Tag: doddanna Sandalwood

  • ಹ್ಯಾಪಿ ಬರ್ತ್‌ಡೇ ಗೊಲ್ಲು: ಸಹೋದರನಿಗೆ ರಾಧಿಕಾ ಪಂಡಿತ್ ಲವ್ಲಿ ವಿಶ್

    ಹ್ಯಾಪಿ ಬರ್ತ್‌ಡೇ ಗೊಲ್ಲು: ಸಹೋದರನಿಗೆ ರಾಧಿಕಾ ಪಂಡಿತ್ ಲವ್ಲಿ ವಿಶ್

    ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಇದೀಗ ಸಹೋದರ ಗೌರಂಗ್‌ಗೆ ವಿಶೇಷವಾಗಿ ಶುಭಕೋರಿದ್ದಾರೆ. ಗೌರಂಗ್ (Gourang Pandit) ಜೊತೆಗಿನ ಫೋಟೋ ಹಂಚಿಕೊಂಡು, ಪ್ರೀತಿಯಿಂದ ರಾಧಿಕಾ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ 2ನೇ ಮದುವೆಯಾದ ‘ಜೊತೆ ಜೊತೆಯಲಿ’ ನಟಿ ಮಾನಸ

    ನಿನ್ನಂತ ಸಹೋದರನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಗೌರಂಗ್. ಹುಟ್ಟುಹಬ್ಬದ ಶುಭಾಶಯಗಳು ಗೊಲ್ಲು, ಲವ್ ಯೂ ಎಂದು ನಟಿ ಶುಭಹಾರೈಸಿದ್ದಾರೆ. ನಟಿಯ ಸಹೋದರನಿಗೆ ಅಭಿಮಾನಿಗಳು ಕೂಡ ಶುಭಕೋರಿದ್ದಾರೆ. ಇನ್ನೂ ಗೌರಂಗ್ ಪತ್ನಿ ಮತ್ತು ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಅಂದಹಾಗೆ, 2019ರಲ್ಲಿ ‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ ಕಡೆಯದಾಗಿ ರಾಧಿಕಾ ಪಂಡಿತ್ ನಟಿಸಿದರು. ಯಶ್ ಜೊತೆ ಆ್ಯಡ್ ಶೂಟ್‌ಗಳಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಆದರೆ ಅವರು ಮತ್ತೆ ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಆಶಯ. ರಾಧಿಕಾ ಕೂಡ ಉತ್ತಮ ಕಥೆ ಸಿಕ್ಕರೆ, ಖಂಡಿತಾ ನಟಿಸುತ್ತೇನೆ ಎಂದು ಹೇಳಿದ್ದರು.

    ಇನ್ನೂ ಇತ್ತೀಚೆಗೆ ಅವರು ಹೊಸ ಫೋಟೋಶೂಟ್‌ಗಳ ಮೂಲಕ ಗಮನ ಸೆಳೆದಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ಗೆ ನಟಿ ಮತ್ತೆ ಕಮ್ ಬ್ಯಾಕ್ ಆಗುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ ಫ್ಯಾನ್ಸ್. ಎಲ್ಲದ್ದಕ್ಕೂ ನಟಿಯ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

  • ದೀಪಕ್‌ರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ? ಲವ್ ಸ್ಟೋರಿ ಬಿಚ್ಚಿಟ್ಟ ದೀಪಿಕಾ ದಾಸ್

    ದೀಪಕ್‌ರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ? ಲವ್ ಸ್ಟೋರಿ ಬಿಚ್ಚಿಟ್ಟ ದೀಪಿಕಾ ದಾಸ್

    ‘ಬಿಗ್ ಬಾಸ್’ (Bigg Boss Kannada 7) ಬೆಡಗಿ ದೀಪಿಕಾ ದಾಸ್ (Deepika Das) ಸೀಕ್ರೆಟ್ ಆಗಿ ಮದುವೆಯಾಗುವ ಮೂಲಕ ಪಡ್ಡೆಹುಡುಗರಿಗೆ ಶಾಕ್ ಕೊಟ್ಟಿದ್ದರು. ಇದೀಗ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಮತ್ತು ಬೀಗರೂಟ ಕಾರ್ಯಕ್ರಮ ಜರುಗಿದೆ. ಈ ವೇಳೆ, ಪತಿ ದೀಪಕ್‌ರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ? ಲವ್ ಸ್ಟೋರಿ ಹೇಗೆ ಶುರುವಾಯ್ತು ಎಂದು ನಟಿ ಸುದ್ದಿಗೋಷ್ಠಿಯಲ್ಲಿ ರಿವೀಲ್ ಮಾಡಿದ್ದಾರೆ.

    ದೀಪಿಕಾ ದಾಸ್‌ಗೆ ಗೋವಾದಲ್ಲೇ ಮದುವೆಯಾಗುವ ಕನಸು ಇತ್ತಂತೆ. ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್ ಎಂಬುವವರ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ದೀಪಿಕಾ ದಾಸ್ ಆರತಕ್ಷತೆ- ಶುಭಹಾರೈಸಿದ ಸೆಲೆಬ್ರಿಟಿಗಳು

    ದೀಪಕ್ ಅವರ ಮೇಲೆ ನಿಮಗೆ ಲವ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ನಟಿ ದೀಪಿಕಾ ದಾಸ್ ಮನಬಿಚ್ಚಿ ಮಾತನಾಡಿದ್ದಾರೆ. ದೀಪಕ್ ಮತ್ತು ನಾನು ನಾಲ್ಕು ವರ್ಷದ ಸ್ನೇಹಿತರು. 4 ವರ್ಷಗಳ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ವಿ. ಕುಟುಂಬಸ್ಥರು ಕೂಡ ನಮ್ಮ ಪ್ರೀತಿಗೆ ಓಕೆ ಎಂದರು.

    ದೀಪಕ್ (Deepika Das) ಅವರಿಗೆ ಚಿತ್ರರಂಗಕ್ಕೂ ನಂಟಿಲ್ಲ. ಅವರು ಉದ್ಯಮಿ. ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಕರೆತರುವ ಯೋಜನೆ ಇದೆ. ಅವರು ಜಾಸ್ತಿ ಮಾತಾಡೋದಿಲ್ಲ. ನಾನೇ ಕಮ್ಮಿ ಮಾತಾಡುತ್ತೇನೆ ಅಂದುಕೊಂಡಿದ್ದೆ, ಆದರೆ ನನಗಿಂತ ಕಮ್ಮಿ ಮಾತಾಡುವ ಹುಡುಗ ನನಗೆ ಸಿಕ್ಕಿದ್ದಾರೆ. ನಾನು ಮದುವೆಯಾಗುವ ಹುಡುಗ ಹೀಗೆ ಇರಬೇಕು, ಹಾಗೇ ಇರಬೇಕು ಅಂತಾ ಅಂದುಕೊಂಡಿರಲಿಲ್ಲ. ಆದರೆ ನಾನು ಪ್ರೀತಿ ಅಂತಾ ಹುಡುಕಿಕೊಂಡು ಹೋಗಿಲ್ಲ. ನನ್ನ ಮದುವೆಯಾಗುವ ಹುಡುಗ ಮನಸ್ಸು ಚೆನ್ನಾಗಿರಬೇಕು, ನನ್ನ ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕು, ನನಗೆ ಟೈಮ್ ಕೊಡುವವನಾಗಿರಬೇಕು ಜೊತೆಗೆ ದೇಶ ಸುತ್ತುವವನಾಗಿರಬೇಕು ಅಂತಾ ಈ ಹಿಂದೆ ಹೇಳಿದ್ದೆ. ಅದೇ ರೀತಿ ನಾನು ಅಂದುಕೊಂಡ ಹಾಗೇ ನನಗೆ ನನ್ನ ಸಂಗಾತಿ ಸಿಕ್ಕಿದ್ದಾರೆ ಅಂತಾ ಹೇಳಿಕೊಂಡಿದ್ದಾರೆ.

    ಬಳಿಕ ದೀಪಿಕಾ ದಾಸ್ ಪತಿ ದೀಪಕ್ ಮಾತನಾಡಿ, ನಾನು ದುಬೈ ಮೂಲದವನು ಅಲ್ಲ. ಇದೆ ಬೆಂಗಳೂರಿನ ಆರ್‌ಆರ್ ನಗರದವನು. ರಿಯಲ್ ಎಸ್ಟೇಟ್ ಜೊತೆ ದುಬೈನಲ್ಲಿ ಒಂದು ಐಟಿ ಕಂಪನಿ ಇದೆ. ದೀಪಿಕಾ ನನಗೆ ನಾಲ್ಕು ವರ್ಷಗಳಿಂದ ಗೊತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಇಷ್ಟು ದಿನ ಹೇಗೆಲ್ಲಾ ದೀಪಿಕಾಗೆ ಬೆಂಬಲಿಸಿದ್ರೋ ಮುಂದಿನ ದಿನಗಳಲ್ಲಿ ಕೂಡ ಅವಳಿಗೆ ಸಪೋರ್ಟ್ ಮಾಡಿ ಎಂದು ದೀಪಕ್ ಮನವಿ ಮಾಡಿದ್ದಾರೆ.

    ಮಾರ್ಚ್ 10ರಂದು ಮಧ್ಯಾಹ್ನ 12.30ಕ್ಕೆ ಆರತಕ್ಷತೆ ಕಾರ್ಯಕ್ರಮ ಜರುಗಿದ್ದು, ಬಿಗ್ ಬಾಸ್ ಖ್ಯಾತಿ ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ನೀತು ವನಜಾಕ್ಷಿ, ಅನುಪಮಾ ಗೌಡ, ಚಂದನಾ ಅನಂತಕೃಷ್ಣ, ಪ್ರಿಯಾಂಕಾ, ಪನ್ನಗ ಭರಣ, ಕಿಶನ್, ಸಿಂಗರ್ ವಾಸುಕಿ ವೈಭವ್ ಸೇರಿದಂತೆ ಅನೇಕರು ಮದುವೆ ಆರತಕ್ಷತೆಯಲ್ಲಿ ಭಾಗಿಯಾಗಿ ವಿಶ್ ಮಾಡಿದ್ದಾರೆ.

    ಅದಷ್ಟೇ ಅಲ್ಲ, ಸ್ನೇಹಿತೆ ದೀಪಿಕಾ ದಾಸ್ ‘ಇನ್ನೂನು ಬೇಕಾಗಿದೆ ಒಲವು’ ಎಂಬ ಸಾಂಗ್ ಹಾಡಿ ನವ ಜೋಡಿಗೆ ವಿಶೇಷವಾಗಿ ಶುಭಕೋರಿದ್ದಾರೆ ವಾಸುಕಿ ವೈಭವ್. ವಾಸುಕಿ-ದೀಪಿಕಾ ಸ್ನೇಹ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

    ಮಾರ್ಚ್ 1ರಂದು ದೀಪಿಕಾ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದರು. ಜೊತೆಗೆ ಹುಡುಗನ ಬಗ್ಗೆ ಯಾವುದೇ ಮಾಹಿತಿಯನ್ನೂ ಅವರು ಹಂಚಿಕೊಂಡಿರಲಿಲ್ಲ. ಮೊನ್ನೆಯಷ್ಟೇ ತನ್ನ ಕರಿಮಣಿ ಮಾಲೀಕನನ್ನು ನಟಿ ಪರಿಚಯಿಸಿದ್ದರು. ಪತಿಯ ಹೆಸರು ದೀಪಕ್ ಎಂದು ರಿವೀಲ್ ಮಾಡಿ ತಮ್ಮ ಮದುವೆಯ ಬಗ್ಗೆ ನಟಿ ಸಂತಸ ವ್ಯಕ್ತಪಡಿಸಿದ್ದರು.

    ಪದ್ಧತಿಯ ಬದ್ಧವಾಗಿ, ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನನ್ನ ಕನಸಾಗಿತ್ತು. ಇದೀಗ ಅದು ಈಡೇರಿದೆ ಎಂದು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ದಿಢೀರ್ ಅಂತ ಆಗಿದ ಮದುವೆ ಅಲ್ಲ. ಈ ಮದುವೆಗೆ ಹಲವು ದಿನಗಳಿಂದ ಪ್ಲ್ಯಾನ್ ಮಾಡಲಾಗಿತ್ತು. ಸರ್ಪ್ರೈಸ್ ಕೂಡ ಸ್ವೀಟ್ ಆಗಿದೆ. ನನಗೆ ನನ್ನ ಬಾಳ ಸಂಗಾತಿ ಸಿಕ್ಕಿದ್ದು, ಪಕ್ಕಾ ದೇಸಿ. ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ದೀಪಿಕಾ ದಾಸ್ ಮನವಿ ಮಾಡಿದ್ದರು.

    ನಾಗಿಣಿ ಸೀರಿಯಲ್ ಬಿಗ್ ಬಾಸ್ ಸೀಸನ್ 7ರ ಮೂಲಕ ಮೋಡಿ ಮಾಡಿರುವ ನಟಿ ದೀಪಿಕಾ ದಾಸ್ ಅವರು ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ. ಗೋವಾದ ಕಡಲ ತೀರದಲ್ಲಿ ಬೆಂಗಳೂರಿನ ಉದ್ಯಮಿ ದೀಪಕ್‌ರನ್ನು ನಟಿ ಮದುವೆ ಆಗಿದ್ದಾರೆ. ಮಾರ್ಚ್ 1ರಂದು ನಡೆದ ದೀಪಿಕಾ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರಷ್ಟೇ ಭಾಗಿಯಾಗಿದ್ದಾರೆ.

  • ಬೊಂಬಾಟ್ ಭೋಜನದಲ್ಲಿ ವಾರ ಪೂರ್ತಿ ಸಿಲೆಬ್ರಿಟೀಸ್

    ಬೊಂಬಾಟ್ ಭೋಜನದಲ್ಲಿ ವಾರ ಪೂರ್ತಿ ಸಿಲೆಬ್ರಿಟೀಸ್

    ಸದಾ ಹೊಸ ಬಗೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ ಸ್ಟಾರ್ ಸುವರ್ಣ ವಾಹಿನಿ. ಅದರಲ್ಲೂ ಅಡುಗೆ ಕಾರ್ಯಕ್ರಮದ ಮೂಲಕ ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲ, ಸಿಲೆಬ್ರಿಟಿಗಳಿಗೂ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಇದನ್ನೂ ಓದಿ : ಇನ್‌ಸ್ಟಾಗ್ರಾಮ್‌ ಪ್ರಭಾವಿ ಪಟ್ಟಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ – ದಕ್ಷಿಣದ ಸ್ಟಾರ್‌ಗಳಿಗೂ ಇಲ್ಲ ಪಟ್ಟ

    ಸ್ಟಾರ್ ಸುವರ್ಣ ವಾಹಿನಿಯ ಬೊಂಬಾಟ್ ಭೋಜನ ಕಾರ್ಯಕ್ರಮ ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ಅಡುಗೆ ಕಾರ್ಯಕ್ರಮ. ಪಾಕ ಪ್ರವೀಣ ಸಿಹಿಕಹಿ ಚಂದ್ರು ಅವರು ನಡೆಸಿಕೊಡುವ ಈ ಕಾರ್ಯಕ್ರಮ ವಿನೂತನ ಅಡುಗೆ, ವಿಶೇಷ ಅತಿಥಿಗಳಿಂದಾಗಿ ಕಿರುತೆರೆಯ ಮಧ್ಯಾಹ್ನದ ಮನರಂಜನೆಯಲ್ಲಿ ಅಗ್ರಗಣ್ಯವಾಗಿದೆ. ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ಗೆ ಭಯಂಕರ ಬೇಡಿಕೆ ಇಟ್ಟ ಫ್ಯಾನ್ಸ್

    ಬೊಂಬಾಟ್ ಭೋಜನದಲ್ಲಿ ಈ ವಾರ ಪೂರ್ತಿ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ. ಮೇ.2ರಂದು ಹಿರಿಯ ನಟ ದೊಡ್ಡಣ್ಣ , ಮೇ 3 ರಂದು ರಂಗಭೂಮಿ ನಿರ್ದೇಶಕರಾದ ಝಾಫರ್ ಮೋಹಿಯುದ್ದೀನ್, ಮೇ 4ರಂದು ದಿಯಾ ಸಿನಿಮಾ ಖ್ಯಾತಿಯ ನಾಯಕ ನಟಿ ಖುಷಿ, ಮೇ 5 ಮತ್ತು 6 ರಂದು ಹಿರಿಯ ನಟಿ ಭವ್ಯ ಮತ್ತು ನಿರ್ದೇಶಕ ಸಿಂಪಲ್ ಸುನಿ ಹಾಗು ಮೇ 7 ರಂದು ನಟಿ ಸಂಜನ ಆನಂದ್ ಬೊಂಬಾಟ್ ಭೋಜನದಲ್ಲಿ ತಮ್ಮ ಕೈರುಚಿ ತೋರಿಸಲಿದ್ದಾರೆ. ಇದನ್ನೂ ಓದಿ : ಹಿಂದಿ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ: ಕಂಗನಾ ರಣಾವತ್

    ಸೋಮವಾರಂದಿಂದ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ವಿಶೇಷ ಅತಿಥಿಗಳ ನಳಪಾಕ ಮೂಡಿ ಬರಲಿದೆ..