Tag: documentary

  • ಸಕ್ರೆಬೈಲು ಆನೆ ಬಿಡಾರದಲ್ಲಿ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಪವರ್ ಸ್ಟಾರ್

    ಸಕ್ರೆಬೈಲು ಆನೆ ಬಿಡಾರದಲ್ಲಿ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಪವರ್ ಸ್ಟಾರ್

    ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಭಾಗಿಯಾಗಿದ್ದರು.

    ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಡಾಕ್ಯುಮೆಂಟರಿ ಚಿತ್ರೀಕರಣಕ್ಕಾಗಿ ಭೇಟಿ ನೀಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಆನೆ ಬಿಡಾರದ ಬಳಿ ಜಮಾಯಿಸಿದ್ದರು. ಇದನ್ನೂ ಓದಿ: ಮೋದಿ ಸರ್ಕಾರ ಮಾಡಿದ ತಪ್ಪನ್ನ ರಾಜ್ಯ ಸರ್ಕಾರವೂ ಮಾಡುತ್ತಿದೆ: ಕಿಮ್ಮನೆ ರತ್ನಾಕರ್

    ಸಾಕ್ಷ್ಯ ಚಿತ್ರದ ಚಿತ್ರೀಕರಣದ ಸಲುವಾಗಿ ಆನೆ ಬಿಡಾರದ ಕ್ರಾಲ್ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಯಿತು. ಚಿತ್ರೀಕರಣ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕ್ರಾಲ್ ಪ್ರದೇಶಕ್ಕೆ ಮಾಧ್ಯಮದವರು ಸೇರಿದಂತೆ ಸಾರ್ವಜನಿಕರ ಪ್ರವೇಶಕ್ಕೆ ನಿಬರ್ಂಧ ವಿಧಿಸಲಾಗಿತ್ತು.

    ಅಭಿಮಾನಿಗಳು ಆನೆ ಬಿಡಾರದ ಬಳಿ ಜಮಾಯಿಸಿರುವ ವಿಷಯ ತಿಳಿದ ಅಪ್ಪು ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಕ್ರಾಲ್ ಪ್ರದೇಶದಿಂದ ಹೊರಗೆ ಬಂದು ಅಭಿಮಾನಿಗಳಿಗೆ ಕೈ ಮುಗಿದು ನಮಸ್ಕರಿಸಿದರು. ಅಲ್ಲದೇ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡು ಮತ್ತೆ ಚಿತ್ರಿಕರಣದತ್ತ ತೆರಳಿದರು.

  • ಬಂಡೀಪುರದಲ್ಲಿ ರಜನಿ, ಅಕ್ಷಯ್

    ಬಂಡೀಪುರದಲ್ಲಿ ರಜನಿ, ಅಕ್ಷಯ್

    – ಮೂರು ದಿನ ಶೂಟಿಂಗ್, 17 ಕಂಡೀಷನ್

    ಚಾಮರಾಜನಗರ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್‍ನ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಹರಿಸಲಿದ್ದಾರೆ.

    ರಜನಿಕಾಂತ್ ಒಂದು ದಿನ ಹಾಗೂ ಅಕ್ಷಯ್ ಕುಮಾರ್ ಮೂರು ದಿನಗಳ ಕಾಲ ರಾಜ್ಯದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಹರಿಸಲಿದ್ದಾರೆ. ಇತ್ತೀಚಿಗೆ ಮಾನವ ಅಭಿವೃದ್ದಿಯಿಂದಾಗಿ ಕಾಡು ಪ್ರಾಣಿಗಳ ಸಂತತಿ ಅಪಾಯದ ನಷ್ಟದಲ್ಲಿದೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಮಾನವ-ವನ್ಯಜೀವಿ ಸಂಘರ್ಷ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಲು ಈ ಸ್ಟಾರ್‌ಗಳು ಆಗಮಿಸಿದ್ದಾರೆ.


    ಈಗಾಗಲೇ ತಲೈವಾ ರಜನಿಕಾಂತ್ ಆಗಮಿಸಿದ್ದಾರೆ. ಇಂದು ಆಕ್ಷಯ್ ಕುಮಾರ್ ಆಗಮಿಸಬೇಕಾಗಿದೆ. ಅವರು ಬಂದ ನಂತರ ಮೂರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಮೂಲದ ಪ್ರಕಾರ ಬಿಲ್‍ಗ್ರೇಸ್ ಸಹ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

    ಮುಂಬೈನ ಬೆನಿಜಾಯ್ ಏಶಿಯಾ ಗ್ರೂಪ್ ಸೆವೆನ್‍ಸ್ಟಾರ್ ಟಾರಸ್ ಈ ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಬಂಡೀಪುರದಲ್ಲಿ ಚಿತ್ರೀಕರಣದ ಸಿದ್ಧತೆ ಪೂರ್ಣಗೊಂಡಿದೆ. ಗುಂಡ್ಲುಪೇಟೆ ಹೊರಭಾಗದಲ್ಲಿ ಹೆಲಿಪ್ಯಾಡ್ ಸಹ ನಿರ್ಮಿಸಲಾಗಿದೆ.

    ಮೂರು ದಿನ ಶೂಟಿಂಗ್, 17 ಕಂಡೀಷನ್:
    ನಿರ್ದೇಶಕ ಬೇಲ್‍ಗ್ರೆಸ್ ನೇತೃತ್ವದಲ್ಲಿ ನಡೆಯಲಿರುವ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಶೂಟಿಂಗ್ ಬಂಡೀಪುರದಲ್ಲಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯಲಿರುವ ಶೂಟಿಂಗ್‍ಗೆ ಅನುಮತಿ ನೀಡಲು 17 ಕಂಡೀಷನ್ ವಿಧಿಸಲಾಗಿದೆ. ಶಬ್ದಮಾಲಿನ್ಯ, ವಾಯುಮಾಲಿನ್ಯ, ಬೆಂಕಿ ಅನಾಹುತ ನಡೆಯದಂತೆ ನೋಡಿಕೊಳ್ಳುವ 17 ಕಂಡೀಷನ್ ವಿಧಿಸಿ ಅನುಮತಿ ನೀಡಲಾಗಿದೆ. ಜನವರಿ 27 ರಿಂದ ಜನವರಿ 29 ರವರೆಗೆ ಅರಣ್ಯ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಬಂಡೀಪುರದ ಹುಲಿ ಸಂರಕ್ಷಿತಾರಣ್ಯದಲ್ಲಿ ಶೂಟಿಂಗ್ ನಡೆಯಲಿದೆ.

  • ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯಂದು ಪ್ರಧಾನಿ ಮೋದಿ ಎಲ್ಲಿದ್ದರು..?

    ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯಂದು ಪ್ರಧಾನಿ ಮೋದಿ ಎಲ್ಲಿದ್ದರು..?

    ನವದೆಹಲಿ: ಜಮ್ಮು-ಕಾಶ್ಮಿರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದ ದಿನ ಪ್ರಧಾನಿ ಮೋದಿಯವರು ಡಿಸ್ಕವರಿ ಚಾನೆಲ್‍ನ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದರು.

    ಬರೋಬ್ಬರೀ 4 ಗಂಟೆಗಳ ಶೂಟಿಂಗ್, ಸಫಾರಿ, ದೋಣಿ ವಿಹಾರದಲ್ಲಿದ್ದ ಪ್ರಧಾನಿ, `ಹುಲಿಗಳನ್ನು ಸಂರಕ್ಷಿಸಿ’ ಮತ್ತು `ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ’ ಬಗ್ಗೆ ಸಾಕ್ಷ್ಯಚಿತ್ರದಲ್ಲಿ ತೊಡಗಿಕೊಂಡಿದ್ದರು. ಡಿಸ್ಕವರಿ ಚಾನೆಲ್‍ನ ಸಾಕ್ಷ್ಯಚಿತ್ರದಲ್ಲಿ 20 ನಿಮಿಷ ಮೋದಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಉತ್ತರಾಖಂಡ್‍ನ ರಾಮಗಂಗಾ ನದಿ ತಟದಲ್ಲಿರುವ ಜಿಮ್ ಕಾರ್ಬೆಟ್ ಪಾರ್ಕ್ ಹುಲಿಗಳಿಗೆ ಖ್ಯಾತಿಯಾಗಿದೆ.

    ದಾಳಿಯಂದು ಮೋದಿ ವೇಳಾಪಟ್ಟಿ ಹೀಗಿತ್ತು:
    ಗುರುವಾರದಂದು ಬೆಳಗ್ಗೆ 7 ಗಂಟೆ 5 ನಿಮಿಷಕ್ಕೆ ಬಿಜ್ನೋರ್‍ಗೆ ಮೋದಿ ಹೋಗಬೇಕಿತ್ತು. ಆದ್ರೆ ಮಳೆಯ ಹಿನ್ನೆಲೆಯಲ್ಲಿ ಮಿಗ್-17 ಸೇನಾ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಮಧ್ಯಾಹ್ನ 12.30ಕ್ಕೆ ಬಿಜ್ನೋರ್ ಜಿಲ್ಲೆಯ ಬಿಕ್ಕವಾಲಾಕ್ಕೆ ಬಂದು ಅಲ್ಲಿಂದ ರಸ್ತೆ ಮೂಲಕ ಪ್ರಯಾಣ ಬೆಳೆಸಿದ್ರು. ರಾಮಗಂಗಾ ನದಿ ತಟಕ್ಕೆ ಬಂದ ಬಳಿಕ ದೋಣಿ ವಿಹಾರ, ಅಲ್ಲಿಂದ ಜಿಮ್ ಕಾರ್ಬೆಟ್ ಪಾರ್ಕ್‍ನಲ್ಲಿ ಸಫಾರಿ ಮಾಡಿದ್ರು.

    ಈ ವೇಳೆ ಸ್ವತಃ ಮೋದಿಯವರೇ ತಮ್ಮ ಮೊಬೈಲ್‍ನಿಂದ ಫೋಟೋ ಕ್ಲಿಕ್ಕಿಸಿದ್ದರು. ಜಿಮ್ ಕಾರ್ಬೆಟ್ ಪಾರ್ಕ್‍ನಲ್ಲಿ 4 ಗಂಟೆ ಕಳೆದ ಬಳಿಕ ಸಂಜೆ 7.45ಕ್ಕೆ ನಿರ್ಗಮಿಸಿದ ಮೋದಿ, ಹವಾಮಾನ ವೈಪರೀತ್ಯದಿಂದಾಗಿ ರುದ್ರಪುರ್‍ನಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿಲ್ಲ. ಅದರ ಬದಲಿಗೆ ಜಿಮ್ ಕಾರ್ಬೆಟ್ ಪಾರ್ಕ್‍ನಲ್ಲಿ ನಡೆದಿದ್ದ ದಿಖಾಲ ವಲಯದಿಂದಲೇ ಚುನಾವಣಾ ಭಾಷಣ ಮಾಡಿದ್ರು.

    ಜಿಮ್ ಕಾರ್ಬೆಟ್ ಪಾರ್ಕ್‍ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ಗೌಪ್ಯವಾಗಿ ಇಡಲಾಗಿತ್ತು. ಅದೇ ದಿನ ಮಧ್ಯಾಹ್ನ 3.15ಕ್ಕೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ದಾಳಿ ಬಳಿಕ ಅಂದ್ರೆ ಮರು ದಿನ ಬೆಳಗ್ಗೆ 9.15ಕ್ಕೆ ಮೋದಿ ರಕ್ಷಣೆ ಮೇಲಿನ ಸಂಪುಟ ಸಮಿತಿ ಸಭೆ ನಡೆಸಿದ್ದರು ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯವನ್ನು ಅರ್ಧದಲ್ಲೇ ಕೈಬಿಟ್ಟ ಸ್ಪೀಕರ್!

    ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯವನ್ನು ಅರ್ಧದಲ್ಲೇ ಕೈಬಿಟ್ಟ ಸ್ಪೀಕರ್!

    ಹಾವೇರಿ: ಸ್ಪೀಕರ್ ಕೆ.ಬಿ ಕೋಳಿವಾಡ ಒಂದಲ್ಲಾ ಒಂದು ವಿವಾದದಲ್ಲಿ ಸುದ್ದಿಯಾಗುತ್ತಾರೆ. ಮೊನ್ನೆ-ಮೊನ್ನೆಯಷ್ಟೇ ವಿಧಾನಸೌಧದ ವಜ್ರಮಹೋತ್ಸವದ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಆತುರದ ನಿರ್ಧಾರ ತೆಗೆದುಕೊಂಡಿದ್ದರು. ಈಗ ರಾಣೇಬೆನ್ನೂರು ಕ್ಷೇತ್ರದಲ್ಲೂ ಒಂದು ಎಡವಟ್ಟು ಮಾಡಿದ್ದಾರೆ.

    ಸ್ಪೀಕರ್ ಕೆ.ಬಿ ಕೋಳಿವಾಡ ಅವರು ಮುಖ್ಯಮಂತ್ರಿಗಳಿಂದ ಶಹಾಬ್ಬಾಸ್ ಗಿರಿ ಪಡೆಯೋಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ನವಂಬರ್ 5 ರಂದು ಕೋಳಿವಾಡ ಅವರ ಜನ್ಮದಿನ ಇತ್ತು. ಅಲ್ಲದೇ ಅವತ್ತು ಹಾವೇರಿಯ ಅವರ ಕ್ಷೇತ್ರ ರಾಣೇಬೆನ್ನೂರಿನಲ್ಲಿ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಡೋಕೆ ಸಿಎಂ ಸಾಹೇಬ್ರು ಬಂದಿದ್ದರು.

    ಈ ವೇಳೆ ಮುಖ್ಯಮಂತ್ರಿಗಳಿಂದ ಭೇಶ್ ಅನ್ನಿಸಿಕೊಳ್ಳೋಕೆ ಸ್ಪೀಕರ್ ಸಾಹೇಬ್ರು ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯ ಹಮ್ಮಿಕೊಂಡಿದ್ದರು. ಇದಕ್ಕಾಗಿ 125 ಟ್ರೈಸಿಕಲ್ ಗಳನ್ನು ನಗರದ ಮೈದಾನಕ್ಕೆ ತಂದು ನಿಲ್ಲಿಸಿದ್ದರು. ಸಾಂಕೇತಿಕವಾಗಿ ಸಿಎಂ ಕಡೆಯಿಂದ ಒಂದಿಬ್ಬರಿಗೆ ಟ್ರೈಸಿಕಲ್ ಕಿ ಕೊಡಿಸಿದ್ದರು. ಅದು ಬಿಟ್ಟರೆ ಇಲ್ಲಿವರೆಗೂ ಯಾರಿಗೂ ಟ್ರೈಸಿಕಲ್ ವಿತರಿಸಿಲ್ಲ. 123 ಟ್ರೈಸಿಕಲ್ ಗಳು ಬಿಸಿಲಲ್ಲೇ ನಿಂತಿವೆ.

    ವಿಧಾನಸೌಧ ವಜ್ರಮಹೋತ್ಸವ ವೇಳೆ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ ಆತುರಾತುರ ನಿರ್ಧಾರ ಕೈಗೊಂಡಿದ್ದ ಸ್ಪೀಕರ್ ಸಾಹೇಬ್ರು ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾಳಜಿ ತೋರಿಸುತ್ತಿಲ್ಲ. ಇಲ್ಲಿವರೆಗೂ ಟ್ರೈಸಿಕಲ್ ವಿತರಣೆ ಆಗಿವೆಯೋ ಇಲ್ವೋ ಎಂದು ವಿಚಾರಿಸುವ ಸೌಜನ್ಯವೂ ತೋರಿಸಿಲ್ಲ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

     

  • ವಿಧಾನಸೌಧ ವಜ್ರಮಹೋತ್ಸವ: ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬೇಕಂತೆ 8 ತಿಂಗಳ ಟೈಂ

    ವಿಧಾನಸೌಧ ವಜ್ರಮಹೋತ್ಸವ: ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬೇಕಂತೆ 8 ತಿಂಗಳ ಟೈಂ

    ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವಕ್ಕೆ ಭರ್ಜರಿಯಾಗಿಯೇ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಜ್ರಮಹೋತ್ಸವಕ್ಕೆ ಸಾಕ್ಷ್ಯಚಿತ್ರಗಳ ಸಿದ್ಧತೆಯನ್ನು ಕೂಡ ಪ್ರಾರಂಭಿಸಲಾಗಿದೆ.

    ಇದೇ ತಿಂಗಳು 25 ಮತ್ತು 26 ನೇ ದಿನಾಂಕದಂದು ವಿಧಾನಸೌಧದ ವಜ್ರಮಹೋತ್ಸವ ನಡೆಯಲಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಆದರೆ ಈ ವಜ್ರಮಹೋತ್ಸಕ್ಕೆ ಸಾಕ್ಷ್ಯಚಿತ್ರಗಳು ಸಿದ್ಧವಾಗುತ್ತಿದ್ದು, ಅದಕ್ಕೆ ಇನ್ನು 8 ತಿಂಗಳು ಸಮಯ ಬೇಕಾಗಿದೆ.

    ಇದು ಕೇವಲ ಸಾಕ್ಷ್ಯಚಿತ್ರವಲ್ಲ, ನಮ್ಮ ಇತಿಹಾಸದ ಮರುಸೃಷ್ಟಿ ಎಂದು ನಿರ್ದೇಶಕರಾದ ಟಿ.ಎನ್.ಸೀತಾರಾಮ್ ಹೇಳಿದ್ದಾರೆ. ಅದಕ್ಕಾಗಿ 1950 ರಿಂದ ಇಲ್ಲಿಯ ತನಕ ವಿಧಾನಸಭೆ ನಡೆದು ಬಂದಿರುವ ಹಾದಿಯನ್ನು ಮರುಸೃಷ್ಟಿ ಮಾಡಲಾಗುತ್ತದೆ. ಇದಕ್ಕಾಗಿ ಇಡೀ ವಿಧಾನಸಭೆಯ ಮಾದರಿ ಸೆಟ್ ಹಾಕಿ, ಮರುಸೃಷ್ಟಿ ಮಾಡಲಾಗುತ್ತದೆ. ಕರ್ನಾಟಕದ ಔನ್ಯತೆಗಾಗಿ ತೆಗೆದುಕೊಂಡಿರುವ ಇತಿಹಾಸ ಪ್ರಸಿದ್ಧ ತೀರ್ಮಾನಗಳು ಕೂಡ ಇದರಲ್ಲಿ ಅಡಕವಾಗಿರುತ್ತವೆ. ಪ್ರಮುಖವಾಗಿ ನಾಲ್ಕು ಗಂಟೆಗಳ ಕಾಲದ ಈ ಸಾಕ್ಷ್ಯಚಿತ್ರಕ್ಕೆ ಸಂಗೀತ ಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿದೆ.

    ಈಗ ನಡೆಯುವ ಅರ್ಧ ಗಂಟೆಯ ಕಾರ್ಯಕ್ರಮ ಬರೀ ಸ್ಯಾಂಪಲ್ ಎಂದು ಹೇಳಲಾಗಿದೆ.

  • ಬಿಎಸ್‍ಎಫ್ ತರಬೇತಿ ಶಿಬಿರದಲ್ಲಿ ಪ್ಲೇ ಆಯ್ತು ಸೆಕ್ಸ್ ವಿಡಿಯೋ

    ಬಿಎಸ್‍ಎಫ್ ತರಬೇತಿ ಶಿಬಿರದಲ್ಲಿ ಪ್ಲೇ ಆಯ್ತು ಸೆಕ್ಸ್ ವಿಡಿಯೋ

    ಜಲಂಧರ್: ಬಿಎಸ್‍ಎಫ್ ಸೈನಿಕರ ತರಬೇತಿ ಶಿಬಿರದ ಸಭೆ ನಡೆಯುವ ವೇಳೆ ಸ್ಕ್ರೀನ್ ಮೇಲೆ ತರಬೇತಿ ಕುರಿತಾದ ಸಾಕ್ಷ್ಯಚಿತ್ರ ಕಾಣುವ ಬದಲು ಸೆಕ್ಸ್ ವಿಡಿಯೋ ಒಂದು ಪ್ರದರ್ಶನ ಕಂಡಿದ್ದು, ಸ್ಥಳದಲ್ಲಿದ್ದ ತರಬೇತಿದಾರರು ಮುಜುಗುರಕ್ಕೊಳಾಗದ ಸನ್ನಿವೇಶ ಉಂಟಾಗಿದೆ.

    ಪಂಜಾಬ್ ರಾಜ್ಯದ ಫಿರೋಜ್‍ಪುರ್‍ನ 77ನೇ ಬೆಟಾಲಿಯನ್‍ನಲ್ಲಿ ಈ ಘಟನೆ ನಡೆದಿದೆ. ಸೆಕ್ಸ್ ನ ವಿಡಿಯೋ ಸುಮಾರು ಒಂದು ನಿಮಿಷದವರೆಗೂ ಪ್ಲೇ ಆಗಿದೆ ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

    ಕ್ಲಿಪಿಂಗ್ ಪ್ಲೇ ಆಗುವ ವೇಳೆ ಶಿಬಿರದಲ್ಲಿ 12 ಜನ ಮಹಿಳೆಯರು ಹಾಗು 20 ಜನ ಪುರುಷರು ಭಾಗಿಯಾಗಿದ್ದರು. ತರಬೇತಿಯ ಕುರಿತಾದ ಸಾಕ್ಷ್ಯ ಚಿತ್ರದ ಬದಲು ಪೋರ್ನ್ ವಿಡಿಯೋ ಪ್ಲೇ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಬಿಎಸ್‍ಎಫ್‍ನ ಹಿರಿಯ ವಕ್ತಾರ ಡಿಐಜಿ ಆರ್.ಎಸ್.ಕಟರಿಯಾ ಹೇಳಿದ್ದಾರೆ.