Tag: doctor

  • ತಾನೇ ಇರಿದುಕೊಂಡು ಆಸ್ಪತ್ರೆ ದಾಖಲಾದ ವ್ಯಕ್ತಿ ವೈದ್ಯರಿಗೂ ಚಾಕು ಇರಿದ

    ತಾನೇ ಇರಿದುಕೊಂಡು ಆಸ್ಪತ್ರೆ ದಾಖಲಾದ ವ್ಯಕ್ತಿ ವೈದ್ಯರಿಗೂ ಚಾಕು ಇರಿದ

    ಮುಂಬೈ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ (Government Hospital) ದಾಖಲಾಗಿದ್ದ ರೋಗಿಯೊಬ್ಬ (Patient) ಚಿಕಿತ್ಸೆ ನೀಡಲು ಬಂದ ವೈದ್ಯರಿಗೆ (Doctor) ಚಾಕುವಿನಿಂದ ಇರಿದಿರುವ (Stabbing) ಘಟನೆ ಮಹಾರಾಷ್ಟ್ರದ (Maharashtra) ಯವತ್ಮಾಲ್ ಜಿಲ್ಲೆಯ ಶ್ರೀ ವಸಂತರಾವ್ ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಹಲ್ಲೆ ನಡೆಸಿದ ವ್ಯಕ್ತಿ ಬುಧವಾರ ತನಗೆ ತಾನೇ ಚಾಕುವಿನಿಂದ ಇರಿದು ಆಸ್ಪತ್ರೆ ದಾಖಲಾಗಿದ್ದ. ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ದಾಖಲಾಗಿದ್ದ ವ್ಯಕ್ತಿ ಗುರುವಾರ ರಾತ್ರಿ ತನ್ನನ್ನು ಪರೀಕ್ಷಿಸಲು ಬಂದಿದ್ದ ವೈದ್ಯನಿಗೆ ಚಾಕುವಿನಿಂದ ಇರಿದಿದ್ದಾನೆ. ಅವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವೈದ್ಯರ ಮೇಲೂ ರೋಗಿ ಹಲ್ಲೆ ನಡೆಸಿದ್ದಾನೆ.

    ವರದಿಗಳ ಪ್ರಕಾರ, ಹಣ್ಣುಗಳನ್ನು ಕತ್ತರಿಸಲು ಪಕ್ಕದಲ್ಲಿಟ್ಟಿದ್ದ ಚಾಕುವಿನಿಂದ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಆತನನ್ನು ಪರೀಕ್ಷಿಸಲು ವೈದ್ಯರೊಬ್ಬರು ಬಂದಿದ್ದು, ಈ ವೇಳೆ ಹಣ್ಣು ತಿನ್ನಲು ಬಯಸುತ್ತೀರಾ? ಎಂದು ಕೇಳಿದ್ದಾರೆ. ಬಳಿಕ ತನಗೆ ತಾನೇ ಇರಿದುಕೊಂಡಿರುವ ಗಾಯವನ್ನು ಪರೀಕ್ಷಿಸಲು ವೈದ್ಯ ಮುಂದಾದಾಗ ಆತ ನಿರಾಕರಿಸಿದ್ದಾನೆ. ಬಳಿಕ ಆತ ಚಾಕುವಿನಿಂದ ವೈದ್ಯನಿಗೆ ಇರಿದಿದ್ದಾನೆ. ಇದನ್ನೂ ಓದಿ: ಚಾಮುಂಡಿಬೆಟ್ಟದ ಸಮೀಪ 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್‍ನಲ್ಲಿ ಬೆಂಕಿ!

    ಇದನ್ನು ಗಮನಿಸಿದ ಮತ್ತೊಬ್ಬ ವೈದ್ಯ ಅವರನ್ನು ರಕ್ಷಿಸಲು ಬಂದಾಗ ಅವರ ಮೇಲೂ ವ್ಯಕ್ತಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದಿದ್ದಾರೆ.

    ಹಲ್ಲೆ ನಡೆಸಿರುವ ವ್ಯಕ್ತಿ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಸದ್ಯ ಹಲ್ಲೆಗೊಳಗಾದ ವೈದ್ಯರಿಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ – 32 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ

    ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ

    ನವದೆಹಲಿ: ಓದಿದ್ದು 8ನೇ ತರಗತಿ, ಆದರೂ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು 12ಕ್ಕೂ ಹೆಚ್ಚು ಮಹಿಳೆಯರಿಗೆ (Women) ಮೋಸ ಮಾಡಿ ಲಕ್ಷಾಂತರ ಹಣ (Money) ಕೊಳ್ಳೆ ಹೊಡೆದ ಘಟನೆ ದೆಹಲಿಯಲ್ಲಿ (New Delhi) ನಡೆದಿದೆ.

    ವಿಕಾಸ್ ಗೌತಮ್ ಬಂಧಿತ ಆರೋಪಿ. ಈತ ವಿಕಾಸ್ ಯಾದವ್ ಎಂಬ ಹೆಸರಿನಲ್ಲಿ ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್‍ನಲ್ಲಿ ನಕಲಿ ಖಾತೆಯನ್ನು ರಚಿಸಿದ್ದ. ಅಷ್ಟೇ ಅಲ್ಲದೇ ಖಾತೆಯನ್ನು ಅಧಿಕೃತ ಎಂದು ತೊರಿಸಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದ. ತಾನು ಸರ್ಕಾರಿ ಅಧಿಕಾರಿ ಎಂದು ಹೇಳಲು ಸರ್ಕಾರಿ ಕಾರಿನ ಮುಂದೆ ನಿಂತು ಪೋಸ್ ನೀಡಿದ್ದ.

    ಅದಾದ ಬಳಿಕ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯೆಯೊಬ್ಬಳು (Doctor) ಆನ್‍ಲೈನ್‍ನಲ್ಲಿ ಪರಿಚಯವಾಗಿದ್ದಳು. ಪ್ರತಿದಿನ ಅವಳೊಂದಿಗೆ ಚಾಟ್ ಮಾಡಿ, ಅವಳನ್ನು ತಾನು ಸರ್ಕಾರಿ ಅಧಿಕಾರಿ ಎಂದು ನಂಬಿಸಿದ್ದಾನೆ. ಅಷ್ಟೇ ಅಲ್ಲದೇ ಆತ ವೈದ್ಯೆಯಿಂದ 25,000 ರೂ.ಯನ್ನು ಪಡೆದಿದ್ದಾನೆ. ಆದರೆ ವೈದ್ಯೆಗೆ ಈತ ಮೋಸ ಮಾಡುತ್ತಿದ್ದಾನೆ ಎಂದು ಸಂಶಯ ಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯೆ ಪೊಲೀಸರ ಬಳಿ ಹೋಗಲು ನಿರ್ಧರಿಸಿದ್ದಾಳೆ. ಆದರೆ ವಿಕಾಸ್ ತನಗೆ ರಾಜಕೀಯ ನಾಯಕರ ಸಂಪರ್ಕವಿದೆ ಎಂದು ಬೆದರಿಕೆ ಹಾಕಿದ್ದಾನೆ.

    ಅದಕ್ಕೂ ಹೆದರದ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ವಿಕಾಸ್ ಇದೇ ರೀತಿ ಹೇಳಿಕೊಂಡು ಹತ್ತಾರು ಮಹಿಳೆಯರ ಬಳಿ ಲಕ್ಷಾಂತರ ರೂ. ವಂಚಿಸಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚುನಾವಣೆಗೆ ಸಮೀಪದಲ್ಲಿ ಡಿಕೆಶಿಗೆ ಶಾಕ್ – 5 ವರ್ಷದಲ್ಲಿ ಎಷ್ಟು ಆಸ್ತಿ ಹೆಚ್ಚಾಗಿತ್ತು? ತನಿಖೆ ಎಲ್ಲಿಯವರೆಗೆ ಬಂದಿದೆ?

    ಘಟನೆಗೆ ಸಂಬಂಧಿಸಿ ವಿಕಾಸ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ. 8ನೇ ತರಗತಿ ಉತ್ತೀರ್ಣರಾದ ನಂತರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೆಲವು ವೆಲ್ಡಿಂಗ್ ಕೋರ್ಸ್ ಮಾಡಿದ್ದ. ಅದಾದ ಬಳಿಕ ವಿಕಾಸ್ ನಾಗರಿಕ ಸೇವಾ ಪರೀಕ್ಷಾ ಕೋಚಿಂಗ್ ಕೇಂದ್ರಗಳ ಕೇಂದ್ರವಾದ ಉತ್ತರ ದೆಹಲಿಯ ಮುಖರ್ಜಿ ನಗರದ ರೆಸ್ಟೋರೆಂಟ್‍ನಲ್ಲಿಯೂ ಕೆಲಸ ಮಾಡುತ್ತಿದ್ದ. ಆ ಪ್ರದೇಶದಲ್ಲಿ ನಾಗರಿಕ ಸೇವೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ನೋಡಿ, ತಾನೂ ಐಪಿಎಸ್ ಅಧಿಕಾರಿಯಂತೆ ನಟಿಸುವ ಆಲೋಚನೆ ಬಂದಿದೆ ಎಂಬುದನ್ನು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್ – 3 ಲಷ್ಕರ್ ಉಗ್ರರ ಸಾವು

    Live Tv
    [brid partner=56869869 player=32851 video=960834 autoplay=true]

  • ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ

    ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ

    ಲಕ್ನೋ: ವೈದ್ಯನೊಬ್ಬ (Doctor) ತನ್ನ ಪತ್ನಿಯನ್ನು (Wife) ಕೊಂದು, ಆಕೆಯ ದೇಹವನ್ನು ಸೂಟ್‍ಕೇಸ್‍ನಲ್ಲಿ ತುಂಬಿಕೊಂಡು ಸುಮಾರು 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಉತ್ತರ ಪ್ರದೇಶದ ಲಖಿಂಪುರ ಖೇರಿಯ ವಂದನಾ ಅವಸ್ತಿ ಎಂದು ಗುರುತಿಸಲಾಗಿದೆ. ವಂದನಾ ಅವಸ್ತಿ ಪತಿ ಅಭಿಷೇಕ್ ಅವಸ್ತಿ ಆಯುರ್ವೇದದ ವೈದ್ಯನಾಗಿದ್ದ. ಈತ ತನ್ನ ತಂದೆ ಗೌರಿಶಂಕರ್ ಅವಸ್ತಿಯೊಂದಿಗೆ ಜಗಳ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ನಿ ವಂದನಾಗೆ ಭಾರದ ವಸ್ತುವಿನಿಂದ ತಲೆಗೆ ಹೊಡೆದಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ವಂದನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

    ಇದಾದ ಬಳಿಕ ವಂದನಾಳ ಮೃತದೇಹವನ್ನು ಅಭಿಷೇಕ್ ಸೂಟ್‍ಕೇಸ್‍ನಲ್ಲಿ ಲಾಕ್ ಮಾಡಿ, ತನ್ನ ಆಸ್ಪತ್ರೆಯ ಅಂಬುಲೆನ್ಸ್‌ನಲ್ಲಿ ಶವವನ್ನು ಸುಮಾರು 400 ಕಿ.ಮೀ ದೂರದ ಗಢ್ ಮುಕ್ತೇಶ್ವರಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾನೆ.

    ಅದಾದ ಬಳಿಕ ನವೆಂಬರ್ 27ರಂದು ಕೊತ್ವಾಲಿ ಸದರ್ ಪೊಲೀಸ್ ಠಾಣೆಗೆ ಹೋಗಿರುವ ಅಭಿಷೇಕ್ ತನ್ನ ಪತ್ನಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾನೆ. ಅಷ್ಟೇ ಅಲ್ಲದೇ ವಂದನಾ ಕೆಲವು ಬೆಲೆಬಾಳುವ ವಸ್ತುಗಳೊಂದಿಗೆ ಮನೆಯಿಂದ ಬಿಟ್ಟು ಹೋಗಿದ್ದಾಳೆ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು. ಇದನ್ನೂ ಓದಿ: ಕಸ್ಟಡಿಯಲ್ಲಿ ಆರೋಪಿ ಆತ್ಮಹತ್ಯೆ ಪ್ರಕರಣ – ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್‌ ದಾಖಲು

    ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ದಂಪತಿ ಮಧ್ಯೆ ವೈವಾಹಿಕ ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ. ಆರೋಪಿ ಅಭಿಷೇಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಭಿಷೇಕ್ ತನ್ನ ತಂದೆಯೊಂದಿಗೆ ಸೇರಿ ವಂದನಾಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಸಿಎಂ ಸ್ಟಾಲಿನ್ ಪುತ್ರ ತಮಿಳುನಾಡಿನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ರೀತಿಯಲ್ಲೇ ಮನೆಗೆ ನುಗ್ಗಿದ 50 ಗೂಂಡಾಗಳು- ವೈದ್ಯೆ ಕಿಡ್ನ್ಯಾಪ್

    ಸಿನಿಮಾ ರೀತಿಯಲ್ಲೇ ಮನೆಗೆ ನುಗ್ಗಿದ 50 ಗೂಂಡಾಗಳು- ವೈದ್ಯೆ ಕಿಡ್ನ್ಯಾಪ್

    ಹೈದರಾಬಾದ್: ಸಿನಿಮೀಯ ರೀತಿಯಲ್ಲೇ ಕನಿಷ್ಠ 50 ಗೂಂಡಾಗಳು ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ವೈದ್ಯೆಯನ್ನು (woman doctor) ಕಿಡ್ನ್ಯಾಪ್ (kidnap) ಮಾಡಿದ ಘಟನೆ ತೆಲಂಗಾಣದ (Telangana) ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

    ಕಾಣೆಯಾದ ವೈದ್ಯೆಯನ್ನು ವೈಶಾಲಿ (24) ಎಂದು ಗುರುತಿಸಲಾಗಿದೆ. ವೈದ್ಯೆ ವೈಶಾಲಿ ಮನೆಗೆ ನುಗ್ಗಿದ್ದ ಗೂಂಡಾಗಳು ಮನೆಯನ್ನು ಧ್ವಂಸಗೊಳಿಸಿದ್ದಾರೆ. ಅದಾದ ಬಳಿಕ ಮನೆಯಲ್ಲಿದ್ದ ಆಕೆಯ ತಂದೆ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಅದಾದ ನಂತರ ಬಲವಂತವಾಗಿ ವೈಶಾಲಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ವೈಶಾಲಿಯ ಒಪ್ಪಿಗೆಯಿಲ್ಲದೇ ಅವಳನ್ನು ಎಳೆದುಕೊಂಡು ಕಾರಿನಲ್ಲಿ ಕೂರಿಸಿದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದರು.

    ಘಟನೆಗೆ ಸಂಬಂಧಿಸಿ ರಾಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಬಂಧನಕ್ಕೆ ತಂಡಗಳನ್ನು ರಚಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಹುಡುಗಿಯರ ಮದುವೆ ವಯಸ್ಸು ಹೆಚ್ಚಿಸುವಂತೆ ಮಹಿಳಾ ಆಯೋಗ ಮನವಿ

    ರಾಚಕೊಂಡ ಹೆಚ್ಚುವರಿ ಸಿಪಿ ಸುಧೀರ್ ಬಾಬು ಮಾತನಾಡಿ, ಘಟನೆಯ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ತಂಡಗಳನ್ನು ವಿಂಗಡಿಸಲಾಗಿದೆ. ವೈಶಾಲಿಯನ್ನು ಹುಡುಕಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈಗಾಗಲೇ ಪೋಷಕರೊಂದಿಗೆ ಮಾತನಾಡಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಾಂಡೋಸ್ ಚಂಡಮಾರುತಕ್ಕೆ ಕೂಲ್ ಕೂಲ್- ನಾಲ್ಕೈದು ದಿನ ಬೆಂಗಳೂರಲ್ಲಿ ಭಾರೀ ಚಳಿ

    Live Tv
    [brid partner=56869869 player=32851 video=960834 autoplay=true]

  • ಕುಷ್ಟರೋಗ ನಿಯಂತ್ರಣಾಧಿಕಾರಿ ಸಾವಿನ ಸುತ್ತ ಅನುಮಾನ- ತಲೆಯಲ್ಲಿ ಹೊಕ್ಕಿದ ಗುಂಡಿನಿಂದ ಕೇಸ್‍ಗೆ ಟ್ವಿಸ್ಟ್

    ಕುಷ್ಟರೋಗ ನಿಯಂತ್ರಣಾಧಿಕಾರಿ ಸಾವಿನ ಸುತ್ತ ಅನುಮಾನ- ತಲೆಯಲ್ಲಿ ಹೊಕ್ಕಿದ ಗುಂಡಿನಿಂದ ಕೇಸ್‍ಗೆ ಟ್ವಿಸ್ಟ್

    ಚಿತ್ರದುರ್ಗ: ಆಕೆ ಹೆಸರಿಗೆ ತಕ್ಕಂತೆ ಸ್ಪರದ್ರೂಪಿ ಸುಂದರಿ. ಕೋಟೆನಾಡಿನ ಕುಷ್ಟರೋಗ ನಿಯಂತ್ರಣಾಧಿಕಾರಿ. ಮನೆಯಲ್ಲಿ ದಿಢೀರ್ ಅಂತ ಆಕಸ್ಮಿಕವಾಗಿ ಬಿದ್ದು ಸಾವಿಗೀಡಾಗಿದ್ದಾರೆಂಬ ಸುದ್ದಿ ಹರಡಿತ್ತು. ಆದರೆ ಪೋಸ್ಟ್ ಮಾರ್ಟಂ (Post Mortem) ವೇಳೆ ಆಕೆಯ ತಲೆಯಲ್ಲಿದ್ದ ರಿವಾಲ್ವರ್‌ನ ಗುಂಡು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ.

    ಮೃತಳನ್ನು ಡಾಕ್ಟರ್ ರೂಪ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆ (Chitradurga District Hospital) ಯಲ್ಲಿ ಕುಷ್ಟರೋಗ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ರು. ಇವರ ಪತಿ ರವಿ ಕೂಡ ಮೂಳೆರೋಗ ತಜ್ಞರಾಗಿದ್ದು, ವಿಪಿ ಬಡಾವಣೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ದಂಪತಿ ಸಹ ಕೋಟೆನಾಡಿನ ಮಂದಿಗೆ ಅಚ್ಚುಮೆಚ್ಚಿನವರಾಗಿದ್ದು, ಡಾ.ರೂಪ ಸದಾ ಹಸನ್ಮುಖಿಯಾಗಿ ಇರುತ್ತಿದ್ದರು. ಎಲ್ಲರೊಂದಿಗೆ ಸ್ನೇಹಜೀವಿಯಾಗಿದ್ರು.

    ಆದರೆ ಮೊನ್ನೆ ರೂಂನಲ್ಲಿನ ಶೆಲ್ಪ್ ಗೆ ತಲೆಬಡಿಸಿಕೊಂಡ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆಂದು ಅವರ ಪತಿ ಡಾಕ್ಟರ್ ರವಿ ಎಲ್ಲರಿಗೂ ತಿಳಿಸಿದ್ರು. ಇದನ್ನೇ ನಂಬಿದ್ದ ಪೊಲೀಸರು ರೂಪ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳಿಸಿದ್ರು. ಆಗ ರೂಪ ತಲೆಯಲ್ಲಿದ್ದ ರಿವಾಲ್ವರ್ ನ ಗುಂಡು ಕಂಡ ಪೊಲೀಸರು ಶಾಕ್ ಆಗಿದ್ದಾರೆ. ಹೀಗಾಗಿ ರೂಪ ಅವರ ಸಹೋದರ ಇದೊಂದು ಮರ್ಡರ್ ಅಂತ ಪೊಲೀಸರಿಗೆ ದೂರು ನೀಡಿರುವ ಪರಿಣಾಮ ಎಚ್ಚೆತ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: 47 ವರ್ಷದ ಹೋರಾಟದ ಬಳಿಕ ದತ್ತಪೀಠದಲ್ಲಿ ನೆರವೇರಿತು ಹಿಂದೂ ಅರ್ಚಕರಿಂದ ಪೂಜೆ

    ಪ್ರಕರಣ ದಾಖಲಿಸಿಕೊಂಡ ಚಿತ್ರದುರ್ಗ ನಗರ ಠಾಣೆ ಪೊಲೀಸರು ಪ್ರಕರಣದ ಬೆನ್ನತ್ತಿದಾಗ ಮೃತಳ ಕೊಠಡಿಯಲ್ಲಿ ಡೆತ್‍ನೋಟ್ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂಬುದನ್ನು ಆಕೆ ಬರೆದಿದ್ದಾರೆ. ಹೃದಯಾಘಾತ (Heart Attack) ದಿಂದ ರೂಪ ಸಾವನ್ನಪ್ಪಿದ್ರು ಅಂತ ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಬೇಡಿ ಎಂದು ಬರೆದಿದರು ಎನ್ನಲಾಗ್ತಿದೆ. ಆದರೆ ಈ ಬಗ್ಗೆ ರೂಪ ಅವರ ಗಂಡ ಡಾಕ್ಟರ್ ರವಿಗೆ ಕೇಳಿದಾಗ ಹೇಳೋದೇ ಬೇರೆ.

    ಒಟ್ಟಾರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸ್ನೇಹಜೀವಿ ಡಾ.ರೂಪ ದಿಢೀರ್ ಅಂತ ಸಾವನ್ನಪ್ಪಿದ್ದಾರೆ. ಅದರಲ್ಲೂ ರಿವಾಲ್ವರ್ ನ ಗುಂಡು ಅವರ ತಲೆಯಲ್ಲಿ ಪತ್ತೆಯಾದ ಪರಿಣಾಮ ಅವರ ಸಾವಿನ ಸುತ್ತ ಅನುಮಾನದ ಹುತ್ತ ಮನೆಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ತಾಳಿಕಟ್ಟೋ ಕೊನೆ ಕ್ಷಣದಲ್ಲೇ ಹೃದಯಾಘಾತ – 21ರ ಯುವತಿ ಸಾವು

    ತಾಳಿಕಟ್ಟೋ ಕೊನೆ ಕ್ಷಣದಲ್ಲೇ ಹೃದಯಾಘಾತ – 21ರ ಯುವತಿ ಸಾವು

    ಲಕ್ನೋ: ಬದಲಾದ ಜೀವನಶೈಲಿಂದ (Life Style) ಇತ್ತೀಚೆಗೆ ಯುವಕ-ಯುವತಿಯರಲ್ಲಿ ಹೃದಯಾಘಾತ (Heart Attack) ಹೆಚ್ಚುತ್ತಿದೆ. ಹಾಗೆಯೇ ಮಧ್ಯಪ್ರದೇಶದಲ್ಲಿ ಸಾಯಿಬಾಬಾ ಮಂದಿರದಲ್ಲಿಯೇ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ವಿಷಯ ನಿನ್ನೆಯಷ್ಟೇ ಕೇಳಿಬಂದಿತ್ತು.

    ಈ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ (Uttar Pradesh) ಮದುವೆ ವೇದಿಕೆಯಲ್ಲೇ 21 ವರ್ಷದ ಯುವತಿಯೊಬ್ಬಳು ತಾಳಿಕಟ್ಟುವ ಕೊನೆಯ ಕ್ಷಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲಕ್ನೋನ ಮಲಿಹಾಬಾದ್ ನಗರ ವ್ಯಾಪ್ತಿಯ ಭದ್ವಾನ ಗ್ರಾಮದಲ್ಲಿ ಡಿಸೆಂಬರ್ 3ರಂದು ಶಿವಾಂಗಿ ಶರ್ಮಾ ವಿವಾಹ (Marriage) ಇತ್ತು. ಭಾವಿ ಪತಿಯೊಂದಿಗೆ ವೇದಿಕೆ ಮೇಲೆ ಶಿವಾಂಗಿ ಸಂತಸದಿಂದ ಕಾಲ ಕಳೆಯುತ್ತಿದ್ದರು. ಇದನ್ನೂ ಓದಿ: ಪ್ರೀತಿಗಾಗಿ ಎಲ್ಲಾ ಸಂಬಂಧ ಕಡಿದುಕೊಂಡ್ಳು- ಆತನನ್ನೇ ನಂಬಿದ್ದ ಆಕೆಗೆ ಸಿಕ್ಕಿದ್ದು ಸಾವು!

    ಆಹಾರ ಬದಲಾಯಿಸಿದ ಬಳಿಕ ಶಿವಾಂಗಿ ಕುಸಿದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಹಠಾತ್ ಹೃದಯಾಘಾತವೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ಇದನ್ನೂ ಓದಿ: ತುರಹಳ್ಳಿ ಫಾರೆಸ್ಟ್‌ನಲ್ಲಿ ಆಪರೇಷನ್ ಚಿರತೆ- ಬೆಂಗ್ಳೂರಿನಲ್ಲೂ `ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ

    ಮದುವೆಗಿಂತ 15-20 ದಿನಕ್ಕೂ ಮೊದಲು ರಕ್ತದೊತ್ತಡ ಹಾಗೂ ಜ್ವರದಿಂದ ಬಳಲುತ್ತಿದ್ದ ಶಿವಾಂಗಿ ಚಿಕಿತ್ಸೆ ಪಡೆದಿದ್ದರು. ಇದಾದ ಬಳಿಕ ಸುಧಾರಿಸಿಕೊಂಡಿದ್ದರು. ಆದರೆ ಹಸೆಮಣೆ ಏರಬೇಕಾದ ದಿನವೇ ಹಸುನೀಗಿದ್ದಾರೆ. ಸದ್ಯ ಮದುವೆ ಸಂಭ್ರಮದಲ್ಲಿದ್ದ ಶಿವಾಂಗಿಯ ವೀಡಿಯೋ ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಷೇರು ಮಾರ್ಕೆಟ್ ಭಾಷೆಯಲ್ಲಿ ಆಮಂತ್ರಣ ಕಾರ್ಡ್ ಮಾಡಿಸಿದ ಜೋಡಿಗಳು – ಸ್ನೇಹಿತರನ್ನು ಚಿಲ್ಲರೆ ಹೂಡಿಕೆದಾರರು ಎಂದ್ರು

    ಷೇರು ಮಾರ್ಕೆಟ್ ಭಾಷೆಯಲ್ಲಿ ಆಮಂತ್ರಣ ಕಾರ್ಡ್ ಮಾಡಿಸಿದ ಜೋಡಿಗಳು – ಸ್ನೇಹಿತರನ್ನು ಚಿಲ್ಲರೆ ಹೂಡಿಕೆದಾರರು ಎಂದ್ರು

    ಮುಂಬೈ: ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯು ತಮ್ಮ ಮದುವೆಯ ಪ್ರತಿಯೊಂದು ಸಿದ್ಧತೆಯ ಬಗ್ಗೆ ಅನೇಕ ಕನಸನ್ನು ಕಟ್ಟಿಕೊಂಡಿರುತ್ತಾರೆ. ಅದಕ್ಕೆ ಆಮಂತ್ರಣ ಪತ್ರಿಕೆಯೂ ಹೊರತಲ್ಲ. ಆಮಂತ್ರಣ ಪತ್ರಿಕೆಯನ್ನು (Wedding Card) ಕೆಲವರು ಗ್ರ್ಯಾಂಡ್ ಆಗಿ ಮಾಡಿಸುವುದು ಇತ್ತೀಚಿನ ದಿನಗಳಲ್ಲಿ ಕಾಮನ್. ಆದರೆ ಮಹಾರಾಷ್ಟ್ರದ ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ಟಾಕ್ ಮಾರ್ಕೆಟ್ (Stock Market) ಪರಿಭಾಷೆಯಲ್ಲಿ ಮಾಡಿಸಿದ್ದಾರೆ.

    ಮಹಾರಾಷ್ಟ್ರದ (Maharashtra) ನಾಂದೇಡ್‍ನ ಜೋಡಿಗಳು ಉದ್ಯೋಗದಲ್ಲಿ ವೈದ್ಯರಾಗಿದ್ದರು(Doctor), ಷೇರು ಮಾರುಕಟ್ಟೆಯಿಂದ ಪ್ರೇರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯ ಪರಿಭಾಷೆಯಲ್ಲೇ ತಮ್ಮ ಮದುವೆ ಕಾರ್ಡ್‍ನ್ನು ಮಾಡಿಸಿದ್ದಾರೆ. ಈ ಕಾರ್ಡಿನ ವಿಶೇಷವೆಂದರೆ ಆಮಂತ್ರಣದಲ್ಲಿ ಬರುವ ಪ್ರತಿ ಶಬ್ದವನ್ನು ಷೇರು ಮಾರುಕಟ್ಟೆಗೆ ಸಂಬಂಧಿಸಿ ತಯಾರಿಸಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

    ಆಮಂತ್ರಣ ಕಾರ್ಡ್‍ನಲ್ಲಿ ಏನಿದೆ?: ವರನನ್ನು ಡಾ. ಸಂದೇಶ್ ಮೆಡಿಸಿನ್ ಲಿಮಿಟೆಡ್ ಎಂದು ಪರಿಚಯಿಸಿದ್ದರೆ ಮತ್ತು ಡಾ. ದಿವ್ಯಾ ಅನೆಸ್ತೇಶಿಯಾ ಲಿಮಿಟೆಡ್ ತಿಳಿಸಿದ್ದಾರೆ. ಇದು 2 ಘಟಕಗಳ ವಿಲೀನದ ಕಾರ್ಡ್ ಆಗಿದೆ ಎಂದು ತಿಳಿಸಿದ್ದಾರೆ. ಕಾರ್ಡ್‍ನ ಆರಂಭದಲ್ಲಿ ಅತ್ಯಮೂಲ್ಯ ಕಾರ್ಯಕ್ರಮದ ಆಹ್ವಾನಕ್ಕಾಗಿ ಎಂದು ತಿಳಿಸಿದೆ. ವಿಲೀನಗೊಂಡ ಘಟಕಗಳನ್ನು ನಿಯಂತ್ರಕ ಮಾನದಂಡಗಳಿಗೆ (ಹಿಂದೂ ಸಂಪ್ರದಾಯ) ಅನುಸಾರವಾಗಿ ಪಟ್ಟಿ ಮಾಡಲಾಗುತ್ತದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು

    ವಿವಾಹ ಸಮಾರಂಭವನ್ನು ಪಟ್ಟಿ ಸಮಾರಂಭ ಎಂದು ತಿಳಿಸಿರುವ ಅವರು, ಸ್ನೇಹಿತರನ್ನು ಹಾಗೂ ಕುಟುಂಬದವರನ್ನು ಚಿಲ್ಲರೆ ಹೂಡಿಕೆದಾರರು ಎಂದಿದ್ದಾರೆ. ಸಮಾರಂಭಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳಿಗೆ ಸ್ಟಾಕ್ ಮಾರ್ಕೆಟ್‍ಗೆ ಸಂಬಂಧಿಸಿದ ಹೆಸರನ್ನೇ ನೀಡಿದ್ದಾರೆ. ಸಂಗೀತವನ್ನು ರಿಂಗಿಂಗ್ ಬೆಲ್, ಸ್ವಾಗತವನ್ನು ಮಧ್ಯಂತರ ಡಿವಿಡೆಂಡ್ ಪಾವತಿ ಎಂದು ತಿಳಿಸಿದ್ದಾರೆ. ಡಿಸೆಂಬರ್ 6 ಮತ್ತು 7 ಬಿಡ್ಡಿಂಗ್ ದಿನಾಂಕವಾಗಿದ್ದು, ಗುಲ್ಬರ್ಗದ ಹುನ್ನಾಬಾದ್ ರಸ್ತೆಯಲ್ಲಿರುವ ಸಾಕಾಸರ್ ಗಾರ್ಡನ್ಸ್‍ನಲ್ಲಿ ಸ್ಟಾಕ್ ಎಕ್ಸ್‍ಚೇಂಜ್ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಬೋನಸ್ ರೂಪದಲ್ಲಿ ಸ್ಥಳೀಯದಲ್ಲವರಿಗೆ ಇರಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲೇಡಿ PSI ಕಿರುಕುಳ ಆರೋಪ- ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೈದ್ಯ ಆತ್ಮಹತ್ಯೆ

    ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೈದ್ಯ ಆತ್ಮಹತ್ಯೆ

    ಶಿವಮೊಗ್ಗ : ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು (Doctor) ತಮ್ಮ ನಿವಾಸದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗೋಪಾಲಗೌಡ ಬಡಾವಣೆಯಲ್ಲಿ ನಡೆದಿದೆ.

    ಮೃತ ವೈದ್ಯನನ್ನು ಡಾ.ಲೋಲಿತ್ ಎಂದು ಗುರುತಿಸಲಾಗಿದೆ. ಡಾ.ಲೋಲಿತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ (Hospital) ಮೂಳೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅಷ್ಟೇ ಅಲ್ಲದೇ ಮೃತ ವೈದ್ಯ ಲೋಲಿತ್ ಪತ್ನಿ ಸಹ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಕಿವಿಯ ಉದ್ದನೆಯ ಕೂದಲಿಗಾಗಿ ಗಿನ್ನಿಸ್ ವರ್ಲ್ಡ್‌ ದಾಖಲೆ ಬರೆದ ನಿವೃತ್ತ ಶಿಕ್ಷಕ

    ಡಾ.ಲೋಲಿತ್ ಕಳೆದ ಹಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಮನನೊಂದು ಲೋಲಿತ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಯಿ ಮರಿಗೆ ನೀರು ಕುಡಿಸಲು ಹೋದ ಯೋಧ ಅಪಘಾತದಲ್ಲಿ ಸಾವು- ಹುಟ್ಟೂರಿನಲ್ಲಿ ನೆರವೇರಿದ ಅಂತ್ಯಕ್ರಿಯೆ

    Live Tv
    [brid partner=56869869 player=32851 video=960834 autoplay=true]

  • ಮುಂಜಾನೆ ಕೋಳಿ ಕೂಗು- ನೆರೆ ಮನೆಯವರ ವಿರುದ್ಧ ದೂರು ಕೊಟ್ಟ ವೈದ್ಯ

    ಮುಂಜಾನೆ ಕೋಳಿ ಕೂಗು- ನೆರೆ ಮನೆಯವರ ವಿರುದ್ಧ ದೂರು ಕೊಟ್ಟ ವೈದ್ಯ

    ಭೋಪಾಲ್: ಮುಂಜಾನೆ ಕೋಳಿಯ (Rooster) ಕೂಗು ಕೇಳಿ ಗ್ರಾಮೀಣ ಭಾಗದಲ್ಲಿ ಜನರು ಎಚ್ಚರಗೊಳ್ಳುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದ ವೈದ್ಯನೊಬ್ಬ (Doctor) ಮುಂಜಾನೆ ಕೋಳಿ ಕೂಗುತ್ತದೆ ಎಂದು ನೆರೆ ಮನೆಯವರ ವಿರುದ್ಧವೇ ದೂರು ದಾಖಲಿಸಿದ್ದಾರೆ.

    ಮಧ್ಯಪ್ರದೇಶದ ಇಂದೋರ್‌ನ ಪಲಾಸೊಯಾ ಪ್ರದೇಶದಲ್ಲಿ ಅಲೋಕ್ ಮೋದಿ ಎಂಬವರು ವಾಸವಿದ್ದರು. ಇವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರತಿದಿನ ಕೆಲಸ ಮುಗಿಸಿ ಬರುವುದು ತಡರಾತ್ರಿ ಆಗುತ್ತಿತ್ತು. ಆದರೆ ಇವರು ನೆರೆ ಮನೆಯಲ್ಲಿದ್ದ ಕೋಳಿಯೊಂದು ಮುಂಜಾನೆ 5 ಗಂಟೆ ಆದ ತಕ್ಷಣ ಕೂಗುತ್ತಿತ್ತು. ಇದರಿಂದ ಕೋಪಗೊಂಡ ಅಲೋಕ್ ಮೋದಿ ಪೊಲೀಸ್ (Police) ಠಾಣೆಗೆ ಹೋಗಿ ಕೋಳಿ ಸಾಕಿದ್ದ ತನ್ನ ನೆರೆಮನೆಯ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?: ತನ್ನ ಮನೆಯ ಸಮೀಪ ಮಹಿಳೆಯೊಬ್ಬರು ಕೋಳಿ ಮತ್ತು ನಾಯಿಯನ್ನು ಸಾಕಿದ್ದಾರೆ. ಆದರೆ ಆ ಕೋಳಿಯು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಕೂಗುತ್ತಿದೆ. ಇದರಿಂದಾಗಿ ತೊಂದರೆ ಆಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗಡಿ ವಿವಾದ – ರಾಜ್ಯದ ನಿಲುವು ಸಂವಿಧಾನಬದ್ಧ: ಬೊಮ್ಮಾಯಿ

    ಈ ವೇಳೆ ಪಾಲಾಸಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಸಂಜಯ್ ಸಿಂಗ್ ಬೈನ್ಸ್ ಮಾತನಾಡಿ, ಮೊದಲು ಎರಡು ಕಡೆಯವರೊಂದಿಗೆ ಮಾತುಕತೆ ನಡೆಸಿ. ಆ ವೇಳೆಯೂ ಸಮಸ್ಯೆ ಬಗೆಹರಿಯದಿದ್ದರೇ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಮೋದಿ ಜನಪ್ರಿಯತೆಗೆ ಕಾರಣ ಏನು? – ಜನಮನ ಗೆದ್ದ ಗುಜರಾತ್ ಮಾಡೆಲ್ ಯೋಜನೆಗಳೇನು?

    Live Tv
    [brid partner=56869869 player=32851 video=960834 autoplay=true]

  • ತನ್ನ ಕೂದಲನ್ನೇ ತಿಂದ ಬಾಲಕಿ – ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ದಂಗಾದ ವೈದ್ಯರು

    ತನ್ನ ಕೂದಲನ್ನೇ ತಿಂದ ಬಾಲಕಿ – ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ದಂಗಾದ ವೈದ್ಯರು

    ಬೀಜಿಂಗ್: ಮದ್ಯಪಾನ, ಧೂಮಪಾನ ಹೀಗೆ ಅನೇಕ ರೀತಿಯ ಚಟಗಳನ್ನು ಬೆಳೆಸಿಕೊಂಡಿದ್ದವರನ್ನು ನೋಡಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಚೀನಾದ (China) ಬಾಲಕಿ ತನ್ನ ಕೂದಲನ್ನು (Hair) ತಿನ್ನುವ ವಿಚಿತ್ರ ಚಟವನ್ನು ಹೊಂದಿದ್ದಳು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

    ಚೀನಾದ ಶಾಂಕ್ಸಿ ಪ್ರಾಂತ್ಯದ ಪಿಕಾ (14) ಎಂಬ ಯುವತಿಗೆ (Girl) ಕೂದಲನ್ನು ಅಗೆಯುವ ಚಟವಿತ್ತು. ಅವಳು ಹೀಗೆ ಅಗೆಯುತ್ತಾ ಅಗೆಯುತ್ತಾ ತನ್ನ ತಲೆಯಲ್ಲಿದ್ದ ಬರೊಬ್ಬರಿ 3 ಕೆಜಿ ಕೂದಲನ್ನು ತಿಂದಿದ್ದಾಳೆ. ಇದರ ಪರಿಣಾಮವಾಗಿ ಆಕೆಯ ತಲೆ ಬೋಳಾಗಿದೆ. ಆದರೆ ಪಿಕಾ ತಂದೆ- ತಾಯಿ ಕೆಲಸದ ಹಿನ್ನೆಲೆಯಲ್ಲಿ ದೂರದ ಊರಿನಲ್ಲಿ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಅಜ್ಜಿಯ ಜೊತೆ ಇದ್ದಳು. ಅಜ್ಜಿಗೆ ವಯಸ್ಸಾಗಿದ್ದರಿಂದ ಪಿಕಾಳಿಗೆ ತುಂಬಾ ಗಂಭೀರವಾಗುವವರೆಗೂ ಅಸ್ವಸ್ಥತೆಯನ್ನು ಗಮನಿಸಲಿಲ್ಲ.

    ಪಿಕಾಳಿಗೆ ದಿನ ಕಳೆದಂತೆ ಆಹಾರವನ್ನು ಸೇವಿಸಲು ಸಾಧ್ಯವಾಗದಷ್ಟು ಅಸ್ವಸ್ಥಳಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರಿಗೆ ಮೊದಲಿಗೆ ಕಾರಣ ತಿಳಿದಿರಲಿಲ್ಲ. ಇದರಿಂದಾಗಿ ಪಿಕಾಗೆ ಸ್ಕ್ಯಾನ್ ಮಾಡಲು ತಿಳಿಸಿದ್ದಾರೆ. ನಂತರ ಸ್ಕ್ಯಾನಿಂಗ್ ರಿಪೋರ್ಟ್‍ನಲ್ಲಿ ಕಂಡು ಬಂದಿದ್ದ ಕೂದಲನ್ನು ನೋಡಿ ದಂಗಾಗಿದ್ದಾರೆ. ಕೂದಲು ಹೊಟ್ಟೆಯ ತುಂಬೆಲ್ಲಾ ಇದ್ದು, ಕರುಳು ಕೂಡ ಬ್ಲಾಕ್ ಆಗಿತ್ತು.

    ಈ ಹಿನ್ನೆಲೆಯಲ್ಲಿ ವೈದ್ಯರು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪಿಕಾ ಒಪ್ಪಿಕೊಂಡಳು. ಅದಾದ ಬಳಿಕ ವೈದ್ಯರು (Doctor) ಸತತ 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ, ಆಕೆಯ ಹೊಟ್ಟೆಯಲ್ಲಿದ್ದ 3 ಕೆ.ಜಿ ತೂಕದ ಕೂದಲಿನ ಉಂಡೆಯನ್ನು ತೆಗೆದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಹತ್ಯಾ ಸ್ಫೋಟ – ಪೊಲೀಸ್, ಮಗು ಸಾವು, 24 ಮಂದಿಗೆ ಗಾಯ

    ಈ ಬಗ್ಗೆ ವೈದ್ಯರು ಮಾತನಾಡಿ, ಆಕೆ ಕೆಲವು ವರ್ಷಗಳಿಂದ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕೂದಲನ್ನು ತಿನ್ನುವ ಚಟವನ್ನು ಬೆಳಸಿಕೊಂಡಳು ಎಂದು ತಿಳಿಸಿದರು. ಇದನ್ನೂ ಓದಿ: 25 ದಿನದ ಬಳಿಕ KRS ಬೃಂದಾವನ ಪ್ರವಾಸಿಗರಿಗೆ ಓಪನ್

    Live Tv
    [brid partner=56869869 player=32851 video=960834 autoplay=true]