ನಟಿ ನಯನತಾರಾಗೆ (Nayanthara) ಡಾಕ್ಯುಮೆಂಟರಿ ವಿಚಾರದಲ್ಲಿ ಪದೇ ಪದೇ ನೋಟಿಸ್ (Legal Notice) ಜಾರಿ ಆಗುತ್ತಿದೆ. ನಯನತಾರಾ ಕುರಿತಂತೆ ನೆಟ್ ಫ್ಲಿಕ್ಸ್ ನಲ್ಲಿ ಡಾಕ್ಯುಮೆಂಟರಿ ಪ್ರಸಾರವಾಗುತ್ತಿದ್ದು, ಈ ಹಿಂದೆ ತಮ್ಮ ಸಿನಿಮಾದ ಕೆಲವು ದೃಶ್ಯಗಳನ್ನು ಈ ಡಾಕ್ಯುಮೆಂಟರಿಯಲ್ಲಿ ಬಳಸಲಾಗಿದೆ ಅಂತ ನಟ ಧನುಷ್ ನೋಟಿಸ್ ನೀಡಿದ್ದರು. ಐದು ಕೋಟಿ ರೂಪಾಯಿ ಪರಿಹಾರ ಕೂಡ ಕೇಳಿದ್ದರು. ಆ ಕೇಸ್ ಇನ್ನೂ ಕೋರ್ಟ್ ನಲ್ಲಿ ಇದೆ.
ಧನುಷ್ ನಿರ್ಮಾಣದಲ್ಲಿ ನಯನತಾರಾ ನಟನೆಯಲ್ಲಿ ಮೂಡಿ ಬಂದಿದ್ದ ನಾನುಂ ರೌಡಿ ದಾ ಸಿನಿಮಾದ ಕೆಲವು ದೃಶ್ಯಗಳನ್ನು ಡಾಕ್ಯುಮೆಂಟರಿಯಲ್ಲಿ ಅಳವಡಿಸಲಾಗಿತ್ತು. ಕಾಪಿರೈಟ್ ಉಲ್ಲಂಘನೆ ಆಗಿದೆ ಅನ್ನುವ ಕಾರಣಕ್ಕಾಗಿ ಧನುಷ್ ಸಂಸ್ಥೆ ಐದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತ ನೋಟಿಸ್ ಜಾರಿ ಮಾಡಿತ್ತು.
ಇದೀಗ ಅದೇ ಡಾಕ್ಯುಮೆಂಟರಿಗೆ ಸಂಬಂಧಿಸಿದಂತೆ ಮತ್ತೊಂದು ಸಿನಿಮಾ ಟೀಮ್ ನಿಂದ ನಯನತಾರಾಗೆ ನೋಟಿಸ್ ಕಳುಹಿಸಲಾಗಿದೆ. ಆಪ್ತಮಿತ್ರ ಸಿನಿಮಾದ ರಿಮೇಕ್ ಚಂದ್ರಮುಖಿ (Chandramukhi) ಸಿನಿಮಾದ ಕೆಲವು ದೃಶ್ಯಗಳನ್ನು ನಯನತಾರಾ ಅವರ ಡಾಕ್ಯುಮೆಂಟರಿಯಲ್ಲಿ ಬಳಸಿಕೊಳ್ಳಲಾಗಿದೆ ಎನ್ನುವ ಕಾರಣಕ್ಕಾಗಿ ನಿರ್ಮಾಣ ಸಂಸ್ಥೆಯು ನೋಟಿಸ್ ಕೊಟ್ಟಿದೆ. ಐದು ಕೋಟಿ ರೂಪಾಯಿ ಪರಿಹಾರ ಕೊಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಧನುಷ್ ನೋಟಿಸ್ ಕಳುಹಿಸಿದ್ದಕ್ಕೆ ಕೆಂಡ ಕಾರಿದ್ದರು ನಯನತಾರಾ. ಸೋಷಿಯಲ್ ಮೀಡಿಯಾದಲ್ಲಿ ಧನುಷ್ ವ್ಯಕ್ತಿತ್ವದ ಕುರಿತು ಬರೆದುಕೊಂಡಿದ್ದರು. ಈಗ ಚಂದ್ರಮುಖಿ ಸಿನಿಮಾ ಟೀಮ್ ಕುರಿತು ಯಾವ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಾರೋ ಕಾದು ನೋಡಬೇಕು.
ಮಲಯಾಳಂ ಭಾಷೆಯ ಕುತೂಹಲಕಾರಿ ಸಾಕ್ಷ್ಯಚಿತ್ರ ‘ಓಣವಿಲ್ಲು, ದ ಡಿವೈನ್ ಬೋವ್’ (ದೇವ ಧನುಸ್ಸು) ಮಾರ್ಚ್ 8ರಿಂದ ಜಿಯೊಸಿನಿಮಾದಲ್ಲಿ ಉಚಿತವಾಗಿ ಪ್ರದರ್ಶನ ಕಾಣುತ್ತಿದೆ. ತಿರುವನಂತಪುರ ಮೂಲದ ಚಿತ್ರನಿರ್ದೇಶಕ ಆನಂದ್ ಬನಾರಸ್ ಮತ್ತು ಶರತ್ ಚಂದ್ರ ಮೋಹನ್ ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದು, ಅಭಿನವ್ ಕಾಲ್ರಾ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಸ್ಟೀಫನ್ ಒರ್ಲಾಂಡೊ ಇದಕ್ಕೆ ಸಂಗೀತ ನೀಡಿದ್ದಾರೆ. ‘ಓಣವಿಲ್ಲು’ ಸಮರ್ಪಣೆಯ ಸಾಂಪ್ರದಾಯಿಕ ಆಚರಣೆಯ ಮಹತ್ವ ಮತ್ತು ಅದರ ಸಾಂಸ್ಕೃತಿಕ ಶ್ರೀಮಂತಿಕೆಯ ಮೇಲೆ ಈ ಸಾಕ್ಷ್ಯಚಿತ್ರ ಗಮನಸೆಳೆಯುತ್ತದೆ.
ಏನಿದು ಒಣವಿಲ್ಲು?
‘ಓಣವಿಲ್ಲು’ ಎಂಬುದು ಒಂದು ದೈವೀಕ ಧನುಸ್ಸಾಗಿದ್ದು, ಅದರ ಮೇಲೆ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಗಳ ಚಿತ್ರಗಳನ್ನು ಬಿಡಿಸಲಾಗಿರುತ್ತದೆ. ಇದನ್ನು ಕೇರಳದ ತಿರುವನಂತಪುರದ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ತಿರುಓಣಂ ಹಬ್ಬದ ಸಮಯದಲ್ಲಿ ಸಮರ್ಪಿಸಲಾಗುತ್ತದೆ. ‘ಓಣವಿಲ್ಲು’ವನ್ನು ಎಲ್ಲರೂ ಮಾಡುವಂತಿಲ್ಲ. ಒಣವಿಲ್ಲು ರಚಿಸುವ ಹಕ್ಕು ಇರುವುದು ಕರಮಾನ ಮೆಲಾರನ್ನೂರ್ ವಿಲಾಯಿಲ್ ವೀಡು ಕುಟುಂಬಕ್ಕೆ ಮಾತ್ರ! ಈ ಸಾಕ್ಷ್ಯಚಿತ್ರದಲ್ಲಿ ಈ ಕುಟುಂಬದ ಬಗ್ಗೆಯೂ ಸಾಕಷ್ಟು ಬೆಳಕು ಚೆಲ್ಲಲಾಗಿದೆ.
ಮಮ್ಮುಟ್ಟಿ ಧ್ವನಿ
ಹಲವು ತಲೆಮಾರುಗಳಿಂದ ನಡೆದುಬಂದಿರುವ ಈ ವಿಶಿಷ್ಟ ಸಾಂಪ್ರದಾಯಿಕ ಆಚರಣೆಯ ಕುರಿತಾದ ಸಾಕ್ಷ್ಯಚಿತ್ರದ ವಿಶೇಷತೆ ಏನೆಂದರೆ, ಮಲಯಾಳಂನ ಜನಪ್ರಯ ಹಿರಿಯ ನಟ ಮಮ್ಮೂಟ್ಟಿ ಮತ್ತು ಯುವನಟ ಉನ್ನಿ ಮುಕುಂದನ್ ಅವರ ಧ್ವನಿ. ಓಣವಿಲ್ಲು ಆಚರಣೆಯ ಕುರಿತಾದ ಹಲವು ಸಂಗತಿಗಳನ್ನು ನೀವು ಇವರ ಧ್ವನಿಯಲ್ಲಿ ಕೇಳಬಹುದಾಗಿದೆ. ಬಹುಮಹತ್ವದ ಆಚರಣೆ ಮತ್ತು ಅದರ ಸಾಂಸ್ಕೃತಿಕ ಮಹತ್ವದ ಕುರಿತು ‘ಓಣವಿಲ್ಲು, ದ ಡಿವೈನ್ ಬೋವ್’ ಸಾಕ್ಷಚಿತ್ರ ಮಾಹಿತಿ ನೀಡುತ್ತೆ. ಕದಂಬ ಮತ್ತು ಮಹಾಗನಿ ಕಟ್ಟಿಗೆಯಲ್ಲಿ ಈ ಬಿಲ್ಲನ್ನು ರೂಪಿಸಲಾಗುತ್ತದೆ. ನಂತರ ಇದರ ಮೇಲೆ ಬಹುಸುಂದರವಾಗಿ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಯ ಚಿತ್ರಗಳನ್ನು ರಚಿಸಲಾಗುತ್ತದೆ. ಈ ಸಾಂಪ್ರದಾಯಿಕ ಕಲೆಯನ್ನು ದೈವೀಭಕ್ತಿಯಿಂದ ಕಾಪಾಡಿಕೊಂಡು ಬರುತ್ತಿರುವ ಕುಟುಂಬದವರ ಕುರಿತೂ ಈ ಸಾಕ್ಷ್ಯಚಿತ್ರ ಹಲವು ಕುತೂಹಲಕಾರಿ ಮಾಹಿತಿಯನ್ನು ನೀಡುತ್ತದೆ.
ಹಿಂದೆ ತಿರುವಾಂಕೂರು ರಾಜ್ಯದ ರಾಷ್ಟ್ರಗೀತೆಯಾಗಿದ್ದ ‘ವಾಂಚಿ ಭೂಮಿ’ ಎಂಬ ಹಾಡೂ ಈ ಸಾಕ್ಷ್ಯದಲ್ಲಿರುವುದು ವಿಶೇಷ. ಈ ಹಾಡನ್ನು ಉಲ್ಲೂರು ಎಸ್ ಪರಮೇಶ್ವರ ಅಯ್ಯರ್ ರಚಿಸಿದ್ದಾರೆ. ಬಾಲಿವುಡ್ ಗಾಯಕ ತಾನಿಯಾ ದೇವ ಗುಪ್ತ ಹಾಡಿದ್ದಾರೆ. ಕೇರಳದ ಸಮೃದ್ಧ ಪರಂಪರೆಯ ಪರಿಚಯ, ಕಲೆ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಒಣವಿಲ್ಲು ಎಂಬ ವಿಶಿಷ್ಟ ದೈವೀಕ ಧನುಸ್ಸು ಅರ್ಪಣೆ ಆಚರಣೆಯ ಕುರಿತಾದ ಸಾಕ್ಷ್ಯಚಿತ್ರವನ್ನು ಮಾರ್ಚ್ 8ರಿಂದ ಜಿಯೊಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ.
ಬಾಲಿವುಡ್‌ನಲ್ಲಿ (Bollywood) ಹೊಸ ಅಲೆ ಸೃಷ್ಟಿಸಿದ ಸಿನಿಮಾ ಅಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ. 2022ರಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ವಿವೇಕ್ ಅಗ್ನಿಹೋತ್ರಿ ನಿರ್ದೇಶದ ಸಿನಿಮಾ ಸೌಂಡ್ ಮಾಡಿತ್ತು. ಈ ಚಿತ್ರದ ನಿರ್ದೇಶಕ ಫ್ಯಾನ್ಸ್ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಬಾರಿ ಅವರು ಮತ್ತೊಂದು ‘ದಿ ಕಾಶ್ಮೀರ್ ಫೈಲ್ಸ್’ ಜೊತೆ ಬರೋದಾಗಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇನ್ನೂ ಎಲ್ಲೂ ಹೇಳಿರದ ಸಾಕಷ್ಟು ವಿಚಾರಗಳನ್ನ ಒಟಿಟಿ ಮೂಲಕ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.
2022ರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನುಪಮ್ ಖೇರ್ (Anupam Kher) ಅವರು ಪ್ರಮುಖವಾಗಿ ನಟಿಸಿದ್ದರು. ಕಾಶ್ಮೀರ ಪಂಡಿತರನ್ನ ಆಧರಿಸಿ ನೈಜ ಕಥೆಯನ್ನೇ ಈ ಸಿನಿಮಾ ಮೂಲಕ ತೋರಿಸಿಲಾಗಿತ್ತು. ಅನೇಕರು ಈ ಸಿನಿಮಾವನ್ನು ಖಂಡಿಸಿದ್ದರು. ಆದರೆ ಸಾಕಷ್ಟು ಟೀಕೆ, ವಿರೋಧದ ನಡುವೆಯೂ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು.
ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್’ ಎಂಬ ಪ್ರಾಜೆಕ್ಟ್ ಈಗ ಘೋಷಣೆ ಮಾಡಿದ್ದಾರೆ. ಇದರ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅನೇಕ ಕಾಶ್ಮೀರಿ ಹಿಂದೂಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದರ ಜೊತೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ತುಣುಕುಗಳನ್ನ ಸೇರಿಸಲಾಗಿದೆ. ಈ ಬಾರಿ ಒಟಿಟಿ ಮೂಲಕ ಸಿನಿಮಾ ರಿಲೀಸ್ ಆಗಲಿದೆ.
ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ವಿವೇಕ್, ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿ ಮಾಡಿದ ಸಂಶೋಧನೆ, ಘಟನೆಯ ಕುರಿತಾಗಿ ಮಾತನಾಡಿಸಿದವರು ವಿಡಿಯೋ ಮತ್ತು ಆ ಹೊತ್ತಿನ ಕೆಲವು ಮಹತ್ವದ ದಾಖಲೆಗಳನ್ನು ಇದರಲ್ಲಿ ಸೇರಿಸಲಾಗಿದೆ. ನನ್ನ ಸಂಶೋಧನೆ ಒಟ್ಟು ಭಾಗ ಇದಾಗಿದೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ
ನರಮೇಧ ನಡೆದಿದೆ ಎಂದು ಒಪ್ಪದವರು, ಭಯೋತ್ಪಾದಕ ಬೆಂಬಲಿಗರು ಮತ್ತು ಭಾರತದ ಶತ್ರುಗಳು ಕಾಶ್ಮೀರ ಫೈಲ್ಸ್ನ ಪ್ರಶ್ನಿಸಿದರು. ಕಾಶ್ಮೀರ ಹಿಂದೂಗಳ ಹತ್ಯಾಕಾಂಡದ ಭೀಕರ ಸತ್ಯವನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ. ಇದನ್ನು ದೆವ್ವಗಳು ಮಾತ್ರ ಪ್ರಶ್ನಿಸಬಹುದು. ಶೀಘ್ರದಲ್ಲೇ ಬರಲಿದೆ #KashmirUnreported ಎಂದು ವಿವೇಕ್ ಅಗ್ನಿಹೋತ್ರಿ ಬರೆದುಕೊಂಡಿದ್ದಾರೆ. ಕಾಶ್ಮೀರಿ ಪಂಡಿತರ ಇತಿಹಾಸದ ನಿರ್ಲಕ್ಷಿತ ಅಧ್ಯಾಯಗಳ ಮರುಶೋಧ ಎಂದು ಖಾಸಗಿ ಒಟಿಟಿವೊಂದು ಟ್ವೀಟ್ ಮಾಡಿಕೊಂಡಿದೆ.
‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್’ (Kashmir Files Unreported) ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಹೆಚ್ಚಿನ ಅಪ್‌ಡೇಟ್‌ಗೆ ಕಾದುನೋಡಬೇಕಿದೆ. ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟಿ ಕಾಂತಾರ ಬೆಡಗಿ ಸಪ್ತಮಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಈ ವರ್ಷದ ಅಂತ್ಯದಲ್ಲಿ ತೆರೆಗೆ ಬರಲಿದೆ.
ಕೀವ್: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ದಿನ ತಮ್ಮ ಆಪ್ತ ವಲಯದವರಿಂದಲೇ ಕೊಲ್ಲಲ್ಪಡುತ್ತಾರೆ ಎಂದು ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಭವಿಷ್ಯ ನುಡಿದಿದ್ದಾರೆ.
ಝೆಲೆನ್ಸ್ಕಿ ಅವರ ಈ ಹೇಳಿಕೆ ಉಕ್ರೇನ್‌ನ ‘ಇಯರ್’ (Year) ಹೆಸರಿನ ಸಾಕ್ಷ್ಯಚಿತ್ರದಲ್ಲಿ (Documentary) ಕಂಡುಬಂದಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 1 ವರ್ಷವಾಗಿರುವ ಹಿನ್ನೆಲೆ ಶುಕ್ರವಾರ ಇಯರ್ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ರಷ್ಯಾ ಅಧ್ಯಕ್ಷ ನಾಯಕತ್ವದಲ್ಲಿ ದುರ್ಬಲತೆಯ ಅವಧಿ ಬರಲಿದೆ. ಅವರ ಆಪ್ತ ವಲಯದವರೇ ಅಧ್ಯಕ್ಷನ ವಿರುದ್ಧ ಕೆಲಸ ಮಾಡಲು ಪ್ರೇರೇಪಿಸಲಿದೆ. ಪರಭಕ್ಷಕಗಳು ಪರಭಕ್ಷಕನನ್ನು ತಿನ್ನುತ್ತವೆ. ಕೊಲೆಗಾರನನ್ನು ಕೊಲ್ಲಲು ಅವರು ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಇದು ಖಂಡಿತಾ ನಡೆಯುತ್ತದೆ, ಆದರೆ ಯಾವಾಗ ಆಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ. ಇದನ್ನೂ ಓದಿ: ಇಟಲಿಯಲ್ಲಿ ದೋಣಿ ದುರಂತ – 40ಕ್ಕೂ ಹೆಚ್ಚು ವಲಸಿಗರ ದುರ್ಮರಣ
ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಸಾರಿದ ಬಳಿಕ ಆಗಾಗ ಅಧ್ಯಕ್ಷ ಪುಟಿನ್ ಬಗ್ಗೆ ಅವರ ಆಂತರಿಕ ವಲಯದಲ್ಲೇ ಅಸಮಾಧಾನ ಹೊಂದಿರುವ ಬಗ್ಗೆ ರಷ್ಯಾದಲ್ಲಿ ವರದಿಯಾಗಿದೆ. ಪುಟಿನ್‌ರ ಆಪ್ತ ವಲಯದವರೇ ಅವರ ಬಗ್ಗೆ ಹೆಚ್ಚು ಹತಾಶೆಗೊಂಡಿದ್ದಾರೆ ಎಂದು ಹೇಳಲಾಗಿದೆ. ಯುದ್ಧದ ವೇಳೆಯೂ ರಷ್ಯಾದ ಸೈನಿಕರು ಅಧ್ಯಕ್ಷನ ವಿರುದ್ಧ ದೂರುವುದು ಹಲವು ವೀಡಿಯೋಗಳಲ್ಲಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ – ಸಚಿವರ ಆರೋಪದ ಬಳಿಕ ಭುಗಿಲೆದ್ದ ವಿವಾದ
ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಬಿಬಿಸಿ (BBC) ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ (Documentary) ರಷ್ಯಾ ಆಕ್ರೋಶ ವ್ಯಕ್ತಪಡಿಸಿದೆ.
ರಷ್ಯಾದ(Russia) ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಪ್ರತಿಕ್ರಿಯಿಸಿ, ಬಿಬಿಸಿ ರಷ್ಯಾದ ವಿರುದ್ಧ ಮಾತ್ರವಲ್ಲದೇ ಸ್ವತಂತ್ರ ನೀತಿಯನ್ನು ಅನುಸರಿಸುತ್ತಿರುವ ಇತರ ದೇಶಗಳ ವಿರುದ್ಧ ಮಾಹಿತಿ ಯುದ್ಧವನ್ನು ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ: ಮೋದಿ
ಬಿಬಿಸಿ ವಿವಿಧ ರಂಗಗಳಲ್ಲಿ ಮಾಹಿತಿ ಯುದ್ಧವನ್ನು ನಡೆಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ಬಿಬಿಸಿ ಈಗ ಸ್ವತಂತ್ರವಾಗಿ ಉಳಿದಿಲ್ಲ. ಪತ್ರಿಕೋದ್ಯಮ ವೃತ್ತಿಯನ್ನು ನಿರ್ಲಕ್ಷಿಸಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗಲಭೆ ವಿಷಯಗಳ ಬಗ್ಗೆ ತನಿಖೆ ನಡೆಸಿ ಎರಡು ಭಾಗಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ತಯಾರಿಸಿದೆ. ಭಾರತದ ವಿದೇಶಾಂಗ ಇಲಾಖೆ ಇದು “ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಟೀಕಿಸಿದೆ.
Live Tv
[brid partner=56869869 player=32851 video=960834 autoplay=true]
ವಾಷಿಂಗ್ಟನ್: ನರೇಂದ್ರ ಮೋದಿ (Narendra Modi) ಕುರಿತ ಸಾಕ್ಷ್ಯಚಿತ್ರದ ವಿಚಾರದಲ್ಲಿ ಭಾರತ (India) ಸರ್ಕಾರಕ್ಕೆ ಅಮೆರಿಕ ಶಾಕ್ ನೀಡಿ ಪರೋಕ್ಷವಾಗಿ ಬಿಬಿಸಿಯನ್ನು (BBC) ಸಮರ್ಥಿಸಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ, ಪಾಕಿಸ್ತಾನದ ಪತ್ರಕರ್ತರೊಬ್ಬರು ಬಿಬಿಸಿ ಸಾಕ್ಷ್ಯಚಿತ್ರದ (BBC Documentary) ಮೇಲಿನ ನಿಷೇಧ ಪತ್ರಿಕಾ ಸ್ವಾತಂತ್ರ್ಯ ಅಥವಾ ವಾಕ್ ಸ್ವಾತಂತ್ರ್ಯದ ವಿಷಯವೇ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರತಿನಿಧಿ ನೆಡ್ ಪ್ರೈಸ್ ಅವರನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಾರ್ಕ್‌ನೆಟ್ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್
ಈ ವಿಷಯಕ್ಕೆ ಬಂದಾಗ, ನಾವು ಪ್ರಪಂಚದಾದ್ಯಂತ ಮುಕ್ತ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇವೆ ಎಂದು ಪ್ರೈಸ್ ಉತ್ತರಿಸಿದ್ದಾರೆ. ಮುಕ್ತ ಪತ್ರಿಕಾ ಸ್ವಾತಂತ್ರ್ಯ ಪ್ರಜಾತಂತ್ರದ ಮೌಲ್ಯಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಇದೇ ನಿಲುವು ಭಾರತಕ್ಕೂ ಅನ್ವಯಿಸುತ್ತದೆ ಎಂದು ಹೇಳಿದರು.
ಬಿಬಿಸಿ ದುರುದ್ದೇಶದಿಂದ ಈ ಡಾಕ್ಯುಮೆಂಟರಿ ಮಾಡಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರ, ಇದನ್ನು ಯೂಟ್ಯೂಬ್, ಟ್ವಿಟ್ಟರ್‌ನಲ್ಲಿ ನಿಷೇಧಿಸಿದೆ.
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಬಿಬಿಸಿ (BBC) ರಚಿಸಿರುವ ಸಾಕ್ಷ್ಯಚಿತ್ರ (Documentary) ಪ್ರಸಾರವನ್ನು ಕೇಂದ್ರ ನಿರ್ಬಂಧಿಸಿದ್ದರೂ ಹೈದರಾಬಾದ್ ವಿಶ್ವವಿದ್ಯಾಲಯದ (Hyderabad University) ಕ್ಯಾಂಪಸ್‌ನಲ್ಲಿ ಪ್ರದರ್ಶನ ಮಾಡಿರುವುದಾಗಿ ದೂರು ದಾಖಲಾಗಿದೆ.
‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ (India: The Modi Question) ಹೆಸರಿನ ಸಾಕ್ಷ್ಯಚಿತ್ರ 2002ರ ಗಲಭೆಯ ಸಂದರ್ಭದ ಗುಜರಾತ್ ನಾಯಕತ್ವದ ಬಗ್ಗೆ ತಪ್ಪು ವರದಿ ಮಾಡಿರುವುದಾಗಿ ವಿವಾದಕ್ಕೀಡಾಗಿತ್ತು. ಈ ಹಿನ್ನೆಲೆ ಕಳೆದ ಶನಿವಾರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಯೂಟ್ಯೂಬ್‌ನಲ್ಲಿ ಬಿಬಿಸಿ ರಚಿಸಿರುವ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದೆ.
ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸೋಮವಾರ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ. ಭದ್ರತಾ ಇಲಾಖೆಯಿಂದ ವರದಿಯನ್ನು ನಿರೀಕ್ಷಿಸಲಾಗಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್
ಕೆಲ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನದ ಬಗ್ಗೆ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಈ ನಿರ್ಬಂಧವನ್ನು ಹೇರುವುದಕ್ಕೂ ಮೊದಲೇ ಸ್ಕ್ರೀನಿಂಗ್ ಅನ್ನು ಆಯೋಜನೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಆದೇಶದ 1 ದಿನದ ನಂತರ ಎಂದರೆ ಭಾನುವಾರ ಸಾಕ್ಷ್ಯಚಿತ್ರ ಪ್ರದರ್ಶನವಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಮತ್ತೊಂದು ಹೊಸ ದಾಖಲೆಯನ್ನು ಕ್ರಿಯೇಟ್ ಮಾಡಿದೆ. ಅದು ಕೆಜಿಎಫ್ 2 ದಾಖಲೆಯನ್ನೂ ಉಡಿಸ್ ಮಾಡಿದೆ. ಈವರೆಗೂ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈವರೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ಕಾಂತಾರ’. ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ. ಧನ್ಯವಾದಗಳು ಕರ್ನಾಟಕ ಎಂದು ನಿರ್ಮಾಪಕ ವಿಜಯ್ ಕಿರಂಗದೂರ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್
ಕಾಂತಾರ ಸಿನಿಮಾದ ಒಟ್ಟು ಗಳಿಕೆ 200 ಕೋಟಿ ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲೇ ಅದು ನೂರು ಕೋಟಿ ಗಳಿಕೆ ಮಾಡಿದೆ. ಬಾಲಿವುಡ್ ನಲ್ಲೂ ಕಾಂತಾರ ಹಿಂದೆ ಬಿದ್ದಿಲ್ಲ. ಹಿಂದಿಯಲ್ಲಿ ಈವರೆಗೂ 22.25 ಕೋಟಿ ಹಣ ಹರಿದು ಬಂದಿದೆಯಂತೆ. ಕೆಜಿಎಫ್ 2 ಸಿನಿಮಾದ ನಂತರ ಕನ್ನಡ ಸಿನಿಮಾವೊಂದು ಈ ಪರಿ ಗಳಿಕೆ ಮಾಡಿದ ಹೆಗ್ಗಳಿಕೆ ಕಾಂತಾರದ್ದು.
ಒಂದು ಕಡೆ ಬಾಕ್ಸ್ ಆಫೀಸಿನಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಹಿಂದೂ ಸಂಸ್ಕೃತಿಗೆ ಸಂಬಂಧಿಸಿದಂತೆ ಈ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಚೇತನ್ ಮತ್ತು ಬೆಂಬಲಿಗರು ಸಿನಿಮಾದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಹಿಂದೂಪರ ಸಂಘಟನೆಯ ಕಾರ್ಯಕರ್ತರು ಚೇತನ್ ವಿರುದ್ಧ ದಂಗೆ ಎದ್ದಿದ್ದಾರೆ. ಕೆಲವು ಕಡೆ ಚೇತನ್ ಮೇಲೆ ದೂರು ಕೂಡ ದಾಖಲಾಗಿವೆ.
Live Tv
[brid partner=56869869 player=32851 video=960834 autoplay=true]
ಪುನೀತ್ ರಾಜ್‌ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ (Gandhad Gudi) ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಇದೇ ತಿಂಗಳು 28 ರಂದು ದೇಶಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಪ್ರಿ ರಿಲೀಸ್ ಇವೆಂಟ್ ಆಯೋಜನೆ ಮಾಡಿದೆ. ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗೆ ಗಂಧದ ಗುಡಿಗೆ ಏನೆಲ್ಲ ಶಕ್ತಿ ತುಂಬಬೇಕೋ ಆ ಕೆಲಸವನ್ನು ಪುನೀತ್ ಅವರ ಪತ್ನಿ ಅಶ್ವಿನಿ (Ashwini Puneeth) ಮಾಡುತ್ತಿದ್ದಾರೆ.
ಗಂಧದ ಗುಡಿ ವಿಚಾರವಾಗಿ ಪುನೀತ್ (Puneeth Rajkumar) ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿರುವ ಅಶ್ವಿನಿ ಅವರು, ಇದೇ ಮೊದಲ ಬಾರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಗಂಧದ ಗುಡಿಯ ಆಶಯವನ್ನು ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಹೇಳಿದ್ದಾರಂತೆ. ಹಾಗಾಗಿ ಈ ಡಾಕ್ಯುಮೆಂಟರಿ (Documentary) ಮಾದರಿ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ರಾಜ್‌ಕುಮಾರ್ ಧ್ವನಿಯನ್ನು (Voiceover) ಕೇಳಬಹುದಾಗಿದೆ. ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ
ಪ್ರಿ ರಿಲೀಸ್ ಇವೆಂಟ್‌ಗಾಗಿ ಈಗಿನಿಂದಲೇ ಬೆಂಗಳೂರಿನ ಅರಮನೆ ಮೈದಾನ ಸಿದ್ಧವಾಗುತ್ತಿದೆ. ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದು, ಭಾರತೀಯ ಸಿನಿಮಾ ರಂಗದ ದಿಗ್ಗಜರು ಈ ಇವೆಂಟ್‌ಗೆ ಸಾಕ್ಷಿಯಾಗಲಿದ್ದಾರೆ. ಅಲ್ಲದೇ, ಕನ್ನಡದ ಬಹುತೇಕ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ರಾಜ್ ಕುಟುಂಬ ಆಹ್ವಾನ ನೀಡಿದೆ.
ಗಂಧದ ಗುಡಿ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಅನೇಕರು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುನೀತ್ ವೃತ್ತಿ ಜೀವನದಲ್ಲಿ ಇದೊಂದು ಅಪರೂಪದ ಸಿನಿಮಾ ಆಗಲಿದೆ ಎಂದು ವಿಶ್ಲೇಷಿಸಿದ್ದಾರೆ. ನಾಡಿನ ಕಾಡು, ಜಲ ಸಂಪತ್ತು, ಜೀವ ಸಂಪತ್ತು ಹಾಗೂ ಕಾಡು ಪ್ರಾಣಿಗಳ ಹೊಸ ಲೋಕವನ್ನೇ ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಹಿಡಿದಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ ಕೊನೆ ಸಿನಿಮಾ ಇದಾಗಿದೆ.
Live Tv
[brid partner=56869869 player=32851 video=960834 autoplay=true]
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಕೂಸಾಗಿದ್ದ ‘ಗಂಧದ ಗುಡಿ’ ಸಾಕ್ಷ್ಯಚಿತ್ರವು ಅಕ್ಟೋಬರ್ 28ರಂದು ಬಿಡುಗಡೆ ಮಾಡುವುದಾಗಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರು ಪ್ರೀತಿಯ ಕಾಣಿಕೆ ಎಂದು ಅಶ್ವಿನಿ ಬರೆದಿದ್ದಾರೆ.
ಈ ಸಾಕ್ಷ್ಯ ಚಿತ್ರದ ಬಗ್ಗೆ ಪುನೀತ್ ರಾಜ್ ಕುಮಾರ್ ಅಪಾರ ಕನಸು ಕಟ್ಟಿಕೊಂಡಿದ್ದರು. ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಸುಮ್ಮನೆ ಮನೆಯಲ್ಲಿ ಕೂರದೇ ಪುನೀತ್ ಅವರು ಕಾಡು ಮೇಡು ಸುತ್ತಿ ಶೂಟಿಂಗ್ ಮಾಡಿರುವ ಸಿನಿಮಾವಿದು. ನಮ್ಮ ನಾಡಿನ ಕಾಡಿನ ಸಂಪತ್ತನ್ನು ಈ ಸಾಕ್ಷ್ಯ ಚಿತ್ರದಲ್ಲಿ ಪರಿಚಯಿಸುವ ಕೆಲಸ ಮಾಡಿದ್ದಾರಂತೆ ಪುನೀತ್ ರಾಜ್ ಕುಮಾರ್. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್
ಅಂದುಕೊಂಡಂತೆ ಆಗಿದ್ದರೆ, ಅಪ್ಪು ಬದುಕಿದ್ದಾಗಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಬೇಕಿತ್ತು. ಅದಕ್ಕೆ ಸಮಯವನ್ನೂ ನಿಗಧಿ ಮಾಡಿದ್ದರು. ಆದರೆ, ಅವರು ಅಷ್ಟರಲ್ಲಿ ನಿಧನರಾದರು. ಹಾಗಾಗಿ ಅವರ ಕನಸಿನ ಕೂಸನ್ನು ಅದ್ಧೂರಿಯಾಗಿಯೇ ರಿಲೀಸ್ ಮಾಡಬೇಕು ಎನ್ನುವುದು ಅಶ್ವಿನಿ ಅವರ ಕನಸಾಗಿತ್ತು. ಹೀಗಾಗಿ ಥಿಯೇಟರ್ ನಲ್ಲೇ ಈ ಸಾಕ್ಷ್ಯ ಚಿತ್ರ ರಿಲೀಸ್ ಆಗುತ್ತಿದೆ.
Live Tv
[brid partner=56869869 player=32851 video=960834 autoplay=true]