Tag: Doddaballapura Police

  • ತಲೆ ಮೇಲೆ ಕ್ಯಾಂಟರ್‌ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

    ತಲೆ ಮೇಲೆ ಕ್ಯಾಂಟರ್‌ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

    ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ‌ ಕ್ಯಾಂಟರ್ ಲಾರಿ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ ಬಳಿ ನಡೆದಿದೆ.

    ರಾಜೀವ್ ಗಾಂಧಿ ಬಡವಾಣೆಯ ಪ್ರದೀಪ್ (35) ಮೃತ ದುರ್ದೈವಿ. ಅಂದಹಾಗೆ ದ್ವಿಚಕ್ರ ವಾಹನ ಸವಾರ ಟಿ.ಬಿ ವೃತ್ತದಿಂದ ಪಾಲನಜೋಗಿಹಳ್ಳಿ ಕಡೆಗೆ ರಾಂಗ್ ರೂಟ್ ನಲ್ಲಿ ಹೋಗುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಕಾರೊಂದು ವೇಗವಾಗಿ ಬಂದು ಕ್ಯಾಂಟರ್ ಲಾರಿಯನ್ನು ಓವರ್ ಟೇಕ್ ಮಾಡುವ ವೇಳೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಚಿನ್ನಯ್ಯನನ್ನು ಬಾಡಿಗಾರ್ಡ್‌ ಎಂದಿದ್ರು, ದೆಹಲಿಗೆ ಅವ್ರು ಕರೆದುಕೊಂಡು ಹೋಗಿದ್ರು: ಸುಜಾತ ಭಟ್‌

    ಕಾರಿಗೆ ಟಚ್ ಆಗಿ ಲಾರಿಯ ಚಕ್ರದ ಅಡಿಗೆ ದ್ವಿಚಕ್ರ ವಾಹನ ಸವಾರ ಬಿದ್ದಿದ್ದಾನೆ. ಬಿದ್ದ ಕೂಡಲೇ ಲಾರಿಯ ಚಕ್ರ ಬೈಕ್ ಸವಾರನ (Bike Rider) ತಲೆಯ ಮೇಲೆ ಹರಿದ ಪರಿಣಾಮ‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಮೆದುಳು ಬಿದ್ದಿದೆ. ಇದನ್ನೂ ಓದಿ: ನಮ್ಮ ಇಡೀ ಕುಟುಂಬ ಧರ್ಮಸ್ಥಳದಲ್ಲಿ ಹುಟ್ಟಿ ಬಹಳ ಪುಣ್ಯ ಮಾಡಿದೆ: ಡಿ.ವೀರೇಂದ್ರ ಹೆಗ್ಗಡೆ

    ದೊಡ್ಡಬಳ್ಳಾಪುರ ಶವಾಗರಕ್ಕೆ ಮೃತ ದೇಹ ರವಾನೆ ಮಾಡಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕ್ಯಾಂಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ

  • ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟ – ಓರ್ವ ಬಾಲಕ ದುರ್ಮರಣ

    ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟ – ಓರ್ವ ಬಾಲಕ ದುರ್ಮರಣ

    – ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್‌ ಕೈಗೆ ಗಂಭೀರ ಗಾಯ

    ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ (Firecracker Explosion) ಓರ್ವ ಬಾಲಕ ಸಾವನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಮುತ್ತೂರಿನಲ್ಲಿ ನಡೆದಿದೆ.

    ಇಂದು ಸಂಜೆ ಗಣೇಶ ವಿಸರ್ಜನೆ ವೇಳೆ ಪಟಾಕಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 15 ವರ್ಷದ ತನುಷ್ ರಾವ್ ಮೃತಪಟ್ಟಿದ್ದಾನೆ. ಇನ್ನೂ ಘಟನೆಯಲ್ಲಿ ವಿದ್ಯಾರ್ಥಿಗಳಾದ (Students) ಗಣೇಶ್, ಯೋಗೇಶ್, ಪವರ್ ಲಿಫ್ಟರ್ ಚಾಲಕ ಮುನಿರಾಜು, ನಾಗರಾಜು, ಚೇತನ್ ಶಾವಿ ಎಂಬುವರಿಗೆ ಸುಟ್ಟ ಗಾಯಗಳಾಗಿವೆ. ಇದೇ ವೇಳೆ ಬಂದೋಬಸ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್‌ ಜಾಕಿರ್ ಹುಸೇನ್ ಎಂಬುವರ ಕೈಗೆ ಪಟಾಕಿ ಸಿಡಿದು ಗಂಭೀರ ಗಾಯವಾಗಿದೆ.

    ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಂದಹಾಗೆ ಇಂದು ಸಂಜೆ 5.30ರ ವೇಳೆ ಫ್ರೆಂಡ್ಸ್ ವಿನಾಯಕ ಗ್ರೂಪ್‌ವತಿಯಿಂದ ಗಣೇಶ ವಿಸರ್ಜನೆಗೆಂದು ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಬರುವ ವೇಳೆ, ಮೆರವಣಿಗೆ ಮಾಡಲು ಕರೆಸಲಾಗಿದ್ದ ಪವರ್ ಲಿಪ್ಟರ್ ವಾಹನ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳ ಏಕಾಏಕಿ ಸ್ಪೋಟಗೊಂಡಿವೆ.

    ಸ್ಥಳಕ್ಕೆ ಎಸ್ಪಿ ಸಿಕೆ ಬಾಬಾ, ಎಎಸ್ಪಿ ನಾಗರಾಜ್, ಡಿವೈಎಸ್ಪಿ ರವಿ ಸೇರಿದಂತೆ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಗೆ ದಾಖಲಾದವರೊಂದಿಗೆ ಮಾತುಕತೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ವರದಕ್ಷಿಣೆ ಕಿರುಕುಳದ ಆರೋಪ – ಮಗುವಿನ ಎದುರೇ ತಾಯಿ ನೇಣಿಗೆ ಶರಣು

    ವರದಕ್ಷಿಣೆ ಕಿರುಕುಳದ ಆರೋಪ – ಮಗುವಿನ ಎದುರೇ ತಾಯಿ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳದ ಆರೋಪದಡಿ ಮನನೊಂದ ಗೃಹಿಣಿ ತನ್ನ ಕಂದಮ್ಮನ ಎದುರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ (Doddaballapura) ಕಸ್ತೂರಿಯಲ್ಲಿ ನಡೆದಿದೆ.

    ಶಾಮಲ (26) ಮೃತ ಗೃಹಿಣಿ. ಶ್ಯಾಮಲ ಮದುವೆಯಾಗಿ 5 ವರ್ಷ ಆಗಿದ್ದು, ಒಂದು ಗಂಡು ಹಾಗೂ ಹೆಣ್ಣು ಮಗು ಇತ್ತು. ಕೆಲಸ ವಿಚಾರ ಹಾಗೂ ಬೇರೆ ಮನೆ ಮಾಡುವ ವಿಚಾರದಲ್ಲಿ ಅತ್ತೆ, ಮಾವ ಹಾಗೂ ಗಂಡನೊಂದಿಗೆ ಪದೇಪದೇ ಜಗಳಗಳು ನಡೆದಿದ್ದವು ಎನ್ನಲಾಗಿದೆ. ಇದನ್ನೂ ಓದಿ: ಬಂಧನ ಬಳಿಕ ದರ್ಶನ್, ಪವಿತ್ರಾ ಗೌಡ ಮೊದಲ ಫೋಟೋ ವೈರಲ್

    ಇದೇ ರೀತಿ ನಡೆದ ಜಗಳದಲ್ಲಿ ಎರಡನೇ ಮಗುವಿನ ಸಮೇತ ರೂಂಗೆ ಹೋಗಿ ಬಾಗಿಲು ಹಾಕಿಕೊಂಡು ಮಗುವಿನ ಎದುರಲ್ಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ. ಸೊಸೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಅತ್ತೆ ಕಿರುಚಾಡಿ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಶ್ಯಾಮಲ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ ಬಿಜೆಪಿಯ ಸೃಷ್ಟಿ: ಈಶ್ವರ್‌ ಖಂಡ್ರೆ ಬಾಂಬ್‌

    ಘಟನೆಯ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರಕುಳದ ಪ್ರಕರಣ ದಾಖಲಾಗಿದೆ.

  • Chikkaballapura | ಗಂಡ-ಹೆಂಡ್ತಿ ನಡುವೆ ಜಗಳ – ಮಲಗಿದ್ದಾಗ ಪತಿಯನ್ನೇ ಕೊಂದಳಾ ಪತ್ನಿ?

    Chikkaballapura | ಗಂಡ-ಹೆಂಡ್ತಿ ನಡುವೆ ಜಗಳ – ಮಲಗಿದ್ದಾಗ ಪತಿಯನ್ನೇ ಕೊಂದಳಾ ಪತ್ನಿ?

    ಚಿಕ್ಕಬಳ್ಳಾಪುರ: ಮನೆಯ ಹೊರಗಡೆ ಮಲಗಿದ್ದ ಗಂಡನ ಕುತ್ತಿಗೆಯಲ್ಲಿ ಚಾಕು ಇರಿದು ಕೊಲೆ ಮಾಡಲಾಗಿದ್ದು ಹೆಂಡತಿಯೇ ಗಂಡನನ್ನ ಕೊಲೆ ಮಾಡಿದಾಳ ಎಂಬ ಅನುಮಾನ ಮೂಡಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ವಾಸುದೇವನಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ 70 ವರ್ಷದ ಈರಣ್ಣ ಎಂಬಾತನ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ಮಲಗಿದ್ದಲ್ಲಿಯೇ ಈರಣ್ಣ ಶವವಾಗಿದ್ದಾನೆ. ಇದನ್ನೂ ಓದಿ: ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿ ಬೋಧಿಸಿದ ಡಾ.ಶಾಲಿನಿ ರಜನೀಶ್

    ಅಂದ ಹಾಗೆ ಕಳೆದ ರಾತ್ರಿ ಈರಣ್ಣ ಹಾಗೂ ಪಾರ್ವತಮ್ಮ ನಡುವೆ ಜಗಳ ನಡೆದಿತ್ತಂತೆ. ನಂತರ ಮನೆಯ ಹೊರಭಾಗದಲ್ಲಿ ಎಂದಿನಂತೆ ಮಲಗಿದ್ದವ ಬೆಳಿಗ್ಗೆ ಎದ್ದು ನೋಡಿದ್ರೆ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – 5ಕ್ಕೂ ಹೆಚ್ಚು ಮಂದಿ ಸಾವಿನ ಶಂಕೆ

    ಇನ್ನೂ ಪಾರ್ವತಮ್ಮನ ಗಂಡನನ್ನ ಕೊಲೆ ಮಾಡಿದಳಾ ಎಂಬುದರ ಬಗ್ಗೆಯೂ ಪೊಲೀಸರು ವಿಚಾರಣೆ ಸಹ ನಡೆಸಿದ್ದಾರೆ. ಇಲ್ಲ ಬೇರೆ ಯಾರಾದರೂ ಕೊಲೆ ಮಾಡಿದರಾ…? ಅನ್ನೋ ಆಯಾಮದಲ್ಲೂ ತನಿಖೆ ಮುಂದುವರೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

  • ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆ – ಆರೋಪಿಗೆ ಗುಂಡೇಟು

    ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆ – ಆರೋಪಿಗೆ ಗುಂಡೇಟು

    ಚಿಕ್ಕಬಳ್ಳಾಪುರ: ಬಂಧನಕ್ಕೆ ತೆರಳಿದ್ದಾಗ ಪೊಲೀಸ್ ಪೇದೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿಯ ಕಾಲಿಗೆ ದೊಡ್ಡಬಳ್ಳಾಪುರ ಪೊಲೀಸರು (Doddaballapura Police) ಗುಂಡೇಟು ನೀಡಿದ್ದಾರೆ.

    ಹೇಮಂತ್ ಗೌಡ ಎಂಬವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ಯಲಹಂಕ ಬಳಿಯ ಶ್ರೀರಾಮನ ಹಳ್ಳಿ ಬಳಿ ಅಡಗಿರುವ ಖಚಿತ ಮಾಹಿತಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಸಿಕ್ಕಿತ್ತು. ಇದರಿಂದ ಆತನನ್ನು ಬಂಧಿಸಲು ಪೊಲೀಸರು ಇಂದು (ಶುಕ್ರವಾರ) ಮುಂಜಾನೆ ತೆರಳಿದ್ದರು. ಈ ವೇಳೆ ಆರೋಪಿ ಶ್ರೀನಿವಾಸ್ ಪೊಲೀಸ್ ಪೇದೆ ಚಂದ್ರು ಎಂಬವರ ಮೇಲೆ ಕಲ್ಲಿನಿಂದ ಹಾಗೂ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿದ್ದಾನೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆರೋಪಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಸಾಧಿಕ್ ಪಾಶ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದು, ಬಳಿಕ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

    ಗಾಯಗೊಂಡಿರುವ ಪೊಲೀಸ್ ಪೇದೆ ಚಂದ್ರು ಹಾಗೂ ಆರೋಪಿ ಶ್ರೀನಿವಾಸ್‍ಗೆ ದೊಡ್ಡಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೇ 11ರಂದು ದೊಡ್ಡಬಳ್ಳಾಪುರ ನಗರ ಹೊರವಲಯದ ಭಾಷೆಟ್ಟಳ್ಳಿ ಬಳಿ ಇರುವ ಬಾರ್ & ರೆಸ್ಟೋರೆಂಟ್ ಮುಂಭಾಗ ಹೇಮಂತ್ ಗೌಡ ಎಂಬ ಯುವಕನನ್ನು ನರಸಿಂಹಮೂರ್ತಿ, ಶ್ರೀನಿವಾಸ್ ಹಾಗೂ ಇತರರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆಗೆ ಎರಡು ಗುಂಪುಗಳ ನಡುವಿನ ದ್ವೇಷ ಕಾರಣ ಎನ್ನಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ನರಸಿಂಹಮೂರ್ತಿಯನ್ನು ಈಗಾಗಲೇ ಬಂಧಿಸಲಾಗಿದೆ. ಇದನ್ನೂ ಓದಿ: ಅಂಜಲಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್ – ಬಗೆದಷ್ಟು ಬಯಲಾಗ್ತಿದೆ ವಿಶ್ವನ ದುಷ್ಕೃತ್ಯ

  • ಮರಕ್ಕೆ ನೇಣು ಹಾಕಿಕೊಳ್ಳುವಾಗ ಪಂಚೆ ಹರಿದು, ಕೆಳಗೆ ಬಿದ್ದು ಯುವಕ ಸಾವು

    ಮರಕ್ಕೆ ನೇಣು ಹಾಕಿಕೊಳ್ಳುವಾಗ ಪಂಚೆ ಹರಿದು, ಕೆಳಗೆ ಬಿದ್ದು ಯುವಕ ಸಾವು

    ಚಿಕ್ಕಬಳ್ಳಾಪುರ: ಸರ್ಕಾರಿ ಪ್ರಾಥಮಿಕ ಶಾಲೆಯ (Government School) ಅವರಣದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯಲ್ಲಿ ನಡೆದಿದೆ.

    ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದ ಬಳಿ ಘಟನೆ ನಡೆದಿದೆ. ಕರೇನಹಳ್ಳಿಯ ನಾಗೇಂದ್ರಪ್ರಸಾದ್ (25) ಮೃತಪಟ್ಟಿದ್ದು, ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ – ಶನಿವಾರ BMRCL ಕೈ ಸೇರಲಿದೆ IISC ವರದಿ

    ಯುವಕ ಮರಕ್ಕೆ (Tree) ಪಂಚೆಕಟ್ಟಿ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಪಂಚೆ ಹರಿದು ಯುವಕ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿದೆ. ತಲೆಯಿಂದ ತೀವ್ರ ರಕ್ತ ಸ್ರಾವವಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್‌ ಪಂತ್ ಮೊದಲ ರಿಯಾಕ್ಷನ್

    ಮೃತನ ಸಂಬಂಧಿಕರು ಸ್ಥಳ ಆಗಮಿಸಿದ್ದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ (Suicide) ಮಾಡಿಕೊಳ್ಳುವ ಸಮಸ್ಯೆ ಏನೂ ಇರಲಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k