Tag: doctors

  • ಕೆಲಸ ಮಾಡದಿದ್ರೆ ನಾಯಿ ಸಹ ಮೂಸಿ ನೋಡಲ್ಲ: ಭಗವಂತ್ ಖೂಬಾ

    ಕೆಲಸ ಮಾಡದಿದ್ರೆ ನಾಯಿ ಸಹ ಮೂಸಿ ನೋಡಲ್ಲ: ಭಗವಂತ್ ಖೂಬಾ

    ಬೀದರ್: ಸರಿಯಾಗಿ ಕೆಲಸ ಮಾಡದೇ ಇದ್ದರೆ ನಾಯಿಗಳು ಸಹ ಮೂಸಿ ನೋಡಲ್ಲ ಎಂದು ಬ್ರಿಮ್ಸ್ ಆಸ್ಪತ್ರೆಯ ವೈದ್ಯರನ್ನು ಮತ್ತು ಅಧಿಕಾರಿಗಳನ್ನು ಸಂಸದ ಭಗವಂತ್ ಖೂಬಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಬ್ರಿಮ್ಸ್ ಆಸ್ಪತ್ರೆಯ ಮೇಲ್ಛಾವಣಿ ಕುಸಿತ ಹಿನ್ನೆಲೆ ಇಂದು ಅಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಖೂಬಾ ಅವರು, ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನಾಯಿ ಸಹ ಮೂಸಿ ನೋಡುವುದಿಲ್ಲ. 1 ವರ್ಷದ ಹಿಂದೆ 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬ್ರಿಮ್ಸ್ ಆಸ್ಪತ್ರೆ ಮೇಲ್ಛಾವಣಿ ಮಳೆಯಿಂದಾಗಿ ಕುಸಿದಿತ್ತು. ಜಿಲ್ಲಾ ಆಸ್ಪತ್ರೆಯ ಕಳಪೆ ಕಾಮಗಾರಿ ನಡೆದಿದೆ ಎಂದು ಇಂದು ಖೂಬಾ ಅವರು ಭೇಟಿ ನೀಡಿ ಸಭೆ ನಡೆಸಿ ಬ್ರೀಮ್ಸ್ ನಿರ್ದೇಶಕ ಕ್ಷೀರ ಸಾಗರನ್ನು ಸೇರಿದಂತೆ ವೈದ್ಯರನ್ನು ತರಾಟೆಗೆ ತಗೆದುಕೊಂಡರು.

    ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ್ದ ಸಿಬ್ಬಂದಿಗಳನ್ನು ಯಾಕೆ ಅಮಾನತು ಮಾಡಿಲ್ಲಾ.? ಆಸ್ಪತ್ರೆಯಲ್ಲಿ ಏನ್ ಕೆಲಸ ಮಾಡುತ್ತಿದ್ದೀರಾ. ನಿಮ್ಮ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದೀರಾ ಇಲ್ಲಾ ಜನರಿಗಾಗಿ ಕೆಲಸ ಮಾಡುತ್ತಿದ್ದಿರಾ..? ನಿರ್ಲಕ್ಷ್ಯ ತೋರಿದವರನ್ನು ಅಮಾನತು ಮಾಡದೇ ಹೇಗೆ ತನಿಖೆ ನಡೆಸುತ್ತಿರಾ ಎಂದು ಪ್ರಶ್ನಿಸಿ ಅಧಿಕಾರಿಗಳ ಮೇಲೆ ಕೋಪಗೊಂಡರು.

  • ವೈದ್ಯರಿಂದ ಮಹಿಳಾ ರೋಗಿಯ ತಪಾಸಣೆಯ ವಿಡಿಯೋ ಅಪ್ಲೋಡ್

    ವೈದ್ಯರಿಂದ ಮಹಿಳಾ ರೋಗಿಯ ತಪಾಸಣೆಯ ವಿಡಿಯೋ ಅಪ್ಲೋಡ್

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಚಿಕಿತ್ಸೆಗೆ ಬಂದಿದ್ದ ಮಹಿಳಾ ರೋಗಿಯ ತಪಾಸಣೆಯ ವಿಡಿಯೋವನ್ನು ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ಸಂತ್ರಸ್ತೆಯೊಬ್ಬಳು ಈ ಕುರಿತು ದೂರು ನೀಡಿದಾಗ ವೈದ್ಯರ ಕೃತ್ಯ ಪೊಲೀಸರ ಗಮನಕ್ಕೆ ಬಂದಿದೆ.

    ವೈದ್ಯನೊಬ್ಬ ಮಹಿಳೆಗೆ ತಪಾಸಣೆ ಮಾಡುತ್ತಿದ್ದ ದೃಶ್ಯವನ್ನು ವಿಡಿಯೋ ಮಾಡಿದ್ದಾನೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ಗಮನಕ್ಕೆ ಬಂದಿದೆ. ಇದರಿಂದ ಆಘಾತಕ್ಕೆ ಒಳಗಾದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ವರದಿಯಾಗಿದೆ.

    ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ರಜೌರಿ ಜಿಲ್ಲೆಯ ಕ್ಲಿನಿಕ್‍ನಲ್ಲಿ ವಿಡಿಯೋ ಮಾಡಿರುವು ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ನಾಲ್ವರು ವೈದ್ಯರು ಭಾಗಿಯಾಗಿದ್ದಾರೆ ಪೊಲೀಸರು ತಿಳಿಸಿದ್ದಾರೆ.

  • ಎಮ್‌ಆರ್‌ಐ, ಸಿಟಿ ಸ್ಕ್ಯಾನಿಂಗ್ ಆಗುತ್ತೆ, ಆದ್ರೆ ರಿಪೋರ್ಟ್ ಸಿಗಲ್ಲ – ಇದು ತುಮಕೂರು ಜಿಲ್ಲಾಸ್ಪತ್ರೆಯ ಸ್ಥಿತಿ

    ಎಮ್‌ಆರ್‌ಐ, ಸಿಟಿ ಸ್ಕ್ಯಾನಿಂಗ್ ಆಗುತ್ತೆ, ಆದ್ರೆ ರಿಪೋರ್ಟ್ ಸಿಗಲ್ಲ – ಇದು ತುಮಕೂರು ಜಿಲ್ಲಾಸ್ಪತ್ರೆಯ ಸ್ಥಿತಿ

    ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಎಮ್.ಆರ್.ಐ ಮತ್ತು ಸಿ.ಟಿ ಸ್ಕ್ಯಾನಿಂಗ್‍ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ವೈದ್ಯರು ಎಮ್‍ಆರ್‍ಐ, ಸಿ.ಟಿ ಸ್ಕ್ಯಾನಿಂಗ್ ಮಾಡುತ್ತಾರೆ. ಆದರೆ ರಿಪೋರ್ಟ್ ನೀಡುವುದಿಲ್ಲ. ಕೇವಲ ಫಿಲಂ ನೋಡಿ ವೈದ್ಯರು ಚಿಕಿತ್ಸೆ ಕೊಡುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಈ ನಿರ್ಲಕ್ಷ್ಯದಿಂದ ರೋಗಿಗಳು ಆತಂಕಗೊಂಡಿದ್ದಾರೆ.

    ಕಳೆದ ಐದು ದಿನದಿಂದ ಸಿ.ಟಿ.ಸ್ಕ್ಯಾನ್ ಮತ್ತು ಎಮ್.ಆರ್.ಐ ಸ್ಕ್ಯಾನ್‍ಗಳ ರಿಪೋರ್ಟ್ ಸಿಗುತ್ತಿಲ್ಲ. ವೈದ್ಯರು ಕೇವಲ ಸ್ಕ್ಯಾನ್ ಮಾಡಿ ನಂತರ ಸ್ಕ್ಯಾನ್ ಫಿಲಂ ನೋಡಿ ಚಿಕಿತ್ಸೆ ಕೊಡುವ ದುಃಸ್ಥಿತಿ ಬಂದಿದೆ. ಯಾಕೆ ಈ ಸಮಸ್ಯೆ ಎಂದು ಕೇಳಿದರೆ, ಬಿಎಸ್‍ಎನ್‍ಎಲ್ ಬ್ರಾಡ್‍ಬ್ಯಾಂಡ್ ಕೆಟ್ಟು ಹೋಗಿದ್ದರಿಂದ ರಿಪೋರ್ಟ್ ನೀಡಲು ಆಗುತ್ತಿಲ್ಲ ಎಂದು ಕ್ಷುಲ್ಲಕ ಕಾರಣವನ್ನು ವೈದ್ಯರು ನೀಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ 60 ಹೆಚ್ಚೂ ರೋಗಿಗಳಿಗೆ ರಿಪೋರ್ಟ್ ನೀಡದೇ ಕೇವಲ ಫಿಲಂ ನೋಡಿ ಚಿಕಿತ್ಸೆ ಕೊಡಲಾಗಿದೆ.

    ಕಳೆದ ನಾಲ್ಕು ದಿನದಿಂದ ಬ್ರಾಡ್‍ಬ್ಯಾಂಡ್ ಸಂಪರ್ಕ ಇಲ್ಲ ಅದರೂ ಸ್ಕ್ಯಾನಿಂಗ್ ಸೆಂಟರ್ ಸಿಬ್ಬಂದಿ ಸುಮ್ಮನೆ ಕೂತಿದ್ದಾರೆ. ಬಿಎಸ್‍ಎನ್‍ಎಲ್ ಕಚೇರಿಗೆ ಎರಡು ಬಾರಿ ಫೋನ್ ಮಾಡಿ ಕೈ ತೊಳೆದುಕೊಂಡಿದ್ದಾರೆ ಹೊರತು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ. ಕೆಲ ರೋಗಿಗಳು ರಿಪೋರ್ಟ್ ಇಲ್ಲದೆ ಚಿಕಿತ್ಸೆ ಪಡೆಯಲು ನಿರಾಕರಿಸಿ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಇನ್ನೂ ಕೆಲವರು ವಿಧಿಯಿಲ್ಲದೆ ಫಿಲಂ ಮೂಲಕ ಚಿಕಿತ್ಸೆ ಪಡೆದು ಹೋಗಿದ್ದಾರೆ.

    ಅಪಘಾತದ ಸಂದರ್ಭದಲ್ಲಿ ತಲೆಗೆ ಪೆಟ್ಟಾದ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಕೊಡದೇ ವಾಪಸ್ ಕಳುಹಿಸಿದ ಪ್ರಸಂಗವೂ ನಡೆದಿದೆ. ಸಣ್ಣಪುಟ್ಟ ಸಮಸ್ಯೆಗಳನ್ನೂ ತಕ್ಷಣ ಸರಿಪಡಿಸಿಕೊಳ್ಳದ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಶ್ರೀಲಂಕಾ ಸ್ಫೋಟ: ಡಿಎನ್‍ಎ ಪರೀಕ್ಷೆ ಹೇಗೆ? ಯಾಕೆ ಮಾಡುತ್ತಾರೆ?

    ಶ್ರೀಲಂಕಾ ಸ್ಫೋಟ: ಡಿಎನ್‍ಎ ಪರೀಕ್ಷೆ ಹೇಗೆ? ಯಾಕೆ ಮಾಡುತ್ತಾರೆ?

    ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿ ಘಟನೆಯಲ್ಲಿ ಕರ್ನಾಟಕ ಇಬ್ಬರು ನಾಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ದೇಹಗಳು ಸಿಕ್ಕಿದ್ದು ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದು, ಸಾವನ್ನಪ್ಪಿದ್ದ ಬಗ್ಗೆ ಮಾಹಿತಿ ಪಡೆಯಲು ತಜ್ಞರು ಡಿಎನ್‍ಎ ಪರೀಕ್ಷೆ ಮೊರೆ ಹೋಗುವ ಸಾಧ್ಯತೆ ಇದೆ.

    ವ್ಯಕ್ತಿಯೊಬ್ಬರು ಸಾವನ್ನಪ್ಪಿ ಆತನ ಗುರುತು ಲಭ್ಯವಾಗದ ಸಂದರ್ಭದಲ್ಲಿ ಈ ವಿಧಾನವನ್ನು ತಜ್ಞರು ಬಳಕೆ ಮಾಡುತ್ತಾರೆ. ಅದರಲ್ಲೂ ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಹೆಚ್ಚಿನ ಮಂದಿ ಸಾವನ್ನಪ್ಪಿದ ಪರಿಣಾಮ ಸದ್ಯ ಪ್ರಕ್ರಿಯೆ ತಡವಾಗಬಹುದು ಎಂದು ಬೆಂಗಳೂರಿನ ಸಂಶೋಧಕ, ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ರಾವ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಡಿಎನ್‍ಎ ಪರೀಕ್ಷೆ ಹೇಗೆ?
    ವೈದಕೀಯ ಪರೀಕ್ಷೆಯಲ್ಲಿ ಡಿಎನ್‍ಎ ಪ್ರಕ್ರಿಯೆಯನ್ನು ಪ್ರೊಫೈಲಿಂಗ್ ಎಂದು ಕರೆಯುತ್ತಾರೆ. ಈ ವೇಳೆ ಟಿಶ್ಯೂ ಸ್ಯಾಂಪಲಿಂಗ್ ಮೂಲಕ ದೇಹದ ಗುರುತು ಪತ್ತೆ ಹಚ್ಚಲಾಗುತ್ತದೆ. ಸಾಮಾನ್ಯ ಪ್ರಕರಣದಲ್ಲಿ ಡಿಎನ್‍ಎ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನೇ ಬಳಸುತ್ತಾರೆ. ವಿಶೇಷ ಸಂದರ್ಭದಲ್ಲಿ ಡಿಎನ್‍ಎ ಪರೀಕ್ಷೆ ಮಾಡಲು ಕೂದಲು, ಉಗುರು, ಚರ್ಮವನ್ನು ಪಡೆಯಲಾಗುತ್ತದೆ.

    ಯಾರ ಡಿಎನ್‍ಎ ಪಡೆಯುತ್ತಾರೆ?
    ಈ ಪರೀಕ್ಷೆಯನ್ನು ನಡೆಸಲು ಮೃತ ವ್ಯಕ್ತಿಯ ವ್ಯಕ್ತಿಯ ಮಗ, ಸಹೋದರರು, ತಂದೆ, ತಾಯಿ ಹಾಗೂ ರಕ್ತ ಸಂಬಂಧಿಕರ ಮಾದರಿಯನ್ನು ಪಡೆಯುತ್ತಾರೆ. ಆದರೆ ಪತ್ನಿ, ಪತಿಯ ಡಿಎನ್‍ಎ ನಿಂದ ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗುತ್ತದೆ. ಸಂಬಂಧಿಕರ ಬಳಿ ಪಡೆದ ಮಾದರಿಯನ್ನು ಮೃತ ವ್ಯಕ್ತಿಯ ದೇಹದ ಡಿಎನ್‍ಎಗೆ ಹೋಲಿಕೆ ಮಾಡಿ ನೋಡಲಾಗುತ್ತದೆ. ವಿಶೇಷವೆಂದರೆ ಡಿಎನ್‍ಎ ಪರೀಕ್ಷೆಯಲ್ಲೂ ಶೇ.100ಕ್ಕೆ 100 ರಷ್ಟು ಹೊಂದಾಣಿಕೆ ಆಗುವುದಿಲ್ಲ. ಕೇವಲ ಶೇ.60 ರಿಂದ 70 ರಷ್ಟು ಹೊಂದಾಣಿಕೆಯಾಗುತ್ತದೆ. ಈ ಫಲಿತಾಂಶದ ಆಧಾರದಲ್ಲಿ ಮೃತ ದೇಹವನ್ನು ಗುರುತಿಸಲಾಗುತ್ತದೆ.

    ಡಿಎನ್‍ಎ ಪರೀಕ್ಷೆ ಏಕೆ?
    ಸಾಮಾನ್ಯ ಪ್ರಕರಣದಲ್ಲಿ ಡಿಎನ್‍ಎ ಪರೀಕ್ಷೆಯನ್ನು ವ್ಯಕ್ತಿಯ ಗುರುತು ಪತ್ತೆ ಮಾಡಲು ಬಳಕೆ ಮಾಡುತ್ತಾರೆ. ಆದರೆ ಇಂತಹ ಘೋರ ದಾಳಿ ಸಂದರ್ಭದಲ್ಲಿ ಮೃತ ವ್ಯಕ್ತಿಯ ದೇಹದ ಭಾಗಗಳು ಛಿದ್ರ ಛಿದ್ರವಾಗಿರುವ ಕಾರಣ ಪರೀಕ್ಷೆ ನಡೆಸುವುದು ಕಡ್ಡಾಯವಾಗುತ್ತದೆ. ಏಕೆಂದರೆ ಆತ್ಮಾಹುತಿ ದಾಳಿ ನಡೆಸಿದ ವ್ಯಕ್ತಿಯ ದೇಹದ ಭಾಗಗಳು ಇಲ್ಲಿ ಲಭ್ಯವಾಗುವುದರಿಂದ ಪೊಲೀಸ್ ತನಿಖೆ ನಡೆಸಲು ಪ್ರಮುಖ ಸಾಕ್ಷಿಯಾಗಿ ಲಭ್ಯವಾಗಲಿದೆ. ಇವುಗಳ ಆಧಾರ ಮೇಲೆಯೇ ಮುಂದಿನ ತನಿಖೆ ಬಹುಬೇಗ ನಡೆಯುವ ಸಾಧ್ಯತೆ ಇರುತ್ತದೆ. ಅಲ್ಲದೇ ದಾಳಿ ಹಿಂದಿನ ಆರೋಪಿಗಳ ಪತ್ತೆಗೂ ಇವು ನೆರವು ನೀಡಲಿದೆ.

    ಶ್ರೀಲಂಕಾದಲ್ಲಿ ನಡೆದ ಸ್ಫೋಟದಲ್ಲಿ ಹಲವು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮೃತದೇಹಗಳ ಸಂಖ್ಯೆ ಹೆಚ್ಚಾಗಿದ್ದು, ಡಿಎನ್‍ಎ ಪರೀಕ್ಷೆ ಸೇರಿದಂತೆ ಇತರೇ ಪರೀಕ್ಷೆಗಳನ್ನು ನಡೆಸಲು ಕಾಲಾವಕಾಶದ ಅಗತ್ಯವಿರುತ್ತದೆ. ವಿದೇಶಾಂಗ ಇಲಾಖೆ ಎಷ್ಟೇ ನಿರಂತರವಾಗಿ ಸಂಪರ್ಕ ಸಾಧಿಸಿ ನಮ್ಮವರ ಬಗ್ಗೆ ಮಾಹಿತಿ ಲಭಿಸಲು ಸಮಯ ಬೇಕಾಗುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

  • ಗೌಡ್ರ ಕುಟುಂಬದಲ್ಲೀಗ ಎಲೆಕ್ಷನ್ ಫಿಟ್‍ನೆಸ್ ಮಂತ್ರ – ಡಯೆಟ್‍ಗೆ ರೇವಣ್ಣ ನೋ ನೋ

    ಗೌಡ್ರ ಕುಟುಂಬದಲ್ಲೀಗ ಎಲೆಕ್ಷನ್ ಫಿಟ್‍ನೆಸ್ ಮಂತ್ರ – ಡಯೆಟ್‍ಗೆ ರೇವಣ್ಣ ನೋ ನೋ

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಿಂದ ಮೂರು ಜನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಅವರ ಮನೆಯಲ್ಲಿ ಫುಲ್ ಟೈಂ ಪಾಲಿಟಿಕ್ಸ್ ಟೆನ್ಶನ್ ಇರುತ್ತದೆ. ಆದರೂ ಇದರ ಮಧ್ಯೆ ಗೌಡರ ಕುಟುಂಬ ಚುನಾವಣೆ ಸಮಯದಲ್ಲಿ ಫುಲ್ ಹೆಲ್ತ್ ಫಿಟ್‍ನೆಸ್ ಮಂತ್ರ ಪಠಿಸುತ್ತಿದೆ.

    ಹೌದು. ತುಮಕೂರು, ಹಾಸನ, ಮಂಡ್ಯ ಎಂದು ಫುಲ್ ಎಲೆಕ್ಷನ್ ಪ್ರಚಾರಕ್ಕೆ ಓಡಾಡುತ್ತಿರುವ ಗೌಡರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಸಿಎಂ ಕುಮಾರಸ್ವಾಮಿ ಅವರು ಕೂಡ ಆರೋಗ್ಯದ ಮಂತ್ರ ಜಪಿಸುತ್ತಲೇ ಮಗನಿಗಾಗಿ ಪ್ರಚಾರದ ಹುರುಪಿನಲ್ಲಿದ್ದಾರೆ.

    ದೇವೇಗೌಡರು ಮುದ್ದೆ ಬಸ್ಸಾರು ಬಿಟ್ರೆ ಮಾಂಸಹಾರ ಸೇವನೆ ಮಾಡುತ್ತಿಲ್ಲ. ಮಧ್ಯಾಹ್ನ, ಬೆಳಗ್ಗೆ ಹಸಿಕಾಳು ಇದ್ದೇ ಇರುತ್ತದೆ. ದೇವೇಗೌಡರು ಅಪ್ಪಿತಪ್ಪಿಯೂ ಜಿಡ್ಡು ಪದಾರ್ಥ ಮತ್ತು ಸ್ವೀಟ್ ಮುಟ್ಟವಂತಿಲ್ಲ. ನಿತ್ಯ ಬಿಸಿನೀರು ಸೇವನೆ ಮಾಡುತ್ತಾರೆ. ಸಮಯ ಸಿಕ್ಕಾಗ ಪ್ರಾಣಯಾಮ ಮಾಡುತ್ತಾರೆ. ಜೊತೆಗೆ ವೈದ್ಯರು ಕೊಟ್ಟ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಕೂಡ ವಾಕಿಂಗ್, ಮುದ್ದೆಯೂಟ ಮಾಡುತ್ತಾರೆ. ಪ್ರತೀ ದಿನ ಹೆಲ್ತ್ ಚೆಕಪ್ ಇರುತ್ತದೆ. ಮನೆಯಲ್ಲಿ ಇಬ್ಬರು ರಕ್ತದೊತ್ತಡ, ಬಿಪಿ ಶುಗರ್ ಲೆವೆಲ್ ನಿತ್ಯ ಚೆಕ್ ಮಾಡುತ್ತಿದ್ದಾರೆ. ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆ ಪಡೆದುಕೊಳ್ಳುತ್ತಾರೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.

    ರೇವಣ್ಣ ಮಾತ್ರ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವ ಅವರು ಅಲ್ಲಿ ಕೊಡುವ ಪ್ರಸಾದ ತಿಂದು ತಿಂದು ಶುಗರ್ ಲೆವಲ್ ಹೆಚ್ಚು ಮಾಡಿಕೊಳ್ಳುತ್ತಾರೆ. ವೈದ್ಯರ ಡಯೆಟ್ ಟಿಪ್ಸ್ ಪಾಲಿಸೋದು ಸ್ವಲ್ಪ ಕಡಿಮೆ. ಇದಕ್ಕಾಗಿ ಚುನಾವಣಾ ಟೈಂನಲ್ಲಿ ಪ್ರಸಾದ ತಿನ್ನೋದು ಸ್ವಲ್ಪ ಕಡಿಮೆ ಮಾಡಿ ಎಂದು ವೈದ್ಯರು ಸಲಹೆ ಕೊಟ್ಟಿದ್ದಾರೆ.

  • ಉತ್ತರಕರ್ನಾಟಕದಲ್ಲೇ ಫಸ್ಟ್ ಟೈಂ- ವೈದ್ಯರಿಂದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

    ಉತ್ತರಕರ್ನಾಟಕದಲ್ಲೇ ಫಸ್ಟ್ ಟೈಂ- ವೈದ್ಯರಿಂದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

    ಧಾರವಾಡ: ಜಗತ್ತಿನಲ್ಲಿ ಇತ್ತೀಚೆಗೆ ಅತೀ ಹೆಚ್ಚು ಜನಪ್ರಿಯವಾಗಿರುವ ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಧಾರವಾಡ ನಾರಾಯಣ ಹೃದಯಾಲಯ ಯಶಸ್ವಿಯಾಗಿದೆ. ವಿಶೇಷ ಅಂದ್ರೆ ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಇಂತಹದ್ದೊಂದು ಪ್ರಯತ್ನ ಮಾಡಿ ಸಾಧನೆ ಮಾಡಿದ ಆಸ್ಪತ್ರೆ ಎಂದು ಎನಿಸಿಕೊಂಡಿದೆ.

    ಈ ಚಿಕಿತ್ಸೆ ಮೂಲಕ ತೀವ್ರ ಹೃದ್ರೋಗದಿಂದ ಬಳಲುತ್ತಿದ್ದ ಐದು ಜನಕ್ಕೆ ಚಿಕಿತ್ಸೆ ನೀಡಿ ನಾರಾಯಣ ಹೃದಯಾಲಯ ಹೊಸ ಜೀವನ ಕಲ್ಪಿಸಿದೆ. 28 ವರ್ಷದ ಸಾವಿತ್ರಿ ಕಮ್ಮಾರ್, 40 ವರ್ಷದ ಲಕ್ಷ್ಮಿದೇವಿ ಲೋಕನಗೌಡರ, 21 ವರ್ಷದ ವಿಶಾಲ್ ದೊಡ್ಡಮನಿ ಮತ್ತು ವಿಶೇಷ ಅಂದ್ರೆ 4 ವರ್ಷದ ಚೇತನ್ ಎಂಬಾತನಿಗೆ ಈ ಚಿಕಿತ್ಸೆ ಮೂಲಕ ಗುಣಪಡಿಸಿ ವೈದ್ಯ ಲೋಕದ ಸವಾಲು ಮೆಟ್ಟಿನಿಂತಿದ್ದಾರೆ.

    ಬೆಂಗಳೂರಿನ ಹೆಸರಾಂತ ವೈದ್ಯ ಡಾ. ರವಿಶಂಕರ್ ಶೆಟ್ಟಿ, ಧಾರವಾಡದ ಡಾ. ಷಣ್ಮುಖ ಹಿರೇಮಠ್, ಡಾ. ವಿವೇಕಾನಂದ ಗಜಪತಿ, ಡಾ. ಪ್ರಮೋದ್ ಹೂನ್ನೂರ ಅವರನ್ನೊಳಗೊಂಡ ತಂಡ ಈ ವಿನೂತನ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ.

    ಈ ಚಿಕಿತ್ಸೆ ವಿಧಾನದ ಬಗ್ಗೆ ವಿವರಿಸಿದ ವೈದ್ಯ ಡಾ. ರವಿಶಂಕರ್, ಈ ವಿಧಾನದಲ್ಲಿ ಕೇವಲ ಪಕ್ಕೆಲುಬಿನ ಬದಿಯಲ್ಲಿ ಸಣ್ಣ ರಂಧ್ರವನ್ನು ಕೊರೆದು ಶಸ್ತ್ರ ಚಿಕಿತ್ಸೆ ನಿರ್ವಹಿಸಲಾಗುತ್ತದೆ. ಜೊತೆಗೆ ಹೃದಯ ಮತ್ತು ಶ್ವಾಸಕೋಶದ ಬೈಪಾಸ್ ಯಂತ್ರದ ನೆರವಿನಲ್ಲಿ ರಕ್ತನಾಳ ಹಾಗೂ ಕಿರು ರಕ್ತನಾಳಗಳನ್ನು ಕೆಲವೊಮ್ಮೆ ಆಂತರಿಕ ನರಸಮೂಹಕ್ಕೆ ಚಿಕಿತ್ಸೆ ನೀಡಲಾಗುತ್ತೆ ಎಂದು ವಿವರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದಲ್ಲಿ ಫಸ್ಟ್ – ಗರ್ಭಕೋಶ ಬದಲು ಅಂಡಾಶಯದಲ್ಲಿ ಬೆಳೆದ ಮಗು

    ಭಾರತದಲ್ಲಿ ಫಸ್ಟ್ – ಗರ್ಭಕೋಶ ಬದಲು ಅಂಡಾಶಯದಲ್ಲಿ ಬೆಳೆದ ಮಗು

    ದಾವಣಗೆರೆ: ವೈದ್ಯಕೀಯ ಇತಿಹಾಸದಲ್ಲೇ ವಿರಳವೆನ್ನುವ ಶಸ್ತ್ರ ಚಿಕಿತ್ಸೆಯನ್ನು ದಾವಣಗೆರೆಯ ವೈದ್ಯರು ಮಾಡಿ ಯಶಸ್ವಿಯಾಗಿದ್ದಾರೆ.

    ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ್ದು, ತಾಯಿಯ ಗರ್ಭಕೋಶದಲ್ಲಿ ಬೆಳೆಯಬೇಕಿದ್ದ ಮಗುವು ಅಂಡಾಶಯದಲ್ಲಿ ಬೆಳೆದಿತ್ತು. ಇದರಿಂದ ವೈದ್ಯರು ಅನಿತಾ ರವಿ ಮತ್ತು ತಂಡದವರು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರ ತೆಗೆದಿದ್ದಾರೆ.

    ಈ ಘಟನೆ ಭಾರತದ ಇತಿಹಾಸದಲ್ಲೇ ಪ್ರಥಮವಾಗಿದ್ದು, ಬಾಪೂಜಿ ಆಸ್ಪತ್ರೆಯ ವೈದ್ಯೆ ಅನಿತ ರವಿ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರ ತೆಗೆದಿದ್ದಾರೆ. ಫೆಬ್ರವರಿ 27ರಂದು ಶಸ್ತ್ರ ಚಿಕಿತ್ಸೆ ನಡೆದಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಮ್ಮ ಬುದ್ಧಿವಾದ ಹೇಳಿದ್ದಕ್ಕೆ ಇಲಿಪಾಶಾಣ ಸೇವಿಸಿದ್ಳಾ ಹುಡುಗಿ..?

    ಅಮ್ಮ ಬುದ್ಧಿವಾದ ಹೇಳಿದ್ದಕ್ಕೆ ಇಲಿಪಾಶಾಣ ಸೇವಿಸಿದ್ಳಾ ಹುಡುಗಿ..?

    ಚಿತ್ರದುರ್ಗ: ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹುಡುಗಿ ಮೃತಪಟ್ಟಿರುವ ಘಟನೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ತಳವರಹಟ್ಟಿ ಗ್ರಾಮದ ಕಮಲ (17) ಮೃತ ವಿದ್ಯಾರ್ಥಿನಿ. ತಡರಾತ್ರಿ ವೈದ್ಯರು ನಿರ್ಲಕ್ಷ್ಯ ಮಾಡಿದ್ದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಕಮಲ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದು, ವೈದ್ಯರು ಮತ್ತು ಮೃತ ಸಂಬಂಧಿಕರ ನಡುವೆ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆದಿದೆ.

    ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 9 ರವರೆಗೂ ಚೆನ್ನಾಗಿ ಇದ್ದಾರೆ ಎಂದು ಹೇಳುತ್ತಿದ್ದ ವೈದ್ಯರು. ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ತಡರಾತ್ರಿ ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಘಟನೆ ಬಗ್ಗೆ ತನಿಖೆ ಮಾಡುವುದಾಗಿ ಹೇಳಿ ಮೃತ ಹುಡುಗಿಯ ಪೋಷಕರು ಮತ್ತು ಸಂಬಂಧಿಕರಿಗೆ ಸಮಾಧಾನ ಮಾಡಿದ್ದಾರೆ. ಜೊತೆಗೆ ಸ್ಥಳಕ್ಕೆ ಆಗಮಿಸಿ ಚಿತ್ರದುರ್ಗ ನಗರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

    ಮೃತ ಕಮಲ ಹುಡುಗನ ಜೊತೆ ಮಾತನಾಡುತ್ತಿದ್ದಳು. ಹೀಗಾಗಿ ಅವರ ತಾಯಿ ಕರೆದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಆಕೆ ಇಲಿಪಾಶಾಣ ಸೇವನೆ ಮಾಡಿದ್ದಾಳೆ ಎಂದು ಸಂಬಂಧಿಕರು ಹೇಳಿದ್ದಾರೆ. ಸದ್ಯಕ್ಕೆ ಮೃತ ಕಮಲ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸಿದ ಬಳಿಕ ಸತ್ಯಾಸತ್ಯತೆ ತಿಳಿಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಇಕ್ಕಳ ಬಿಟ್ಟ ವೈದ್ಯರು

    ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಇಕ್ಕಳ ಬಿಟ್ಟ ವೈದ್ಯರು

    – ಮೂರು ತಿಂಗಳ ಬಳಿಕ ಬೆಳಕಿಗೆ ಬಂತು ವೈದ್ಯರ ನಿರ್ಲಕ್ಷ್ಯ

    ಹೈದರಾಬಾದ್: ಶಸ್ತ್ರಚಿಕಿತ್ಸೆ ವೇಳೆ ಮಹಿಳಾ ರೋಗಿಯ ದೇಹದಲ್ಲಿ ಇಕ್ಕಳ (ಶಸ್ತ್ರಚಿಕಿತ್ಸೆ ವಸ್ತು) ಮರೆತ ಘಟನೆ ಹೈದ್ರಾಬಾದ್‍ನ ನಿಜಾಮ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ನಿಮ್ಸ್)ನಲ್ಲಿ ನಡೆದಿದೆ.

    ವೈದ್ಯರ ಈ ನಿರ್ಲಕ್ಷ್ಯದಿಂದಾಗಿ ಮಹಿಳೆ ಮೂರು ತಿಂಗಳ ಕಾಲ ಭಾರೀ ನೋವು ಅನುಭವಿಸಿದ್ದಾರೆ. ಮಹಿಳೆಯ ಹೊಟ್ಟೆಯಲ್ಲಿ ಇಕ್ಕಳ ಪತ್ತೆಯಾಗುತ್ತಿದ್ದಂತೆ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೈದರಾಬಾದ್‍ನ ಮಂಗಲ್ಹಾಟ್ ಪ್ರದೇಶದ ಮಹೇಶ್ವರಿ ಚೌದರಿ (33) ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ನಿಮ್ಸ್ ನಲ್ಲಿ ಆಪರೇಷನ್ ಮಾಡಿಸಿಕೊಂಡಿದ್ದರು. ಬಳಿಕ ಮನೆಗೆ ವಾಪಾಸ್ ಆಗಿದ್ದ ಮಹೇಶ್ವರಿ ಅವರಿಗೆ ಮತ್ತೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಎಕ್ಸ್ ರೇ ತೆಗೆಸಿದಾಗ ವೈದ್ಯರ ಎಡವಟ್ಟು ಬೆಳಕಿಗೆ ಬಂದಿದೆ.

    ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಮಹೇಶ್ವರಿ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಧರಣಿ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಶಸ್ತ್ರಚಿಕಿತ್ಸೆ ಬಳಿಕವೂ ಮಹೇಶ್ವರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ವೈದ್ಯರ ಸಲಹೆಯಂತೆ ಸಾಕಷ್ಟು ಮಾತ್ರೆ, ಔಷಧಿ ಸೇವಿಸಿದರೂ ಗುಣಮುಖಳಾಗಲಿಲ್ಲ. ಹೊಟ್ಟೆಯಲ್ಲಿ ಇಕ್ಕಳ ಬಿಟ್ಟಿದ್ದೇ ಇಷ್ಟು ಸಮಸ್ಯೆಗೆ ಕಾರಣವಾಗಿದೆ ಎಂದು ಮಹೇಶ್ವರಿ ಹತ್ತಿರ ಸಂಬಂಧಿ ದೂರಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿಮ್ಸ್ ವೈದ್ಯ ಕೆ.ಮನೋಹರ್, ಹೊಟ್ಟೆ ನೋವಿನಿಂದಾಗಿ ಮಹೇಶ್ವರಿ ಅವರು ಅಕ್ಟೋಬರ್ 28ರಂದು ಆಸ್ಪತ್ರೆ ದಾಖಲಾಗಿದ್ದರು. ಅವರಿಗೆ ನವೆಂಬರ್ ಮೊದಲವಾರ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಚೇತರಿಸಿಕೊಂಡ ಬಳಿಕ ಅವರನ್ನು ನವೆಂಬರ್ 12ರಂದು ಮನೆಗೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ವೈದ್ಯರಾದ ಬೀರಪ್ಪ, ವೇಣು ಹಾಗೂ ವರ್ಮಾ ಅವರು ಮಹೇಶ್ವರಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮನೋಹರ್ ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡು ದೇಹ, 2 ಬಾಲ, 7 ಕಾಲುಗಳುಳ್ಳ ಕರು ಜನನ

    ಎರಡು ದೇಹ, 2 ಬಾಲ, 7 ಕಾಲುಗಳುಳ್ಳ ಕರು ಜನನ

    ಚೆನ್ನೈ: ತೆಲಂಗಾಣದ ನಾಗಪಟ್ಟಿಣಂ ನಲ್ಲಿ ಒಂದು ಹಸು ಎರಡು ದೇಹ, ಎರಡು ಬಾಲ ಹಾಗೂ ಏಳು ಕಾಲುಗಳನ್ನು ಹೊಂದಿರುವ ಅಸಾಮಾನ್ಯ ಕರುವಿಗೆ ಜನ್ಮ ನೀಡಿದೆ.

    ಭಾನುವಾರ ನಾಗಪಟ್ಟನಂ ಬಳಿಕಯ ವೆಟ್ಟೈಕಾರಣಿರುಪ್ಪು ಗ್ರಾಮದಲ್ಲಿ ಈ ರೀತಿ ಕರು ಜನಿಸಿದೆ. ರೈತ ಜೆಗನ್ ಎಂಬವರಿಗೆ ಸೇರಿದ್ದ ಹಸು ಏಳು ಕಾಲು, ಎರಡು ದೇಹ ಹಾಗೂ ಎರಡು ಬಾಲ ಇರುವ ಕರುವಿಗೆ ಜನ್ಮ ಕೊಟ್ಟಿದೆ.

    ನಾಗಪಟ್ಟಣಂ ಜಿಲ್ಲೆಯ ಪಶುವೈದ್ಯ ವೈದ್ಯರ ಸಹಾಯದಿಂದ ಕರುವಿಗೆ ಸೂಕ್ತವಾದ ಶಸ್ತ್ರ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರೈತ ತಿಳಿಸಿದ್ದಾರೆ. ಅಸಾಮಾನ್ಯ ಕರು ಜನಿಸಿರುವ ಬಗ್ಗೆ ತಿಳಿದು ಗ್ರಾಮದ ಜನರು ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಅಪಾರ ಸಂಖ್ಯೆಯ ಜನರು ಬಂದು ಕರುವನ್ನು ನೋಡುತ್ತಿದ್ದಾರೆ.

    ಇತ್ತೀಚಿನ ‘ಗಜ’ ಚಂಡಮಾರುತದ ಸಮಯದಲ್ಲಿ ಪೀಡಿತ ಗ್ರಾಮಗಳಲ್ಲಿ ವೆಟ್ಟಿಕರಣಿರುಪ್ಪು ಕರಾವಳಿ ಹಳ್ಳಿಯು ಒಂದಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv