Tag: dog

  • ಸಾಕು ನಾಯಿ, ಬೀದಿ ನಾಯಿ ಕಚ್ಚಾಟಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ 2 ಕುಟುಂಬಗಳು

    ಸಾಕು ನಾಯಿ, ಬೀದಿ ನಾಯಿ ಕಚ್ಚಾಟಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ 2 ಕುಟುಂಬಗಳು

    ದಾವಣಗೆರೆ: ಸಾಕು ನಾಯಿ ಮತ್ತು ಬೀದಿ ನಾಯಿ (Dog) ಕಚ್ಚಾಟದಿಂದ 2 ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ದಾವಣಗೆರೆ (Davanagere) ತಾಲೂಕಿನ ಮಹಾದೇವಪುರ (Mahadevpur) ಗ್ರಾಮದಲ್ಲಿ ಜರುಗಿದೆ.

    ಗ್ರಾಮದ ಬಸವರಾಜ್ ಎಂಬ ಯುವಕ 10 ಸಾವಿರ ರೂ. ಕೊಟ್ಟು ರೊಟ್‌ವೀಲರ್ ನಾಯಿಯನ್ನು ತಂದು ಸಾಕಿದ್ದ. ಅದೇ ಬೀದಿಯ ಹನುಮಂತಪ್ಪ ಎಂಬುವವರು ಬೀದಿ ನಾಯಿಗಳನ್ನು ಸಾಕುತ್ತಿದ್ದರು. ಬೀದಿ ಶ್ವಾನಗಳು ರೊಟ್‌ವೀಲರ್ ನಾಯಿ ಮೇಲೆ ದಾಳಿ ನಡೆಸಿ ಕೊಂದಿದ್ದವು.

    ಇದರಿಂದ ರೊಚ್ಚಿಗೆದ್ದ ಬಸವರಾಜ್ ಮತ್ತು ಸಂಬಂಧಿ ಯುವಕರು ಹನುಮಂತಪ್ಪ ಮನೆಗೆ ನುಗ್ಗಿ ಬೀದಿ ನಾಯಿಗಳಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೆ ವೃದ್ಧ ಹನುಮಂತಪ್ಪನ ಮೇಲೂ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ 14 ವಿದ್ಯಾರ್ಥಿನಿಯರು- ಕಾರಣ ನಿಗೂಢ

    ಬೀದಿ ನಾಯಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, 8 ಜನರ ವಿರುದ್ಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಂದರ್‌ಗೂ ಮುನ್ನ ಬಚಾವ್ ಆಗಲು ಕಾರನ್ನೇ ಮುಚ್ಚಿಟ್ಟಿದ್ದ ಚೈತ್ರಾ ಕುಂದಾಪುರ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಯಿ ತಪ್ಪಿಸಲು ಹೋಗಿ ಲಾರಿಯಡಿ ಬಿದ್ದು ಗರ್ಭಿಣಿ ದಾರುಣ ಸಾವು

    ನಾಯಿ ತಪ್ಪಿಸಲು ಹೋಗಿ ಲಾರಿಯಡಿ ಬಿದ್ದು ಗರ್ಭಿಣಿ ದಾರುಣ ಸಾವು

    ಚಿಕ್ಕಬಳ್ಳಾಪುರ: ಸ್ಕೂಟಿಗೆ ಅಡ್ಡ ಬಂದ ನಾಯಿ (Dog) ತಪ್ಪಿಸಲು ಹೋಗಿ ಮೂರು ತಿಂಗಳ ಗರ್ಭಿಣಿ (Pregnant) ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

    ಕಳೆದ ಶನಿವಾರ ಸೆಪ್ಟೆಂಬರ್ 09 ರಂದು ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಕಾಲೇಜು ಬಳಿ ಈ ಅಪಘಾತ ಸಂಭವಿಸಿದೆ. ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿ 23 ವರ್ಷದ ನಂದಿನಿ ಎಂಬಾಕೆ ತನ್ನ ಅತ್ತೆ ಹಾಗೂ ನಾದಿನಿಯ ಮಗುವನ್ನ ಕೂರಿಸಿಕೊಂಡು ಸ್ಕೂಟಿಯಲ್ಲಿ ತೆರಳುವಾಗ ನಾಯಿ ಅಡ್ಡ ಬಂದಿದೆ.

    ಈ ವೇಳೆ ನಾಯಿ ತಪ್ಪಿಸಲು ಹೋದಾಗ ಸ್ಕೂಟಿ ಸ್ಕಿಡ್ ಆಗಿದ್ದು ನಂದಿನಿ ಎದುರಗಡೆಯಿಂದ ಬರ್ತಿದ್ದ ಕಂಟೈನರ್ ಲಾರಿಗೆ ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಗಾಯಯವಾಗಿ ನಂದಿನಿ ಮೃತಪಟ್ಟಿದ್ದಾರೆ. ಅತ್ತೆ ಹಾಗೂ ಮಗು ಅದೃಷ್ಟವಶಾತ್ ಮತ್ತೊಂದು ಬದಿಗೆ ಬಿದ್ದ ಕಾರಣ ಬದುಕುಳಿದಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಚ್ಚುನಾಯಿ ದಾಳಿ – ಗಂಭೀರ ಗಾಯಗಳಾಗಿ 13 ಮಂದಿ ಆಸ್ಪತ್ರೆಗೆ ದಾಖಲು

    ಹುಚ್ಚುನಾಯಿ ದಾಳಿ – ಗಂಭೀರ ಗಾಯಗಳಾಗಿ 13 ಮಂದಿ ಆಸ್ಪತ್ರೆಗೆ ದಾಖಲು

    ಕಲಬುರಗಿ: ಹುಚ್ಚು ನಾಯಿ (Dog) ದಾಳಿಯಿಂದಾಗಿ 13 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರ ಹಾಗೂ ಬೆನಕಪಳ್ಳಿ ಗ್ರಾಮದಲ್ಲಿ ನಡೆದಿದೆ.

    ಶನಿವಾರ ಸಂಜೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮ ಮತ್ತು ಬೆನಕಪಳ್ಳಿ ಗ್ರಾಮದಲ್ಲಿ ಹುಚ್ಚುನಾಯಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ. ಸಂಜೆ ಮಳೆಯಾಗುತ್ತಿದ್ದರಿಂದ ಜಮೀನಿನಿಂದ ಜನರು ಮನೆಗೆ ಬೇಗ ವಾಪಸ್ ಆಗುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ಮಳೆಯಿಂದ ರಕ್ಷಣೆ ಪಡೆಯಲು ಮನೆಯೊಂದರ ಬಳಿ ಆಶ್ರಯ ಪಡೆದಿದ್ದರು. ಈ ಸಂದರ್ಭ ಹುಚ್ಚು ನಾಯಿ ಆ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದೆ.

    ನಂತರ ಅದೇ ಹುಚ್ಚು ನಾಯಿ ಪಕ್ಕದ ಊರಾದ ಐನಾಪುರ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ಐನಾಪುರ ಗ್ರಾಮದಲ್ಲಿ ಸಹ ಮಹಿಳೆಯರು, ಪುರುಷರು ಸೇರಿದಂತೆ ಬರೋಬ್ಬರಿ 12 ಜನರ ಮೇಲೆ ಅಟ್ಯಾಕ್ ಮಾಡಿದೆ. ಗಾಯಾಳುಗಳನ್ನು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:  ಮಾಜಿ ಸಂಸದರ ಪತ್ನಿಯ ಕುತ್ತಿಗೆಯಿಂದ ಸರ ಎಗರಿಸಿದ ಕಳ್ಳನ ಬಂಧನ

    ಕಳೆದ ಅನೇಕ ದಿನಗಳಿಂದ ಈ ಹುಚ್ಚು ನಾಯಿ ಗ್ರಾಮಸ್ಥರ ನೆಮ್ಮದಿ ಕೆಡಿಸಿದ್ದು, ಅದನ್ನು ಸೆರೆಹಿಡಿಯಬೇಕೆಂದು ಸಂಬಂಧಿಸಿದವರಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾಯಿ ಕಡಿತಕ್ಕೊಳಗಾದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಸೂಕ್ತ ಸಮಯಕ್ಕೆ ಅಂಬುಲೆನ್ಸ್ ಬಾರದ ಹಿನ್ನಲೆಯಲ್ಲಿ ನೆರೆಯ ಬೀದರ್ ಜಿಲ್ಲೆ ಚಿಟಗುಪ್ಪಾ ಆಸ್ಪತ್ರೆಯಿಂದ ಅಂಬುಲೆನ್ಸ್ ತರಿಸಿಕೊಂಡು ಗಾಯಾಳುಗಳನ್ನು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈ-ಕಾಲು ಸೇರಿದಂತೆ ದೇಹದ ಬಹುತೇಕ ಭಾಗಗಳಿಗೆ ಹುಚ್ಚು ನಾಯಿ ದಾಳಿ ಮಾಡಿದ್ದು, ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: INDIA ಸಂಘಟನೆಯಿಂದ ಬಿಜೆಪಿ ಹೆದರಿದೆ.. ಎರಡು ಮಾತಿಲ್ಲ: ಸ್ವಪಕ್ಷ ವಿರುದ್ಧವೇ ಹೆಚ್.ವಿಶ್ವನಾಥ್ ಹೇಳಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಪತ್ತೆ ಹಚ್ಚಿದ ಪೊಲೀಸರು – ಸಂತಸ ಹಂಚಿಕೊಂಡ ಕುಟುಂಬ

    ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಪತ್ತೆ ಹಚ್ಚಿದ ಪೊಲೀಸರು – ಸಂತಸ ಹಂಚಿಕೊಂಡ ಕುಟುಂಬ

    ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಶಿವಾಜಿನಗರದ ಮನೆಯೊಂದರಲ್ಲಿ ಕಾಣೆಯಾಗಿದ್ದ ಸೈಬೀರಿಯನ್‌ ಹಸ್ಕಿ (Siberian Husky) ತಳಿಯ ರಾಲ್ಫ್‌ ಹೆಸರಿನ ಕುರುಡು ಶ್ವಾನವನ್ನ  ಪೊಲೀಸರು (Police) ಪತ್ತೆಹಚ್ಚಿ, ರಕ್ಷಣೆ ಮಾಡಿ ಮಾಲೀಕರಿಗೆ ಒಪ್ಪಿಸಿದ್ದಾರೆ.

    ಶಿವಾಜಿನಗರದ (Shivajinagara) ರಮ್ಯಾ ಎಂಬವರ ಮನೆಯಲ್ಲಿ ಸಾಕಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಆ.22 ರಂದು ಕಾಣೆಯಾಗಿತ್ತು. ಈ ಸಂಬಂಧ ಕಮರ್ಷಿಯಲ್ ಠಾಣೆಗೆ ರಮ್ಯಾ ಅವರು ದೂರು ನೀಡಿದ್ದರು. ಅಲ್ಲದೇ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಲ್ಲೂ ಶ್ವಾನ ಪತ್ತೆಗೆ ಮನವಿ ಮಾಡಿದ್ದರು. ಶ್ವಾನ ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು (Police), ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದರು.

    ರಾಲ್ಫ್‌ಗೆ ವಯೋ ಸಹಜವಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಹಾಗಾಗಿ ಮಾಲೀಕರಾದ ರಮ್ಯಾ ಮತ್ತು ಕುಟುಂಬದವರು ಹೆಚ್ಚಿನ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದರು. ಆಗಸ್ಟ್‌ 22ರಂದು ರಾಲ್ಫ್‌ ಇದ್ದಕ್ಕಿದ್ದಂತೆ ಇನ್ಫ್ಯಾಂಟ್ರಿ ರಸ್ತೆಯ ತಮ್ಮ ಮನೆಯಿಂದ ಕಾಣೆಯಾಗಿತ್ತು. ರಸ್ತೆ ಬದಿಯಲ್ಲಿದ್ದ ಹಸ್ಕಿ ನೋಡಿದ್ದ ಆಟೋ ಡ್ರೈವರ್ ಒಬ್ಬ ಬ್ರೀಡಿಂಗ್ ಮಾಡುವವರಿಗೆ ಈ ಶ್ವಾನವನ್ನ ಮಾರಾಟ ಮಾಡಿದ್ದ. ಆದ್ರೆ ಇದು ಕುರುಡು ಶ್ವಾನವಾಗಿದ್ದರಿಂದ ಲಾಭವಿಲ್ಲವೆಂದು ಪುನಃ ಬೀದಿಗೆ ಬಿಟ್ಟಿರುವುದಾಗಿ ತಿಳಿದುಬಂದಿದೆ. ಅಂತೂ ಗಲ್ಲಿ-ಗಲ್ಲಿಯಲ್ಲಿ ಹುಡುಕಾಡಿ ಪೊಲೀಸರು ಶ್ವಾನವನ್ನ ಪತ್ತೆಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪ್ರಜ್ಞಾನ್ ರೋವರ್‌ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ – ಇನ್ನು 10 ದಿನ ಮಾತ್ರ ಬಾಕಿ

    ದೃಷ್ಟಿಯಿಲ್ಲದ ಶ್ವಾನ ರಾಲ್ಫ್‌ ಕೊನೆಗೂ ಪೊಲೀಸರು ಬೆಳಕಾಗಿದ್ದು, ಈ ಸಂತಸವನ್ನ ಕುಟುಂಬ ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ. ರಾಲ್ಫ್ ಪತ್ತೆ ಮಾಡಿದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಹಾಗೂ ಡಿಸಿಪಿ ಭೀಮಾಶಂಕರ್ ಗುಳೇದ್ ಕುಟುಂಬಸ್ಥರು ಧನ್ಯವಾದ ಅರ್ಪಿಸಿದೆ. ಇದನ್ನೂ ಓದಿ: 15 ದಿನಗಳ ನಿತ್ಯ 5 ಸಾವಿರ ಕ್ಯೂಸೆಕ್‌ ನೀರು ತಮಿಳುನಾಡಿಗೆ ಹರಿಸಿ – ಕರ್ನಾಟಕಕ್ಕೆ CWRC ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಯಿ ಬೊಗಳಿದ್ದಕ್ಕೆ ವೃದ್ಧನಿಗೆ ಚಾಕು ಇರಿತ – ಆರೋಪಿ ಬಂಧನ

    ನಾಯಿ ಬೊಗಳಿದ್ದಕ್ಕೆ ವೃದ್ಧನಿಗೆ ಚಾಕು ಇರಿತ – ಆರೋಪಿ ಬಂಧನ

    ಬೆಂಗಳೂರು: ನಾಯಿಯೊಂದು (Dog) ಬೊಗಳಿದ್ದಕ್ಕೆ ಅದನ್ನು ವೃದ್ಧನೊಬ್ಬ (Old Man) ಛೂ ಬಿಟ್ಟಿದ್ದಾನೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ಮಲ್ಲೇಶ್ವರಂನಲ್ಲಿ (Malleshwara) ನಡೆದಿದೆ.

    ಆರೋಪಿ ರಾಜು ವೃದ್ಧ ಬಾಲಸುಬ್ರಹ್ಮಣ್ಯ ಎಂಬವರಿಗೆ ಚಾಕು ಇರಿದಿದ್ದಾನೆ. ರಾಜು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ನಾಯಿಯೊಂದು ಬೊಗಳಿತ್ತು. ಈ ನಾಯಿಯನ್ನು ವೃದ್ಧನೇ ಬಿಟ್ಟಿದ್ದಾನೆಂದು ಕೋಪಗೊಂಡ ರಾಜು ಚಾಕು ಇರಿದಿದ್ದಾನೆ. ಇದನ್ನೂ ಓದಿ: ಪಲಾವ್‍ನಲ್ಲಿ ವಿಷ ಬೆರೆಸಿ ತಂದೆ-ತಾಯಿಯ ಕೊಲೆಗೈದ ಪಾಪಿ ಪುತ್ರ!

    ಘಟನೆ ಬಗ್ಗೆ ಮಲ್ಲೇಶ್ವರಂ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ವೃದ್ಧನಿಗೆ ಚಾಕು ಇರಿದ ಆರೋಪಿ ರಾಜುನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಕುಟುಂಬದ ಯಜಮಾನನ ಕನಸಲ್ಲಿ ದೇವಿ- ದರ್ಗಾ ಪಕ್ಕದಲ್ಲೇ ದೇಗುಲ ನಿರ್ಮಿಸಿ, ಪೂಜೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದ್ದ ನಾಯಿ ಇನ್ನಿಲ್ಲ

    ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದ್ದ ನಾಯಿ ಇನ್ನಿಲ್ಲ

    ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ (Memes) ಮೂಲಕ ನೆಟ್ಟಿಗರನ್ನು ಸೆಳೆದಿದ್ದ ಚೀಮ್ಸ್ (Cheems) ಹೆಸರಿನ ನಾಯಿ (Dog) ಸಾವನ್ನಪ್ಪಿರುವುದಾಗಿ ಅದರ ಮಾಲೀಕರು ತಿಳಿಸಿದ್ದಾರೆ.

    ಹಾಸ್ಯಮಯ ಸನ್ನಿವೇಶಗಳನ್ನು ಮೀಮ್ಸ್‌ಗಳ ಮೂಲಕ ರಚಿಸುವ ಸಂದರ್ಭದಲ್ಲಿ ಚೀಮ್ಸ್‌ನ ವೈರಲ್ ಫೋಟೋವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಆದರೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚೀಮ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭ ಮಲಗಿದ್ದು, ಬಳಿಕ ಅದು ಎದ್ದೇಳಲೇ ಇಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.

     

    View this post on Instagram

     

    A post shared by Cheems_Balltze (@balltze)

    ಚೀಮ್ಸ್‌ನ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಾಲೀಕರು, ಶುಕ್ರವಾರ ನಾಯಿಯನ್ನು ಕಿಮೋಥೆರಪಿಗೆ ಒಳಪಡಿಸಲು ನಾವು ನಿರ್ಧರಿಸಿದ್ದೆವು. ಆದರೆ ಆಗಾಗಲೇ ತುಂಬಾ ತಡವಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ರಷ್ಯಾದ ಲೂನಾ-25 ಲ್ಯಾಂಡರ್ ವಿಫಲ

    ಮೂಲಗಳ ಪ್ರಕಾರ ಬಾಲ್ಟ್ಜ್ (Balltze) ಹೆಸರಿನ ನಾಯಿಯ ಫೋಟೋ 2017ರಲ್ಲಿ ವೈರಲ್ ಆಗಿದ್ದು, ಬಳಿಕ ಭಾರೀ ಪ್ರಮಾಣದಲ್ಲಿ ಮೀಮ್ಸ್‌ಗಳಲ್ಲಿ ಬಳಕೆಯಾಗಿತ್ತು. ನೆಟ್ಟಿಗರು ಇದು ಚೀಮ್ಸ್ ಅನ್ನು ಹೋಲುತ್ತದೆ ಎಂದು ಕಾಮೆಂಟ್ ಮಾಡಿದ್ದು, ಅಲ್ಲಿಂದ ಬಾಲ್ಟ್ಜ್ ಇಂಟರ್ನೆಟ್‌ನಲ್ಲಿ ಭಾರೀ ಖ್ಯಾತಿ ಗಳಿಸಿದ್ದಾಗಿ ಅದರ ಮಾಲೀಕರು ಹೇಳಿದ್ದಾರೆ.

    ಚೀಮ್ಸ್ ಸಾವು ಲಕ್ಷಾಂತರ ಅಭಿಮಾನಿಗಳಿಗೆ ದುಃಖ ತಂದಿದೆ. ಚೀಮ್ಸ್ ಅನಾರೋಗ್ಯಕ್ಕೊಳಗಾದಾಗ ಅದಕ್ಕೆ ಚಿಕಿತ್ಸೆ ನೀಡಿದ ವೆಟ್ಸ್ ಮಾಲೀಕರು ಧನ್ಯವಾದ ಹೇಳಿದ್ದಾರೆ. ಚೀಮ್ಸ್ ಚಿಕಿತ್ಸೆಗಾಗಿ ಸಂಗ್ರಹಿಸಲಾಗಿದ್ದ ಹಣವನ್ನು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಡಿಯಲು ಶಿಕ್ಷಕ ಹಣ ಕೇಳ್ತಾನೆ.. ವಾಚ್‍ಮ್ಯಾನ್‍ನಿಂದ ಕಿರುಕುಳ – ಪೊಲೀಸ್ ಕಮಿಷನರ್‌ಗೆ ವಿದ್ಯಾರ್ಥಿನಿಯರ ಪತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ವಾನಗಳಿಂದಾಗಿ ಜಗಳ- ನೆರೆಮನೆಯ ಇಬ್ಬರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ!

    ಶ್ವಾನಗಳಿಂದಾಗಿ ಜಗಳ- ನೆರೆಮನೆಯ ಇಬ್ಬರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ!

    ಭೋಪಾಲ್: ಸಾಕು ಶ್ವಾನಗಳಿಂದಾಗಿ ಎರಡು ಮನೆ ಮಾಲೀಕರ ನಡುವೆ ನಡೆದ ಜಗಳ ಇಬ್ಬರನ್ನು ಹತ್ಯೆ ಮಾಡುವಲ್ಲಿ ಕೊನೆಯಾದ ಘಟನೆ ಮಧ್ಯಪ್ರದೇಶದ ಇಂದೋರ್ (Indore) ನಲ್ಲಿ ನಡೆದಿದೆ.

    ಇಬ್ಬರನ್ನು ಗುಂಡಿಕ್ಕಿ ಕೊಂದ ಆರೋಪಿಯನ್ನು ರಾಜ್ಪಾಲ್ ಸಿಂಗ್ ರಾಜಾವತ್ ಎಂದು ಗುರುತಿಸಲಾಗಿದ್ದು, ಈತ ಬ್ಯಾಂಕ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ Security Guard in Bank) ಆಗಿ ಕೆಲಸ ಮಾಡುತ್ತಿದ್ದ. ಈತ ಗುರುವಾರ ತನ್ನ ಮನೆಯ ಬಾಲ್ಕನಿಯಿಂದ ಶೂಟೌಟ್ ಮಾಡಿ ಇಬ್ಬರ ಕೊಲೆಗೆ ಕಾರಣವಾಗಿದ್ದಾನೆ. ಅಲ್ಲದೆ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.

    ರಾಜಾವತ್ ಮತ್ತು ಅವರ ನೆರೆಹೊರೆಯವರಾದ ವಿಮಲ್ ಅಚಲಾ (35) ರಾತ್ರಿ 11 ಗಂಟೆಗೆ ಕೃಷ್ಣಾ ಬಾಗ್ ಕಾಲೋನಿಯ ಕಿರಿದಾದ ಲೇನ್‍ನಲ್ಲಿ ತಮ್ಮ ಸಾಕುನಾಯಿಗಳನ್ನು ಹಿಡಿದು ನಡೆದುಕೊಂಡು ಹೋಗುತ್ತಿದ್ದಾಗ ಎರಡೂ ಶ್ವಾನಗಳು ಜಗಳ ಮಾಡಿಕೊಂಡವು. ಈ ವೇಳೆ ಶ್ವಾನಗಳ ಮಾಲೀಕರ ನಡುವೆಯೂ ವಾಗ್ವಾದ ನಡೆಯಿತು. ಇದೇ ಸಿಟ್ಟಿನಿಂದ ಬಂದ ರಾಜಾವತ್, ತನ್ನ 12-ಬೋರ್ ರೈಫಲ್‍ನೊಂದಿಗೆ ಮನೆಯ ಬಾಲ್ಕನಿಯ ಮೇಲೇರಿದ್ದಾನೆ. ನಂತರ ಅಲ್ಲಿಂದಲೇ ಶೂಟೌಟ್ ಮಾಡಿದ್ದಾನೆ.

    ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಮೃತ ಅಚಲಾ ನಗರದ ನಿಪಾನಿಯಾ ಪ್ರದೇಶದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ. ಇನ್ನೊಬ್ಬನನ್ನು ರಾಹುಲ್ ವರ್ಮಾ (27) ಎಂದು ಗುರುತಿಸಲಾಗಿದೆ. ಶೂಟೌಟ್ ಆದ ತಕ್ಷಣವೇ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಘಟನೆಯಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಾಜಾವತ್, ಅವರ ಪುತ್ರ ಸುಧೀರ್ ಮತ್ತು ಇನ್ನೊಬ್ಬ ಸಂಬಂಧಿ ಶುಭಂ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಮಿಟಿಗೆ ಸೇರಿಸಿಕೊಳ್ಳದಿದ್ದಕ್ಕೆ ಐತಿಹಾಸಿಕ ದೇವಸ್ಥಾನಲ್ಲಿ ನಡೆಯಿತು ಕಳ್ಳತನ

    ಗ್ವಾಲಿಯರ್ ಮೂಲದ ರಾಜಾವತ್ ಅವರು ಪರವಾನಗಿ ಪಡೆದ 12-ಬೋರ್ ರೈಫಲ್ ಅನ್ನು ಹೊಂದಿದ್ದರಿಂದ ಇಂದೋರ್‍ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಲೆ ಆರೋಪಿಯನ್ನು ಬಂಧಿಸಲು ಸಹಾಯ ಮಾಡಿದ ತಾರಾಗೆ ಭಾರೀ ಮೆಚ್ಚುಗೆ

    ಕೊಲೆ ಆರೋಪಿಯನ್ನು ಬಂಧಿಸಲು ಸಹಾಯ ಮಾಡಿದ ತಾರಾಗೆ ಭಾರೀ ಮೆಚ್ಚುಗೆ

    ದಾವಣಗೆರೆ: ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅರೋಪಿಯನ್ನು ಬಂಧಿಸಲು ಡಾಗ್ ಸ್ಕ್ವಾಡ್ ಕ್ರೈಂ ವಿಭಾಗದ ಶ್ವಾನ ತಾರಾ (Dog Thara) ಸಹಾಯ ಮಾಡಿದೆ.

    ಕೊಲೆ ನಡೆದ ಸ್ಥಳದಿಂದ 8 ಕಿಲೋಮೀಟರ್ ಕ್ರಮಿಸಿ ಆರೋಪಿಯನ್ನು ತಾರಾ ಪತ್ತೆ ಮಾಡಿದೆ. ಈ ಮೂಲಕ ಇದೀಗ ತಾರಾಗೆ ಪೊಲೀಸ್ ಇಲಾಖೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಕಳೆದ ಭಾನುವಾರ ಸೋಮಶೆಟ್ಟಿಹಳ್ಳಿ ಕ್ರಾಸ್ ಬಳಿ ಹಳೆಯ ದ್ವೇಷದ ಹಿನ್ನೆಲೆ ಕೊಲೆ ನಡೆದಿತ್ತು. ನರಸಿಂಹ ಎಂಬಾತನನ್ನು ಶಿವಯೋಗೀಶ್ ಕೊಲೆ ಮಾಡಿದ್ದ. ಕೊಲೆ ಮಾಡಿ ಆರೋಪಿ ಶ್ರೀರಾಮನಗರದಲ್ಲಿರುವ ಮನೆಯಲ್ಲಿ ಅವಿತು ಕೂತಿದ್ದ. ಇತ್ತ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬಿಸಿದ್ದರು. ಇದನ್ನೂ ಓದಿ: ಗೂಡ್ಸ್ ವಾಹನ ಡಿಕ್ಕಿಯಾಗಿ ಮಕ್ಕಳಿಬ್ಬರ ದುರ್ಮರಣ

    ಅಂತೆಯೇ ಶ್ವಾನ ತಾರಾ ಆರೋಪಿಯು ಕೊಲೆಗೆ ಬಳಸಿದ್ದ ಕಟ್ಟಿಗೆಯನ್ನು ಮೂಸಿ ನೋಡಿ ಕೊಲೆಗಾರನ ಜಾಡು ಹಿಡಿದಿದೆ. ಈ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುದ್ದಿನ ನಾಯಿ ನಾಪತ್ತೆ – ಭದ್ರತಾ ಸಿಬ್ಬಂದಿ ಅಮಾನತು ಮಾಡುವಂತೆ ಪೊಲೀಸ್ ಅಧಿಕಾರಿಗೆ ಪತ್ರ ಬರೆದ ನ್ಯಾಯಾಧೀಶ

    ಮುದ್ದಿನ ನಾಯಿ ನಾಪತ್ತೆ – ಭದ್ರತಾ ಸಿಬ್ಬಂದಿ ಅಮಾನತು ಮಾಡುವಂತೆ ಪೊಲೀಸ್ ಅಧಿಕಾರಿಗೆ ಪತ್ರ ಬರೆದ ನ್ಯಾಯಾಧೀಶ

    ನವದೆಹಲಿ: ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರೊಬ್ಬರು (Judge) ತಮ್ಮ ಮನೆಯ ಮುದ್ದಿನ ನಾಯಿ (Pet Dog) ನಾಪತ್ತೆಯಾಗಿರುವುದಕ್ಕೆ ತಮ್ಮ ಭದ್ರತಾ ಸಿಬ್ಬಂದಿಯನ್ನು (Security Personnel) ಅಮಾನತು ಮಾಡುವಂತೆ ಕೋರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.

    ಪ್ರಸ್ತುತ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಾಗಿರುವ ಗೌರವ್ ಕಾಂತ್ ದೆಹಲಿ ಹೈಕೋರ್ಟ್‌ನಲ್ಲಿ (Delhi High Court) ನ್ಯಾಯಾಧೀಶರಾಗಿದ್ದಾಗ ಜೂನ್ 12ರಂದು ಜಂಟಿ ಪೊಲೀಸ್ ಕಮಿಷನರ್ ಮಂಗೇಶ್ ಕಶ್ಯಪ್ ಅವರಿಗೆ ಪತ್ರ ಬರೆದು, ತಮ್ಮ ಭದ್ರತಾ ಸಿಬ್ಬಂದಿಯಿಂದ ತಮ್ಮ ನಾಯಿ ನಾಪತ್ತೆಯಾಗಿದೆ. ತಮ್ಮ ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಹಾಗೂ ಈ ಬಗ್ಗೆ ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ.

    ಪತ್ರದಲ್ಲೇನಿದೆ?
    ನನ್ನ ಅಧಿಕೃತ ನಿವಾಸದಲ್ಲಿ ಭದ್ರತೆಯನ್ನು ಒದಗಿಸುವ ಅಧಿಕಾರಿಗಳ ನಿಷ್ಠೆಯ ಕೊರತೆಯಿಂದಾಗಿ ನನ್ನ ಸಾಕು ನಾಯಿಯನ್ನು ಕಳೆದುಕೊಂಡಿದ್ದೇನೆ. ಬಾಗಿಲನ್ನು ಲಾಕ್ ಮಾಡಿ ಎಂದು ಪದೇ ಪದೇ ಹೇಳುತ್ತಿದ್ದರೂ ನನ್ನ ನಿವಾಸದಲ್ಲಿ ನಿಯೋಜಿಸಲಾದ ಭದ್ರತಾ ಅಧಿಕಾರಿಗಳು ನನ್ನ ನಿರ್ದೇಶನವನ್ನು ಅನುಸರಿಸುವಲ್ಲಿ ಹಾಗೂ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಯುವಕರ ಹುಚ್ಚಾಟ – ಪೊಲೀಸರಿಂದ ತಕ್ಕ ಪಾಠ

    ಇಂತಹ ಲೋಪ ಹಾಗೂ ಅಸಮರ್ಥತೆಗೆ ತಕ್ಷಣವೇ ಕ್ರಮ ವಹಿಸಬೇಕು. ಏಕೆಂದರೆ ಇದು ನನ್ನ ಜೀವನ ಹಾಗೂ ಸ್ವಾತಂತ್ರ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಗೌರವ್ ಕಾಂತ್ ಭೀತಿ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಪತ್ರದ ದಿನಾಂಕದಿಂದ 3 ಕೆಲಸದ ದಿನಗಳೊಳಗೆ ಸಮಸ್ಯೆ ಬಗ್ಗೆ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸಬೇಕು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

    ಗೌರವ್ ಕಾಂತ್ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದ ಕೆಲವೇ ದಿನಗಳಲ್ಲಿ ಶುಕ್ರವಾರ ಕೋಲ್ಕತ್ತಾ ಹೈಕೋರ್ಟ್‌ಗೆ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಭೇಟಿಯಾಗಲು ಗ್ರಾಮದ ವಿದ್ಯುತ್ ಅನ್ನೇ ಕಡಿತಗೊಳಿಸ್ತಿದ್ದ ಯುವತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಯಿ ರೀತಿ ಬೊಗಳು: ಹಿಂದೂ ಯುವಕನಿಗೆ ಅವಹೇಳನ ಮಾಡಿದ ಮೂವರು ಅರೆಸ್ಟ್ – ಮನೆ ಧ್ವಂಸ

    ನಾಯಿ ರೀತಿ ಬೊಗಳು: ಹಿಂದೂ ಯುವಕನಿಗೆ ಅವಹೇಳನ ಮಾಡಿದ ಮೂವರು ಅರೆಸ್ಟ್ – ಮನೆ ಧ್ವಂಸ

    ಭೋಪಾಲ್: ಹಿಂದೂ ಯುವಕನ ಕತ್ತಿಗೆ ಹಗ್ಗ ಕಟ್ಟಿ ನಾಯಿ ರೀತಿ ಬೊಗಳುವಂತೆ ಒತ್ತಾಯಿಸಿದ್ದಲ್ಲದೇ ಆತನಿಗೆ ಥಳಿಸಿ, ಧಾರ್ಮಿಕವಾಗಿ ಅವಹೇಳನ ಮಾಡಿರುವ ಆರೋಪದ ಮೇಲೆ ಮೂವರು ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಮಾತ್ರವಲ್ಲದೇ ಆರೋಪಿಗಳ ಮನೆಗಳನ್ನು ಬುಲ್ಡೋಜರ್ (Bulldozer) ಹತ್ತಿಸಿ ಧ್ವಂಸಗೊಳಿಸಲಾಗಿದೆ.

    ಭೋಪಾಲ್‌ನ ವ್ಯಕ್ತಿಯನ್ನು ನಾಯಿಯಂತೆ ಬೊಗಳಲು ಆದೇಶಿಸಿದ ಮೂವರನ್ನು ಸೋಮವಾರ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧಿಸಲಾಗಿದೆ. ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮೂವರು ಆರೋಪಿಗಳ ಮನೆಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

    ಘಟನೆಯೇನು?
    ವಿಜಯ್ ರಾಮ್‌ಚಂದಾನಿ ಎಂಬ ಯುವಕನ ಕುತ್ತಿಗೆಗೆ ನಾಯಿಯ ಬೆಲ್ಟ್ ಹಾಕಿ, ಮೂವರು ಆರೋಪಿಗಳು ನಾಯಿಯಂತೆ ಬೊಗಳಲು ಆದೇಶಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 48 ಸೆಕೆಂಡುಗಳ ವೀಡಿಯೋದಲ್ಲಿ ಆರೋಪಿಗಳು ವ್ಯಕ್ತಿಗೆ ನಾಯಿಯಂತೆ ವರ್ತಿಸಲು ಒತ್ತಾಯಿಸಿರುವುದು ಕಂಡುಬಂದಿದೆ. ಮಾತ್ರವಲ್ಲದೇ ಆತನಿಗೆ ಥಳಿಸಿ, ಧಾರ್ಮಿಕವಾಗಿ ನಿಂದಿಸಿರುವುದಾಗಿ ಆರೋಪಿಸಲಾಗಿದೆ. ಇದನ್ನೂ ಓದಿ: ಶತಮಾನ ಪೂರೈಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ – ಸಾವರ್ಕರ್, ಗೋಡ್ಸೆಗೆ ನೀಡಿದಂತೆ ಎಂದು ಕಾಂಗ್ರೆಸ್ ಕಿಡಿ

    ವರದಿಗಳ ಪ್ರಕಾರ ಆರೋಪಿಗಳಾದ ಸಾಹಿಲ್ ಹಾಗೂ ಆತನ ಗ್ಯಾಂಗ್‌ನ ಸದಸ್ಯರು ವಿಜಯ್‌ಗೆ ಡ್ರಗ್ಸ್, ಮಾಂಸಾಹಾರ ಸೇವನೆ ಹಾಗೂ ಮತಾಂತರಗೊಳ್ಳುವಂತೆ ಒತ್ತಾಯಿಸಿರುವುದಾಗಿ ಆತನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಮಾತ್ರವಲ್ಲದೇ ಸಂತ್ರಸ್ತನಿಗೆ ತನ್ನ ಸ್ವಂತ ಮನೆಯನ್ನೇ ದರೋಡೆ ಮಾಡಲು ಬಲವಂತಪಡಿಸಿರುವುದಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಆತನ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ದೂರು ದಾಖಲಿಸಿರಲಿಲ್ಲ ಎನ್ನಲಾಗಿದೆ.

    ಇದೀಗ ಘಟನೆಗೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಲೇ ಆರೋಪಿಗಳ ಅಮಾನುಷ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ಬಂಧನದ ಬಳಿಕ ಅವರ ಮನೆಯನ್ನು ಧ್ವಂಸಗೊಳಿಸುವಂತೆ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದು, ಬುಲ್ಡೋಜರ್ ಕಾರ್ಯಚರಣೆ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಬೀದರ್ ಪೊಲೀಸರ ಕಾರ್ಯಾಚರಣೆ – 7 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ