Tag: doctors

  • ಮರ್ಮಾಂಗಕ್ಕೆ ಜಿಮ್ ಪ್ಲೇಟ್ ಅಂಟಿಸಿಕೊಂಡ! ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಬರ್ಬೇಕಾಯ್ತು

    ಮರ್ಮಾಂಗಕ್ಕೆ ಜಿಮ್ ಪ್ಲೇಟ್ ಅಂಟಿಸಿಕೊಂಡ! ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಬರ್ಬೇಕಾಯ್ತು

    ಬರ್ಲಿನ್: ಜಿಮ್‍ಗೆ ಹೋಗೋದು ದೇಹವನ್ನು ದೃಢವಾಗಿಸಿಕೊಂಡು, ಬಲಿಷ್ಠವಾಗಿ ಕಾಣಿಸಿಕೊಳ್ಳಲು. ಆದರೆ ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ಹುಚ್ಚು ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ.

    ಸೆಪ್ಟಂಬರ್ 15 ರಂದು ಜರ್ಮನಿ ಪಟ್ಟಣದ ವೊಮ್ರ್ಸ್ ನಿವಾಸಿ ಇಂತಹ ಮೂರ್ಖ ಸಾಹಸವನ್ನು ತಮ್ಮ ಸ್ಥಳೀಯ ಜಿಮ್‍ನಲ್ಲಿ ಮಾಡಿದ್ದಾನೆ. ಈತ ಸುಮಾರು 2.5 ಕೆ.ಜಿ ತೂಕದ ಪ್ಲೇಟ್ ನಲ್ಲಿ ಮರ್ಮಾಂಗಕ್ಕೆ ತೂರಿಸಿದ್ದಾನೆ. ಬಳಿಕ ಪ್ಲೇಟ್ ನಿಂದ ಮರ್ಮಾಂಗವನ್ನು ಬಿಡಿಸಿಕೊಳ್ಳಲು ಆಗದೇ ಒದ್ದಾಡಿದ್ದಾನೆ.

    ವಿಚಾರ ತಿಳಿದು ವೈದ್ಯರು ಬಂದು ತೆಗೆಯಲು ಪ್ರಯತ್ನಿಸಿದ್ದಾರೆ. ಅವರಿಂದಲೂ ಪ್ಲೇಟ್ ತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿಶಾಮಕ ದಳ ಬಂದು ಪ್ಲೇಟ್ ತೆಗೆದಿದ್ದಾರೆ. ಹೈಡ್ರಾಲಿಕ್ ಸಾಧನ ಬಳಸಿ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪ್ಲೇಟನ್ನು ಕತ್ತರಿಸಿ ಆತನನ್ನು ರಕ್ಷಿಸಿದ್ದಾರೆ.

    ಈ ಕಾರ್ಯಾಚರಣೆ ನಡೆದ ಬಳಿಕ `ದಯವಿಟ್ಟು ಯಾರು ಇಂತಹ ಕಠಿಣ ಸಾಹಸವನ್ನು ಮಾಡಬೇಡಿ’ ಎಂದು ಜರ್ಮನಿಯ ಅಗ್ನಿಶಾಮಕ ಘಟಕ ಫೇಸ್‍ಬುಕ್ ನಲ್ಲಿ ತುಂಡು ತುಂಡಾಗಿ ಬಿದ್ದಿದ್ದ ಪ್ಲೇಟಿನ ಫೋಟೋ ವನ್ನು ಪ್ರಕಟಿಸಿದೆ.

  • ಕ್ಯಾಂಡಿ ಕ್ರಶ್ ಆಡುತ್ತಲೇ ಬ್ರೈನ್ ಟ್ಯೂಮರ್ ಆಪರೇಷನ್ ಮಾಡಿಸಿಕೊಂಡ್ಳು 10ರ ಬಾಲಕಿ!

    ಕ್ಯಾಂಡಿ ಕ್ರಶ್ ಆಡುತ್ತಲೇ ಬ್ರೈನ್ ಟ್ಯೂಮರ್ ಆಪರೇಷನ್ ಮಾಡಿಸಿಕೊಂಡ್ಳು 10ರ ಬಾಲಕಿ!

    ಚೆನ್ನೈ: 10 ವರ್ಷದ ಬಾಲಕಿಯೊಬ್ಬಳು ಬ್ರೈನ್ ಟ್ಯೂಮರ್ ಆಪರೇಷನ್ ಗೆ ಒಳಗಾಗಿದ್ದು, ಈ ವೇಳೆ ಆಕೆ ಕ್ಯಾಂಡಿ ಕ್ರಶ್ ಗೇಮ್ಸ್ ಆಡಿದ್ದಾಳೆ.

    5ನೇ ತರಗತಿ ಓದುತ್ತಿದ್ದ ನಂದಿನಿ ಶಸ್ತ್ರಚಿಕಿತ್ಸಗೆ ಒಳಗಾದ ಬಾಲಕಿ. ಭರತನಾಟ್ಯ ಮಾಡುತ್ತಿದ್ದ ನಂದಿನಿ ಆರೋಗ್ಯ ಇದ್ದಕ್ಕಿದ್ದಂತೆ ಕೆಡುತಿತ್ತು. ಹೀಗಾಗಿ ಆಕೆಯನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಆಕೆಯ ಮೆದುಳನ್ನು ಸ್ಕ್ಯಾನ್ ಮಾಡಿದಾಗ ಬ್ರೈನ್ ಟ್ಯೂಮರ್ ಇದೆ ಎನ್ನುವುದು ತಿಳಿದು ಬಂದಿದೆ.

    ಆಪರೇಷನ್ ಈಗಲೇ ನಡೆಸದೇ ಇದ್ದರೆ ಮುಂದೆ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ತಿಳಿಸಿದಾಗ ನಂದಿನಿಯ ಪೋಷಕರು ಆರಂಭದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ಅನುಮತಿ ನೀಡಿರಲಿಲ್ಲ. ಆದರೆ ಪುದುಚೇರಿಯಲ್ಲಿರುವ ಬಾಲಕಿಯ ಸಂಬಂಧಿಯೊಬ್ಬರನ್ನು ವೈದ್ಯರು ಆಸ್ಪತ್ರೆಗೆ ಕರೆಸಿದ್ದರು. ಸಂಬಂಧಿ ವೈದ್ಯರಾಗಿದ್ದ ಕಾರಣ ಸಹಾಯವನ್ನು ಪಡೆದು ಪೋಷಕರ ಮನವೊಲಿಸಿದ ಚೆನ್ನೈ ವೈದ್ಯರು ಯಶಸ್ವಿಯಾಗಿ ಸರ್ಜರಿ ನಡೆಸಿದ್ದಾರೆ.

    ಗೆಡ್ಡೆಯನ್ನು ಹೊರ ತೆಗೆಯುವಾಗ ನಾನು ಅಲ್ಲಿಯೇ ಇದ್ದೆ. ನಂದಿನಿ ನನ್ನ ಮೊಬೈಲ್ ನಲ್ಲಿ ಕ್ಯಾಂಡಿ ಕ್ರಷ್ ಆಡುತ್ತಿದ್ದಳು. ನಂದಿನಿಗೆ ಸರ್ಜರಿ ಮಾಡುವಾಗ ಅದು ಅರಿವಾಗಬಾರದು ಎಂದು ವೈದ್ಯರು ನಿರ್ಧರಿಸಿದ್ದರು. ಆದರೆ ಬಾಲಕಿ ತುಂಬಾ ಧೈರ್ಯವಾಗಿದ್ದಳು ಎಂದು ಆಕೆಯ ಸಂಬಂಧಿ ತಿಳಿಸಿದ್ದಾರೆ.

    ಗೇಮ್ಸ್ ಆಡಿದ್ದು ಯಾಕೆ? ಈ ಆಪರೇಷನ್ ನಡೆಸುವಾಗ ಮೆದುಳು ಚಲನೆಯಲ್ಲಿರಬೇಕಾಗುತ್ತದೆ. ಹೀಗಾಗಿ ಮೆದುಳು ಚಲನೆಯಲ್ಲಿರಲು ಆಕೆಗೆ ಕ್ಯಾಂಡಿ ಕ್ರಾಶ್ ಗೇಮ್ಸ್ ಅಡಲು ವೈದ್ಯರು ಸೂಚಿಸಿದ್ದರು.

  • ತುರ್ತು ಸಿಜೇರಿಯನ್‍ಗಾಗಿ ಗರ್ಭಿಣಿ ಆಪರೇಷನ್ ಟೇಬಲ್ ಮೇಲೆ ಮಲಗಿದ್ರೆ ವೈದ್ಯರ ಮಧ್ಯೆ ಜಗಳ- ಮಗು ಸಾವು

    ತುರ್ತು ಸಿಜೇರಿಯನ್‍ಗಾಗಿ ಗರ್ಭಿಣಿ ಆಪರೇಷನ್ ಟೇಬಲ್ ಮೇಲೆ ಮಲಗಿದ್ರೆ ವೈದ್ಯರ ಮಧ್ಯೆ ಜಗಳ- ಮಗು ಸಾವು

    ನವದೆಹಲಿ: ಗರ್ಭಿಣಿಯೊಬ್ಬರು ತುರ್ತು ಸರ್ಜರಿಗಾಗಿ ಆಪರೇಷನ್ ಟೇಬಲ್ ಮೇಲೆ ಮಲಗಿದ್ದ ವೇಳೆಯೇ ವೈದ್ಯರು ಜೋರು ಧ್ವನಿಯಲ್ಲಿ ಜಗಳವಾಡಿರೋ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರದಂದು ಜೋಧ್‍ಪುರ್‍ನ ಉಮೇಯ್ದ್ ಆಸ್ಪತ್ರೆಯಲ್ಲಿ ನಡೆದಿದೆ. ಆಪರೇಷನ್ ಟೇಬಲ್ ಬದಿಯಲ್ಲೇ ವೈದ್ಯರಿಬ್ಬರು ಒಬ್ಬರ ಹೆಸರನ್ನೊಬ್ಬರು ಹಿಡಿದು ಜೋರಾಗಿ ಜಗಳವಾಡಿದ್ದಾರೆ. ಇದನ್ನ ಅಲ್ಲಿನ ಸಿಬ್ಬಂದಿಯೊಬ್ಬರು ಮಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಕೊನೆಗೆ ವೈದ್ಯರಲ್ಲೊಬ್ಬರು ಹೆರಿಗೆ ಮಾಡಿಸಿದರಾದ್ರೂ ಮಗು ಬದುಕುಳಿಯಲಿಲ್ಲ.

    ಮಗುವಿನ ಹೃದಯ ಬಡಿತ ಕ್ಷೀಣವಾಗಿದ್ದರಿಂದ ಗರ್ಭಿಣಿಗೆ ತುರ್ತು ಸಿಜೇರಿಯನ್‍ಗೆ ಏರ್ಪಡಿಸಲಾಗಿತ್ತು. ಈ ವೇಳೆ ಆಸ್ಪತ್ರೆಯ ವೈದ್ಯರಾದ ಅಶೋಕ್ ನೈನ್ವಾಲ್ ಹಾಗೂ ಎಮ್‍ಎಲ್ ತಕ್ ನಡುವೆ ಆಪರೇಷನ್ ರೂಮಿನಲ್ಲೇ ಜಗಳ ಶುರುವಾಗಿದೆ.

    ಗರ್ಭಿಣಿ ಶಸ್ತ್ರಚಿಕಿತ್ಸೆಗೂ ಮುನ್ನ ಏನಾದರೂ ತಿಂದಿದ್ದಾರೆಯೇ ಎಂದು ಪ್ರಸೂತಿತಜ್ಞರಾದ ಡಾ ನೈನ್ವಾಲ್ ಪ್ರಶ್ನಿಸಿದಾಗ ಜಗಳ ಶುರುವಾಗಿದೆ. ಅರವಳಿಕೆ ತಜ್ಞರಾದ ಡಾ ತಕ್ ಕಿರಿಯ ವೈದ್ಯರೊಬ್ಬರಿಂದ ಪರೀಕ್ಷೆ ನಡೆಸಲು ಮುಂದಾಗಿದ್ದು, ಡಾ ನೈನ್ವಾಲ್ ಇದನ್ನ ವಿರೋಧಿಸಿದ್ದಾರೆ. “ನೀನು ನಿನ್ನ ಮಿತಿಯಲ್ಲಿರು” ಅಂತ ಡಾ. ನೈನ್ವಾಲ್ ಅರವಳಿಕೆ ತಜ್ಞರ ಮೇಲೆ ಕಿರುಚಾಡೋದನ್ನ ವಿಡಿಯೋದಲ್ಲಿ ನೋಡಬಹುದು.

    ನಂತರ ವಾಗ್ವಾದ ತಾರಕಕ್ಕೇರಿದ್ದು, ಬೀದಿ ಜಗಳದಂತೆ ಆಪರೇಷನ್ ಥಿಯೆಟರ್‍ನಲ್ಲೇ ವೈದ್ಯರು ಹೆಸರು ಹಿಡಿದು ಜಗಳವಾಡಿದ್ದಾರೆ. ಒಬ್ಬ ನರ್ಸ್ ಹಾಗೂ ಮತ್ತೊಬ್ಬ ವೈದ್ಯರು ಅವರನ್ನ ತಡೆಯಲು ಯತ್ನಿಸಿದ್ದು, ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಎಂದು ವೈದ್ಯರಿಗೆ ಮನವರಿಕೆ ಮಾಡಿಕೊಡೋದನ್ನ ಕಾಣಬಹುದು.

    ಸದ್ಯ ಡಾ ನೈನ್ವಾಲ್ ಹಾಗೂ ಡಾ ತಕ್ ರನ್ನ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

  • ಆಪರೇಷನ್‍ಗೆ ಹೋದ ಅಜ್ಜಿಯ ಹಲ್ಲು ಸೆಟ್ ಗಂಟಲಿಗಿಳಿಯಿತು- ಎಡವಟ್ಟು ಮುಚ್ಚಿಕೊಳ್ಳಲು ಕಥೆ ಕಟ್ಟಿದ್ರು ವೈದ್ಯರು

    ಆಪರೇಷನ್‍ಗೆ ಹೋದ ಅಜ್ಜಿಯ ಹಲ್ಲು ಸೆಟ್ ಗಂಟಲಿಗಿಳಿಯಿತು- ಎಡವಟ್ಟು ಮುಚ್ಚಿಕೊಳ್ಳಲು ಕಥೆ ಕಟ್ಟಿದ್ರು ವೈದ್ಯರು

    ಬೆಂಗಳೂರು: ಜೀವ ರಕ್ಷಿಸಿಕೊಳ್ಳೊಕೆ ಅಂತ ಆಸ್ಪತ್ರೆಗೆ ಹೋದ ಅಜ್ಜಿಯ ಹಲ್ಲು ಸೆಟ್ಟೇ ಅಂದರ್ ಆಗಿದ್ದು, ಮಾಡಿದ ಯಡವಟ್ಟನ್ನ ಮರೆಮಾಚೋಕೆ ಅಜ್ಜಿಯನ್ನು ಪರಲೋಕ ಸೇರಿಸೋಕೆ ವೈದ್ಯರು ಸಿದ್ಧರಾಗಿದ್ದ ಘಟನೆ ಬೆಳಕಿಗೆ ಬಂದಿದೆ..

    ಬೆಂಗಳೂರಿನ ನಾಗರಬಾವಿಯಲ್ಲಿರೋ ಜಿಎಮ್ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದಾಗಿ 68 ವರ್ಷದ ಜಯಲಕ್ಷ್ಮಮ್ಮ ಸಾವಿನ ಮನೆಯ ಕದ ತಟ್ಟಿ ಬಂದಿದ್ದಾರೆ. ಇವತ್ತಿಗೂ ಸುಧಾರಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ.

    ಜೂನ್ 30ರಂದು ಕಿಡ್ನಿ ಸ್ಟೋನ್ ಆಪರೇಷನ್‍ಗಾಗಿ ಅಜ್ಜಿ ಸಂಸದ ಸಿದ್ದೇಶ್ವರ್ ಒಡೆತನದ ಜಿಎಮ್ ಆಸ್ಪತ್ರೆಗೆ ದಾಖಲಾಗಿದ್ರು. ಆಪರೇಷನ್ ಸಮಯದಲ್ಲಿ ವೈದ್ಯರ ಬೇಜವ್ದಾರಿಯಿಂದ ಈ ಅಜ್ಜಿಯ ಹಲ್ಲು ಸೆಟ್ ಗಂಟಲಿಗೆ ಇಳಿದಿದೆ. ಇದನ್ನು ಕುಂಟುಬಸ್ಥರಿಂದ ಜಿಎಮ್ ಆಸ್ಪತ್ರೆ ವೈದ್ಯರು ಮುಚ್ಚಿಟ್ಟಿದ್ದಾರೆ. ಅಜ್ಜಿ ಸ್ಥಿತಿ ಚಿಂತಾಜನಕವಾದಾಗ ಅವರು ಬದುಕೋದಿಲ್ಲ. ಮನೆಗೆ ಕರೆದುಕೊಂಡು ಹೋಗಿ ಅಂತ ಹೇಳಿ ಐದು ಲಕ್ಷ ರೂ. ಹಣ ಪೀಕಿ ಡಿಸ್ಜಾರ್ಜ್ ಮಾಡಿದ್ದಾರೆ.

    ಡಿಸ್ಜಾರ್ಜ್ ಆದ ನಂತರ ಅಜ್ಜಿ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಮನಸ್ಸು ತಡೆಯದೆ ಮಗ ಗಂಗಾಧರ್ ಅಜ್ಜಿಯನ್ನು ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಅಜ್ಜಿ ಗಂಟಲಲ್ಲಿ ಹಲ್ಲು ಸೆಟ್ ಇರೋದನ್ನ ಪತ್ತೆ ಹಚ್ಚಿದ ವೈದ್ಯರು ಅದನ್ನ ಗಂಟಲಿನಿಂದ ತೆಗೆದಿದ್ದಾರೆ.

    ಅಜ್ಜಿಯನ್ನು ಪರಲೋಕಕ್ಕೆ ಕಳಿಸೋಕೆ ಸಿದ್ಧತೆ ನಡೆಸಿದ್ದ ಜಿಎಮ್ ಆಸ್ಪತ್ರೆ ವೈದ್ಯರು ಈಗ ಮಗ ಗಂಗಾಧರ್ ಹತ್ತಿರ ದುಡ್ಡಿನ ಡೀಲ್ ಮಾಡಲು ಮುಂದಾಗಿದ್ದು, ಅಜ್ಜಿ ಬದುಕೋದಿಲ್ಲ ಅಂತಾ ಹೇಳಿದ್ದನ್ನು ಒಪ್ಪಿಕೊಂಡಿದ್ದಾರೆ.

    https://youtu.be/mQ-Y9vGC1Ss

  • ಲಕ್ಷ-ಲಕ್ಷ ಕೊಡಿ, ಗ್ರಾಮೀಣ ಸೇವೆಗೆ ರೆಡಿ- ಸರ್ಕಾರದ ಮುಂದೆ ವೈದ್ಯರಿಂದ ಭರ್ಜರಿ ಡಿಮಾಂಡ್!

    ಲಕ್ಷ-ಲಕ್ಷ ಕೊಡಿ, ಗ್ರಾಮೀಣ ಸೇವೆಗೆ ರೆಡಿ- ಸರ್ಕಾರದ ಮುಂದೆ ವೈದ್ಯರಿಂದ ಭರ್ಜರಿ ಡಿಮಾಂಡ್!

    ಬೆಂಗಳೂರು: ಸರ್ಜನ್‍ಗಳಾಗಿ ಕೆಲಸ ಮಾಡೋಕೆ ನಾವು ರೆಡಿ ಇದ್ದೇವೆ. ಆದ್ರೆ ಸಂಬಳ ಮಾತ್ರ ತಿಂಗಳಿಗೆ ಆರು ಲಕ್ಷ ರುಪಾಯಿ ಕೊಡಿ. ಇದು ಡಾಕ್ಟರ್‍ಗಳು ಸರ್ಕಾರದ ಮುಂದೆ ಇಟ್ಟಿರೋ ಪ್ರಸ್ತಾಪ.

    ಆರೋಗ್ಯ ಸಚಿವಾಲಯವು ಗ್ರಾಮೀಣ ಭಾಗಗಳಲ್ಲಿ ತಜ್ಞ ವೈದ್ಯರನ್ನು ತುಂಬಲೇಬೇಕು ಅನ್ನೋ ತೀರ್ಮಾನಕ್ಕೆ ಬಂದಿದೆ. ಇದಕ್ಕಾಗಿ ಆನ್‍ಲೈನ್ ಬಿಡ್ಡಿಂಗ್ ಮೂಲಕ ತಜ್ಞ ವೈದ್ಯರಿಗೆ ಅರ್ಜಿ ಸಲ್ಲಿಸಲು ಸೂಚಿಸಿತು. ಅದರಂತೆ ಸಂಬಳ, ಸೇವೆ ಮಾಡುವ ಸ್ಥಳ ಎಲ್ಲವನ್ನೂ ಪಕ್ಕಾ ಮಾಡಿ ಅಂತ ಹೇಳಿದ 12 ದಿನಗಳಲ್ಲೇ ಬರೋಬ್ಬರಿ 5,200 ಮಂದಿ ಅರ್ಜಿ ಸಲ್ಲಿಸಿದ್ದಾರೆ.

    11 ವಿಭಾಗಗಳಲ್ಲಿ ಇರೋ 1,221 ಹುದ್ದೆಗಳು ಖಾಲಿ ಇವೆ. ಕುತೂಹಲಕಾರಿ ವಿಷಯ ಅಂದ್ರೆ 60 ಸಾವಿರದಿಂದ ಆರು ಲಕ್ಷ ರುಪಾಯಿ ತನಕ ವೇತನವನ್ನು ಪ್ರಸ್ತಾಪಿಸಿದ್ದಾರೆ. ಸ್ತ್ರೀ ರೋಗ ತಜ್ಞರು ಆರು ಲಕ್ಷ ರುಪಾಯಿ ವೇತನ ಕೇಳುತ್ತಿದ್ದಾರೆ. ಹಾಗಿದ್ರೆ ಯಾವ್ಯಾವ ತಜ್ಞ ವೈದ್ಯರು ಎಷ್ಟೆಷ್ಟು ಸಂಬಳಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಅನ್ನೋದು ಇಲ್ಲಿದೆ.

    ಜನರಲ್ ಸರ್ಜರಿ– 60 ಸಾವಿರದಿಂದ 4 ಲಕ್ಷವರೆಗೂ
    ಜನರಲ್ ಮೆಡಿಸನ್ – 65 ಸಾವಿರದಿಂದ 5 ಲಕ್ಷದವರೆಗೆ
    ಮನಃಶಾಸ್ತ್ರಜ್ಞರು – 1 ಲಕ್ಷದಿಂದ 2 ಲಕ್ಷ
    ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞರು – 80 ಸಾವಿರದಿಂದ 6 ಲಕ್ಷ ರುಪಾಯಿವರೆಗೆ
    ಮಕ್ಕಳ ತಜ್ಞರು – 70 ಸಾವಿರದಿಂದ 4.5 ಲಕ್ಷ ರೂ ತನಕ
    ಅರವಳಿಕೆ ತಜ್ಞರು – 80 ಸಾವಿರದಿಂದ 4 ಲಕ್ಷ
    ಕಣ್ಣಿನ ತಜ್ಞರು – 95 ಸಾವಿರದಿಂದ 5 ಲಕ್ಷ
    ಮೂಳೆ ತಜ್ಞರು – 60 ಸಾವಿರದಿಂದ 5 ಲಕ್ಷ ರುಪಾಯಿ
    ಇಎನ್‍ಟಿ-70 ಸಾವಿರದಿಂದ 3.5 ಲಕ್ಷದವರೆಗೆ
    ಚರ್ಮರೋಗ ತಜ್ಞರು – 80 ಸಾವಿರದಿಂದ 3 ಲಕ್ಷದವರೆಗೆ
    ವಿಕಿರಣ(ಎಕ್ಸ್‍ರೇ)ತಜ್ಞರು – 1.20 ಲಕ್ಷ ರುಪಾಯಿಯಿಂದ 3.5 ಲಕ್ಷದವರೆಗೆ

  • ಲಿಫ್ಟ್ ಬೇಕು ಲಿಫ್ಟ್- ಶಿವಮೊಗ್ಗ ಸಿಮ್ಸ್ ಡಾಕ್ಟರ್‍ಗಳ ಗೋಳು

    ಲಿಫ್ಟ್ ಬೇಕು ಲಿಫ್ಟ್- ಶಿವಮೊಗ್ಗ ಸಿಮ್ಸ್ ಡಾಕ್ಟರ್‍ಗಳ ಗೋಳು

    ಶಿವಮೊಗ್ಗ: ನಮಗೆ ಲಿಫ್ಟ್ ಬೇಕು ಎಂದು ನಗರದ ಸಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ಗೆ ಸುಸಜ್ಜಿತ ಕಾಲೇಜು ಕಟ್ಟಡವಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಆರು ಮಹಡಿಯ ಹಾಸ್ಟೆಲ್ ಇದ್ದು ಸುಮಾರು 600 ಮಂದಿ ಇದ್ದಾರೆ. ಒಂಬತ್ತು ಮಹಡಿಯ ಭವ್ಯ ಕ್ವಾರ್ಟಸ್ ಇದ್ದು, ಇದರ ಏಳು ಮಹಡಿವರೆಗೂ ವೈದ್ಯ ಕುಟುಂಬಗಳು ವಾಸವಾಗಿವೆ. ಈ ಯಾವುದೇ ಕಟ್ಟಡಗಳಿಗೆ ಲಿಫ್ಟ್ ಇಲ್ಲದ ಕಾರಣ ಇಲ್ಲಿನ ವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

    ಐದು, ಆರು, ಏಳನೇ ಮಹಡಿಯಲ್ಲಿರುವ ಮನೆಗೆ ಹೋಗಿ ಬರುವಷ್ಟರಲ್ಲಿ ವೈದ್ಯರೇ ರೋಗಿಗಳಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕುಟುಂಬದಲ್ಲಿ ಇರುವ ಮಹಿಳೆಯರು, ಮಕ್ಕಳು, ವೃದ್ಧರ ಗೋಳು ಹೇಳತೀರದಾಗಿದೆ. ಆರು- ಏಳನೇ ಮಹಡಿಯಲ್ಲಿ ಯಾರಿಗಾದರೂ ಆರೋಗ್ಯ ಏರುಪೇರಾದಲ್ಲಿ ಅವರನ್ನು ಹೊತ್ತುಕೊಂಡು ಕೆಳಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಗ್ಗಂಟಾಗಿರುವ ಲಿಫ್ಟ್: ಈ ಕಟ್ಟಡಗಳು ಸುಮರು 60 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡು ಎರಡು ವರ್ಷವಾಗಿದೆ. ಕಟ್ಟಡಕ್ಕಾಗಿ ಮೀಸಲಿಟ್ಟಿದ್ದ ಹಣ ಪೂರ್ಣ ಬಳಕೆಯೂ ಆಗಿದೆ. ಇದರಲ್ಲಿ ಲಿಫ್ಟ್ ಗಾಗಿ ಮೀಸಲಿಟ್ಟಿದ್ದ ಹಣವನ್ನು ಗುತ್ತಿಗೆದಾರನಿಗೆ ಪಾವತಿ ಮಾಡಲಾಗಿದೆ. ಆದರೂ, ಈ ಕಟ್ಟಡಗಳಿಗೆ ಲಿಫ್ಟ್ ಭಾಗ್ಯ ದೊರಕಿಲ್ಲ. ಇಡೀ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಇನ್ನೂ ಕೊಟ್ಟಿಲ್ಲ.

    ತಮ್ಮ ಸಿಬ್ಬಂದಿಗೆ ಕ್ವಾರ್ಟಸ್ ಕೊಟ್ಟು ಕೈ ತೊಳೆದುಕೊಂಡಿರುವ ಸಿಮ್ಸ್ ಆಡಳಿತ ಮಂಡಳಿ ಅವರಿಗೆ ಲಿಫ್ಟ್ ಸೌಲಭ್ಯ ಕೊಡುವಲ್ಲಿ ಬೇಜವಾಬ್ದಾರಿತನ ತೋರುತ್ತಿದೆ. ಪಿಡಬ್ಲ್ಯುಡಿ, ಮೆಸ್ಕಾಂ, ಕೆಪಿಟಿಸಿಎಲ್ ಕಂಟ್ರಾಕ್ಟರ್ ಮೇಲೆ ಜವಾಬ್ದಾರಿ ಹೊರಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಲಿಫ್ಟ್ ಸೇವೆ ಸಿದ್ಧ ಎಂಬ ಸಿದ್ದ ಉತ್ತರವನ್ನೇ ಸಿಮ್ಸ್ ನಿರ್ದೇಶಕರು ನೀಡುತ್ತಿದ್ದಾರೆ.

    ಈ ಕ್ವಾರ್ಟಸ್ ಗಳ ಮಹಡಿಗಳಲ್ಲಿ ಮನೆ ಮಾಡಿದವರು ಲಿಫ್ಟ್ ಇಲ್ಲದೆ ಬವಣೆ ಪಡುತ್ತಿದ್ದಾರೆ. ಲಿಫ್ಟ್ ಬೇಕು ಲಿಫ್ಟ್ ಎನ್ನುತ್ತಿದ್ದಾರೆ. ಆದರೆ ಸಿಮ್ಸ್ ಆಡಳಿತ ಅಸೀಮ ನಿರ್ಲಕ್ಷ್ಯ ಮುಂದುವರೆಸಿದೆ. ಭವ್ಯ ಕಟ್ಟಡ ನಿರ್ಮಿಸಿದರೆ ಸಾಲದು ಅದಕ್ಕೆ ತಕ್ಕ ಸೌಲಭ್ಯಗಳನ್ನೂ ಒದಗಿಸುವುದು ತಮ್ಮ ಜವಾಬ್ದಾರಿ ಎಂಬುದನ್ನು ಮರೆತಿದೆ. ಈ ನಿರ್ಲಕ್ಷ್ಯದ ವಿರುದ್ಧ ಲಿಫ್ಟ್ ಅಗತ್ಯ ಇರುವ ವೈದ್ಯರು ಪ್ರತಿಭಟನೆ ಹಾದಿ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.