Tag: doctorate

  • ಗೌರವ ಡಾಕ್ಟರೇಟ್ ನಿರಾಕರಿಸಿದ್ದು ಯಾಕೆ ಎಂದು ಹೇಳಿ ಮ್ಯಾಕ್ಸ್ ಬಗ್ಗೆ ಅಪ್‌ಡೇಟ್ ಕೊಟ್ಟ ಸುದೀಪ್

    ಗೌರವ ಡಾಕ್ಟರೇಟ್ ನಿರಾಕರಿಸಿದ್ದು ಯಾಕೆ ಎಂದು ಹೇಳಿ ಮ್ಯಾಕ್ಸ್ ಬಗ್ಗೆ ಅಪ್‌ಡೇಟ್ ಕೊಟ್ಟ ಸುದೀಪ್

    ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯವು (Tumkuru University) ನಟ ಸುದೀಪ್ (Actor Sudeep) ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ಡಾಕ್ಟರೇಟ್ (Doctorate) ಘೋಷಣೆ ಮಾಡಿತ್ತು. ಆದರೆ ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ಡಾಕ್ಟರೇಟ್‌ನ್ನು ನಿರಾಕರಿಸಿದ್ದರು. ಅಂದು ಸುದೀಪ್ ಅವರ ಆ ನಡೆ ಅಭಿಮಾನಿಗಳಿಗೆ ಇಷ್ಟವಾಗಿತ್ತು.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ನಾನು ಅಂತದ್ದೇನು ಮಾಡಿಲ್ಲ. ಹತ್ತಾರು ಸಿನಿಮಾ ಮಾಡಿದ್ದೀನಿ ಅಷ್ಟೇ, ನಾನು ಇನ್ನೂ ಲೈಫ್‌ಲ್ಲಿ ಮಾಡೋದು ತುಂಬಾ ಇದೆ. ನನ್ನ ಪ್ರಕಾರ ನಾನು ಏನಾದರೂ ಮಾಡಿದ್ದೀನಿ ಅಂತ ಅನಿಸಿದಾಗ ನಾನೇ ಪತ್ರ ಬರೆದು ಡಾಕ್ಟರೇಟ್ ಕೊಡಿ ಎಂದು ಕೇಳ್ತೀನಿ. ಆದರೆ ಅವರು ಕೊಟ್ಟಿರುವ ಡಾಕ್ಟ್ರೇಟ್ ಮೇಲೆ ನನಗೆ ತುಂಬಾ ಗೌರವವಿದೆ ಎಂದರು.ಇದನ್ನೂ ಓದಿ: ಸಿನಿಮಾಗೆ ಬರೋಲ್ಲ, ನೋಡಲ್ಲ ಅನ್ನೋವಾಗ್ಲೆ ಗತ್ತು ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ: ದರ್ಶನ್‌ ಫ್ಯಾನ್ಸ್‌ಗೆ ಕಿಚ್ಚನ ಖಡಕ್‌ ರಿಪ್ಲೈ

    ಸೆ.2 ರಂದು ಮ್ಯಾಕ್ಸ್ ರಿಲೀಸ್ (Max Release) ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿತ್ತು. ಅದೇ ದಿನ ತನ್ನ ಹುಟ್ಟು ಹಬ್ಬ ಇರುವ ಕಾರಣ, ಅದೇ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಈ ಬಾರಿ ಮನೆಯ ಬಳಿ ಯಾರೂ ಬರ್ತ್ ಡೇ ಆಚರಿಸೋದು ಬೇಡ. ವರ್ಷ ಕಳೆದ ಹಾಗೇ ಮನೆಯ ಬಳಿ ಸೇರುವ ಅಭಿಮಾನಿಗಳು ಜಾಸ್ತಿಯಾಗುತ್ತಿದ್ದಾರೆ. ನನ್ನ ಅಕ್ಕ-ಪಕ್ಕದ ಮನೆಯವರಿಗೆ ಸಮಸ್ಯೆಯಾಗುತ್ತದೆ. ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಈ ಬಾರಿಯ ಬರ್ತ್ ಡೇ ಪ್ಲ್ಯಾನ್‌ ಮಾಡಲಾಗಿದೆ. ಅಂದು ಬೆಳಗ್ಗೆ 10 ರಿಂದ 12 ರವರೆಗೆ ಸಮಯ ಇದೆ. ಆದರೆ ಎಲ್ಲರನ್ನೂ ಮೀಟ್ ಮಾಡುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.

    ಕಳೆದ ವರ್ಷ ತುಂಬಾ ಅನಾನುಕೂಲ ಉಂಟಾಗಿ ಬ್ಯಾರಿಕೇಡ್ ಒಡೆದು ಹೋಯಿತು. ಈ ಬಾರಿ ಅದೇ ರೀತಿ ಆಗೋದು ಬೇಡ. ಬರ್ತ್ ಡೇ ದಿನ ಸಿನಿಮಾ ಅನೌನ್ಸ್ ಮಾಡ್ತೀನಿ. ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಸೆ.2ಕ್ಕೆ ಮ್ಯಾಕ್ಸ್ ಅಂತ ಸುದ್ದಿ ಹರಿದಾಡ್ತಿತ್ತು ಅವತ್ತೇ ಬರುತ್ತಾ? ಬರಲ್ವಾ ? ಅನ್ನೋದು ಹೇಳಕ್ಕೂ ಸಾಧ್ಯ ಇಲ್ಲ. ಸದ್ಯದಲ್ಲೇ ಈ ವಿಷಯದ ಬಗ್ಗೆ ಸ್ಷಷ್ಟನೆ ನೀಡುತ್ತೇವೆ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳು ಸೆ.2 ರಂದು ಸುದೀಪ್ ಅವರ ಸಿನಿಮಾಗೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ಹೊರಬರಲಿದೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್

  • ಕಿಚ್ಚ ಸುದೀಪ್ ಗೌರವ ಡಾಕ್ಟರೇಟ್ ನಿರಾಕರಣೆ: ಏನಂದ್ರು ನಟ?

    ಕಿಚ್ಚ ಸುದೀಪ್ ಗೌರವ ಡಾಕ್ಟರೇಟ್ ನಿರಾಕರಣೆ: ಏನಂದ್ರು ನಟ?

    ನ್ನಡದ ಅನೇಕ ತಾರೆಯರಿಗೆ ನಾನಾ ವಿಶ್ವ ವಿದ್ಯಾಲಯಗಳು (University)  ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಬಹುತೇಕರು ಗೌರವ ಪೂರ್ವಕವಾಗಿಯೇ ಆ ಗೌರವವನ್ನು ಸ್ವೀಕರಿಸಿದ್ದಾರೆ. ಈ ಸಲ ತುಮಕೂರು (Tumkur) ವಿಶ್ವ ವಿದ್ಯಾಲಯವು ಕಿಚ್ಚ ಸುದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಈ ವಿಷಯವನ್ನು ಸುದೀಪ್ ಅವರಿಗೂ ತಿಳಿಸಲಾಗಿತ್ತು. ಆದರೆ, ಸುದೀಪ್ (Sudeep) ಆ ಗೌರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

    ವಿಶ್ವ ವಿದ್ಯಾಲಯವು ಸುದೀಪ್ ಅವರಿಗೆ ಕರೆ ಮಾಡಿ ಗೌರವ ಡಾಕ್ಟರೇಟ್ (Doctorate) ಆಯ್ಕೆಯ ವಿಷಯ ತಿಳಿಸಿದಾಗ, ‘ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ನಯವಾಗಿಯೇ ಗೌರವನ್ನು ನಿರಾಕರಿಸಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಪರಂಪರೆಯನ್ನು ಮುಂದುವರೆಸಿದ್ದಾರೆ.

    ಈ ಹಿಂದೆ ಖ್ಯಾತ ಕ್ರಿಕೆಟ್ ಗೆ ರಾಹುಲ್ ದ್ರಾವಿಡ್ ಅವರಿಗೂ ಗೌರವ ಡಾಕ್ಟರೇಟ್ ನೀಡಲು ವಿವಿ ನಿರ್ಧಾರ  ಮಾಡಿತ್ತು. ಸುದೀಪ್ ಹೇಳಿದ ಮಾತುಗಳನ್ನೂ ಇವರು ಹೇಳಿ ಗೌರವ ಡಾಕ್ಟರೇಟ್ ನಿರಾಕರಿಸಿದ್ದರು. ಬೇಕಾದರೆ ಓದಿ ಡಾಕ್ಟರೇಟ್ ಪದವಿ ಪಡೆಯುವ ಮಾತುಗಳನ್ನೂ ಅವರು ಆಡಿದ್ದರು.

    ಸುದೀಪ್ ಈ ನಡೆ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಅನೇಕರು ರಾಹುಲ್ ದ್ರಾವಿಡ್ ಅವರಿಗೆ ಕಿಚ್ಚನ ಹೋಲಿಕೆ ಮಾಡಿ ಪೋಸ್ಟ್ ಮಾಡ್ತಿದ್ದಾರೆ. ಈ ನಿರ್ಧಾರವನ್ನು ಎಲ್ಲವೂ ಗೌರವಿಸುತ್ತೇವೆ ಎಂದಿದ್ದಾರೆ.

  • 89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್

    89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್

    ಧಾರವಾಡ: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಧಾರವಾಡದ (Dharwad) ಹಿರಿಯ ಅಜ್ಜರೊಬ್ಬರು ಸಾಬೀತು ಪಡಿಸಿದ್ದಾರೆ.

    ಜಯನಗರದಲ್ಲಿರುವ ಮಾರ್ಕಂಡೇಯ ದೊಡಮನಿ (Dodamani Markandeya) ಎಂಬವರು ತಮ್ಮ 89ನೇ ವಯಸ್ಸಿನಲ್ಲಿ ಪಿಹೆಚ್‌ಡಿ (PHD) ಮುಗಿಸಿ ಇದೀಗ ಡಾಕ್ಟರೇಟ್ (Doctorate) ಪದವಿ ಪಡೆದುಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದಲ್ಲಿ ನೂರಾರು ಜನ ಶಿವಶರಣರ ಬಗ್ಗೆ ಅಧ್ಯಯನ ಮಾಡಿ ಪಿಎಚ್‌ಡಿ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು

    ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಇಳಿ ವಯಸ್ಸಿನ ವೃದ್ಧರೊಬ್ಬರು ಪಿಎಚ್‌ಡಿ ಪದವಿಯನ್ನ ಪಡೆದುಕೊಂಡಿರುವುದು. ಡೋಹರ ಕಕ್ಕಯ್ಯನವರು ಬರೆದ ಕೇವಲ 6 ವಚನಗಳನ್ನು ಮುಂದಿಟ್ಟುಕೊಂಡು 150 ಪುಟಗಳುಳ್ಳ “ಶಿವಶರಹಣ ಡೋಹರ ಕಕ್ಕಯ್ಯ” ಒಂದು ಅಧ್ಯಯನ ಎಂಬ ಮಹಾ ಪ್ರಬಂಧವನ್ನು ಅವರು ಬರೆದಿದ್ದು, ಸತತ 18 ವರ್ಷಗಳಿಂದ ಕಕ್ಕಯ್ಯನವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧೆ

    ಈ ಅವಧಿಯಲ್ಲಿ ಅವರ ಗೈಡ್ ನಿಧನರಾದ ಹಿನ್ನೆಲೆ ಪ್ರಬಂಧ ಸಿದ್ಧಪಡಿಸಲು ವಿಳಂಬವಾಯಿತು. ಆ ನಂತರ ಡಾ.ನಿಂಗಪ್ಪ ಅವರು ಮಾರ್ಗದರ್ಶನ ಮಾಡಿದ್ದಾರೆ. ಕಾದ್ರೊಳ್ಳಿ, ಕಕ್ಕೇರಿ ಸೇರಿದಂತೆ ಇತರ ಕಡೆಗಳಲ್ಲಿ ಸಂಚರಿಸಿ ಕಕ್ಕಯ್ಯನವರ ಬಗ್ಗೆ ಅಧ್ಯಯನ ಮಾಡಿ ಮಹಾಪ್ರಬಂಧವನ್ನು ಅವರು ಸಿದ್ಧಪಡಿಸಿದ್ದಾರೆ. ಇದನ್ನೂ ಓದಿ: ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ

    ಡೋಹರ ಸಮುದಾಯದ ಚರಿತ್ರೆ, ಬಸವಣ್ಣನವರ ವಚನಗಳಲ್ಲಿ ಕಕ್ಕಯ್ಯನವರನ್ನು ಸ್ಮರಿಸಿಕೊಂಡಿರುವುದು, ಧಾರವಾಡ ಸಮೀಪದಲ್ಲೇ ಕಕ್ಕಯ್ಯ ಪ್ರಾಣ ಬಿಟ್ಟಿರುವುದು, ಗುಜರಾತ್, ಕಾಶ್ಮೀರ ಮತ್ತು ತಮಿಳುನಾಡು ಮೂಲದಿಂದ ಕಲ್ಯಾಣಕ್ಕೆ ಬಂದ ಶಿವಶರಣರ ನಂಟು ಇವೆಲ್ಲದರ ಮೇಲೆ ಮಾರ್ಕಂಡೇಯ ಸಮಗ್ರ ಬೆಳಕು ಚೆಲ್ಲಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

  • ಮಾಜಿ ಸಿಎಂ ಬಿಎಸ್‌ವೈಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

    ಮಾಜಿ ಸಿಎಂ ಬಿಎಸ್‌ವೈಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

    ಶಿವಮೊಗ್ಗ: ರೈತ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿ (Doctorate) ಸ್ವೀಕರಿಸಿದ್ದಾರೆ.

    ಡಾಕ್ಟರೇಟ್ ಪದವಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದು ಬದುಕಿನ ಅತ್ಯಂತ ಸುದೈವ ಸಂಗತಿ. ನಾನು ಸಹ ಕೃಷಿ ಕುಟುಂಬದಿಂದ ಜನಿಸಿದವನು. ಹೀಗಾಗಿ ರೈತನ ಕಷ್ಟ ಕಾರ್ಪಣ್ಯವನ್ನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿಯೇ ಕೃಷಿ ಬಜೆಟ್ ಮಂಡನೆ ಮಾಡಿದ್ದೆ ಎಂದರು. ಇದನ್ನೂ ಓದಿ: Nandini Milk: ನಂದಿನಿ ಹಾಲಿನ ದರ 3 ರೂ. ಹೆಚ್ಚಳ

    ರಾಜ್ಯದಲ್ಲಿ ರೈತರ ಪರವಾಗಿ ನಡೆಸಿದ ಹಲವು ಹೋರಾಟಗಳನ್ನು, ಆ ಹೋರಾಟಗಳಲ್ಲಿ ಯಶಸ್ಸು ಕಂಡಿದ್ದನ್ನು ಸ್ಮರಿಸಿದರು. ಕೃಷಿ ಕುಟುಂಬ ನೆಮ್ಮದಿಯಿಂದ ಇರಬೇಕು. ರೈತರ ಕಲ್ಯಾಣವಾಗಬೇಕು. ಇದಕ್ಕಾಗಿ ಸದಾ ಹೋರಾಟ ನಡೆಸುತ್ತೇನೆ ಎಂದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಶಾಸಕತ್ವ ಅಸಿಂಧು ಕೋರಿ ಅರ್ಜಿ – ಜು.28 ಕ್ಕೆ ಹೈಕೋರ್ಟ್‌ನಿಂದ ವಿಚಾರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಜಿ ಸಿಎಂ ಬಿಎಸ್‌ವೈಗೆ ಗೌರವ ಡಾಕ್ಟರೇಟ್

    ಮಾಜಿ ಸಿಎಂ ಬಿಎಸ್‌ವೈಗೆ ಗೌರವ ಡಾಕ್ಟರೇಟ್

    ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಇನ್ನು ಮುಂದೆ ಡಾ. ಯಡಿಯೂರಪ್ಪ ಆಗಲಿದ್ದಾರೆ.

    ಹೌದು ಶಿವಮೊಗ್ಗದ (Shivamogga) ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ವತಿಯಿಂದ ಯಡಿಯೂರಪ್ಪ ಅವರು ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?

    ಶುಕ್ರವಾರ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 9ನೇ ವರ್ಷದ ಘಟಿಕೋತ್ಸವ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ರೈತ ನಾಯಕ, ಮೊದಲ ಬಾರಿಗೆ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಲಾಸ್ – ಜು.27ಕ್ಕೆ ಆಟೋ, ಕ್ಯಾಬ್, ಖಾಸಗಿ ಬಸ್ ಸಂಚಾರ ಬಂದ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯ ನಟ ದ್ವಾರಕೀಶ್‌ಗೆ ಗೌರವ ಡಾಕ್ಟರೇಟ್

    ಹಿರಿಯ ನಟ ದ್ವಾರಕೀಶ್‌ಗೆ ಗೌರವ ಡಾಕ್ಟರೇಟ್

    ಸ್ಯಾಂಡಲ್‌ವುಡ್‌ನ(Sandalwood) ಸಕಲಕಲಾವಲ್ಲಭ ಹಿರಿಯ ನಟ ದ್ವಾರಕೀಶ್ ಅವರು ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ನಟ ದ್ವಾರಕೀಶ್ ಅವರ ಕಲಾಸೇವೆ ಗುರುತಿಸಿ, ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ (Doctorate) ಘೋಷಣೆ ಮಾಡಿದ್ದಾರೆ.

    ನಟ, ನಿರ್ದೇಶಕ, ನಿರ್ಮಾಪಕ, ಹೀಗೆ ಕಲಾಸೇವೆ ಸಲ್ಲಿಸಿರುವ ಹಿರಿಯ ನಟ ದ್ವಾರಕೀಶ್‌ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟನೆ, 40ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ಪ್ರತಿಭಾನ್ವಿತ ನಟ ದ್ವಾರಕೀಶ್‌ಗೆ ಬೆಂಗಳೂರು ವಿವಿ 57ನೇ ಘಟಿಕೋತ್ಸವದಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ಚಲನಚಿತ್ರ ವಿಭಾಗದಲ್ಲಿ ದ್ವಾರಕೀಶ್, ಕಾನೂನು ಅಟಾರ್ನಿ ಹಾಗೂ ನ್ಯಾಯ ಸಲಹೆಗಾರರು ವಿಭಾಗ ಅಮರನಾಥ ಗೌಡ, ವರ್ಣ ಚಿತ್ರಕಾರರು ವಿಭಾಗ ಡಾ.ಟಿ. ಅನಿಲ್ ಕುಮಾರ್ ಸೇರಿದಂತೆ ಗೌರವ ಡಾಕ್ಟರೇಟ್ ಅನ್ನು ಡಿ.5ರಂದು ಜ್ಞಾನ ಭಾರತಿ ಆಡಿಟೋರಿಯಂನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.

    Live Tv
    [brid partner=56869869 player=32851 video=960834 autoplay=true]

  • ನಟ ರಮೇಶ್ ಅರವಿಂದ್‌ಗೆ ಗೌರವ ಡಾಕ್ಟರೇಟ್

    ನಟ ರಮೇಶ್ ಅರವಿಂದ್‌ಗೆ ಗೌರವ ಡಾಕ್ಟರೇಟ್

    ನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಮೇಶ್ (Ramesh Aravind)  ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮದೇ ರೀತಿಯಲ್ಲಿ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಇದೀಗ ಈ ಮಹಾನ್ ನಟನನ್ನ ಗುರುತಿಸಿ ರಾಣಿ ಚೆನ್ನಮ್ಮ ವಿವಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ.

    ನಟ, ನಿರ್ದೇಶಕ, ಬರಹಗಾರನಾಗಿ ಸೈ ಎನಿಸಿಕೊಂಡಿರುವ ರಮೇಶ್ ಅರವಿಂದ್ ಅವರು ಚಿತ್ರರಂಗಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಸುವರ್ಣಸೌಧ ಸಭಾಭವನದಲ್ಲಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ 10ನೇ ಘಟಿಕೋತ್ಸವ ಇಂದು (ಸೆ.14) ನಡೆದಿದೆ. ಸಮಾಜ ಸೇವಕರಾದ ವ್ಹಿ.ರವಿಚಂದನ್ ವೆಂಕಟರಾಮನ್ ಅವರಿಗೆ `ಡಾಕ್ಟರ್ ಆಫ್ ಸೈನ್ಸ್’, ಚಿತ್ರರಂಗ ಮತ್ತು ಧಾರ್ಮಿಕ ವಲಯದ ಸೇವೆಯನ್ನ ಗುರುತಿಸಿ ನಟ ರಮೇಶ್ ಅರವಿಂದ್ (Ramesh Aravind) ಮತ್ತು ಅಕ್ಕ ಅನ್ನಪೂರ್ಣ (Akka Annapoorna) ಅವರಿಗೆ `ಡಾಕ್ಟರ್ ಆಫ್ ಲೆಟರ್ಸ್’ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಕನ್ನಡದ ಖ್ಯಾತ ಕಿರುತೆರೆ ನಟ ಮಂಡ್ಯ ರವಿ ಸ್ಥಿತಿ ಚಿಂತಾಜನಕ: ಬೆಂಗಳೂರಿನಿಂದ ಮಂಡ್ಯ ಆಸ್ಪತ್ರೆಗೆ ಶಿಫ್ಟ್

    ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ವೇಳೆ ಡಾಕ್ಟರೇಟ್ ಅನ್ನು ಪ್ರಧಾನ ಮಾಡಿದ್ದಾರೆ. ರಾಣಿ ಚೆನ್ನಮ್ಮ ವಿವಿ. ಕುಲಪತಿ ಪ್ರೋ. ರಾಮಚಂದ್ರೆಗೌಡ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ನೆಚ್ಚಿನ ನಟನಿಗೆ ಅಭಿಮಾನಿಗಳು, ಸಿನಿಮಾರಂಗದ ಸ್ನೇಹಿತರು ಶುಭಹಾರೈಸಿದ್ದಾರೆ.

    ಗೌರವ ಡಾಕ್ಟರೇಟ್ ಬಳಿಕ ರಮೇಶ್ ಅರವಿಂದ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನನ್ನ ಈ ಸಂಭ್ರಮದ ಕ್ಷಣದಲ್ಲಿ ತಂದೆ ಇರಬೇಕಿತ್ತು. ನನಗೆ ಗೌರವ ಡಾಕ್ಟರೇಟ್ ಸಿಗ್ತಿದ್ದಂತೆ ಸಂಬಂಧಿಕರಿಗೆ ವಾಟ್ಸಪ್ ಮೆಸೇಜ್ ಮಾಡಿದೆ. ಅಭಿನಂದನೆಗಳು, ನಿಮ್ಮ ತಂದೆ ಇರಬೇಕಿತ್ತು ಎಂದು ಆ ಕಡೆಯಿಂದ ಪ್ರತಿಕ್ರಿಯೆ ಬಂದಿದೆ ಎಂದು ತಂದೆ ಅವರನ್ನ ನೆನೆದು ನಟ ರಮೇಶ್ ಭಾವುಕರಾಗಿದ್ದಾರೆ. 30 ವರ್ಷ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಟಿಕೆಟ್ ತೆಗೆದುಕೊಂಡು ನನ್ನ ಸಿನಿಮಾ ನೋಡಿದ ಪ್ರತಿ ಪ್ರೇಕ್ಷಕನಿಗೆ ನಾನು ಋಣಿ ಆಗಿದ್ದೇನೆ. ಈ ವೇಳೆ ನನ್ನ ಜೊತೆಗೆ ನಟಿಸಿರುವ ಹಲವು ಕಲಾವಿದರನ್ನು ನಾನು ಸ್ಮರಿಸುವೆ. ಎಲ್ಲರ ಸಹಾಕರವೇ ನನ್ನ ಈ ಸಾಧನೆಗೆ ಕಾರಣ ಎಂದು ರಮೇಶ್ ಅರವಿಂದ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

    ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

    ಕ್ರೇಜಿಸ್ಟಾರ್ ರವಿಚಂದ್ರನ್ ಕಲಾವಿದನಾಗಿ ಸಾಕಷ್ಟು ವರ್ಷಗಳಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಹಲವಾರು ಪಾತ್ರಗಳಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. ನಟ ರವಿಚಂದ್ರನ್ ಅವರ ಸಾಧನೆಯನ್ನು ಗುರುತಿಸಿ ಇಂದು ಬೆಂಗಳೂರು ವಿಶ್ವವಿದ್ಯಾನಿಲಯದ ಚೊಚ್ಚಲ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.

    ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಟ ರವಿಚಂದ್ರನ್ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು. ಇನ್ನು 85ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಟ ರವಿಚಂದ್ರನ್ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಇದನ್ನು ಓದಿ:ಕೆಜಿಎಫ್-2 ರಿಲೀಸ್ ಫಿವರ್: ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಬುಕ್ ಮಾಡಿದ ಯಶ್ ಮಹಿಳಾ ಫ್ಯಾನ್ಸ್

    ಇನ್ನು ಕಾರ್ಯಕ್ರಮದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿ. ರವಿಚಂದ್ರನ್, ಸಮಾಜ ಸೇವೆಗಾಗಿ ಎಂ. ಆರ್ ಜೈ ಶಂಕರ್, ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸತ್ಯನಾರಾಯಣ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಇನ್ನು ಈ ವೇಳೆ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಪತ್ನಿ ಸುಮತಿ, ಮಕ್ಕಳಾದ ವಿಕ್ರಮ್, ಮನೋರಂಜನ್, ಗೀತಾಂಜಲಿ, ಅಳಿಯ ಅಜಯ್ ಭಾಗಿಯಾಗಿದ್ದರು. ಈ ಸುದ್ದಿ ಕೇಳಿ ಕ್ರೇಜಿಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ : ಫೋಟೋ ವೈರಲ್

    ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ : ಫೋಟೋ ವೈರಲ್

    ಇಂದು ಮೈಸೂರಿನ ವಿಶ್ವವಿದ್ಯಾಲಯದ 102ನೇ ವಾರ್ಷಿಕೋತ್ಸವ ಘಟಿಕೋತ್ಸವದಲ್ಲಿ ನಟ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇದೇ ವಿಶ್ವ ವಿದ್ಯಾಲಯವು 1976ರಲ್ಲಿ ಡಾ.ರಾಜ್ ಕುಮಾರ್ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು. ಈ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಗೌರವ ಡಾಕ್ಟರೇಟ್ ಪಡೆದ ಫೋಟೋ ಮತ್ತು ಇಂದು ಪುನೀತ್ ಅವರ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೌರವ ಡಾಕ್ಟರೇಟ್ ಪಡೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಅಂದಿನ ಫೋಟೋದಲ್ಲಿ ಡಾ.ರಾಜ್ ಕುಮಾರ್ ಜತೆ ಪಾರ್ವತಮ್ಮ ರಾಜ್ ಕುಮಾರ್ ಇದ್ದಾರೆ. ಇವತ್ತು  ರಾಜ್ಯಪಾಲರಿಂದ ಈ ಗೌರವನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಇಂದು ಸ್ವೀಕರಿಸಿದರು. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್ ನಲ್ಲಿ ನಡೆದ ಗೌರವ ಡಾಕ್ಟರೇಟ್ ಪ್ರಧಾನ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಟುಂಬ ವರ್ಗದವರು ಹಾಜರಿದ್ದರು. ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ, ನಟ ವಿನಯ್ ರಾಜ್ ಕುಮಾರ್, ರಾಜ್ ಕುಮಾರ್ ಮಗಳು ಲಕ್ಷ್ಮಿ ಗೋವಿಂದು ಹಾಗೂ ಮೊಮ್ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    1976 ರಲ್ಲಿ ಡಾ. ರಾಜಕುಮಾರ್ ಗೆ ಮೈಸೂರು ವಿವಿಯಿಂದ ಡಾಕ್ಟರೇಟ್ ಗೌರವ ನೀಡಲಾಗಿತ್ತು. 2022 ರಲ್ಲಿ ಪುನೀತ್ ರಾಜಕುಮಾರ್ ಗೆ ಮರಣೋತ್ತರ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಪುನೀತ್ ಅವರ ಸಮಾಜಮುಖಿ ಕೆಲಸಗಳು ಮತ್ತು ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಯನ್ನು ಆಧರಿಸಿ, ಮೈಸೂರು ವಿವಿ ಈ ಗೌರವನ್ನು ನೀಡಿದೆ. ಈ ಸಂದರ್ಭದಲ್ಲಿ ಪುನೀತ್ ಪತ್ನಿ ಅಶ್ವಿನಿ ಭಾವುಕರಾಗಿಯೇ ಪುನೀತ್ ಪರವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು.

  • ಪಾರ್ವತಮ್ಮ ರಾಜ್ ಕುಮಾರ್-ಪುನೀತ್ ಹೆಸರಿನಲ್ಲಿ ಮೈಸೂರು ವಿವಿಯಲ್ಲಿ 2 ಚಿನ್ನದ ಪದಕ

    ಪಾರ್ವತಮ್ಮ ರಾಜ್ ಕುಮಾರ್-ಪುನೀತ್ ಹೆಸರಿನಲ್ಲಿ ಮೈಸೂರು ವಿವಿಯಲ್ಲಿ 2 ಚಿನ್ನದ ಪದಕ

    ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಪ್ರತಿ ವರ್ಷವೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಿದ ಪ್ರತಿಭಾವಂತರಿಗೆ 2 ಚಿನ್ನದ ಪದಕವನ್ನು ನೀಡುವುದಾಗಿ ರಾಘವೇಂದ್ರ ರಾಜ್ ಕುಮಾರ್ ಘೋಷಿಸಿದ್ದಾರೆ. ಇಂದು ಮೈಸೂರಿನ ವಿವಿಯಲ್ಲಿ ನಡೆಯುತ್ತಿರುವ 102ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ‘ಪುನೀತ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಹೆಸರಿನಲ್ಲಿ ಎರಡು ಚಿನ್ನದ ಪದಕಗಳನ್ನು ನೀಡುವುದಾಗಿ ತಿಳಿಸಿದರು. ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲಿ, ಬ್ಯೂಸಿನೇಸ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಬಂಗಾರದ ಪದಕ ಮತ್ತು ಪುನೀತ್ ರಾಜಕುಮಾರ್  ಹೆಸರಿನಲ್ಲಿ ಲಲಿತಾ ಕಲೆಗಳ ವಿಷಯದಲ್ಲಿ ಬಂಗಾರದ ಪದಕ ನೀಡುವುದಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಘೋಷಣೆ ಆಯಿತು.  ಮುಂದಿನ ವರ್ಷದಿಂದ ಪದಕ ವಿತರಣೆ ಮಾಡಲಾಗುವುದು ಎಂದಿದೆ ಡಾ.ರಾಜ್ ಕುಟುಂಬ.

    ಘಟಿಕೋತ್ಸವದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಜೀವನ ಒಂದು ಚಕ್ರ ಇದ್ದಂತೆ. ನಮ್ಮ ತಂದೆಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿದ್ರು. ಇಂದು ನನ್ನ ತಮ್ಮನಿಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಸಿಕ್ಕಿದೆ. ನನಗೆ ಇದು ವೇದಿಕೆ ರೀತಿ ಕಾಣುಸ್ತಿಲ್ಲ. ಸರಸ್ವತಿಯ ಮಂದಿರ ತರ ಕಾಣ್ತಿದೆ. ನಿಮ್ಮ ಕೆಲಸವನ್ನ ಶ್ರದ್ದೆಯಿಂದ ಮಾಡಿದ್ರೆ ಪ್ರಶಸ್ತಿಗಳು ಹುಡುಕಿ ಬರುತ್ತವೇ ಅಂತ ಪುನೀತ್ ಯಾವಾಗಲೂ ಹೇಳ್ತಿದ್ದ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ನನ್ನ ತಮ್ಮನಿಂದ ನಾನು ಸ್ವರ್ಗ ನೋಡುತ್ತಿದ್ದೇನೆ. ಈ ಗೌರವ ಡಾಕ್ಟರೇಟ್‌ ನಮ್ಮ ಕುಟುಂಬದ ಜವಾಬ್ದಾರಿಯನ್ನ ಹೆಚ್ಚಿಸಿದೆ. ಅಶ್ವಿನಿ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಮಾಜಿಕ ಸೇವೆ ಮುಂದುವರೆಸುತ್ತೇವೆ ಎಂದು ನುಡಿದರು. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಮಂಗಳವಾರ ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಘಟಿಕೋತ್ಸವ ಸಮಾರಂಭ ಹಾಗೂ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮೂವರು ಸಾಧಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಮೊದಲಿಗೆ ಹಿರಿಯ ವಿಜ್ಞಾನಿ ಹಾಗೂ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ವಿಶ್ರಾಂತ ಮಹಾ ನಿರ್ದೇಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇದನ್ನೂ ಓದಿ : ಪುನೀತ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

    ನಂತರ ನಟ ಪುನೀತ್ ರಾಜ್‍ಕುಮಾರ್ ಅವರ ಹೆಸರು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಕೇಳಿ ಬಂತು. ಎಲ್ ಇಡಿ ಸ್ಕ್ರೀನ್ ನಲ್ಲಿ ಪುನೀತ್ ಬಾಲ್ಯ, ಅವರು ಅಭಿನಯಿಸಿದ ಹಲವು ಚಿತ್ರಗಳ ತುಣುಕು ಪ್ರದರ್ಶಿಸಲಾಯಿತು. ಪುನೀತ್ ರಾಜ್‍ ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ವೇಳೆ ಅವರು ಕೆಲಕಾಲ ಭಾವುಕಗೊಂಡರು. ಈ ಹಿಂದೆ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು 46 ವರ್ಷಗಳ ಹಿಂದೆ ಮೈಸೂರು ವಿವಿ ನೀಡಿತ್ತು ಎಂಬುದು ಸ್ಮರಣೀಯ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್ ನಲ್ಲಿ ನಡೆಯುತ್ತಿರುವ ಗೌರವ ಡಾಕ್ಟರೇಟ್ ಪ್ರಧಾನ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಟುಂಬ ವರ್ಗದವರು ಹಾಜರಿದ್ದರು. ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ, ನಟ ವಿನಯ್ ರಾಜ್ ಕುಮಾರ್, ರಾಜ್ ಕುಮಾರ್ ಮಗಳು ಲಕ್ಷ್ಮಿ ಗೋವಿಂದು ಹಾಗೂ ಮೊಮ್ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.