Tag: doctor

  • ಧ್ರುವನಾರಾಯಣ್ ನಿಧನಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ ಡಾ. ಮಂಜುನಾಥ್

    ಧ್ರುವನಾರಾಯಣ್ ನಿಧನಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ ಡಾ. ಮಂಜುನಾಥ್

    ಮೈಸೂರು: ಹಳೇ ಮೈಸೂರು ಭಾಗದ ಪ್ರಬಲ ದಲಿತ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ನಿಧನದ ಹಿಂದಿನ ಕಾರಣವನ್ನು ವೈದ್ಯ ಡಾ. ಮಂಜುನಾಥ್ (Dr. Manjunath) ಚ್ಚಿಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೆಳಗ್ಗೆ ಜಾಗಿಂಗ್ ಮುಗಿಸಿ ವಾಪಸ್ ಬರುತ್ತಿದಂತೆಯೇ ಅವರ ಡ್ರೈವರ್ ಹಾಗೂ ಗಾರ್ಡ್ ಬೇಗ ಬರುವಂತೆ ನನ್ನ ಕೂಗಿದರು. ಕೂಡಲೇ ಅವರ ಮನೆಗೆ ಓಡಿದೆ. ಈ ವೇಳೆ ಮೊದಲನೇ ಮಹಡಿಯಲ್ಲಿ ಧ್ರುವನಾರಾಯನ್ ಅವರು ಮಂಚದಿಂದ ಕೆಳಗೆ ಬಿದ್ದು, ಸುಮಾರು 3 ಲೀಟರ್ ಆಗುವಷ್ಟು ರಕ್ತದ ಮಡುವಿನಲ್ಲಿ ಮಲಗಿದ್ದರು. ಆದರೆ ಅವರಲ್ಲಿ ಹಾರ್ಟ್ ಬೀಟ್, ಚಲನವಲನ ಯಾವುದೂ ಇರಲಿಲ್ಲ. ಅಂದರೆ ಅದಾಗಲೇ ಅವರ ಉಸಿರು ನಿಂತ ಸ್ಥಿತಿಯಲ್ಲಿತ್ತು ಎಂದರು.

    ಕೂಡಲೇ ಆಸ್ಪತ್ರೆಗೆ ಕರೆ ಮಾಡಿ ಅಂಬುಲೆನ್ಸ್ ಮೂಲಕ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಎಲ್ಲಾ ಪ್ರಯತ್ನಗಳನ್ನೂ ಮಾಡಿದರೂ ಅವರನ್ನು ನಮಗೆ ಉಳಿಸಿಕೊಳ್ಳಲು ಆಗಲಿಲ್ಲ. ಹೊಟ್ಟೆಯಲ್ಲಿ ಮ್ಯಾಸಿವ್ ಬ್ಲೀಡಿಂಗ್ ಆಗಿದ್ದೇ ಅವರ ನಿಧನಕ್ಕೆ ಕಾರಣ ಎಂದರು ಹೇಳಿದರು. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

    ಶುಕ್ರವಾರ ರಾತ್ರಿನೇ ಸ್ವಲ್ಪ ಹುಷಾರಿಲ್ಲ ಅಂತ ನನಗೆ ಕರೆ ಮಾಡಿ ಹೇಳಿದ್ದರು. ಆಗ ತಕ್ಷಣ ನಾನು ಬನ್ನಿ ಆಸ್ಪತ್ರೆಗೆ ಅಂದೆ. ಇಲ್ಲ ಬೆಳಗ್ಗೆ ಬರ್ತೀನಿ ಅಂತ ಹೇಳಿದ್ರು. ಆ ಸಂದರ್ಭದಲ್ಲಿಯೇ ಅವರಿಗೆ ಬ್ಲೀಡಿಂಗ್ ಶುರುವಾಗಿದೆ. ಅದಕ್ಕೆ ಅವರಿಗೆ ಸ್ವಲ್ಪ ಆಯಾಸ ಆದಂತೆ ಭಾಸವಾಗಿದೆ. ಅದು ಬೆಳಗ್ಗೆ ಅಷ್ಟೊತ್ತಿಗೆ ಬ್ಲೀಡಿಂಗ್ ಜಾಸ್ತಿ ಆಗಿದೆ ಎಂದು ವಿವರಿಸಿದರು.

    ವಿಧಾನಸಭಾ ಚುನಾವಣೆ (Vidhanasabha Election) ಹತ್ತಿರದಲ್ಲಿದೆ. ಧ್ರುವ ನಾರಾಯಣ್ (Dhruva Narayan) ಅವರು ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಹೀಗಾಗಿ ಅವರು ಸ್ವಲ್ಪ ಒತ್ತಡದಲ್ಲಿದ್ದರು. ಈ ಒತ್ತಡ ಜಾಸ್ತಿ ಆದಾಗ ಅಲ್ಸರ್ಸ್ ಜಾಸ್ತಿ ಆಗಿ ಹೊಟ್ಟೆಯಲ್ಲಿ ಬ್ಲೀಡಿಂಗ್ ಆಗುತ್ತದೆ. ಹಾರ್ಟ್ ಟ್ಯಾಕ್ ಅಂತೀವಿ ಆದರೆ ಅವರ ನಿಧನಕ್ಕೆ ಕಾರಣ ಮ್ಯಾಸೀವ್ ಬ್ಲೀಡಿಂಗ್ ಎಮದು ಅವರು ತಿಳಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ

    ಧ್ರುವ ನಾರಾಯಣ್ (62) ಅವರು ಶನಿವಾರ ಹೃದಯಾಘಾತ (Heart Attack) ದಿಂದ ಮೈಸೂರಿನ ಡಿಆರ್‍ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1961 ಜುಲೈ 31ರಂದು ಚಾಮರಾಜನಗರದ ಹಗ್ಗವಾಡಿಯಲ್ಲಿ ಜನಿಸಿದ್ದ ಇವರು ಬೆಂಗಳೂರಿನ ಜಿಕೆವಿಕೆಯಲ್ಲಿ ಪದವಿ ಪಡೆದಿದ್ದರು. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. 2 ಬಾರಿ ಶಾಸಕ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

  • ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಹತ್ಯೆ – 24 ಗಂಟೆಯಲ್ಲಿ ಚಾಲಕನ ಬಂಧನ

    ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಹತ್ಯೆ – 24 ಗಂಟೆಯಲ್ಲಿ ಚಾಲಕನ ಬಂಧನ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಹೈದರಾಬಾದ್‍ನ ವೈದ್ಯನನ್ನು (Doctor) ಮನೆಯೊಳಗೆ ಆತನ ಚಾಲಕ ಕತ್ತು (Throat) ಸೀಳಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ 24 ಗಂಟೆಯೋಳಗೆ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.

    ಮೃತನನ್ನು ಧರಮ್ ದೇವ್ ರಾಠಿ ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ಹೈದರಾಬಾದ್‍ನ ವೈದ್ಯನಾಗಿದ್ದ ಧರಮ್ ಠಾಟಿ ಬಳಿ ಹನೀಫ್ ಲೆಘರಿ ಎಂಬಾತ ಚಾಲಕನಾಗಿ (Driver) ಕೆಲಸ ಮಾಡುತ್ತಿದ್ದ. ಆದರೆ ಮನೆಗೆ ಹೋಗುವಾಗ ಧರಮ್ ದೇವ್ ಹಾಗೂ ಹನೀಫ್ ಮಧ್ಯೆ ಜಗಳ ನಡೆದಿತ್ತು.

    ಈ ವೇಳೆ ಮನೆಗೆ ತಲುಪಿದ ನಂತರ ಹನೀಫ್ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ವೈದ್ಯ ಧರಮ್ ರಾಠಿಯ ಕತ್ತು ಸೀಳಿ, ಹತ್ಯೆ ಮಾಡಿದ್ದಾನೆ. ನಂತರ ಹನೀಫ್ ಸ್ಥಳದಿಂದ ವೈದ್ಯರ ಕಾರಿನಲ್ಲೇ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬೆಳಗಾವಿಯಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನು ಪತ್ತೆ – ಆತಂಕದಲ್ಲಿ ಜನ

    ಹೈದರಾಬಾದ್ ಪ್ರದೇಶದಲ್ಲಿ ಪ್ರಸಿದ್ಧ ಚರ್ಮರೋಗ ವೈದ್ಯನಾಗಿದ್ದ ಡಾ. ಧರಮ್ ದೇವ್ ರಾಠಿ ಹತ್ಯೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಚಾಲಕನನ್ನು ಖೈರ್‌ಪುರದ ಆತನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪಾಕ್ ಇತಿಹಾಸ ಪುಸ್ತಕಗಳಲ್ಲಿ ಭಾರತ, ಹಿಂದೂ ವಿರೋಧಿ ನಿಲುವು – ಪಠ್ಯದಲ್ಲಿ ಗಾಂಧಿ ಹಿಂದೂ ನಾಯಕ ಎಂದು ಪರಿಚಯ

  • ಗೆಳತಿಯನ್ನು ಖುಷಿ ಪಡಿಸಲು ಹೋಗಿ ಯಡವಟ್ಟು ಮಾಡಿಕೊಂಡ 41ರ ಗೆಳೆಯ

    ಗೆಳತಿಯನ್ನು ಖುಷಿ ಪಡಿಸಲು ಹೋಗಿ ಯಡವಟ್ಟು ಮಾಡಿಕೊಂಡ 41ರ ಗೆಳೆಯ

    ಮುಂಬೈ: ತನ್ನ ಗೆಳತಿಯನ್ನ ಖುಷಿಪಡಿಸಲು ಮುಂದಾದ 41 ವರ್ಷದ ಗೆಳೆಯನೊಬ್ಬ ಮದ್ಯ (Alcohol) ಸೇವಿಸಿದ ನಂತರ 2 ವಯಾಗ್ರ ಮಾತ್ರೆಗಳನ್ನು (Viagra Pills) ಸೇವಿಸಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ (Nagpur) ನಡೆದಿದೆ.

    ತನ್ನ ಸ್ನೇಹಿತೆಯೊಂದಿಗೆ ಹೋಟೆಲ್‌ನಲ್ಲಿ (Hotel) ರೂಮ್ ಮಾಡಿಕೊಂಡಿದ್ದ ವ್ಯಕ್ತಿ, ಮದ್ಯ ಸೇವಿಸಿದ ಬಳಿಕ, ಸಿಲ್ಡೆನಾಫಿಲ್‌ನ 50 ಎಂಜಿ ಮಾತ್ರೆಗಳನ್ನ ಸೇವಿಸಿದ್ದಾನೆ. ಮಾರನೇ ದಿನ ಬೆಳಗ್ಗೆ ಇದ್ದಕ್ಕಿದಂತೆ ವಾಂತಿ ಮಾಡಿಕೊಂಡಿದ್ದಾನೆ. ತನ್ನ ಸ್ನೇಹಿತೆ, ವೈದ್ಯರ ಸಹಾಯ ಪಡೆಯುವಂತೆ ಹೇಳಿದರೂ ಆತ ನಿರಾಕರಿಸಿದ್ದಾನೆ. ನಂತರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರದೃಷ್ಟವಶಾತ್ ಆಸ್ಪತ್ರೆಗೆ ಬರುವಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ಬಳಿಕ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಪೀಸ್ ಪೀಸ್ ಮಾಡಿ ನೀರಿನ ಟ್ಯಾಂಕಿನಲ್ಲಿ ತುಂಬಿಸಿಟ್ಟ!

    ವ್ಯಕ್ತಿಗೆ ಸೆರೆಬ್ರೊವಾಸ್ಕುಲರ್ ನಿಂದ ರಕ್ತಸ್ರಾವವಾಗಿದೆ, ಇದರಿಂದ ಮೆದುಳಿಗೆ ಆಮ್ಲಜನಕದ ಸರಬರಾಜು ಕಡಿಮೆಯಾಗಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ವರಾ ಭಾಸ್ಕರ್ ಮತ್ತೊಂದು ಮದುವೆ: ಆಹ್ವಾನ ಪತ್ರಿಕೆ ವಿಶೇಷತೆ ಏನು?

    ಮರಣೋತ್ತರ ಪರೀಕ್ಷೆಯಲ್ಲಿ ಆಲ್ಕೋಹಾಲ್, ಔಷಧಿ ಮಿಶ್ರಣದೊಂದಿಗೆ 300 ಗ್ರಾಮ್‌ನಷ್ಟು ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಆದ್ದರಿಂದ ರಕ್ತದಲ್ಲಿ ಅಧಿಕ ಒತ್ತಡ ಉಂಟಾಗಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

  • ಕತ್ತಲಲ್ಲಿ ಸ್ಮಾರ್ಟ್ ಫೋನ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ

    ಕತ್ತಲಲ್ಲಿ ಸ್ಮಾರ್ಟ್ ಫೋನ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ

    ಹೈದರಾಬಾದ್: ಅತಿಯಾದ ಸ್ಮಾರ್ಟ್ ಫೋನ್ (Smartphone) ಬಳಕೆಯಿಂದ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡಿದ್ದ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ.

    30 ವರ್ಷದ ಮಂಜು ಒಂದೂವರೆ ವರ್ಷಗಳಿಂದ ದೃಷ್ಟಿ ದೋಷದ ಲಕ್ಷಣಗಳನ್ನು ಹೊಂದಿದ್ದರು. ಮಂಜು ಕತ್ತಲೆಯಲ್ಲಿ ತನ್ನ ಸ್ಮಾರ್ಟ್‍ಫೋನ್ ಅನ್ನು ಅತಿಯಾಗಿ ಬಳಸುತ್ತಿದ್ದಳು. ಇದರಿಂದಾಗಿ ಆಕೆ ದೃಷ್ಟಿ ಕಳೆದುಕೊಂಡಿದ್ದಳು.

    ತನ್ನ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಆಕೆ ಬ್ಯೂಟಿಷಿಯನ್ ಕೆಲಸವನ್ನು ತೊರೆದಿದ್ದಾಳೆ. ನಂತರ ತನ್ನ ಮೊಬೈಲ್‍ನಲ್ಲೇ ಗಂಟೆಗಟ್ಟಲೆ ಕಳೆಯಲು ಪ್ರಾರಂಭಿಸಿದಳು. ಅದಾದ ಬಳಿಕ ಆಕೆಗೆ ಈ ರೋಗಲಕ್ಷಣಗಳು ಪ್ರಾರಂಭವಾದವು.

    ಅದಾದ ಬಳಿಕ ಆಕೆ ವೈದ್ಯರನ್ನು ಸಂಪರ್ಕಿಸಿದಳು. ಅ ಸಂದರ್ಭದಲ್ಲಿ ಆ ವೈದ್ಯರು (Doctor) ಯಾವುದೇ ಮಾತ್ರೆಯನ್ನು ನೀಡಿಲ್ಲ. ಜೊತೆಗೆ ಚಿಕಿತ್ಸೆಯನ್ನು ನೀಡಲಿಲ್ಲ. ಬದಲಾಗಿ ಮೊಬೈಲ್ ಬಳಕೆ ಕಡಿಮೆ ಮಾಡಲು ತಿಳಿಸಿದರು. ಇದಾದ ಬಳಿಕ ಆಕೆ ಸಂಪೂರ್ಣವಾಗಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿದ್ದರಿಂದ ಒಂದೂವರೆ ವರ್ಷದ ಬಳಿಕ ಆಕೆಯ ಕಣ್ಣು ಸಹಜ ಸ್ಥಿತಿಗೆ ಮರಳಿತು. ಇದನ್ನೂ ಓದಿ: ರಿಯಾಯ್ತಿ ದಂಡ ವಸೂಲಿಗಿಂದು ಕೊನೆ ದಿನ- ಬೆಂಗ್ಳೂರಲ್ಲಿ ನಕಲಿ ನಂಬರ್ ಜಾಲ ಬೆಳಕಿಗೆ

    ಅತಿಯಾದ ಸ್ಮಾರ್ಟ್‍ಫೋನ್ ಬಳಕೆಯಿಂದ ಕೆಲವರು ದೃಷ್ಟಿದೋಷದ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ಸ್ಮಾರ್ಟ್‍ಫೋನ್ ಮಿಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅದರಲ್ಲೂ ರಾತ್ರಿ ಹೊತ್ತು ಲೈಟ್ ಆಫ್ ಮಾಡಿಕೊಂಡು ಸ್ಮಾರ್ಟ್‍ಫೊನ್ ನೋಡುವುದರಿಂದ ಈ ರೋಗ ಹೆಚ್ಚಾಗಿ ಬರುತ್ತದೆ. ಈ ಬಗ್ಗೆ ಹೈದರಾಬಾದ್ ಮೂಲದ ಡಾ. ಸುಧೀರ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹತ್ಯೆ ಮಾಡಲು ಬಂದವನೇ ಭೀಕರವಾಗಿ ಕೊಲೆಯಾದ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಟ್ಟೆಯಲ್ಲಿದ್ದ ಮಗು ಅಂಗವೈಕಲ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡದ ವೈದ್ಯೆ – 11.10 ಲಕ್ಷ ದಂಡ

    ಹೊಟ್ಟೆಯಲ್ಲಿದ್ದ ಮಗು ಅಂಗವೈಕಲ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡದ ವೈದ್ಯೆ – 11.10 ಲಕ್ಷ ದಂಡ

    ಧಾರವಾಡ: ವೈದ್ಯೋ ನಾರಾಯಣ ಹರಿ ಎನ್ನುವ ಮಾತಿದೆ. ವೈದ್ಯರು ಎಂದರೆ ದೇವರು ಎಂದು ನಂಬಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಾತಿಗೆ ಅನೇಕ ವೈದ್ಯರು (Doctor) ಅಪಚಾರವೆಸಗುವಂತಹ ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬರುತ್ತಿವೆ. ಇದೀಗ ಧಾರವಾಡದ (Dharwad) ವೈದ್ಯೆಯೊಬ್ಬರು ಇಂತಹುದೇ ಕೆಲಸ ಮಾಡಿದ್ದು, ಅವರಿಗೆ ನ್ಯಾಯಾಲಯ 11.10 ಲಕ್ಷ ರೂ. ದಂಡ ವಿಧಿಸಿದೆ.

    ಧಾರವಾಡದ ಬಾವಿಕಟ್ಟಿ ಪ್ಲಾಟ್ ಬಡಾವಣೆ ನಿವಾಸಿಯಾಗಿರುವ ಪರಶುರಾಮ ಘಾಟಗೆ ಅವರು ತಮ್ಮ ಪತ್ನಿ ಪ್ರೀತಿ ಗರ್ಭವತಿಯಾದಾಗ (Pregnant), 3 ರಿಂದ 9 ತಿಂಗಳಿನವರೆಗೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿರುವ ಪ್ರಶಾಂತ ನರ್ಸಿಂಗ್ ಹೋಮ್‌ನ ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ತೋರಿಸಿದ್ದರು. ಒಟ್ಟು 5 ಬಾರಿ ಸ್ಕ್ಯಾನ್ ಮಾಡಿದ್ದರೂ ಗರ್ಭದಲ್ಲಿನ ಮಗುವಿನ (Baby) ಬೆಳವಣಿಗೆ ಚೆನ್ನಾಗಿದೆ ಎಂದು ವೈದ್ಯೆ ಹೇಳಿದ್ದರು. ಹೆರಿಗೆ ನೋವು ಆರಂಭವಾಗಿ, ಆಸ್ಪತ್ರೆಗೆ ಹೋದಾಗ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲು ಡಾ. ಸೌಭಾಗ್ಯ ಕುಲಕರ್ಣಿ ಸಲಹೆ ನೀಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ ಪರಶುರಾಮ ತಮ್ಮ ಪತ್ನಿಯನ್ನು ಧಾರವಾಡದ ಎಸ್‌ಡಿಎಮ್ ಆಸ್ಪತ್ರೆಗೆ ಕರೆದೊಯ್ದಿದ್ದರು.

    husband forced a woman to eat human bones to get pregnant

    2019ರ ಜನವರಿ 31 ರಂದು ಪ್ರೀತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವನ್ನು ನೋಡಿದ ತಂದೆ-ತಾಯಿಗೆ ಆಘಾತ ಆಗಿತ್ತು. ಏಕೆಂದರೆ ಮಗುವಿನ ಎರಡೂ ಕಾಲುಗಳು ಅಂಗವಿಕಲತೆಯಿಂದ (Disability) ಕೂಡಿದ್ದವು. ಇದನ್ನು ನೋಡಿದ ಪೋಷಕರಿಗೆ ದಿಕ್ಕು ಕಾಣದಂತೆ ಆಗಿತ್ತು. ಬಳಿಕ ದಂಪತಿ ವೈದ್ಯೆ ಸೌಭಾಗ್ಯ ಕುಲಕರ್ಣಿ ಬಳಿ ಹೋಗಿ ಚರ್ಚೆ ಮಾಡಿದ್ದಾರೆ. ಆದರೆ ವೈದ್ಯೆ ತಮ್ಮ ತಪ್ಪೇ ಇಲ್ಲ ಎಂದಿದ್ದರು.

    ಬಳಿಕ ಮಗುವಿನ ಪೋಷಕರು ಧಾರವಾಡ ಜಿಲ್ಲಾ ವ್ಯಾಜ್ಯಗಳ ಗ್ರಾಹಕರ ನ್ಯಾಯಾಲದ ಮೊರೆ ಹೋಗಿದ್ದರು. ಇದರಲ್ಲಿ ವೈದ್ಯರ ತಪ್ಪಾಗಿದೆ ಎಂದು ಮನಗಂಡು ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ 11.10 ಲಕ್ಷ ರೂ. ದಂಡ ವಿಧಿಸಿದೆ.

    ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್‌ನ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18-20 ವಾರಗಳ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಅನ್ನುವ ಬಗ್ಗೆ ತಪಾಸಣೆ ಮಾಡಿದಾಗ ವೈದ್ಯರಿಗೆ ಎಲ್ಲಾ ವಿವರಗಳು ಗೊತ್ತಾಗುತ್ತದೆ. ಆದರೆ ಡಾ. ಸೌಭಾಗ್ಯ ಈ ಎಲ್ಲಾ ವಿಚಾರ ತಿಳಿದಿದ್ದರೂ ದಂಪತಿಗೆ ತಿಳಿಸಿರಲಿಲ್ಲ. ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದರಿಂದ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಇದರಲ್ಲಿ ಕಂಡು ಬಂದಿದೆ. ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ, ವೈದ್ಯೆಗೆ 11.10 ಲಕ್ಷ ರೂ. ಪರಿಹಾರವನ್ನು ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ಈ ಪರಿಹಾರ ನೀಡದಿದ್ದಲ್ಲಿ ಮೊತ್ತದ ಮೇಲೆ ಶೇ.8 ರಷ್ಟು ಬಡ್ಡಿ ಕೊಡುವಂತೆ ತಜ್ಞ ವೈದ್ಯರಿಗೆ ಆಯೋಗ ಆದೇಶಿಸಿದೆ. ಇದನ್ನೂ ಓದಿ: ಆದಿಯೋಗಿ ಪ್ರತಿಮೆ ವಿವಾದ – ಪಿಐಎಲ್‌ ವಜಾ, ಇಶಾ ಫೌಂಡೇಷನ್‌ಗೆ ಬಿಗ್‌ ರಿಲೀಫ್‌

    ಈ ಬಗ್ಗೆ ವೈದ್ಯೆ ಡಾ. ಸೌಭಾಗ್ಯ ಕುಲಕರ್ಣಿ ಅವರನ್ನು ಕೇಳಿದರೆ, ಇದರಲ್ಲಿ ನನ್ನದೇನೂ ತಪ್ಪಿಲ್ಲ. ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಅಪರೂಪದಲ್ಲಿ ಅಪರೂಪದ ಪ್ರಕರಣವಿದು ಎಂದು ಹೇಳಿದ್ದಾರೆ. ದಂಡದ ಮೊತ್ತದಲ್ಲಿ 8 ಲಕ್ಷ ರೂ. ಯನ್ನು ಮಗುವಿನ ಹೆಸರಿನಲ್ಲಿ, ಆಕೆ ವಯಸ್ಕಳಾಗುವವರೆಗೆ ತಂದೆ-ತಾಯಿ ಇಚ್ಚಿಸುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿಯಾಗಿಡಲು ಮತ್ತು ಪರಿಹಾರದ ಪೂರ್ತಿ ಹಣವನ್ನು ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಲು ಆಯೋಗ ತಿಳಿಸಿದೆ. ಇಂತಹದ್ದೊಂದು ತೀರ್ಪು ನೀಡುವ ಮೂಲಕ ಆಯೋಗ ನಿರ್ಲಕ್ಷ್ಯ ತೋರುವ ವೈದ್ಯರಿಗೆ ಎಚ್ಚರಿಕೆಯನ್ನು ನೀಡಿದಂತಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್ ಪೊಲೀಸ್ ಠಾಣೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೇವಲ 1 ರೂ.ಗೆ ಬಡಜನರಿಗೆ ಚಿಕಿತ್ಸೆ ನೀಡ್ತಾರೆ ಈ ಡಾಕ್ಟರ್‌!

    ಕೇವಲ 1 ರೂ.ಗೆ ಬಡಜನರಿಗೆ ಚಿಕಿತ್ಸೆ ನೀಡ್ತಾರೆ ಈ ಡಾಕ್ಟರ್‌!

    ರಾಯ್ಪುರ: ಬಡವರಿಗಾಗಿ ಅನೇಕ ಸರ್ಕಾರಿ ಆರೋಗ್ಯ ಯೋಜನೆಗಳಿದ್ದರೂ, ಎಲ್ಲರಿಗೂ ಹೇಳಿಕೊಳ್ಳುವಂತಹ ಉಚಿತ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ದುಬಾರಿಯಾಗಿದ್ದು, ಕೂಲಿಕಾರರಿಗೆ ಸೂಕ್ತ ಚಿಕಿತ್ಸೆ ಪಡೆಯುವುದು ದೊಡ್ಡ ಸವಾಲಾಗಿದೆ. ಆದರೆ ಇಲ್ಲೊಬ್ಬ ವೈದ್ಯರು (Doctor) ತಮ್ಮ ಕ್ಲಿನಿಕ್‌ನಲ್ಲಿ ಕೇವಲ 1 ರೂಪಾಯಿಗೆ ಚಿಕಿತ್ಸೆ ನೀಡಿ ಮೆಚ್ಚುಗೆ ಗಳಿಸಿದ್ದಾರೆ.

    ಛತ್ತೀಸಗಢದ (Chhattisgarh) ರಾಯ್ಪುರದ (Raipur) ಅಂಬೇಡ್ಕರ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿನಯ್ ವರ್ಮಾ ಅವರು ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಕೇವಲ 1 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ತಲ್ಲಣಗೊಳಿಸಿತು. ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಹಾಸಿಗೆಗಳಿಗಾಗಿ ಹೆಣಗಾಡಿದರು. ಇಂತಹ ಸನ್ನಿವೇಶದಲ್ಲಿ ಡಾ. ವರ್ಮಾ ಅವರು ರೋಗಿಗಳಿಗೆ ಸಾಕಷ್ಟು ನೆರವಾಗಿದ್ದರು. ಇದನ್ನೂ ಓದಿ: ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್ ಪತ್ತೆ – ಆ್ಯಸಿಡ್ ಸುರಿದು ತಂದೆ, ತಾಯಿಯಿಂದ ಕೊಲೆ

    ಕಳೆದ 4 ವರ್ಷಗಳಿಂದ ಬಡಜನರಿಗೆ 1 ರೂ. ಪಡೆದು ವರ್ಮಾ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ನಿತ್ಯ ಬೆಳಗ್ಗೆ 8 ರಿಂದ 10 ಗಂಟೆವರೆಗೆ ಡಾ. ವರ್ಮಾ ಅವರು ತಮ್ಮ ಮನೆಯಲ್ಲೇ ರೋಗಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಾರೆ. ನಂತರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡುತ್ತಾರೆ. ಚಿಕಿತ್ಸೆಗಾಗಿ ಅವರು ಕೇವಲ 1 ರೂ. ಶುಲ್ಕ ವಿಧಿಸುತ್ತಾರೆ.

    ಆಸ್ಪತ್ರೆಯಲ್ಲಿ ತುರ್ತು ಘಟಕದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಬಿಡುವಿದ್ದಾಗಲೆಲ್ಲಾ ಹೆಚ್ಚಿನ ಸಮಯ ಬಡರೋಗಿಗಳಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಫೆ.14 – ಹಸುಗಳನ್ನಪ್ಪಿಕೊಳ್ಳೊ ದಿನ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ

    “ನನ್ನ ಬಳಿಗೆ ಬರುವ ಅನೇಕ ರೋಗಿಗಳಿಗೆ ಔಷಧಿಗಳನ್ನು ಖರೀದಿಸಲು ಸಹ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅವರಿಗೆ ಔಷಧಿಗಳನ್ನು ನೀಡಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿದ್ದಾರೆ. ಪ್ರತಿದಿನ 30 ರಿಂದ 40 ರೋಗಿಗಳಿಗೆ ತಮ್ಮ ಸೇವೆಯನ್ನು ನೀಡುವ ಡಾ. ವಿನಯ್ ಅವರು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೂನಿಯರ್ ಆರ್ಟಿಸ್ಟ್  ಬಲಿ : ತಾಯಿಯ ಆರೋಪ

    ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಬಲಿ : ತಾಯಿಯ ಆರೋಪ

    ವೈದ್ಯರ (Doctor) ನಿರ್ಲಕ್ಷ್ಯ ಕಾರಣದಿಂದಾಗಿ ಜ್ಯೂನಿಯರ್ ಆರ್ಟಿಸ್ಟ್ (Junior Artist)ಒಬ್ಬರು ಬಲಿಯಾದ ಪ್ರಕರಣ ಬೆಂಗಳೂರಿನ ಬಗಲಗುಂಟೆಯಲ್ಲಿ ನಡೆದಿದೆ. ಹದಿನೈದರ ವಯಸ್ಸಿನ ಸಿಂಚನಾ (Sinchana) ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಹ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ಅವರು ವಾಂತಿ ಬೇಧಿಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮನೆಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ನಿರ್ಲಕ್ಷ್ಯ ಕಾರಣದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸಿಂಚನಾ ತಾಯಿ ನೇತ್ರಾವತಿ (Netravati) ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಎರಡು ದಿನಗಳಿಂದ ನನ್ನ ಮಗಳು ವಾಂತಿ ಬೇಧಿಯಿಂದ ಬಳಲುತ್ತಿದ್ದಳು. ಮೊದಲು ಕ್ಲಿನಿಕ್ ನಲ್ಲಿ ತೋರಿಸಿದ್ದೆವು. ತುಂಬಾ ಸುಸ್ತಾಗಿದ್ದರಿಂದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು. ಮನೆಯ ಸಮೀಪದಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ಮಗಳನ್ನು ದಾಖಲಿಸಲಾಯಿತು. ಆದರೆ, ಅವಳಿಗೆ ಸರಿಯಾದ ವೇಳೆಗೆ ಚಿಕಿತ್ಸೆ ದೊರೆಯಲಿಲ್ಲ. ಇದೇ ನನ್ನ ಮಗಳ ಸಾವಿಗೆ ಕಾರಣವಾಗಿದೆ’ ಎನ್ನುತ್ತಾರೆ ಸಿಂಚನಾ ತಾಯಿ.

    ಮುಂದುವರೆದು ಮಾತನಾಡಿದ ಅವರು, ‘ಸಿಂಚನಾಗೆ ಕತ್ತಿನ ಭಾಗಕ್ಕೆ ಇಂಜೆಕ್ಷನ್ ನೀಡಿದ್ದರು. ಕತ್ತಿನಲ್ಲಿ ರಕ್ತಸ್ರಾವ ಹೆಚ್ಚಾಯಿತು. ಅದನ್ನು ವೈದ್ಯರ ಗಮನಕ್ಕೆ ತಂದರೂ, ಅವರು ಅದನ್ನು ಗಂಭೀರವಾಗಿ ತಗೆದುಕೊಳ್ಳಲಿಲ್ಲ. ತರಬೇತಿ ವೈದ್ಯರು ನನ್ನ ಮಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ನುರಿತ ವೈದ್ಯರನ್ನು ಕರೆಯಿಸುವಂತೆ ಬೇಡಿಕೊಂಡರೂ, ಅವರು ಕೇಳಲಿಲ್ಲ. ಹಾಗಾಗಿ ನನ್ನ ಮಗಳನ್ನು ಕಳೆದುಕೊಳ್ಳಬೇಕಾಯಿತು’ ನೇತ್ರಾವತಿ. ಇದನ್ನೂ ಓದಿ:ಬಾಲಿವುಡ್‌ನ `ಸಿಟಾಡೆಲ್’ ಸೀರಿಸ್ ಒಪ್ಪಿಕೊಂಡಿದ್ಯಾಕೆ? ಕಾರಣ ಬಿಚ್ಚಿಟ್ಟ ಸಮಂತಾ

    ಈ ಸಾವಿನ ಕುರಿತಂತೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ತಗೆದುಕೊಳ್ಳುವ ಕುರಿತು ಪೊಲೀಸರು ಆಶ್ವಾಸನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ಲಿನಿಕ್‍ನಲ್ಲಿ ಡಾಕ್ಟರ್, ನರ್ಸ್ ಲವ್ ಸ್ಟೋರಿ ಶುರು – ಮದ್ವೆಯಾಗಿ ಮಗುವಾದ ನಂತರ ಕಿರುಕುಳ ಆರೋಪ

    ಕ್ಲಿನಿಕ್‍ನಲ್ಲಿ ಡಾಕ್ಟರ್, ನರ್ಸ್ ಲವ್ ಸ್ಟೋರಿ ಶುರು – ಮದ್ವೆಯಾಗಿ ಮಗುವಾದ ನಂತರ ಕಿರುಕುಳ ಆರೋಪ

    ಧಾರವಾಡ: ಕ್ಲಿನಿಕ್‍ನಲ್ಲಿ (Clinic) ಕೆಲಸ ಮಾಡುತ್ತಿದ್ದ ವೈದ್ಯ (Doctor) ಹಾಗೂ ನರ್ಸ್ (Nurse) ನಡುವೆ ಪ್ರೀತಿಯಾಗಿ, ಎರಡು ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಿ ಒಂದು ಮುದ್ದಾದ ಮಗುವಾದ ನಂತರ ಜಾತಿ ನಿಂದನೆ ಹಾಗೂ ಕಿರುಕುಳ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಇದೀಗ ನರ್ಸ್ ಪೊಲೀಸ್ (Police) ಠಾಣೆ ಮೆಟ್ಟಿಲೇರಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಿಲು ಗ್ರಾಮದಲ್ಲಿ ನಡೆದಿದೆ.

    ಹಲವಾಗಲು ಗ್ರಾಮದವರಾದ ಗಿರೀಶ್ ವೈದ್ಯರಾಗಿದ್ದು, ನರ್ಸ್ ತ್ರಿವೇಣಿ, ಗಿರೀಶ್ ನಡೆಸುತ್ತಿದ್ದ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ನಡುವೆ ಪ್ರೀತಿ ಶುರುವಾಗಿ ಆ ಬಳಿಕ ಮನೆಯವರನ್ನು ಒಪ್ಪಿಸಿ ಇಬ್ಬರು ಮದುವೆಯಾಗಿದ್ದರು. ಇಬ್ಬರು ಕೂಡ ಕೆಲ ವರ್ಷಗಳ ಕಾಲ ಸುಖವಾಗಿ ಸಂಸಾರ ಮಾಡಿದ್ದಾರೆ. ಇವರ ಸಂಸಾರ ಮಗು ಆಗೋವರೆಗೋ ಬಹಳ ಚೆನ್ನಾಗಿಯೇ ಇತ್ತು ಆದರೆ ಈಗ ಅವರ ಬಾಳಲ್ಲಿ ಜಾತಿ ಮತ್ತು ವರದಕ್ಷಿಣೆ ಎಂಬ ಭೂತ ಎಂಟ್ರಿಯಾಗಿದೆ. ಗಂಡ ಹಾಗೂ ಅವರ ಮನೆಯವರು ಕಿರುಕುಳ ನೀಡಿ ಹೊರ ಹಾಕಿದ್ದಾರೆ ಎಂದು ತ್ರಿವೇಣಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ರಾಜಾಹುಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌ – ಟೆಂಪಲ್‍ಗೆ ಬನ್ನಿ ಸರ್ ಎನ್ನುತ್ತಿರುವ ಬಿಜೆಪಿ ಶಾಸಕರು

    ಗಿರೀಶ್ ಹಾಗೂ ತ್ರಿವೇಣಿ ಅಂತರ್ಜಾತಿ ಮದುವೆಯಾಗಿದ್ರು, ಆದ್ರೆ ಈಗ ಯಾಕೋ ಇಬ್ಬರ ಜೀವನ ಸರಿಹೊಂದುತ್ತಿಲ್ಲವಂತೆ, ಹೀಗಾಗಿ ಜಾತಿ ಭೂತ ಮತ್ತು ವರದಕ್ಷಿಣೆ ಎರಡು ಎಂಟ್ರಿಯಾಗಿ ಇವರ ಬಾಳಲ್ಲಿ ಬಿರುಗಾಳಿಯೇ ಎದ್ದಿದೆ. ನನಗೆ ಕಿರುಕುಳ ನೀಡುತ್ತಿದ್ದಾರೆ ಅಂತ ಆರೋಪಿಸಿ ತ್ರಿವೇಣಿ, ಹಲವಾಗಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ, ಎರಡ್ಮೂರು ಬಾರಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದ್ರೆ ಅಲ್ಲಿ ಕೇಸ್ ದಾಖಲಾಗದ ಕಾರಣ, ವಿಜಯನಗರ ಎಸ್‍ಪಿ ಹರಿಬಾಬು ಅವರಿಗೆ ಬಂದು ದೂರು ನೀಡಿದ್ದಾರೆ. ಕೂಡಲೇ ಹಲವಾಗಲು ಪಿಎಸ್‍ಐಗೆ ಸೂಚನೆ ನೀಡಿದ ಎಸ್‍ಪಿ ಹರಿಬಾಬು FIR ದಾಖಲಿಸಿದ್ದಾರೆ. ಇದನ್ನೂ ಓದಿ: ಒಳ್ಳೆಯ ಮೇಕಪ್ ಮಾಡಿಕೊಂಡು ಬಂದ ಪಕ್ಷಕ್ಕೆ ಜೆಡಿಎಸ್ ಬೆಂಬಲ: ಸಿಎಂ ಇಬ್ರಾಹಿಂ

    ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಗಿರೀಶ್ ಸೇರಿದಂತೆ ಕುಟುಂಬಸ್ಥರು ಸದ್ಯ ನಾಪತ್ತೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    ಬೆಂಗಳೂರು: ವೈದ್ಯೆಯ ರೀತಿ ವೇಷ ಧರಿಸಿ ಆಸ್ಪತ್ರೆಯಲ್ಲಿದ್ದ ರೋಗಿಗಳ ಚಿನ್ನಾಭರಣ ಕಳವು ಮಾಡುತ್ತಿದ್ದ ಲಕ್ಷ್ಮಿಯನ್ನು ಬಂಧಿಸಲಾಗಿದೆ.

    ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿತ್ತು. ಕಳೆದ ಕೆಲ ದಿನಗಳ ಹಿಂದೆ ವೈದ್ಯೆಯ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಆಸ್ಪತ್ರೆ (Hospital) ಎಂಟ್ರಿಯಾಗಿದ್ದ ಕಳ್ಳಿ ಲಕ್ಷ್ಮಿ, ರೋಗಿಗಳ ವಾರ್ಡ್ ಗೆ ಹೋಗುತ್ತಿದ್ದಳು. ಬಳಿಕ ರೋಗಿಯ ಜೊತೆಗಿದ್ದವರನ್ನು ಚಿಕಿತ್ಸೆ ಕೊಡುವ ವೇಳೆ ಯಾರು ಒಳಗೆ ಇರಬಾರದು ಅಂತಾ ಹೊರಗೆ ಕಳುಹಿಸುತ್ತಿದ್ದಳು. ಹಾಗೆಯೇ ಹೊರಗೆ ಕಳುಹಿಸಿ ಚಿಕಿತ್ಸೆ ಕೊಡುವ ನೆಪದಲ್ಲಿ ರೋಗಿಗಳ ಬಳಿಯಿದ್ದ ಚಿನ್ನಾಭರಣ ಕಳವು ಮಾಡಿ ಎಸ್ಕೇಪ್ ಆಗುತ್ತಿದ್ದಳು. ಇದನ್ನೂ ಓದಿ: ಟ್ರಕ್, ಕಾರು ಭೀಕರ ಅಪಘಾತ- 9 ಮಂದಿ ದಾರುಣ ಸಾವು

    ರೋಗಿ ಸರಸಮ್ಮ ಅನ್ನೋರ ಬಳಿ ಇದೇ ವಂಚಿಸಿ 40 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಕಲಿ ಡಾಕ್ಟರ್ ಲಕ್ಷ್ಮಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆರೋಪಿತೆ ಲಕ್ಷ್ಮಿಯ ಖಾಸಗಿ ಫೋಟೋ (Photo) ಇಟ್ಟುಕೊಂಡು ಹಣ ತರುವಂತೆ ಬ್ಲಾಕ್ ಮೇಲ್ ಮಾಡ್ತಿದ್ದ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಕಳ್ಳತನ ಮಾಡಿದಳು ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ಆ ವ್ಯಕ್ತಿಯ ಬಂಧನಕ್ಕೆ ಪೊಲೀಸರು, ಶೋಧ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೈಪ್ರೊಫೈಲ್ ಗಾಂಜಾ‌ ದಂಧೆ -ಮಂಗಳೂರಿನ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಅರೆಸ್ಟ್‌

    ಹೈಪ್ರೊಫೈಲ್ ಗಾಂಜಾ‌ ದಂಧೆ -ಮಂಗಳೂರಿನ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಅರೆಸ್ಟ್‌

    ಮಂಗಳೂರು: ಮಂಗಳೂರಿನ (Mangaluru) ಪ್ರತಿಷ್ಠಿತ ಕಾಲೇಜಿನ (College) ವೈದ್ಯರು‌ ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರು ಭಾಗಿಯಾಗಿದ್ದ ಭಾರೀ ಹೈಪ್ರೊಫೈಲ್ ಗಾಂಜಾ ದಂಧೆಯನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.

    ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ. ಅತ್ತಾವರ, ಕೆ.ಎಂ.ಸಿ ಮಣಿಪಾಲ, ದೇರಳಕಟ್ಟೆಯ ಯೆನೇಪೋಯಾ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಈ ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಗಾಂಜಾ ಸೇವನೆ ಹಾಗೂ ಗಾಂಜಾ ಪೆಡ್ಲಿಂಗ್ ಪ್ರಕರಣದಲ್ಲಿ ಇಬ್ಬರು ವೈದ್ಯರು (Doctor), ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು (Students) ಸೇರಿ ಒಟ್ಟು 10 ಜನ ಭಾಗಿಯಾಗಿದ್ದಾರೆ‌.

    ಯು.ಕೆ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ (38) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಮತ್ತಷ್ಟು ಸ್ಫೋಟಕ ವಿಚಾರ ಬೆಳಕಿಗೆ ಬಂದಿತ್ತು. ನೀಲ್ ಕಿಶೋರಿಲಾಲ್ ರಾಮ್‌ನ ಮಾಹಿತಿ ಆಧಾರದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಹಾಗೂ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವೈದ್ಯರಾದ ಡಾ. ಸಮೀರ್(32), ಮಣಿ‌ಮಾರನ್ ಮುತ್ತು(28)ರನ್ನು ವಶಕ್ಕೆ ಪಡೆಯಲಾಗಿದ್ದು, ವಿದ್ಯಾರ್ಥಿನಿಯರಾದ ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ (26), ಡಾ.ರಿಯಾ ಚಡ್ಡ(22), ಡಾ. ಹೀರಾ ಬಸಿನ್(23), ವಿದ್ಯಾರ್ಥಿಗಳಾದ ಡಾ. ಭಾನು ದಹಿಯಾ (27), ಡಾ.ಕ್ಷಿತಿಜ್ ಗುಪ್ತ (23), ಸ್ಥಳೀಯ ಮಹಮ್ಮದ್ ರವೂಫ್‌ ಅಲಿಯಾಸ್ ಗೌಸ್ (34)ನನ್ನು ಬಂಧಿಸಲಾಗಿದೆ. ಇದೇ ವೇಳೆ ಆರೋಪಿಗಳ ಬಳಿಯಿದ್ದ 2 ಕೆ.ಜಿ‌ ಗಾಂಜಾ, ಒಂದು ನಕಲಿ ಪಿಸ್ತೂಲ್, ಡ್ರಾಗರ್ ವಶಕ್ಕೆ ಪಡೆಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k