಾರೆ.

    ಹೌದು. ಕೋಲಾರದ ಕೆಜಿಎಫ್‍ನ ರಾಬರ್ಟ್ ಸನ್ ಪೇಟೆಯ ನಿವಾಸಿ ಮನೋಹರ್ ಲಾಲ್ ವೃತ್ತಿಯಲ್ಲಿ ಖಾಸಗಿ ಬಸ್ ಚಾಲಕ. ಪ್ರವೃತ್ತಿಯಲ್ಲಿ ಪ್ರಾಣಿಪ್ರೇಮಿಯಾಗಿದ್ದಾರೆ. ಬೀದಿನಾಯಿಗಳಿಗೆ ಹಾಗೂ ಕೋತಿಗಳಿಗೆ ಬ್ರೆಡ್, ಬಾಳೆಹಣ್ಣು ನೀಡುತ್ತಿದ್ದಾರೆ.

    ಶ್ವಾನಗಳು ಅಂದ್ರೆ ಇವ್ರಿಗೆ ಎಲ್ಲಿಲ್ಲದ ಪ್ರೀತಿ. ತಾನು ದುಡಿದ ಅರ್ಧ ಹಣವನ್ನ ಮೂಕ ಜೀವಗಳಿಗೆ ಮೀಸಲಿಡ್ತಾರೆ. ನಿತ್ಯ ಬೆಳಗ್ಗೆ ಆಟೋದಲ್ಲಿ ಹಾಲು, ಬಾಳೆಹಣ್ಣು, ಬ್ರೆಡ್‍ಗಳನ್ನ ತುಂಬಿಸಿಕೊಂಡು ನಗರದ ಮೂಲೆ ಮೂಲೆ ಸುತ್ತಿ ನಾಯಿಗಳಿಗೆ ಪ್ರೀತಿಯಿಂದ ನೀಡ್ತಾರೆ. ಕಳೆದ 30 ವರ್ಷಗಳಿಂದ ಮನೋಹರ್ ಲಾಲ್ ಬೀದಿನಾಯಿಗಳ ರಕ್ಷಕನಾಗಿ ಕೆಲಸ ನಿರ್ವಹಿಸ್ತಿದ್ದಾರೆ. ಕೋತಿಗಳಿಗೂ ಆಹಾರ ನೀಡ್ತಾರೆ.

    ಅಲ್ಲದೇ ನಾಯಿಗಳಿಗೆ ರೋಗ ಬಂದ್ರೂ ಇವರೇ ಟ್ರೀಟ್‍ಮೆಂಟ್ ನೀಡ್ತಾರೆ. ಆಹಾರದ ಜೊತೆ ಔಷಧವನ್ನು ನಾಯಿಗಳಿಗೆ ನೀಡ್ತಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸ್ತಾರೆ. ಮನೋಹರ್ ಲಾಲ್ ಅವರ ಕೊನೆಯ ಮಗ ಕೊನೆಯುಸಿರೆಳೆದ ನಂತರ ನಾಯಿ ಮತ್ತು ಕೋತಿಗಳ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದಾರೆ. ಅವುಗಳನ್ನು ಪುಟ್ಟ ಮಕ್ಕಳಂತೆ ನೋಡಿಕೊಳ್ತಿದ್ದಾರೆ.

    ಒಟ್ಟಾರೆ ಮಕ್ಕಳನ್ನೇ ಸಾಕಿ ಸಲಹೋದು ಕಷ್ಟ. ಇಂತಹ ದಿನದಲ್ಲೂ ಬೀದಿನಾಯಿಗಳನ್ನು ಹೆತ್ತಮಕ್ಕಳಂತೆ ಸಾಕ್ತಿರೋ ಮನೋಹರ್ ಲಾಲ್ ಅವರ ಈ ಪ್ರಾಣಿ ಪ್ರೀತಿ ಮೆಚ್ಚುವಂತದ್ದು.

  • ಬೆಂಗಳೂರಿನಲ್ಲಿ ನಾಯಿಗಳಿಂದ ಮಹಿಳೆಯ ಮೇಲೆ ಏಕಾಏಕಿ ದಾಳಿ

    ಬೆಂಗಳೂರಿನಲ್ಲಿ ನಾಯಿಗಳಿಂದ ಮಹಿಳೆಯ ಮೇಲೆ ಏಕಾಏಕಿ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಯಿಗಳ ಹಾವಳಿ ಮತ್ತೆ ಜಾಸ್ತಿಯಾಗಿದೆ. ಬುಧವಾರ ಬೆಳಗ್ಗೆ ಎಂಎಸ್ ರಾಮಯ್ಯ ಆಸ್ಪತ್ರೆಯ ಪಕ್ಕದ ರಸ್ತೆಯಲ್ಲಿ ಮನೆಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಮೇಲೆ ಏಕಾಏಕಿ ದಾಳಿ ಮಾಡಿರುವ ಭಯಾನಕ ದೃಶ್ಯಗಳು ಸಿಸಿಟವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

    ಕಳೆದ ಒಂದು ವಾರದಿಂದ 5 ರಿಂದ 6 ಜನರಿಗೆ ದಾಳಿ ಬೀದಿ ನಾಯಿಗಳು ದಾಳಿ ಮಾಡಿದ್ದು ಈಗ ಮತ್ತೊಮ್ಮೆ ದಾಳಿ ನಡೆದ ಕಾರಣ ಜನರು ಭಯಗೊಂಡಿದ್ದಾರೆ.

    ಪಾಲಿಕೆ ಸದಸ್ಯೆ ಸುಮಂಗಲ ಅವರು ಪತ್ರ ಬರೆದರೂ ಇದುವರೆಗೂ ಬಿಬಿಎಂಪಿ ಅಧಿಕಾರಿಗಳು ಈ ಕಡೆ ತಲೆ ಹಾಕಿಲ್ಲ ಎಂದು ಜನರು ಹೇಳಿದ್ದಾರೆ.

     

     

     

     

  • ಮುದ್ದು ಮಾಡೋಕೂ ಸೈ-ನೀರಲ್ಲಿ ಬಿದ್ದವರ ಎತ್ತೋಕೂ ಸೈ ಈ ನಾಯಿ

    ಮುದ್ದು ಮಾಡೋಕೂ ಸೈ-ನೀರಲ್ಲಿ ಬಿದ್ದವರ ಎತ್ತೋಕೂ ಸೈ ಈ ನಾಯಿ

    ಉಡುಪಿ: ಅಪರಿಚಿತರು ಬಂದ್ರೆ ಎಚ್ಚರಿಸೋದಕ್ಕೆ ನಾಯಿಗಳನ್ನ ಮನೆಗಳಲ್ಲಿ ಸಾಕ್ತೇವೆ. ಇನ್ನು ಕೆಲವರು ಮಕ್ಕಳ ಖುಷಿಗಾಗಿ ನಾಯಿಗಳನ್ನು ಸಾಕುತ್ತಾರೆ. ಅದ್ರೆ ಕೆನಡಾದಲ್ಲಿ ಈ ನಾಯಿಗಳನ್ನು ರಕ್ಷಣೆಗಾಗಿ ಸಾಕಲಾಗುತ್ತಿದೆ. ಆ ಬ್ರೀಡನ್ನು ಕರ್ನಾಟಕದಲ್ಲಿ ಬೆಳೆಸೋ ಉದ್ದೇಶದಿಂದ ಇಬ್ಬರು ಸ್ನೇಹಿತರು ಉಡುಪಿಗೆ ಕೆನಡಾದ ನಾಯಿಗಳನ್ನ ತಂದಿದ್ದಾರೆ.

    ನ್ಯೂ ಫೌಂಡ್‍ಲ್ಯಾಂಡ್ ಎಂಬ ಜಾತಿಯ ನಾಯಿಯನ್ನು ಇದನ್ನ ಬರೀ ಮನೆ ಕಾಯೋದಕ್ಕೆ ಕೆನಡಾದ ಜನ ಬಳಸುತ್ತಿಲ್ಲ. ಮಕ್ಕಳ ಲಾಲನೆ ಪಾಲನೆ ಜೊತೆ ರಕ್ಷಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಕೋಸ್ಟ್ ಗಾರ್ಡ್‍ನ ಸಿಬ್ಬಂದಿ ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆಗೂ ಉಪಯೋಗ ಮಾಡ್ತಾರೆ. ಇದೀಗ ಕೆನಡಾದಿಂದ ಈ ಬ್ರೀಡ್ ಉಡುಪಿಗೆ ಬಂದಿದೆ. ಸಂತೆಕಟ್ಟೆ ನಿವಾಸಿ ಆಲ್ಫ್ರೆಡ್ ನಾಲ್ಕು ನಾಯಿಗಳನ್ನು ಕೊಂಡು ತಂದಿದ್ದಾರೆ.

    ನೋಡೋದಕ್ಕೆ ತುಂಬಾ ಚಂದದ ನಾಯಿ ಇದು. ದೇಹದ ತುಂಬೆಲ್ಲಾ ರೋಮ ಇರೋದ್ರಿಂದ ಎಲ್ಲರಿಗೂ ಇಷ್ಟ ಆಗ್ತದೆ. ಸದ್ಯ ಈ ನಾಯಿಗಳಿಗೆ ರಾಯಲ್ ಕೆನಲ್ ಆಹಾರ ನೀಡುತ್ತಿದ್ದಾರೆ. ದೊಡ್ಡದಾದ ಮೇಲೆ ಚಿಕನ್, ಬಿರಿಯಾನಿ, ಮೊಸರನ್ನ ಮತ್ತು ಮೀನು ಕೊಡುತ್ತಾರೆ. ದೊಡ್ಡ ತಲೆಯ ನಾಯಿ ಇದಾಗಿದ್ದು, ಮುಂದೆ ಬೆಳವಣಿಗೆ ಆದ್ಮೇಲೆ 100 ಕೆಜಿ ತೂಗುತ್ತದೆ. ರಕ್ಷಣೆಗಾಗಿ ಕೆನಡಾದಲ್ಲಿ ಈ ಬ್ರೀಡನ್ನು ಉಪಯೋಗ ಮಾಡ್ತಾರೆ. ಇಂಟರ್ ನೆಟ್‍ನಲ್ಲಿ ನೋಡಿ ಖರೀದಿ ಮಾಡಿದ್ದೇವೆ ಎಂದು ನಾಯಿಯ ಮಾಲೀಕ ಆಲ್ಫ್ರೆಡ್ ಪಬ್ಲಿಕ್ ಟಿವಿಗೆ ಹೇಳಿದರು.

    10 ಅಡಿಯಷ್ಟು ಎತ್ತರ ಬೆಳೆಯೋ ಈ ನಾಯಿ ಸುಮಾರು ನೂರು ಕೆಜಿಯವರೆಗೆ ತೂಗುತ್ತದೆ. ಸ್ವಿಮ್ಮಿಂಗ್ ಎಕ್ಸ್‍ಪರ್ಟ್ ಅಂತ ಹೆಸರು ಗಳಿಸಿರೋ ನ್ಯೂ ಫೌಂಡ್‍ಲ್ಯಾಂಡ್ ಬ್ರೀಡ್‍ನ ಒಂದೂವರೆ ತಿಂಗಳ ಮರಿನಾಯಿ 10 ರಿಂದ 12 ವರ್ಷ ಬದುಕುತ್ತದೆ. ಒಂದು ಲಕ್ಷ ರೂಪಾಯಿ ಕೊಟ್ಟು ಈ ಬ್ರೀಡ್ ನ ಮರಿಯನ್ನ ಖರೀದಿ ಮಾಡಲಾಗಿದೆ. ಬಿಸಿಯ ವಾತಾವರಣಕ್ಕೆ ಸುಸ್ತಾಗುವ ಈ ನಾಯಿಮರಿಗಳಿಗೆ ಎಸಿ, ಫ್ಯಾನ್, ಸ್ವಿಮ್ಮಿಂಗ್ ಅತ್ಯಗತ್ಯ. ತಿಂಗಳಿಗೆ 5 ರಿಂದ 15 ಸಾವಿರ ರೂಪಾಯಿಯವರೆಗೆ ಸಾಕಲು ಖರ್ಚಾಗುತ್ತದೆ.

    ಇಗ್ಲೆಂಡ್‍ನಲ್ಲಿ ಈ ಬ್ರೀಡನ್ನ ಸಾಕುತ್ತಾರೆ. ನನ್ನ ಗೆಳೆಯ ಕಂಪ್ಲೀಟ್ ಬ್ಲ್ಯಾಕ್ ಕಲ್ಲರ್ ಪಪ್ಪಿ ಖರೀದಿ ಮಾಡಿದ್ದಾನೆ. ನಾನು ಲೈಟ್ ಬ್ರೌನಿಶ್ ತೆಗೆದುಕೊಂಡಿದ್ದೇನೆ. ಇಲ್ಲಿನ ವೆದರ್ ತುಂಬಾ ಬಿಸಿ. ಅದಕ್ಕೆ ತಂಪಾದ ವಾತಾವರಣ ಬೇಕು. ಐಸ್‍ನ್ನು ಟಬ್‍ನಲ್ಲಿ ಹಾಕಿಟ್ರೆ ಅದರ ಜೊತೆ ಆಟಾಡುತ್ತೆ. ಬಹಳ ಇಷ್ಟಪಟ್ಟು ಈ ಬ್ರೀಡನ್ನು ಖರೀದಿ ಮಾಡಿರೋದಾಗಿ ಸಂತೆಕಟ್ಟೆಯ ನಿವಾಸಿ ರಂಜಿತ್ ಹೇಳುತ್ತಾರೆ.

    ಕರಾವಳಿ ಕಾವಲು ಪಡೆ ಪೊಲೀಸರು ಈ ಬ್ರೀಡ್‍ನ ನಾಯಿಯನ್ನು ಸಾಕಿದ್ರೆ ಸಮುದ್ರದ ಗಸ್ತಿನ ಸಂದರ್ಭ ಉಪಯೋಗಕ್ಕೆ ಬರುತ್ತಂತೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿದ್ರೆ ಸೆಕ್ಯೂರಿಟಿಗಾಗಿ ನ್ಯೂಫೌಂಡ್ ಲ್ಯಾಂಡ್ ಬಹಳ ಉಪಕಾರಿಯಾಗಬಹುದು.

  • Jani-Joe Movie Contest – ಇದು ಜಾನಿ ಫಿಲ್ಮ್ ಆಫರ್

    Jani-Joe Movie Contest – ಇದು ಜಾನಿ ಫಿಲ್ಮ್ ಆಫರ್

    ಬೆಂಗಳೂರು: ನಾಯಿ ಪ್ರೇಮಿಗಳಿಗೆ ಗುಡ್‍ನ್ಯೂಸ್. ನೀವು ನಿಮ್ಮ ಪೆಟ್ ನಾಯಿಯ ಜೊತೆಗೆ ಕಳೆಯುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಗೆಲ್ಲಬಹುದು.

    ಆಗಸ್ಟ್ 11ರಂದು #Jani ಮೂವಿ ರಿಲೀಸ್ ಆಗಲಿದ್ದು, ಈ ಚಿತ್ರದಲ್ಲಿ ಜೋ ಹೆಸರಿನ ನಾಯಿ ಪ್ರಧಾನ ಪಾತ್ರದಲ್ಲಿ ಮಿಂಚಲಿದೆ. ಚಿತ್ರದ ಕ್ಲೈಮಾಕ್ಸ್ ಸಹ ಈ ನಾಯಿ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನಾಯಿ ಸಾಕೋ ಮಂದಿಗೆ ಚಿತ್ರತಂಡ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ.

    ನಟ ವಿಜಯ ರಾಘವೇಂದ್ರ ಜೊತೆ ಜನನಿ ಮತ್ತು ಮಿಲನ ನಾಗರಾಜ್ ನಾಯಕಿಯರಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಲವ್, ಕಾಮಿಡಿ ಮಾಸ್ ಎಂಟರ್‍ಟೈನ್‍ಮೆಂಟ್ ಬೇಸ್ ಇರುವ ಕಥೆಯಿದೆ. ಕನ್ನಡ ಚಿತ್ರರಂಗದ ಹೆಸರಾಂತ ಛಾಯಗ್ರಾಹಕ ಪಿ.ಕೆ.ಎಚ್.ದಾಸ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯ 25ನೇ ಚಿತ್ರವಾಗಿದ್ದು ಹಾಡುಗಳು ಉತ್ತಮವಾಗಿ ಮೂಡಿಬಂದಿವೆ. ಜಾನಿ ಚಿತ್ರವನ್ನು ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಜೆ ಜಾನಕಿರಾಮ್ ಮತ್ತು ಎಂ.ಅರವಿಂದ್ ಅವರು ನಿರ್ಮಾಣ ಮಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ನಿರ್ದೇಶಕ ಪ್ರಭುದೇವ ಅವರ ತಂದೆ ಮೂಗೂರು ಸುಂದರಂ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.

    ನೀವು ಏನು ಮಾಡಬೇಕು: ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ನೀವು ನಿಮ್ಮ ಪ್ರೀತಿಯ ನಾಯಿ ಜೊತೆ ಇರುವ 2 ನಿಮಿಷದ ಒಳಗಡೆ ಇರುವ ವಿಡಿಯೋವನ್ನು ವಾಟ್ಸಪ್ ಮಾಡಿದರೆ ಅಯ್ತು ಅಷ್ಟೇ. ನಾಯಿ ಹೇಗೆ ನಿಮ್ಮ ಮಾತುಗಳನ್ನು ಕೇಳಿ ಕೆಲಸ ಮಾಡುತ್ತದೋ ಆ ವಿಡಿಯೋ ಸೆರೆ ಹಿಡಿದು ಆಗಸ್ಟ್ 10ರ ಸಂಜೆ 5 ಗಂಟೆಯ ಒಳಗಡೆ ಕಳುಹಿಸಬೇಕು. ಕಳುಹಿಸಿದ ವಿಡಿಯೋ ಪೈಕಿ ಮೂರು ಅತ್ಯುತ್ತಮ ವಿಡಿಯೋಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು. ಅತ್ಯುತ್ತಮ ವಿಡಿಯೋ ಕಳುಹಿಸಿದವರಿಗೆ ಮೂವಿ ನೋಡಲು ಉಚಿತ ಟಿಕೆಟ್ ನೀಡಲಾಗುವುದು ಎಂದು ಚಿತ್ರತಂಡ ಹೇಳಿದೆ.

    ನಗದು ಬಹುಮಾನ ಎಷ್ಟು?
    ಪ್ರಥಮ – 10 ಸಾವಿರ ರೂ., 2 ಉಚಿತ ಟಿಕೆಟ್, ವಿಶೇಷ ಗಿಫ್ಟ್
    ದ್ವಿತೀಯ – 5 ಸಾವಿರ ರೂ., 2 ಉಚಿತ ಟಿಕೆಟ್, ವಿಶೇಷ ಗಿಫ್ಟ್
    ತೃತೀಯ – 3 ಸಾವಿರ ರೂ., 2 ಉಚಿತ ಟಿಕೆಟ್, ವಿಶೇಷ ಗಿಫ್ಟ್

    ವಿಡಿಯೋ ಕಳುಹಿಸಬೇಕಾದ ನಂಬರ್: 80503- 77768

     

  • ಬಂಧಿಯಾಗಿದ್ದ ನಾಯಿ ಹೊರಬರೋಕೆ ಏನು ಮಾಡ್ತು ನೋಡಿ!

    ಬಂಧಿಯಾಗಿದ್ದ ನಾಯಿ ಹೊರಬರೋಕೆ ಏನು ಮಾಡ್ತು ನೋಡಿ!

     

    ಬೀಜಿಂಗ್: ನಾಯಿಗಳ ಕತ್ತಿಗೆ ಚೈನ್ ಅಥವಾ ಹಗ್ಗ ಹಾಕಿ ಕಟ್ಟಿಹಾಕೋದು ಕಾಮನ್. ಕೆಲವೊಮ್ಮೆ ಅವು ಗಟ್ಟಿಯಾಗಿ ಎಳೆದು ಚೈನ್‍ನಿಂದಲೇ ಬಿಡಿಸಿಕೊಳ್ಳೋದನ್ನ ನೋಡಿರ್ತೀವಿ. ಆದ್ರೆ ನಾಯಿಯನ್ನ ಗೇಟ್‍ನೊಳಗೆ ಕೂಡಿಹಾಕಿದ್ರೂ ಅದು ಸುಲಭವಾಗಿ ಅದರಿಂದ ಹೊರಬರೋ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಚೀನಾದ ಶಾಂಕ್ಸಿ ಪ್ರಾಂತ್ಯದ ಲಿನ್ಫೆನ್‍ನಲ್ಲಿ ಈ ವಿಡಿಯೋವನ್ನ ಚಿತ್ರೀಕರಿಸಲಾಗಿದೆ. ಬಂಧಿಯಾಗಿದ್ದ ಮಾಲಿನೋಯಿಸ್ ತಳಿಯ ನಾಯಿಯೊಂದು ಹೊರಗೆ ಬರೋಕೆ ಬೊಗಳುತ್ತಿತ್ತು. ಹಾಗೆ ಗೇಟ್ ಚಿಲಕವನ್ನ ತನ್ನ ಬಾಯಿ ಹಾಗೂ ಮುಂಗಾಲುಗಳಿಂದ ತಳ್ಳುತ್ತಾ ಒದಾಡ್ತಿತ್ತು. ಹಾಗೆ ಮಾಡುತ್ತಿದ್ದಾಗ ಚಿಲಕವನ್ನ ಒಮ್ಮೆ ಮುಂಗಾಲಿನಿಂದ ಮೇಲೆತ್ತಿದೆ.

    ನಂತರ ಸುಲಭವಾಗಿ ಮುಂಗಾಲನ್ನ ಕೈನಂತೆ ಬಳಸಿ ಗೇಟಿನ ಚಿಲಕ ತೆಗೆದು ಹೊರಬರೋದನ್ನ ವಿಡಿಯೋದಲ್ಲಿ ನೋಡಬಹುದು.

    https://www.youtube.com/watch?v=NAXsoGlV0sw

     

  • ಶಾಲೆಯ ಮುಂದೆಯೇ ಮಹಿಳೆ ಮೇಲೆ 5 ನಾಯಿಗಳು ಅಟ್ಯಾಕ್!

    ಶಾಲೆಯ ಮುಂದೆಯೇ ಮಹಿಳೆ ಮೇಲೆ 5 ನಾಯಿಗಳು ಅಟ್ಯಾಕ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು ಇಂದು ಶಾಲೆಯ ಮುಂದೆಯೇ ಮಹಿಳೆ ಮೇಲೆ 5 ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.

    ಕುರುಬರ ಹಳ್ಳಿಯ ಕಾವೇರಿನಗರದ ಸೇಂಟ್ ಮೇರಿಸ್ ಪ್ರೌಢಶಾಲೆ ಬಳಿ ಈ ಘಟನೆ ನಡೆದಿದೆ. ಕುರುಬರ ಹಳ್ಳಿಯ ನಿವಾಸಿ ಪದ್ಮಾ ಎಂಬವರು ಇಂದು ಬೆಳಗ್ಗೆ ಮಗುವನ್ನು ಶಾಲೆಗೆ ಬಿಟ್ಟು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ನಾಯಿಗಳು ದಾಳಿ ನಡೆಸಿವೆ. ಪರಿಣಾಮ ಪದ್ಮಾ ಕಾಲಿಗೆ ಗಾಯಗಳಾಗಿವೆ.

    ಸೇಂಟ್ ಮೇರಿಸ್ ಪ್ರೌಡಶಾಲೆಯ ಮುಂದೆ ಸದಾ ನಾಯಿಗಳ ಹಾವಳಿ ಹೆಚ್ಚಿದ್ದು, ಶಾಲೆ ಮಕ್ಕಳು ಭಯ, ಭೀತಿಯಿಂದ ಓಡಾಡ್ತಾರೆ. ನಾಯಿಗಳ ಹಾವಳಿ ಹಿನ್ನೆಲೆ ಬಿಬಿಎಂಪಿಗೆ ದೂರು ನೀಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತ ಸಾರ್ವಜನಿಕರು ಕಿಡಿಕಾರಿದ್ದಾರೆ.

  • ಜಮೀನಿನಲ್ಲಿ ನಾಯಿಗಳ ದಾಳಿಗೊಳಗಾದ ಜಿಂಕೆ ಸಾವು

    ಜಮೀನಿನಲ್ಲಿ ನಾಯಿಗಳ ದಾಳಿಗೊಳಗಾದ ಜಿಂಕೆ ಸಾವು

    ಹಾವೇರಿ: ಆಹಾರ ಅರಸಿ ಬಂದ ಕೃಷ್ಣಮೃಗವೊಂದು ರೈತರ ಜಮೀನಿನಲ್ಲಿ ನಾಯಿಗಳ ದಾಳಿಗೊಳಗಾಗಿ ದಯಾನೀಯ ಸಾವು ಕಂಡಿದೆ.

    ಚಿಕ್ಕಲಿಂಗದಹಳ್ಳಿ ಗ್ರಾಮದ ಹುಸೇನಸಾಬ್ ನದಾಫ್ ಎಂಬುವರ ಜಮೀನಿನಲ್ಲಿ ಕೃಷ್ಣಮೃಗ ಹೋಗುತಿತ್ತು. ಆ ವೇಳೆ ನಾಲ್ಕು ನಾಯಿಗಳು ದಾಳಿ ನಡೆಸಿ ಸಿಕ್ಕ-ಸಿಕ್ಕಲ್ಲಿ ಕಚ್ಚಿ ಸಂಪೂರ್ಣವಾಗಿ ಗಾಯಗೊಳಿಸಿದ್ದವು.

    ಇದನ್ನು ಕಂಡ ಅಲ್ಲಿಯೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ರೇವಣ್ಣಪ್ಪ ನಾಯಿಗಳನ್ನ ಓಡಿಸಿ ನಿತ್ರಾಣಗೊಂಡಿದ್ದ ಕೃಷ್ಣಮೃಗದ ಜೀವ ಉಳಿಸಲು ಹರಸಾಹಸಪಟ್ಟರು. ಅದಕ್ಕೆ ನೀರು ಕುಡಿಸಿ ವೈದ್ಯರನ್ನ ಕರೆ ತರುವ ಪ್ರಯತ್ನನೂ ಮಾಡಿದ್ರು. ಅದ್ರೂ ಬಂಗಾರದ ಜಿಂಕೆ ಮಾತ್ರ ಬದುಕಲಿಲ್ಲ.

     

  • 10 ವರ್ಷಗಳಿಂದ ನದಿಯಲ್ಲಿನ ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆಯುತ್ತಿದೆ ಈ ನಾಯಿ!

    10 ವರ್ಷಗಳಿಂದ ನದಿಯಲ್ಲಿನ ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆಯುತ್ತಿದೆ ಈ ನಾಯಿ!

    ಬೀಜಿಂಗ್: ಪರಿಸರ ಸಂರಕ್ಷಣೆಗಾಗಿ, ಸ್ವಚ್ಛತೆಗಾಗಿ ದುಡಿಯುವ ಅನೇಕ ಪರಿಸರಪ್ರೇಮಿಗಳ ಬಗ್ಗೆ ಕೇಳಿರ್ತೀರ. ಹಾಗೇ ಇಲ್ಲೊಬ್ಬ ಪರಿಸರಪ್ರೇಮಿ ಬಗ್ಗೆ ನೀವು ಕೇಳಲೇಬೇಕು. ಅದು ಬೇರೆ ಯಾರೂ ಅಲ್ಲ, ಕಳೆದ 10 ವರ್ಷಗಳಿಂದ ನದಿಯೊಂದರ ತ್ಯಾಜ್ಯವನ್ನು ಸ್ವಚ್ಛ ಮಾಡ್ತಿರೋ ಈ ಗೋಲ್ಡನ್ ರಿಟ್ರೀವರ್ ನಾಯಿ.

    ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌನಲ್ಲಿರುವ ನದಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನ ಹೆಕ್ಕಿ ತಂದು ಸ್ವಚ್ಛತೆ ಕಾಪಾಡುತ್ತಿದೆ ಈ ನಾಯಿ. ಈ ಬಗ್ಗೆ ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದ್ದು, ಈ ನಾಯಿ ಕಳೆದ 10 ವರ್ಷಗಳಲ್ಲಿ ನದಿಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆದಿದೆ ಎಂದು ಹೇಳಿದೆ. ಕೆಲವೊಮ್ಮೆ ದಿನಕ್ಕೆ 20 ರಿಂದ 30 ಬಾಟಲಿಗಳನ್ನ ಹೊರತೆಗೆದಿದೆ. ಇದಕ್ಕಾಗಿ ಈ ನಾಯಿಗೆ ಇದರ ಮಾಲೀಕ ತರಬೇತಿ ನೀಡಿದ್ದಾರೆ.

    ತನ್ನ ನಿಸ್ವಾರ್ಥ ಸೇವೆಯಿಂದ ಈ ನಾಯಿ ಸ್ಥಳೀಯರಿಗೆ ಸೆಲೆಬ್ರಿಟಿಯಾಗಿದೆ. ಟ್ವಿಟ್ಟರ್‍ನಲ್ಲಿ ಅನೇಕ ಮಂದಿ ಈ ನಾಯಿಯ ಸೇವೆಯನ್ನ ಶ್ಲಾಘಿಸಿದ್ದಾರೆ.