Tag: doctors

  • ರಾಜಸ್ಥಾನ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ಹಂದಿ ಜ್ವರ & ಕೋವಿಡ್‌ ಪಾಸಿಟಿವ್‌

    ರಾಜಸ್ಥಾನ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ಹಂದಿ ಜ್ವರ & ಕೋವಿಡ್‌ ಪಾಸಿಟಿವ್‌

    ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ (Ashok Gehlot) ಕೋವಿಡ್‌-19 ಹಾಗೂ ಹಂದಿ ಜ್ವರ ಪಾಸಿಟಿವ್‌ ಕಾಣಿಸಿಕೊಂಡಿದೆ.

    ಈ ಕರಿತು ಅಶೋಕ್‌ ಗೆಹ್ಲೋಟ್‌ ಅವರೇ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಘುರಾಮ್‌ ರಾಜನ್‌ ಕಾಂಗ್ರೆಸ್‌ ರಾಜ್ಯಸಭಾ ಅಭ್ಯರ್ಥಿ- ಮಹಾರಾಷ್ಟ್ರದಿಂದ ಆಯ್ಕೆ? 

    ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ನಾನು ಪರೀಕ್ಷೆಗೆ ಒಳಗಾಗಿದ್ದು ಕೋವಿಡ್‌-19 ಹಾಗೂ ಹಂದಿಜ್ವರ ಪಾಸಿಟಿವ್‌ (Covid 19 And Swine Flu) ಎಂದು ದೃಢಪಟ್ಟಿದೆ. ಇದರಿಂದಾಗಿ ಮುಂದಿನ ಏಳು ದಿನಗಳವರೆಗೆ ನಾನು ಯಾರನ್ನೂ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಬದಲಾದ ಕಾಲಮಾನದಲ್ಲಿ ಪಕ್ಷದ ಮುಖಂಡರೂ ತಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಕ್ಷದ ಮುಖಂಡರು ಸಹ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ.

    ಮುಂದಿನ ಚಿಕಿತ್ಸೆಗಾಗಿ ಅಶೋಕ್‌ ಗೆಹ್ಲೋಟ್‌ ಅವರನ್ನು ಜೈಪುರದ SMS ಆಸ್ಪತ್ರೆಯ ಐಡಿಎಚ್ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಿಜೆಪಿಯಿಂದ ಕೋಟಿ ಕೋಟಿ ಆಫರ್‌ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್‌ ನೋಟಿಸ್‌

    ಪಂಚರಾಜ್ಯ ಚುನಾವಣೆ ಸಂದರ್ಭದಲ್ಲಿ ಸಕ್ರೀಯವಾಗಿ ಪ್ರಚಾರದಲ್ಲಿ ತೊಡಗಿದ್ದ ಅಶೋಕ್‌ ಗೆಹ್ಲೋಟ್‌ ಚುನಾವಣೆ ಫಲಿತಾಂಶದ ಬಳಿಕ ಸಾರ್ವಜನಿಕ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನೂ ಕಡಿಮೆ ಮಾಡಿದ್ದರು. ಕಳೆದ ಒಂದು ವಾರದಿಂದ ಅವರಿಗೆ ಜ್ವರ ಕಾಣಿಸಿಕೊಂಡಿದ್ದ ಕಾರಣ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಇದನ್ನೂ ಓದಿ: ಲೋಕಸಭೆಯಲ್ಲಿ ಕಾಂಗ್ರೆಸ್‌ 40 ಸೀಟು ಗೆಲ್ಲೋದು ಡೌಟ್‌ – ಬಿಜೆಪಿ ಪರ ದೀದಿ ಬ್ಯಾಟಿಂಗ್‌

  • ಜ.31 ರಂದು ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ನಿವೃತ್ತಿ – ಹೇಗಿತ್ತು 16 ವರ್ಷಗಳ ಜರ್ನಿ?

    ಜ.31 ರಂದು ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ನಿವೃತ್ತಿ – ಹೇಗಿತ್ತು 16 ವರ್ಷಗಳ ಜರ್ನಿ?

    – ʻಪಬ್ಲಿಕ್‌ ಟಿವಿʼ ಜೊತೆಗೆ ಭಾವುಕ ಕ್ಷಣಗಳನ್ನ ಹಂಚಿಕೊಂಡ ನಿರ್ದೇಶಕ
    – ಜಯದೇವ ಆಸ್ಪತ್ರೆ ಸಿಬ್ಬಂದಿಯಿಂದ ಆತ್ಮೀಯ ಬೀಳ್ಕೊಡುಗೆ
    – ದೊಡ್ಡಗೌಡರ ಮಾತು ಕೇಳಿದ್ದಕ್ಕೆ ಒಳ್ಳೆಯದಾಯಿತು

    ಬೆಂಗಳೂರು: ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ (Dr CN Manjunath ಅವರ ಸೇವಾವಧಿ ಇದೇ ಜನವರಿ 31ರಂದು (ಬುಧವಾರ) ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆ (Jayadeva Hospital) ಸಿಬ್ಬಂದಿಯಿಂದ ಮಂಗಳವಾರ (ಜ.30) ಹೃದಯಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಿಬ್ಬಂದಿ ಮಂಜುನಾಥ ಅವರಿಗೆ ಅಭಿನಂದನೆ ಸಲ್ಲಿದರು, ಆರತಿ ಬೆಳಗಿ ಗೌರವಿಸಿದರು.

    ಡಾ.ಮಂಜುನಾಥ್ ನಿವೃತ್ತಿ ಆಗುತ್ತಿರುವ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಈಗಾಗಲೇ 21 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 11 ಅರ್ಜಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗುತ್ತದೆ. ಜನವರಿ 31ರಂದೇ ಮುಖ್ಯಮಂತ್ರಿಗಳು (Chief Minister) 11 ವೈದ್ಯರ ಪೈಕಿ ಒಬ್ಬರನ್ನ‌ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಿದ್ದಾರೆ. ಈಗಾಗಲೇ ಮೈಸೂರು ಜಯದೇವ ಆಸ್ಪತ್ರೆಯ ಎಂ.ಎಸ್ ಸದಾನಂದ ಹಾಗೂ ಡಾ. ದಿನೇಶ್ ಹೆಸರು ರೇಸ್‌ನಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉತ್ತರ ಪ್ರದೇಶದ 16 ಲೋಕಸಭಾ ಕ್ಷೇತ್ರಗಳಿಗೆ SP ಅಭ್ಯರ್ಥಿಗಳ ಪಟ್ಟಿ ರಿಲೀಸ್‌ – ಅಖಿಲೇಶ್‌ ಯಾದವ್‌ ಪತ್ನಿಯೂ ಕಣಕ್ಕೆ

    75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ:
    ಇನ್ನೂ ಬೀಳ್ಕೊಡುಗೆ ಸಮಾರಂಭದಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ ಡಾ.ಸಿ.ಎನ್‌ ಮಂಜುನಾಥ್‌, ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ನಾವು ಪಂಚತಾರಾ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಇತ್ತು. ಅದು 100 ಕ್ಕೆ100 ಆಗಿದೆ. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವ ಬೆಳಸಲಾಗಿದೆ. ಸರ್ಕಾರದ ಸಹಕಾರ, ದಾನಿಗಳ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಆಸ್ಪತ್ರೆ ಬೆಳೆದಿದೆ. ನಾನು ಇಲ್ಲಿಗೆ ಬಂದಾಗ 300 ಹಾಸಿಗೆ ಇತ್ತು, ಈಗ 2,000 ಸಾವಿರ ಹಾಸಿಗೆಗಳಿವೆ. 3,500 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. 16 ವರ್ಷಗಳಲ್ಲಿ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. 8 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಇಷ್ಟು ವರ್ಷಗಳ ಸೇವೆ ಸಂತೋಷ ತಂದಿದೆ ತಮ್ಮ ನೆನಪುಗಳನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಜಕೀಯವಾಗುತ್ತೆ ಅಂತಾ ನಾನು ಕೆರಗೋಡಿಗೆ ಹೋಗಿಲ್ಲ: ಸುಮಲತಾ ಅಂಬರೀಶ್‌

    ವಿದೇಶದಲ್ಲಿ ಇದ್ದಿದ್ದರೇ ದುಡ್ಡು ಮಾಡ್ತಿದ್ದೆ:
    ಜಯದೇವ ಸಾಧನೆಯ ಕೇವಲ ಒಬ್ಬನಿಂದಲ್ಲ, ಅದು ಎಲ್ಲರಿಗೂ ಸಲ್ಲಬೇಕು. 1989ರಲ್ಲಿ ಜಯದೇವ ಆಸ್ಪತ್ರೆ ಸೇರಿದಾಗ ನನಗೊಂದು ಕನಸಿತ್ತು. ಆಗ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ಇರಲಿಲ್ಲ. 2005ರಲ್ಲಿ ಆಸ್ಪತ್ರೆ ತ್ಯಜಿಸುವ ಮನಸ್ಸು ಮಾಡಿದ್ದೆ. ಆಗ ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನ ಇಲ್ಲಿಯೇ ಕೆಲಸ ಮಾಡುವಂತೆ ಸೂಚಿಸಿದ್ದರು. ದೊಡ್ಡವರ ಮಾತು ಕೇಳಿದ್ರೆ ಒಳ್ಳೆದಾಗುತ್ತೆ ಅನ್ನೊದಕ್ಕೆ ದೇವೇಗೌಡರ ಮಾತು ಸಾಕ್ಷಿ. ಆವತ್ತು ಅವರ ಮಾತು ಕೇಳದೇ ಇದ್ದಿದ್ದರೆ, ನಾನು ವಿದೇಶದಲ್ಲಿರುತ್ತಿದ್ದೆ. ದುಡ್ಡು ಮಾಡ್ತಿದ್ದೆ, ಆದ್ರೆ ಇಷ್ಟು ಪ್ರೀತಿ ಸಿಗುತ್ತಿರಲಿಲ್ಲ. ಸಂಪತ್ತಿಗೆ ಬೆಲೆ ಕಟ್ಟಬಹುದು. ಆದ್ರೆ ಸರಳತೆ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ನೋವು ನಮಗೆ ಗೊತ್ತಾದ್ರೆ ಜೀವಂತವಾಗಿದ್ದೀವಿ ಎಂದರ್ಥ, ಬೇರೆಯವದ ನೋವು ಗೊತ್ತಾದ್ರೆ ನಾವು ಮನುಷ್ಯರಾಗಿದ್ದೀವೆ ಎಂದರ್ಥ ಎಂದು ಭಾವುಕರಾದರು. ಇದನ್ನೂ ಓದಿ:  Loksabha Election: ಬೆಂಗಳೂರಿನಲ್ಲಿ ಕಣಕ್ಕೆ ಇಳಿಯುತ್ತಾರಾ ಸುಮಲತಾ ಅಂಬರೀಶ್?‌

  • ಚೀರಾಡುತ್ತಿದ್ದರೂ ಒಬ್ಬ ವೈದ್ಯ ಬರಲಿಲ್ಲ – ಆಸ್ಪತ್ರೆ ಗೇಟ್‌ ಬಳಿ ತರಕಾರಿ ಗಾಡಿಯಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ

    ಚೀರಾಡುತ್ತಿದ್ದರೂ ಒಬ್ಬ ವೈದ್ಯ ಬರಲಿಲ್ಲ – ಆಸ್ಪತ್ರೆ ಗೇಟ್‌ ಬಳಿ ತರಕಾರಿ ಗಾಡಿಯಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ

    – ವೈದ್ಯರ ಅಮಾನವೀಯ ನಡೆಗೆ ಸಾರ್ವಜನಿಕರಿಂದ ಖಂಡನೆ

    ಚಂಡೀಗಢ: ಹರಿಯಾಣದ ಅಂಬಾಲಾದ ಸರ್ಕಾರಿ ಆಸ್ಪತ್ರೆ (Haryana Hospital) ಆವರಣದಲ್ಲಿ ಮಹಿಳೆಯೊಬ್ಬರು ತರಕಾರಿ ತಳ್ಳುಗಾಡಿಯಲ್ಲೇ ಮಗುವಿಗೆ ಜನ್ಮವಿತ್ತ ಘಟನೆ ನಡೆದಿದೆ.

    ಚಳಿಯ ವಾತಾವರಣದಲ್ಲಿ ಮಹಿಳೆ (Woman) ಹಾಗೂ ಕುಟುಂಬಸ್ಥರು ಬೇಡಿಕೊಳ್ಳುತ್ತಿದ್ದರೂ ಯಾವೊಬ್ಬ ವೈದ್ಯರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಮಹಿಳೆ ಆಸ್ಪತ್ರೆ ಆವರಣದಲ್ಲಿ ಇರಿಸಲಾಗಿದ್ದ ತರಕಾರಿ ತಳ್ಳುಗಾಡಿಯಲ್ಲೇ (Vegetable Cart) ಮಗುವಿಗೆ ಜನ್ಮ ನೀಡಿದ್ದಾರೆ. ಅದಾದ ಕೆಲ ಸಮಯದ ನಂತರ ಆಕೆಯೆನ್ನ ಆಸ್ಪತ್ರೆಯೊಳಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

    ಸಂತ್ರಸ್ತ ಮಹಿಳೆ ಪಂಜಾಬ್‌ನ ಮೊಹಾಲಿ ಜಿಲ್ಲೆಯ ದಪ್ಪರ್‌ನ ನಿವಾಸಿಯಾಗಿದ್ದಾರೆ. ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪತಿ ಆಕೆಯನ್ನ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ ಅಂಗಲಾಚಿ ಬೇಡಿಕೊಂಡರೂ ಯಾವೊಬ್ಬ ವೈದ್ಯರೂ ಸಹಾಯಕ್ಕೆ ಬರಲಿಲ್ಲ. ಆಕೆಗೆ ಸ್ಟ್ರೆಚರ್‌ ಕೊಡುವುದಕ್ಕೂ ಸಿದ್ಧರಿರಲಿಲ್ಲ. ಕೊನೆಗೆ ಆಸ್ಪತ್ರೆ ಗೇಟ್‌ ಬಳಿಯೇ ತಳ್ಳುಗಾಡಿಯಲ್ಲಿ ಮಗುವಿಗೆ ಜನ್ಮವಿತ್ತಿದ್ದಾಳೆ. ಇದನ್ನೂ ಓದಿ: ಪತಿಗೆ ಮಗು ತೋರಿಸಲು ಇಷ್ಟವಿಲ್ಲದಿದ್ದರಿಂದ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ: ತಪ್ಪೊಪ್ಪಿಕೊಂಡ ಸೇಠ್

    ನಂತರ ವೈದ್ಯರು ಪ್ರಾಣಾಪಾಯವಾಗಬಹುದು ಎಂದು ಹೆದರಿ, ತಾಯಿ ಮತ್ತು ಮಗುವನ್ನು ಆಸ್ಪತ್ರೆಯೊಳಕ್ಕೆ ಕರೆದೊಯ್ದು ವಾರ್ಡ್‌ನಲ್ಲಿ ದಾಖಲಿಸಿದ್ದಾರೆ. ನಂತರ ಈ ಬಗ್ಗೆ ಮಾತನಾಡಿದ ಮಹಿಳೆಯ ಪತಿ, ಆ ದೇವರೇ ನನ್ನ ಪತ್ನಿ ಮತ್ತು ಮಗುವನ್ನು ರಕ್ಷಿಸಿದ್ದಾನೆ. ನಾನು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ದೇವರೆಂದು ಭಾವಿಸಿದ್ದೆ, ಆದ್ರೆ ಇಲ್ಲಿನ ಘಟನೆ ನೋಡಿ ವೈದ್ಯರ ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

    ಇನ್ನೂ ಘಟನೆಯನ್ನು ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ಅವರ ಗಮನಕ್ಕೆ ತರಲಾಗಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ 2.50 ಲಕ್ಷ ರೂ. ಕಳ್ಳತನ! 

  • ಬೆಳಗ್ಗೆ ಹೆರಿಗೆಯಾಗಿದ್ದ ಬಾಣಂತಿ ರಾತ್ರಿ ಹೊಟ್ಟೆನೋವಿನಿಂದ ನರಳಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

    ಬೆಳಗ್ಗೆ ಹೆರಿಗೆಯಾಗಿದ್ದ ಬಾಣಂತಿ ರಾತ್ರಿ ಹೊಟ್ಟೆನೋವಿನಿಂದ ನರಳಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

    ಚಿಕ್ಕಮಗಳೂರು: ಹೆರಿಗೆಯಾಗಿದ್ದ ಬಾಣಂತಿ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು (Chikkamagaluru) ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ರಂಜಿತಾ ಬಾಯಿ (21) ಮೃತ ದುರ್ದೈವಿ. ಶನಿವಾರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದ ಈಕೆ ರಾತ್ರಿ ವೇಳೆಗೆ ತೀವ್ರ ಹೊಟ್ಟೆನೋವಿನಿಂದ ನರಳಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಾಣಂತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಮಗನ ಎಂಪಿ ಮಾಡಲು ನನ್ನ ಮೇಲೆ ಆರೋಪ ಮಾಡ್ತಿದ್ದೀರಿ: ಸಿದ್ದು ವಿರುದ್ಧ ಪ್ರತಾಪ್‌ ಸಿಂಹ ವಾಗ್ದಾಳಿ

    ರಂಜಿತಾ ಮೂಲತಃ ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ವಡೇರಹಳ್ಳಿ ತಾಂಡ್ಯದ ನಿವಾಸಿ, ಒಂದು ವರ್ಷದ ಹಿಂದೆಯಷ್ಟೇ ಶಶಿಧರ್ ನಾಯಕ್ ಎಂಬವರೊಂದಿಗೆ ವಿವಾಹವಾಗಿದ್ದರು.

    ಚಲಿಸುತ್ತಿದ್ದ ಅಂಬುಲೆನ್ಸ್‌ನಲ್ಲೇ ಗಂಡು ಮಗುವಿಗೆ ಜನ್ಮ: 

    ಮತ್ತೊಂದು ಘಟನೆಯಲ್ಲಿ ತುಂಬುಗರ್ಭಿಣಿಯನ್ನ ಹೆರಿಗೆಗೆಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಅಂಬುಲೆನ್ಸ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಭಗವಂತ ಶಿವನ ಚಿತ್ರ ಬಳಸಿ ಅಪಮಾನ – ಕಾಂಗ್ರೆಸ್‌ನಿಂದ ದೂರು

    ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಬೆಳಗೋಡು ಗ್ರಾಮದ ಮಹಿಳೆಯನ್ನ 108 ಅಂಬುಲೆನ್ಸ್‌ನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಹಿಳೆಗೆ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆ ತಲುಪಲು ಇನ್ನೂ 15 ಕಿ.ಮೀ. ದೂರವಿರುವಾಗಲೇ ಹೊಟ್ಟೆ ನೋವು ಹೆಚ್ಚಾಗಿದ್ದರಿಂದ ಚಾಲಕ ಗಂಗಾಧರನಾಯ್ಕ ವಾಹನವನ್ನು ವೇಗವಾಗಿ ಚಲಾಯಿಸಿದ್ದಾರೆ. ಆದಾಗ್ಯೂ ಮಹಿಳೆ ಚೀರಾಡಿದ್ದಾಳೆ, ಕೊನೆಗೆ ಶುಶ್ರೂಷಕಿ ಮಂಜುಳಾ ಅಂಬುಲೆನ್ಸ್‌ನಲ್ಲೇ ಮಹಿಳೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಿಳೆ ಮಗುವಿಗೆ ಜನ್ಮ ನೀಡಿದ ಬಳಿಕ ಅಂಬುಲೆನ್ಸ್‌ನಲ್ಲೇ ಪ್ರಥಮ ಚಿಕಿತ್ಸೆ ನೀಡಿ, ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆಂದು ಮಹಿಳೆಯ ಪತಿ ತಿಳಿಸಿದ್ದಾರೆ. ಇದರಿಂದ ಶುಶ್ರೂಷಕಿ ಮಂಜುಳಾ ಹಾಗೂ ಚಾಲಕ ಗಂಗಾಧರ್ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

    ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

    ನವದೆಹಲಿ: ಪ್ಯಾಕಿಂಗ್ ಆಹಾರ (Packed Foods) ಉತ್ಪನ್ನಗಳು ಜಠರದಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹಾನಿಗೊಳಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ದೆಹಲಿ ಏಮ್ಸ್‌ (Delhi AIIMS) ಲ್ಯಾಬ್ ವರದಿ ತಿಳಿಸಿದೆ.

    ಜಠರದಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಆಹಾರವನ್ನು ಜೀರ್ಣಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸತ್ತದೆ. ಅಲ್ಲದೇ ಇದನ್ನು ಉತ್ತಮ ಬ್ಯಾಕ್ಟೀರಿಯಾ ಎಂದು ಪರಿಗಣಿಸಲಾಗುತ್ತದೆ. ನಿರಂತರವಾಗಿ ಪ್ಯಾಕಿಂಗ್ ಆಹಾರಗಳನ್ನು ಸೇವಿಸುವುದರಿಂದ ಈ ಆಹಾರ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ದೇಹದಿಂದ ಹೊರ ಹಾಕುತ್ತದೆ ಎಂದು ದೆಹಲಿ ಏಮ್ಸ್ ವೈದ್ಯರು (Doctors) ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಚಂಡಮಾರುತ ಆವಾಂತರ: ನಟಿ ನಮಿತಾ ಮನೆಗೆ ನುಗ್ಗಿದ ನೀರು

    ಆಹಾರವನ್ನು ಜೀರ್ಣಿಸಿಕೊಳ್ಳುವುದು ಮತ್ತು ಅದರಿಂದ ಪೋಷಕಾಂಶಗಳನ್ನು ಹೊರತೆಗೆದು ದೇಹದ ವಿವಿಧ ಭಾಗಗಳಿಗೆ ತಲುಪಿಸುವುದು ಪ್ರೋಬಯಾಟಿಕ್ ಬ್ಯಾಕ್ಟೀರಿಯಾದ ಕೆಲಸವಾಗಿದೆ. ಸಂಸ್ಕರಿಸಿದ ಆಹಾರದಲ್ಲಿ ಇರುವ ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಸಕ್ಕರೆ ಈ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಇಂತಹ ಸಂದರ್ಭಗಳಲ್ಲಿ ಪೌಷ್ಠಿಕ ಆಹಾರ ಸೇವಿಸಿದರೂ ದೇಹಕ್ಕೆ ಸರಿಯಾದ ಪೋಷಣೆ ಸಿಗುವುದಿಲ್ಲ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಮೊದಲಿಗೆ ದೇಹದಲ್ಲಿ ಊತವಿರುತ್ತದೆ. ಬಳಿಕ ಕ್ರಮೇಣ ವ್ಯಕ್ತಿಗೆ ಮಧುಮೇಹ, ರಕ್ತದೊತ್ತಡ, ಶ್ವಾಸಕೋಶದ ಸೋಂಕು, ಕ್ಯಾನ್ಸರ್, ನರಸಂಬಂಧಿ ಸಮಸ್ಯೆಗಳು ಅಲ್ಲದೇ ಬೇರೆ ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

    ದೇಹದಲ್ಲಿ ಪ್ರೋಬಯಾಟಿಕ್ ಬ್ಯಾಕ್ಟೀರಿಯಾಗಳು ದೇಹವನ್ನು ಆರೋಗ್ಯಕರವಾಗಿಡಲು ಮಾತ್ರವಲ್ಲದೇ ಅದರ ಸಹಾಯದಿಂದ ಬೊಜ್ಜು, ಅಲರ್ಜಿಯಂತಹ ಇತರ ಸಮಸ್ಯೆಗಳನ್ನು ಸಹ ತಡೆಯಬಹುದು. ಇದರ ಹೊರತಾಗಿ ಇದು ನೇರವಾಗಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಸಂಭವಿಸುವ ಅನೇಕ ರೀತಿಯ ಬ್ಯಾಕ್ಟೀರಿಯಾದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

    ಮೊಮೊಸ್, ನೂಡಲ್ಸ್, ಫ್ರೈಡ್ ರೈಸ್‍ನಂತಹ ಮೊದಲೇ ತಯಾರಿಸಿದ ಆಹಾರವನ್ನು ಸೇವಿಸಬಾರದು. ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಮೊಸರು, ಹಾಲಿನಂತಹ ಇತರ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇದರ ಹೊರತಾಗಿ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಅನೇಕ ರೀತಿಯ ಔಷಧಿಗಳು ಮತ್ತು ಇತರ ವಸ್ತುಗಳು ಸಹ ಲಭ್ಯವಿದೆ. ಪ್ರೋಬಯಾಟಿಕ್ ಬ್ಯಾಕ್ಟೀರಿಯಾದ ಕೊರತೆಯಿಂದ ದೇಹಕ್ಕೆ ಆಗುವ ಹಾನಿಯ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಐಸಿಸ್‌ನೊಂದಿಗೆ ನಂಟಿದ್ದವರು ಯಾರೂ ಇರಲಿಲ್ಲ – ಮುಸ್ಲಿಂ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಸ್ಪಷ್ಟನೆ

  • ಆಟವಾಡುವಾಗ ಗುಂಡುಸೂಜಿ ನುಂಗಿದ್ದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಆಟವಾಡುವಾಗ ಗುಂಡುಸೂಜಿ ನುಂಗಿದ್ದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಮುಚ್ಚುಳ ಕ್ಯಾಂಪ್‌ನ ಬಾಲಕ ಶಿವಕುಮಾರ್ (13) ಶಾಲೆಯಲ್ಲಿ ಆಟವಾಡುವಾಗ ಸೂಚನಾ ಫಲಕದ ಗುಂಡುಸೂಜಿಯನ್ನು (Pin) ಆಕಸ್ಮಿಕವಾಗಿ ನುಂಗಿದ್ದ. ಗುಂಡುಸೂಜಿ ಬಲ ಶ್ವಾಸಕೋಶದೊಳಗಡೆ ಸೇರಿತ್ತು. ಇದೀಗ ಬ್ರಾಂಕೋಸ್ಕೋಪ್ ಮೂಲಕ ಗುಂಡುಸೂಜಿಯನ್ನು ಹೊರತೆಗೆಯುವಲ್ಲಿ ರಿಮ್ಸ್ (RIMS) ವೈದ್ಯರು (Doctor) ಯಶಸ್ವಿಯಾಗಿದ್ದಾರೆ.

    ಚಿಕಿತ್ಸೆಗಾಗಿ ಬಾಲಕನನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ಬಾಲಕನ ಶ್ವಾಸಕೋಶಕ್ಕೆ ಕ್ಷ-ಕಿರಣವನ್ನು ಮಾಡಿಸಿದಾಗ ಬಲ ಶ್ವಾಸಕೋಶದಲ್ಲಿ ಸೂಚನಾ ಫಲಕದ ಗುಂಡುಸೂಜಿ ಇರುವುದು ಖಚಿತಪಡಿಸಿಕೊಂಡು ಬ್ರಾಂಕೋಸ್ಕೋಪ್ ಮೂಲಕ ಗುಂಡು ಸೂಜಿಯನ್ನು ಹೊರತೆಗೆಯಲಾಗಿದ್ದು, ಅಪರೂಪದ ಪ್ರಕರಣದಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದ್ದಕ್ಕೆ ವೈದ್ಯರಿಗೆ ಬಾಲಕನ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭೋಪಾಲ್‌ ಅನಿಲ ದುರಂತಕ್ಕೆ 39 ವರ್ಷ – ಇನ್ನೂ ಮಾಸಿಲ್ಲ 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಕಹಿ ನೆನಪು

    ಶಸ್ತ್ರಚಿಕಿತ್ಸೆ ತಂಡದಲ್ಲಿ ಇಎನ್‌ಟಿ ನುರಿತ ತಜ್ಞ ವೈದ್ಯ ಡಾ. ಅರವಿಂದ್ ಸಂಗವಿ, ನುರಿತ ಅರವಳಿಕೆ ತಜ್ಞ ವೈದ್ಯ ಡಾ.ಕಿರಣ್ ನಾಯಕ್, ಡಾ.ಮಲ್ಲಿಕಾರ್ಜುನ್ ಕೆ ಪಾಟೀಲ್, ಡಾ. ಸಿಂಧು ಪಿಜಿ, ಡಾ. ಇಂದುಮಣಿ, ನರ್ಸಿಂಗ್ ಅಧಿಕಾರಿ ಅಮರೇಶ್ ಸಕ್ರಿ, ಓಟಿ ತಂತ್ರಜ್ಞರಾದ ಲಿಂಗರಾಜ್, ಸುಮನ್ ಕ್ಲ್ಯಾರಿ, ನಾರಾಯಣ, ಶಂಕರ ಸೇರಿದಂತೆ ಇನ್ನಿತರರು ಇದ್ದರು. ಇದನ್ನೂ ಓದಿ: ಮಾತಾ ಅಲ್ಲದೇ ಚಾಮುಂಡೇಶ್ವರಿ ಆಸ್ಪತ್ರೆಯಲ್ಲೂ ನಡೀತಿತ್ತು ಭ್ರೂಣ ದಂಧೆ- ಹೆಡ್‌ನರ್ಸ್ ಉಷಾರಾಣಿ ಬಂಧನ

  • ನಿರಂತರ ಭ್ರೂಣ ಹತ್ಯೆ – ಐವರು ವೈದ್ಯರು ಸೇರಿ 9 ಮಂದಿ ಅರೆಸ್ಟ್

    ನಿರಂತರ ಭ್ರೂಣ ಹತ್ಯೆ – ಐವರು ವೈದ್ಯರು ಸೇರಿ 9 ಮಂದಿ ಅರೆಸ್ಟ್

    ಬೆಂಗಳೂರು: ಭರ್ಜರಿ ಕಾರ್ಯಾಚರಣೆಯಲ್ಲಿ ನಿರಂತರವಾಗಿ ಭ್ರೂಣ ಹತ್ಯೆ (Foeticide) ಮಾಡುತ್ತಿದ್ದ ಆರೋಪದ ಮೇಲೆ 9 ಜನರನ್ನು ಬೆಂಗಳೂರು ಬೈಯಪ್ಪನಹಳ್ಳಿ ಪೊಲೀಸರು (Bengaluru Baiyappanahalli Police) ಬಂಧಿಸಿದ್ದಾರೆ.

    ಐವರು ವೈದ್ಯರು (Doctors) ಸೇರಿ, 9 ಜನರನ್ನು ಬಂಧಿಸಲಾಗಿದೆ. ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್ ಹಾಗೂ ವೈದ್ಯರಾದ ಡಾ. ತುಳಸಿರಾಮ್, ಡಾ. ಚಂದನ್ ಬಲ್ಲಾಳ್ ಮತ್ತು ಮೀನಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್, ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ ಬಂಧಿತ ಆರೋಪಿಗಳು.

    ಮೊದಲು ಭ್ರೂಣ ಹತ್ಯೆ ಮಾಡುತ್ತಿದ್ದ ಆರೋಪದ ಮೇಲೆ ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್ ಎಂಬವರನ್ನ ಬಂಧಿಸಲಾಗಿತ್ತು. ಅವರನ್ನ ವಿಚಾರಣೆಗೆ ಒಳಪಡಿಸಿದ ನಂತರ ಈ ಪ್ರಕರಣದ ಹಿಂದಿರುವ ವೈದ್ಯರ ಹೆಸರು ಕೇಳಿಬಂದಿತು. ಇದನ್ನೂ ಓದಿ: Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ

    ಬಳಿಕ ತನಿಖೆ (Investigation) ಮುಂದುವರಿಸಿದ ಪೊಲೀಸರು ಕೃತ್ಯದ ಹಿಂದಿದ್ದ ಚನ್ನೈ ಮೂಲದ ಡಾ ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ, ಡಾ.ಚಂದನ್ ಬಲ್ಲಾಳ್ ಮತ್ತು ಪತ್ನಿ ಮೀನಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ ಎಂಬವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

    ಒಟ್ಟು 9 ಮಂದಿ ಸೇರಿ ಮಾಡಿಕೊಂಡು ವ್ಯವಸ್ಥಿತವಾಗಿ ಕೃತ್ಯ ಎಸಗುತ್ತಿದ್ದರು. ಪ್ರತಿ ತಿಂಗಳು 20 ರಿಂದ 25 ಭ್ರೂಣ ಹತ್ಯೆ ಮಾಡುತ್ತಿದ್ದರು. ಮೈಸೂರಿನ ಉದಯಗಿರಿಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಈ ಕೃತ್ಯ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಗುಡ್‌ನ್ಯೂಸ್ – ಚುನಾವಣೆಗೂ ಮುನ್ನ ಸಲ್ಲಿಸಿದ ಅರ್ಜಿಗಳ ವಿಲೇವಾರಿ

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಅಮರ್‌ ರಹೇ ಕ್ಯಾಪ್ಟನ್‌ ಪ್ರಾಂಜಲ್‌ – ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಆಗಮನ

  • ವೈದ್ಯರು ಜೆನೆರಿಕ್‌ ಔಷಧಗಳನ್ನೇ ಶಿಫಾರಸು ಮಾಡಬೇಕೆಂಬ NMC ಆದೇಶಕ್ಕೆ ತಡೆ

    ವೈದ್ಯರು ಜೆನೆರಿಕ್‌ ಔಷಧಗಳನ್ನೇ ಶಿಫಾರಸು ಮಾಡಬೇಕೆಂಬ NMC ಆದೇಶಕ್ಕೆ ತಡೆ

    ನವದೆಹಲಿ: ಜೆನೆರಿಕ್‌ ಔಷಧಗಳ (Generic Medicines) ಹೊರತಾಗಿ ಬೇರೆ ಔಷಧಗಳನ್ನು ವೈದ್ಯರು (Doctors) ಶಿಫಾರಸು ಮಾಡದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಹೊರಡಿಸಿದ್ದ ಆದೇಶವನ್ನ ತಡೆಹಿಡಿಯಲಾಗಿದೆ.

    ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮತ್ತು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನ ಸಂಪರ್ಕಿಸಿದ ನಂತರ ಈ ಬೆಳಗಣಿಗೆ ಕಂಡುಬಂದಿದೆ. ಇದನ್ನೂ ಓದಿ: ಚಂದ್ರನ ಮೇಲೆ ಭಾರತ – 14 ದಿನಗಳ ನಂತ್ರ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಕಥೆ ಏನು?

    ರಾಷ್ಟ್ರೀಯ ವೈದ್ಯಕೀಯ ಆಯೋಗದ ನೋಂದಾಯಿತ ವೈದ್ಯಕೀಯ ಪ್ರಾಕ್ಟೀಷನರ್ (ವೃತ್ತಿಪರ ನಡವಳಿಕೆ) ನಿಯಮಗಳು, 2023, ಇತರ ನಿರ್ದೇಶನಗಳೊಂದಿಗೆ ವೈದ್ಯರಿಗೆ ಜೆನೆರಿಕ್ ಔಷಧಿಗಳ ಪ್ರಿಸ್ಕ್ರಿಪ್ಷನ್ ಅನ್ನು ಕಡ್ಡಾಯಗೊಳಿಸಿದೆ. ಬ್ರಾಂಡೆಡ್ ಔಷಧಿಗಳಿಗಿಂತ ಜೆನೆರಿಕ್ ಔಷಧಿಗಳು 30% ರಿಂದ 80% ರಷ್ಟು ಅಗ್ಗವಾಗಿರುವುದರಿಂದ, ಈ ಹೊಸ ನಿಯಮವು ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಆಯೋಗ ಹೇಳಿದೆ. ಆದ್ರೆ ಆಯೋಗದ ಅಧಿಸೂಚನೆ ವಿರುದ್ಧ ವೈದ್ಯರು ತಿರುಗಿಬಿದ್ದಿದ್ದಾರೆ. ಭಾರತದಲ್ಲಿ ಜೆನೆರಿಕ್‌ ಔಷಧಗಳ ಗುಣಮಟ್ಟ ಕಳಪೆಯಾಗಿದೆ, ಇದರಿಂದ ರೋಗಿಗಳಿಗೆ ಅಪಾಯ ಉಂಟಾಗಲಿದೆ ಎಂದು ವಾದಿಸಿದ್ದಾರೆ.

    ಈ ನಡುವೆ ಬ್ರಾಂಡೆಡ್ ಜೆನೆರಿಕ್‌ ಔಷಧಗಳನ್ನು ಸೂಚಿಸದ ನೋಂದಾಯಿತ ವೈದ್ಯಕೀಯ ವೈದ್ಯರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌) ಅರ್ಜಿ ಸಲ್ಲಿಸಲಾಗಿದೆ. ಇದನ್ನೂ ಓದಿ: Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಹಿರಿಯ ಪತ್ರಕರ್ತ ಸುಬ್ರಮಣ್ಯ ಬಾಡೂರು (ಬಾನಾಸು)ಗೆ ರಾಷ್ಟ್ರೀಯ ಗರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 7 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಚಿಕ್ಕೋಡಿ ಆಸ್ಪತ್ರೆ – ಜನರ ಗೋಳು ಕೇಳೋರಿಲ್ಲ

    7 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಚಿಕ್ಕೋಡಿ ಆಸ್ಪತ್ರೆ – ಜನರ ಗೋಳು ಕೇಳೋರಿಲ್ಲ

    ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಗಡಿಭಾಗದಲ್ಲಿ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೇ ನೆರೆಯ ಮಹಾರಾಷ್ಟ್ರದ ಮೀರಜ್ ಸಾಂಗಲಿಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ. ಇದನ್ನ ತಪ್ಪಿಸುವ ಸಲುವಾಗಿ ಕಳೆದ 7 ವರ್ಷಗಳ ಹಿಂದೆ ಆಸ್ಪತ್ರೆಯೊಂದರ (Hospital) ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಮಂದಗತಿಯಿಂದ ಸಾಗಿದ್ದ ಕಾಮಗಾರಿ ಸದ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ ಉದ್ಘಾಟನೆ ಭಾಗ್ಯ ಕಂಡಿಲ್ಲ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿಯ (Chikkodi) ಬಾಣಂತಿ ಕೋಡಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿ ಆರಂಭವಾಗಿ 7 ವರ್ಷ ಕಳೆದಿದ್ದು, ಇತ್ತೀಚೆಗೆ ಬಹುತೇಕ ಪೂರ್ಣಗೊಂಡಿದೆ. ಆದ್ರೆ ಜನರು ಉದ್ಘಾಟನೆಗೆ ಇನ್ನೆಷ್ಟು ದಿನ ಕಾಯಬೇಕು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಿಎಂ ಭೇಟಿಯಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಸ್ಥರು – ಸಿಐಡಿ ತನಿಖೆಗೆ ಮನವಿ

    ಚಿಕ್ಕೋಡಿ ಉಪವಿಭಾಗದಲ್ಲಿ ಸೂಕ್ತ ಸರ್ಕಾರಿ ಆಸ್ಪತ್ರೆಗಳಿಲ್ಲದ (Hospitals) ಕಾರಣ ಜನರು ಮಹಾರಾಷ್ಟ್ರದ ಮೀರಜ್ ಸಾಂಗಲಿಯ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡುವಂತೆ ಸಾಕಷ್ಟು ಆಗ್ರಹ ಕೇಳಿ ಬಂದಿತ್ತು. ಹಾಗಾಗಿ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರ ಸತತ ಪ್ರಯತ್ನದಿಂದ 100 ಹಾಸಿಗೆಗಳನ್ನೊಳಗೊಂಡ ಆಸ್ಪತ್ರೆ ನಿರ್ಮಾಣ ಮಾಡಲು ಅನುಮೋದನೆ ಸಿಕ್ಕಿತು. ಇದೀಗ 7 ವರ್ಷಗಳ ನಂತರ ಆಸ್ಪತ್ರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ. ಇದರಿಂದ ಜನರು ಕಂಗಾಲಾಗಿದ್ದಾರೆ. ಕೆಲವರಂತೂ ಖಾಸಗಿ ಆಸ್ಪತ್ರೆಗಳಿಗೆ ಹಣ ಸುರಿದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಕುಟುಂಬ ನಿರ್ವಹಣೆಗೂ ಹೆಣಗಾಡುತ್ತಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಆಸ್ಪತ್ರೆ ಉದ್ಘಾಟನೆ ಮಾಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಾಳೆ ಸಿಎಂ ಅಥಣಿ ಕ್ಷೇತ್ರ ಪ್ರವಾಸ – ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

    ಈ ಕುರಿತು ಮಾತನಾಡಿರುವ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ್ ಕೊಣ್ಣೂರಿ, ಸಾರ್ವಜನಿಕ ಆಸ್ಪತ್ರೆ ಚಿಕ್ಕೋಡಿಯಿಂದ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ 2015ರಿಂದ ಆರಂಭವಾಗಿದ್ದು ಈವರೆಗೂ ಪೂರ್ಣಗೊಂಡಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಬಳಿಕ ಮತ್ತೆ ಕಟ್ಟಡ ಕಾಮಗಾರಿ ಶುರುವಾಯಿತು. ಇನ್ನೊಂದು ತಿಂಗಳಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡುವ ಚಿಂತನೆ ಇದೆ. ಕಟ್ಟಡ ಕಾಮಗಾರಿ ಮುಗಿದಿದೆ. ಇಂಟಿರಿಯರ್ ವರ್ಕ್ ನಡೆದಿದೆ. ಈಗಾಗಲೇ 80% ವೈದ್ಯಕೀಯ ಉಪಕರಣಗಳು ಸಹ ಬಂದಿವೆ. ಆಸ್ಪತ್ರೆಗೆ ಬೇಕಾದಂತಹ ವೈದ್ಯಕೀಯ ಸಿಬ್ಬಂದಿ ಸಹ ನೇಮಕ ಮಾಡಿಕೊಳ್ಳಲಾಗಿದೆ. ಹೈಟೆಕ್ ಶಸ್ತ್ರಚಿಕಿತ್ಸಾ ಘಟಕ, ಲಿಫ್ಟ್ ಈ ಎರಡು ಕೆಲಸ ಆದರೆ, ಸಾರ್ವಜನಿಕ ಸೇವೆಗೆ ಆಸ್ಪತ್ರೆ ಮುಕ್ತಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಔಷಧಗಳು ಮೂಲೆಗುಂಪು – ಔಷಧ ಸಂಗ್ರಹ ಜಾಗದಲ್ಲೇ ಶ್ವಾನಗಳ ಮೂತ್ರ ವಿಸರ್ಜನೆ

    ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಔಷಧಗಳು ಮೂಲೆಗುಂಪು – ಔಷಧ ಸಂಗ್ರಹ ಜಾಗದಲ್ಲೇ ಶ್ವಾನಗಳ ಮೂತ್ರ ವಿಸರ್ಜನೆ

    ಮಡಿಕೇರಿ: ಬಡವರ್ಗದ ಜನರ ಅರೋಗ್ಯ ಸುರಕ್ಷತಾ ದೃಷ್ಟಿಯಿಂದ ಸರ್ಕಾರ ಜಿಲ್ಲಾಸ್ಪತ್ರೆಗಳಿಗೆ (District Hospital) ಔಷಧಗಳನ್ನ ಸರಬರಾಜು ಮಾಡುತ್ತಿದೆ. ಆದ್ರೆ ಆ ಔಷಧಿಗಳು ಅನಾರೋಗ್ಯಪೀಡಿತರಿಗೆ ಸಿಕ್ಕುವ ಬದಲು ಆಸ್ಪತ್ರೆಯಲ್ಲೇ ಕೊಳೆಯುತ್ತಿವೆ. ಆಸ್ಪತ್ರೆಯಲ್ಲಿ ಔಷಧ ಶೇಖರಣೆಗೆ ಸೂಕ್ತ ಜಾಗವೂ ಇಲ್ಲದೇ ಸಾರ್ವಜನಿಕರು ಓಡಾಡುವ ಸ್ಥಳದಲ್ಲೇ ಔಷಧಗಳನ್ನ (Medicine) ಶೇಖರಿಸಿದ್ದು, ಈಗ ಅವು ಶ್ವಾನಗಳ ಆವಾಸಸ್ಥಾನವಾಗಿ ಮಾರ್ಪಾಡಾಗಿದೆ. ಇದರಿಂದಾಗಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ನಡೆದಿರುವುದು ಕೊಡಗು (Kodagu) ಜಿಲ್ಲಾಸ್ಪತ್ರೆಯಲ್ಲಿ.

    ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ (Madikeri) ಜಿಲ್ಲಾ ಆಸ್ಪತ್ರೆಗೆ ಹಾಸನ, ಮೈಸೂರು ಭಾಗದಿಂದಲೂ ಬಡವರ್ಗದ ಜನರು ಬರುತ್ತಾರೆ. ಚಿಕಿತ್ಸೆ ಪಡೆದ ರೋಗಿಗಳು ಉಚಿತ ಔಷಧಿ ತೆಗೆದುಕೊಂಡು ಹೋಗುತ್ತಾರೆ. ಆದ್ರೆ ಈ ಆಸ್ಪತೆಯಲ್ಲಿ ರೋಗಿಗಳಿಗೆ ಕೊಡುವ ಔಷಧಿ ಆಸ್ಪತ್ರೆಯೊಳಗೆ ಮೂಲೆಗುಂಪುಗಳಾಗಿವೆ. ಸಾರ್ವಜನಿಕರು ಓಡಾಡುವ ಜಾಗದಲ್ಲೇ ಔಷಧಿಗಳು ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲವಾಗಿರುವುದರಿಂದ ಔಷಧ ಬಾಕ್ಸ್‌ಗಳ ಮೇಲೆ ಫಂಗಸ್‌ ಬರಲು ಪ್ರಾರಂಭವಾಗಿದೆ. ಸಾಕಷ್ಟು ಬಾಕ್ಸ್‌ಗಳಿಂದ ಡ್ರಗ್ಸ್‌ ಲೀಕೇಜ್‌ ನೆಲದ ಮೇಲೆ ಹರಿಯುತ್ತಿದೆ. ಇದನ್ನೂ ಓದಿ: ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ – ಬೊಮ್ಮಾಯಿ ಟೀಕೆ

    ಇಷ್ಟು ಸಾಲದ್ದಕ್ಕೆ ಔಷಧಿ ಬಾಕ್ಸ್‌ಗಳನ್ನು ಶೇಖರಣೆ ಮಾಡಿರುವ ಸ್ಥಳದಲ್ಲೇ ಈಗ ಬೀದಿ ನಾಯಿಗಳು ಆವಾಸಸ್ಥಾನ ಮಾಡಿಕೊಂಡಿವೆ. ಔಷಧ ಬಾಕ್ಸ್‌ಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ಈ ಬಾರಿ 48 ಭೂಕುಸಿತ ವಲಯ ಗುರುತು – ಆಗಸ್ಟ್ ಮಳೆಗೆ ಇದ್ಯಾ ಮತ್ತೊಮ್ಮೆ ಕಂಟಕ?

    ಮತ್ತೊಂದೆಡೆ ಆಸ್ಪತ್ರೆಯಲ್ಲಿ ವಿದ್ಯುತ್‌ ಸಮಸ್ಯೆ ಕಾಡುತ್ತಿದೆ. ವಿದ್ಯುತ್ ಸಮಸ್ಯೆ ಹೆಚ್ಚಾಗಿರೋದ್ರಿಂದ ಆಸ್ಪತ್ರೆಯ ಡಯಾಲಿಸಸ್ ರೋಗಿಗಳು ಪರದಾಟ ನಡೆಸುವಂತಾಗಿದೆ. ಈ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳನ್ನ ಕೇಳಿದ್ರೆ, ಬೆಲೆ ಬಾಳುವ ಔಷಧಗಳನ್ನ ಉಗ್ರಾಣ ಕೇಂದ್ರದಲ್ಲಿ ಇಡಲಾಗಿದೆ. ಇಲ್ಲಿ ಸಣ್ಣಪುಟ್ಟ ಡ್ರಗ್ಸ್‌ಗಳನ್ನ ಶೇಖರಣೆ ಮಾಡಲಾಗಿದೆ. ಆಸ್ಪತ್ರೆ ಕೊಠಡಿಗಳ ಸಮಸ್ಯೆ ಇರೋದ್ರಿಂದ ಹೀಗೆ ಆಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]