Tag: Dog Video

  • ಸೂಪರ್ ಫೀಲ್ಡಿಂಗ್, ಕೀಪಿಂಗ್ – ನಾಯಿಗೆ ಹೆಸರು ಕೊಡಿ ಎಂದ ಸಚಿನ್

    ಸೂಪರ್ ಫೀಲ್ಡಿಂಗ್, ಕೀಪಿಂಗ್ – ನಾಯಿಗೆ ಹೆಸರು ಕೊಡಿ ಎಂದ ಸಚಿನ್

    ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ನಾಯಿಯೊಂದರ ಕ್ಯೂಟ್ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಾಮಾನ್ಯವಾಗಿ ನಾಯಿ ನಿಯತ್ತಿನ ಪ್ರಾಣಿ ಎಂದು ಕರೆಯುತ್ತಾರೆ. ಸಾಕಷ್ಟು ಕ್ಯೂಟ್ ಪ್ರಾಣಿಗಳಲ್ಲಿ ಶ್ವಾನ ಕೂಡ ಒಂದಾಗಿದೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ನಾಯಿಯ ಕ್ಯೂಟ್ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಸದ್ಯ ನಾಯಿಯೊಂದು ವಿಕೆಟ್ ಕೀಪರ್ ಆಗಿ, ಫೀಲ್ಡಿಂಗ್ ಮಾಡುತ್ತಾ ಆಟ ಆಡುತ್ತಿರುವ ವೀಡಿಯೋವೊಂದನ್ನು ಸಚಿನ್ ತೆಂಡೂಲ್ಕರ್ ಅವರು ತಮ್ಮ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ಪ್ರತಿಯೊಬ್ಬರ ಮೊಗದಲ್ಲಿ ಮಂದಹಾಸ ತರಿಸುತ್ತದೆ.

    sachin

    ರಸ್ತೆಯೊಂದರಲ್ಲಿ ಕೋಲುಗಳನ್ನೇ ಸ್ಟಂಪ್‍ಗಳನ್ನಾಗಿ ಮಾಡಿಕೊಂಡು ಮಕ್ಕಳು ಕ್ರಿಕೆಟ್ ಆಟ ಆಡುತ್ತಿರುತ್ತಾರೆ. ಈ ವೇಳೆ ಬಾಲಕಿಯೊಬ್ಬಳು ಬ್ಯಾಟ್ ಹಿಡಿದುಕೊಂಡು ಬಾಲ್ ಅನ್ನು ಹೊಡೆದರೆ, ಮಧ್ಯದಲ್ಲಿ ನಾಯಿ ಓಡಾಡುತ್ತಾ ಬಾಲ್ ಅನ್ನು ಹಿಡಿದು ಅದನ್ನು ಬಾಲರ್ ಕೈಗೆ ನೀಡುತ್ತದೆ. ಜೊತೆಗೆ ನಾಯಿ ವಿಕೆಟ್ ಕೀಪರ್ ಆಗಿ ಕೂಡ ಆಟ ಆಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ನಾಯಿ ಮೂತ್ರ, ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ

    ಈ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ಸಚಿನ್ ಅವರು, ಕೆಲವರು ಶಾರ್ಪ್ ಬಾಲ್ ಅನ್ನು ಕ್ಯಾಚ್ ಹಿಡಿಯುವ ಕೌಶಲ್ಯವನ್ನು ಹೊಂದಿರುತ್ತಾರೆ. ನಾವು ಕ್ರಿಕೆಟ್‍ನಲ್ಲಿ ವಿಕೆಟ್ ಕೀಪರ್‍ಗಳು, ಫೀಲ್ಡರ್‍ಗಳು ಮತ್ತು ಆಲ್‌ರೌಂಡರ್‌ಗಳನ್ನು  ನೋಡಿರುತ್ತೇವೆ. ಆದರೆ ಇದಕ್ಕೆ ನೀವು ಏನೆಂದು ಹೆಸರಿಡುತ್ತೀರಾ? ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 243 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಜೀನಿಯಸ್, ಅತ್ಯುತ್ತಮ ಆಲ್ ರೌಂಡರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿ ಹೊಡೆದು ಕೊಂದ