Tag: doctors

  • ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹಾರಾಟ ನಿಲ್ಲಿಸಿದ ʻತೇಜಸ್‌ʼ- 4 ತಿಂಗಳಲ್ಲಿ 7ನೇ ಚೀತಾ ಸಾವು!

    ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹಾರಾಟ ನಿಲ್ಲಿಸಿದ ʻತೇಜಸ್‌ʼ- 4 ತಿಂಗಳಲ್ಲಿ 7ನೇ ಚೀತಾ ಸಾವು!

    ಭೋಪಾಲ್: ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗಿದ್ದ ಚೀತಾಗಳ ಪೈಕಿ ʻತೇಜಸ್‌ʼ (Tejas) ಹೆಸರಿನ ಮತ್ತೊಂದು ಗಂಡು ಚೀತಾ (Cheetah) ಸಾವನ್ನಪ್ಪಿದ್ದು, 4 ತಿಂಗಳಲ್ಲಿ ಇದು 7ನೇ ಪ್ರಕರಣವಾಗಿದೆ.

    ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಿರತೆಯ ಕತ್ತಿನ ಮೇಲ್ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ಇದನ್ನು ಗಮನಿಸಿದ ಮೇಲ್ವಿಚಾರಣಾ ತಂಡ ತಕ್ಷಣ ವೈದ್ಯರಿಗೆ (Doctors) ಮಾಹಿತಿ ನೀಡಿದೆ. ನಂತರ ವೈದ್ಯರು ಪ್ರಾಣಿಯನ್ನ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ʻತೇಜಸ್‌ʼ ಮೃತಪಟ್ಟಿದೆ. ಕಳೇಬರವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪ್ರಧಾನ ಅರಣ್ಯ ಸರಂಕ್ಷಣಾಧಿಕಾರಿ ಜೆ.ಎಸ್‌ ಚೌಹಾಣ್‌ ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಿಸಿದ್ದ ಮತ್ತೊಂದು ಚೀತಾ ಸಾವು

    ಕಳೆದ ಮಾರ್ಚ್‌ 27ರಂದು ಸಾಶಾ ಹೆಸರಿನ ಹೆಣ್ಣು ಚೀತಾ ಕಿಡ್ನಿ ಸೋಂಕಿನಿಂದ ಸಾವನ್ನಪ್ಪಿತ್ತು, ಏಪ್ರಿಲ್‌ 23ರಂದು ಉದಯ್‌ ಹೆಸರಿನ ಗಂಡು ಚೀತಾ ಶ್ವಾಸಕೋಶದ ವೈಫಲ್ಯದಿಂದ, ಮೇ 9ರಂದು ದಕ್ಷಾ0 ಹೆಸರಿನ ಹೆಣ್ಣು ಚೀತಾ ಬೇಟೆಯಾಡುವ ವೇಳೆ ಗಾಯಗೊಂಡು ಮೃತಪಟ್ಟಿತ್ತು. ಆ ನಂತರ ವಿವಿಧ ಕಾರಣದಿಂದ ಮೂರು ಚೀತಾ ಮರಿಗಳು ಮೃತಪಟ್ಟಿದ್ದವು. ಒಟ್ಟು 6 ಚೀತಾ ಸಾವನ್ನಪ್ಪಿದರೂ ಅರಣ್ಯ ಇಲಾಖೆ ಹಾಗೂ ಸರ್ಕಾರ ಆರೋಪಗಳನ್ನ ತಳ್ಳಿಹಾಕಿತ್ತು. ಇದೀಗ 7ನೇ ಚೀತಾ ಸಾವನ್ನಪ್ಪಿದೆ. ಇದನ್ನೂ ಓದಿ: ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಇನ್ನೆರಡು ಚೀತಾ ಮರಿಗಳ ಸಾವು – ಕಳೆದ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು. ಇದನ್ನೂ ಓದಿ: ನಮೀಬಿಯಾ-ದಕ್ಷಿಣ ಆಫ್ರಿಕಾ ಚೀತಾಗಳ ನಡುವೆ ರಣರೋಚಕ ಕಾದಾಟ – ʻಅಗ್ನಿʼಗೆ ಗಾಯ

    ಚೀತಾ ವಿಶೇಷತೆಯೇನು?
    ಮಚ್ಚೆ ಗುರುತಿನ ಚೀತಾಗಳ ಸಂತತಿಯನ್ನು 1952ರಲ್ಲಿ ಭಾರತದಲ್ಲಿ ಅಳಿದುಹೋದ ಸಂತತಿ ಎಂದು ಘೋಷಣೆ ಮಾಡಲಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅದಾದ 75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನೊ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೆದರ್ಲೆಂಡ್‌ನಲ್ಲಿ ಮಹಿಳೆಯರು, ಮಕ್ಕಳು, ವಯಸ್ಕರಿಗೂ ಸನ್ ಕ್ರೀಮ್ ಉಚಿತ, ಎಲ್ಲರಿಗೂ ಖಚಿತ – ಏಕೆ ಗೊತ್ತೇ?

    ನೆದರ್ಲೆಂಡ್‌ನಲ್ಲಿ ಮಹಿಳೆಯರು, ಮಕ್ಕಳು, ವಯಸ್ಕರಿಗೂ ಸನ್ ಕ್ರೀಮ್ ಉಚಿತ, ಎಲ್ಲರಿಗೂ ಖಚಿತ – ಏಕೆ ಗೊತ್ತೇ?

    ಆಂಸ್ಟರ್ಡ್ಯಾಮ್: ಹೆಚ್ಚುತ್ತಿರುವ ಚರ್ಮದ ಕ್ಯಾನ್ಸರ್ ಪ್ರಮಾಣ ತಗ್ಗಿಸಲು ನೆದರ್ಲೆಂಡ್ (Netherlands) ವಿಶೇಷ ಉಪಾಯ ಮಾಡಿದೆ. ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ರಕ್ಷಣೆ (Sun Protection) ಒದಗಿಸಲು ಎಲ್ಲರಿಗೂ ಉಚಿತವಾಗಿ ಸನ್ ಕ್ರೀಮ್ (Sun Cream) ವಿತರಿಸಲು ಮುಂದಾಗಿದೆ. ಅದಕ್ಕಾಗಿ ದೇಶಾದ್ಯಂತ ಶಾಲೆಗಳು, ವಿಶ್ವವಿದ್ಯಾಲಯಗಳು (Universities), ಉತ್ಸವಗಳು, ಉದ್ಯಾನವನಗಳು, ಕ್ರೀಡಾ ಸ್ಥಳಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸನ್ ಕ್ರೀಮ್ ವಿತರಕಗಳನ್ನು ಇರಿಸಲಾಗುತ್ತಿದೆ.

    ವಾರಾಂತ್ಯದಲ್ಲಿ ಬ್ರೆಡಾದಲ್ಲಿ ನಡೆದ ಉತ್ಸವದಲ್ಲಿ ಸನ್ ಕ್ರೀಮ್ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆಸ್ಟ್ರೇಲಿಯಾದ ಯಶಸ್ವಿ `ಸ್ಲಿಪ್, ಸ್ಲಾಪ್, ಸ್ಲ್ಯಾಪ್’ ಅಭಿಯಾನದಿಂದ ಸ್ಫೂರ್ತಿ ಪಡೆದ ನಂತರ ತನ್ನ ದೇಶದ ಪ್ರಜೆಗಳೂ ಬಿಸಿಲಿನ ವಾತಾವರಣದಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಉಡುಪು ಧರಿಸುವುದು, ಸನ್‌ಸ್ಕ್ರೀನ್ ಹಾಗೂ ಟೋಪಿ ಧರಿಸುವಂತೆ ಸೂಚಿಸಿದೆ. ಇಲ್ಲಿನ ಎಲ್ಲ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸುಮಾರು 120 ಪ್ರಾಥಮಿಕ ಶಾಲೆಗಳಿಗೆ ಸನ್ ಕ್ರೀಮ್ ವಿತರಿಸಲು ಹಣ ನೀಡಲು ಯೋಜಿಸಿದೆ.

    ಇಲ್ಲಿನ ವೈದ್ಯಕೀಯ ತಜ್ಞರೂ ಇತ್ತೀಚಿನ ವರ್ಷಗಳಲ್ಲಿ ಜನ ಚರ್ಮದ ಕ್ಯಾನ್ಸರ್ ಪ್ರಕರಣಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕೆ ಸನ್ ಕ್ರೀಮ್ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ – ಪ್ರವಾಸಿಗರಿಗೆ ಮನವಿ

    ವರದಿಗಳ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಯುರೋಪಿನಾದ್ಯಂತ ಚರ್ಮದ ಕ್ಯಾನ್ಸರ್ ಪ್ರಮಾಣವು ಹೆಚ್ಚುತ್ತಿದೆ. ನೆರೆಯ ಜರ್ಮನಿಯು 2001 ರಿಂದ ಚರ್ಮದ ಕ್ಯಾನ್ಸರ್-ಸಂಬಂಧಿತ ಸಾವುಗಳಲ್ಲಿ 55% ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ನೆದರ್ಲೆಂಡ್ ಸರ್ಕಾರ ತನ್ನ ದೇಶದ ಪ್ರಜೆಗಳಿಗೆ ಉಚಿತವಾಗಿ ಸನ್ ಕ್ರೀಮ್ ವಿತರಿಸಲು ಮುಂದಾಗಿದೆ. ಇದನ್ನೂ ಓದಿ: 14ರ ಹಿಂದೂ ಬಾಲಕಿ ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರ – ಪೋಷಕರ ಜೊತೆ ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಣೆ

  • ಕಾಮೋತ್ತೇಜಕ ಮಾತ್ರೆ ಸೇವಿಸಿ 24 ಗಂಟೆ ನಿರಂತರ ಸೆಕ್ಸ್‌, 50ರ ವೃದ್ಧ ಸೀದಾ ಆಸ್ಪತ್ರೆಗೆ – ಆಮೇಲೆ ಏನಾಯ್ತು?

    ಕಾಮೋತ್ತೇಜಕ ಮಾತ್ರೆ ಸೇವಿಸಿ 24 ಗಂಟೆ ನಿರಂತರ ಸೆಕ್ಸ್‌, 50ರ ವೃದ್ಧ ಸೀದಾ ಆಸ್ಪತ್ರೆಗೆ – ಆಮೇಲೆ ಏನಾಯ್ತು?

    ರೋಮ್‌: ಇತ್ತೀಚೆಗೆ ಜನರು ಲೈಂಗಿಕ ತೃಪ್ತಿಗಾಗಿ ಹಲವು ರೀತಿಯ ಕಸರತ್ತು ಮಾಡುತ್ತಾರೆ. ಲೈಂಗಿಕ ಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಔಷಧ (Medicine) ಹಾಗೂ ದೈಹಿಕ ಕಸರತ್ತುಗಳ ಮೊರೆ ಹೋಗುತ್ತಾರೆ. ಹೀಗೆಯೇ ಸೆಕ್ಸ್ ಲೈಫ್‌ ಚೆನ್ನಾಗಿರಬೇಕೆಂದು ವಯಾಗ್ರ ಸೇವಿಸಿದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಟಲಿಯಲ್ಲಿ ನಡೆದಿದೆ.

    ಜರ್ಮನಿಯ (German Tourist) 50 ವರ್ಷದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗ ನಿಮಿರುವಿಕೆಗಾಗಿ ವಯಾಗ್ರ (Viagra) ಮಾತ್ರೆ ಸೇವಿಸಿ 24 ಗಂಟೆಗೂ ಅಧಿಕ ಕಾಲ ಸೆಕ್ಸ್‌ನಲ್ಲಿ ತೊಡಗಿದ್ದಾನೆ. ಆರಂಭದಲ್ಲಿ ಆತನ ಗುಪ್ತಾಂಗದಲ್ಲಿ ನಿಧಾನವಾಗಿ ನೋವು ಕಾಣಿಸಿಕೊಂಡಿದೆ. ನಂತರ ನೋವು ತೀವ್ರವಾಗಿದೆ, ಇದರಿಂದ ಗಾಬರಿಯಾಗೊಂಡ ವ್ಯಕ್ತಿ ತಕ್ಷಣವೇ ಕಾರು ಏರಿ ಆಸ್ಪತ್ರೆಗೆ ತೆರಳಿದ್ದಾನೆ. ಆತನನ್ನ ಪರೀಕ್ಷಿಸಿದ ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ಗಿಂತಲೂ ಭಯಾನಕ – ಮುಂದಿನ ಸಾಂಕ್ರಾಮಿಕ ಎದುರಿಸಲು ಸಿದ್ಧರಾಗಿ: WHO ಎಚ್ಚರಿಕೆ

    ನಿರಂತರ ಸಂಭೋಗದಿಂದ ಗುಪ್ತಾಂಗದ ತುದಿಯಲ್ಲಿರುವ ಸೀಳಿನಲ್ಲಿ ಬಿರುಕುಬಿಟ್ಟು ರಕ್ತಸ್ರಾವವಾಗಿದೆ. ಆದ್ದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಇಟಲಿಯ ಗ್ರೊಸೆಟೊ ಆಸ್ಪತ್ರೆಯೊಂದರಲ್ಲಿ ವಿಚಿತ್ರ ಪ್ರಕರಣ ವರದಿಯಾಗಿದೆ. ರಜೆಯ ಮೇಲೆ ಇಟಲಿಗೆ ಪ್ರವಾಸಕ್ಕೆ ಬಂದಿದ್ದ ಜರ್ಮನಿಯ ವ್ಯಕ್ತಿ ನಿರಂತರ ಸಂಭೋಗದಿಂದ ಅಸ್ವಸ್ಥಗೊಂಡಿದ್ದಾನೆ. ಮೇ 11 ರಂದು ಮಿಸೆರಿಕಾರ್ಡಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಆತನ ಪತ್ನಿಯೂ ಆತನೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಂಬಿದ್ರೆ ನಂಬಿ… ಒಂದು ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ

    ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ ಸಂತ್ರಸ್ತ ಸೆಪ್ಟಿಕ್ ಆಘಾತದಿಂದ ಬಳಲುತ್ತಿದ್ದಾನೆ. ವೈದ್ಯರು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

  • ಪುರುಷರನ್ನ ಆಕರ್ಷಿಸಬೇಕಂತ ಕೋಟಿ ಕೋಟಿ ಖರ್ಚು ಮಾಡಿ 200 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

    ಪುರುಷರನ್ನ ಆಕರ್ಷಿಸಬೇಕಂತ ಕೋಟಿ ಕೋಟಿ ಖರ್ಚು ಮಾಡಿ 200 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

    ವಾಷಿಂಗ್ಟನ್‌: ಇತ್ತೀಚಿನ ದಿನಗಳಲ್ಲಿ ಮೇಕಪ್‌ (Makeup) ಮಾಡಿಕೊಳ್ಳದ ಮಹಿಳೆಯರೇ ಇಲ್ಲ. ಕೆಲವರಂತೂ ಮುಖಕ್ಕೆ ಬಣ್ಣ ಬಳಿದುಕೊಳ್ಳದೇ ಮೆನಯಿಂದಾಚೆ ಕಾಲಿಡೋದೆ ಇಲ್ಲ. ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕಾದರೂ ಒಂದು ಗಂಟೆ ಮೇಕಪ್‌ ಮಾಡಿಯೇ ತೀರುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ (Women) ತಾನು ಶಾಶ್ವತವಾಗಿ ಸೌಂದರ್ಯವತಿಯಾಗಿ ಕಾಣಬೇಕೆಂದು 200ಕ್ಕೂ ಹೆಚ್ಚು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.

    6 ಮಕ್ಕಳ ತಾಯಿಯಾಗಿರುವ 55 ವರ್ಷದ ಮಹಿಳೆ ಲೇಸಿ ತನ್ನನ್ನ ತಾನು ‘ಮಿಲಿಯನ್ ಡಾಲರ್ ಬಾರ್ಬಿ’ ಎಂದು ಕರೆದುಕೊಂಡಿದ್ದಾಳೆ. ಈಕೆ ಶಸ್ತ್ರಚಿಕಿತ್ಸೆ (Surgeries) ಮಾಡಿಸಿಕೊಳ್ಳಲು ಬರೋಬ್ಬರಿ 8 ಕೋಟಿ ರೂ. ಖರ್ಚು ಮಾಡಿದ್ದಾಳೆ. ಇದೀಗ ಹರೆಯದ ಹುಡುಗಿಯಂತೆ ಕಾಣುತ್ತಿರುವ ಆಕೆಯನ್ನ ನೋಡಿ ಅನೇಕರು ಹಿಂದೆ ಬಿದ್ದಿದ್ದಾರಂತೆ, ಈಕೆಯೊಂದಿಗೆ ಡೇಟ್‌ ಮಾಡಲು ಬಯಸುತ್ತಿದ್ದಾರಂತೆ. ಇದನ್ನೂ ಓದಿ: 276 ದಿನ ಕಕ್ಷೆಯಲ್ಲಿದ್ದು ಭೂಮಿಗೆ ವಾಪಸ್‌ ಆಯ್ತು ಚೀನಾ ಬಾಹ್ಯಾಕಾಶ ನೌಕೆ!

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಲೇಸಿಯ ನಿಜವಾದ ಹೆಸರು ಪೌಲಾ ಥೆಬರ್ಟ್‌. ಈಕೆಗೆ ಇನ್ಮುಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಂತೆ ಎಚ್ಚರಿಕೆ ವೈದ್ಯರು ನೀಡಿದ್ದಾರೆ. ಈ ರೀತಿಯ ಜೀವನ ಶೈಲಿಯಿಂದ ಮಹಿಳೆಯರು ದೂರವಿರುವಂತೆಯೂ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಭಯೋತ್ಪಾದನೆಗೆ ಹಣಕಾಸು ನೆರವು ನಿಲ್ಲಿಸಬೇಕು – ಬಹಿರಂಗ ಸಭೆಯಲ್ಲೇ ಪಾಕ್‌ ಸಚಿವನಿಗೆ ಪಂಚ್‌ಕೊಟ್ಟ ಜೈಶಂಕರ್‌

    ಲೇಸಿ (55) ಅಮೆರಿಕದ ವರ್ಜೀನಿಯಾದ ನಿವಾಸಿ. ತಾನು ಪುರುಷರನ್ನ ಆಕರ್ಷಿಕಸಬೇಕು ಅಂತಾ ಬಯಸುತ್ತಾಳೆ. ಅದಕ್ಕಾಗಿ 200ಕ್ಕೂ ಹೆಚ್ಚು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈಗ ಆಕೆಯ ಸೌಂದರ್ಯ ನೋಡಿದವರೆಲ್ಲರೂ ಡೇಟ್‌ ಮಾಡಲು ಬಯಸುತ್ತಾರೆ. ಅಲ್ಲದೇ ತನಗೆ 30 ವರ್ಷ ವಯಸ್ಸಿನ ಮಗನಿದ್ದು, ಅವನೂ ಈಕೆಯ ಸೌಂದರ್ಯಕ್ಕೆ ಮಾರುಹೋಗಿದ್ದಾನೆ ಎಂದು ಆಕೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  • ಗರ್ಭದಲ್ಲಿರುವ ಮಗು ಹೃದಯಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ – ಏಮ್ಸ್ ವೈದ್ಯರ ಸಾಧನೆ

    ಗರ್ಭದಲ್ಲಿರುವ ಮಗು ಹೃದಯಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ – ಏಮ್ಸ್ ವೈದ್ಯರ ಸಾಧನೆ

    ನವದೆಹಲಿ: ಗರ್ಭದಲ್ಲಿರುವ ಮಗುವಿನ ದ್ರಾಕ್ಷಿ ಗಾತ್ರದ ಹೃದಯಕ್ಕೆ ದೆಹಲಿಯ (Delhi) ಏಮ್ಸ್ (AIIMS) ವೈದ್ಯರು (Doctors) ಕವಾಟ ಹಿಗ್ಗುವಿಕೆಯ ಶಸ್ತ್ರಚಿಕಿತ್ಸೆ (Heart surgery) ನೀಡಿ ಯಶಸ್ವಿಯಾಗಿದ್ದಾರೆ.

    ಮೂರು ಬಾರಿ ಗರ್ಭಪಾತವಾಗಿದ್ದ 28 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಗುವಿನ ಹೃದಯದಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ವೈದ್ಯರು ಚಿಕಿತ್ಸೆ ಮೂಲಕ ಮಗುವಿನ ಆರೋಗ್ಯ ಸುಧಾರಣೆ ಸಾಧ್ಯ ಎಂದು ತಿಳಿಸಿದ್ದಾರೆ. ನಂತರ ದಂಪತಿ ಚಿಕಿತ್ಸೆಗೆ ಒಪ್ಪಿದ್ದರು. ಇದನ್ನೂ ಓದಿ: ಸಾರ್ವಜನಿಕರಿಂದ ಕ್ಲಾಸ್‌ -ಶಂಕುಸ್ಥಾಪನೆ ಮಾಡದೇ ಕಾಗೇರಿ ವಾಪಸ್

    husband forced a woman to eat human bones to get pregnant

    ಶಸ್ತ್ರಚಿಕಿತ್ಸೆಯ ನಂತರ ತಾಯಿ ಹಾಗೂ ಗರ್ಭದಲ್ಲಿರುವ ಮಗು ಇಬ್ಬರೂ ಕ್ಷೇಮವಾಗಿದ್ದಾರೆ. ಇಬ್ಬರ ಆರೋಗ್ಯದ ಮೇಲೂ ವೈದ್ಯರ ತಂಡ ನಿಗವಹಿಸಿದೆ.

    ತಾಯಿಯ ಗರ್ಭದಲ್ಲಿರುವಾಗಲೇ (Womb) ಮಗುವಿನ ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚಬಹುದು. ಗರ್ಭಾವಸ್ಥೆಯಲ್ಲಿ ಕಾಯಿಲೆಯ ತೀವ್ರತೆ ಕಡಿಮೆ ಇರುವುದರಿಂದ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆರೋಗ್ಯವಂತ ಮಗು ಪಡೆಯಲು ಸಾಧ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಚಿಕಿತ್ಸೆಯನ್ನು ಅಲ್ಟ್ರಾ ಸೌಂಡ್ (Ultrasound) ಮೂಲಕವೇ ನಿರ್ವಹಿಸಬೇಕು. ನಿಗದಿತ ಸಮಯದಲ್ಲಿ ಜಾಗರೂಕತೆಯಿಂದ ಚಿಕಿತ್ಸೆ ಮಾಡಿ ಮುಗಿಸಬೇಕು. ಇಲ್ಲವಾದಲ್ಲಿ ಮಗುವಿನ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವಕೀಲ, ಮಹಿಳೆ ಮಧ್ಯೆ ಬೀದಿ ಕಾಳಗ

  • ಹರಿಯಾಣದ ವೈದ್ಯರಿಗೆ ಡ್ರೆಸ್ ಕೋಡ್ – ಶಾರ್ಟ್ಸ್, ಜೀನ್ಸ್, ಸ್ಕರ್ಟ್, ಮೇಕಪ್ ಬ್ಯಾನ್

    ಹರಿಯಾಣದ ವೈದ್ಯರಿಗೆ ಡ್ರೆಸ್ ಕೋಡ್ – ಶಾರ್ಟ್ಸ್, ಜೀನ್ಸ್, ಸ್ಕರ್ಟ್, ಮೇಕಪ್ ಬ್ಯಾನ್

    ಚಂಡೀಗಢ: ಹರಿಯಾಣ (Haryana) ಸರ್ಕಾರ ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ (Govt Hospital) ಕೆಲಸ ಮಾಡುವ ವೈದ್ಯರಿಗೆ (Doctors) ಏಕರೂಪತೆಯನ್ನು ತರಲು ಹಾಗೂ ರೋಗಿಗಳಿಗೆ ಸಿಬ್ಬಂದಿಯನ್ನು ಗುರುತಿಸಲು ಸುಲಭವಾಗುವಂತೆ ಹೊಸ ಡ್ರೆಸ್ ಕೋಡ್ (Dress Code) ನೀತಿಯನ್ನು ಪ್ರಕಟಿಸಿದೆ.

    ಮೂಲಗಳ ಪ್ರಕಾರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್‌ಲೆಸ್ ಟಾಪ್ಸ್ ಹಾಗೂ ಸ್ಕರ್ಟ್ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳಾ ವೈದ್ಯರು ಮೇಕಪ್ ಹಾಗೂ ಭಾರವಾದ ಆಭರಣಗಳನ್ನು ಧರಿಸುವಂತಿಲ್ಲ ಮಾತ್ರವಲ್ಲದೇ ಉಗುರುಗಳನ್ನು ಉದ್ದವಾಗಿ ಬೆಳೆಸುವಂತಿಲ್ಲ. ಪುರುಷರು ತಮ್ಮ ಕಾಲರ್‌ಗಿಂತಲೂ ಉದ್ದವಾಗಿ ಕೂದಲನ್ನು ಬೆಳೆಸುವಂತಿಲ್ಲ ಎನ್ನಲಾಗಿದೆ.

    ಫೆಬ್ರವರಿ 9 ರಂದು ಹೊರಡಿಸಲಾದ ಈ ಹೊಸ ನೀತಿಯನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ತಿಳಿಸಲಾಗಿದೆ. ಡ್ರೆಸ್ ಕೋಡ್ ಅನ್ನು ಅನುಸರಿಸದ ಸಿಬ್ಬಂದಿ ಕರ್ತವ್ಯಕ್ಕೆ ಗೈರುಹಾಜರೆಂದು ಪರಿಗಣಿಸಲಾಗುತ್ತದೆ ಮತ್ತು ಕಠಿಣ ಕ್ರಮಕ್ಕೆ ಒಳಗಾಗುತ್ತಾರೆ ಎಂದು ಆದೇಶಿಸಲಾಗಿದೆ.

    ಇಷ್ಟಕ್ಕೂ ಹರಿಯಾಣದಲ್ಲಿ ವೈದ್ಯರಿಗೆ ಡ್ರೆಸ್ ಕೋಡ್‌ನ ಅಗತ್ಯವೇನು ಎಂದು ನೋಡಲು ಹೋದರೆ, ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ವೈದ್ಯರ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟವಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿಗೆ ಡ್ರೆಸ್ ಕೋಡ್ ಅನ್ನು ಅಳವಡಿಸಲಾಗಿದೆ. ಇದರಿಂದ ಸಿಬ್ಬಂದಿ ಸದಸ್ಯರ ದೃಷ್ಟಿಕೋನ ಹೆಚ್ಚಲಿದ್ದು, ರೋಗಿಗಳಿಗೆ ಉತ್ತಮ ಆರೋಗ್ಯ ಸೌಲಭ್ಯ ಪಡೆಯಲು ಸಹಾಯವಾಗುತ್ತದೆ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.

    ನಾವು ಖಾಸಗಿ ಆಸ್ಪತ್ರೆಗೆ ಹೋದಾಗಲೆಲ್ಲಾ ಅಲ್ಲಿನ ಒಬ್ಬ ಸಿಬ್ಬಂದಿಯೂ ಸಮವಸ್ತ್ರವಿಲ್ಲದೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗಿಲ್ಲ. ಯಾರೊಬ್ಬರೂ ಸಮವಸ್ತ್ರವನ್ನು ಧರಿಸುವುದಿಲ್ಲ. ಇದರಿಂದ ರೋಗಿಗಳು ಹಾಗೂ ವೈದ್ಯರ ನಡುವೆ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಹೀಗಾಗಿ ಈ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ವಿಜ್ ತಿಳಿಸಿದ್ದಾರೆ. ಇದನ್ನೂ ಓದಿ: 2022ರ ಬಜೆಟ್ ಓದಿ ನಗೆಪಾಟಲಿಗೀಡಾದ ರಾಜಸ್ಥಾನ ಸಿಎಂ ಗೆಹ್ಲೋಟ್

    ವರದಿಗಳ ಪ್ರಕಾರ ಆಸ್ಪತ್ರೆ ಸಿಬ್ಬಂದಿ ಯಾವುದೇ ಬಣ್ಣದ ಡೆನಿಮ್ ಜೀನ್ಸ್ ಧರಿಸುವಂತಿಲ್ಲ. ಸ್ವೆಟ್ ಶರ್ಟ್, ಡೆನಿಮ್ ಸ್ಕರ್ಟ್, ಶಾರ್ಟ್ಸ್, ಸ್ಟ್ರೆಚ್ ಮಾಡಬಹುದಾದ ಟೀ ಶರ್ಟ್‌ಗಳು ಅಥವಾ ಪ್ಯಾಂಟ್‌ಗಳು, ಟೈಟ್ ಪ್ಯಾಂಟ್‌ಗಳು, ಸೊಂಟದವರೆಗಿನ ಟಾಪ್‌ಗಳು, ಸ್ಟ್ರಾಪ್‌ಲೆಸ್ ಟಾಪ್, ಬ್ಯಾಕ್‌ಲೆಸ್ ಟಾಪ್, ಕ್ರಾಪ್ ಟಾಪ್, ಡೀಪ್ ನೆಕ್ ಟಾಪ್, ಆಫ್ ಶೋಲ್ಡರ್ ಬ್ಲೌಸ್ ಮತ್ತು ಸ್ನೀಕರ್ಸ್ ಅಥವಾ ಚಪ್ಪಲಿಗಳನ್ನೂ ಧರಿಸುವಂತಿಲ್ಲ ಎನ್ನಲಾಗಿದೆ.

    ಈ ನೀತಿ ವೈದ್ಯರಿಗೆ ಹಾಗೂ ನರ್ಸ್‌ಗಳಿಗೆ ಸೇರಿದಂತೆ ಆಸ್ಪತ್ರೆಯ ಭದ್ರತಾ ಸಿಬ್ಬಂದಿ, ವಾಹನ ಚಾಲಕರು, ನೈರ್ಮಲ್ಯ ಸಿಬ್ಬಂದಿ ಮತ್ತು ಅಡುಗೆಮನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಡ್ರೆಸ್ ಕೋಡ್ ಒಳಗೊಳ್ಳುತ್ತದೆ ಹಾಗೂ ಅವುಗಳನ್ನು ಸರಿಯಾಗಿ ಧರಿಸುವಂತೆ ತಿಳಿಸಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ 75 ಸಾವಿರ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ : ಮುಖೇಶ್ ಅಂಬಾನಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಾಂಜಾ ನಶೆಯಲ್ಲಿದ್ದ ವೈದ್ಯರ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರು- ಮತ್ತೆ 9 ಮಂದಿ ಅರೆಸ್ಟ್

    ಗಾಂಜಾ ನಶೆಯಲ್ಲಿದ್ದ ವೈದ್ಯರ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರು- ಮತ್ತೆ 9 ಮಂದಿ ಅರೆಸ್ಟ್

    ಮಂಗಳೂರು: ಶಿಕ್ಷಣ ಕಾಶಿ ಮಂಗಳೂರಿನಲ್ಲಿ (Mangaluru) ವೈದ್ಯರ ಗಾಂಜಾ ಘಾಟಿನ ನಶೆ (Drug Peddling) ಇನ್ನೂ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಪೊಲೀಸರು ಕೆದಕಿದಷ್ಟು ಹೆಚ್ಚು ಮಂದಿ ಈ ಪ್ರಕರಣದಲ್ಲಿ ಬಲೆಗೆ ಬೀಳುತ್ತಿದ್ದಾರೆ. ವೈದ್ಯರ ಗಾಂಜಾ ಘಾಟಿನ ಹಿಂದೆ ಬಿದ್ದ ಪೊಲೀಸರು ಇದೀಗ ಮತ್ತೆ 9 ಮಂದಿಯನ್ನು ಬಂಧಿಸಿದ್ದಾರೆ.

    ಡಾ. ಸಿದ್ದಾರ್ಥ್ ಪಾವಸ್ಕರ್, ಡಾ. ಸೂರ್ಯಜಿತ್ ದೇವ್, ಡಾ. ಪ್ರಣಯ್ ನಟರಾಜ್, ಡಾ. ಚೈತನ್ಯ ತುಮುಲುರಿ, ಡಾ. ಸುಧೀಂದ್ರ, ಡಾ. ಇಶ್ ಮಿಡ್ಡಾ, ಡಾ. ವಿದುಷ್ ಕುಮಾರ್, ಡಾ. ಶರಣ್ಯಾ, ಡಾ. ಆಯಿಷಾ ಮಹಮ್ಮದ್ ಬಂಧಿತ ಆರೋಪಿಗಳು. ಇವರೆಲ್ಲರೂ ಕೆಎಂಸಿ ವೈದ್ಯಕೀಯ ಕಾಲೇಜು, ಶ್ರೀನಿವಾಸ್ ಆಸ್ಪತ್ರೆ, ದುರ್ಗಾ ಸಂಜೀವಿನಿ ಸಂಸ್ಥೆಯಲ್ಲಿ ವೈದ್ಯಕೀಯ ಪದವಿ ಪಡೆಯುತ್ತಿದ್ದಾರೆ. ಡಾ. ಶರಣ್ಯಾ ಬಿಡಿಎಸ್ ವಿದ್ಯಾರ್ಥಿನಿಯಾಗಿದ್ದರೆ, ಉಳಿದವರು ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ- NIA ಚಾರ್ಜ್‍ಶೀಟ್‍ನಲ್ಲಿ ಸ್ಫೋಟಕ ಮಾಹಿತಿ ಬಯಲು

    ಬಂಧಿತರಲ್ಲಿ ಇಬ್ಬರು ವೈದ್ಯರು (Doctors), 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ (Medical Students). ಈ ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಡಾ. ಕಿಶೋರಿಲಾಲ್ ರಾಮ್ ಜೀಯೊಂದಿಗೆ ಸಂಪರ್ಕ ಹೊಂದಿದ್ದ ಗಾಂಜಾ ಪೆಡ್ಲರ್‌ಗಳು ಕೆಲವರು ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾರೆ.

    ಪ್ರಕರಣದ ಬಗ್ಗೆ ಮಂಗಳೂರು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಎಲ್ಲರಿಗೂ ಪಾಸಿಟಿವ್ ಬಂದಿದೆ. ಬಂಧಿತರಿಂದಲೇ ಮಾಹಿತಿ ಕಲೆಹಾಕಿ ಪೊಲೀಸರು ಪ್ರಕರಣದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹಿಟ್ ಆಂಡ್ ರನ್ ಕೇಸ್‌ಗೆ ಟ್ವಿಸ್ಟ್ – ಸಾರ್ವಜನಿಕರು, ಸಿಸಿಟಿವಿ ದೃಶ್ಯಗಳಿಂದ ನಿಜ ಬಯಲಿಗೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡ್ರಗ್ಸ್ ದಂಧೆ – ಕೆಎಂಸಿ ಆಸ್ಪತ್ರೆಯ ವೈದ್ಯರು ವಜಾ, ವಿದ್ಯಾರ್ಥಿಗಳು ಅಮಾನತು

    ಡ್ರಗ್ಸ್ ದಂಧೆ – ಕೆಎಂಸಿ ಆಸ್ಪತ್ರೆಯ ವೈದ್ಯರು ವಜಾ, ವಿದ್ಯಾರ್ಥಿಗಳು ಅಮಾನತು

    ಮಂಗಳೂರು: ನಗರದಲ್ಲಿ ವೈದ್ಯರ ಡ್ರಗ್ಸ್ ಜಾಲ ಪ್ರಕರಣದಲ್ಲಿ (Drug Peddling) ಸಿಕ್ಕಿಬಿದ್ದ ಇಬ್ಬರು ವೈದ್ಯರು (Doctors) ಹಾಗೂ 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು (Medical Students) ಕೆಎಂಸಿ ಆಸ್ಪತ್ರೆಯ (KMC Hospital) ಆಡಳಿತ ಮಂಡಳಿ ಅಮಾನತು ಮಾಡಿದೆ.

    ಅತ್ತಾವರ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ. ಸಮೀರ್, ಮೆಡಿಕಲ್ ಸರ್ಜನ್ ಡಾ. ಮಣಿಮಾರನ್ ಮುತ್ತು ಅಮಾನತಾಗಿರುವ ವೈದ್ಯರು. ಡಾ. ಕಿಶೋರಿಲಾಲ್, ಡಾ. ನದೀಯಾ ಸಿರಾಜ್, ಡಾ. ವರ್ಷಿಣಿ ಪತ್ರಿ, ಡಾ. ರಿಯಾ ಚಡ್ಡ, ಡಾ. ಇರಾ ಬಾಸಿನ, ಡಾ. ಕ್ಷಿತಿಜ್ ಗುಪ್ತಾ, ಡಾ. ಹರ್ಷ ಕುಮಾರ್ ವಿ.ಎಸ್. ಅಮಾನತು ಆಗಿರುವ ವೈದ್ಯಕೀಯ ವಿದ್ಯಾರ್ಥಿಗಳು. ಇದನ್ನೂ ಓದಿ: ಸಿಐಡಿ ಅಧಿಕಾರಿಗಳನ್ನು ನೂಕಿ ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಪರಾರಿ

    ಮಂಗಳೂರಿನಲ್ಲಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ದಂಧೆ ಹಾಗೂ ಗಾಂಜಾ ಸೇವನೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ವಜಾ ಮಾಡಿ ಗುತ್ತಿಗೆ ರದ್ದುಪಡಿಸಿದೆ. ಅದೇ ರೀತಿ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಆಸ್ಪತ್ರೆಯಿಂದ ಅಮಾನತು ಮಾಡಿದೆ. ಇದನ್ನೂ ಓದಿ: 15 ದಿನಗಳಿಂದ ಮಾಗಡಿ ತಹಶೀಲ್ದಾರ್ ನಾಪತ್ತೆ‌

    ಮಂಗಳೂರು ಕಮಿಷನರ್ ಕಚೇರಿಗೆ ಆಗಮಿಸಿರುವ ಕೆಎಂಸಿ ಡೀನ್ ಉನ್ನಿಕೃಷ್ಣನ್ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಬಗ್ಗೆ ಪೊಲೀಸ್ ಕಮಿಷನರ್‌ಗೆ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್

    ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್

    ಇಸ್ಲಾಮಾಬಾದ್: ಭಾರತದೊಂದಿಗೆ (India) 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನವು (Pakistan) ತನ್ನ ಪಾಠ ಕಲಿತಿದೆ. ಇನ್ಮುಂದೆ ಪಾಕಿಸ್ತಾನವು ಶಾಂತಿಯಿಂದಿರಲು ಬಯಸುತ್ತದೆ. ಬಾಂಬ್ ಮತ್ತು ಮದ್ದು ಗುಂಡುಗಳಿಗಾಗಿ ಸಂಪನ್ಮೂಲಗಳನ್ನ ವ್ಯರ್ಥ ಮಾಡಲು ಬಯಸುವುದಿಲ್ಲ ಎಂದು ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ.

    ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಷರೀಫ್, ಪಾಕಿಸ್ತಾನ ಇನ್ನುಮುಂದೆ ಶಾಂತಿಯಿಂದಿರಲು ಬಯಸುತ್ತದೆ. ಆದ್ರೆ ಕಾಶ್ಮೀರದಲ್ಲಿ ಏನಾಗುತ್ತಿದೆ ಸಮಸ್ಯೆ, ಅದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಇದೇ ವೇಳೆ `ಮಾನವ ಹಕ್ಕುಗಳ ಉಲ್ಲಂಘನೆ’ ಆರೋಪದ ಕುರಿತು ಪ್ರತಿಕ್ರಿಯಿಸಿ, ಅವುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿ ರುವಾರಿ ಅಬ್ದುಲ್ ರೆಹಮಾನ್ ಮಕ್ಕಿ ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ

    `ನಮ್ಮಲ್ಲಿ ಇಂಜಿನಿಯರ್‌ಗಳು (Engineers), ವೈದ್ಯರು (Doctors) ಹಾಗೂ ನುರಿತ ಕಾರ್ಮಿಕರಿದ್ದಾರೆ. ಈ ಸಂಪನ್ಮೂಲವನ್ನ ಸದ್ಬಳಕೆ ಮಾಡಿಕೊಂಡು ಎರಡೂ ರಾಷ್ಟ್ರಗಳು ಬೆಳೆಯಲು ಸಹಕರಿಸುತ್ತೇವೆ. ಜೊತೆಗೆ ಈ ಪ್ರದೇಶದಲ್ಲಿ ಶಾಂತಿಯ ವಾತಾವರಣ ನಿರ್ಮಿಸಲು ಬಯಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: `ಅಭಿವೃದ್ಧಿ ಮಂತ್ರ, ಹಿಂದುತ್ವದ ಅಜೆಂಡಾ’ ಬಿಜೆಪಿಯ ಅಸ್ತ್ರ – ಇನ್ನೆರಡು ತಿಂಗಳು ರಾಜ್ಯದಲ್ಲಿ ಮೋದಿ ಹವಾ

    ಶಾಂತಿಯುತವಾಗಿ ಬದುಕುವುದು, ಪ್ರಗತಿ ಸಾಧಿಸುವುದು ಅಥವಾ ಪರಸ್ಪರ ಜಗಳವಾಡುವುದು, ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದು ನಮಗೆ ಬಿಟ್ಟದ್ದು. ಆದ್ರೆ ನಾವು ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ನಮ್ಮ ದೇಶದ ಹೆಚ್ಚಿನ ಜನ ನೋವನ್ನು ಅನುಭವಿಸಿದ್ದಾರೆ. ಬಡತನ, ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಅದರಿಂದ ನಾವು ಪಾಠ ಕಲಿತಿದ್ದೇವೆ. ಹಾಗಾಗಿ ಇನ್ಮುಂದೆ ಶಾಂತಿಯಿಂದ ನೆಲೆಸಿ, ನಮ್ಮ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗುತ್ತೇವೆ ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಿಜಿ, ಹಾಸ್ಟೆಲ್ ಬಿಟ್ಟು ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಹುಡ್ಗೀರು – ಮಂಗಳೂರು ಡ್ರಗ್ಸ್‌ ದಂಧೆಯ ರೋಚಕ ಸತ್ಯ ಬಯಲು

    ಪಿಜಿ, ಹಾಸ್ಟೆಲ್ ಬಿಟ್ಟು ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಹುಡ್ಗೀರು – ಮಂಗಳೂರು ಡ್ರಗ್ಸ್‌ ದಂಧೆಯ ರೋಚಕ ಸತ್ಯ ಬಯಲು

    ಮಂಗಳೂರು: ಇಲ್ಲಿನ ಪ್ರತಿಷ್ಠಿತ ಕಾಲೇಜಿನ ವೈದ್ಯರು (Doctors) ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರು (Medical Student) ಭಾಗಿಯಾಗಿದ್ದ ಭಾರೀ ಹೈಪ್ರೊಫೈಲ್ ಗಾಂಜಾ ದಂಧೆ ಭೇದಿಸಿರುವ ಮಂಗಳೂರು ಪೊಲೀಸರು (Mangaluru Police) ಅನೇಕ ರೋಚಕ ಸತ್ಯಗಳನ್ನ ಬಯಲಿಗೆಳೆದಿದ್ದಾರೆ.

    ಹೌದು. ಬುಧವಾರ ತಡರಾತ್ರಿವರೆಗೂ ನಡೆಸಿದ ವಿಚಾರಣೆಯಲ್ಲಿ ಮಂಗಳೂರಿನ ಇನ್ನೂ ಮೂರ್ನಾಲ್ಕು ಕಾಲೇಜುಗಳ ಹೆಸರು ಕೇಳಿಬಂದಿದೆ. ಡ್ರಗ್ (Drugs) ಪೆಡ್ಲರ್ ನೀಲ್ ಮಾಹಿತಿ ಆಧರಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನಿರ್ದೇಶನದ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಕೆಲ ಕಾಲೇಜು ವಿದ್ಯಾರ್ಥಿಗಳ ಮೇಲೂ ಎಫ್‌ಐಆರ್ ದಾಖಲಾಗಿದೆ.

    ಗಾಂಜಾ ನಶೆಗೆ ಬಿದ್ದದ್ದು ಹೇಗೆ?: ಗಾಂಜಾ ದಂಧೆಗೆ ಬಿದ್ದಿದ್ದ ವಿದ್ಯಾರ್ಥಿನಿಯರು ಡ್ರಗ್ಸ್‌ಗಾಗಿ ಪಿಜಿ, ಹಾಸ್ಟೆಲ್ (PG, Hostel) ಬಿಟ್ಟು ಲಿವಿಂಗ್ ರಿಲೇಷನ್‌ಶಿಪ್ (Live In Relationship) ಹೆಸರಲ್ಲಿ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಬಾಯ್‌ಫ್ರೆಂಡ್‌ಗಳಿಂದ ಗಾಂಜಾ ನಶೆಗೆ ಬಿದ್ದಿದ್ದರು ಎಂದು ಹೇಳಲಾಗಿದೆ. ಇದನ್ನೂ ಓದಿ: ಹೈಪ್ರೊಫೈಲ್ ಗಾಂಜಾ‌ ದಂಧೆ -ಮಂಗಳೂರಿನ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಅರೆಸ್ಟ್‌

    ಪೆಡ್ಲರ್ ಸ್ಫೋಟಕ ರಹಸ್ಯ: ಮಂಗಳೂರಿನ ಗಾಂಜಾ ದಂಧೆಗೆ ಸಂಬಂಧಿಸಿದಂತೆ ಅನೇಕ ಸ್ಫೋಟಕ ರಹಸ್ಯಗಳನ್ನ ಹೊರತೆಗೆದಿದ್ದಾರೆ. ಯು.ಕೆ ಪ್ರಜೆಯಾಗಿರುವ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ ಶಾ (38) ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕೋಟಾದ ಅಡಿ ಮಂಗಳೂರಿನಲ್ಲಿ ಮೆಡಿಕಲ್ ಸೀಟ್ ಪಡೆದು ವಿದ್ಯಾಭ್ಯಾಸ ಮಾಡ್ತಿದ್ದ. ಪದೇ – ಪದೇ ಫೇಲ್ ಆಗ್ತಾ ಇದ್ದರೂ 15 ವರ್ಷಗಳಿಂದ ಒಂದೇ ಕಾಲೇಜಿನಲ್ಲಿ ಓದಿಕೊಂಡಿದ್ದ. ವಿದ್ಯಾಭ್ಯಾಸ ಮಾಡುವ ಸೋಗಿನಲ್ಲಿ ಇತರ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡ್ತಿದ್ದ. ಬಂಟ್ಸ್ (ಬಂಟರ ಸಮುದಾಯ) ಹಾಸ್ಟೆಲ್‌ನಲ್ಲಿರುವ ತನ್ನ ಫ್ಲಾಟ್‌ನಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ನೀಲ್, ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುತ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.

    ಮಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿಗಳ ಡ್ರಗ್ಸ್ ಜಾಲದ ಬೆನ್ನತ್ತಿದ ಪೊಲೀಸರು ಇನ್ನೂ ಮೂವರನ್ನ ಬಂಧಿಸಿದ್ದಾರೆ. ಪೆಥಾಲಜಿ ಎಂಡಿ ಓದುತ್ತಿದ್ದ ತುಮಕೂರು ಮೂಲದ ಹರ್ಷ ಕುಮಾರ್, ಡಿ ಫಾರ್ಮಾ ಅಂತಿಮ ವರ್ಷ ಓದುತ್ತಿದ್ದ ಕೊಚ್ಚಿ ಮೂಲದ ಆಡೋನ್ ದೇವ್ ಹಾಗೂ ಮಂಗಳೂರು ಬಂದರಿನಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದ ಮಹಮ್ಮದ್ ಅಫ್ಸರ್ ಮೂವರನ್ನು ಬಂಧಿಸಲಾಗಿದೆ. ಡ್ರಗ್ಸ್ ಜಾಲದ ಕಿಂಗ್ ಪಿನ್ ಇಂಗ್ಲೆಂಡ್ ಪ್ರಜೆ ಕಿಶೋರಿಲಾಲ್ ನೀಡಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ – ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

    ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರು ಭಾಗಿಯಾಗಿದ್ದ ಭಾರೀ ಹೈಪ್ರೊಫೈಲ್ ಗಾಂಜಾ ದಂಧೆ ಮಂಗಳೂರು ಪೊಲೀಸರು ಬುಧವಾರ ಕೆ.ಎಂ.ಸಿ. ಅತ್ತಾವರ, ಕೆ.ಎಂ.ಸಿ ಮಣಿಪಾಲ, ದೇರಳಕಟ್ಟೆಯ ಯೆನೇಪೋಯಾ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನು ಬಂಧಿಸಿದದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k