Tag: Dog Breed

  • ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಪತ್ತೆ ಹಚ್ಚಿದ ಪೊಲೀಸರು – ಸಂತಸ ಹಂಚಿಕೊಂಡ ಕುಟುಂಬ

    ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಪತ್ತೆ ಹಚ್ಚಿದ ಪೊಲೀಸರು – ಸಂತಸ ಹಂಚಿಕೊಂಡ ಕುಟುಂಬ

    ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಶಿವಾಜಿನಗರದ ಮನೆಯೊಂದರಲ್ಲಿ ಕಾಣೆಯಾಗಿದ್ದ ಸೈಬೀರಿಯನ್‌ ಹಸ್ಕಿ (Siberian Husky) ತಳಿಯ ರಾಲ್ಫ್‌ ಹೆಸರಿನ ಕುರುಡು ಶ್ವಾನವನ್ನ  ಪೊಲೀಸರು (Police) ಪತ್ತೆಹಚ್ಚಿ, ರಕ್ಷಣೆ ಮಾಡಿ ಮಾಲೀಕರಿಗೆ ಒಪ್ಪಿಸಿದ್ದಾರೆ.

    ಶಿವಾಜಿನಗರದ (Shivajinagara) ರಮ್ಯಾ ಎಂಬವರ ಮನೆಯಲ್ಲಿ ಸಾಕಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಆ.22 ರಂದು ಕಾಣೆಯಾಗಿತ್ತು. ಈ ಸಂಬಂಧ ಕಮರ್ಷಿಯಲ್ ಠಾಣೆಗೆ ರಮ್ಯಾ ಅವರು ದೂರು ನೀಡಿದ್ದರು. ಅಲ್ಲದೇ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಲ್ಲೂ ಶ್ವಾನ ಪತ್ತೆಗೆ ಮನವಿ ಮಾಡಿದ್ದರು. ಶ್ವಾನ ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು (Police), ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದರು.

    ರಾಲ್ಫ್‌ಗೆ ವಯೋ ಸಹಜವಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಹಾಗಾಗಿ ಮಾಲೀಕರಾದ ರಮ್ಯಾ ಮತ್ತು ಕುಟುಂಬದವರು ಹೆಚ್ಚಿನ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದರು. ಆಗಸ್ಟ್‌ 22ರಂದು ರಾಲ್ಫ್‌ ಇದ್ದಕ್ಕಿದ್ದಂತೆ ಇನ್ಫ್ಯಾಂಟ್ರಿ ರಸ್ತೆಯ ತಮ್ಮ ಮನೆಯಿಂದ ಕಾಣೆಯಾಗಿತ್ತು. ರಸ್ತೆ ಬದಿಯಲ್ಲಿದ್ದ ಹಸ್ಕಿ ನೋಡಿದ್ದ ಆಟೋ ಡ್ರೈವರ್ ಒಬ್ಬ ಬ್ರೀಡಿಂಗ್ ಮಾಡುವವರಿಗೆ ಈ ಶ್ವಾನವನ್ನ ಮಾರಾಟ ಮಾಡಿದ್ದ. ಆದ್ರೆ ಇದು ಕುರುಡು ಶ್ವಾನವಾಗಿದ್ದರಿಂದ ಲಾಭವಿಲ್ಲವೆಂದು ಪುನಃ ಬೀದಿಗೆ ಬಿಟ್ಟಿರುವುದಾಗಿ ತಿಳಿದುಬಂದಿದೆ. ಅಂತೂ ಗಲ್ಲಿ-ಗಲ್ಲಿಯಲ್ಲಿ ಹುಡುಕಾಡಿ ಪೊಲೀಸರು ಶ್ವಾನವನ್ನ ಪತ್ತೆಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪ್ರಜ್ಞಾನ್ ರೋವರ್‌ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ – ಇನ್ನು 10 ದಿನ ಮಾತ್ರ ಬಾಕಿ

    ದೃಷ್ಟಿಯಿಲ್ಲದ ಶ್ವಾನ ರಾಲ್ಫ್‌ ಕೊನೆಗೂ ಪೊಲೀಸರು ಬೆಳಕಾಗಿದ್ದು, ಈ ಸಂತಸವನ್ನ ಕುಟುಂಬ ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ. ರಾಲ್ಫ್ ಪತ್ತೆ ಮಾಡಿದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಹಾಗೂ ಡಿಸಿಪಿ ಭೀಮಾಶಂಕರ್ ಗುಳೇದ್ ಕುಟುಂಬಸ್ಥರು ಧನ್ಯವಾದ ಅರ್ಪಿಸಿದೆ. ಇದನ್ನೂ ಓದಿ: 15 ದಿನಗಳ ನಿತ್ಯ 5 ಸಾವಿರ ಕ್ಯೂಸೆಕ್‌ ನೀರು ತಮಿಳುನಾಡಿಗೆ ಹರಿಸಿ – ಕರ್ನಾಟಕಕ್ಕೆ CWRC ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಡಗಿನ ಡಾಗ್ ಶೋ – 22ಕ್ಕೂ ಹೆಚ್ಚು ತಳಿಗಳ 230 ಶ್ವಾನಗಳು ಭಾಗಿ

    ಕೊಡಗಿನ ಡಾಗ್ ಶೋ – 22ಕ್ಕೂ ಹೆಚ್ಚು ತಳಿಗಳ 230 ಶ್ವಾನಗಳು ಭಾಗಿ

    ಮಡಿಕೇರಿ: ಸದಾ ಒಂದಿಲ್ಲೊಂದು ವಿಶೇಷ ಸ್ಪರ್ಧೆಗಳಿಂದ ಗಮನಸೆಳೆಯುವ ಕೊಡಗಿನಲ್ಲಿ ಇಂದು ಡಾಗ್ ಶೋ ಎಲ್ಲರನ್ನು ರಂಜಿಸಿತು. ಹಲವು ಭಾಗಗಳಿಂದ ಆಗಮಿಸಿದ್ದ 22ಕ್ಕೂ ಹೆಚ್ಚು ತಳಿಗಳ 230 ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನಗೊಂಡವು.

    ಮುದ್ದು ಮುದ್ದಾಗಿ ಹೆಜ್ಜೆಯಿಡುತ್ತಾ ನಲಿದಾಡಿದ ಚಿಕ್ಕ ಚಿಕ್ಕ ನಾಯಿಮರಿಗಳೊಂದೆಡೆಯಾದರೆ, ನೋಡಿದ ಕೂಡಲೇ ಎದೆನಡುಗಿಸುವಂತಹ ದೈತ್ಯಾಕಾರದ ನಾಯಿಗಳು ಕೂಡ ಶೋನಲ್ಲಿ ಬಂದಿದ್ದು ಗಮನಸೆಳೆಯಿತು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದ ಈ ಡಾಗ್ ಶೋ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ಪೊಮೆರಿಯನ್, ಗೋಲ್ಡನ್ ರಿಟ್ರೈವರ್, ಕೋಕರ್ ಸ್ಪ್ಯಾನಿಯೆಲ್ ನಂತಹ ಮುದ್ದು ಮುದ್ದಾದ ನಾಯಿಗಳನ್ನು ನೋಡೋದೆ ಒಂದು ಚೆಂದ. ಲಕ ಲಕನೆ ಓಡಾಡುತ್ತಾ ನೆರೆದಿದ್ದವರನ್ನ ರಂಜಿಸಿದ ಸ್ವೀಟ್ ಶ್ವಾನಗಳು ಬಹುಮಾನಕ್ಕಾಗಿ ಪೈಪೋಟಿ ನಡೆಸಿದವು. ದೂರದೂರುಗಳಿಂದ ತಮ್ಮ ಮುದ್ದು ನಾಯಿಗಳನ್ನ ಸ್ಪರ್ಧೆಗಾಗಿ ಕರೆತಂದಿದ್ದ ಮಾಲೀಕರು ಕೂಡ ಖುಷಿ ಖುಷಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು.

    ಮುಧೋಳ, ಗ್ರೇಟ್ ಡ್ಯಾನ್, ಸೇಂಟ್ ಬರ್ನಾಡ್, ಜರ್ಮನ್ ಶಫರ್ಡ್, ಲ್ಯಾಬ್ರೆಡಾರ್ ನಂತಹ ದೈತ್ಯಾಕಾರದ ಶ್ವಾನಗಳು ಕೂಡ ಸ್ಪರ್ಧೆಯಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು. ತಳಿಗಳ ಆಧಾರದಲ್ಲಿ ನಡೆದ ಪ್ರದರ್ಶನದಲ್ಲಿ ಪ್ರತಿ ತಳಿಗಳ ವಿಭಾಗದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ ಶ್ವಾನಗಳಿಗೆ ಬಹುಮಾನ ನೀಡಲಾಯಿತು.