Tag: doctors

  • ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಪ್ರಜ್ಞಾಹೀನರಾಗಿ ಗೃಹಿಣಿ ಸಾವು

    ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಪ್ರಜ್ಞಾಹೀನರಾಗಿ ಗೃಹಿಣಿ ಸಾವು

    ರಾಮನಗರ: ವೈದ್ಯರ ನಿರ್ಲಕ್ಷ್ಯದಿಂದ ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದ ನಿವಾಸಿ ರಂಜಿತಾ (26) ಮೃತ ದುರ್ದೈವಿ. ಮೃತಳ ಕುಟುಂಬಸ್ಥರು ಮತ್ತು ಗ್ರಾಮಸ್ಥರು ರಂಜಿತಾಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಸ್ಪತ್ರೆ ಮುಂಭಾಗ ಮೃತ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ.

    ಶುಕ್ರವಾರ ಮೃತ ರಂಜಿತಾ ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ರಂಜಿತಾ ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ ಈ ವೇಳೆ ರಂಜಿತಾ ಪ್ರಜ್ಞಾಹೀನರಾಗಿದ್ದಾರೆ. ತಕ್ಷಣ ರಂಜಿತಾಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತಲುಪುವ ಮೊದಲೇ ರಂಜಿತಾ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬದವರು ಆಕ್ರೋಶಗೊಂಡು ವಾಪಸ್ ರಾಮನಗರಕ್ಕೆ ಬಂದು ಜಿಲ್ಲಾಸ್ಪತ್ರೆಯ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೃತಪಟ್ಟ ರೋಗಿಗೆ ಚಿಕಿತ್ಸೆ ನೀಡಿ ಹಣ ಪಡೆದ್ರು!

    ಮೃತಪಟ್ಟ ರೋಗಿಗೆ ಚಿಕಿತ್ಸೆ ನೀಡಿ ಹಣ ಪಡೆದ್ರು!

    – ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ

    ಮೈಸೂರು: ಮೃತಪಟ್ಟ ಬಳಿಕವೂ ಚಿಕಿತ್ಸೆ ನೀಡಿ ಹಣ ಪಡೆದ ಆರೋಪದ ಮೇಲೆ ರೋಗಿಯ ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಘಟನೆ ನಗರದ ಯರಗನಹಳ್ಳಿಯಲ್ಲಿ ನಡೆದಿದೆ.

    ಪ್ರೀತಂ ಗೌಡ (22) ಆಸ್ಪತ್ರೆಯಲ್ಲಿ ದಾಖಲಾಗಿ ಮೃತಪಟ್ಟ ರೋಗಿ. ಕಳೆದ ಶುಕ್ರವಾರ ಪ್ರೀತಂ ಗೌಡ ತೀವ್ರ ಹಲ್ಲು ನೋವಿನಿಂದ ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆಯೂ ಸಹ ವೈದ್ಯರು ಪ್ರೀತಂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಇದಾದ ಅರ್ಧ ಗಂಟೆ ಬಳಿಕ ಪ್ರೀತಂ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಇದಲ್ಲದೇ ಚಿಕಿತ್ಸೆಯ ವೆಚ್ಚವನ್ನು ಪಾವತಿಸಿಕೊಂಡಿದ್ದಾರೆ.

    ಪ್ರೀತಂ ಈಗಾಗಲೇ ಮೃತಪಟ್ಟಿದ್ದರೂ ವೈದ್ಯರು ಚಿಕಿತ್ಸೆ ನೀಡಿ, ಹಣ ಪಡೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಸಂಬಂಧಿಕರು ಆಸ್ಪತ್ರೆ ಆವರಣದ ಬಳಿ ಪ್ರತಿಭಟನೆ ನಡೆಸಿ, ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆವನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ, ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೋಷಕರೇ, ನಿಮ್ಮ ಮಕ್ಕಳ ಚಲನ-ವಲನಗಳ ಮೇಲೆ ಗಮನವಿರಲಿ

    ಪೋಷಕರೇ, ನಿಮ್ಮ ಮಕ್ಕಳ ಚಲನ-ವಲನಗಳ ಮೇಲೆ ಗಮನವಿರಲಿ

    ಚಿಕ್ಕಮಗಳೂರು: ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಸ್ವಲ್ಪ ಎಚ್ಚರವಾಗಿರಿ. ಯಾಕೆಂದರೆ ಕಾಫಿನಾಡಲ್ಲಿ ದಿನವೊಂದಕ್ಕೆ ಫೆವಿಬಾಂಡ್, ಫೆವಿಕ್ವಿಕ್, ವೈಟ್ನರ್ ಸೇರಿದಂತೆ ಹತ್ತಾರು ವಸ್ತುಗಳು ಎಗ್ಗಿಲ್ಲದೆ ಮಾರಾಟವಾಗುತ್ತಿವೆ. ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ.

    ಚಿಕ್ಕಮಗಳೂರಿನ ಶಂಕರಪುರ, ಟಿಪ್ಪುನಗರ, ಶರೀಫ್‍ ಗಲ್ಲಿ, ಮಾರ್ಕೇಟ್ ರಸ್ತೆ ಸೇರಿದಂತೆ ಕೊಳಚೆ ಪ್ರದೇಶದ ಮಕ್ಕಳು ಮಾದಕ ವ್ಯಸನಿಗಳಾಗಿದ್ದಾರೆ. ಕಡಿಮೆ ಬೆಲೆಯಲ್ಲಿ ಸಿಗುವ ಫೆವಿಬಾಂಡ್, ಫೆವಿಕ್ವಿಕ್, ವೈಟ್ನರ್ ಗಳಿಂದ ನಶೆ ಏರಿಸಿಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ 14 ರಿಂದ 20 ವರ್ಷದ ಮಕ್ಕಳೇ ಹೆಚ್ಚು ಅನ್ನೋದು ಆಘಾತಕಾರಿ ಅಂಶವಾಗಿದೆ.

    ಶಾಲೆಗೆ ಹೋಗುವ, ಹೋಗದಿರುವ ಇಲ್ಲಿನ ಮಕ್ಕಳು ಸೇರಿದಂತೆ 20 ರಿಂದ 30 ವರ್ಷದವರು ಇವುಗಳನ್ನ ಖರೀದಿಸಿ ಅದನ್ನ ಬಟ್ಟೆಯೊಳಗೆ ಹಾಕಿ ಅದರ ವಾಸನೆ ಸೇವಿಸುವ ದುಷ್ಚಟಕ್ಕೆ ಬಿದ್ದಿದ್ದಾರೆ. ಇದರಿಂದ ಬಾಟಲಿ ಮದ್ಯ ಸೇವಿಸಿದ್ದಕ್ಕಿಂತ ಹೆಚ್ಚು ನಶೆ ಬರುತ್ತದೆ. ಸಾಲದಕ್ಕೆ ಹಣವು ಹೆಚ್ಚು ಬೇಕಿಲ್ಲ. ಹತ್ತಿಪ್ಪತ್ತು ರೂಪಾಯಿ ಇದ್ದರೆ ಸಾಕಾಗಿದೆ. ಇತ್ತೀಚೆಗೆ 22 ವರ್ಷದ ಯುವಕನೊಬ್ಬ ಈ ದುಷ್ಟಟಕ್ಕೆ ಬಿದ್ದು, ಮಾನಸಿಕ ಖಿನ್ನತೆಯಿಂದ ಪೊಲೀಸ್ ಠಾಣೆ ಪಕ್ಕದಲ್ಲೇ ಟವೆಲ್ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.

    ಪುಸ್ತಕ ಮಳಿಗೆ, ಹಾರ್ಡ್‍ವೇರ್, ಬಣ್ಣದ ಅಂಗಡಿಗಳಲ್ಲಿ ಸಿಗುವ ಇವುಗಳಿಂದ ಬೆಳೆಯೋ ಹಂತದಲ್ಲೇ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇದನ್ನ ಒಮ್ಮೆ ಸೇವಿಸಿದರೆ ಮತ್ತೆ-ಮತ್ತೆ ಸೇವಿಸಬೇಕೆಂದನಿಸುತ್ತದೆ. ಜೇಬಲ್ಲಿ 20 ರೂಪಾಯಿ ಇದ್ರೆ ಸಾಕು ಒಂದ್ ಟ್ಯೂಬ್ ಸಿಗುತ್ತದೆ. ಪಾಳು ಬಿದ್ದ ಮಳಿಗೆ, ಗಿಡಗಂಟೆಗಳ ಮರೆಯಲ್ಲಿ ಐದೇ ನಿಮಿಷಕ್ಕೆ ವಾಸನೆ ಸೇವಿಸಿದರೆ ಅದರ ನಶೆ 6 ರಿಂದ 8 ಗಂಟೆ ಇರುತ್ತದೆ. ಈ ದುಷ್ಟಕ್ಕೆ ಬಿದ್ದಿರುವ ದಿನಕ್ಕೆ ಕನಿಷ್ಠ ಮೂರು ಬಾರಿ ವಾಸನೆ ಎಳೆಯುತ್ತಾರೆ. ಒಂದು ವೇಳೆ ನಿಲ್ಲಿಸಿದರೆ ಮಾನಸಿಕ ಖಿನ್ನತೆ ಒಳಗಾಗಿ ವ್ಯಕ್ತಿತ್ವ, ಬೆಳವಣಿಗೆ ಎಲ್ಲವೂ ಕ್ರಮೇಣ ಕುಗ್ಗುತ್ತದೆ. ಪಿಡ್ಸ್ ಬಂದಂತಾಗುತ್ತದೆ. ನಮ್ಮ ಬಳಿ ದಿನಕ್ಕೆ ಇಂತಹಾ ನಾಲ್ಕೈದು ಕೇಸ್ ಬರುತ್ತಿದ್ದು, ಇದಕ್ಕೆ ಔಷಧಿ ಇಲ್ಲ. ಕೌನ್ಸಿಲಿಂಗ್ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದು ಮನೋರೋಗ ತಜ್ಞ ವೆಂಕಟೇಶ್ ಹೇಳಿದ್ದಾರೆ.

    ಆಧುನಿಕತೆ ಬೆಳೆದಂತೆ ಯುವಜನತೆ ಕೂಡ ಹಾದಿ ತಪ್ಪುತ್ತಿದ್ದಾರೆ. ಎಲ್ಲಾ ಸಮಸ್ಯೆಗೂ ಸರ್ಕಾರವೇ ಕಾರಣ ಅನ್ನೋದಕ್ಕಿಂತ ಪೋಷಕರು ಕೂಡ ಮಕ್ಕಳ ಚಲನ-ವಲನಗಳ ಮೇಲೆ ಗಮನ ಹರಿಸಬೇಕಿದೆ. ಇಲ್ಲವಾದರೆ ಇಂತಹಾ ಅನಾಹುತಗಳು ಮತ್ತಷ್ಟು ಹೆಚ್ಚಾಗುತ್ತವೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕಾಗಿದೆ. ಈಗಾಗಲೇ ನಾಲ್ಕೈದು ಯುವಕರು ಈ ದುಶ್ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಲ್ಮೆಟ್ ಹಾಕ್ಕೊಂಡು ಚಿಕಿತ್ಸೆ ನೀಡಿದ ವೈದ್ಯರು!

    ಹೆಲ್ಮೆಟ್ ಹಾಕ್ಕೊಂಡು ಚಿಕಿತ್ಸೆ ನೀಡಿದ ವೈದ್ಯರು!

    ಹೈದರಾಬಾದ್: ನಗರದ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹೆಲ್ಮೆಟ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ವಿಶೇಷ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

    ತೆಲಂಗಾಣದ ಅತ್ಯಂತ ದೊಡ್ಡ ಹಾಗೂ ಹಳೆಯ ಆಸ್ಪತ್ರೆ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದೆ. ಹೀಗಾಗಿ ಅಲ್ಲಿನ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ನಿತ್ಯವೂ ಪ್ರಾಣಭಯದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಓಸ್ಮಾನಿಯಾ ಆಸ್ಪತ್ರೆ 100 ವರ್ಷಗಳಷ್ಟು ಹಳೆಯದಾಗಿದ್ದು, ಕಟ್ಟಡವು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕೆಲವು ಕಡೆ ಮೇಲಿಂದ ಸಿಮೆಂಟ್ ಉದುರುತ್ತಿದ್ದು, ಸುಮಾರು 5 ಜನ ವೈದ್ಯರು ಗಾಯಗೊಂಡಿದ್ದಾರೆ ಎಂದು ವೈದ್ಯರು ದೂರಿದ್ದಾರೆ.

    ಪ್ರತಿದಿನವೂ ಬೆಳಗ್ಗೆ ಒಂದು ಗಂಟೆ ಹೆಲ್ಮೆಟ್ ಹಾಕಿಕೊಂಡು, ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ರೋಗಿಗಳನ್ನು ಮಾತ್ರ ಹಾಸಿಗೆ ಮೇಲೆ ಹಾಗೇ ಬಿಡಲಾಗಿದೆ.

    ಕಟ್ಟಡ ಬದಲಾಯಿಸಿ ಎಂದು ಒತ್ತಾಯಿಸಿ ಆಸ್ಪತ್ರೆಯ ವೈದ್ಯರು ಕಳೆದ ಏಪ್ರಿಲ್ ತಿಂಗಳಿನಲ್ಲಿ ಪ್ರತಿಭಟನೆ ಮಾಡಿದ್ದರು. ಆಗ ತೆಲಂಗಾಣದ ಆರೋಗ್ಯ ಸಚಿವ ಲಕ್ಷ್ಮ ರೆಡ್ಡಿ ಬೇಡಿಕೆಗೆ ಸ್ಪಂದಿಸಿ, ಆಸ್ಪತ್ರೆಯ ದುರಸ್ತಿಯ ಭರವಸೆ ನೀಡಿದ್ದರು.

    ಕಟ್ಟಡವು ಅಸುರಕ್ಷಿತವಾಗಿದೆ ಎಂದು ಹೈದರಾಬಾದ್ ನಾಗರಿಕ ಸಂಸ್ಥೆ ಘೋಷಿಸಿದೆ. ಇನ್ನು ತೆಲಂಗಾಣ ರಾಜ್ಯ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯು ಆಸ್ಪತ್ರೆಯ ಎರಡು ಮಹಡಿಗಳು ಅಸುರಕ್ಷಿತವಾಗಿವೆ ಎಂದು ತಿಳಿಸಿದೆ. ಆದರೂ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವೈದ್ಯರು ಆರೋಪಿಸಿದ್ದಾರೆ.

    2015ರಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆಸ್ಪತ್ರೆಯನ್ನು ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕೆಲವು ವಾಸ್ತು ಶಿಲ್ಪಿಗಳು ಹಾಗೂ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ದುರಸ್ತಿ ಕಾಮಗಾರಿ ಹಾಗೆ ಉಳಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾತ್ರಿ ಸೆಕ್ಸ್ ಟಾಯ್ ಬಳಕೆ ಮಾಡ್ದ-ಬೆಳಗ್ಗೆ ಹೊರ ಬರಲೇ ಇಲ್ಲ

    ರಾತ್ರಿ ಸೆಕ್ಸ್ ಟಾಯ್ ಬಳಕೆ ಮಾಡ್ದ-ಬೆಳಗ್ಗೆ ಹೊರ ಬರಲೇ ಇಲ್ಲ

    -ಹೊರ ತೆಗೆಯಲು ವೈದ್ಯರಿಂದ ಹೊಸ ವಿಧಾನ

    ರೋಮ್: ಕೆಲವರು ಲೈಂಗಿಕ ಸಂತೃಪ್ತಿಗಾಗಿ ಸೆಕ್ಸ್ ಟಾಯ್ ಮಾಡಿಕೊಳ್ಳುತ್ತಾರೆ. ಸಂಗಾತಿ ಬದಲಾಗಿ ಸೆಕ್ಸ್ ಟಾಯ್ ಬಳಕೆ ಮಾಡೋವಾಗಿ ಕೆಲವರು ಎಡವಟ್ಟು ಮಾಡಿಕೊಳ್ಳುತ್ತಾರೆ. ಅಂತಹದೇ ಎಡವಟ್ಟಿನ ವಿಚಿತ್ರ ಘಟನೆಯೊಂದು ಇಟಲಿಯ ನಿಗಾರ್ಡ್ ನಲ್ಲಿ ನಡೆದಿದೆ.

    31 ವರ್ಷದ ವ್ಯಕ್ತಿಯೊಬ್ಬ ರಾತ್ರಿ ಪೂರ್ಣ ಸೆಕ್ಸ್ ಟಾಯ್ ಬಳಸಿ ಲೈಂಗಿಕ ಸಂತೃಪ್ತಿ ಪಡೆದಿದ್ದಾನೆ. ಆದ್ರೆ ಬೆಳಗ್ಗೆ ದೇಹದಲ್ಲಿ ಸೇರಿದ್ದ ಸೆಕ್ಸ್ ಆಟಿಕೆ ಹೊರ ಬಂದಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಸೆಕ್ಸ್ ಟಾಯ್ ಹೊರ ಬಾರದ ಕಾರಣ ಕೊನೆಗೆ ನಗರದ ಎಎಸ್‍ಎಸ್‍ಟಿ ಗ್ರೇಟ್ ಮೊಟ್ರೋಪೊಲಿಟಿಯನ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ವೈದ್ಯರು ಶಾಕ್: ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ನೋಡಿದ ವೈದ್ಯರು ಒಂದು ಕ್ಷಣ ಶಾಕ್ ಆಗಿದ್ದಾರೆ. ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ 23 ಇಂಚಿನ ಸೆಕ್ಸ್ ಟಾಯ್ ಸಿಲುಕಿಕೊಂಡಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ದಾಖಲಿಸಿಕೊಂಡು ವೈದ್ಯರು ಚಿಕಿತ್ಸೆ ಬಗ್ಗೆ ಕೆಲಕಾಲ ತಲೆಕೆಡಿಸಿಕೊಂಡಿದ್ದಾರೆ.

    ಹೊಸ ವಿಧಾನ: ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ಹೊಟ್ಟೆ ನೋವು ಹೊರತು ಪಡಿಸಿದ್ರೆ ಬೇರೆ ಯಾವುದೇ ತೊಂದರೆಗಳು ಆತನಲ್ಲಿ ಕಂಡುಬರಲಿಲ್ಲ. ವ್ಯಕ್ತಿಯ ದೇಹವನ್ನು ಎಕ್ಸ್-ರೇ ಗೆ ಒಳಪಡಿಸಿದಾಗ ಆತನ ದೇಹದಲ್ಲಿ ಉದ್ದ ಮತ್ತು ದಪ್ಪವಾದ ವಸ್ತು ಕಂಡು ಬಂತು. ಆರಂಭದಲ್ಲಿ ಸಾಮಾನ್ಯವಾಗಿ ಬಳಸುವ ವೈದ್ಯಕೀಯ ಸಲಕರಣೆಗಳಿಂದ ದೇಹದಲ್ಲಿ ಸಿಲುಕಿದ್ದ ವಸ್ತುವನ್ನು ತೆಗೆಯಲು ಪ್ರಯತ್ನಿಸಲಾಗಿತ್ತು. ಆದ್ರೆ ಸೆಕ್ಸ್ ಟಾಯ್ ಆಳದಲ್ಲಿ ಸಿಲುಕಿದ್ದರಿಂದ ಹೊರ ಬರಲೇ ಇಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

    ಕೊನೆಗೆ ಆಸ್ಪತ್ರೆಯ ಹಿರಿಯ ವೈದ್ಯರ ಸಲಹೆ ಪಡೆದು, ಹಿಡಿಕೆ ರೀತಿಯ ವಸ್ತುವೊಂದನ್ನ ಆತನ ದೇಹದಲ್ಲಿ ಸೇರಿಸಲಾಗಿತ್ತು. ಹಿಡಿಕೆಗೆ ಹಿಂದೆ ವೈರ್ ಕಟ್ಟಲಾಗಿತ್ತು. ದೇಹದಲ್ಲಿ ಸೇರಿದ ಹಿಡಿಕೆ ಸೆಕ್ಸ್ ಟಾಯ್ ನ್ನು ಕಚ್ಚಿಕೊಂಡಾಗ ಎಲ್ಲರೂ ಜೋರಾಗಿ ಎಳೆದಾಗ ಆಟಿಕೆ ಹೊರ ಬಂತು. ಟಾಯ್ ಹೊರ ತೆಗೆದ ಮೇಲೆ ಆತನನ್ನು ಒಂದು ದಿನ ದಾಖಲು ಮಾಡಿಕೊಂಡು ಮರುದಿನ ಡಿಸ್ಚಾರ್ಜ್ ಮಾಡಲಾಯಿತು ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ಮೆಡಿಕಲ್, ಅನೈಸರ್ಗಿಕ ಲೈಂಗಿಕ ಕ್ರಿಯೆ ತುಂಬಾ ಅಪಾಯಕಾರಿ. ಲೈಂಗಿಕ ಕ್ರಿಯೆ ಸಂತೃಪ್ತಿ ಪಡೆಯಲು ಬಳಸುವ ವಸ್ತುಗಳ ಬಗ್ಗೆ ಅತ್ಯಂತ ಎಚ್ಚರಿಕೆ ಇಂದಿರಬೇಕು ಎಂದು ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಕರೆಗೆ ಓಗೊಟ್ಟು ಕೊಡಗಿಗೆ ಧಾವಿಸಿದ್ರು ವೈದ್ಯರು

    ಸಿಎಂ ಕರೆಗೆ ಓಗೊಟ್ಟು ಕೊಡಗಿಗೆ ಧಾವಿಸಿದ್ರು ವೈದ್ಯರು

    ಮಡಿಕೇರಿ: ಪ್ರವಾಹ ಸಂತ್ರಸ್ತರ ಆರೋಗ್ಯಕ್ಕಾಗಿ ಖುದ್ದು ಸಿಎಂ ಕುಮಾರಸ್ವಾಮಿಯವರ ಮನವಿಗೆ ಸ್ಪಂದಿಸಿರುವ ವೈದ್ಯರುಗಳು ಭಾನುವಾರ ಮಡಿಕೇರಿಗೆ ದೌಡಾಯಿಸಿದ್ದಾರೆ.

    ಶನಿವಾರ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ್ದ ಕುಮಾರಸ್ವಾಮಿಯವರು ಆಹಾರ ವಸ್ತುಗಳನ್ನು ಜನರು ಈಗಾಗಲೇ ನೀಡಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ವಸ್ತುಗಳು ಹರಿದು ಬರುತ್ತಿದೆ. ಆದರೆ ಈಗ ತುರ್ತು ವೈದ್ಯರ ಸಹಾಯಬೇಕಿದೆ ಎಂದು ಮನವಿ ಮಾಡಿದ್ದರು.

    ಈ ಮನವಿಗೆ ಸ್ಪಂದಿಸಿದ ಮೈಸೂರು, ಹಾಸನ, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಿಂದ ಹಿರಿಯ ವೈದ್ಯಾಧಿಕಾರಿಗಳು ಕೊಡಗಿನತ್ತ ಧಾವಿಸಿ ಬಂದಿದ್ದು, ಪರಿಹಾರ ಕಾರ್ಯದ ನೇತೃತ್ವ ವಹಿಸಿಕೊಂಡಿದ್ದಾರೆ.

    ಮೈಸೂರಿನ ಕೆ.ಆರ್. ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ ಸೇರಿದಂತೆ ನೆರೆಯ ಜಿಲ್ಲೆಗಳಿಂದ ವೈದ್ಯರ ತಂಡ ಆಗಮಿಸಿ ಜನರ ಶುಶ್ರೂಷೆಯಲ್ಲಿ ತೊಡಗಿದ್ದಾರೆ. ಈಗಾಗಲೇ ತಾತ್ಕಾಲಿಕ ಆಸ್ಪತ್ರೆ ಹಾಗೂ ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ ಔಷಧಿಯನ್ನು ಪೂರೈಸಲಾಗಿದೆ.

    ಇದಲ್ಲದೇ ರಾಜ್ಯದ ಹಿರಿಯ ಪೊಲೀಸ್ ಆಧಿಕಾರಿಗಳು, ಕಂದಾಯ ಇಲಾಖೆ, ಅಗ್ನಿ ಶಾಮಕದ ದಳ, ವಿಪತ್ತು ನಿರ್ವಹಣಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಕೂಡ ತಂಡೋಪತಂಡವಾಗಿ ಜಿಲ್ಲೆಗೆ ಬಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

    ಸಂಪಾಜೆ ಹಾಗೂ ಜೋಡುಪಾಲದಲ್ಲಿನ ಜನರ ರಕ್ಷಣೆಯ ಹೊಣೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಹಿಸಿಕೊಂಡಿದ್ದಾರೆ. ಆ ವಿಭಾಗದ ಜನರನ್ನು ಸುಳ್ಯದ ಕೆವಿಜಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸುಳ್ಯದಲ್ಲಿ ಹಲವು ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೈದ್ಯರ ಎಡವಟ್ಟಿನಿಂದ ಕಾಲುಗಳ ಸ್ವಾಧೀನ ಕಳೆದುಕೊಂಡ ದರ್ಶನ್ ಪುಟ್ಟ ಅಭಿಮಾನಿ!

    ವೈದ್ಯರ ಎಡವಟ್ಟಿನಿಂದ ಕಾಲುಗಳ ಸ್ವಾಧೀನ ಕಳೆದುಕೊಂಡ ದರ್ಶನ್ ಪುಟ್ಟ ಅಭಿಮಾನಿ!

    ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೈಲಾಗ್‍ಗಳನ್ನು ಹರಳು ಹುರಿದಂತೆ ಪಟಪಟನೆ ಹೇಳುತ್ತಿದ್ದ ಜಿಲ್ಲೆಯ ಬಾಲಕನೊಬ್ಬ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ನರಕಯಾತನೆ ಅನುಭವಿಸುವಂತಾಗಿದೆ.

    ಹರಪನಹಳ್ಳಿ ತಾಲೂಕಿನ ಎಡೆಹಳ್ಳಿ ಗ್ರಾಮದ ಕೀರ್ತಿರಾಜ್ ವೈದ್ಯರ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡ ಬಾಲಕ. ಕುರುವತ್ತಪ್ಪ ಹಾಗೂ ನೇತ್ರಾ ದಂಪತಿಯ ಎರಡನೇ ಪುತ್ರ ಕೀರ್ತಿರಾಜ್. ಕೆಲವು ದಿನಗಳ ಹಿಂದೆ ಕೀರ್ತಿರಾಜ್‍ಗೆ ಎದೆ ನೋವು ಕಾಣಿಸಿಕೊಂಡಿದ್ದು, ಆತನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದೊಯ್ಯಲಾಗಿತ್ತು.

    ವೈದ್ಯರು ಎಕ್ಸ್ ರೇ ತೆಗೆಸಿ, ಇಲ್ಲಿ ಕಾಯಿಲೆ ಸರಿ ಹೋಗುವುದಿಲ್ಲ. ಬದಲಾಗಿ ನೀವು ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದರಂತೆ. ಮಗನನ್ನು ಉಳಿಸಿಕೊಳ್ಳಲು ಪೋಷಕರು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದ್ದರು. ದಾವಣಗೆರೆ ಆಸ್ಪತ್ರೆ ವೈದ್ಯರು ನೀಡಿದ್ದ ದಾಖಲೆಗಳನ್ನು ನೋಡಿದ ವೈದ್ಯರು, ಬೆನ್ನಿನಲ್ಲಿ ನೀರು ತುಂಬಿಕೊಂಡಿದೆ. ಶಸ್ತ್ರ ಚಿಕಿತ್ಸೆ ಮೂಲಕ ನೀರನ್ನು ಹೊರತೆಗೆಯಬೇಕು ಎಂದು ಹೇಳಿದ್ದರಂತೆ.

    ಶಸ್ತ್ರ ಚಿಕಿತ್ಸೆಗೂ ಮುನ್ನ ಆಟವಾಡಿಕೊಂಡು ನಗುತ್ತಿದ್ದ ಬಾಲಕ ಕೀರ್ತಿರಾಜ್, ಚಿಕಿತ್ಸೆಯ ಬಳಿಕ ತನ್ನ ಎರಡು ಕಾಲುಗಳ ಸ್ವಾದೀನ ಕಳೆದುಕೊಂಡಿದ್ದಾನೆ. ಈ ಕುರಿತು ಪರಿಶೀಲನೆ ನಡೆಸಿದಾಗ, ಚಿಕಿತ್ಸೆ ವೇಳೆ ವೈದ್ಯರು ಜೀವಕೋಶಗಳನ್ನು ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಏಕೆ ಹೀಗೆ ಮಾಡಿದಿರಿ ಎಂದು ವೈದ್ಯರನ್ನ ಪ್ರಶ್ನೆ ಮಾಡಿದ್ದಕ್ಕೆ, ಪೋಷಕರ ಮೇಲೆ ದೌರ್ಜನ್ಯ ಮಾಡಿ ಅಲ್ಲಿಂದ ಹೊರ ಹಾಕಿದ್ದಾರಂತೆ.

    ಚಿಕಿತ್ಸೆ ನೀಡಿ ಸುಮಾರು 11 ತಿಂಗಳಾದರೂ ಮಗನಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಕೀರ್ತಿರಾಜ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿದ್ದು, ಅವರಂತೆ ಪೊಲೀಸ್ ಪಾತ್ರ ಮಾಡುವಂತೆ, ನಿಜ ಜೀವನದಲ್ಲಿ ಪೊಲೀಸ್ ಆಗುವ ಬಯಕೆ ವ್ಯಕ್ತಪಡಿಸಿದ್ದಾನೆ. ನಟ ದರ್ಶನ್‍ನನ್ನು ಒಮ್ಮೆಯಾದರು ನೋಡಬೇಕು ಎನ್ನುವ ಆಸೆ ಈ ಮಗುವಿಗಿದೆ. ಆದರೆ ವೈದ್ಯರು ಮಾಡಿದ ತಪ್ಪಿಗೆ ಈಗ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು. ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ತನ್ನ ತಂದೆಯ ಜೀವ ಉಳಿಸಲು ಮಗನಿಂದ ಸೈಕಲ್ ಸವಾರಿ!

    ತನ್ನ ತಂದೆಯ ಜೀವ ಉಳಿಸಲು ಮಗನಿಂದ ಸೈಕಲ್ ಸವಾರಿ!

    ಮೈಸೂರು: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೆ ಇಲ್ಲದಂತಾಗಿದೆ. ಆದರೆ ಇಲ್ಲೊಬ್ಬ ಯುವಕ ತನ್ನ ತಂದೆಗಾಗಿ ಲಿವರ್ ದಾನ ಮಾಡುತ್ತಿದ್ದು, ಆದರ್ಶ ಮಗನಾಗಿದ್ದಾರೆ.

    ಮೈಸೂರಿನ ವೀರನಗರ ನಿವಾಸಿಯಾಗಿರುವ ಪ್ರೀತೇಶ್ ಜೈನ್ ತನ್ನ ಅಪ್ಪನಿಗೆ ಲಿವರ್ ದಾನ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಲಿವರ್ ದಾನಕ್ಕೆ ತನ್ನ ದೇಹದ ತೂಕ ಅಡ್ಡಿ ಆಗಿತ್ತು. ಹೀಗಾಗಿ ಸದ್ಯ ದೇಹದ ತೂಕ ಇಳಿಸುತ್ತಿದ್ದಾರೆ. ಪ್ರೀತೇಶ್ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಯಾಗಿದ್ದು, ತಂದೆ ಅಶೋಕ್ ಜೈನ್ ಅವರು ಕಳೆದ ಎಂಟು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಎಷ್ಟೆ ಚಿಕಿತ್ಸೆ ಪಡೆದರು ಗುಣಮುಖವಾಗಲಿಲ್ಲ.

    ಕೊನೆಗೆ ವೈದ್ಯರು ತಂದೆ ಅಶೋಕ್ ಜೈನ್ ಅವರ ಯಕೃತ್ ಅನ್ನು ಸಂಪೂರ್ಣವಾಗಿ ತೆಗೆದು ಹೊಸ ಲಿವರ್ ಜೋಡಣೆ ಮಾಡಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಹೊಸ ಲಿವರ್ ನೀಡುವ ದಾನಿಗಳು ರಕ್ತ ಸಂಬಂಧಿಗಳು ಆದರೆ ಉತ್ತಮ ಎಂಬ ಸಲಹೆಯನ್ನು ನೀಡಿದ್ದಾರೆ. ಈ ಕಾರಣಕ್ಕೆ ಮಗ ಪ್ರೀತೇಶ್ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ತಮ್ಮ ಲಿವರ್ ದಾನ ಮಾಡಲು ಮುಂದಾಗಿದ್ದಾರೆ.

    ವೈದ್ಯರ ಸಲಹೆ ಮೇರೆಗೆ ಲಿವರ್ ದಾನ ಮಾಡಲು ಮುಂದಾದ ನನಗೆ ದೇಹದ ತೂಕ ಅಡ್ಡಿಯಾಗಿದೆ. ತಾವು 90 ಕೆ.ಜಿ. ತೂಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ದೇಹದ ತೂಕವನ್ನ 70 ರಿಂದ 75 ಕೆ.ಜಿ.ತೂಕಕ್ಕೆ ಇಳಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಈಗ ನಾನು ಪ್ರತಿದಿನ ದೇಹ ದಂಡಿಸುತ್ತಿದ್ದು, ದಿನದ ವ್ಯಾಯಾಮದ ಜೊತೆ ಪ್ರತಿದಿನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸೈಕಲ್ ತುಳಿಯುತ್ತಿದ್ದೇನೆ. ಈಗಾಗಲೇ ಕಳೆದ 27 ದಿನಗಳಿಂದ ದೇಹ ದಂಡಿಸುತ್ತಿದ್ದು, 7 ಕೆ.ಜಿ.ತೂಕ ಕಡಿಮೆ ಮಾಡಿಕೊಂಡಿದ್ದೇನೆ ಎಂದು ಪ್ರೀತೇಶ್ ಹೇಳಿದ್ದಾರೆ.

    ತನ್ನ ತಂದೆಯ ಜೀವ ಉಳಿಸಿಕೊಳ್ಳಲು ಮಗನು ಮಾಡುತ್ತಿರುವ ಕಸರತ್ತು ನಿಜಕ್ಕು ಎಲ್ಲರು ಮೆಚ್ಚುವಂತಹದ್ದಾಗಿದೆ. ಒಂದು ತಿಂಗಳ ಅವದಿಯಲ್ಲಿ 10 ಕೆ.ಜಿ. ತೂಕ ಇಳಿಸಲು ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ.

  • ಮೈಸೂರಿನಿಂದ ಬೆಂಗಳೂರಿಗೆ ರಸ್ತೆಯ ಮೂಲಕ ಸಾಗಿತು ಜೀವಂತ ಹೃದಯ

    ಮೈಸೂರಿನಿಂದ ಬೆಂಗಳೂರಿಗೆ ರಸ್ತೆಯ ಮೂಲಕ ಸಾಗಿತು ಜೀವಂತ ಹೃದಯ

    ಬೆಂಗಳೂರು: ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಿಂದ ನಗರದ ರಾಮಯ್ಯ ಆಸ್ಪತ್ರೆಗೆ ರಸ್ತೆಯ ಮೂಲಕವೇ ಜೀವಂತ ಹೃದಯ ಸಾಗಿಸಲಾಗಿದೆ.

    ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಕಾರ್ಡಿಯೋ ಮೈಯೋಪತಿ ಖಾಯಿಲೆಯಿಂದ 19 ವರ್ಷದ ಯುವಕನ ಬಳಲುತ್ತಿದ್ದ. ಹೀಗಾಗಿ ಪ್ರಪ್ರಥಮ ಬಾರಿಗೆ ರಸ್ತೆಯ ಮೂಲಕ ಮೈಸೂರಿನಿಂದ ನಗರದ ರಾಮಯ್ಯ ಆಸ್ಪತ್ರೆಗೆ ಹೃದಯವನ್ನು ರವಾನಿಸಲಾಗಿದೆ.

    ರಾಮಯ್ಯ ಆಸ್ಪತ್ರೆಯ ಇತಿಹಾಸದಲ್ಲಿ ಇದು 20ನೇ ಹೃದಯ ಕಸಿ ಶಸ್ತ್ರಚಿಕಿತ್ಸೆಯಾಗಿದೆ. ಈ ಕುರಿತು ರಾಮಯ್ಯ ಆಸ್ಪತ್ರೆಯ ಹೃದಯಕಸಿ ತಜ್ಞರಾದ ಡಾ.ನಾಗಮಲ್ಲೇಶ್ ಮಾತನಾಡಿ, ಮೈಸೂರಿನಲ್ಲಿ ಬ್ರೈನ್‍ಡೆಡ್ ಆದ ರೋಗಿಯ ಹೃದಯವನ್ನು ಇಂದು ನಮ್ಮ ಆಸ್ಪತ್ರೆಯ ರೋಗಿಗೆ ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

    ಇದೇ ಮೊದಲ ಬಾರಿಗೆ ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯವನ್ನ ರಸ್ತೆ ಮಾರ್ಗವಾಗಿ ತಂದು ಕಸಿ ಮಾಡಿದ್ದು, ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಪೊಲೀಸರು ಗ್ರೀನ್ ಕಾರಿಡಾರ್ ಮಾಡುವ ಮೂಲಕ ಜೀವಂತ ಹೃದಯವೂ ಮೈಸೂರಿನಿಂದ ಬೆಂಗಳೂರಿಗೆ ತಲುಪಲು ಸಹಕರಿಸಿದ್ದಾರೆ.

  • ಶನಿವಾರ ಪೂರ್ಣಾವಧಿ ಕೆಲಸಕ್ಕೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೂಚನೆ

    ಶನಿವಾರ ಪೂರ್ಣಾವಧಿ ಕೆಲಸಕ್ಕೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೂಚನೆ

    ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಬಂದ್ ಹಿನ್ನೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಗೆ ರಜೆ ನೀಡದಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

    ಸಾರ್ವಜನಿಕರಿಗೆ ತೊಂದರೆ ಆಗದಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದು, ಎಲ್ಲಾ ಸಿಬ್ಬಂದಿ ಶನಿವಾರ ಪೂರ್ಣಾವಧಿ ಕೆಲಸ ಮಾಡಬೇಕೆಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸೂಚನೆ ನೀಡಿದೆ.

    ಪ್ರತಿಭಟನೆ ಏಕೆ: ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಮಸೂದೆಯನ್ನು ಜಾರಿಗೆ ತರದಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘವು ಬಂದ್‍ಗೆ ಕರೆ ನೀಡಿದೆ. ಬಂದ್ ನಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಸೇವೆ ಹೊರತುಪಡಿಸಿ, ಉಳಿದ ಒಪಿಡಿ, ಪ್ರಯೋಗಾಲಯ ಸೇರಿದಂತೆ ವೈದ್ಯಕೀಯ ಸೇವೆ ಅಲಭ್ಯವಾಗಲಿದೆ.

    ಏನಿದು ಎನ್‍ಎಂಸಿ ಮಸೂದೆ?: ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಕ್ಷೇತ್ರ ಹಾಗೂ ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ‘ರಾಷ್ಟ್ರೀಯ ವೈದ್ಯಕೀಯ ಆಯೋಗ-2017’ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈಗಿರುವ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ವಿಸರ್ಜಿಸಿ ಅದರ ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ.