Tag: Dog Show

  • Photo Gallery | ಹಾಸನದಲ್ಲಿ ಗಮನ ಸೆಳೆದ ಶ್ವಾನ ಪ್ರದರ್ಶನ

    Photo Gallery | ಹಾಸನದಲ್ಲಿ ಗಮನ ಸೆಳೆದ ಶ್ವಾನ ಪ್ರದರ್ಶನ

    ಹಾಸನ: ಕೆನಲ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಸರ್ಕಾರಿ ಕಲಾ ಕಾಲೇಜಿನ ಕ್ರೀಡಾಂಗಣದಲ್ಲಿ ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸುಮಾರು 25 ತಳಿಯ 200ಕ್ಕೂ ಹೆಚ್ಚು ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿಯಾಗಿ, ಪ್ರಾಣಿಪ್ರಿಯರ ಗಮನ ಸೆಳೆದವು.

    ನಮ್ಮ ದೇಶೀಯ ತಳಿಯಾದ ಮುಧೋಳ್, ಡಾಬರ್ ಮನ್ , ಲ್ಯಾಬ್ರಡಾರ್, ರಾಟ್ ವೀಲರ್, ಡ್ಯಾಶಂಡ್ ಡ್ಯಾಶ್, ಪಿಟ್ಬುಲ್, ಬಾಕ್ಸರ್, ಹಸ್ಕಿ, ಸೀಳುನಾಯಿ, ಜರ್ಮನ್ ಶಫರ್ಡ್, ಗೋಲ್ಡನ್ ರಿಟ್ರಿವರ್, ಬಿಯಗಲ್ ಹೆಸರಿ ಸಣ್ಣ ಹಾಗೂ ದೊಡ್ಡ ತಳಿಯ ನಾಯಿಗಳು ಬಲು ಆಕರ್ಷಣೆ ಎನಿಸಿದವು. ಚೈನಾ, ಟಿಬೇಟಿಯನ್, ಜರ್ಮನಿ ತಳಿಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳೋ ಭಾಗ್ಯ ಪ್ರಾಣಿ ಪ್ರಿಯರಿಗೆ ಸಿಕ್ಕಿತು. ಇವಲ್ಲದೇ ಪೊಮೇರಿಯನ್, ಸೇಂಟ್ ಬರ್ನಾಡ್, ಗ್ರೇಟ್ ಡೆನ್, ಶಿಟ್ಜ್ ಡಾಗ್‍ಗಳು ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರನ್ನು ಮುದಗೊಳಿಸಿದವು.

     

  • Mysuru Dasara: ಸುಧಾಮೂರ್ತಿ ಸಾಕಿದ ಶ್ವಾನ ಗೋಪಿಗೆ ಬಹುಮಾನ

    Mysuru Dasara: ಸುಧಾಮೂರ್ತಿ ಸಾಕಿದ ಶ್ವಾನ ಗೋಪಿಗೆ ಬಹುಮಾನ

    – ಮೈಸೂರು ದಸರಾ ಉತ್ಸವದಲ್ಲಿ ಕಣ್ಮನ ಸೆಳೆದ ಶ್ವಾನಗಳು
    – 45 ತಳಿ, 480 ಅಧಿಕ ಶ್ವಾನಗಳ ಪ್ರದರ್ಶನ
    – ತಾಯಿ ಬಿಟ್ಟರೆ ಅಷ್ಟೊಂದು ಮಮತೆ, ಪ್ರೀತಿ ತೋರಿಸೋದು ನಾಯಿ: ಸಂಸದೆ ಮಾತು

    ಮೈಸೂರು: ದೇಶ-ವಿದೇಶದ ಶ್ವಾನಗಳು ತಮ್ಮ ತುಂಟಾಟ, ಓಡಾಟದ ಮೂಲಕ ನೂರಾರು ಮಂದಿಯನ್ನು ಆಕರ್ಷಿಸಿದವು. ಆಟ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕಿದ ಶ್ವಾನಗಳ ಬುದ್ಧಿವಂತಿಕೆ ಹಾಗೂ ಮಾಲೀಕರ ಮೇಲಿನ ಪ್ರೀತಿಯನ್ನು ಪ್ರವಾಸಿಗರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

    ಇಂದು ನಾಡಹಬ್ಬ ಮೈಸೂರು ‌ದಸರಾ ಅಂಗವಾಗಿ ಜೆ.ಕೆ ಮೈದಾನದಲ್ಲಿ ನಡೆದ ‘ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜರ್ಮನ್ ಶೆಫರ್ಡ್, ಟಿಬೆಟಿಯನ್ ಮಸ್ಟಿಫ್, ಇಂಡಿಯನ್ ಮಸ್ಟಿಫ್, ಡಾಬರ್ ಮ್ಯಾನ್, ಮುಧೋಳ್, ಸಿಬೇರಿಯನ್ ಹಸ್ಕಿ, ಐರಿಷ್ ಶೆಟ್ಟರ್, ಅಕಿಟಾ, ಲೆಬ್ರಡರ್ ಲ್ಯಾಬ್ರಡರ್, ಪೂಡ್ಲೆ, ಡಾಗೋ ಅರ್ಜೆಂಟೈನಾ, ಗ್ರೇಟ್ ಡೇನ್, ಪೋಮೋರಿಯನ್, ರಾಜ ಪಲ್ಯಮ್, ಪಿಟ್ ಬುಲ್ ಹಾಗೂ ಗೋಲ್ಡನ್ ರಿಟ್ರೀವರ್, ಕಾಕರ್ ಸ್ಫ್ಯಾನಿಯಲ್, ಅಮೆರಿಕನ್ ಬುಲ್ಲಿ, ಬಾಕ್ಸರ್, ಬೀಗಲ್, ಫ್ರೆಂಡ್ಸ್ ಬುಲ್ ಡಾಗ್, ಚೌಚೌ, ಪಗ್, ಡಚ್ ಶೆಫರ್ಡ್, ಟಿಬೇಟಿಯನ್ ಸ್ಫ್ಯಾನಿಯಲ್, ರಾಟ್ ವಿಲ್ಲರ್, ಸೈಂಟ್ ಬೆರ್ನಾರ್ಡ್, ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

    ಕಳೆದ ಬಾರಿ ದಸರಾದಲ್ಲಿ ಸುಮಾರು 20 ರಿಂದ 25 ತಳಿಗಳ ಶ್ವಾನಗಳು ಮಾತ್ರ ನೋಂದಣಿಯಾಗಿದ್ದವು. ಆದರೆ, ಈ ಬಾರಿ 45 ತಳಿ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಅದರಲ್ಲಿ ಪ್ರಮುಖವಾಗಿ 12 ತಳಿಗಳು ದೇಶಿಯದ್ದಾಗಿದ್ದು, ಉಳಿದ ಎಲ್ಲಾ ತಳಿಗಳು ಸ್ವದೇಶಿಯದ್ದಾಗಿದ್ದವು.

    ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ರಾಜ್ಯಸಭೆಯ ಸದಸ್ಯೆ ಸುಧಾಮೂರ್ತಿ ಅವರು ಮಾತನಾಡಿ, ಮುದ್ದು ಪ್ರಾಣಿಗಳು ನಮ್ಮ ಮಕ್ಕಳಿದ್ದಂತೆ. ಅವುಗಳನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು. ಅನಾರೋಗ್ಯಕ್ಕೆ ತುತ್ತಾಗಿರುವ ಹಾಗೂ ಗಾಯಗೊಂಡ ಎಷ್ಟೋ ಬೀದಿ ಶ್ವಾನಗಳಿದ್ದಾವೆ. ನಮ್ಮ ಮಕ್ಕಳೊಂದಿಗೆ ಅವುಗಳ ಆರೈಕೆಗೆ ಮುಂದಾಗಬೇಕು. ಇಂತಹ ಶ್ವಾನಗಳ ಪ್ರದರ್ಶನದಿಂದ ಮಕ್ಕಳಲ್ಲಿ ಪ್ರಾಣಿಗಳ ಪ್ರೀತಿ ಹೆಚ್ಚಾಗುತ್ತದೆ ಎಂದು ಕಿವಿಮಾತು ಹೇಳಿದರು.

    ನನಗೆ ನಾಯಿ ಅಂದ್ರೆ ತುಂಬಾ ಇಷ್ಟ. ತಾಯಿ ಬಿಟ್ಟರೆ ಅಷ್ಟೊಂದು ಮಮತೆ, ಪ್ರೀತಿ ತೋರಿಸೋದು ನಾಯಿ. ನಾಯಿ ಅಂದ್ರೆ ಮಗು ಇದ್ದಂತೆ, ನಾಯಿ ಸಾಕಲು ಆಗೋದಕ್ಕೆ ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ. ನಿಮ್ಮ ಮಕ್ಕಳ ಜೊತೆಗೆ ಹೋಗಿ ಬೀದಿ ನಾಯಿಗಳಿಗೆ ಸಹಾಯ ಮಾಡಿ, ಗಾಯಗೊಂಡಿರೋ ನಾಯಿಗಳಿಗೆ ಚಿಕಿತ್ಸೆ ಕೊಡಿಸಿ ಜನರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುಧಾಮೂರ್ತಿ ಅವರ ಮುದ್ದಾದ ಶ್ವಾನ ‘ಗೋಪಿ’ ಕೂಡ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು. ಗೋಪಿಗೂ ಕೂಡ ಬಹುಮಾನ ನೀಡಲಾಯಿತು.

    ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ಹಾಗೂ ಮೂಲ ತಳಿಗಳ ಶ್ವಾನಗಳಿಗೆ ಶ್ವಾನ ವೈದ್ಯಾಧಿಕಾರಿಗಳು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿದಂತಹ ತೀರ್ಪುಗಾರರಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿದರು.

  • ಗ್ರಾಮಕ್ಕೂ ಲಗ್ಗೆ ಇಟ್ಟ ಡಾಗ್ ಶೋ- ಚಿಕ್ಕೋಡಿಯಲ್ಲಿ ಶ್ವಾನಗಳ ಕ್ಯಾಟ್ ವಾಕ್

    ಗ್ರಾಮಕ್ಕೂ ಲಗ್ಗೆ ಇಟ್ಟ ಡಾಗ್ ಶೋ- ಚಿಕ್ಕೋಡಿಯಲ್ಲಿ ಶ್ವಾನಗಳ ಕ್ಯಾಟ್ ವಾಕ್

    ಚಿಕ್ಕೋಡಿ/ಬೆಳಗಾವಿ: ಶ್ವಾನಗಳ ಸಾಕುವಿಕೆ ಇತ್ತೀಚಿಗೆ ಫ್ಯಾಷನ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ವಾನ ಪ್ರದರ್ಶನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಶ್ವಾನ ಪ್ರದರ್ಶನವನ್ನ ಆಯೋಜಿಸಲಾಗಿತ್ತು.

    ಐನಾಪುರ ಸಿದ್ದೇಶ್ವರ ಜಾತ್ರೆಯ ಅಂಗವಾಗಿ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ ಕೃಷಿ ಮೇಳದಲ್ಲಿ ಈ ಡಾಗ್ ಶೋ ಏರ್ಪಡಿಸಲಾಗಿತ್ತು. ಪ್ರದರ್ಶನಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ನೂರಾರು ಜನ ತಮ್ಮ ಶ್ವಾನಗಳನ್ನು ತಂದಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ವಾನಗಳು ವಿಶೇಷವಾದ ಕೂದಲು, ಬಣ್ಣ, ದೇಹಾಕಾರದಿಂದ ಪ್ರೇಕ್ಷಕರನ್ನು ಸೆಳೆದವು. ನೋಡುವುದಕ್ಕೆ ಭಯ ತರಿಸುವಂತಿದ್ದರೂ, ಬಹಳ ಮೃದು ಸ್ವಭಾವದ ಶ್ವಾನಗಳಾಗಿದ್ದು, ಪ್ರೇಕ್ಷಕರು ಸುತ್ತುವರಿದು ನಾಮುಂದು, ತಾಮುಂದು ಎಂದು ಸೆಲ್ಫಿ ಕ್ಲಿಕ್ಕಿಸಿದರು. ಈ ಶ್ವಾನ ಪ್ರದರ್ಶನದಲ್ಲಿ ಸುಮಾರು 20ಕ್ಕೂ ಅಧಿಕ ತಳಿಯ ಒಂದು ಕೆ.ಜಿ ತೂಕದಿಂದ 150 ಕೆ.ಜಿ ತೂಕದ 250ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿದ್ದವು.

    ಮಾಲೀಕರೊಂದಿಗೆ ಸಾಕು ನಾಯಿಗಳು ವೇದಿಕೆಯಲ್ಲಿ ರ್ಯಾಂಪ್ ವಾಕ್ ಮಾಡಿದರೆ, ಕೆಲವೊಂದು ದೈತ್ಯ ದೇಹದ ಶ್ವಾನಗಳು ತುಂಟತನದೊಂದಿಗೆ ನೋಡುಗರನ್ನು ಸೆಳೆದವು. ಮನುಷ್ಯನಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತೆ ಕೆಲ ನಾಯಿಗಳು ತರಹೇವಾರಿ ಉಡುಪುಗಳನ್ನು ತೊಟ್ಟು ಸೈ ಎನಿಸಿಕೊಂಡವು.

    ಪ್ರದರ್ಶನದಲ್ಲಿ ನೂರಾರು ಜನ ವಿವಿಧ ತಳಿಯ ಶ್ವಾನಗಳನ್ನು ಕಂಡು ಸಂತೋಷಪಟ್ಟರು. ಶ್ವಾನ ಪ್ರದರ್ಶನದಲ್ಲಿ ಗ್ರೇಟ್ಡಾನ್, ಟುಮೋರಿಯನ್, ಡೊಬರಮನ್, ಸೆಂಡ್ ಬರ್ನಾರ್ಡ, ಜರ್ಮನ್ ಷಫರ್ಡ, ಪಗ್, ರಾಟ್ ವ್ಹಿಲ್, ಅಮೆರಿಕನ್ ಫಿಟ್ಬುಕ್, ಟೆರಿಯರ್, ಶಿಖಾರಿ ಸೇರಿದಂತೆ ವಿವಿಧ 20 ತಳಿಗಳ ಶ್ವಾನಗಳು ಪಾಲ್ಗೊಂಡಿದ್ದವು. ವಿವಿಧ ರೀತಿಯ ಶ್ವಾನಗಳನ್ನು ಕಂಡು ಸ್ಥಳೀಯರು ಸಂತೋಷ ಪಟ್ಟರು.

  • ಕೊಡಗಿನ ಡಾಗ್ ಶೋ – 22ಕ್ಕೂ ಹೆಚ್ಚು ತಳಿಗಳ 230 ಶ್ವಾನಗಳು ಭಾಗಿ

    ಕೊಡಗಿನ ಡಾಗ್ ಶೋ – 22ಕ್ಕೂ ಹೆಚ್ಚು ತಳಿಗಳ 230 ಶ್ವಾನಗಳು ಭಾಗಿ

    ಮಡಿಕೇರಿ: ಸದಾ ಒಂದಿಲ್ಲೊಂದು ವಿಶೇಷ ಸ್ಪರ್ಧೆಗಳಿಂದ ಗಮನಸೆಳೆಯುವ ಕೊಡಗಿನಲ್ಲಿ ಇಂದು ಡಾಗ್ ಶೋ ಎಲ್ಲರನ್ನು ರಂಜಿಸಿತು. ಹಲವು ಭಾಗಗಳಿಂದ ಆಗಮಿಸಿದ್ದ 22ಕ್ಕೂ ಹೆಚ್ಚು ತಳಿಗಳ 230 ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನಗೊಂಡವು.

    ಮುದ್ದು ಮುದ್ದಾಗಿ ಹೆಜ್ಜೆಯಿಡುತ್ತಾ ನಲಿದಾಡಿದ ಚಿಕ್ಕ ಚಿಕ್ಕ ನಾಯಿಮರಿಗಳೊಂದೆಡೆಯಾದರೆ, ನೋಡಿದ ಕೂಡಲೇ ಎದೆನಡುಗಿಸುವಂತಹ ದೈತ್ಯಾಕಾರದ ನಾಯಿಗಳು ಕೂಡ ಶೋನಲ್ಲಿ ಬಂದಿದ್ದು ಗಮನಸೆಳೆಯಿತು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದ ಈ ಡಾಗ್ ಶೋ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ಪೊಮೆರಿಯನ್, ಗೋಲ್ಡನ್ ರಿಟ್ರೈವರ್, ಕೋಕರ್ ಸ್ಪ್ಯಾನಿಯೆಲ್ ನಂತಹ ಮುದ್ದು ಮುದ್ದಾದ ನಾಯಿಗಳನ್ನು ನೋಡೋದೆ ಒಂದು ಚೆಂದ. ಲಕ ಲಕನೆ ಓಡಾಡುತ್ತಾ ನೆರೆದಿದ್ದವರನ್ನ ರಂಜಿಸಿದ ಸ್ವೀಟ್ ಶ್ವಾನಗಳು ಬಹುಮಾನಕ್ಕಾಗಿ ಪೈಪೋಟಿ ನಡೆಸಿದವು. ದೂರದೂರುಗಳಿಂದ ತಮ್ಮ ಮುದ್ದು ನಾಯಿಗಳನ್ನ ಸ್ಪರ್ಧೆಗಾಗಿ ಕರೆತಂದಿದ್ದ ಮಾಲೀಕರು ಕೂಡ ಖುಷಿ ಖುಷಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು.

    ಮುಧೋಳ, ಗ್ರೇಟ್ ಡ್ಯಾನ್, ಸೇಂಟ್ ಬರ್ನಾಡ್, ಜರ್ಮನ್ ಶಫರ್ಡ್, ಲ್ಯಾಬ್ರೆಡಾರ್ ನಂತಹ ದೈತ್ಯಾಕಾರದ ಶ್ವಾನಗಳು ಕೂಡ ಸ್ಪರ್ಧೆಯಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು. ತಳಿಗಳ ಆಧಾರದಲ್ಲಿ ನಡೆದ ಪ್ರದರ್ಶನದಲ್ಲಿ ಪ್ರತಿ ತಳಿಗಳ ವಿಭಾಗದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ ಶ್ವಾನಗಳಿಗೆ ಬಹುಮಾನ ನೀಡಲಾಯಿತು.

  • ನಟಿ ಮೇಘನಾ ರಾಜ್ ರಿಂದ 50 ತಳಿಯ ಡಾಗ್ ಶೋ ಉದ್ಘಾಟನೆ

    ನಟಿ ಮೇಘನಾ ರಾಜ್ ರಿಂದ 50 ತಳಿಯ ಡಾಗ್ ಶೋ ಉದ್ಘಾಟನೆ

    ಬೆಂಗಳೂರು: ಒಂದಕ್ಕಿಂತ ಒಂದು ಕ್ಯೂಟ್, ಒಂದಕ್ಕಿಂತ ಒಂದು ಛಬ್ಬಿ. ನೋಡತ್ತಿದ್ರೆ ನೋಡುತ್ತಾನೇ ಇರಬೇಕು ಅನಿಸುತ್ತೆ. ಡಾಗ್ ಶೋ ದಲ್ಲಿ ಶ್ವಾನಗಳ ತುಂಟಾಟ ನೋಡೋದೇ ಚೆಂದ.

    ಹೌದು. ನಗರದಲ್ಲಿ ಪೆಟ್ಸ್ ಪ್ರಿಯರಿಗೆಂದೇ ಡಾಗ್ ಶೋ ಏರ್ಪಡಿಸಲಾಗಿತ್ತು. ಅಂತರಾಷ್ಟ್ರೀಯ ಶ್ವಾನಗಳ ಪ್ರದರ್ಶನದಲ್ಲಿ ಸುಮಾರು 50 ತಳಿಯ 450 ರಿಂದ 500 ಶ್ವಾನಗಳು ಭಾಗವಹಿಸಿದ್ದವು. ನಟಿ ಮೇಘನಾ ರಾಜ್ ಅವರು ಡಾಗ್ ಶೋ ಉದ್ಘಾಟಿಸಿದರು.

    ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಉದ್ಘಾಟಕಿ ಮೇಘನಾ ರಾಜ್, ಇದು ನನ್ನ ಮೊದಲನೆ ಡಾಗ್ ಶೋ. ಹೀಗಾಗಿ ಬಹಳ ಕುತೂಹಲವಿತ್ತು. ಯಾಕಂದ್ರೆ ನಾನು ಯಾವತ್ತೂ ಯಾವ ಡಾಗ್ ಶೋಗೂ ಬಂದಿಲ್ಲ. ಪ್ರಾಣಿಗಳು ಹೇಗೆ ನಡೆದುಕೊಳ್ಳುತ್ತವೆ ಹಾಗೆಯೇ ಅವುಗಳಿಗೆ ಹೇಗೆ ತರಬೇತಿ ನೀಡುತ್ತಾರೆ ಎಂಬುದರ ಬಗ್ಗೆ ಬಹಳ ಕುತೂಹಲ ಇತ್ತು. ನಾವು ಮನೆ ಮಂದಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಮನೆಯ ಶ್ವಾನಗಳನ್ನು ನೋಡಿಕೊಳ್ಳಬೇಕಾಗುತ್ತದೆ ಅಂತ ಹೇಳಿದ್ರು.

    ಡಾಗ್ ಶೋದಲ್ಲಿ ಭಾಗವಹಿಸಿದ ಧನಪಾಲ್ ಗೌಡ ಅವರು ಗ್ರೇಟ್ ಡೇನ್ ತಳಿಯ ಶ್ವಾನದ ಬಗ್ಗೆ ವಿವರಿಸಿದ್ದಾರೆ. ಈ ಶ್ವಾನ ಮೂಲತಃ ಜರ್ಮನಿಯದ್ದಾಗಿದೆ. ಇದಕ್ಕೆ ಪ್ರತಿದಿನ ರಾಯಲ್ ಕೆನನರ್ ಅನ್ನೋ ಫುಡ್ ಬರುತ್ತೆ, ಅದನ್ನು ನೀಡಬೇಕು. ಅದರ ಜೊತೆಗೆ ಚಿಕನ್ ನೀಡುತ್ತಾರೆ. ಸದ್ಯ ಇದು ಮನೆಯಲ್ಲಿ ಫ್ಯಾಶನ್ ಆಗಿ ಸಾಕುತ್ತಾರೆ.

    ಈ ಶೋದಲ್ಲಿ ಉತ್ತರ ಕರ್ನಾಟಕದ ಫೇಮಸ್ ಮುಧೋಳ ನಾಯಿ ಎಲ್ಲರ ಗಮನ ಸೆಳೆಯಿತು. ವಿಶೇಷ ತಳಿಯ ಶ್ವಾನಗಳಾದ ಜರ್ಮನ್ ಶೆಫರ್ಡ್, ಡಾಬರ್ ಮನ್, ರಿಟ್ರೈವರ್, ಗೋಲ್ಡನ್ ರಿಟ್ರೈವರ್, ಬಾಕ್ಸರ್, ಗ್ರೇಟ್ ಡೇನ್, ಕಾಕರ್‍ಗಳು ಕೂಡ ನಾವೇನು ಕಮ್ಮಿಯಿಲ್ಲವೆಂಬಂತೆ ಫೋಸ್ ಕೊಡ್ತು. ಗಾರ್ಡನ್ ಸಿಟಿ ಜನರು ಈ ಶೋಗೆ ಫೀದಾ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನವವಧುವಿನಂತೆ ಸಿಂಗಾರಗೊಂಡು ಡಾಗ್ ಶೋನಲ್ಲಿ ಭಾಗವಹಿಸಿದ ಶ್ವಾನ

    ನವವಧುವಿನಂತೆ ಸಿಂಗಾರಗೊಂಡು ಡಾಗ್ ಶೋನಲ್ಲಿ ಭಾಗವಹಿಸಿದ ಶ್ವಾನ

    ಬೆಳಗಾವಿ: ಹೆಣ್ಮಕ್ಕಳಿಗೆ ಮೇಕಪ್ ಅಂದರೆ ಬಹಳ ಇಷ್ಟ. ಫೇಶಿಯಲ್, ಪೆಡಿಕ್ಯೂರ್, ಮೆನಿಕ್ಯೂರ್, ಹೇರ್ ಕಟ್ ಅಂತಾ ಪಾರ್ಲರ್‍ಗೆ ಹೋಗ್ತಾರೆ. ಆದರೆ ಇಲ್ಲಿ ಶ್ವಾನಗಳಿಗೂ ಇದೇ ತರಹ ಅಲಂಕಾರ ಮಾಡಿ ನವವಧುವಿನಂತೆ ಸಿಂಗಾರ ಮಾಡ್ತಾರೆ.

    ದೇಶದ ವಿವಿಧ ನಗರಗಳಿಂದ ಶ್ವಾನಗಳು ಅತಿಥಿಯಾಗಿ ಬಂದಿದೆ. ಶ್ವಾನಗಳು ತಮ್ಮದೇ ಆದ ಸ್ಟೇಲ್ ನಲ್ಲಿ ವಾಕಿಂಗ್, ರನ್ನಿಂಗ್ ಮಾಡಿ ತಮ್ಮ ಪ್ರತಿಭೆಯನ್ನು ತೋರಿಸುತ್ತವೆ. ಈ ಶೋಗೆ ತಯಾರಿ ಮಾಡಲು ಇವರ ಆಪ್ತರು ಹರಸಾಹಸ ಪಡುತ್ತಾರೆ. ಫೇಶಿಯಲ್, ಪೆಡಿಕ್ಯೂರ್, ಮೆನಿಕ್ಯೂರ್, ಹೇರ್ ಡ್ರೇಸ್, ಮಸಾಜ್, ಸನ್ ಸ್ಟ್ರೇನ್ ಲೋಶನ್, ಮಸ್ಕರಾ, ಹೈಬ್ರೋ ಜೊತೆಗೆ ಕೋಲ್ಡ್ ಕ್ರೀಂ ಹಚ್ಚಿ ಸಿಂಗಾರ ಮಾಡುತ್ತಾರೆ.

    ಬೆಳಗಾವಿಯ ಉದ್ಯಮ ಭಾಗದ ಶಗುನ್ ಗಾರ್ಡನ್‍ನಲ್ಲಿ 2 ದಿನಗಳಿಂದ ಶ್ವಾನ ಪ್ರಿಯರೆಲ್ಲಾ ಒಂದೆಡೆ ಸೇರಿದ್ದಾರೆ. ಪಪ್ಪಿ, ಡಾಬರ್ ಮ್ಯಾನ್, ಗ್ರೇಡ್ ಡೆನ್, ಲ್ಯಾಬರಡಾಲ್, ಮುಧೋಳ ಹೊಂಡ್, ಗೊಲ್ಡನ್ ರಿಟರ್ವೆರ್, ಬುಲ್ ಡಾಗ್ ಸೇರಿದಂತೆ ಹತ್ತು ಹಲವು ತಳಿಗಳ ನಾಯಿಗಳನ್ನು ಭಾಗವಹಿಸಿದ್ದವು. ಕೆನಪಿ ಕ್ಲಬ್ ಎರ್ಪಡಿಸಿದ ಅಂತರಾಷ್ಟ್ರೀಯ ಮಟ್ಟದ ಡಾಗ್ ಶೋದಲ್ಲಿ ನೂರಾರು ಶ್ವಾನಗಳು ಭಾಗಿಯಾಗಿತ್ತು.

    ನಂಬಿಕೆ ನಿಯತ್ತಿಗೆ ಇನ್ನೊಂದು ಹೆಸರು ಶ್ವಾನ. ಕುಂದಾನಗರಿಯಲ್ಲಿ ನಡೆಯುತ್ತಿರುವ ಈ ಶ್ವಾನ ಪ್ರದರ್ಶನ ಎಲ್ಲರ ಮನ ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯದುವೀರ್ ಒಡೆಯರಿಂದ ಸರಸ್ವತಿ ಪೂಜೆ- ಏರ್‌ಶೋ ಕಣ್ತುಂಬಿಕೊಂಡ ಪ್ರವಾಸಿಗರು

    ಯದುವೀರ್ ಒಡೆಯರಿಂದ ಸರಸ್ವತಿ ಪೂಜೆ- ಏರ್‌ಶೋ ಕಣ್ತುಂಬಿಕೊಂಡ ಪ್ರವಾಸಿಗರು

    ಮೈಸೂರು: ವಿಶ್ವ ವಿಖ್ಯಾತ ದಸರಾದ ಹಿನ್ನೆಲೆ ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿ ಪೂಜೆ ಮಾಡಿದರು.

    ಬೆಳಗ್ಗೆ 10:15 ರಿಂದ 10:45 ರ ವರೆಗೆ ಸಲ್ಲುವ ಶುಭಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಭಾವಚಿತ್ರಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನವರಾತ್ರಿ ಪೂಜಾ ಕೈಂಕರ್ಯಗಳಲ್ಲಿ ಸರಸ್ವತಿ ಪೂಜಾ ಪ್ರಧಾನವಾದ ಆಚರಣೆಯಾಗಿದೆ. ಇಂದು ಸಂಜೆ ದರ್ಬಾರ್ ನಂತರ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ, ಮಹಿಷಾಸುರನ ಸಂಹಾರ ನಡೆಯಲಿದೆ.

    ದಸರಾದ ಪ್ರಮುಖ ಅಕರ್ಷಣೆಯಾದ ಏರ್ ಶೋವನ್ನು ಸಚಿವ ಜಿಟಿ ದೇವೇಗೌಡ ಹಾಗೂ ಸಾರಾ ಮಹೇಶ್ ಉದ್ಘಾಟಿಸಿದರು. ನಗರದ ಬನ್ನಿ ಮಂಟಪದಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ.

    ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಲರವದಿಂದ ಕೂಡಿದ್ದು, ಆಗಸದಲ್ಲಿ ಭಾರತದ ತ್ರಿವರ್ಣ ಧ್ವಜ ಮೂಡಿತು. ಆಗಸದಲ್ಲಿ ಯೋಧರಿಂದ ಸ್ಕೈ ಡೈವಿಂಗ್, ಸರ್ಜಿಕಲ್ ಆಪರೇಷನ್ ಸೇರಿದಂತೆ ನಾನಾ ಸಾಹಸ ಪ್ರದರ್ಶನ ನಡೆಯಿತು. ಬಾನೆತ್ತರದ ಸ್ಕೈಡೈವಿಂಗ್ ನೆರೆದಿದ್ದ ಪ್ರವಾಸಿಗರ ಮೈ ನವಿರೇಳಿಸಿತು. ಹೆಲಿಕಾಪ್ಟರ್ ನಿಂದ 115 ಅಡಿ ಎತ್ತರದಿಂದ ಯೋಧರು ಪುಷ್ಪಾರ್ಚನೆ ಮಾಡಿದರು.

    ಮೈಸೂರಿನ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಾಕು ಪ್ರಾಣಿಗಳು ಪ್ರದರ್ಶನ ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿತು. ಈ ಪ್ರದರ್ಶನದಲ್ಲಿ ಡಾಬರ್ ಮನ್, ಜರ್ಮನ್ ಶೆಫರ್ಡ್, ಮುದೋಳ, ಡ್ಯಾಷೆಂಡ್, ಲ್ಯಾಬ್ರಡಾರ್, ರಾರಯಟ್, ವ್ಹೀಲರ್, ಪಿಟ್‍ಬುಲ್, ಸೇಂಟ್ ಬರ್ನಾಟ್, ಸೈಬೀರಿಯನ್ ಹಸ್ಕಿ ಸೇರಿದಂತೆ 21 ಜಾತಿಯ ನಾಯಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಾಣಿ ಪ್ರೀಯರ ಮನಸ್ಸು ಗೆದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನಕೋತ್ಸವಕ್ಕೆ ಮೆರುಗು ನೀಡಿದ ಡಾಗ್ ಶೋ- ದೇಶ, ವಿದೇಶಿ ತಳಿಯ ಶ್ವಾನಗಳ ಪ್ರದರ್ಶನ

    ಕನಕೋತ್ಸವಕ್ಕೆ ಮೆರುಗು ನೀಡಿದ ಡಾಗ್ ಶೋ- ದೇಶ, ವಿದೇಶಿ ತಳಿಯ ಶ್ವಾನಗಳ ಪ್ರದರ್ಶನ

    ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದ ಹಬ್ಬದಲ್ಲಿ ದಿನನಿತ್ಯ ಜನಜಂಗುಳಿ. ಅದರಲ್ಲೂ ಜನರ ನಡುವೆ ಆಕರ್ಷಣೆಯಾಗಿದ್ದು ಶ್ವಾನಗಳ ಪ್ರದರ್ಶನ. ಶ್ವಾನ ಪ್ರಿಯರನ್ನ ಕನಕೋತ್ಸವ ಆಕರ್ಷಿಸಿದರೆ, ಉತ್ಸವಕ್ಕೆ ಬಂದಿದ್ದ ಶ್ವಾನಗಳು ಜನರನ್ನ ಆಕರ್ಷಿಸಿದವು.

    ವಿವಿಧ ತಳಿಯ ಶ್ವಾನಗಳ ramp ಶೋ ಕಂಡ ಜನರು ಶ್ವಾನಗಳ ಜೊತೆ ಸೆಲ್ಫಿಗೆ ಮುಗಿಬಿದ್ದರು. ಡಿಕೆಎಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕನಕೋತ್ಸವದಲ್ಲಿ ಭಾನುವಾರದಂದು ಶ್ವಾನಗಳ ಪ್ರದರ್ಶನ, ಸವಿರುಚಿ ಹಾಗೂ ಡರ್ಟ್ ರೇಸ್ ಆಯೋಜಿಸಲಾಗಿತ್ತು.

    ರೂರಲ್ ಕಾಲೇಜು ಮೈದಾನದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಹತ್ತಾರು ತಳಿಯ ಶ್ವಾನಗಳು ಶ್ವಾನಪ್ರಿಯರನ್ನು ಆಕರ್ಷಿಸಿದವು. ಶ್ವಾನ ಪ್ರದರ್ಶನದಲ್ಲಿ ಹೆಚ್ಚು ಆಕರ್ಷಣೆಗೆ ಒಳಗಾಗಿದ್ದು ಸೈಬೀರಿಯಾದ ಐಸ್ ಡಾಗ್. ಐಸ್ ಡಾಗ್‍ನ ಆಕರ್ಷಣೆಗೆ ಶ್ವಾನದ ಮಾಲೀಕರಿಗೆ ಹೆಚ್ಚಿನ ಸಂತಸ ಉಂಟುಮಾಡಿತ್ತು.

    ಡಾಗ್ ಶೋನಲ್ಲಿ 44 ದಿನಗಳ ಮರಿಗಳಿಂದ ಸುಮಾರು 4 ವರ್ಷದವರೆಗಿನ ದೊಡ್ಡ ನಾಯಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಡಾಬರ್ ಮನ್, ಬಗ್, ಉಮೇರಿಯನ್, ಸೈಂಟ್ ಬರ್ನಾಡ್, ಆಲ್‍ಶೇಷಿಯನ್, ಸ್ಥಳೀಯ ಬೇಟೆ ನಾಯಿ, ಮುಧೋಳ ನಾಯಿಗಳು ಈ ಸ್ಪರ್ಧೆಯಲ್ಲಿ ಜನರನ್ನು ಆಕರ್ಷಿಸಿದವು.

    ಸೈಬೀರಿಯಾದಿಂದ ಆಮದು ಮಾಡಿಕೊಂಡ ಐಸ್ ಡಾಗ್ ಜೊತೆಗೆ ಪೊಮೇರಿಯನ್ ನಾಯಿ ಆಕರ್ಷಿಸಿದವು. ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

  • ನಾಯಿಗಳು ರಾಜಕಾರಣಿಗಳಿದ್ದಂತೆ- ಕೆಲವ್ರಿಗೆ ಇಷ್ಟ ಆಗುತ್ತೆ, ಕೆಲವ್ರಿಗೆ ಆಗಲ್ಲ: ಸಚಿವ ಪ್ರಮೋದ್ ಮಧ್ವರಾಜ್

    ನಾಯಿಗಳು ರಾಜಕಾರಣಿಗಳಿದ್ದಂತೆ- ಕೆಲವ್ರಿಗೆ ಇಷ್ಟ ಆಗುತ್ತೆ, ಕೆಲವ್ರಿಗೆ ಆಗಲ್ಲ: ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ಒಂದು ಲೆಕ್ಕದಲ್ಲಿ ನಾಯಿಗಳು ರಾಜಕಾರಣಿಗಳಂತೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ನಡೆಯುತ್ತಿರುವ ಡಾಗ್ ಶೋ ಉದ್ಘಾಟಿಸಿ ಈ ರೀತಿ ಮಾತನಾಡಿದ ಅವರು, ಬೀದಿ ನಾಯಿಗಳ ಜಾಸ್ತಿಯಾಗುತ್ತಿರುವಂತಹ ಸಂದರ್ಭದಲ್ಲಿ ಒಂದು ಕಡೆ ನಾಯಿಯನ್ನು ಪ್ರೀತಿಸುವ ವರ್ಗವಿದ್ದರೆ, ಇನ್ನೊಂದೆಡೆ ದ್ವೇಷಿಸುವ ವರ್ಗವೂ ಇದೆ. ನಾಯಿಗಳು ಒಂದು ರೀತಿಯಲ್ಲಿ ರಾಜಕಾರಣಿಗಳಿದ್ದಂತೆ. ನಮ್ಮನ್ನು ಪ್ರೀತಿಸುವವರೂ ಇದ್ದಾರೆ. ದ್ವೇಷಿಸುವ ಮಂದಿಯೂ ಇದ್ದಾರೆ ಅಂತ ಅವರು ತಿಳಿಸಿದ್ದಾರೆ.

    ಪ್ರೀತಿ, ದ್ವೇಷ ಇವರೆಡನ್ನೂ ಎಲ್ಲೊ ಒಂದು ಕಡೆ ಬ್ಯಾಲೆನ್ಸ್ ಮಾಡಬೇಕಾಗಿದೆ. ಕೆಲವು ಕಡೆ ನಮಗೆ ಜನ ಬೈತಾರೆ. ಬೀದಿ ನಾಯಿಗಳಿವೆ, ಶಾಸಕರು, ಮುನ್ಸಿಪಾಲಿಟಿಯವರು ಏನ್ ಮಾಡ್ತಾ ಇದ್ದೀರಿ?. ಒಂದು ವೇಳೆ ನಾವೇನಾದ್ರೂ ಬೀದಿನಾಯಿಗಳನ್ನು ಮುಟ್ಟಲು ಹೋದ್ರೆ ಅಲ್ಲಿ ಮನೇಕಾ ಗಾಂಧಿಯವರಿಗೆ ಕೋಪ ಬರುತ್ತದೆ. ಹೀಗಾಗಿ ನಮಗೇನು ಮಾಡಲು ಸಾಧ್ಯವಿಲ್ಲ ಅಂತ ಅವರು ಹೇಳಿದ್ರು.

    ಒಂದು ಕಡೆ ಮನೇಕಾ ಗಾಂಧಿ, ಇನ್ನೊಂದೆಡೆ ಪೇಟಾ(ಪ್ರಾಣಿ ದಯಾ ಸಂಘ). ಪೇಟಾದವರು ಮನೇಕಾ ಗಾಂಧಿಗಿಂತ ಗಟ್ಟಿಯಿದ್ದಾರೆ. ಈ ಮಧ್ಯೆ ಜನರ ದೂರುಗಳು. ಇವೆಲ್ಲದರ ಮಧ್ಯೆ ಹೇಗೆ ಬದುಕಬೇಕೆಂದು ನನಗೆ ಪತ್ರಕರ್ತರೇ ಮಾರ್ಗದರ್ಶನ ಮಾಡಬೇಕೆಂದು ಹೇಳಿದ್ರು.

    ಮನೇಕಾ ಗಾಂಧಿ ಅವರು ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು.

  • ಹಂಪಿ ಉತ್ಸವಕ್ಕೆ ಮೆರಗು ನೀಡಿದ ಡಾಗ್ ಶೋ-27 ತಳಿಯ 200 ಕ್ಕೂ ಹೆಚ್ಚು ಶ್ವಾನಗಳ ಪ್ರದರ್ಶನ

    ಹಂಪಿ ಉತ್ಸವಕ್ಕೆ ಮೆರಗು ನೀಡಿದ ಡಾಗ್ ಶೋ-27 ತಳಿಯ 200 ಕ್ಕೂ ಹೆಚ್ಚು ಶ್ವಾನಗಳ ಪ್ರದರ್ಶನ

    ಬಳ್ಳಾರಿ: ವಿಶ್ವವಿಖ್ಯಾತ ಹಂಪಿ ಉತ್ಸವ ದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಡಾಗ್ ಶೋ ಎಲ್ಲರ ಕಣ್ಮನ ಸೆಳೆಯಿತು.

    ಉತ್ಸವದ ಭಾಗವಾಗಿ ಹೊಸಪೇಟೆ ನಗರದ ಮುನ್ಸಿಪಲ್ ಮೈದಾನದಲ್ಲಿ ಡಾಗ್ ಶೋ ಏರ್ಪಡಿಸಲಾಗಿತ್ತು. ಈ ಶೋನಲ್ಲಿ ಸುಮಾರು 27 ವಿವಿಧ ತಳಿಯ 200ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುವ ಮೂಲಕ ನೋಡುಗರನ್ನು ಬೆರಗುಗೊಳಿಸಿದವು.

    ಪ್ರದರ್ಶನದಲ್ಲಿ ಪ್ರಮುಖವಾಗಿ ಬರ್ನಾಡ್, ಬಾಕ್ ಸ್ಟೇಬೇರಿಯನ್, ಮುಧೋಳ್, ಡಾಲ್ಮೇಶಿಯನ್, ಅಕಿತಾ, ಪಾಕಿಸ್ತಾನ ಬುಲ್ಲಿ, ಪಮೆರೇಯಿನ್ ಸೇರಿದಂತೆ ದೇಶ ವಿದೇಶಗಳ ತಳಿಗಳು ಭಾಗವಹಿಸಿದ್ದವು. ಅದರಲ್ಲೂ ಪೊಲೀಸ್ ಇಲಾಖೆಯ ಶ್ವಾನಗಳು ತಮ್ಮ ಕಮಾಂಡರ್ ಹೇಳಿದಂತೆ ಲೆಫ್ಟ್, ರೈಟ್ ಹಾಗೂ ಸೂಟ್‍ಕೇಸ್‍ನಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಅಚ್ಚರಿ ಮೂಡಿಸಿದವು.

    ಡಾಗ್ ಶೋವನ್ನು ನೋಡಲು ಮೈದಾನ ತುಂಬ ಕಿಕ್ಕಿರಿದು ತುಂಬಿದ ಜನರನ್ನು ನೋಡಿದ ಕೆಲವು ಶ್ವಾನಗಳು ಗಾಬರಿಗೊಂಡವು. ನಂತರ ಶ್ವಾನ ಪೋಷಕರು ಅವುಗಳ ಮೈದಡವಿ ಪ್ರೀತಿಯನ್ನು ತೊರಿಸುತಿದ್ದಿದ್ದು ಸಾಮಾನ್ಯವಾಗಿತ್ತು.