Tag: doctors

  • ಹೆಡ್‌ಫೋನ್‌ನಿಂದ ಕಿವಿ ಸಮಸ್ಯೆ ಗ್ಯಾರಂಟಿ – ತೊಂದರೆ ಆಗಬಾರದು ಅಂದ್ರೆ ಹೀಗೆ ಮಾಡಿ..

    ಹೆಡ್‌ಫೋನ್‌ನಿಂದ ಕಿವಿ ಸಮಸ್ಯೆ ಗ್ಯಾರಂಟಿ – ತೊಂದರೆ ಆಗಬಾರದು ಅಂದ್ರೆ ಹೀಗೆ ಮಾಡಿ..

    ಮೊದಲೆಲ್ಲಾ ಹೆಡ್‌ಫೋನ್‌ (Headphone) ಬಳಕೆ ಟ್ರೆಂಡ್‌ ಆಗಿತ್ತು. ಈಗಲೂ ಆ ಟ್ರೆಂಡ್‌ ಇದೆ. ಟ್ರೆಂಡ್‌ ವಿಚಾರ ಹಾಗಿರಲಿ.. ಈ ಕೋವಿಡ್‌ ಬಂದ್ಮೇಲೆ ಹೆಡ್‌ಫೋನ್‌ ಬಳಕೆ ಮತ್ತಷ್ಟು ಹೆಚ್ಚಾಗಿದೆ. ಕೋವಿಡ್‌ (Covid-19) ಸಾಂಕ್ರಾಮಿಕದ ಕಾರಣ, ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಪದ್ಧತಿ ರೂಢಿಗತವಾಯ್ತು. ಇದ್ರಿಂದ ಆನ್‌ಲೈನ್‌ ಮೀಟಿಂಗ್‌, ವೀಡಿಯೋ ಕಾಲ್‌ಗಾಗಿ ಹೆಡ್‌ಫೋನ್‌ ಬಳಕೆಯೂ ಜಾಸ್ತಿಯಾಯ್ತು.

    ಅಷ್ಟೇ ಅಲ್ಲ, ಸ್ನೇಹಿತರು, ಮನೆಯವರೊಂದಿಗೆ ಮಾತನಾಡುವುದಕ್ಕೂ ಹೆಡ್‌ಫೋನ್‌ ಬಳಸುವವರೇ ಹೆಚ್ಚು. ನಮ್ಮಲ್ಲಿ ಅನೇಕರು ಗಂಟೆಗಳ ಕಾಲ ಹೆಡ್‌ಫೋನ್‌ಗೆ ಅಂಟಿಕೊಂಡೇ ಇರುತ್ತಾರೆ. ಒಂದರ್ಥದಲ್ಲಿ ಇದು ಉತ್ತಮ ಎನಿಸಬಹುದು. ಫೋನ್‌ನಲ್ಲಿ ನೀವು ಕೇಳುವ ಆಡಿಯೋ ಹೊರಗಿನವರಿಗೆ ಗೊತ್ತಾಗಲ್ಲ. ಮತ್ತೆ ನಿಮ್ಮಿಂದ ಹೊರಗಿನವರಿಗೆ ಡಿಸ್ಟರ್ಬ್‌ ಕೂಡ ಆಗಲ್ಲ. ಆದರೆ ಹೆಡ್‌ಫೋನ್‌ಗೆ ಅತಿಯಾಗಿ ಅಂಟಿಕೊಳ್ಳೋದ್ರಿಂದ ನಮಗೆ ಹಾನಿಯೇ ಹೆಚ್ಚು. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?

    ಹೆಡ್‌ಫೋನ್‌ ಹೆಚ್ಚಾಗಿ ಬಳಸುವವರಿಗೆ ಆತಂಕಕಾರಿ ಸುದ್ದಿಯೊಂದನ್ನು BMJ ಗ್ಲೋಬಲ್ ಹೆಲ್ತ್ ಜರ್ನಲ್‌ ಪ್ರಕಟಿಸಿದೆ. 100 ಕೋಟಿ ಯುವಜನರು ಹೆಡ್‌ಫೋನ್‌ ಬಳಕೆಯಿಂದ ಶ್ರವಣ ದೋಷ (Hearing Loss) ಸಮಸ್ಯೆಯನ್ನು ಹೆದರಿಸುತ್ತಿದ್ದಾರೆ ಎಂಬ ವಿಚಾರವನ್ನು ಜರ್ನಲ್‌ ತನ್ನ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.

    ವೈದ್ಯರು ಹೇಳೋದೇನು?
    ಇತ್ತೀಚಿನ ದಿನಗಳಲ್ಲಿ ಶ್ರವಣ ಸಮಸ್ಯೆಯಿದೆ ಅಂತಾ ಬರುವ ರೋಗಿಗಳ ಸಂಖ್ಯೆಯೇ ಹೆಚ್ಚಿದೆ. ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದಾಗಿ ಇವರಿಗೆ ಶ್ರವಣ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ತಪಾಸಣೆಯಿಂದ ಗೊತ್ತಾಗಿದೆ. ಹೆಡ್‌ಫೋನ್‌ ಅತಿಯಾದ ಬಳಕೆ ಅವರ ನರಗಳಿಗೆ ತೀವ್ರತರ ಹಾನಿಯನ್ನುಂಟು ಮಾಡುತ್ತೆ ಎಂದು ಡಾ. ಕೆ.ಕೆ.ಹಂಡಾ ಹೇಳುತ್ತಾರೆ. ಇದನ್ನೂ ಓದಿ: ಹಾಲಿಡೇ ಹಾರ್ಟ್‌ ಸಿಂಡ್ರೋಮ್‌ ಅಂದ್ರೇನು ಗೊತ್ತಾ?

    ಎಷ್ಟು ನಿಮಿಷ ಹೆಡ್‌ಫೋನ್‌ ಬಳಸಿದ್ರೆ ಉತ್ತಮ?
    ದೀರ್ಘಕಾಲದವರೆಗೆ ಹೆಡ್‌ಫೋನ್‌ಗಳನ್ನು ಬಳಸಬಾರದು. ಹೆಡ್‌ಫೋನ್‌ ಬಳಕೆಯಿಂದ ದೂರ ಇರುವುದೇ ಉತ್ತಮ. ಬಳಸುವ ಅನಿವಾರ್ಯತೆ ಇದ್ದರೆ, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂಬುದು ವೈದ್ಯರ ಸಲಹೆ.

    ಏನದು ಮುನ್ನೆಚ್ಚರಿಕೆ ಕ್ರಮ?
    ಬಳಕೆ ಸಮಯ ಮಿತಿಗೊಳಿಸಿ: ಹೆಡ್‌ಫೋನ್‌ಗಳ ಬಳಕೆ ಸಮಯವನ್ನು ಮಿತಿಗೊಳಿಸಬೇಕು. ನೀವು ಪ್ರತಿ 45 ನಿಮಿಷ ಹೆಡ್‌ಫೋನ್‌ ಬಳಸಿದ ನಂತರ 1 ಗಂಟೆ ಅಥವಾ 10-15 ನಿಮಿಷಗಳ ಕಾಲ ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ಇದನ್ನೂ ಓದಿ: ಈ ಕ್ರಮ ಅನುಸರಿಸಿದ್ರೆ ʼಆಲ್‌ಝೈಮರ್‌ʼ ರೋಗ ತಡೆಗಟ್ಟಬಹುದು

    ವಾಲ್ಯೂಮ್‌ ಕಡಿಮೆ ಮಾಡಿ: ಕೆಲವರಿಗೆ ಹೆಚ್ಚಿನ ಸಮಯ ಹೆಡ್‌ಫೋನ್‌ ಬಳಸುವುದು ಅನಿವಾರ್ಯವಾಗಿರುತ್ತೆ. 4-5 ಗಂಟೆಗಳ ಕಾಲ ಹೆಡ್‌ಫೋನ್‌ ಬಳಸಲೇಬೇಕು ಎನ್ನುವವರು, ವಾಲ್ಯೂಮ್‌ ಕಡಿಮೆ ಮಾಡಿಕೊಳ್ಳುವುದು ಸೂಕ್ತ. ಇದರಿಂದ ಶ್ರವಣಕ್ಕೆ ಆಗಬಹುದಾದ ಹೆಚ್ಚಿನ ಅಪಾಯವನ್ನು ತಡೆಗಟ್ಟಬಹುದು.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ಬೆಂಗಳೂರು: ಜನರೇ ಎಚ್ಚರ, ಎಚ್ಚರ. ಬೆಂಗಳೂರಿನಲ್ಲಿ (Bengaluru) ಬೀಡು ಬಿಟ್ಟಿದ್ದಾರೆ ನಕಲಿ ವೈದ್ಯರು. ರಾಜ್ ಗೋಪಾಲ್ ನಗರ ನಕಲಿ ವೈದ್ಯರ ಘಟನೆ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದೆ. ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು (Fake Doctors) ಇರೋದಾಗಿ ಐಎಂಎ, ಫನಾ (ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ) ಸರ್ವೆಯಲ್ಲಿ ಬಯಲಾಗಿದೆ.

    ಬೆಂಗಳೂರಿನಲ್ಲಿ ಕಳೆದೆರಡು ದಿನಗಳ ಹಿಂದಷ್ಟೇ ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಹೆಗ್ಗನಹಳ್ಳಿಯ ಜ್ಯೋತಿ ಎಂಬಾಕೆ ಕಾಲು ಕಳೆದುಕೊಂಡು ನರಕಯಾತನೆ ಅನುಭವಿಸಿದ ಬಗ್ಗೆ ವಿಸ್ತೃತ ವರದಿ ಮಾಡಿದ್ದೆವು. ಈ ಘಟನೆ ಮಾಸುವ ಮುನ್ನವೇ ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಆತಂಕಕಾರಿ ವಿಚಾರ ಬಿಚ್ಚಿಟ್ಟಿದೆ. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್

    ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು ಇರೋದಾಗಿ ಐಎಂಎ, ಫನಾ ಅಭಿಪ್ರಾಯ ವ್ಯಕ್ತಪಡಿಸಿವೆ. ನಗರದಾದ್ಯಂತ ಐಎಂಎ ಮತ್ತು ಫನಾ ನಕಲಿ ವೈದ್ಯರ ಬಗ್ಗೆ ಸರ್ವೆ ನಡೆಸ್ತಿದ್ದು, ಅದರಲ್ಲಿ ಸರ್ಟಿಫಿಕೇಟ್ ಇಲ್ಲದೇ, ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೇ ವೈದ್ಯ ಪದವಿ, ತರಬೇತಿಯನ್ನೂ ಪಡೆಯದೇ ಕ್ಲಿನಿಕ್‍ಗಳನ್ನು ತೆರೆದು ಜನರಿಗೆ ಚಿಕಿತ್ಸೆ ನೀಡ್ತಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಕೆಪಿಎಂ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಲು ಆಗ್ರಹಿಸ್ತಿದ್ದಾರೆ. ಇದನ್ನೂ ಓದಿ: ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆ – ಆತ್ಮಹತ್ಯೆ ಶಂಕೆ?

    ಇಂತಹ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ಅನಾರೋಗ್ಯಕ್ಕೀಡಾಗುತ್ತಿರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ಇಂತಹ ರೋಗಿಗಳು ಬರ್ತಿದ್ದು, ಸಮಸ್ಯೆಗಳು ಉಲ್ಬಣಿಸುತ್ತಿದೆ. ಫನಾಗೆ ಇಂತಹ ದೂರುಗಳು ಹೆಚ್ಚು ಬರ್ತಿವೆಯಂತೆ. ಸರ್ಕಾರ ಕೂಡ ಇಂತಹವರ ವಿರುದ್ಧ ಕ್ರಮವಹಿಸಲು ಹಿಂದೇಟು ಹಾಕ್ತಿದೆ. ಸರ್ಕಾರ ಇಂತಹವರ ಪರ ನಿಲ್ಲಬಾರದು ಸೂಕ್ತ ಕಾನೂನು ಕ್ರಮವಹಿಸಬೇಕು. ಆರೋಗ್ಯ ಆಯುಕ್ತರನ್ನು ಭೇಟಿ ಮಾಡಿ ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಫನಾ ಸ್ಪಷ್ಟಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ವೈದ್ಯರಾಗಿ ಇತಿಹಾಸ ಬರೆದ ತೆಲಂಗಾಣದ ಇಬ್ಬರು ತೃತೀಯಲಿಂಗಿಗಳು

    ಸರ್ಕಾರಿ ವೈದ್ಯರಾಗಿ ಇತಿಹಾಸ ಬರೆದ ತೆಲಂಗಾಣದ ಇಬ್ಬರು ತೃತೀಯಲಿಂಗಿಗಳು

    ಹೈದರಾಬಾದ್: ತೆಲಂಗಾಣ (Telangana) ಮೂಲದ ಇಬ್ಬರು ತೃತೀಯಲಿಂಗಿಗಳು (Transgenders) ತಮ್ಮ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ, ವಿದ್ಯಾಭ್ಯಾಸ ಪೂರ್ಣಗೊಳಿಸಿ ಸರ್ಕಾರಿ ವೈದ್ಯರಾಗುವ (Doctors) ಮೂಲಕ ಹೊಸ ಇತಿಹಾಸವನ್ನೇ ಬರೆದಿದ್ದಾರೆ.

    ಪ್ರಾಚಿ ರಾಥೋಡ್ ಮತ್ತು ರುತ್ ಜಾನ್ ಪಾಲ್ ಇತ್ತೀಚೆಗೆ ಸರ್ಕಾರಿ ಉಸ್ಮಾನಿಯಾ ಜನರಲ್ ಹಾಸ್ಪಿಟಲ್ (ಒಜಿಹೆಚ್)ನಲ್ಲಿ ವೈದ್ಯಕೀಯ ಅಧಿಕಾರಿಗಳಾಗಿ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ರಾಥೋಡ್ ಮಾತನಾಡಿ, ತಮ್ಮ ಬಾಲ್ಯದಿಂದಲೂ ಸಹಿಸಿಕೊಂಡು ಬಂದ ಸಾಮಾಜಿಕ ಕಳಂಕ ಹಾಗೂ ತಾರತಮ್ಯವನ್ನು ಮೆಲುಕು ಹಾಕಿದ್ದಾರೆ.

    ಚಿಕ್ಕ ವಯಸ್ಸಿನಿಂದಲೇ ವೈದ್ಯರಾಗಬೇಕೆಂದು ಕನಸು ಕಂಡಿದ್ದ ರಾಥೋಡ್ 11, 12ನೇ ತರಗತಿಯಲ್ಲಿ ತಮ್ಮ ಸಹಪಾಠಿಗಳಿಂದಲೇ ಕಿರುಕುಳ, ಬೆದರಿಕೆಗೆ ಒಳಗಾಗಿದ್ದರು. ನನ್ನ ಬಾಲ್ಯ ಅತ್ಯಂತ ಕೆಟ್ಟದಾಗಿದ್ದು, ವೈದ್ಯನಾಗುವ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಹೇಗೆ ಬದುಕಬೇಕು, ಹೇಗೆ ಜಯಿಸಬೇಕು ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಮೋದಿ ಜನಪ್ರಿಯತೆಗೆ ಕಾರಣ ಏನು? – ಜನಮನ ಗೆದ್ದ ಗುಜರಾತ್ ಮಾಡೆಲ್ ಯೋಜನೆಗಳೇನು?

    ರಾಥೋಡ್ ಅವರು ಸ್ನಾತಕೋತ್ತರ ಪದವಿ ಪಡೆಯಲು ದೆಹಲಿಗೆ ಹೋಗಿದ್ದರು ಆದರೆ ಪ್ರತಿಕೂಲ ವಾತಾವರಣದಿಂದಾಗಿ ಹೈದರಾಬಾದ್‌ಗೆ ಅವರು ಹಿಂತಿರುಗಬೇಕಾಯಿತು. ಬಳಿಕ ಅವರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಲೇ ಎಮರ್ಜೆನ್ಸಿ ಮೆಡಿಸಿನ್‌ನಲ್ಲಿ (ತುರ್ತು ಔಷಧ) ಡಿಪ್ಲೊಮಾ ಮಾಡಿದ್ದಾರೆ. ಆದರೆ ತೃತೀಯ ಲಿಂಗಿಯಾಗಿದ್ದರಿಂದ 3 ವರ್ಷಗಳ ಕಾಲ ಕೆಲಸ ಮಾಡಿಕೊಂಡು ಬಂದಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಅವರನ್ನು ತೆಗೆದುಹಾಕಲಾಗಿತ್ತು. ನನ್ನಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ ಎಂದು ದೂಷಿಸಲಾಗಿತ್ತು ಎಂದು ಹಳೆಯ ಕಹಿ ಕ್ಷಣಗಳನ್ನು ನೆನಪಿಸಿದ್ದಾರೆ.

    ಇದೆಲ್ಲದರ ಬಳಿಕ ಸರ್ಕಾರೇತರಸಂಸ್ಥೆ (NGO) ನನ್ನ ರಕ್ಷಣೆಗೆ ಬಂದಿತ್ತು. ಎನ್‌ಜಿಒ ನಡೆಸುತ್ತಿದ್ದ ಕ್ಲಿನಿಕ್‌ನಲ್ಲಿ ಮೊದಲಿಗೆ ಕೆಲಸ ಮಾಡಿ ಬಳಿಕ ಒಜಿಹೆಚ್‌ನಲ್ಲಿ ಇದೀಗ ಕೆಲಸ ಪಡೆದಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ಇಲ್ಲ: ಶಶಿಕಲಾ ಜೊಲ್ಲೆ

    ತೃತೀಯಲಿಂಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರತಿಬಿಂಬಿಸಿದ ರಾಥೋಡ್ ಉದ್ಯೋಗ ಹಾಗೂ ಶಿಕ್ಷಣದಲ್ಲಿ ತಮಗೂ ಸೂಕ್ತ ಮೀಸಲಾತಿಗಳನ್ನು ಒದಗಿಸಲು ಕೇಳಿಕೊಂಡಿದ್ದಾರೆ. ನಮ್ಮನ್ನು ತೃತೀಯಲಿಂಗಿಗಳು ಎಂದು ಪ್ರತ್ಯೇಕಿಸಿರುವ ವ್ಯಕ್ತಿಯನ್ನು ನಾನು ಪ್ರಶ್ನಿಸಲು ಬಯಸುತ್ತೇನೆ. ನಾವು ತೃತೀಯಲಿಂಗಿಗಳಾದರೆ ಮೊದಲ ಹಾಗೂ ದ್ವಿತೀಯ ಲಿಂಗಿಗಳು ಯಾರು ಎಂಬುದನ್ನು ಕೇಳಲು ಬಯಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಂಬುಲೆನ್ಸ್ ಸಿಗದೇ 3 ವರ್ಷದ ಮಗಳ ಮೃತದೇಹವನ್ನು ಬೈಕ್‌ನಲ್ಲೇ ಹೊತ್ತೊಯ್ದ ತಂದೆ

    ಅಂಬುಲೆನ್ಸ್ ಸಿಗದೇ 3 ವರ್ಷದ ಮಗಳ ಮೃತದೇಹವನ್ನು ಬೈಕ್‌ನಲ್ಲೇ ಹೊತ್ತೊಯ್ದ ತಂದೆ

    ಹೈದರಾಬಾದ್: ಆಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ (Ambulance) ಸೇವೆ ನೀಡಲು ನಿರಾಕರಿಸಿದ್ದರಿಂದ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ತನ್ನ 3 ವರ್ಷದ ಮಗಳ ಮೃತದೇಹವನ್ನು 65 ಕಿಮೀ ಬೈಕಿನಲ್ಲೇ (Bike) ಹೊತ್ತೊಯ್ದ ಹೃದಯ ವಿದ್ರಾವಕ ಘಟನೆ ತೆಲಂಗಾಣದ (Telangana) ಖಮ್ಮಂನಲ್ಲಿ ನಡೆದಿದೆ.

    ಸಾಂದರ್ಭಿಕ ಚಿತ್ರ

    ಆಸ್ಪತ್ರೆ (Hospital) ಸಿಬ್ಬಂದಿ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಇದರಿಂದ ವೆಟ್ಟಿ ಮಲ್ಲಯ್ಯ ಎಂಬವರು ಖಾಸಗಿ ಅಂಬುಲೆನ್ಸ್‌ ಹಣವಿಲ್ಲದೇ ಅಳುತ್ತಲೇ ಸುಮಾರು 65 ಕಿಮೀ ವರೆಗೆ ಮಗಳ ಮೃತದೇಹವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇವರು ಖಮ್ಮಂ ಜಿಲ್ಲೆಯ ಎಣುಕೂರು ಮಂಡಲದ ಕೋಟಾ ಮೇಡೆಪಲ್ಲಿ ಗ್ರಾಮದ ಆದಿವಾಸಿ ಕುಟುಂಬಕ್ಕೆ (Adivasi Family) ಸೇರಿದವರು. ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಸದ್ಯಕಿಲ್ಲ ಮುಕ್ತಿ – ರಾಹುಲ್, ಸೋನಿಯಾಗೆ ಮತ್ತೆ ED ಸಮನ್ಸ್?

    ಆದಿವಾಸಿ ದಂಪತಿಯ ಪುತ್ರಿ ವೆಟ್ಟಿ ಸುಕ್ಕಿ (3)ಯನ್ನ ಅನಾರೋಗ್ಯದಿಂದಾಗಿ ಏಣಕೂರು ಸರ್ಕಾರಿ ಆಸ್ಪತ್ರೆಗೆ (Goverment Hospital) ದಾಖಲಿಸಲಾಗಿತ್ತು. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚುವರಿ ಚಿಕಿತ್ಸೆಗಾಗಿ ಖಮ್ಮಂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗಳು ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಅಂಬೇಡ್ಕರ್ ಪ್ರತಿಮೆ ಧ್ವಂಸ – ಮಹಿಳೆಯರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್

    ಸಾಂದರ್ಭಿಕ ಚಿತ್ರ

    ನಂತರ ಬಾಲಕಿಯ ತಂದೆ ಸ್ವಗ್ರಾಮಕ್ಕೆ ಬಂದು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ಮೃತದೇಹವನ್ನು ಖಮ್ಮಂ ಸರ್ಕಾರಿ ಆಸ್ಪತ್ರೆಯಿಂದ ಹೊಸ ಮೆಡೆಪಲ್ಲಿ ಗ್ರಾಮಕ್ಕೆ ಸ್ಥಳಾಂತರಿಸಲು ಅಂಬುಲೆನ್ಸ್ ಸೇವೆ ಕೇಳಿದ್ದಾರೆ. ಇದಕ್ಕೆ ಆಸ್ಪತ್ರೆ ಸಿಬ್ಬಂದಿ ನಿರಾಕರಿದ್ದರಿಂದ ಗ್ರಾಮದ ಸಂಬಂಧಿಕರಿಂದ ಬೈಕ್ ತೆಗೆದುಕೊಂಡು ಅದರಲ್ಲೇ ಮಗಳ ಮೃತದೇಹ ಸಾಗಿಸಿದ್ದಾರೆ. ಸರ್ಕಾರಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಟ್ಯಾಟೂ (Tattoo) ಎನ್ನುವುದು ಸಖತ್ ಟ್ರೆಂಡ್ ಆಗಿಬಿಟ್ಟಿದೆ. ಯಾರೇ ನೋಡಿದರೂ ವೆರೈಟಿ ಹಚ್ಚೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಆದರೆ ಈ ಹಚ್ಚೆ ಹಾಕಿಸಿಕೊಳ್ಳುವಾಗ ಬಹಳಾನೇ ಜಾಗರೂಕರಾಗಿರಬೇಕು, ಹಾಗೇ ಹಚ್ಚೆ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ (Blood Donation) ಮಾಡಬಾರದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಹೌದು, ಹಚ್ಚೆ ಹಾಕಿಕೊಳ್ಳುವವರು 6 ತಿಂಗಳು ರಕ್ತದಾನ ಮಾಡಬಾರದಂತೆ, ಯಾಕೆಂದರೆ, ಟ್ಯಾಟೂ ಎನ್ನುವುದು ಬಹುತೇಕ ಎಲ್ಲಾ ವಯಸ್ಸಿನ ಜನರನ್ನೂ ಸೆಳೆದು ಬಿಡುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ದೇಹದ ವಿವಿಧ ಭಾಗಗಳಲ್ಲಿ ವಿವಿಧ ವಿನ್ಯಾಸಗಳೊಂದಿಗೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಇತರರ ಜೀವಕ್ಕೂ ಕುತ್ತು ಬರಬಹುದು. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಯಶಸ್ವಿ: ರಾಜ್ಯದಲ್ಲಿ 10.5 ಲಕ್ಷ ಕೋಟಿ ಹೂಡಿಕೆ

    ಹಚ್ಚೆ ಹಾಕಿಸಿಕೊಳ್ಳುವ ಸೂಜಿ ಬಳಸುವಾಗ ತುಂಬಾನೇ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಹೆಚ್.ಐ.ವಿ, ಹೆಪಟೈಟಿಸ್ ಹಾಗೂ ಅನುವಂಶೀಯ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರತ್ತದೆ. ಹಾಗಾಗೀ ಹಚ್ಚೆ ಹಾಕಿಸಿಕೊಂಡ 6 ತಿಂಗಳಿನಿಂದ ಒಂದು ವರ್ಷದವರೆಗೆ ರಕ್ತದಾನ ಮಾಡದಿರುವುದು ಉತ್ತಮ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಹೊಡೆದು ಬೈಕ್‌ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು

    Live Tv
    [brid partner=56869869 player=32851 video=960834 autoplay=true]

  • ಮಕ್ಕಳನ್ನು ಹೆರುವ ವಿಷಯದ ಆಯ್ಕೆ ಮಹಿಳೆಗೆ ಬಿಟ್ಟಿದ್ದು – ಹೈಕೋರ್ಟ್

    ಮಕ್ಕಳನ್ನು ಹೆರುವ ವಿಷಯದ ಆಯ್ಕೆ ಮಹಿಳೆಗೆ ಬಿಟ್ಟಿದ್ದು – ಹೈಕೋರ್ಟ್

    ತಿರುವನಂತಪುರಂ: ಗರ್ಭ ಧರಿಸುವ ಅಥವಾ ಧರಿಸದೇ ಇರುವ ಮಹಿಳೆಯ ಸಂತಾನೋತ್ಪತ್ತಿ (Reproductive) ಆಯ್ಕೆ ವಿಚಾರದಲ್ಲಿ ಮಹಿಳಾ ಹಕ್ಕಿಗೆ (Woman’s Right) ಯಾವುದೇ ನಿರ್ಬಂಧವಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಹೇಳಿದೆ.

    ಸುಚಿತ್ರಾ ಶ್ರೀವಾಸ್ತವ ವರ್ಸಸ್ ಚಂಡೀಗಢ ಆಡಳಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್ (Supreme Court) ನೀಡಿದ ತೀರ್ಪನ್ನು ಉಲ್ಲೇಖಿಸಿ ನ್ಯಾಯಮೂರ್ತಿ ವಿ.ಜಿ ಅರುಣ್ ನೇತೃತ್ವದ ಏಕಸದಸ್ಯ ಪೀಠವು, ಸಂವಿಧಾನದ-21 (Constitution of India) ವಿಧಿಯ ಅಡಿ ಸಂತಾನೋತ್ಪತ್ತಿ ಆಯ್ಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 

    ಗರ್ಭಧರಿಸುವ ಅಥವಾ ಗರ್ಭಧರಿಸದೇ ಇರುವ ತನ್ನ ಆಯ್ಕೆಯ ಹಕ್ಕನ್ನು ಚಲಾಯಿಸಲು ಮಹಿಳೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇದು ಆಕೆಯ ವೈಯಕ್ತಿಕ ಸ್ವಾತಂತ್ರ‍್ಯದ ಭಾಗವಾಗಿದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

    20 ವಾರ ಮೀರಿದ ಗರ್ಭಾವಸ್ಥೆಯನ್ನು ಗರ್ಭಪಾತ ಮಾಡಿಸುವ ಆಯ್ಕೆ ವಿಧಾನದಿಂದ ಅವಿವಾಹಿತ ಮಹಿಳೆಯನ್ನು ಹೊರಗಿಡುವುದು ಸಂವಿಧಾನ 14ನೇ ವಿಧಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಇತ್ತೀಚೆಗೆ ಹೇಳಿದ್ದನ್ನು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿತು.

    ಸಹಪಾಠಿಯೊಂದಿಗೆ ನಡೆಸಿದ ಒಪ್ಪಿತ ಲೈಂಗಿಕ ಸಂಪರ್ಕದಿಂದಾಗಿ ಗರ್ಭ ಧರಿಸಿದ್ದನ್ನು ತೆಗೆಸಲು ಕೋರಿ 23 ವರ್ಷದ ಎಂಬಿಎ ವಿದ್ಯಾರ್ಥಿನಿ (MBA Student) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಪೀಠವು ಈ ಆದೇಶ ಮಾಡಿತು.

    ಏನಿದು ಪ್ರಕರಣ?
    ಗರ್ಭ ನಿರೋಧಕ ವಿಫಲವಾಗಿದ್ದರಿಂದ ಎಂಬಿಎ ವಿದ್ಯಾರ್ಥಿನಿ ಗರ್ಭ ಧರಿಸಿದ್ದಳು. ಅಲ್ಲದೇ ಆಕೆ ಪಾಲಿಸಿಸ್ಟಿಕ್ ಓವೇರಿಯನ್ ಕಾಯಿಲೆಯಿಂದ ಬಳಲುತ್ತಿದ್ದಳು. ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸಿದ ಬಳಿಕ ಗರ್ಭಧರಿಸುವ ವಿಚಾರ ತಿಳಿದಿದೆ.

    ವಿದ್ಯಾರ್ಥಿನಿ ನಿಯಂತ್ರಿತವಾಗಿ ಮುಟ್ಟಾಗದೇ ಇರುವುದರಿಂದ ತಪಾಸಣೆಗೆ ವೈದ್ಯರ ಬಳಿ ತೆರಳಿದ್ದಳು. ಈ ವೇಳೆ ವೈದ್ಯರು ಅಲ್ಟ್ರಾ ಸ್ಕ್ಯಾನ್ ಮಾಡಿಸಲು ಸೂಚಿಸಿದ್ದಾರೆ. ಬಳಿಕವೇ ಈ ವಿಚಾರ ತಿಳಿದಿದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಯಾತನೆ ಅನುಭವಿಸುತ್ತಿದ್ದು, ಲೈಂಗಿಕ ಸಂಬಂಧ ಹೊಂದಿದ್ದ ಸಹಪಾಠಿಯು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳಿದ್ದಾನೆ ಎಂದು ಆಕೆ ಮನವಿಯಲ್ಲಿ ವಿವರಿಸಿದ್ದಾಳೆ.

    ಗರ್ಭಧಾರಣೆಯನ್ನು ಮುಂದವರಿಸಿದರೆ ಮಾನಸಿಕ ವೇದನೆ ಹೆಚ್ಚಾಗಲಿದೆ. ಜೊತೆಗೆ ಮಗು ಪಡೆಯುವುದು ಶಿಕ್ಷಣ ಮತ್ತು ಜೀವನ ನಿರ್ವಹಣೆಗೆ ಅಡ್ಡಿಯಾಗಲಿದೆ. ಗರ್ಭಾವಸ್ಥೆಯು 24 ವಾರ ದಾಟಿರುವುದರಿಂದ ಯಾವುದೇ ಆಸ್ಪತ್ರೆ ಗರ್ಭಪಾತ ಮಾಡಿಸಲು ಸಿದ್ಧವಿಲ್ಲ. ಹೀಗಾಗಿ, ನ್ಯಾಯಾಲಯ ಮೆಟ್ಟಿಲೇರಿದ್ದಾಗಿ ಆಕೆ ಮನವಿಯಲ್ಲಿ ಉಲ್ಲೇಖಿಸಿದ್ದಳು. ಇದನ್ನೂ ಓದಿ: ಕೋಟೆ ನಾಡಿನಲ್ಲಿ ದಾರುಣ ಘಟನೆ – ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಇದನ್ನು ಪರಿಗಣಿಸಿರುವ ಪೀಠವು ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿಸಿದೆ. ಪ್ರಕ್ರಿಯೆ ನಡೆಸಲು ವೈದ್ಯಕೀಯ ತಂಡ ರಚಿಸುವಂತೆ ಸಂಬಂಧಿತ ಆಸ್ಪತ್ರೆಗೆ ನಿರ್ದೇಶಿಸಿದೆ. ಒಂದೊಮ್ಮೆ ಮಗು ಜೀವಂತವಾಗಿ ಉಳಿದರೆ ಮಗುವಿಗೆ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಆಸ್ಪತ್ರೆಗೆ ನಿರ್ದೇಶನ ನೀಡಿದೆ.

    ಅರ್ಜಿದಾರರ ಪರ ವಕೀಲರಾದ ಆಕಾಶ್ ಎಸ್, ಗಿರೀಶ್ ಕುಮಾರ್, ವಿ.ಎಸ್ ವರಲಕ್ಷ್ಮೀ ಹಾಗೂ ಎಸ್. ನೀತು ವಾದಿಸಿದರು.

    Live Tv
    [brid partner=56869869 player=32851 video=960834 autoplay=true]

  • ವ್ಯಕ್ತಿ ಹೊಟ್ಟೆಯಲ್ಲಿತ್ತು 62 ಚಮಚ – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

    ವ್ಯಕ್ತಿ ಹೊಟ್ಟೆಯಲ್ಲಿತ್ತು 62 ಚಮಚ – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

    ಲಕ್ನೋ: ಹೊಟ್ಟೆ ನೋವೆಂದು ಬಂದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು 62 ಸ್ಟೀಲ್ ಚಮಚಗಳನ್ನು (Steel Spoon) ಹೊರತೆಗೆದಿರುವ ಘಟನೆ ಉತ್ತರಪ್ರದೇಶದ (UttarPradesh) ಮುಜಾಫರ್ ನಗರದಲ್ಲಿ ನಡೆದಿದೆ.

    ಬೋಪಾಡಾ ಗ್ರಾಮದಲ್ಲಿ ವಾಸಿಸುತ್ತಿದ್ದ ವಿಜಯ್ (32) ತೀವ್ರ ಹೊಟ್ಟೆ ನೋವಿನಿಂದ ಮುಜಾಫರ್ ನಗರದ ಆಸ್ಪತ್ರೆಗೆ (Hospital) ದಾಖಲಾಗಿದ್ದರು. ವೈದ್ಯರು ತಪಾಸಣೆ ನಡೆಸಿದ ಬಳಿಕ ಹೊಟ್ಟೆಯಲ್ಲಿ ಚಮಚಗಳಿರುವುದು ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ. ನಂತರ ಸುಮಾರು 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ರಾಕೇಶ್ ಖುರಾನ, 62 ಸ್ಟೀಲ್ ಸ್ಪೂನ್‌ಗಳನ್ನ ಹೊರತೆಗೆದಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಮತ್ತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ : ಬಿ.ವೈ. ವಿಜಯೇಂದ್ರ

    ಇದೇ ರೀತಿಯ ಘಟನೆಯಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಖಿನ್ನತೆಗೆ ಒಳಗಾಗಿ 1 ರೂಪಾಯಿಯ 63 ನಾಣ್ಯಗಳನ್ನು ನುಂಗಿದ್ದಾರೆ. ಇದರಿಂದ ಹೊಟ್ಟೆಯಲ್ಲಿ ಬೃಹತ್ ಗೆಡ್ಡೆಯಂತಾಗಿದ್ದು, ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ಮೂಲಕ ನಾಣ್ಯಗಳನ್ನು ಹೊರತೆಗೆಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು – ಕುಟುಂಬಸ್ಥರಿಂದ ಆರೋಪ

    ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು – ಕುಟುಂಬಸ್ಥರಿಂದ ಆರೋಪ

    ಮಡಿಕೇರಿ: ತಾಯಿ ಮಡಿಲಿನಲ್ಲಿ ಆಡಿ ನಲಿಯಬೇಕಾದ ಪುಟ್ಟ ಕಂದಮ್ಮ ಪ್ರಪಂಚವನ್ನೇ ನೋಡುವ ಮುನ್ನ ಅನಾಥವಾಗಿದೆ. ಒಂಭತ್ತು ತಿಂಗಳು ಪೋಷಣೆ ಮಾಡಿ, ಹೆತ್ತು, ಹೊತ್ತ ತಾಯಿ ಕಂದನನ್ನು ನೋಡಿದ ಕೆಲವೇ ಗಂಟೆಗಳಲ್ಲಿ ಇಹಲೋಕ ತ್ಯಜಿಸಿದ್ದು, ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಸಾವಿಗೆ ಕಾರಣ ಎಂದು ಮೃತ ಬಾಣಂತಿಯ ಸಂಬಂಧಿಕರು ಆರೋಪಿಸಿದ್ದಾರೆ.

    ಹೌದು, ಒಂಬತ್ತು ತಿಂಗಳು ತುಂಬಿದ ಹಿನ್ನೆಲೆ ಹೆರಿಗೆ ನೋವಿನಿಂದ ಬಳಲುತ್ತಿದ್ದ 22 ವರ್ಷ ಪ್ರಾಯದ ಹರ್ಷಿತರನ್ನು ಮನೆಯವರು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕಳೆದ 20 ರಂದು ದಾಖಲಿಸಿದ್ದರು. ಸೋಮವಾರ ಸಂಜೆ ಗಂಡು ಮಗುವಿಗೆ ಹರ್ಷಿತ ಜನ್ಮ ನೀಡಿದ್ದರು. ಮಗು ಹುಟ್ಟಿದ್ದರಿಂದ ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿತ್ತು. ಆದರೆ ಬಾಣಂತಿ ಸಾವು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಬಾಣಂತಿ ಮೃತಪಟ್ಟ ಬಳಿಕ ಮೈಸೂರಿಗೆ (Mysuru) ವೈದ್ಯರ ರೆಫರ್ ಮಾಡಿದ್ದಾರೆ. ಮೈಸೂರಿಗೆ ಚಿಕಿತ್ಸೆಗೆ ಕೊಂಡೊಯ್ಯುವಂತೆ ಸೂಚಿಸಿದ ವೈದ್ಯೆ ರೇಷ್ಮ ಅವರ ವಿರುದ್ಧ ಬಾಣಂತಿ ಪತಿ ಪ್ರದೀಪ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಬಂದಿದ್ದು ಆಲೂಗಡ್ಡೆ- ಗ್ರಾಹಕ ಕಕ್ಕಾಬಿಕ್ಕಿ!

    ಮೂಲತಃ ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushala nagar) ತಾಲೂಕಿನ ಸುಂಟಿಕೊಪ್ಪದ ನಿವಾಸಿಯಾದ ಹರ್ಷಿತ ಅವರನ್ನು ಪತಿ ಪ್ರದೀಪ್ ಅವರು ಹೆರಿಗೆ ನೋವು ಬಂದ ಸಮಯದಲ್ಲಿ ಮಾದಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದ್ದಾರೆ. ಆದರೆ ಹರ್ಷಿತ ಅವರಿಗೆ ವಿಪರೀತವಾಗಿ ರಕ್ತಸ್ರಾವ ಆಗುತ್ತಿದ್ದ ಹಿನ್ನೆಲೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಹರ್ಷಿತ ಅವರು ಸಹಜ ಸ್ಥಿತಿಯಲ್ಲಿ ಇರುತ್ತಾರೆ. ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ಆರೋಗ್ಯ ಹದಗೆಟ್ಟ ಪರಿಣಾಮ ಮತ್ತು ಜಾಂಡೀಸ್ (Jaundice) ಇರುವುದನ್ನು ಕಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯೆ ರೇಷ್ಮ ತಿಳಿಸಿದ್ದಾರೆ. ಆದರೆ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಬಾಣಂತಿ ಮೃತಪಟ್ಟಿದ್ದು, ಮಡಿಕೇರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಮಹಿಳೆ ಸಾವನ್ನಪ್ಪಲು ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಇದನ್ನು ಅಲ್ಲಗೆಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ವೈದ್ಯಧಿಕಾರಿ ಡಾಕ್ಟರ್ ವೆಂಕಟೇಶ್, ಮೃತಪಟ್ಟ ಮಹಿಳೆಯ ಪರೀಕ್ಷೆಗಳನ್ನು ಸರಿಯಾಗಿ ಮಾಡಿಲ್ಲ. ಗರ್ಭಿಣಿಯಾಗಿರುವಾಗ ಪರೀಕ್ಷೆಗಳು ಸರಿಯಾಗಿ ನಡೆಸಿಲ್ಲ. ಅವರಿಗೆ ಜಾಂಡೀಸ್ ಇರುವುದು ಹೆರಿಗೆ ಸಂದರ್ಭ ತಿಳಿದುಬಂದಿದೆ. ಹೆರಿಗೆ ಬಳಿಕ ರಕ್ತಸ್ರಾವ ಹೆಚ್ಚಾಗಿದ್ದನ್ನು ಅವರಿಗೆ ಹೇಳಿದ್ವಿ. ಆ ಬಳಿಕ ಮೈಸೂರು ಆಸ್ಪತ್ರೆಗೆ ಅವರನ್ನು ಕಳುಹಿಸಲಾಯಿತು. ಆ ವೇಳೆ ಕೂಡ ನಮ್ಮ ಆಸ್ಪತ್ರೆ ವೈದ್ಯರು ಜೊತೆಗಿದ್ದರು. ಆದರೆ ಆಸ್ಪತ್ರೆ ಸೇರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಚಿಕಿತ್ಸೆ ನೀಡಿದ ವೈದ್ಯರ ಬಳಿ ವರದಿ ಕೇಳಲಾಗಿದೆ. ಅಲ್ಲದೇ ಈ ಪ್ರಕರಣವನ್ನು ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ-ದ.ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿ ಮೂಲದ ಅವಿನಾಶ್ ನೇಮಕ

    ಒಟ್ಟಾರೆ ವೈದ್ಯರ ನಿರ್ಲಕ್ಷ್ಯವೋ ಅಥವಾ ಮನೆಯವರು ನಿರ್ಲಕ್ಷ್ಯವೋ ಎಂದು ತನಿಖೆ ನಂತರ ಅಷ್ಟೇ ಗೊತ್ತಾಗಬೇಕಿದೆ. ಆದರೆ ವೈದ್ಯರು ಹಾಗೂ ಕುಟುಂಬಸ್ಥರ ಪರಸ್ಪರ ಆರೋಪಗಳಿಂದ ಅಮ್ಮನನ್ನು ಕಳೆದುಕೊಂಡ ಮಗು ಮಾತ್ರ ಅನಾಥವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ವೈದ್ಯೆ ದುರ್ಮರಣ

    ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ವೈದ್ಯೆ ದುರ್ಮರಣ

    ಮುಂಬೈ: ಮಹಾರಾಷ್ಟ್ರದ (Maharashtra) ಪುಣೆ ಬಳಿಯಿರುವ ಪಿಂಪ್ರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಮಂಗಳೂರು ಮೂಲದ ವೈದ್ಯೆ (Doctor) ದುರ್ಮರಣಕ್ಕೀಡಾದ ಘಟನೆ ನಡೆದಿದೆ.

    ಮೃತ ವೈದ್ಯೆಯನ್ನು (Doctor) ಜೈಶಾ (27) ಎಂದು ಗುರುತಿಸಲಾಗಿದೆ. ಮಂಗಳೂರು ಮೂಲದ ಜಾನ್ ಥಾಮಸ್ ಮತ್ತು ಉಷಾ ಥಾಮಸ್ ದಂಪತಿಯ ಪುತ್ರಿ ಜೈಶಾ, ರಿಮಿನ್ ಆರ್. ಕುರಿಯಾಕೋಸ್ ನನ್ನು ವಿವಾಹವಾಗಿದ್ದರು. (Marriage) ಇದನ್ನೂ ಓದಿ: ಓಯೋ ರೂಂಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ – ಆರೋಪಿಗಳ ಬಂಧನ

    ಜೈಶಾ ಮಂಗಳವಾರ ಮಧ್ಯಾಹ್ನದ ವಿರಾಮದ ಸಮಯದಲ್ಲಿ ಮನೆಗೆ ತೆರಳಿ, ಊಟ ಮುಗಿಸಿಕೊಂಡು ಕ್ಲಿನಿಕ್‌ಗೆ (Clinic) ಹಿಂದಿರುಗುತ್ತಿದ್ದರು. ಈ ವೇಳೆ ಟ್ರಕ್‌ವೊಂದು ಜೈಶಾ (Jaisha) ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ, ಪರಿಣಾಮ ಸ್ಥಳದಲ್ಲೇ ಜೈಶಾ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು

    CRIME 2

    ಘಟನೆಯ ಬಳಿಕ ಮೃತದೇಹವನ್ನು ಪುಣೆಯಲ್ಲಿರುವ ಮನೆಗೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿಂದ ಮಂಗಳೂರಿಗೆ ಸ್ಥಳಾಂತರ ಮಾಡಲಾಗಿದ್ದು ಬುಧವಾರ ಅಂತ್ಯಕ್ರಿಯೆ ನಡೆದಿದೆ.

    ಟ್ರಕ್ ಚಾಲಕ ಡಿಕ್ಕಿ ಹೊಡೆದು, ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಶೋಧ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯ ಕಿವಿಯೊಳಗೆ ಹೊಕ್ಕಿತು ವಿಷಕಾರಿ ಹಾವು!

    ಮಹಿಳೆಯ ಕಿವಿಯೊಳಗೆ ಹೊಕ್ಕಿತು ವಿಷಕಾರಿ ಹಾವು!

    ನವದೆಹಲಿ: ದೇಶದಲ್ಲಿ ಇತ್ತೀಚಿನ ಕೆಲ ಘಟನೆಗಳು ಸಾರ್ವಜನಿಕರನ್ನ ದಿಗ್ಭ್ರಮೆಗೊಳಿಸುತ್ತಿವೆ. ಹೀಗೂ ಉಂಟೇ ಎನ್ನುವಷ್ಟು ಅಚ್ಚರಿಯನ್ನೂ ಮೂಡಿಸುತ್ತಿದೆ. ಅಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ವೀಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

    ಹೌದು… ಮಹಿಳೆಯೊಬ್ಬರು ಮಲಗಿದ್ದ ವೇಳೆ ಅತ್ಯಂತ ವಿಷಕಾರಿ ಹಾವಿನ ಮರಿಯೊಂದು (Snake) ಆಕೆಯ ಕಿವಿಯಿಂದ (Ear) ಒಳಹೊಕ್ಕಿದೆ. ಬಳಿಕ ಹೊರಬಾರದೇ ಕಿವಿಯಲ್ಲೇ ಸಿಕ್ಕಿಕೊಂಡಿದೆ. ಈ ಕುರಿತ ವೀಡಿಯೋ ಒಂದು ಜಾಲತಾಣದಲ್ಲಿ ಹರಿದಾಡುತ್ತಿದ್ದು, 87 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 

    ವೀಡಿಯೋ ನಲ್ಲಿ ಹಳದಿ ಬಣ್ಣದ ಹಾವೊಂದು ಮಹಿಳೆಯ (Women) ಕಿವಿಯೊಳಗೆ ಗಟ್ಟಿಯಾಗಿ ಸಿಕ್ಕಿಕೊಂಡಿದೆ. ಆದರೆ ಹೊರಬರುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ವೈದ್ಯರು (Doctors) ಸತತವಾಗಿ ಮಹಿಳೆ ಕಿವಿಯಿಂದ ಹಾವನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಘಟನೆ ನಡೆದ ಸ್ಥಳ ಸಮಯವನ್ನು ಬಹಿರಂಗಪಡಿಸಿಲ್ಲ. ಕೊನೆಗೆ ಮಹಿಳೆಯ (Women) ಕಿವಿಯಿಂದ ಹಾವು ಹೊರ ಬಂದಿತೇ ಇಲ್ಲವೇ ಎನ್ನುವ ಕುತೂಹಲದೊಂದಿಗೆಯೇ ವೀಡಿಯೋ ಕೊನೆಗೊಂಡಿದೆ. ಇದನ್ನೂ ಓದಿ: ಮಹಾದೇವಪುರದಲ್ಲಿ ರಾಜಕಾಲುವೆ ಒತ್ತುವರಿ – 8 ಕಡೆ ಜೆಸಿಬಿ ಆಪರೇಷನ್ ಆರಂಭ

    SNAKE
    ಸಾಂದರ್ಭಿಕ ಚಿತ್ರ

    ಕೆಲವರು ವೀಡಿಯೋ ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ, ಇನ್ನೂ ಕೆಲವರು ಇದು 100 ಪರ್ಸೆಂಟ್ ಸುಳ್ಳು, ಕೇವಲ ವೀವ್ಸ್ಗಾಗಿ ವೀಡಿಯೋ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಹಿಂದೂ ಮಹಿಳೆಯರಿಗೆ ಗೆಲುವು, ಅರ್ಜಿ ವಿಚಾರಣೆಗೆ ಯೋಗ್ಯ

    ವಿಶ್ವ ಆರೋಗ್ಯ ಸಂಸ್ಥೆ ಸಂಶೋಧನೆಯ ಪ್ರಕಾರ, ಹಾವು ಕಡಿತದಿಂದ ಪ್ರತಿ ವರ್ಷ 81 ಸಾವಿರದಿಂದ 1.38 ಲಕ್ಷ ಮಂದಿಯಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಇದರ ಮೂರು ಪಟ್ಟು ಅಧಿಕ ಮಂದಿ ಶಾಶ್ವತ ಅಂಕವೈಕಲ್ಯ ಉಂಟುಮಾಡುತ್ತಿದೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]