Tag: doctors

  • ತಲೆ ಸುತ್ತಿ ಬಿದ್ದ ಮಗ ಆಸ್ಪತ್ರೆಯಲ್ಲಿ ಸಾವು – ಮೃತದೇಹ ಕೊಡದೆ ಪೊಲೀಸ್ರನ್ನ ಕರೆಸಿದ್ರು!

    ತಲೆ ಸುತ್ತಿ ಬಿದ್ದ ಮಗ ಆಸ್ಪತ್ರೆಯಲ್ಲಿ ಸಾವು – ಮೃತದೇಹ ಕೊಡದೆ ಪೊಲೀಸ್ರನ್ನ ಕರೆಸಿದ್ರು!

    ಬೆಂಗಳೂರು: ವೈದ್ಯೋ ನಾರಾಯಣ ಹರಿ ಅನ್ನೋ ಮಾತಿದೆ. ಆದರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಮೃತಪಟ್ಟಿದ್ದರೂ, ಬಾಲಕನ ಮೃತದೇಹವನ್ನ ಸಹ ಕೊಡದೆ ವೈದ್ಯರು ದರ್ಪ ತೋರಿದ್ದಾರೆ.

    ಮಹಾಲಕ್ಷ್ಮಿ ಲೇಔಟ್ ಸುರೇಶ್ ಮತ್ತು ಅಂಜಲಿಯ ದಂಪತಿಯ 12 ವರ್ಷದ ಮಗೇಂದ್ರನ್ ವೈದ್ಯರ ಬೇಜಾವ್ದಾರಿತನಕ್ಕೆ ಮೃತಪಟ್ಟ ಬಾಲಕ.

    ಗುರುವಾರ ಬೆಳಗ್ಗೆ ತಲೆ ಸುತ್ತಿ ಬಿದ್ದ ಎಂದು ಮಗೇಂದ್ರನ್ ನನ್ನು ಗೋರಗುಂಟೆಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಬಿಲ್ ಕಟ್ಟುವವರೆಗೆ ಚಿಕಿತ್ಸೆಯನ್ನು ಕೊಡಲಿಲ್ಲ. ಬಳಿಕ 30 ಸಾವಿರ ಹಣ ಕಟ್ಟಿದ ಮೇಲೆ ಚಿಕಿತ್ಸೆ ಶುರು ಮಾಡಿದ್ದಾರೆ. ನಾವು ಮಗವನ್ನು ಮುಟ್ಟಿದಾಗ ಆತನ ದೇಹ ತಣ್ಣಾಗಿರುವುದು ಕಂಡು ಬಂದಿದೆ. ಈ ವೇಳೆ ಏನಾಗಿದೆ ಹೇಳಿ ಅಂತಾ ಕೇಳಿದೆವು. ಆಗ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಅಂತಾ ಹೇಳಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

    ಇನ್ನು ಬಾಲಕ ಮಧ್ಯಾಹ್ನವೇ ಮೃತಪಟ್ಟಿದ್ದು, ಮಗನ ಮೃತದೇಹ ಕೊಡಿ ಅಂತಾ ಕೇಳಿದರೆ 5 ನಿಮಿಷ, 10 ನಿಮಿಷ ಅಂತಾ ಹೇಳಿಕೊಂಡು ಬಂದಿದ್ದಾರೆ. ರಾತ್ರಿ 8 ಗಂಟೆ ಕಳೆದ್ರೂ ಬಾಲಕನ ಮೃತದೇಹವನ್ನ ಕೊಡದೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಇನ್ನೂ ಪೊಲೀಸರನ್ನ ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರಲ್ಲ. ನಮಗೆ ಕರೆ ಬಂತು, ಗಲಾಟೆಯಾಗುತ್ತದೆ ಅಂತಾ ಬಂದಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ.

    ಮಗ ಸಾಯಲು ವೈದ್ಯರೇ ಕಾರಣ. ನಾವು ಮೃತ ದೇಹ ಕೇಳಿದರೆ ಪೋಲೀಸರನ್ನ ಕರೆಸಿದ್ದಾರೆ. ಇದು ಏನು ಆತ್ಯಹತ್ಯೆ ಅಥವಾ ಅಪಘಾತ ಅಲ್ಲ. ಆದರು ಪೊಲೀಸರನ್ನು ಕರೆಸಿ ವೈದ್ಯರು ತಮ್ಮ ತಪ್ಪನ್ನ ಮುಚ್ಚಲು ಈ ರೀತಿ ಮಾಡಿದ್ದಾರೆ. ಮಗು ಯಾಕೆ ಮೃತಪಟ್ಟಿದೆ ಅಂತಾ ಕೇಳಿದರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ ಅಂತಿದ್ದಾರೆ ಎಂದು ಮಗೇಂದ್ರನ್ ತಂದೆ ಶರತ್ ನೋವಿನಿಂದ ಹೇಳಿಕೊಂಡಿದ್ದಾರೆ.

  • ರಸ್ತೆ ಬದಿ ಗೋಡೆಗೆ ಕಾರು ಡಿಕ್ಕಿ – ವೈದ್ಯ ದಂಪತಿ ಸೇರಿ ಒಂದೇ ಕುಟುಂಬದ ನಾಲ್ವರ ಸಾವು

    ರಸ್ತೆ ಬದಿ ಗೋಡೆಗೆ ಕಾರು ಡಿಕ್ಕಿ – ವೈದ್ಯ ದಂಪತಿ ಸೇರಿ ಒಂದೇ ಕುಟುಂಬದ ನಾಲ್ವರ ಸಾವು

    ಬಳ್ಳಾರಿ: ರಸ್ತೆ ಬದಿ ಗೋಡೆಗೆ ಕಾರು ಡಿಕ್ಕಿಯಾಗಿ ವೈದ್ಯ ದಂಪತಿ ಸೇರಿದಂತೆ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಬಳ್ಳಾರಿಯ ಸೋಮಸಮುದ್ರ ಗ್ರಾಮದ ಹೊರವಲಯದ ರಸ್ತೆ ಬಳಿ ನಡೆದಿದೆ.

    ವೈದ್ಯ ಸಂತೋಷ್, ಅವರ ಪತ್ನಿ ಅರ್ಚನಾ, ಮಗಳು ಲಕ್ಷ್ಮಿ, ತಂದೆ ಸಿದ್ರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಸಂತೋಷ್ ತಾಯಿ ಲೀಲಾವತಿ ಹಾಗೂ ಅವರ ಮೊಮ್ಮಗ ತನಿಷ್ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ವಿಫ್ಟ್ ಕಾರಿನಲ್ಲಿ ವೈದ್ಯರ ಕುಟುಂಬ ಪ್ರಯಾಣಿಸುತ್ತಿದ್ದು, ಅತಿವೇಗದಿಂದ ಕಾರು ಚಲಾಯಿಸಿ ರಸ್ತೆ ಬದಿಗೆ ಗೋಡೆಗೆ ಗುದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಸ್ಥಳಕ್ಕೆ ಕುರುಗೋಡು ಪೊಲೀಸರು ಹಾಗೂ ಜಿಲ್ಲಾ ಎಸ್ಪಿ ಅರುಣ್ ರಂಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಅಭಿಮಾನಿಗಳ ಹಾರೈಕೆಯಿಂದ ಚೇತರಿಕೆ ಕಂಡಿದ್ದೀನಿ, ಅವರ ಪ್ರೀತಿಗೆ ನಾನು ಆಭಾರಿ: ಜಯಂತಿ

    ಅಭಿಮಾನಿಗಳ ಹಾರೈಕೆಯಿಂದ ಚೇತರಿಕೆ ಕಂಡಿದ್ದೀನಿ, ಅವರ ಪ್ರೀತಿಗೆ ನಾನು ಆಭಾರಿ: ಜಯಂತಿ

    ಬೆಂಗಳೂರು: ಹಿರಿಯ ನಟಿ ಜಯಂತಿ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

    ವಿಕ್ರಂ ಆಸ್ಪತ್ರೆಯಲ್ಲಿ ನಟಿ ಜಯಂತಿ ಆರೋಗ್ಯ ಕುರಿತಾಗಿ ವಿಲ್ ಚೇರ್ ನಲ್ಲಿ ಬಂದು ಮಾತನಾಡಿ, ನಾನು ಬರುವಾಗ ಹೇಗಿದ್ದೆ ಈಗಲೂ ಚೆನ್ನಾಗಿ ಇದ್ದೇನೆ. ವೈದ್ಯರು ನನಗೆ ಮರುಜನ್ಮ ಕೊಟ್ಟಿದ್ದಾರೆ. ಮಗು ತರ ನನ್ನನ್ನು ನೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳ ಪ್ರೀತಿಗೆ ನಾನು ಆಭಾರಿ ಎಂದು ಭಾವುಕರಾಗಿ ಮಾತನಾಡಿದ್ದಾರೆ.

    ಡಾ. ಸತೀಶ್ ಮಾತನಾಡಿ, 10 ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಇದ್ದರು.  ಜಯಂತಿ ಅವರು ಆರೋಗ್ಯ ಚೇತರಿಕೆಯಾಗಿದ್ದು,  ಇಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದಾರೆ.

    ಅಮ್ಮ ಆರಾಮವಾಗಿದ್ದಾರೆ. ಫಿಸಿಯೋಥೆರಪಿ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಡಯೆಟ್ ಚಾರ್ಟ್ ಹೇಳಿದ್ದಾರೆ. ಅಮ್ಮನಿಗೆ ಸ್ವಲ್ಪ ಇದೆಲ್ಲ ಕಷ್ಟವಾಗಬಹುದು. ಆದರೆ ಹತ್ತು ದಿನ ಬಳಿಕ ಮತ್ತೆ ರೂಟೀನ್ ಚಕಪ್ ಇದೆ. ಆಗ ಆಸ್ಪತ್ರೆಗೆ ಬರಬೇಕು. ಅಮ್ಮನಿಗೆ ರೂಮರ್ಸ್ ಬಗ್ಗೆ ಏನು ಹೇಳಿರಲಿಲ್ಲ. ಆದರೆ ಇವತ್ತು ಬೆಳಗ್ಗೆ ಹೇಳಿದೆ. ಆಗ ಅಮ್ಮ ಮೊದಲು ಸ್ವಲ್ಪ ಬೇಸರ ಮಾಡಿಕೊಂಡಿದ್ದರು. ನಂತರ ಬಿಡಪ್ಪ ಅಭಿಮಾನಿಗಳ ಹಾರೈಕೆ ಇರುವುದಕ್ಕೆ ಚೇತರಿಕೆ ಕಂಡಿದ್ದೀನಿ ಎಂದು ಹೇಳಿದ್ರು ಅಂತಾ ಮಗ ಕೃಷ್ಣ ಕುಮಾರ್ ಹೇಳಿದ್ದಾರೆ.

    ಮಾರ್ಚ್ 26 ಸೋಮವಾರ ಸ್ಯಾಂಡಲ್‍ವುಡ್ ಅಭಿನಯ ಶಾರದೆ ಜಯಂತಿ ಅವರು ಅಸ್ವಸ್ಥರಾಗಿದ್ದು, ಸುಮಾರು ಬೆಳಗ್ಗೆ 11 ಗಂಟೆಗೆ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.

  • ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ವೈದ್ಯ ದಂಪತಿ ಆತ್ಮಹತ್ಯೆ!

    ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ವೈದ್ಯ ದಂಪತಿ ಆತ್ಮಹತ್ಯೆ!

    ಮೈಸೂರು: ವೈದ್ಯ ದಂಪತಿ ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಸರಸ್ವತಿಪುಂ 14ನೇ ಮೇನ್ ನಲ್ಲಿ ನಡೆದಿದೆ.

    ಡಾ. ಸತೀಶ್ ಹಾಗೂ ಡಾ. ವೀಣಾ ಆತ್ಮಹತ್ಯೆಗೆ ಶರಣಾದ ದಂಪತಿ. ಕುಕ್ಕರಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇವರ ಮಗ ಮೃತಪಟ್ಟಿದ್ದ. ಏಕೈಕ ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಇವರು ಇಂದು ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.


    ಸತೀಶ್ ಹಾಗೂ ವೀಣಾ ಮಗನನ್ನು ಕಳೆದು ಕೊಂಡು ನೋವಿನಲ್ಲಿದ್ದರು. ಈ ನೋವಿನಿಂದ ಹೊರಬರಲು ಸಮಾಜಸೇವೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ನಂತರ ಇಂದು ಮಧ್ಯಾಹ್ನ ಸರಸ್ವತಿ ಪುರಂನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

    ಸದ್ಯ ಘಟನಾ ಸ್ಥಳಕ್ಕೆ ಸರಸ್ವತಿಪುರಂ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಕಂಟೈನರ್ ಗೆ ಡಿಕ್ಕಿಯಾಗಿ 300 ಮೀಟರ್ ಜಾರಿಕೊಂಡ ಹೋದ ಕಾರ್

    ಕಂಟೈನರ್ ಗೆ ಡಿಕ್ಕಿಯಾಗಿ 300 ಮೀಟರ್ ಜಾರಿಕೊಂಡ ಹೋದ ಕಾರ್

    -ಗೆಳಯನ ಹುಟ್ಟುಹಬ್ಬ ಆಚರಿಸಿ ವಾಪಾಸ್ಸಾಗ್ತಿದ್ದ ಮೂವರು ಏಮ್ಸ್ ವೈದ್ಯರ ಸಾವು

    ನವದೆಹಲಿ: ಮಥುರಾ ಸಮೀಪದ ಯಮುನಾ ಎಕ್ಸ್ ಪ್ರೆಸ್ ನಲ್ಲಿ ಕಂಟೈನರ್ ಗೆ ಕಾರ್ ಡಿಕ್ಕಿಯಾಗಿ ಮೂವರು ದೆಹಲಿಯ ಏಮ್ಸ್ ವೈದ್ಯರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ಇಂದು ಮುಂಜಾನೆ ನಡೆದಿದೆ. ಘಟನೆಯ ಸಂದರ್ಭದಲ್ಲಿ ಕಾರ್ ನಲ್ಲಿದ್ದ ಇತರೇ ನಾಲ್ಕು ವೈದ್ಯರಿಗೆ ಗಾಯಗಳಾಗಿದ್ದು, ವೈದ್ಯರು ದೆಹಲಿಯಿಂದ ಆಗ್ರಾ ಕಡೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.

    ಅಪಘಾತದಲ್ಲಿ ಗಾಯಗೊಂಡ ವೈದ್ಯರನ್ನು ಡಾ. ಕ್ಯಾಥರೀನ್ ಹಾಲಮ್, ಡಾ. ಜಿತೇಂದರ್ ಮೌರ್ಯ ಮತ್ತು ಡಾ. ಅಭಿನವ್ ಸಿಂಗ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರ್ಷದ್ ವಾಂಖೆಡೆ (34), ಡಾ.ಯಶ್‍ಪ್ರೀತ್ ಸಿಂಗ್ (25), ಡಾ. ಹೆಂಬಲಾ (24) ಎಂಬವರು ಘಟನೆಯಲ್ಲಿ ಮೃತಪಟ್ಟಿದ್ದಾರೆ.

    ಅಪಘಾತವು ಭಾನುವಾರ ರಾತ್ರಿ 2.30 ಸುಮಾರಿಗೆ ನಡೆದಿದ್ದು, ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಹರ್ಷದ್ ವಾಂಖೆಡೆ ಎಂಬವರ ಹುಟ್ಟುಹಬ್ಬ ಸಂಭಮಾಚರಣೆಯಲ್ಲಿ ಭಾಗವಹಿಸಿ ಆಗ್ರಾದಿಂದ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ. ಘಟನೆ ವೇಳೆ ಡಾ. ಹರ್ಷದ್ ಅವರು ಕಾರನ್ನು ಚಾಲಯಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಕಾರು ಚಾಲಯಿಸುವ ವೇಳೆ ಚಾಲಕ ನಿದ್ರೆಗೆ ಜಾರಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಅಪಘಾತದಲ್ಲಿ ಗಾಯಗೊಂಡವರು ಪ್ರಾಥಮಿಕ ತನಿಖೆ ವೇಳೆ ನೀಡಿದ ಪ್ರಕಾರ ಕಾರಿನಲ್ಲಿದ್ದ ಎಲ್ಲರೂ ನಿದ್ರೆಗೆ ಜಾರಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

    ಘಟನೆ ವೇಳೆ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣದಿಂದ ಅಪಘಾತವಾದ ಬಳಿಕ ಸುಮಾರು 300 ಮೀ ದೂರ ರಸ್ತೆಯಲ್ಲಿ ಜಾರಿಕೊಂಡಿ ಹೋಗಿದೆ. ಅಪಘಾತ ನಡೆದ ಅರ್ಧ ಗಂಟೆಯಲ್ಲಿ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.

    ಘಟನೆ ವೇಳೆ ಕಾರಿನಲ್ಲಿದ್ದ ಡಾ. ಅಭಿನವ್ ಸಿಂಗ್ ಬಿಹಾರ, ಡಾ. ಕ್ಯಾಥರೀನ್ ಹಾಲಮ್ ತ್ರಿಪುರ, ಡಾ. ಮಹೇಶ್ ಕುಮಾರ್ ಬಿಹಾರ, ಜಿತೇಂದರ ಮೌರ್ಯ ಅಮೀರ್ ಪುರ ಮೂಲದವರು ಎಂದು ತಿಳಿದು ಬಂದಿದೆ.

  • ಅಪಘಾತಕ್ಕೀಡಾದ ಯುವಕನ ಕಾಲು ಕತ್ತರಿಸಿ, ತಲೆದಿಂಬು ಮಾಡಿದ ವೈದ್ಯ!

    ಅಪಘಾತಕ್ಕೀಡಾದ ಯುವಕನ ಕಾಲು ಕತ್ತರಿಸಿ, ತಲೆದಿಂಬು ಮಾಡಿದ ವೈದ್ಯ!

    ಲಕ್ನೋ: ರಸ್ತೆ ಅಪಘಾತದಲ್ಲಿ ತುಂಡಾದ ಅರ್ಧ ಕಾಲನ್ನೇ ರೋಗಿಗೆ ದಿಂಬುವಿನಂತೆ ಬಳಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಝಾನ್ಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಉತ್ತರಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಯುವಕನ ಕಾಲನ್ನೇ ಕತ್ತರಿಸಬೇಕೆಂದು ವೈದ್ಯರು ಹೇಳಿದ್ದರು. ಕಾಲು ಕತ್ತರಿಸಿದ ವೈದ್ಯರು ಗಾಯಾಳುವಿಗೆ ತಲೆಗೆ ದಿಂಬು ಸಿಗದ ಹಿನ್ನೆಲೆಯಲ್ಲಿ ಕತ್ತರಿಸಿದ ಕಾಲನ್ನೇ ಆತನ ತಲೆದಿಂಬಾಗಿ ಬಳಸಿದ್ದಾರೆ.

    ಝಾನ್ಸಿ ಜಿಲ್ಲೆಯ ಮೌರಾನಿಪುರ್ ಪ್ರದೇಶದಲ್ಲಿ ಶನಿವಾರ ಶಾಲಾ ಬಸ್ಸೊಂದು ಟ್ರ್ಯಾಕ್ಟರ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಧ್ಯಾನ್‍ಶ್ಯಾಮ್ ಕಾಲು ಭಾಗಶಃ ತುಂಡಾಗಿದೆ. ಅಲ್ಲದೇ ಬಸ್‍ನಲ್ಲಿದ್ದ 25 ವಿದ್ಯಾರ್ಥಿಗಳು ಕೂಡ ಗಾಯಗೊಂಡಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡ ಧ್ಯಾನ್‍ಶ್ಯಾಮ್‍ರನ್ನು ಸುಮಾರು 45 ಕಿ.ಮೀ ದೂರವಿರುವ ಝಾನ್ಸಿಯ ಸರ್ಕಾರಿ ಮಹಾರಾಣಿ ಲಕ್ಷ್ಮೀಭಾಯಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಧ್ಯಾನ್‍ಶ್ಯಾಮ್‍ಗೆ ಚಿಕಿತ್ಸೆ ನೀಡಿದ ವೈದ್ಯರು ಉಳಿದ ಅರ್ಧ ಕಾಲಿನ ತುಂಡನ್ನು ಆತನ ತಲೆಯ ಕೆಳಗಡೆ ದಿಂಬುವಿನಂತೆ ಇಟ್ಟಿದ್ದಾರೆ.

    ಆಸ್ಪತ್ರೆಯ ಸಿಬ್ಬಂದಿಯ ಈ ನಡತೆಗೆ ಧ್ಯಾನ್‍ಶ್ಯಾಮ್ ಸಂಬಂಧಿಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆ ಬಗ್ಗೆ ಅಧಿಕಾರಿಗಳು ತನಿಖೆಗೆ ಮಾಡುವಂತೆ ಆದೇಶಿದ್ದಾರೆ.

    ಧ್ಯಾನ್‍ಶ್ಯಾಮ್ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೇ ಆಸ್ಪತ್ರೆ ತುರ್ತು ವೈದ್ಯಕೀಯ ಅಧಿಕಾರಿ ಡಾ. ಮಹೇಂದ್ರ ಪಾಲ್ ಸಿಂಗ್, ಹಿರಿಯ ನಿವಾಸಿ ಡಾ. ಅಲೋಕ್ ಅಗರ್ವಾಲ್ ಮತ್ತು ದಾದಿಯರು ದೀಪಾ ನಾರಂಗ್ ಮತ್ತು ಶಶಿ ಶ್ರೀವಾಸ್ತವರನ್ನು ಅಮಾನತುಗೊಳಿಸುವಂತೆ ಆದೇಶಿಸಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಹೇಳಿದ್ದಾರೆ.

  • ಆಟವಾಡ್ತಿದ್ದಾಗ ಕುಕ್ಕರ್ ನಲ್ಲಿ ಸಿಲುಕಿತು ಮಗುವಿನ ತಲೆ- ಹೊರತೆಗೆಯಲು ಬೇಕಾಯ್ತು 12 ಗಂಟೆ

    ಆಟವಾಡ್ತಿದ್ದಾಗ ಕುಕ್ಕರ್ ನಲ್ಲಿ ಸಿಲುಕಿತು ಮಗುವಿನ ತಲೆ- ಹೊರತೆಗೆಯಲು ಬೇಕಾಯ್ತು 12 ಗಂಟೆ

    ಸೂರತ್: 2 ವರ್ಷದ ಮಗುವಿನ ತಲೆ ಪ್ರೆಶರ್ ಕುಕ್ಕರ್ ನಲ್ಲಿ ಸಿಲುಕಿದ್ದು, 12 ಗಂಟೆಗಳ ಬಳಿಕ ಮಗುವಿನ ತಲೆಯನ್ನ ಸುರಕ್ಷಿತವಾಗಿ ಹೊರತೆಗೆದ ಘಟನೆ ಗುಜರಾತ್‍ನ ಸೂರತ್‍ನಲ್ಲಿರುವ ಪಂದೇಸಾರಾದಲ್ಲಿ ನಡೆದಿದೆ.

    ಪರಿ(2) ಪ್ರೆಶರ್ ಕುಕ್ಕರ್ ನಲ್ಲಿ ತಲೆ ಸಿಲುಕಿಸಿಕೊಂಡಿದ್ದ ಮಗು. ಪರಿ ಅಡುಗೆಮನೆಯಲ್ಲಿ ಪಾತ್ರೆಗಳ ಜೊತೆ ಆಟವಾಡುತ್ತಿದ್ದ ವೇಳೆ ಅಕಸ್ಮಿಕವಾಗಿ ಆಕೆಯ ತಲೆ ಕುಕ್ಕರ್ ನಲ್ಲಿ ಸಿಲುಕಿಕೊಂಡಿತ್ತು. ಮಗುವಿನ ತಲೆ ಕುಕ್ಕರ್ ನಲ್ಲಿ ಸಿಲುಕಿದ ತಕ್ಷಣ ಜೋರಾಗಿ ಕಿರುಚಿ ಅಳುತ್ತಿದ್ದಳು. ಇದನ್ನು ಕೇಳಿದ ಪರಿ ಪೋಷಕರು ಓಡಿ ಬಂದು ಕುಕ್ಕರ್ ತೆಗೆಯಲು ಪ್ರಯತ್ನಿಸಿದ್ದಾರೆ.

    ಕುಕ್ಕರ್ ತೆಗೆಯುವಲ್ಲಿ ಪರಿ ತಂದೆ ಅಶುತೋಷ್ ವಿಫಲವಾಗಿದ್ದು, ನಂತರ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಕುಕ್ಕರ್ ತೆಗೆಯಲು 4 ಗಂಟೆಗಳ ಕಾಲ ಪ್ರಯತ್ನಿಸಿದ್ದಾರೆ. ಆದರೆ ಅವರಿಂದಲೂ ಮಗುವಿನ ತಲೆಯಿಂದ ಕುಕ್ಕರ್ ತೆಗೆಯಲು ಸಾಧ್ಯವಾಗಲಿಲ್ಲ.

    ಕೊನೆಗೆ ಕಮ್ಮಾರ ಮಾತ್ರ ಈ ಕುಕ್ಕರ್ ತೆಗೆಯಲು ಸಾಧ್ಯ ಎಂದು ವೈದ್ಯರು ಅಶುತೋಷ್‍ಗೆ ತಿಳಿಸಿದ್ದರು. ನಂತರ ಮಗುವಿನ ಪೋಷಕರು ಕಮ್ಮಾರನ ಹತ್ತಿರ ಹೋಗಿದ್ದಾರೆ. ಅಲ್ಲಿ ಕಮ್ಮಾರ ಕುಕ್ಕರ್ ಕಟ್ ಮಾಡಿ ಸಿಲುಕಿಕೊಂಡಿದ ಮಗುವಿನ ತಲೆಯನ್ನು 12 ಗಂಟೆಗಳ ಬಳಿಕ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

  • ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಒಂಟಿಯಾಗಿ ಬಿಟ್ಟು ಹೋದ ವೈದ್ಯರು-ವಾಪಸ್ ಬಂದು ನೋಡ್ದಾಗ ಕಸದ ಬುಟ್ಟಿಯಲ್ಲಿತ್ತು ಮಗು

    ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಒಂಟಿಯಾಗಿ ಬಿಟ್ಟು ಹೋದ ವೈದ್ಯರು-ವಾಪಸ್ ಬಂದು ನೋಡ್ದಾಗ ಕಸದ ಬುಟ್ಟಿಯಲ್ಲಿತ್ತು ಮಗು

    ಚಂಡೀಘಢ: ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶು ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿರುವ ಘಟನೆ ಹರಿಯಾಣದ ಫರೀದಾಬಾದ್‍ನಲ್ಲಿ ನಡೆದಿದೆ.

    ಸೋಮವಾರದಂದು ಇಲ್ಲಿನ ಸಿವಿಕ್ ಆಸ್ಪತ್ರೆಗೆ ಗರ್ಭಿಣಿಯನ್ನ ಹೆರಿಗೆಗಾಗಿ ದಾಖಲಿಸಲಾಗಿತ್ತು. ಆದ್ರೆ ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಯ ಬೆಡ್ ಮೇಲೆ ಒಂಟಿಯಾಗಿ ಬಿಟ್ಟಿದ್ದು, ಯಾವುದೇ ವೈದ್ಯಕೀಯ ನೆರವು ನೀಡಿರಲಿಲ್ಲ. ವೈದ್ಯರು ಹೊರಗಡೆ ಇದ್ದ ವೇಳೆ ಯಾವುದೇ ಸಹಾಯ ಇಲ್ಲದೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು.

    ವೈದ್ಯರು ಹಾಗೂ ನರ್ಸ್‍ಗಳು ಇಲ್ಲದೆಯೇ ಮಹಿಳೆಗೆ ಹೆರಿಗೆಯಾಗಿತ್ತು. ಆದ್ರೆ ಹಾಸಿಗೆ ಬಳಿ ಇಟ್ಟಿದ್ದ ಕಸದ ಬುಟ್ಟಿಯೊಳಗೆ ನೇರವಾಗಿ ಮಗು ಬಿದ್ದಿತ್ತು. ಹಾಸಿಗೆ ಮೇಲೆ ಮಲಗಿದ್ದ ತಾಯಿ ಸಹಾಯಕ್ಕಾಗಿ ಕಿರುಚಾಡುತ್ತಿದ್ರು.

    ವೈದ್ಯರು ಹಾಗೂ ಸಿಬ್ಬಂದಿ ಬಂದು ನೋಡಿದಾಗ ಮಗು ಕಸದ ಬುಟ್ಟಿಯಲ್ಲಿ ಪತ್ತೆಯಾಗಿತ್ತು. ಮಗುವಿನ ಕರುಳ ಬಳ್ಳಿ ಇನ್ನೂ ತಾಯಿಯ ದೇಹಕ್ಕೆ ಅಂಟಿಕೊಂಡೇ ಇತ್ತು. ಮಗುವನ್ನ ರಕ್ಷಣೆ ಮಾಡಿದ ಬಳಿಕ ವೈದ್ಯರು ಕರುಳ ಬಳ್ಳಿಯನ್ನ ಕಟ್ ಮಾಡಿದ್ದಾರೆ.

    ಹುಟ್ಟಿದ ತಕ್ಷಣ ಮಗು ಅಳಲಿಲ್ಲವಾದ್ದರಿಂದ ವೈದ್ಯರು ಶಿಶುವನ್ನ ಐಸಿಯುನಲ್ಲಿರಿಸಿದ್ದರು. ಮಗು ಕಸದ ಬುಟ್ಟಿಗೆ ಬಿದ್ದಿದ್ದರಿಂದ ಅದರ ತಲೆಗೆ ಏಟು ಬಿದ್ದಿದ್ದು, ಫಿಟ್ಸ್ ಬರಲು ಶುರುವಾಗಿತ್ತು. ನಂತರ ಮಗುವನ್ನ ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೂ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

     

  • ಬಾಲಕ 2 ವರ್ಷದಿಂದ ಮೊಟ್ಟೆ ಇಡ್ತಿದ್ದಾನೆ ಎಂದ ಪೋಷಕರು- ಕಣ್ಣ ಮುಂದೆಯೇ ಮೊಟ್ಟೆ ಇಟ್ಟಿದ್ದು ನೋಡಿ ವೈದ್ಯರು ತಬ್ಬಿಬ್ಬು!

    ಬಾಲಕ 2 ವರ್ಷದಿಂದ ಮೊಟ್ಟೆ ಇಡ್ತಿದ್ದಾನೆ ಎಂದ ಪೋಷಕರು- ಕಣ್ಣ ಮುಂದೆಯೇ ಮೊಟ್ಟೆ ಇಟ್ಟಿದ್ದು ನೋಡಿ ವೈದ್ಯರು ತಬ್ಬಿಬ್ಬು!

    ಜಕಾರ್ತಾ: 14 ವರ್ಷದ ಬಾಲಕನೊಬ್ಬ ಮೊಟ್ಟೆ ಇಡುತ್ತಾನೆ ಎಂದು ಪೋಷಕರು ಹೇಳಿಕೊಂಡಿದ್ದು, ಆತ ವೈದ್ಯರ ಮುಂದೆಯೇ ಮೊಟ್ಟೆಯಿಟ್ಟು ದಂಗಾಗಿಸಿದ್ದಾನೆ.

    ಬಾಲಕ ಅಕ್ಮಲ್ ಕಳೆದ 2 ವರ್ಷಗಳಲ್ಲಿ 20 ಮೊಟ್ಟೆಗಳನ್ನ ಇಟ್ಟಿದ್ದಾನೆಂದು ಪೋಷಕರು ಹೇಳಿಕೊಂಡಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೋಳಿ ಮೊಟ್ಟೆ ಮಾನವನ ದೇಹದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೊಟ್ಟೆಯನ್ನ ಬಾಲಕನ ದೇಹದೊಳಗೆ ಹಾಕಲಾಗಿದೆ ಎಂದು ವೈದ್ಯರು ಶಂಕಿಸಿದ್ದಾರೆ.

    ಇಂಡೋನ್ಯೇಷ್ಯಾದ ಗೋವಾದವನಾದ ಅಕ್ಮಲ್‍ಗೆ ಎಕ್ಸ್ ರೇ ಕೂಡ ಮಾಡಿಸಲಾಗಿದ್ದು, ಆತ ನಿಜ ಹೇಳುತ್ತಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಪೋಷಕರು ಹೇಳಿದ್ದಾರೆ.

    ಅಕ್ಮಲ್ ತಂದೆ ರುಸ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, 2 ವರ್ಷಗಳಲ್ಲಿ ಆತ 18 ಮೊಟ್ಟೆ ಇಟ್ಟಿದ್ದು, ಈಗ ಎರಡು ಮೊಟ್ಟೆ ಇಟ್ಟಿದ್ದಾನೆ. ಹೀಗಾಗಿ ಒಟ್ಟು 20 ಆಗಿದೆ. ನಾನು ಮೊದಲ ಮೊಟ್ಟೆಯನ್ನ ಒಡೆದು ನೋಡಿದೆ. ಅದರಲ್ಲಿ ಹಳದಿ ಅಂಶ ಮಾತ್ರ ಇತ್ತು, ಬಿಳಿಯದ್ದು ಇರಲಿಲ್ಲ. ಒಂದು ತಿಂಗಳ ಬಳಿಕ ಮತ್ತೊಂದು ಮೊಟ್ಟೆಯನ್ನ ಒಡೆದು ನೋಡಿದೆ. ಅದರಲ್ಲಿ ಪೂರ್ತಿ ಬಿಳಿ ಅಂಶ ಇತ್ತು, ಹಳದಿ ಬಣ್ಣದ್ದು ಇರಲಿಲ್ಲ ಎಂದು ಹೇಳಿದ್ದಾರೆ.

    ಆಸ್ಪತ್ರೆಯ ವಕ್ತಾರರು ಈ ಬಗ್ಗೆ ಮಾತನಾಡಿ, ಉದ್ದೇಶಪೂರ್ವಕವಾಗಿ ಅಕ್ಮಲ್‍ನ ಗುದನಾಳಕ್ಕೆ ಮೊಟ್ಟೆಗಳನ್ನ ತುರುಕಲಾಗಿದೆ ಎಂಬ ಅನುಮಾನ ನಮಗಿದೆ. ನಾವು ಅದನ್ನ ನೇರವಾಗಿ ನೋಡಿಲ್ಲ ಎಂದು ಹೇಳಿದ್ದಾರೆ.

    ಬಾಲಕನ ಮೇಲೆ ವೈದ್ಯರು ಸೂಕ್ಷ್ಮವಾಗಿ ಗಮನಹರಿಸಬೇಕೆಂಬ ಉದ್ದೇಶದಿಂದ ಸೈಕ್ ಯೂಸಫ್ ಆಸ್ಪತ್ರೆಯಲ್ಲಿ ಅಕ್ಮಲ್‍ನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ವರದಿಯಾಗಿದೆ.

    https://www.youtube.com/watch?v=zZNwT2GIJ3o

  • ವ್ಯಕ್ತಿಯ ತಲೆಯಿಂದ 1.8 ಕೆಜಿ ತೂಕದ ಗೆಡ್ಡೆ ತೆಗೆದ ವೈದ್ಯರು!

    ವ್ಯಕ್ತಿಯ ತಲೆಯಿಂದ 1.8 ಕೆಜಿ ತೂಕದ ಗೆಡ್ಡೆ ತೆಗೆದ ವೈದ್ಯರು!

    ಮುಂಬೈ: ವ್ಯಕ್ತಿಯ ತಲೆಯಲ್ಲಿ ಬೆಳೆದಿದ್ದ 1.8 ಕೆಜಿ ತೂಕದ ಗೆಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಮುಂಬೈನ ನಾಯರ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

    31 ವರ್ಷದ ಬಟ್ಟೆ ವ್ಯಾಪಾರಿ ಸಂತಲಾಲ್ ಪಾಲ್ ಅವರ ತಲೆಯ ಮೇಲೆ ದೈತ್ಯ ಗೆಡ್ಡೆ ಬೆಳೆದು, ಅವರಿಗೆ ಎರಡು ತಲೆಗಳಿದ್ದಂತೆ ಕಾಣುತ್ತಿತ್ತು. ವೈದ್ಯರು 7 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ 7.873 ಕೆಜಿ ತೂಕದ ಆ ಗೆಡ್ಡೆಯನ್ನ ತೆಗೆದಿದ್ದಾರೆ.

    ಇಷ್ಟು ದೈತ್ಯ ತಲೆಯ ಗೆಡ್ಡೆಯನ್ನ ಹೊರತೆಗೆದಿರುವುದು ವಿಶ್ವದಲ್ಲೇ ಮೊದಲಿರಬಹುದು ಎಂದು ಕೂಡ ಹೇಳಲಾಗಿದೆ. ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಗೆಡ್ಡೆಯ ತೂಕ 1.4 ಕೆಜಿ ಇತ್ತು.

    ಸಂತಲಾಲ್ ಉತ್ತರಪ್ರದೇಶ ನಿವಾಸಿಯಾಗಿದ್ದು, ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿತ್ತು. ಫೆಬ್ರವರಿ ಆರಂಭದಲ್ಲಿ ಅವರು ನಾಯರ್ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಅವರ ತಲೆಯ ಮೇಲೆ ಊತ, ಭಾರ ಹಾಗೂ ತಲೆ ನೋವು ಇತ್ತು. ಪರಿಶೀಲನೆಯ ಬಳಿಕ 30*30*20 ಸೆ.ಮೀ ನ ಗೆಡ್ಡೆ ಬೆಳೆದಿರುವುದು ಗೊತ್ತಾಗಿ ವೈದ್ಯರೇ ಅಚ್ಚರಿಪಟ್ಟಿದ್ದರು. ಇಷ್ಟು ದೊಡ್ಡ ಗೆಡ್ಡೆಯನ್ನ ವೈದ್ಯರು ಕೂಡ ಈ ಹಿಂದೆ ನೋಡಿರಲಿಲ್ಲ ಎನ್ನಲಾಗಿದೆ.

    ಸಂತಲಾಲ್ ಅವರನ್ನ ಮೆದುಳಿನ ಸಿಟಿ ಹಾಗೂ ಎಮ್‍ಆರ್ ಸ್ಕ್ಯಾನ್‍ಗೆ ಒಳಪಡಿಸಲಾಗಿತ್ತು. ಗೆಡ್ಡೆಯ ರಕ್ತಚಲನೆಯ ಬಗ್ಗೆ ಅಧ್ಯಯನ ಮಾಡಲು ವಿಶೇಷ ಸಿಟಿ ಆಂಜಿಯೋಗ್ರಾಫಿ ಮಾಡಲಾಗಿತ್ತು. ತನಿಖೆಯ ಬಳಿಕ ನಾವು ಫೆಬ್ರವರಿ 14ರಂದು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು. ಇದು ಅತ್ಯಂತ ಅಪಾಯಕರ ಶಸ್ತ್ರಚಿಕಿತ್ಸೆಯಾಗಿತ್ತು. ಇಷ್ಟು ದೊಡ್ಡ ಗೆಡ್ಡೆ ಬೆಳೆಯುವುದು ತುಂಬಾ ವಿರಳ ಹಾಗೂ ವೈದ್ಯಕೀಯ ಸವಾಲು ಎಂದು ಪ್ರಾಧ್ಯಾಪಕ ಹಾಗೂ ನರಶಸ್ತ್ರಚಿಕಿತ್ಸೆ ಮುಖ್ಯಸ್ಥರಾದ ಡಾ ತತ್ರಿಮೂರ್ತಿ ನಾಡಕರ್ಣಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ಶಸ್ತ್ರಚಿಕಿತ್ಸೆಯ ವೇಳೆ ರೋಗಿಗೆ 11 ಬಾಟಲಿ ರಕ್ತ ನೀಡಲಾಗಿದ್ದು, 7 ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ನಡೆದಿದೆ.