Tag: Documentary Cinema

  • ರಷ್ಯಾ ಉಕ್ರೇನ್ ಬಿಕ್ಕಟ್ಟು ಚಿತ್ರೀಕರಣಕ್ಕೆ ಮುಂದಾದ ಹಾಲಿವುಡ್ ಸ್ಟಾರ್

    ರಷ್ಯಾ ಉಕ್ರೇನ್ ಬಿಕ್ಕಟ್ಟು ಚಿತ್ರೀಕರಣಕ್ಕೆ ಮುಂದಾದ ಹಾಲಿವುಡ್ ಸ್ಟಾರ್

    ಕೀವ್: ಯುದ್ಧ ವಿರೋಧಿ ಮತ್ತು ಮಾನವೀಯ ಕಾರಣಗಳಿಗಾಗಿ ಸದಾ ಮಿಡಿಯುವ ಹಾಲಿವುಡ್ ತಾರೆ, ಆಸ್ಕರ್ ಪ್ರಶಸ್ತಿ ವಿಜೇತ ಸೀನ್ ಪೆನ್ ಉಕ್ರೇನ್‍ನಲ್ಲಿ ನಡೆಯುತ್ತಿರುವ ರಷ್ಯಾದ ಆಕ್ರಮಣದ ಕುರಿತು ಸಾಕ್ಷ್ಯ ಚಿತ್ರ ಮಾಡಲು ಮುಂದಾಗಿದ್ದಾರೆ.

    ಉಕ್ರೇನ್‍ನ ಸರ್ಕಾರಿ ಅಧಿಕಾರಿಗಳು ತಮ್ಮ ನೆಲದಲ್ಲಿ ನಡೆಯುತ್ತಿರುವ ಪ್ರಸ್ತುತ ಬಿಕ್ಕಟ್ಟಿನ ಕುರಿತು ಮಾತನಾಡುತ್ತಿದ್ದ ಪತ್ರಿಕಾಗೋಷ್ಠಿಯಲ್ಲೀ ಸೀನ್ ಭಾಗಿಯಾಗಿದ್ದರು. ಸಾಕ್ಷ್ಯ ಚಿತ್ರಕ್ಕೆ ಬೇಕಾದ ವಿವರಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಆಲಿಸುತ್ತಿದ್ದರು. ಈ ಸಾಕ್ಷ್ಯ ಚಿತ್ರವು ಡಾಕ್ ವೈಸ್ ವಲ್ರ್ಡ್ ನ್ಯೂಸ್ ಮತ್ತು ಎಂಡೀವರ್ ಕಂಟೆಂಟ್‍ನ ಸಹಯೋಗದೊಂದಿಗೆ ವೈಸ್ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಈ ಮೊದಲೇ ಸೀನ್ ಸಾಕ್ಷ್ಯ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊನೆಯದಾಗಿ ನವೆಂಬರ್ 2021ರಲ್ಲಿ ಉಕ್ರೇನ್‍ಗೆ ಭೇಟಿ ನೀಡಿದ್ದ ಅವರು, ಈ ವೇಳೆ ಉಕ್ರೇನ್ ದೇಶದ ಮಿಲಿಟರಿ ಪ್ರತಿಷ್ಟಾನಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು ಎಂದು ವರದಿಯಾಗಿದೆ. ಅಲ್ಲದೇ, ಪೆನ್ ಅವರು ಉಕ್ರೇನಿಯನ್ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಉಕ್ರೇನಿಯನ್ ಉಪ ಪ್ರಧಾನಿ ಐರಿನಾ ವೆರೆಶ್‍ಚುಕ್ ಜೊತೆಗೆ ಸ್ಥಳೀಯ ಪತ್ರಕರ್ತರು ಮತ್ತು ಉಕ್ರೇನಿಯನ್ ಮಿಲಿಟರಿಯ ಸದಸ್ಯರೊಂದಿಗೆ ಅವರು ಮಾತನಾಡಿ ಸಾಕಷ್ಟು ವಿಷಯ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.  ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

    ಉಕ್ರೇನಿಯನ್ ರಾಯಭಾರ ಕಚೇರಿಯು ಈ ಚಲನಚಿತ್ರ ನಿರ್ಮಾಪಕರನ್ನು ಶ್ಲಾಘಿಸಿ ಹೇಳಿಕೆ ನೀಡಿದ್ದು, ಉಕ್ರೇನ್‍ನಲ್ಲಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ರೆಕಾರ್ಡ್ ಮಾಡಲು ಮತ್ತು ನಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಜಗತ್ತಿಗೆ ಸತ್ಯವನ್ನು ತಿಳಿಸಲು ವಿಶೇಷವಾಗಿ ಪೆನ್ ಅವರು ಕೈವ್‍ಗೆ ಬಂದಿದ್ದಾರೆ ಎಂದು ತಿಳಿಸಿತು. ‘ಉಕ್ರೇನ್‍ಗೆ ಬೆಂಬಲ ನೀಡುವವರಲ್ಲಿ ಸೀನ್ ಪೆನ್ ಕೂಡಾ ಒಬ್ಬರಾಗಿದ್ದಾರೆ. ಅವರ ಧೈರ್ಯ ಮತ್ತು ಪ್ರಾಮಾಣಿಕತೆಗೆ ನಮ್ಮ ದೇಶವು ಅವರಿಗೆ ಸದಾ ಕೃತಜ್ಞರಾಗಿರಬೇಕು’ ಎಂದು ಶ್ಲಾಘಿಸಿದೆ.

  • ಟೀಸರ್ ಕೊನೆಯಲ್ಲಿ ಅಪ್ಪು ಸ್ಮೈಲ್ ನೋಡಿ ಕರುಳು ಕಿತ್ತು ಬಂದಂತಾಯ್ತು: ಶಿವಣ್ಣ

    ಟೀಸರ್ ಕೊನೆಯಲ್ಲಿ ಅಪ್ಪು ಸ್ಮೈಲ್ ನೋಡಿ ಕರುಳು ಕಿತ್ತು ಬಂದಂತಾಯ್ತು: ಶಿವಣ್ಣ

    – ಟೀಸರ್ ನೋಡಿ ಅತ್ತು ಬಿಟ್ಟೆ
    – ಇದೊಂದು ದೊಡ್ಡ ಹೆಜ್ಜೆ

    ಬೆಂಗಳೂರು: ಗಂಧದ ಗುಡಿ ಟೀಸರ್ ನೋಡಿ ರೋಮಾಂಚನವಾಯಿತು, ನಿಜಕ್ಕೂ ಅಪ್ಪು ಅಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದು ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಡಾಕ್ಯುಮೆಂಟರಿ ಸಿನಿಮಾ ಗಂಧದ ಗುಡಿ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಇನ್ನೂ ಟೀಸರ್‍ನಲ್ಲು ಸುಂದರವಾದ ಕಾಡಿನ ಮಧ್ಯೆ ಅಪ್ಪು ಜರ್ನಿ ಅದ್ಭುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

    ಗಂಧದ ಗುಡಿ ಟೀಸರ್ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಟೀಸರ್ ನೋಡಿದ ತಕ್ಷಣ ನನಗೆ ಬಹಳ ಖುಷಿ ಆಯ್ತು ಜೊತೆಗೆ ರೋಮಾಂಚನವಾಯಿತು. ಈಗಿನ ಕಾಲದಲ್ಲಿ ಈ ರೀತಿ ಸಿನಿಮಾ ತೆರೆಯುವ ಬಗ್ಗೆ ಎಲ್ಲರಿಗೂ ಆಲೋಚನೆ ಬರುವುದು ಬಹಳ ಕಡಿಮೆ. ಆದರೆ ಅಂತಹ ಯೋಚನೆ ನನ್ನ ತಮ್ಮನಿಗೆ ಬಂದಿದೆ. ಟೀಸರ್ ಕೊನೆಯಲ್ಲಿ ಅಪ್ಪು ಅವರು ಸ್ಮೈಲ್ ಮಾಡುವ ದೃಶ್ಯ ನೋಡಿ ಕರುಳಿಗೆ ಸಂಕಟವಾದಂತೆ ಆಯಿತು. ಟೀಸರ್ ನೋಡುತ್ತಾ ನಾನು ಅತ್ತಿದ್ದೇನೆ. ಅವನು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ನಮ್ಮೊಂದಿಗೆ ಇದ್ದಾನೆ. ಅವನ ಆಲೋಚನೆಗಳು, ವಿಚಾರಗಳು, ಪ್ರಯತ್ನಗಳು ಇನ್ನೂ ಜೀವಂತವಾಗಿದೆ. ಎಲ್ಲರೂ ಯಾವ ರೀತಿ ಪ್ರಯತ್ನ ಮಾಡಬೇಕೆಂದು ತೋರಿಸಿಕೊಟ್ಟಿದ್ದಾನೆ. ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.

    ಇದೇ ವೇಳೆ ಟೀಸರ್ ಕೊನೆಯಲ್ಲಿ ಅರಣ್ಯವನ್ನು ಉಳಿಸಿ, ಪ್ರಾಣಿಗಳನ್ನು ಉಳಿಸಿ ಎಂಬ ಅಪ್ಪಾಜಿ ಅವರ ಧ್ವನಿ ಕೇಳಿ ನನ್ನ ಮೈ ರೋಮಾಂಚನವಾಯಿತು. ನಾನು ಎಂ.ಪಿ ಶಂಕರ್ ಅವರಿಗೆ ಧನ್ಯವಾದ ತಿಳಿಸಬೇಕು, ಏಕೆಂದರೆ ನಾನು ಸಹ ಗಂಧದ ಗುಡಿ-2 ಸಿನಿಮಾದ ಮೂಲಕ ಪ್ರಕೃತಿ ಮಧ್ಯೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತ್ತು. ಅದು ನನ್ನ ಪುಣ್ಯ. ನಾನು ಹಳ್ಳಿಗಾಡಿನ ಮಧ್ಯೆಯೇ ಹಲವಾರು ಸಿನಿಮಾಗಳನ್ನು ಅಭಿನಯಿಸಿದ್ದೇನೆ ಎಂದರು.

    ನಿಜಕ್ಕೂ ಅಪ್ಪು ಅಂತಹ ತಮ್ಮ ಪಡೆಯಲು ನಾನು ಬಹಳ ಪುಣ್ಯ ಮಾಡಿದ್ದೇನೆ, ಎಲ್ಲರೂ ಅಪ್ಪು ನಿನ್ನ ರೀತಿ ಎಂದು ಹೇಳುತ್ತಾರೆ. ಆದರೆ ನಾನು ಅಪ್ಪು ರೀತಿ ಇದ್ದೇನೆ. ನಾನು ಕೇವಲ ನೊದಲು ಹುಟ್ಟಿದೆ. ಆದರೆ ಮೊದಲು ಅಪ್ಪು ಹುಟ್ಟಿದ್ದರೆ ನಾನು ಅವನಂತೆ ಕಾಣಿಸುತ್ತಿದ್ದೆ ಅನಿಸುತ್ತದೆ. ಅಪ್ಪು ಅಭಿನಯದ ಎಲ್ಲಾ ಸಿನಿಮಾವನ್ನು ನಾನು ಫಸ್ಟ್ ಡೇ ನೋಡುತ್ತಿದ್ದೆ. ಈಗ ಗಂಧದ ಗುಡಿ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದರು.