ಹಾವೇರಿ: ತಾಲೂಕಿನ ಗುತ್ತಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ರುದ್ರಪ್ಪ ಲಮಾಣಿ (Rudrappa Lamani) ಅವರು ಆಸ್ಪತ್ರೆಯಲ್ಲಿರುವ ಆರೋಗ್ಯ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ವೈದ್ಯರ (Doctors) ಉತ್ತಮ ಸೇವೆ ಪರಿಣಾಮ ರೋಗಿಗಳು (Patients) ಇದೇ ಆಸ್ಪತ್ರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು 50 ಬೆಡ್ ಶೀಟ್‌ಗಳಿಗೆ ಒತ್ತಾಯಿಸಿದ್ದರು. ಕೋರಿಕೆ ಪರಿಗಣಿಸಿರುವ ಸರ್ಕಾರ 60 ಬೆಡ್ ಶೀಟ್ ಒದಗಿಸಲು ಒಪ್ಪಿದೆ. ಹಾವೇರಿ ನಗರದಲ್ಲಿ ಎರಡು ಕಡೆ ನಮ್ಮ ಕ್ಲಿನಿಕ್ ಆರಂಭಿಸಿದ್ದರಿಂದ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಿದೆ ಎಂದು ರುದ್ರಪ್ಪ ಲಮಾಣಿ ಹೇಳಿದರು. ಇದನ್ನೂ ಓದಿ: ಭಾರತದ ಸಿಂಧೂರ ದಾಳಿಗೆ ಮಸೂದ್ ಕುಟುಂಬ ಕಳೆದುಕೊಂಡ – ಪಾಕ್ ಉಗ್ರ ಇಲ್ಯಾಸ್ ಸಾಕ್ಷ್ಯ
ಅಬುಧಾಬಿ (ಯುಎಇ): SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಘದ ಜಂಟಿ ಆಶ್ರಯದಲ್ಲಿ ಕಳೆದ ಜೂನ್ 28ರಂದು ಹಮ್ಮಿಕೊಂಡಿದ್ದ 4ನೇ ಸಾರ್ವಜನಿಕ ರಕ್ತದಾನ ಶಿಬಿರವು (Blood Camp) ಅಬುಧಾಬಿ ಖಾಲಿದಿಯ್ಯಾದಲ್ಲಿರುವ ಸೇಹಾ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ಜರುಗಿತು.
ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕರ್ತ ಮಜೀದ್ ಬೊಳ್ವಾರು ಅವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದಲ್ಲಿ ಒಟ್ಟು 86 ಮಂದಿ ರಕ್ತದಾನ ಮಾಡಿದ್ದು, ಈ ಪೈಕಿ ಮೂವರು ಸಿಂಗಲ್ ಡೋನರ್ ಪ್ಲೇಟ್ಲೆಟ್ಸ್ ದಾನ ಮಾಡಿದ್ದಾರೆ. ರಕ್ತದಾನ ಪ್ರಕ್ರಿಯೆಯಲ್ಲಿ ಸೇಹಾ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದರು. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಉಸ್ತಾದ್ ಶಹೀರ್ ಹುದವಿ ಅವರು ರಕ್ತದಾನದ ಇಸ್ಲಾಮಿಕ್ ಮಹತ್ವವನ್ನು ವಿವರಿಸಿದರು. ಒಬ್ಬ ಮನುಷ್ಯ ತನ್ನ ಸಹೋದರನ ನೆರವಿಗೆ ನಿಲ್ಲುವುದಾದರೆ, ಅಲ್ಲಾಹ್ ತನ್ನ ನೆರವಿನಲ್ಲಿ ಅವನ ಜೊತೆಗಿರುತ್ತಾನೆ ಎಂಬ ಹದೀಸ್ ಉಲ್ಲೇಖಿಸಿ, ರಕ್ತದಾನವೆಂದರೆ ಕೇವಲ ಮಾನವೀಯತೆ ಅಲ್ಲ, ಇದು ಇಮಾನ್‌ನ ಭಾಗವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಖ್ಯಾತ ಸಾಹಿತಿ ಅನ್ಸಾರ್ ಕಾಟಿಪಳ್ಳ ಅವರು, ನಾವೆಲ್ಲರೂ ಅನಿವಾಸಿಗಳಾದರೂ ಸಮಾಜದ ಒಳಿತಿಗಾಗಿ ಜವಾಬ್ದಾರಿ ವಹಿಸಬೇಕು ಎಂದು ಹೇಳಿ, ಸ್ವತಃ ತಮ್ಮದೇ ಬರವಣಿಗೆಯಲ್ಲಿ ರಕ್ತದಾನದ ಬಗ್ಗೆ ಕವನವನ್ನು ವಾಚಿಸಿ ಕಾರ್ಯಕ್ರಮಕ್ಕೆ ಸಾಹಿತ್ಯದ ನೋಟವನ್ನು ಜೋಡಿಸಿದರು.
ಕಾರ್ಯಕ್ರಮದಲ್ಲಿ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ವ್ಯವಸ್ಥಾಪಕ ಸಿರಾಜುದ್ದೀನ್ ಪರ್ಲಡ್ಕ ಮತ್ತು ಕಾರ್ಯ ನಿರ್ವಾಹಕ ಶಾಫಿ ಮಾಣಿ ಹಾಗೂ ಇಕ್ಬಾಲ್ ಕನಕಮಜಲು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಅಯಾನ್ ರಿಯಲ್ ಎಸ್ಟೇಟ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅನ್ಸಾರ್ ಬೆಳ್ಳಾರೆ ಹಾಗೂ ಕೆಎಂಸಿಸಿ ಪ್ರಮುಖರಾದ ಅಝೀಝ್ ಪರ್ಮುದೆ, ಕಾಸರಗೋಡು SKSSF ಪ್ರಮುಖರಾದ ನೌಫಲ್ ಪಟ್ಟಾಂಬಿ, ಕೆ.ಎಚ್ ಅಲಿ ಮಾಸ್ತಿಕುಂಡು, ಕಮಾಲ್ ಮಲ್ಲಮ್, ಅಶ್ರಫ್ ಮೀನಾಪೀಸ್, ಫೈಝಲ್ ಸೀತಾಂಗೋಳಿ, ಬಾದುಷಾ ಕಾಞಂಗಾಡ್, ಹನೀಫಾ ಎರಿಯಾಲ್, ಪಿಕೆ ಅಶ್ರಫ್ ಮುಂತಾದ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ಶುಭಾಶಯಗಳೊಂದಿಗೆ ಪ್ರೋತ್ಸಾಹ ನೀಡಿದರು.
ಶಿಬಿರದಲ್ಲಿ SKSSF ಅಬುಧಾಬಿ ಕರ್ನಾಟಕದ ಪ್ರಮುಖರಾದ ಉಸ್ತಾದ್ ಹಾರಿಸ್ ಮಕ್ದೂಮಿ ಕುಕ್ಕಾಜೆ, ಅಬೂಬಕ್ಕರ್ ಸಕಲೇಶಪುರ, ದಾರುಲ್ ಹಸನಿಯ್ಯ ಅಬುಧಾಬಿ ಸಮಿತಿ ಅಧ್ಯಕ್ಷ ಶಾಕಿರ್ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿ ಜಾಫರ್ ಉಪ್ಪಿನಂಗಡಿ, ಶಿಬಿರದ ಉಸ್ತುವಾರಿ ಹಾಗೂ ಕೆಐಸಿ ಕುಂಬ್ರ ಅಬುಧಾಬಿ ಘಟಕದ ಪ್ರಧಾನ ಕಾರ್ಯದರ್ಶಿ ಹಂಝ ನಾಳ, SKSSF ಕಾರ್ಯಕರ್ತರಾದ ತ್ವಾಹ ಉಪ್ಪಿನಂಗಡಿ, ಅಬೂಬಕ್ಕರ್ ಮುಂಡೋಳೆ,ಅನಸ್ ಕರಾಯ, ಅನ್ಸಾರ್ ಅಲ್ ಐನ್, ಯಾಸೀರ್ ಬೋಳಿಯಾರ್,ಶಾಫಿ ಕಿನ್ಯಾ, ಸಫ್ವಾನ್ ಕೊಡಾಜೆ, ಸ್ವಾದಿಕ್ ಬೆಳ್ಳಾರೆ, ಉಮ್ಮರ್ ಪಾಂಡವರಕಲ್ಲು,ಬಶೀರ್ ಕಾವು, ಬಿಡಬ್ಲ್ಯೂ ಎಫ್ ಅಬುದಾಬಿ ಪ್ರತಿನಿಧಿಗಳಾದ ನವಾಝ್ ಉಚ್ಚಿಲ, ಮುಜೀಬ್ ಉಚ್ಚಿಲ ಹಾಗೂ ಇನ್ನೂ ಅನೇಕರು ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದರು.
ಕಾರ್ಯಕ್ರಮವನ್ನು SKSSF ಅಬುಧಾಬಿ ಕರ್ನಾಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಫಿಳ್ ಝೈನ್ ಸಖಾಫಿ ನಿರೂಪಣೆ ಮಾಡಿದರೆ, ಬಶೀರ್ ಕೊಡ್ಲಿಪೇಟೆ ಧನ್ಯವಾದ ಸಲ್ಲಿಸಿದರು. ಧಾರ್ಮಿಕ ಕ್ಷೇತ್ರದೊಂದಿಗೆ ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿರುವ SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ (ರಿ.) ಇದರ ಜಂಟಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ನವದೆಹಲಿ: ಬೆಂಗಳೂರು (Bengaluru) ಜೀವನ ತುಂಬಾ ಆಕರ್ಷಕವಾಗಿ ಎನ್ನುವ ಮೂಲಕ ವರ್ಗಾವಣೆಯನ್ನು ವಿರೋಧಿಸಿ ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ತಿರಸ್ಕರಿಸಿದೆ.
ಬೆಂಗಳೂರಿನ ವಿಶ್ವಮಾನವ ಜೀವನವು ತುಂಬಾ ಆಕರ್ಷಕವಾಗಿದೆ. ಕರ್ನಾಟಕದ ಇತರ ಪ್ರದೇಶಗಳು ಸಹ ಅಭಿವೃದ್ಧಿ ಹೊಂದಿದವು. ನೀವು ಸಮಾಜದ ಸವಲತ್ತು ಪಡೆದ ವರ್ಗ. ನೀವು ವರ್ಗಾವಣೆಯನ್ನು ವಿರೋಧಿಸಿದರೆ ಇತರರಿಗೆ ಏನಾಗುತ್ತದೆ? ನಾವು ಮೇಲ್ಮನವಿಯನ್ನು ಸ್ವೀಕರಿಸುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಳಗಿನ ವೈದ್ಯಕೀಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆಯನ್ನು ನಿಯಂತ್ರಿಸುವ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ವೈದ್ಯಕೀಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ವರ್ಗಾವಣೆ ನಿಯಂತ್ರಣ) ನಿಯಮಗಳು, 2025 ಅನ್ನು ಪ್ರಶ್ನಿಸಿ ವೈದ್ಯರ ತಂಡವೊಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಇದನ್ನೂ ಓದಿ: ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿ ಶಾಕ್ ಕೊಟ್ಟ ಯುವತಿ; ಬೆಂಗಳೂರು-ಹೈದರಾಬಾದ್ ರೈಲು ಸೇವೆ ಸ್ಥಗಿತ
– ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದಾರೆಂದು ಪೋಷಕರ ಆರೋಪ
ಮಂಡ್ಯ: ಪೊಲೀಸರ ನಿರ್ಲಕ್ಷ್ಯದಿಂದ ಮೂರುವರೆ ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಇದೀಗ ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವನ್ನಪ್ಪಿದೆ ಎಂಬ ಆರೋಪ ಮಂಡ್ಯದಲ್ಲಿ ಕೇಳಿಬಂದಿದೆ. ಮಿಮ್ಸ್ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರ ಜೊತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಹೌದು. ಮಳವಳ್ಳಿಯ ನೆಲ್ಲೂರು ಗ್ರಾಮದ ನಿಂಗರಾಜು ಮತ್ತು ರಂಜಿತಾ ದಂಪತಿಗಳ ಪುತ್ರಿ ಸಾನ್ವಿ. ಮೇ 29 ರಂದು ಮನೆಯಲ್ಲಿ ಟೈಲ್ಸ್ ಬಾಲಕಿಯ ಪಾದದ ಮೇಲೆ ಬಿದ್ದಿದೆ. ಈ ವೇಳೆ ಬಾಲಕಿಯ ಕಾಲು ಮುರಿತವಾಗಿದೆ. ಇದರಿಂದ ಉತ್ತಮ ಚಿಕಿತ್ಸೆ ಸಿಗುತ್ತೆ ಅನ್ನುವ ನಿರೀಕ್ಷೆ ಇಟ್ಟುಕೊಂಡು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮೂಳೆ ಸರಿಯಾಗಬೇಕು ಅಂದ್ರೆ ಕೂಡಲೇ ಆಪರೇಷನ್ ಮಾಡಬೇಕು ಅಂತ ವೈದ್ಯರು ಸಲಹೆ ನೀಡಿದ್ದಾರೆ. ಅದರಂತೆ ಸಾನ್ವಿಗೆ 29ರ ರಾತ್ರಿಯೆ ಬಾಲಕಿಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಆದ ನಂತರ ಬಾಲಕಿ ಚೇತರಿಸಿಕೊಂಡಿದ್ದು, ಪೋಷಕರ ಜೊತೆಯು ಮಾತನಾಡಿದ್ದಾಳೆ. ತಾನು ಬೇಗ ಚೇತರಿಸಿಕೊಳ್ಳುವುದಾಗಿ ಪೋಷಕರು ಧೈರ್ಯ ಹೇಳಿದ್ದಾರೆ. ಆದ್ರೆ ನಿನ್ನೆ ರಾತ್ರಿ ಬಾಲಕಿ ಮೃತ ಪಟ್ಟಿದ್ದಾಳೆ. ಇದನ್ನೂ ಓದಿ: ಮಂಡ್ಯದಲ್ಲಿ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು ಆರೋಪ – ಮಿಮ್ಸ್ ವೈದ್ಯರ ವಿರುದ್ಧ ಕುಟುಂಬ ಆಕ್ರೋಶ
ಭುಗಿಲೆದ್ದ ಪ್ರತಿಭಟನೆ
ಸದ್ಯ ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೆ ಕಾರಣ ಅಂತ ಇದೀಗ ಪೊಲೀಸರು ಆರೋಪಿಸಿ ಪೋಷಕರು ಮಿಮ್ಸ್ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಪೋಷಕರ ಈ ಪ್ರತಿಭಟನೆಗೆ ಹಲವು ಸಂಘಟನೆಗಳು ಸಾಥ್ ನೀಡಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಾಲಕಿಗೆ ಆಪರೇಷನ್ ಆದ ನಂತರ ಸರಿಯಾದ ಶುಶ್ರೂಷೆ ಮಾಡಿಲ್ಲ. ವೈದ್ಯರ ಬದಲಾಗಿ ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ನೀಡಿದ್ದು ಈ ಘಟನೆಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೇ ಮಗು ಸಾವನಪ್ಪಿದ್ರೆ ಪೋಷಕರಿಗೆ ಮೊದಲು ವಿಚಾರ ತಿಳಿಸಬೇಕಾಗಿತ್ತು. ಆದರೆ ಅದರ ಬದಲು ಪೊಲೀಸರಿಗೆ ವಿಚಾರ ತಿಳಿಸಿ ನಂತರ ಪೋಷಕರಿಗೆ ತಿಳಿಸಿದ್ದಾರೆ ಅಂತ ಆರೋಪಿಸಿದ್ದಾರೆ.
ಪೋಷಕರ ಈ ಆರೋಪ ತಳ್ಳಿಹಾಕಿರುವ ವೈದ್ಯರು, ಮೊದಲು ಪರೀಕ್ಷೆ ಮಾಡಿದ ನಂತರ ಆಪರೇಷನ್ ಮಾಡಲಾಗಿದೆ. ಆದ್ರೆ ಅಪರೇಷನ್ ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವೇಳೆ ರಕ್ತ ಪರೀಕ್ಷೆ ಮಾಡಿದಾಗ ಮಗುವಿನ ಪ್ಲೇಟ್ ಲೇಟ್ ಕಡಿಮೆಯಾಗಿತ್ತು, ಜೊತೆಗೆ ಇನ್ಫೆಕ್ಷನ್ ಆಗಿರುವುದು ಗೊತ್ತಾಗಿದೆ. ಇಲ್ಲಿ ವೈದ್ಯರು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ ಅಂತ ವೈದ್ಯಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ನಾಲ್ಕೇ ದಿನಕ್ಕೆ KRSನಲ್ಲಿ 11 ಅಡಿ ನೀರು ಹೆಚ್ಚಳ – ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ!
ಮೃತದೇಹ ಮೈಸೂರಿಗೆ ರವಾನೆ
ಮಿಮ್ಸ್ ವೈದ್ಯರ ವಿರುದ್ಧ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತ ದೇಹ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ವೈದ್ಯರ ತಂಡವನ್ನೇ ನೇಮಿಸಿ ತನಿಖೆ ಮಾಡಲಾಗುತ್ತೆ. ಯಾವೆಲ್ಲ ವೈದ್ಯರು ಚಿಕಿತ್ಸೆ ಮಾಡಿದ್ರು? ಚಿಕಿತ್ಸೆಗೆ ಏನೆಲ್ಲಾ ಔಷಧಿ ನೀಡಲಾಗಿದೆ? ಸಾವಿಗೆ ಕಾರಣ ಏನು ಅನ್ನುವುದರ ಬಗ್ಗೆ ತನಿಖೆ ಮಾಡಲಾಗುತ್ತೆ? ಮರಣೋತ್ತರ ಪರೀಕ್ಷೆ ಜೊತೆ ಸ್ಯಾಂಪಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುವುದು. ಮಿಮ್ಸ್ ಆಸ್ಪತ್ರೆಯಲ್ಲಿ ಸಾವನಪ್ಪಿರುವ ಕಾರಣ ಕೆ.ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತೆ. ಅದಕ್ಕಾಗಿ ಮೃತದೇಹವನ್ನ ಮೈಸೂರಿಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಬಾಲಕಿ ಸಾವು ಕೇಸ್ | ಎಚ್ಚೆತ್ತ ಬೆಂಗಳೂರು ಪೊಲೀಸರಿಂದ ಹೊಸ ಎಸ್‌ಒಪಿ ಜಾರಿ
ಟೈಲ್ಸ್ ಬಿದ್ದು ಬಾಲಕಿ ಸಾನ್ವಿಯ ಪಾದದ ಮೂಳೆ ಮುರಿದಿತ್ತು. ಇದರಿಂದ ತಂದೆ ನಿಂಗರಾಜು ಮೇ 29ರ ಗುರುವಾರ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಎಲ್ಲಾ ಪರೀಕ್ಷೆಗಳ ನಂತರ ಗುರುವಾರ ರಾತ್ರಿಯೇ ಸಾನ್ವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆಪರೇಷನ್ ಬಳಿಕ ರಾತ್ರಿಯೇ ಸಾನ್ವಿಯನ್ನ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಶುಕ್ರವಾರ ಬೆಳಗ್ಗೆಯೇ ಬಾಲಕಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮತ್ತೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಬಾಲಕಿಗೆ ಚಿಕಿತ್ಸೆ ಮುಂದುವರಿದಿತ್ತು.
ಶನಿವಾರ (ನಿನ್ನೆ) ಬೆಳಗ್ಗೆ ಡ್ರಿಪ್ಸ್ ಮೂಲಕ ಔಷಧಿ ನೀಡಲಾಗಿತ್ತು. ಔಷಧಿ ನೀಡ್ತಿದ್ದಂತೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಬಾಲಕಿ ಸಾನ್ವಿ ಶನಿವಾರ ರಾತ್ರಿ 10:30ರಲ್ಲಿ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೋವಿಡ್ ಕೇಸ್ ಏರಿಕೆ – ಆರೋಗ್ಯ ಇಲಾಖೆಯಿಂದ ಸಹಾಯವಾಣಿ ಬಿಡುಗಡೆ
ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದರಿಂದ ಸಾವಾಗಿದೆ ಎಂದು ದೂರಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರುವ ಮಿಮ್ಸ್‌ನ ಆರ್‌ಎಂಒ ಡಾ. ದರ್ಶನ್, ಅಂಗಾಂಗ ವೈಫಲ್ಯದಿಂದ ಬಾಲಕಿ ಸಾವಾಗಿದೆ, ತನಿಖೆ ಮಾಡಿಸಿಕೊಳ್ಳಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಭೂಕುಸಿತ | ಕೊಚ್ಚಿ ಹೋದ ವಾಹನ – 7 ಮಂದಿ ದುರ್ಮರಣ
ಪ್ಯಾರೀಸ್: ಫ್ರಾನ್ಸ್‌ನ (France) ವೈದ್ಯನೊಬ್ಬ 30 ವರ್ಷಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದ 300 ಮಕ್ಕಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಕೋರ್ಟ್‌ನಲ್ಲಿ ವಿಚಾರಣೆ ವೇಳೆ ತಾನೊಬ್ಬ `ಶಿಶುಕಾಮಿ’ ಎಂದು ಆತನೇ ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಆತನನ್ನು ವೆನಿಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸ್ವತಃ ವೈದ್ಯನೇ ತಪ್ಪೊಪ್ಪಿಕೊಂಡು, ಕಳೆದ 30 ವರ್ಷದಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ. 2020ರಲ್ಲಿಯೂ 4 ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಆತನಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತ ಶಿವಭಕ್ತರು
– ವಾರಪೂರ್ತಿ 20 ರೂಪಾಯಿಯಲ್ಲೇ ಬದುಕು
– ಅನ್ನ-ಆಹಾರ ನೀಡದೆ ಅತ್ತೆ-ಪತಿ ಕಿರುಕುಳ
ಚಿಕ್ಕಮಗಳೂರು: 20 ರೂಪಾಯಿಯಲ್ಲಿ ಆಕೆ ವಾರಪೂರ್ತಿ ಬದುಕಬೇಕು. ಅದು ಮನೆಯಿಂದ ಹೊರಬರದಂತೆ. ಮನೆಯಲ್ಲಿ ರೇಷನ್ ಇದ್ರೆ ಅನ್ನ-ಆಹಾರ. ಇಲ್ಲದಿದ್ರೆ ಮನೆಯಲ್ಲಿ ಉಪವಾಸ.. ಅತ್ತೆ-ಗಂಡ ಹೋದಾಗಲೇ ಹೋದ್ರು, ಬಂದಾಗಲೇ ಬಂದ್ರು. ಮನೆಯಿಂದ ಹೋಗುವಾಗ ಮನೆಯಲ್ಲಿ ರೇಷನ್ ಎಲ್ಲಾ ಖಾಲಿ-ಖಾಲಿ. 3-4 ದಿನ ನೀರು ಕುಡಿದುಕೊಂಡೇ ಇರಬೇಕು. ಅದೂ ನೀರಿನ ಸಂಪರ್ಕ ಕಟ್ ಮಾಡಿರದಿದ್ರೆ. ಮನೆ ಕೆಲಸವೆಲ್ಲಾ ಮಾಡಬೇಕು. ಅಡುಗೆ-ಊಟ ಮಾಡುವಂತಿಲ್ಲ. ಒಂದೇ ಚೇರ್. ಅಲ್ಲೇ ಕೂರಬೇಕು. ಮಹಡಿ ಮೇಲೆ ಮಲಗಬೇಕು. ಇದು ಅವಿದ್ಯಾವಂತರ ಕಥೆಯಲ್ಲ. ವೈದ್ಯನೋರ್ವ (Doctor) ತನ್ನ ಪತ್ನಿಗೆ 4 ವರ್ಷದಿಂದ ಮಾಡಿರೋ ಉಪಚಾರ.. ಆ ಗೃಹಣಿಯ ಸೋಚನೀಯ ಕಥೆ ಕೇಳಿದ್ರೆ ನೀವು ಮರುಗದೇ ಇರಲಾರಿರಿ.. ಅದೆಲ್ಲಿ ಅಂತೀರಾ.. ಈ ಸ್ಟೋರಿ ನೋಡಿ..
ಆಸ್ಪತ್ರೆ ಬೆಡ್ ಮೇಲೆ ಕಣ್ಣೀರಿಡ್ತಿರೋ ಈಕೆ ಆ ವೈದ್ಯನ ಪತ್ನಿ.. ಈತನೇ ವೈದ್ಯ, ಆಕೆ ಗಂಡ ರವಿಕುಮಾರ್.. ಅಂದಹಾಗೇ, ಈಕೆ ಹೆಸ್ರು ವಿನುತಾ ರಾಣಿ. ವಯಸ್ಸು ಹತ್ರತ್ರ 45. ಚಿಕ್ಕಮಗಳೂರು (Chikkamagaluru) ನಗರದ ದೋಣಿಕಣ ನಿವಾಸಿ. 22 ವರ್ಷದ ಹಿಂದೆ ಡಾ.ರವಿಕುಮಾರ್ ಜೊತೆ ಮದುವೆ ಮಾಡಿಕೊಟ್ಟಿದ್ರು.. ಎಂಬಿಬಿಎಸ್ ಓದುತ್ತಿರೋ ಮಗನೂ ಇದ್ದಾನೆ. ಆದ್ರೆ, 4 ವರ್ಷದಿಂದ ಪತ್ನಿಗೆ ಮಾನಸಿಕ ಕಿರುಕುಳ ನೀಡ್ತಿರೋ ಪತಿಯಿಂದ ಈಕೆಗೆ ಗೃಹಬಂಧನಲ್ಲಿಟ್ಟಿದ್ದಾರೆ. ಇದನ್ನೂ ಓದಿ: ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ – ಟೆಕ್ಕಿ ಅತುಲ್ ಆತ್ಮಹತ್ಯೆ ಕುರಿತು ಕಂಗನಾ ಪ್ರತಿಕ್ರಿಯೆ
ಮನೆಯ ಮೇಲಿನ ಮಹಡಿಯ ರೂಮಿನಲ್ಲೇ ಇರಬೇಕು. ಕೆಳಗೆ ಇಳಿಯುವಂತಿಲ್ಲ, ಕೆಳಗೆ ಬಂದರೂ ಮನೆ ಕೆಲಸ ಮಾಡಿ ಮತ್ತೆ ಮೇಲೆ ಹೋಗಬೇಕು. ಕೂರೋಕೆ ಒಂದು ಚೇರ್ ಕೊಟ್ಟಿದ್ದಾರೆ ಅಷ್ಟೇ. ಊಟ ಅವರು ಹಾಕಿದಾಗ. ಹಾಕಿದಷ್ಟು ಅಷ್ಟೆ. ಗಂಡ ಹಾಗೂ ಅತ್ತೆ ಊರಿಗೆ ಹೋದರೆ ಈಕೆಗೆ ಅವರು ಬರುವಷ್ಟು ದಿನ ಗೃಹ ದಿಗ್ಭಂದನ.. ಮನೆಯಿಂದ ಆಚೆ ಬರುವಂತಿಲ್ಲ. ಅವರು ಹೋಗುವಾಗ 20 ರೂಪಾಯಿ ಕೊಟ್ಟು ಹೋಗ್ತಾರೆ. ಅವರು ಬರುವಷ್ಟು ದಿನ ಮನೆಯಿಂದ ಹೊರ ಹೋಗದಂತೆ ಅದೇ 20 ರೂಪಾಯಿಯಲ್ಲಿ ಬದುಕಬೇಕು.. ಎಕ್ಸ್ ಪಾರ್ಟ್ ಡಿವೋರ್ಸ್ ಕೊಟ್ಟಿದ್ದೇನೆ ಎಂದು 4 ವರ್ಷದಿಂದ ಅನ್ನ-ಆಹಾರ ನೀಡದೆ ಗೃಹಬಂಧನದಲ್ಲಿಟ್ಟಿದ್ದಾನೆ ಅಂತ ವೈದ್ಯನ ಪತ್ನಿ ವಿನುತಾ ರಾಣಿ, ಆಕೆ ಸಹೋದರ ಆರೋಪಿಸಿದ್ದಾರೆ.
ಮನೆಯಲ್ಲೇ ದಿಗ್ಭಂದನ ಹಾಕಿರೋ ಡಾಕ್ಟ್ರು ಈಕೆಗೆ ಮೊಬೈಲ್ ಕೊಟ್ಟಿದ್ದಾರೆ. ಯೂಟ್ಯೂಬ್ ನೋಡೋದು ಬಿಟ್ಟು ಬೇರೇನೂ ಮಾಡಲು ಆಗಲ್ಲ. ದಿನಕ್ಕೆ ಒಂದು ಅಥವಾ ಎರಡು ಹೊತ್ತು ಊಟ ಕೊಡ್ತಾರೆ. ಅದು ಅವರು ಕೊಟ್ಟಷ್ಟು ಮಾತ್ರ ತಿನ್ನಬೇಕು. ಜಾಸ್ತಿ ಕೇಳಿದರೆ ಹೊಡೆಯೋದು, ತಲೆಯನ್ನ ಗೋಡೆಗೆ ಗುದ್ದೋದು, ಎದೆಗೆ ಕಾಲಲ್ಲಿ ಒದೆಯೋದು ಮಾಡ್ತಾರಂತೆ. ಕುತ್ತಿಗೆ ಹಿಸುಕಿ ಸಾಯಿ-ಸಾಯಿ ಎಂದು ಡಾಕ್ಟ್ರು ಹಾಗೂ ಆತನ ಅಮ್ಮ ಹೊಡೆಯುತ್ತಾರಂತೆ. ಊಟದಲ್ಲಿ ಸ್ಲೋ ಪಾಯಿಸನ್ ಹಾಕಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ ಎಂದು ವಿನೂತರಾಣಿ ಸಹೋದರ ವಾಗೀಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಕ್ಷಣಗಣನೆ – ಅಂಜನಾದ್ರಿ ಬೆಟ್ಟದಲ್ಲಿ ತಯಾರಿ
ಒಟ್ಟಾರೆ, ಸಪ್ತಪದಿ ತುಳಿದು ವರ್ಷಗಟ್ಟಲೇ ಸಂಸಾರದ ಮಾಡಿದ ವೈದ್ಯ ನಾಲ್ಕೇ ವರ್ಷಕ್ಕೆ ಸಾವಿನ ನರಕ ತೋರಿಸಿದ್ದಾನೆ. ಅತ್ತ ತಾಯಿ ಅಂತ ತಿಳಿದು ಗಂಡನ ಮನೆಗೆ ಬಂದಿದ್ದ ಅತ್ತೆ ಕೂಡ ಎಂದು ಅಮ್ಮನಾಗಲೇ ಇಲ್ಲ. ಇದ್ದೊಬ್ಬ ಮಗನೂ ಕೂಡ ಅಮ್ಮನ ಸಾವು ಬಯಸುತ್ತಿದ್ದಾನೆ ಅಂದ್ರೆ ಆಧುನಿಕ ಪ್ರಪಂಚದಲ್ಲಿ ಹಣ, ಅಧಿಕಾರ, ವಯಸ್ಸಿಗಷ್ಟೆ ಬೆಲೆಯೇ ಎಂಬ ಪ್ರಶ್ನೆ ಮೂಡೋದು ಸಹಜ. ಇದನ್ನೂ ಓದಿ: ನಾನು ಉಪೇಂದ್ರ ಅಭಿಮಾನಿ – ‘ಯುಐ’ ಸಿನಿಮಾಗೆ ಶುಭ ಹಾರೈಸಿದ ಆಮೀರ್ ಖಾನ್
ಬೆಂಗಳೂರು: ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ (Ballari District Hospital) ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬೆಂಗಳೂರಿನ (Bengaluru) ವಿಕಾಸ ಸೌಧದಲ್ಲಿಂದು ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಐವಿ ದ್ರಾವಣದ 22 ಬ್ಯಾಚ್‌ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಕೇಸ್ ದಾಖಲಿಸಿ ಎಂದು ಸೂಚಿಸಿದರು. ಇದನ್ನೂ ಓದಿ: ಮೃತ ಬಾಣಂತಿಯರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ
ಈ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು, ರಾಜ್ಯದ ಡ್ರಗ್ ಕಂಟ್ರೋಲ್ ನೀಡಿದ 22 ಬ್ಯಾಚ್ ಗಳ NSQ ವರದಿಯಲ್ಲಿ 13 ಬ್ಯಾಚ್‌ಗಳ ವರದಿ ಪ್ರಶ್ನಿಸಿ ಕಂಪನಿಯವರು ಸೆಂಟ್ರಲ್ ಡ್ರಗ್ ಲ್ಯಾಬರೋಟಿರಿ ಮೆಟ್ಟಿಲೇರಿದ್ದಾರೆ. ಅದರಲ್ಲಿ 4 ಬ್ಯಾಚ್‌ಗಳು ಗುಣಮಟ್ಟ ಹೊಂದಿವೆ ಎಂದು ಸೆಂಟ್ರಲ್ ಡ್ರಗ್ ಲ್ಯಾಬ್ ವರದಿ ನೀಡಿದೆ. ಅಲ್ಲದೇ 13 ಬ್ಯಾಚ್ ಗಳ ಬಗ್ಗೆ ಸೆಂಟ್ರಲ್ ಡ್ರಗ್ ಲ್ಯಾಬ್ ನಿಂದ ವರದಿ ಬರಬೇಕಿದೆ ಎಂದು ಸ್ಪಷ್ಟನೆ ನೀಡಿದರು. ಉಳಿದ 9 ಬ್ಯಾಚ್ ಗಳ ವಿಚಾರವಾಗಿ ಕಂಪನಿಯವರನ್ನ ಪ್ರಾಸಿಕ್ಯೂಷನ್‌ಗೆ ಒಳಪಡಿಸಬಹುದಲ್ಲ ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಅಲ್ಲದೇ ರಾಜ್ಯದ ಡ್ರಗ್ ಕಂಟ್ರೋಲ್ ಟೆಸ್ಟಿಂಗ್‌ನಲ್ಲಿ NSQ ವರದಿ ಬಂದ ಮೇಲೆ ಸೆಂಟ್ರಲ್ ಡ್ರಗ್ ಲ್ಯಾಬ್ ನಲ್ಲಿ ಹೇಗೆ SQ ವರದಿ ಬರಲು ಸಾಧ್ಯ ಎಂಬುದರ ಕುರಿತು ಕುಲಂಕುಶವಾಗಿ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಔಷಧಿ ನಿಯಂತ್ರಣ ಅಧಿಕಾರಿಗೆ ಸಚಿವರು ಸೂಚನೆ ನೀಡಿದರು. ಸಮಯಕ್ಕೆ ಸರಿಯಾಗಿ ಔಷಧಿಗಳನ್ನ ಸೂಕ್ತ ರೀತಿಯಲ್ಲಿ ಟೆಸ್ಟಿಂಗ್ ನಡೆಸಿ. ಜನರ ಜೀವದ ಜೊತೆ ಚೆಲ್ಲಾಟ ಆಡಬೇಡಿ. ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಟೆಸ್ಟಿಂಗ್ ನಡೆಸುವ ಅಧಿಕಾರಿಗಳಿಗೆ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ತರಾಟೆ ತೆಗೆದುಕೊಂಡರು. ಇದನ್ನೂ ಓದಿ: ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು – ದಿನೇಶ್ ಗುಂಡೂರಾವ್ ವಜಾಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಐವಿ ದ್ರಾವಣ ಕೂಡ ಒಂದು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ರೀತಿಯ ವರದಿಗಳಿರುವಾಗ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳು ಏನು ಕ್ರಮ ವಹಿಸಿದ್ದಾರೆ. ಟೆಸ್ಟಿಂಗ್ ವರದಿಗಳನ್ನ ಶೀಘ್ರದಲ್ಲಿ ಕೊಡಬೇಕು. ಟೆಸ್ಟಿಂಗ್ ವರದಿಗಳನ್ನ ನೀಡಲು ವಿಳಂಭ ನೀತಿ ಏಕೆ? ಅಲ್ಲದೇ ಸೆಂಟ್ರಲ್ ಲ್ಯಾಬ್ ನಿಂದ ಕೂಡಾ ಟೆಸ್ಟಿಂಗ್ ವರದಿಗಳು ಬರುವುದು ವಿಳಂಭವಾಗುತ್ತಿರುವುದು ಏಕೆ? ನಿಮಗೆ ಜವಾಬ್ದಾರಿ ಇಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಗರಂ ಆದರು.
ಐವಿ ರಿಂಗರ್ ಲ್ಯಾಕ್ಟೇಟ್‌ನ 192 ಬ್ಯಾಚ್‌ಗಳಲ್ಲಿ ಟೆಸ್ಟಿಂಗ್‌ಗೆ ಬಾಕಿ ಇರುವ ಬ್ಯಾಚ್‌ಗಳ ವರದಿ ಶೀಘ್ರದಲ್ಲೇ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ತಾಕೀತು ಮಾಡಿದರು. ಅಲ್ಲದೇ NABL ಲ್ಯಾಬ್‌ನಲ್ಲಿ 192 ಬ್ಯಾಚ್‌ಗಳು ಐವಿ ದ್ರಾವಣ ಪಾಸಿಟಿವ್ ರಿಪೋರ್ಟ್ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಎಂದರು. ಇದನ್ನೂ ಓದಿ: ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ವೈದ್ಯರ ನಿರ್ಲಕ್ಷ್ಯದಿಂದಲ್ಲ – ದಿನೇಶ್ ಗುಂಡೂರಾವ್
ರಾಜ್ಯದ ಡ್ರಗ್ ಕಂಟ್ರೋಲ್ ನೀಡಿದ ವರದಿಯಲ್ಲಿ 22 ಬ್ಯಾಚ್ ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂದು ವರದಿಯಿದೆ. ಇದರಲ್ಲಿ ಸೆಂಟ್ರಲ್ ಲ್ಯಾಬ್ ನವರು 4 ಬ್ಯಾಚ್ ಗಳಿಗೆ ಮಾತ್ರ ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿದ್ದಾರೆ. ಆದರೆ NABL ಲ್ಯಾಬ್‌ನವರು 192 ಬ್ಯಾಚ್‌ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿದೆ ಎಂದು ವರದಿ ನೀಡಿದ್ದಾರೆ. ಇದು ಹೇಗೆ ಸಾಧ್ಯ? ಈ ಬಗ್ಗೆ ಪರಿಶೀಲನೆ ನಡೆಸಿ. ಲ್ಯಾಬ್‌ನವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಔಷಧಿ ಸರಬರಾಜು ನಿಗಮಕ್ಕೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರನ್ನ ಸಿಎಂ ಸಿದ್ದರಾಮಯ್ಯ ಸಂಪುಟದಿಂದ ವಜಾ ಮಾಡಬೇಕು ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ (VidhanSoudha) ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಆರೋಗ್ಯ ಮಂತ್ರಿ ಆಗಲು ಯೋಗ್ಯರು ಇದ್ದೀರಾ? ಅವರೇ ವೈದ್ಯರಾ? ನಾವು ಸದನದಲ್ಲಿ ವೆಟನರಿ ಔಷಧಿ ಕೊಟ್ರು ಅಂತ ಆರೋಪ ಮಾಡಿದಾಗ ಯೂಟರ್ನ್ ಹೊಡೆದಿದ್ರಿ. ಈಗ ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಮತ್ತು ದ್ರಾವಣ ಕೂಡ ಕಳಪೆ ಆಗಿದೆ ಅಂತ ರಿಪೋರ್ಟ್ ಬಂದಿದೆ. ಹೀಗಿದ್ರು ದಿನೇಶ್ ಗುಂಡೂರಾವ್ ಬದಲಾವಣೆ ಮಾಡಿಲ್ಲ. ಆರೋಗ್ಯ ಇಲಾಖೆ (Health Department) ಅವರು ಜನರ ಜೀವಗಳ ಜೊತೆ ಆಟ ಆಡ್ತಿದ್ದಾರೆ. ಕೂಡಲೇ ದಿನೇಶ್ ಗುಂಡೂರಾವ್‌ರನ್ನ ವಜಾ ಮಾಡಬೇಕು ಅಂತ ಸಿಎಂರನ್ನ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಎಂಎಸ್ಸಿ ನರ್ಸಿಂಗ್, ಎಂಪಿಟಿ ಕೋರ್ಸ್ ಅರ್ಜಿ ಸಲ್ಲಿಸಲು ಡಿ.2 ಕೊನೆ ದಿನ: ಕೆಇಎ
IV ದ್ರಾವಣವೇ ಸಾವಿಗೆ ಕಾರಣ:
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇಡೀ ಅನಾಹುತಕ್ಕೆ ಗ್ಲೂಕೋಸ್ ಸಹಿತ ಇಂಟ್ರಾವೀನಸ್ (ಐವಿ) ದ್ರಾವಣ ಕಾರಣ ಅನ್ನೋ ವರದಿ ಬಹಿರಂಗವಾಗಿದೆ. ಬಾಣಂತಿಯರ ಸರಣಿ ಸಾವಿನ ಕುರಿತು ತನಿಖೆ ನಡೆಸಲು ನೇಮಕವಾಗಿದ್ದ ತಂಡ ವರದಿಯೊಂದನ್ನು ನೀಡಿದ್ದು, ಹೆರಿಗೆಯಾಗುವ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆ ವೇಳೆ ನೀಡಿದ ದ್ರಾವಣ (ಗ್ಲೂಕೋಸ್) ಕಳಪೆಯಾಗಿತ್ತು ಎಂಬ ವರದಿ ನೀಡಿದೆ ಎಂಬುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: BBK 11: ಉಗ್ರಂ ಮಂಜು, ಮೋಕ್ಷಿತಾ ದಿಢೀರ್ ಬಂಧನ- ಟ್ವಿಸ್ಟ್ ಕೊಟ್ಟ ʻಬಿಗ್ ಬಾಸ್ʼ
ದ್ರಾವಣದ ಬಗ್ಗೆ ದೂರು ಬಂದಿರುವುದರಿಂದ ಇಂಟ್ರಾವೀನಸ್ ದ್ರಾವಣ ಬಳಕೆ ಮಾಡದಂತೆ ಈಗಾಗಲೇ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಗ್ಲೂಕೋಸ್ ಬಳಸದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿನ ಸಾವಿನ ಬಗ್ಗೆ ತನಿಖೆ ನಡೆಸಲು ಸರ್ಕಾರ ತಂಡ ಕಳುಹಿಸಿತ್ತು. ಇದೀಗ ಶಸ್ತ್ರ ಚಿಕಿತ್ಸೆ ವೇಳೆ ಈ ಕಳಪೆ ಐವಿ ದ್ರಾವಣದಿಂದ ದೇಹದಲ್ಲಿ ದಿಢೀರ್ ಬದಲಾವಣೆ, ಅಡ್ಡ ಪರಿಣಾಮಗಳಿಂದ ಸಾವಾಗಿದೆ ಎಂದು ತಂಡ ವರದಿ ಸಲ್ಲಿಕೆ ಮಾಡಿದೆ.
ಇದೇ ವಿಚಾರವನ್ನ ನವೆಂಬರ್ 16 ರಂದು ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು. ವೈದ್ಯರು ನೀಡಿದ್ದ ಗ್ಲೂಕೋಸ್ ರಿಯಾಕ್ಷನ್‌ನಿಂದಲೇ ಬಾಣಂತಿಯರ ಸಾವಾಗಿದ್ದು ಎಂದು ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ?ಪಬ್ಲಿಕ್ ಟಿವಿ’ ವರದಿ ಬಳಿಕ ಎಚ್ಚೆತ್ತುಕೊಂಡಿದ್ದ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಡಿಹೆಚ್‌ಒಗಳಿಗೆ ಪತ್ರ ಬರೆದು ಬಾಂಗ್ಲಾ ಮೂಲದಿಂದ ಸರಬರಾಗಿದ್ದ ಗ್ಲೂಕೋಸ್ ಬಳಸದಂತೆ ಹೇಳಿತ್ತು. ಇದನ್ನೂ ಓದಿ: ಹೈಕೋರ್ಟ್‌ಗೆ ತೆರಳುವಂತೆ ಶಾಹಿ ಈದ್ಗಾ ಸಮಿತಿಗೆ ಸೂಚನೆ; ʻಹೈʼಆದೇಶ ಬರೋವರೆಗೆ ಮಸೀದಿ ಸಮೀಕ್ಷೆಗೆ ಸುಪ್ರೀಂ ತಡೆ
ಬಳ್ಳಾರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇಡೀ ಅನಾಹುತಕ್ಕೆ ಗ್ಲೂಕೋಸ್ ಸಹಿತ ಇಂಟ್ರಾವೀನಸ್ (Intravenous) ದ್ರಾವಣ ಕಾರಣ ಅನ್ನೋ ವರದಿ ಬಹಿರಂಗವಾಗಿದೆ.
ಬಾಣಂತಿಯರ ಸರಣಿ ಸಾವಿನ (Serial Deaths of Barmaids) ಕುರಿತು ತನಿಖೆ ನಡೆಸಲು ನೇಮಕವಾಗಿದ್ದ ತಂಡ ವರದಿಯೊಂದನ್ನು ನೀಡಿದ್ದು, ಹೆರಿಗೆಯಾಗುವ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆ ವೇಳೆ ನೀಡಿದ ದ್ರಾವಣ (Glucose) ಕಳಪೆಯಾಗಿತ್ತು ಎಂಬ ವರದಿ ನೀಡಿದೆ ಎಂಬುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ದ್ರಾವಣದ ಬಗ್ಗೆ ದೂರು ಬಂದಿರುವುದರಿಂದ ಇಂಟ್ರಾವೀನಸ್ ದ್ರಾವಣ ಬಳಕೆ ಮಾಡದಂತೆ ಈಗಾಗಲೇ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಗ್ಲೂಕೋಸ್ ಬಳಸದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿನ ಸಾವಿನ ಬಗ್ಗೆ ತನಿಖೆ ನಡೆಸಲು ಸರ್ಕಾರ ತಂಡ ಕಳುಹಿಸಿತ್ತು. ಇದೀಗ ಶಸ್ತ್ರ ಚಿಕಿತ್ಸೆ ವೇಳೆ ಈ ಕಳಪೆ ಐವಿ ದ್ರಾವಣದಿಂದ ದೇಹದಲ್ಲಿ ದಿಢೀರ್ ಬದಲಾವಣೆ, ಅಡ್ಡ ಪರಿಣಾಮಗಳಿಂದ ಸಾವಾಗಿದೆ ಎಂದು ತಂಡ ವರದಿ ಸಲ್ಲಿಕೆ ಮಾಡಿದೆ.
ಇದೇ ವಿಚಾರವನ್ನ ನವೆಂಬರ್ 16 ರಂದು ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು. ವೈದ್ಯರು ನೀಡಿದ್ದ ಗ್ಲೂಕೋಸ್ ರಿಯಾಕ್ಷನ್‌ನಿಂದಲೇ ಬಾಣಂತಿಯರ ಸಾವಾಗಿದ್ದು ಎಂದು ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ʻಪಬ್ಲಿಕ್ ಟಿವಿʼ ವರದಿ ಬಳಿಕ ಎಚ್ಚೆತ್ತುಕೊಂಡಿದ್ದ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಡಿಹೆಚ್‌ಒಗಳಿಗೆ ಪತ್ರ ಬರೆದು ಬಾಂಗ್ಲಾ ಮೂಲದಿಂದ ಸರಬರಾಗಿದ್ದ ಗ್ಲೂಕೋಸ್ ಬಳಸದಂತೆ ಹೇಳಿತ್ತು.
ತಪ್ಪು ಸಾಬೀತಾದ್ರೆ ಕಂಪನಿ ಬ್ಲಾಕ್‌ಲಿಸ್ಟ್‌ಗೆ:
ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್, ಬಾಣಂತಿಯರ ಸಾವಿನ ಬಗ್ಗೆ ತನಿಖೆ ನಡೆಸಲಾಗ್ತಿದೆ. ಪ್ರಾಥಮಿಕ ವರದಿ ನಮಗೆ ಬಂದಿದೆ. ವರದಿಯಲ್ಲಿ ಮೇಲ್ನೋಟಕ್ಕೆ ಐವಿ ಪ್ಲುಯೆಡ್‌ನಿಂದ ಸಮಸ್ಯೆ ಆಗಿದೆ ಅನ್ನೋದು ಗೊತ್ತಾಗಿದೆ. ಹೀಗಾಗಿ ಸ್ಯಾಂಪಲ್‌ಗಳನ್ನ ಲ್ಯಾಬ್‌ಗೆ ಕಳುಹಿಸಲಾಗಿದೆ. ಇನ್ನೊಂದು ವಾರದಲ್ಲಿ ವರದಿ ಬರಲಿದೆ. ಮೆಡಿಕಲ್ ನೆಗ್ಲಿಜೆನ್ಸಿ ಇದ್ಯಾ ಅನ್ನೋದನ್ನ ಕೂಡ ನೋಡ್ತಿವಿ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು. ಈ ಹಿಂದೆ ಕೂಡ ಎರಡು ಬ್ಯಾಚ್ ಮೇಲೆ ಆರೋಪ ಇತ್ತು. ಎರಡು ಬ್ಯಾಚ್ ಬ್ಲಾಕ್‌ಲಿಸ್ಟ್‌ಗೆ ಸೇರಿಸಲಾಗಿತ್ತು. ಕೋರ್ಟ್‌ನಲ್ಲಿ ಸಾಬೀತು ಆದ ಬಳಿಕ ಮತ್ತೆ ಔಷಧ ಪೂರೈಕೆ ಮಾಡಲಾಗಿದೆ. ಇದೀಗ ಈ ಪ್ರಕರಣದ ಬಗ್ಗೆ ವರದಿ ಬಂದ ಬಳಿಕ ತಪ್ಪು ಸಾಬೀತಾದಲ್ಲಿ ಬ್ಲಾಕ್ ಲಿಸ್ಟ್‌ಗೆ ಸೇರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.