Tag: dog

  • ಹೊಸೂರಲ್ಲಿ ನಾಯಿಗೆ ಸೀಮಂತ ಮಾಡಿದ ಮಾಲೀಕ

    ಹೊಸೂರಲ್ಲಿ ನಾಯಿಗೆ ಸೀಮಂತ ಮಾಡಿದ ಮಾಲೀಕ

    ಆನೇಕಲ್: ತಮಿಳುನಾಡಿನ ಹೊಸೂರು (Hosur) ಸಮೀಪದ ಸಣ್ಣಪಲ್ಲಿ ಗ್ರಾಮ ಪಂಚಾಯಿತಿಯ ಕೂರಕ್ಕನ ಹಳ್ಳಿ ಗ್ರಾಮದಲ್ಲಿ ಮಾಲೀಕರೊಬ್ಬರು ಅವರ ನಾಯಿಗೆ (Dog) ಸೀಮಂತ  (Baby Shower )ಮಾಡಿ ಗಮನಸೆಳೆದಿದ್ದಾರೆ.

    ಗ್ರಾಮದ ನಾರಾಯಣ ಎಂಬವರ ಮನೆಯಲ್ಲಿದ್ದ ನಾಯಿ ಗರ್ಭ ಧರಿಸಿದೆ. ಹಾಗಾಗಿ ತಮ್ಮ ನಾಯಿ ಮೊದಲ ಗರ್ಭ ಧರಿಸಿದೆ ಎಂದು ಸೀಮಂತ ಮಾಡಿದ್ದಾರೆ. ಸೀಮಂತದಲ್ಲಿ ನಾಯಿಗೆ ಹೊಸ ಬಟ್ಟೆ ಸಹ ಹಾಕಿಸಿದ್ದಾರೆ. ಬಳಿಕ ಹೊವು, ಹಣ್ಣು, ಅರಿಶಿನ-ಕುಂಕುಮ ಇಟ್ಟು ಪೂಜೆ ಕಾರ್ಯ ನೆರವೇರಿಸಿದ್ದಾರೆ. ಜೊತೆಗೆ ನಾಯಿಗೆ ಇಷ್ಟವಾಗುವ ಬಿರಿಯಾನಿ ಮತ್ತು ಬಿಸ್ಕತ್ತು ಇಟ್ಟು ಸೀಮಂತ ಮಾಡಿದ್ದಾರೆ. ಇದನ್ನೂ ಓದಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ಗರ್ಭಾವಸ್ಥೆಯಲ್ಲಿದ್ದ ನಾಯಿಗೆ ನಾರಾಯಣ ಅವರು ಸೀಮಂತ ಮಾಡಿದ್ದು, ಸೀಮಂತಕ್ಕೆ ಗ್ರಾಮಸ್ಥರನ್ನು ಸಹ ಆಹ್ವಾನಿಸಲಾಗಿತ್ತು. ಸೀಮಂತಕ್ಕೆ ಬಂದ ಗ್ರಾಮಸ್ಥರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಜನ ನಾಯಕರಾದವರು ಮೊದಲು ಕಾನೂನು ಪಾಲಿಸಬೇಕು: ಸಿದ್ದರಾಮಯ್ಯಗೆ 10 ಸಾವಿರ ರೂ. ದಂಡ

  • ನಾಯಿ ವಿಚಾರಕ್ಕೆ ಠಾಣೆ ಮೆಟ್ಟಿಲೇರಿದ ಮಹಿಳೆಯರು

    ನಾಯಿ ವಿಚಾರಕ್ಕೆ ಠಾಣೆ ಮೆಟ್ಟಿಲೇರಿದ ಮಹಿಳೆಯರು

    ಬೆಂಗಳೂರು: ನಾಯಿ ವಿಚಾರಕ್ಕೆ ಮಹಿಳೆಯರಿಬ್ಬರು ಪರಸ್ಪರ ಕಿತ್ತಾಡಿಕೊಂಡು ಪೊಲೀಸ್ (Police) ಠಾಣೆಗೆ ಹೋಗಿರುವ ಘಟನೆ ಬೆಂಗಳೂರಿನ (Bengaluru) ಜೀವನ್ ಭೀಮಾ ನಗರದಲ್ಲಿ ನಡೆದಿದೆ.

    ಪಂಜಾಬ್ ಮೂಲದ ಪೂಜಾ ಕಪೂರ್ ಕಳೆದ ಒಂದೂವರೆ ವರ್ಷದಿಂದ ಪ್ರಮೀಳಾ ಎಂಬವರ ಮನೆಯಲ್ಲಿ ಭೋಗ್ಯಕ್ಕೆ (Lease) ಇದ್ದಾರೆ. ಪೂಜಾ ಒಂದು ನಾಯಿಯನ್ನು ಸಾಕಿಕೊಂಡಿದ್ದಾರೆ. ನಾಯಿ ಕೊಳಕು ಮಾಡುತ್ತದೆ ಮತ್ತು ಸರಿಯಾಗಿ ಸ್ವಚ್ಚಗೊಳಿಸುವುದಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕರಾದ ಪ್ರಮೀಳಾ ಹಾಗೂ ಪೂಜಾ ನಡುವೆ ಆಗಾಗ ಜಗಳ ನಡೆಯುತಿತ್ತು. ಇದನ್ನೂ ಓದಿ: ಶಾಲೆ ಕಾಂಪೌಂಡ್, ಮನೆಗೆ ಬಸ್ ಡಿಕ್ಕಿ – 1ಂಕ್ಕೂ ಹೆಚ್ಚು ಮಂದಿಗೆ ಗಾಯ, ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವು

    ಎರಡು ದಿನಗಳ ಹಿಂದೆ ನಾಯಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಆಗ ಇಬ್ಬರ ನಡುವೆ ಮಾತಿಗೆ ಬೆಳೆದು ಕೊನೆಗೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಬಳಿಕ ಪೂಜಾ ಬೆಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಎಕ್ಸ್ ಖತೆಯಲ್ಲಿ ಬರೆದುಕೊಂಡಿದ್ದಾರೆ. ಪೂಜಾ ಎಕ್ಸ್ನಲ್ಲಿ ಗಲಾಟೆ ಕುರಿತು ವೀಡಿಯೋ ಹಾಕಿದ್ದು, ಅದನ್ನು ಪೊಲೀಸ್ ಕಮಿಷನರ್‌ಗೆ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ಏಕರೂಪದ ದರ ನಿಗದಿ – ಪ್ರತಿ ಕಿಮೀಗೆ 24 ರಿಂದ 28 ರೂ.ವರೆಗೆ ಏರಿಕೆಗೆ ಅವಕಾಶ

    ಜೀವನ್ ಭೀಮಾನಗರದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಿಸಿಕೊಂಡು ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 1 ಕಿ.ಮಿಗೆ 1.59 ಲಕ್ಷ, ದಿನಕ್ಕೆ 50 ಲಕ್ಷ – ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು

  • ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಚಾಕು ಇರಿದ ದುಷ್ಕರ್ಮಿಗಳು

    ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಚಾಕು ಇರಿದ ದುಷ್ಕರ್ಮಿಗಳು

    ಚಿಕ್ಕಬಳ್ಳಾಪುರ: ಸಾಕು ನಾಯಿ ಬೊಗಳಿದ್ದಕ್ಕೆ ನಾಯಿಯ (Dog) ಮಾಲೀಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ದೇವನಹಳ್ಳಿಯ (Devanahalli) ದೊಡ್ಡಚೀಮನಹಳ್ಳಿಯಲ್ಲಿ ನಡೆದಿದೆ.

    ಚಾಕು ಇರಿತಕ್ಕೊಳಗಾದ ವ್ಯಕ್ತಿಯನ್ನು ಮಧುಕುಮಾರ್ (34) ಎಂದು ಗುರುತಿಸಲಾಗಿದೆ. ಚಾಕು ಇರಿತದ ರಭಸಕ್ಕೆ ಚಾಕುವಿನ ತುದಿ ಮುರಿದು ದೇಹದೊಳಗೆ ಉಳಿದುಕೊಂಡಿದೆ. ಆತನನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ತಮಿಳುನಾಡಿಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಹಲ್ಲೆ

    ನಮ್ಮನ್ನು ನೋಡಿ ನಿಮ್ಮ ನಾಯಿ ಬೊಗಳುತ್ತಿದೆ ಅದಕ್ಕೆ ಬುದ್ದಿ ಹೇಳಲು ಆಗಲ್ವಾ? ಎಂದು ಅದೇ ಗ್ರಾಮದ ಸುನೀಲ್, ಅನೀಲ್, ದೇವರಾಜ್ ಹಾಗೂ ಅಜಯ್ ಎಂಬವರು ಮಧುಕುಮಾರ್ ಬಳಿ ಗಲಾಟೆ ಆರಂಭಿಸಿದ್ದಾರೆ. ಬಳಿಕ ಗಲಾಟೆ ತಾರಕಕ್ಕೇರಿ ನಾಲ್ವರು ಸೇರಿ ಚಾಕುವಿನಿಂದ ಇರಿದಿದ್ದಾರೆ. ಅಲ್ಲದೇ ಆತನ ಪತ್ನಿ ಮಮತಾ ಮೇಲೂ ಹಲ್ಲೆ ನಡೆಸಿದ್ದಾರೆ. ಕೃತ್ಯದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಈ ಸಂಬಂಧ ವಿಶ್ವನಾಥಪುರ ಪೊಲೀಸ್ (Police) ಠಾಣೆಯಲ್ಲಿ ಐಪಿಸಿ ಸೆಕ್ಷನ್ 307ರ ಅಡಿ ಕೊಲೆ ಯತ್ನ, 504, 506ರ ಅಡಿ ಸಾರ್ವಜನಿಕ ಸ್ಥಳದಲ್ಲಿ ನಿಂದನೆ, 354, 324ರ ಅಡಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಸೇರಿದಂತೆ ಇನ್ನಿತರೆ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಹುಲಿ ದಾಳಿಗೆ ಕುರಿಗಾಹಿ ಬಲಿ

  • ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ!

    ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ!

    ಚಿಕ್ಕಮಗಳೂರು: ನಾಯಿ (Dog) ಬೊಗಳಿದ್ದಕ್ಕೆ ಮನೆ ಮಾಲೀಕನ ಮೇಲೆ ಆಸಿಡ್ ದಾಳಿ (Acid Attack) ನಡೆಸಿರುವ ಘಟನೆ ಜಿಲ್ಲೆಯ ಎನ್‌ಆರ್ ಪುರ (NR Pura) ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದೆ.

    ಜೇಮ್ಸ್ ಆಸಿಡ್ ದಾಳಿ ಮಾಡಿದ ಆರೋಪಿಯಾದರೆ, ಸುಂದರ್ ರಾಜ್ ಆಸಿಡ್ ದಾಳಿಗೊಳಗಾದ ವ್ಯಕ್ತಿ. ಜೇಮ್ಸ್ ಹಾಗೂ ಸುಂದರ್ ರಾಜ್ ಅಕ್ಕಪಕ್ಕದ ಮನೆಯವರು. ಹಲವು ದಿನಗಳಿಂದ ಇಬ್ಬರ ನಡುವೆ ಗಲಾಟೆಯಾಗಿ, ಮನಸ್ಥಾಪವಿತ್ತು.

    dog

    ನಿನ್ನೆ ಸುಂದರ್ ರಾಜ್ ಮನೆಯ ಸಾಕು ನಾಯಿ ಬೊಗಳುತ್ತಿತ್ತು. ಈ ವೇಳೆ ಮನೆ ಮಾಲೀಕ ಸುಂದರ್ ರಾಜ್ ನಾಯಿಗೆ ಬೈದಿದ್ದಾರೆ. ಆಗ ಜೇಮ್ಸ್ ನಾಯಿಗೆ ಬೈದಂತೆ ನನಗೆ ಬೈಯುತ್ತಿದ್ದಾನೆ ಎಂದು ಜಗಳವಾಡಿದ್ದಾನೆ. ಇಬ್ಬರು ಜಗಳವಾಡುವಾಗ ಜೇಮ್ಸ್ ಏಕಾಏಕಿ ಸುಂದರ್ ರಾಜ್ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

    ಆಸಿಡ್ ದಾಳಿಗೆ ಸುಂದರ್ ರಾಜ್ ಮುಖ ಬಹುತೇಕ ಸುಟ್ಟಿದ್ದು ಎಡಗಣ್ಣಿಗೆ ಗಂಭೀರ ಗಾಯವಾಗಿದೆ. ಅರ್ಧ ಮುಖ ಸಂಪೂರ್ಣ ಸುಟ್ಟುಹೋಗಿದೆ. ಕೂಡಲೇ ಅವರನ್ನು ಎನ್‌ಆರ್ ಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಿವಮೊಗ್ಗದಲ್ಲಿ ವೈದ್ಯರು ಸುಂದರ್ ರಾಜ್ ಅವರ ಎಡಗಣ್ಣಿನ ಪದರ ಸಂಪೂರ್ಣ ಡ್ಯಾಮೇಜ್ ಆಗಿದೆ, ಕಣ್ಣಿನ ಪದರವನ್ನು ಬದಲಾಯಿಸಬೇಕೆಂದು ತಿಳಿಸಿದ್ದಾರೆ. ಕೂಲಿ ಮಾಡಿಕೊಂಡು ಬದುಕುತ್ತಿದ್ದ ಸುಂದರ್ ರಾಜ್ ಕುಟುಂಬ ಇದೀಗ ಚಿಕಿತ್ಸೆಯ ಹಣಕ್ಕಾಗಿ ಕಂಗಾಲಾಗಿದ್ದಾರೆ. ಆಸಿಡ್ ದಾಳಿ ಬಳಿಕ ಜೇಮ್ಸ್ ದಂಪತಿ ನಾಪತ್ತೆಯಾಗಿದ್ದಾರೆ. ಎನ್‌ಆರ್ ಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Rain Alert: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ

  • 6 ವರ್ಷದ ಬಾಲಕನಿಗೆ 11 ಕಡೆ ಕಚ್ಚಿ ಗಾಯಗೊಳಿಸಿದ ನಾಯಿ

    6 ವರ್ಷದ ಬಾಲಕನಿಗೆ 11 ಕಡೆ ಕಚ್ಚಿ ಗಾಯಗೊಳಿಸಿದ ನಾಯಿ

    ಚಿತ್ರದುರ್ಗ: ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕನ (Boy) ಮೇಲೆ ನಾಯಿಯೊಂದು (Dog) ಎರಗಿ ಕೈಕಾಲುಗಳಿಗೆ ಸೇರಿ 11 ಕಡೆ ಕಚ್ಚಿ ಗಾಯಗೊಳಿಸಿರುವ ಘಟನೆ ಚಿತ್ರದುರ್ಗದ  (Chitradurga) ಜೆಸಿಆರ್ ಬಡಾವಣೆಯಲ್ಲಿ ನಡೆದಿದೆ.

    ಜೆಸಿಆರ್ ಬಡಾವಣೆಯ 6ನೇ ಅಡ್ಡರಸ್ತೆಯ ಜ್ಯೋತಿ-ನಾಗರಾಜ್ ದಂಪತಿಯ ಪುತ್ರ ಸಾಯಿ ಚರಣ್ (6) ನಿನ್ನೆ ಸಂಜೆ ವೇಳೆ ಮನೆ ಮುಂದೆ ತನ್ನ ಅಕ್ಕನೊಂದಿಗೆ ಆಟವಾಡುತ್ತಿದ್ದ. ಆಗ ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿರೋ 2 ನಾಯಿಗಳು, 11 ಕಡೆ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ಅಲ್ಲಿನ ಸ್ಥಳೀಯರು ನಾಯಿಗಳಿಂದ ಬಾಲಕನ ರಕ್ಷಣೆಗೆ ಹರಸಾಹಸಪಟ್ಟಿದ್ದಾರೆ.

    ಒಂದು ನಾಯಿ ಜನರ ಬೆದರಿಕೆಗೆ ಹೆದರಿ ಓಡಿ ಹೋದರು ಸಹ ಮತ್ತೊಂದು ನಾಯಿ, ಜನರ ಆವಾಜ್‌ಗೆ ಡೋಂಟ್ ಕೇರ್ ಎಂದಿದೆ. ಪದೇ ಪದೇ ಬಾಲಕನ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾನೆ. ಇದನ್ನೂ ಓದಿ: ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಯುವಕ ಅರೆಬೆತ್ತಲೆ ಪ್ರತಿಭಟನೆ- ಕಪಾಳಮೋಕ್ಷ ಮಾಡಿದ ಪಿಡಿಒ

    ಬಾಲಕ ಸಾಯಿ ಚರಣ್ ತಾಯಿಯು ತಮ್ಮ ಮಗನ ಮೇಲಾದ ನಾಯಿ ದಾಳಿಯಿಂದ ಆತಂಕಗೊಂಡಿದ್ದಾರೆ. ಅಲ್ಲಿನ ಸ್ಥಳೀಯ ಮಾಂಸಾಹಾರದ ಹೋಟೆಲ್ ಸಿಬ್ಬಂದಿ ನಿರುಪಯುಕ್ತ ಮಾಂಸವನ್ನು ಬೀದಿಗೆ ಎಸೆಯುವ ಹಿನ್ನಲೆಯಲ್ಲಿ ಮಾಂಸದ ರುಚಿ ನೋಡಿರುವ ನಾಯಿಗಳು ಮಾಂಸ ಸಿಗದ ವೇಳೆ ನಗರದ ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ. ಈ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನ ಆಗಿಲ್ಲ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 2 ತಿಂಗಳ ಹಿಂದಷ್ಟೇ ಪ್ರೀತಿಸಿ ಮದ್ವೆಯಾಗಿದ್ದ ಯುವತಿ ಸಾವು!

  • ದುಬಾರಿ ನಾಯಿಯನ್ನು ಕೊಡಿಸಲಿಲ್ಲವೆಂದು ಯುವಕ ಆತ್ಮಹತ್ಯೆ

    ದುಬಾರಿ ನಾಯಿಯನ್ನು ಕೊಡಿಸಲಿಲ್ಲವೆಂದು ಯುವಕ ಆತ್ಮಹತ್ಯೆ

    ಹುಬ್ಬಳ್ಳಿ: ದುಬಾರಿ ನಾಯಿ (Dog) ಮೇಲಿನ ಪ್ರೀತಿ ಓರ್ವ ಯುವಕನನ್ನು ಬಲಿಪಡೆದಿದೆ. ತಾನು ಕೇಳಿದ ನಾಯಿಯನ್ನು ಪೋಷಕರು ಕೊಡಿಸಲಿಲ್ಲವೆಂದು ಮನನೊಂದ ಯುವಕ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ (Hubballi)  ನಡೆದಿದೆ.

    ಹುಬ್ಬಳ್ಳಿ ಮಿಷನ್ ಕಾಂಪೌಂಡ್‌ನಲ್ಲಿ ಈ ಘಟನೆ ನಡೆದಿದ್ದು, ಅಲೆನ್ ಭಸ್ಮೆ (24) ಆತ್ಮಹತ್ಯೆಗೆ ಶರಣಾದ ಯುವಕ. ಅಲೆನ್ ನಾಯಿ ಪ್ರೇಮಿಯಾಗಿದ್ದು, 2 ಲಕ್ಷ ರೂ. ಮೌಲ್ಯದ ನಾಯಿಮರಿಯನ್ನು ಕೊಡಿಸುವಂತೆ ತಾಯಿಯ ಬಳಿ ಹಠ ಮಾಡುತ್ತಿದ್ದ. ಇದನ್ನೂ ಓದಿ: ಕಾಂಗ್ರೆಸ್‍ನ ತುಷ್ಠೀಕರಣ ಪರಿಣಾಮ ಮುಸ್ಲಿಮರಿಗೆ ನಮ್ಮದೇ ರಾಜ್ಯ ಎನ್ನುವ ಭ್ರಮೆ: ಮುತಾಲಿಕ್

    ಮಗನ ಕಾಟಕ್ಕೆ ಬೇಸತ್ತು ಅಲೆನ್ ತಾಯಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಮನನೊಂದ ಅಲೆನ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಾಂಬ್ ಬೆದರಿಕೆ ಪ್ರಕರಣವನ್ನು ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ: ಮಧು ಬಂಗಾರಪ್ಪ

  • ಬೈಕಿಗೆ ಅಡ್ಡ ಬಂದು ಸವಾರ ದುರ್ಮರಣ- 3 ದಿನದ ಬಳಿಕ ಕುಟುಂಬಕ್ಕೆ ಶ್ವಾನ ಸಾಂತ್ವನ

    ಬೈಕಿಗೆ ಅಡ್ಡ ಬಂದು ಸವಾರ ದುರ್ಮರಣ- 3 ದಿನದ ಬಳಿಕ ಕುಟುಂಬಕ್ಕೆ ಶ್ವಾನ ಸಾಂತ್ವನ

    ದಾವಣಗೆರೆ: ಬೈಕಿಗೆ ನಾಯಿ (Dog) ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅ ಬೈಕ್ ಗೆ ಅಡ್ಡ ಬಂದಿದ್ದ ನಾಯಿ ಮೂರು ದಿನದ ನಂತರ ಮೃತನ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಿಸ್ಮಯಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ತಿಪ್ಪೇಶ್ (21) ಎನ್ನುವ ಯುವಕ ಕಳೆದ ಗುರುವಾರ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದ. ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದ ತಿಪ್ಪೇಶ್, ಸಹೋದರಿಯನ್ನು ಬಿಟ್ಟು ವಾಪಸ್ ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತವಾಗಿದ್ದು.

    ತಲೆಗೆ ಗಂಬೀರ ಹೊಡೆದ ಬಿದ್ದ ಹಿನ್ನಲೆ ತಿಪ್ಪೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಸಾವನ್ನಪ್ಪಿದ ಮೂರನೇ ದಿನಕ್ಕೆ ಮೃತನ ಮನೆಗೆ ಅದೇ ಶ್ವಾನ ಆಗಮಿಸಿದ್ದು, ತಿಪ್ಪೇಶ್ ನ ಕೊಠಡಿ, ಅಡುಗೆ ಮನೆ ಯನ್ನು ಸುತ್ತಾಡಿದೆ. ಅಲ್ಲದೆ ತಿಪ್ಪೇಶ್ ತಾಯಿಯನ್ನು ಅಳದಂತೆ ನಾಯಿ ಸಮಾಧಾನ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ನಾಯಿ ಈ ರೀತಿ ಮಾಡುತ್ತಿರುವುದನ್ನು ನೋಡಿ ಇಡೀ ಗ್ರಾಮದ ಜನರು ಆಶ್ಚರ್ಯ ವ್ಯಕ್ತಪಡಿಸಿದರು. ಇದನ್ನೂ ಓದಿ: 2 ತಿಂಗಳ ಬಳಿಕ ಕೆನಡಿಯನ್ನರಿಗೆ ಇ-ವೀಸಾ ಸೇವೆಗಳ ಪುನರಾರಂಭಕ್ಕೆ ಭಾರತದ ನಿರ್ಧಾರ

  • ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಇಬ್ಬರ ಮೆರವಣಿಗೆ

    ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಇಬ್ಬರ ಮೆರವಣಿಗೆ

    ಉಡುಪಿ: ನಿಗೂಢವಾಗಿ ಕಣ್ಮರೆಯಾಗಿ ಅಚ್ಚರಿಯ ರೀತಿಯಲ್ಲಿ ಮನೆಗೆ ವಾಪಸ್ ಆದ ಯುವಕನನ್ನು ಇಡೀ ಗ್ರಾಮಸ್ಥರು ಮೆರವಣಿಗೆ ಮಾಡಿದ್ದಾರೆ.

    ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಮಚ್ಚೆಟ್ಟು ವ್ಯಾಪ್ತಿಯ ವಿವೇಕಾನಂದ (Vivekananda Rescued By Dog) ವಾರದ ಹಿಂದೆ ಕಣ್ಮರೆಯಾಗಿದ್ದರು. ಊರು, ಕಾಡಿನ ಸುತ್ತಮುತ್ತ ಇಡೀ ಗ್ರಾಮಕ್ಕೆ ಗ್ರಾಮ ಆತನನ್ನು ಹುಡುಕಾಟ ಮಾಡಿತ್ತು. ಪೊಲೀಸರು ಅರಣ್ಯ ಇಲಾಖೆ ಕುಟುಂಬಸ್ಥರು ಎಷ್ಟೇ ಹುಡುಕಾಡಿದರೂ ಯುವಕನ ಪತ್ತೆ ಆಗಿರಲಿಲ್ಲ. ಮನೆಯ ಸಾಕು ನಾಯಿ ಯುವಕನನ್ನ 7 ದಿನದ ಬಳಿಕ ಕರೆದುಕೊಂಡು ಬಂದಿದೆ. ಇದರಿಂದ ಇಡೀ ಗ್ರಾಮಕ್ಕೆ ಅಚ್ಚರಿ ಮತ್ತು ಸಂತಸವಾಗಿದ್ದು, 50ಕ್ಕಿಂತ ಹೆಚ್ಚು ಬೈಕ್ ಟೆಂಪೋ ಆಟೋರಿಕ್ಷಾಗಳ ಮೆರವಣಿಗೆ ಮಾಡಲಾಯ್ತು.

    ತೆರೆದ ವಾಹನದಲ್ಲಿ ಚಿಂಟು ಮತ್ತು ವಿವೇಕಾನಂದ ಕುಟುಂಬಸ್ಥರು ಆಪ್ತರನ್ನು ಗೆಳೆಯರ ಬಳಗ ಮೆರವಣಿಗೆ ಮಾಡಿದೆ. ನಂತರ ಮನೆಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ರೀತಿಯಲ್ಲೇ ವಿವೇಕಾನಂದ ವಾಪಾಸ್ ಬಂದ ಖುಷಿಯನ್ನು ಆಚರಿಸಲಾಯ್ತು. ಸುತ್ತಮುತ್ತಲ ಮನೆಯವರಿಗೆ ಗೆಳೆಯರ ಬಳಗಕ್ಕೆ ಹುಡುಕಾಡಲು ಸಹಾಯ ಮಾಡಿದ ಎಲ್ಲರಿಗೆ ಶೀನಾ ನಾಯ್ಕ ಕುಟುಂಬ ಸಿಹಿಯೂಟ ಹಾಕಿಸಿದೆ. ಇದನ್ನೂ ಓದಿ: ನಾಪತ್ತೆಯಾದ ಯುವಕನನ್ನು ಪತ್ತೆ ಮಾಡಿದ ಸಾಕುನಾಯಿ- ಘಟನೆ ಹಿಂದಿದೆ ರೋಚಕ ಕಥೆ

    ಯುವಕ ವಿವೇಕಾನಂದ ಕಣ್ಮರೆಯಾದ ನಂತರ ಜ್ಯೋತಿಷಿಗಳಲ್ಲಿ ಪ್ರಶ್ನಾ ಚಿಂತನೆ ಮಾಡಲಾಗಿತ್ತು. ದೇವಸ್ಥಾನ, ದೈವಸ್ಥಾನದ ಮೊರೆ ಹೋಗಲಾಗಿತ್ತು. ಕುಟುಂಬಸ್ಥರು ಹರಕೆಯನ್ನು ಹೊತ್ತಿದ್ದರು. ತಮ್ಮ ಜಮೀನಿನಲ್ಲಿದ್ದ ಒಂದು ವಿಶೇಷ ಕಲ್ಲಿಗೆ ಪೂಜೆ ಪುನಸ್ಕಾರವನ್ನು ಕೂಡ ಕುಟುಂಬಸ್ಥರು ನೆರವೇರಿಸಿದ್ದಾರೆ. ಕಣ್ಮರೆಯಾಗುವ ಮೊದಲು ಆ ಯುವಕ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದು, ಆ ಕಲ್ಲಿನಲ್ಲಿ ದೈವೀಶಕ್ತಿ ಇರಬಹುದು ಎಂದು ಪೋಷಕರು ನಂಬಿದ್ದಾರೆ. ಈ ಘಟನೆಯ ಸತ್ಯಾಸತ್ಯತೆ ಕುರಿತಂತೆ ಚರ್ಚೆ ಕೂಡಾ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಪತ್ತೆಯಾದ ಯುವಕನನ್ನು ಪತ್ತೆ ಮಾಡಿದ ಸಾಕುನಾಯಿ- ಘಟನೆ ಹಿಂದಿದೆ ರೋಚಕ ಕಥೆ

    ನಾಪತ್ತೆಯಾದ ಯುವಕನನ್ನು ಪತ್ತೆ ಮಾಡಿದ ಸಾಕುನಾಯಿ- ಘಟನೆ ಹಿಂದಿದೆ ರೋಚಕ ಕಥೆ

    ಉಡುಪಿ: ಕಣ್ಮರೆಯಾದ ಯುವಕನೊಬ್ಬನನ್ನು ಮನೆಯ ಸಾಕುನಾಯಿ ಹುಡುಕಿದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಏಳು ದಿನ ಕಾಡು-ಮೇಡಿನಲ್ಲಿ ಹುಡುಕಿದ ಪ್ರಕರಣ ಬಹಳ ಕೌತುಕಕ್ಕೆ ಕಾರಣವಾಗಿತ್ತು. ಇದೀಗ ಆ ಘಟನೆ ಹಿಂದೆ ಕುತೂಹಲಕಾರಿ ಕಥೆಯೊಂದು ಕೇಳಿಬಂದಿದೆ.

    ಉಡುಪಿ ಜಿಲ್ಲೆ ಅಮವಾಸ್ಯೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕ ಕುಟುಂಬದಲ್ಲಿ ಈ ಘಟನೆ ನಡೆದಿದೆ. ಶೀನ ನಾಯ್ಕರ ಮಗ ವಿವೇಕಾನಂದ ನಾಪತ್ತೆಯಾದಾತ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವಿವೇಕಾನಂದ ಸೆಪ್ಟೆಂಬರ್ 16 ರಂದು ಮನೆಯಿಂದಲೇ ನಾಪತ್ತೆಯಾಗಿದ್ದ. ಮನೆಯಿಂದ ಹೊರಡುವಾಗ ಸಾಕು ನಾಯಿ ಕೂಡ ವಿವೇಕಾನಂದ ಜೊತೆಗೆ ತೆರಳಿತ್ತು. ವಾರಗಳ ಕಾಲ ಕಾಡಿನಲ್ಲಿ ಅಲೆದಾಡಿದ್ದ ವಿವೇಕಾನಂದ, ಅನ್ನ ಆಹಾರವಿಲ್ಲದೆ ಬರಿ ನೀರು ಕುಡಿದು ಜೀವಂತವಿದ್ದ.

    ಈತನನ್ನು ಹುಡುಕುವ ಸಲುವಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಾಕಷ್ಟು ಶೋಧ ನಡೆಸಿತ್ತು. ಈ ಭಾಗದಲ್ಲಿ ಚಿರತೆಗಳ ಕಾಟ ಜಾಸ್ತಿ ಆಗಿರುವ ಕಾರಣ ಯುವಕ ಚಿರತೆಗೆ ಆಹಾರವಾಗಿರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ಆಶ್ಚರ್ಯಕರ ರೀತಿಯಲ್ಲಿ 8 ದಿನಗಳ ಬಳಿಕ ಕಬ್ಬಿನಾಲೆಯ ಸಮೀಪದ ಮನೆ ಒಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ವಿವೇಕಾನಂದ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಉಗ್ರರಿಗೆ ಬೆಂಬಲ – ಇಬ್ಬರು ಮಹಿಳೆಯರು, ಓರ್ವ ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್

    ಮನೆಯ ನಾಯಿಯ ಸಹಾಯದಿಂದ ಊರಿಗೆ ಮರಳಿದ್ದ ಯುವಕ, ನಿತ್ರಾಣಗೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಸಾಕಿದ ಮನೆಯ ನಿಯತ್ತನ್ನು ಉಳಿಸಿಕೊಂಡಿರುವ ನಾಯಿಯ ಬಗ್ಗೆ ಇಡೀ ಊರು ಸಂಭ್ರಮಿಸುತ್ತಿದೆ. ಕುಟುಂಬ, ಸುತ್ತಮುತ್ತಲ ಗ್ರಾಮಸ್ಥರು ಶೀನಾ ನಾಯಕರ ಮನೆಗೆ ಬಂದು ಶುಭ ಕೋರಿದ್ದಾರೆ. ಸಾಕು ನಾಯಿ ಚಿಂಟುವನ್ನು ಅಭಿನಂದಿಸಿದ್ದಾರೆ.

    ವಿವೇಕಾನಂದನನ್ನು ಹುಡುಕಿದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಂದು ವಾರಗಳ ಕಾಲ ಎಲ್ಲಾ ಕಡೆ ಹುಡುಕಾಡಿದರು. ದೈವ ದೇವರ ಮೊರೆ ಹೋಗಿದ್ದರು. ಜ್ಯೋತಿಷಿ ಮತ್ತು ಪ್ರಶ್ನಾ ಚಿಂತನೆ ಮಾಡುವವರನ್ನು ಸಂಪರ್ಕ ಮಾಡಿದ್ದರು. ಈ ಸಂದರ್ಭ ಉತ್ತರ ಕರ್ನಾಟಕ ಭಾಗದ ಮಹಿಳಾ ಜ್ಯೋತಿಷಿ ಒಬ್ಬರು ಜಮೀನಿನಲ್ಲಿರುವ ಒಂದು ಕಲ್ಲಿನಲ್ಲಿ ದೈವಿಶಕ್ತಿ ಇದೆ. ಅದೇ ಆಸು-ಪಾಸಿನಲ್ಲಿ ಕಣ್ಮರೆಯಾದ ಯುವಕ ಕಾಣಿಸಿಕೊಳ್ಳುತ್ತಿದ್ದಾನೆ. ಆ ಕಲ್ಲಿಗೆ ಪೂಜೆ ಸಲ್ಲಿಸಿ ನಿಷ್ಠೆಯಿಂದ ನಡೆದುಕೊಳ್ಳಿ ಎಂದು ಸಲಹೆ ನೀಡಿದ್ದರು.

    ನುಡಿದ ಮಾತಿನಂತೆ ಯುವಕ ವಾಪಸ್ ಬಂದಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಕೌತುಕದ ಕಥೆಯನ್ನು ವಿವರಿಸಿದ್ದಾರೆ. ಕುಟುಂಬದ ಖುಷಿಗೆ ಪಾರವೇ ಇಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖಾಕಿ ತೊಟ್ಟವರಿಗೆ ಕಚ್ಚುವ ತರಬೇತಿ- ಡ್ರಗ್ಸ್ ದಾಳಿ ವೇಳೆ ಪೊಲೀಸ್‌ ಟೀಂಗೆ ನಾಯಿಗಳ ಕಾಟ

    ಖಾಕಿ ತೊಟ್ಟವರಿಗೆ ಕಚ್ಚುವ ತರಬೇತಿ- ಡ್ರಗ್ಸ್ ದಾಳಿ ವೇಳೆ ಪೊಲೀಸ್‌ ಟೀಂಗೆ ನಾಯಿಗಳ ಕಾಟ

    ತಿರುವನಂತಪುರಂ: ವ್ಯಕ್ತಿಯೊಬ್ಬ ಡ್ರಗ್ಸ್ ಮಾರಾಟ ಮಾಡುತ್ತಿದ್ದಾನೆ ಎಂಬುದನ್ನು ಅರಿತ ಪೊಲೀಸರು ಆತನ ಮನೆ ಮೇಲೆ ದಾಳಿ ಮಾಡಲು ಹೋದಾಗ ನಾಯಿಗಳ ಕಾಟ ಎದುರಿಸಿದ ಪ್ರಸಂಗವೊಂದು ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

    ಖಾಕಿ ತೊಟ್ಟು ಯಾರೇ ಬಂದರೂ ಕಚ್ಚುವಂತೆ ನಾಯಿಗಳಿಗೆ ತರಬೇತಿ (Trained To Bite Anyone In Khaki) ನೀಡಲಾಗಿತ್ತು. ಅಂತೆಯೇ ಇತ್ತ ದಾಳಿಗೆ ಬಂದ ಪೊಲೀಸರಿಗೆ ಅವುಗಳು ಅಡ್ಡಿ ಉಂಟುಮಾಡಿದವು.

    ಏನಿದು ಘಟನೆ..?: ಭಾನುವಾರ ಪೊಲೀಸರು ಶಂಕಿತನ ಮನೆಗೆ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ಒಂದಷ್ಟು ನಾಯಿಗಳು ಕಚ್ಚಲು ಬಂದವು. ಆಗ ಪೊಲೀಸರು ನಾಯಿಗಳಿಂದ ಪಾರಾಗಲು ಯತ್ನಿಸಿದರೆ, ಇತ್ತ ಆರೋಪಿಗಳು ತಪ್ಪಿಸಿಕೊಂಡು ಹೋಗಲು ಸಾಧ್ಯವಾಯಿತು. ಈ ನಡುವೆಯೂ ನಾಯಿಗಳನ್ನು ಎದುರಿಸಿ ವ್ಯಕ್ತಿಯ ಮನೆಯಿಂದ 17 ಕಿ.ಗ್ರಾಂಗಳಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕೊಟ್ಟಾಯಂ ಎಸ್‍ಪಿ ಕೆ ಕಾರ್ತಿಕ್ ಐಪಿಎಸ್, ಗಾಂಧಿನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಒಳಗೊಂಡ ಶೋಧ ತಂಡವು ಸ್ಥಳಕ್ಕೆ ಆಗಮಿಸಿದಾಗ ಮಧ್ಯರಾತ್ರಿಯಾಗಿತ್ತು. ವ್ಯಕ್ತಿ ಮನೆಯಲ್ಲಿ ಇಷ್ಟೊಂದು ನಾಯಿಗಳು ಇರುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆದ್ದರಿಂದ ಆರಂಭದಲ್ಲಿ ಸರಿಯಾದ ಹುಡುಕಾಟ ನಡೆಸುವಲ್ಲಿ ವಿಫಲರಾದೆವು. ಅದೃಷ್ಟವಶಾತ್, ನಾಯಿಗಳಿಂದ ಯಾವುದೇ ಅಧಿಕಾರಿಗಳಿಗೆ ಗಾಯಗಳಾಗಿಲ್ಲ ಎಂದರು.

    ಆರೋಪಿಯು ಖಾಕಿಯನ್ನು ನೋಡಿ ನಾಯಿಗಳಿಗೆ ಕಚ್ಚುವ ತರಬೇತಿಯನ್ನು ನೀಡಿದ್ದನು. ಬಿಎಸ್‍ಎಫ್‍ನಿಂದ ನಿವೃತ್ತನಾದ ವ್ಯಕ್ತಿಯಿಂದ ನಾಯಿ ನಿರ್ವಹಣೆಯ ಕುರಿತು ತರಬೇತಿ ಪಡೆದಿದ್ದನು. ಆದರೆ ಖಾಕಿ ಧರಿಸಿದವರನ್ನೇ ನಾಯಿಗಳು ಕಚ್ಚುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಅವನು ಉತ್ತರಿಸಿಲ್ಲ. ಶ್ವಾನ ತರಬೇತುದಾರನ ಸೋಗಿನಲ್ಲಿ ಆರೋಪಿಗಳು ಮಾದಕ ವಸ್ತು ಮಾರಾಟ ಮಾಡುತ್ತಿದ್ದು, ಸ್ಥಳದಿಂದ 17 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಬಾಡಿಗೆ ಕೊಟ್ಟು ಆ ಮನೆಯಲ್ಲಿ ವಾಸಿಸುತ್ತಿದ್ದನು. ಅಲ್ಲದೆ ತಾನು ನೆಲೆಸಿದ್ದ ಪ್ರದೇಶದಲ್ಲಿ ಎಲ್ಲರಿಗೂ ನಾಯಿ ತರಬೇತುದಾರ ಎಂದೇ ಪರಿಚಿತನಾಗಿದ್ದನು. ಆದ್ದರಿಂದ ಜನರು ದಿನಕ್ಕೆ 1,000 ರೂ. ದರದಲ್ಲಿ ತಮ್ಮ ನಾಯಿಗಳನ್ನು ಅವನೊಂದಿಗೆ ಬಿಡುತ್ತಿದ್ದರು. ಸದ್ಯ ಸುಮಾರು 13 ನಾಯಿಗಳು ಅಲ್ಲಿದ್ದು, ಅವುಗಳ ಮಾಲೀಕರನ್ನು ಗುರುತಿಸಿದ ಬಳಿಕ ಹಸ್ತಾಂತರಿಸಲಾಗುವುದು. ಅಲ್ಲದೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದರು.

    ನಾವು ಮೊದಲು ಆರೋಪಿಗಳನ್ನು ಹಿಡಿಯಬೇಕು ಮತ್ತು ನಂತರ ಯಾರಾದರೂ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಬೇಕು ಎಂದು ಅಧಿಕಾರಿ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]