Tag: doctor

  • ಪತ್ನಿ ಇರುವಾಗಲೇ 2ನೇ ಮದ್ವೆಯಾಗಿ ಮೋಸ ಮಾಡ್ದ ಡಾಕ್ಟರ್!

    ಪತ್ನಿ ಇರುವಾಗಲೇ 2ನೇ ಮದ್ವೆಯಾಗಿ ಮೋಸ ಮಾಡ್ದ ಡಾಕ್ಟರ್!

    ಧಾರವಾಡ: ವೈದ್ಯನೊಬ್ಬ ಮೊದಲನೇ ಹೆಂಡತಿ ಇರುವಾಗಲೇ ಎರಡನೇ ಮದುವೆ ಆಗಿ ಎರಡನೇ ಹೆಂಡತಿಗೆ ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಬಸವನಗರ ಬಡಾವಣೆಯ ನಿವಾಸಿಯಾಗಿರುವ ಸಂತೋಷ್ ವಲಾಂಡಿಕರ್ ಎಂಬ ವೈದ್ಯ ಕಳೆದ ಮೇ ತಿಂಗಳಿನಲ್ಲಿ ವಿಜಯಪುರದಲ್ಲಿ ಸುಶೀಲಾ (ಹೆಸರು ಬದಲಿಸಲಾಗಿದೆ) ಎಂಬವರನ್ನು ಮದುವೆಯಾಗಿದ್ದನು. ಮದುವೆಯಾದ ಬಳಿಕ ಸುಶೀಲಾಳನ್ನ ಧಾರವಾಡಕ್ಕೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಇರಿಸಿದ್ದರು.

    ಎರಡು ತಿಂಗಳ ಕಾಲ ಮನೆಯಲ್ಲಿಯೇ ಇರಿಸಿದ್ದ ಸಂತೋಷ್ ನಾಗರಪಂಚಮಿ ಹಬ್ಬಕ್ಕೆಂದು ಸುಶೀಲಾ ಅವರ ತವರೂರಾದ ವಿಜಯಪುರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದನು. ನಂತರ ಮೂರು ತಿಂಗಳು ಕಳೆದರೂ ಸುಶೀಲಾ ಅವರನ್ನು ಕರೆದುಕೊಂಡು ಹೋಗಲು ಸಂತೋಷ್ ಬರಲಿಲ್ಲ. ಹೀಗೆ ದಿನನಿತ್ಯ ಕರೆ ಮಾಡುತ್ತಿದ್ದ ಸುಶೀಲಾ ದೂರವಾಣಿ ಕರೆಯನ್ನು ಸಂತೋಷ್ ಅವರ ಮೊದಲ ಹೆಂಡತಿ ರಿಸೀವ್ ಮಾಡಿದಾಗ ಸುಶೀಲಾ ಅವರಿಗೆ ಮೊದಲ ಮದುವೆ ಬಗ್ಗೆ ಗೊತ್ತಾಗಿದೆ.

    ಮೊದಲ ಮದುವೆ ಆಗಿರುವ ಆಘಾತಕಾರಿ ವಿಷಯ ತಿಳಿದು ಸುಶೀಲಾ ಧಾರವಾಡಕ್ಕೆ ಅವರ ಸಂಬಂಧಿಕರೊಂದಿಗೆ ಬಂದು ವಿಚಾರಿಸಿದಾಗ ಸುಶೀಲಾ ಅವರನ್ನು ಕಂಡು ಡಾ. ಸಂತೋಷ್ ಓಡಿ ಹೋಗಿದ್ದಾರೆ. ಇನ್ನು ಮೊದಲ ಹೆಂಡತಿ ಪೋನ್ ರಿಸೀವ್ ಮಾಡಿ ಮೊದಲು ಮದುವೆಯಾಗಿರುವ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ಆದರೆ ಸುಶೀಲಾ ಅವರಿಗೆ ಮೊದಲನೇ ಮದುವೆ ಆಗಿರುವ ಬಗ್ಗೆ ಮಾಹಿತಿ ನೀಡದ ಸಂತೋಷ್ ವಲಾಂಡಿಕರ್ ಸುಶೀಲಾ ಅವರನ್ನ ಮನೆಯಲ್ಲಿಯೇ ಕೂಡಿ ಹಾಕಿ ಹೊರಗೆ ಬಿಡದೇ ಕಿರುಕುಳ ನೀಡಿದ್ದಾರೆ ಎಂದು ಸುಶೀಲಾ ಆರೋಪ ಮಾಡಿದ್ದಾರೆ.

    ವಲಾಂಡಿಕರ್ ಹೋಮಿಯೋಪತಿ ಆಸ್ಪತ್ರೆ ಜೊತೆಗೆ ಎರಡೆರಡು ಸಂಸಾರ ನಡೆಸಿಕೊಂಡು ಹೋಗುತ್ತಿದ್ದು ಮೊದಲ ಹೆಂಡತಿ ಮಾಹಿತಿ ನೀಡಿರೋದ್ರಿಂದ ಸಿಕ್ಕಿಬಿದ್ದಿದ್ದಾನೆ. ಇನ್ನು ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದರೆ ಸುಶೀಲಾ ಅವರ ದೂರು ದಾಖಲಿಸಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ನ್ಯಾಯಕ್ಕಾಗಿ ಸುಶೀಲಾ ಮತ್ತು ಅವರ ಸಂಬಂಧಿಕರು ಮಾಧ್ಯಮದ ಮೊರೆ ಹೋಗಿದ್ದಾರೆ.

  • ಹಾವೇರಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2 ವರ್ಷದ ಕಂದಮ್ಮ ಸಾವು

    ಹಾವೇರಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2 ವರ್ಷದ ಕಂದಮ್ಮ ಸಾವು

    ಹಾವೇರಿ: ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದ ಕಾರಣ ಮಗುವೊಂದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟ ಘಟನೆ ನಡೆದಿದೆ.

    ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿಯ 2 ವರ್ಷದ ಮಗು ಕರುಣ್ ಉಪ್ಪೇನಮಾಳೇರ ಮೃತ ಮಗು. ಕಂದಮ್ಮಗೆ 15 ದಿನಗಳ ಹಿಂದೆ ನಾಯಿ ಕಚ್ಚಿತ್ತು. ಆದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದ ಕಾರಣ ಸರಿಯಾಗಿ ಚಿಕಿತ್ಸೆ ಸಿಕ್ಕಿಲ್ಲ. ಹೀಗಾಗಿ ಭಾನುವಾರ ಮಣಿಪಾಲದ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ.

    ಇದ್ರಿಂದ ರೊಚ್ಚಿಗೆದ್ದ ಸಂಬಂಧಿಗಳು ಹಾಗೂ ಗ್ರಾಮಸ್ಥರು ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿದ್ರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿದಿದ್ರೆ ಮಗು ಉಳೀತಿತ್ತು. ಈಗಾಲಾದ್ರೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂಬಿಬಿಎಸ್ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ ಇವತ್ತು ರಟ್ಟಿಹಳ್ಳಿ ಬಂದ್ ನಡೀತಿದೆ.

     

  • ಪ್ರಧಾನಿಗೆ ಪತ್ರ ಬರೆದು ಸಾರಿಗೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ವೈದ್ಯ!

    ಪ್ರಧಾನಿಗೆ ಪತ್ರ ಬರೆದು ಸಾರಿಗೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ವೈದ್ಯ!

    ಶಿವಮೊಗ್ಗ: ಜಿಲ್ಲೆಯಿಂದ ವೈದ್ಯರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಸಾರಿಗೆ ಇಲಾಖೆ ಅಧಿಕಾರಿಗಳ ಮೈ ಚಳಿ ಬಿಟ್ಟು ಕೆಲಸಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಕೇಂದ್ರ ಸರ್ಕಾರದ ಜೆನರ್ಮ್ ಯೋಜನೆಯಡಿ ಶಿವಮೊಗ್ಗಕ್ಕೆ ನಗರ ಸಂಚಾರಕ್ಕೆ ನೂರು ಬಸ್ ಗಳು ಮಂಜೂರು ಆಗಿದ್ದವು. ಆದರೆ ಸರ್ಕಾರಿ ಜಾಗದಲ್ಲಿ ಡಿಪೋ ಸ್ಥಾಪನೆ ಮಾಡಬೇಕಿದ್ದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದರು.

    ಈ ಜಾಗ ಬೇರೆಯವರ ಪಾಲಾಗುವ ಸಾಧ್ಯತೆ ಕೂಡಾ ಇತ್ತು. ಇದನ್ನು ಮನಗಂಡ ಶಿವಮೊಗ್ಗದ ವೈದ್ಯ ಡಾ.ರವೀಂದ್ರ ನೇರವಾಗಿ ಮೋದಿ ಅವರ ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಿ ಕಚೇರಿಯ ಅಧಿಕಾರಿಗಳು ರಾಜ್ಯ ಸಾರಿಗೆ ಇಲಾಖೆಗೆ ಕಟ್ಟು ನಿಟ್ಟಿನ ಪತ್ರ ಬರೆದಿದ್ದರು. ಸಾರಿಗೆ ಇಲಾಖೆಗೆ ಈ ಪತ್ರ ಬಂದ ಬಳಿಕ ಡಿಪೋ ನಿರ್ಮಾಣ ಕಾರ್ಯ ಚುರುಕಾಗಿ ನಡೆಯುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ.

    ಇಲ್ಲಿ ಹೆಚ್ಚಾಗಿ ಖಾಸಗಿ ಬಸ್ ಗಳೇ ಓಡಾಡುತ್ತಿದ್ದವು. ನನ್ನ ಪತ್ರಕ್ಕೆ ಪ್ರಧಾನಿ ಕಚೇರಿ ಪ್ರತಿಕ್ರಿಯಿಸಿದ್ದು, ಉಚಿತವಾಗಿ ಭೂಮಿ ನೀಡುವುದಾಗಿ ತಿಳಿಸಿದ್ದರು. ನಮ್ಮ ದೇಶದಲ್ಲಿ ಈ ತರ ಸಿಸ್ಟಮ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತೆ ಅಂತ ನನಗೆ ಅಚ್ಚರಿಯೇ ಆಗಿದೆ ಅಂತ ವೈದ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

  • ಕೊಪ್ಪದಲ್ಲಿ ವಿಚಿತ್ರ ಮಗು ಜನನ

    ಕೊಪ್ಪದಲ್ಲಿ ವಿಚಿತ್ರ ಮಗು ಜನನ

    ಚಿಕ್ಕಮಗಳೂರು: ಕೊಪ್ಪದ ಖಾಸಗಿ ಆಸ್ಪತ್ರೆಯಲ್ಲೊಂದು ವಿಚಿತ್ರ ಮಗು ಜನಿಸಿದೆ.

    ಲಕ್ಷ್ಮೀ ಎಂಬವರು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಅಸಹಜ ದೇಹ ಬೆಳವಣಿಗೆ ಪೋಷಕರಲ್ಲಿ ಆತಂಕ ಮೂಡಿಸಿದೆ.

    ಈ ಮಗುವಿನ ತಲೆಯಿಂದ ಹೊರಗೆ ಮೆದುಳು ಬೆಳವಣಿಗೆಯಾಗಿದೆ. ಅಸಹಜ ಮಗುವಿನ ಬೆಳವಣಿಗೆ ಕಂಡು ವೈದ್ಯರು ಆಶ್ಚರ್ಯ ಪಟ್ಟಿದ್ದಾರೆ. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರ ಹಿಂದೇಟು ಮಾಡಿದರಿದ್ದ ಮಗು ಸಾವನ್ನಪ್ಪಿದೆ.

  • ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯನನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ!

    ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯನನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ!

    ಕೆನ್ಸಾಸ್: ಭಾರತೀಯ ಮೂಲದ ವೈದ್ಯರೊಬ್ಬರನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.

    ಮೃತ ದುರ್ದೈವಿ ವೈದ್ಯರನ್ನು 57 ವರ್ಷದ ಅಚ್ಚುತ್ ರೆಡ್ಡಿ ಎಂಬುವುದಾಗಿ ಗುರುತಿಸಲಾಗಿದ್ದು, ಇವರು ತೆಲಂಗಾಣದವರು ಎನ್ನಲಾಗಿದೆ. ಅಮೆರಿಕದ ಕೆನ್ಸಾಸ್ ನಗರದಲ್ಲಿರೋ ತನ್ನ ಕ್ಲಿನಿಕ್ ನಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.

    ಹತ್ಯೆ ಮಾಡಿದ ವ್ಯಕ್ತಿಯನ್ನು ಉಮರ್ ರಷೀದ್ ದತ್ ಎಂದು ಗುರುತಿಸಲಾಗಿದೆ ಅಂತ ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

    ಆರೋಪಿ ಸಿಕ್ಕಿದ್ದು ಹೇಗೆ?: ಕಾರ್ ಪಾರ್ಕಿಂಗ್ ಮಾಡೋ ಜಾಗದಲ್ಲಿ ರಕ್ತದ ಕಲೆಗಳಿರುವ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಕಾರಿನೊಳಗೆ ಕುಳಿತಿರುವುದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

    ಅಚ್ಯುತ್ ವಿಚಿಟಾದಲ್ಲಿ ಕ್ಲಿನಿಕ್ ನಡೆಸುತ್ತಿದ್ದು, ಇದೇ ಕ್ಲಿನಿಕ್ ನಲ್ಲಿ ಆರೋಪಿ ರಷೀದ್ ಮತ್ತು ವೈದ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿ ರಷೀದ್ ವೈದ್ಯರನ್ನು ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹತ್ಯೆ ಮಾಡಿದ್ದ ವ್ಯಕ್ತಿ ಅಚ್ಯುತ್ ಅವರ ರೋಗಿಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಅಚ್ಯುತ್ ಅವರು ನಲಗೊಂಡ ಜಿಲ್ಲೆಯವರಾಗಿದ್ದು, 1986ರಲ್ಲಿ ಉಸ್ಮಾನಿಯಾ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಅಮೆರಿಕಾಗೆ ತೆರಳಿ ಅಲ್ಲಿಯೇ ನೆಲೆಯೂರಿದ್ದರು. ವಿಚಿಟಾದಲ್ಲಿನ ಕಾನ್ಸಾಸ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯದಲ್ಲಿ ಮನೋವೈದ್ಯ ಶಾಸ್ತ್ರವನ್ನು ಅಚ್ಯುತ್ ಪೂರ್ಣಗೊಳಿಸಿದ್ದರು. ಇವರ ತಂದೆ ಬೆಂಗಳೂರಿನವರಾಗಿದ್ದು, ತಾಯಿ ಹೈದರಾಬಾದ್ ಮೂಲದವರಾಗಿದ್ದಾರೆ. ಅಚ್ಚುತ್ ಪತ್ನಿ ಬೀನಾ ರೆಡ್ಡಿ ಕೂಡ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

    ಇದೇ ರೀತಿ ಕೆಲ ತಿಂಗಳ ಹಿಂದೆ ಕೂಡ ಹೈದರಾಬಾದ್ ಮೂಲಕ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಕಾನ್ಸಾಸ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

  • ಸರ್ಕಾರಿ ಆಂಬುಲೆನ್ಸ್ ನಲ್ಲಿ ಮನೆ ಸಾಮಾಗ್ರಿ ಸಾಗಿಸಿದ ವೈದ್ಯ!

    ಸರ್ಕಾರಿ ಆಂಬುಲೆನ್ಸ್ ನಲ್ಲಿ ಮನೆ ಸಾಮಾಗ್ರಿ ಸಾಗಿಸಿದ ವೈದ್ಯ!

    ವಿಜಯಪುರ: ಸರ್ಕಾರಿ ಆಂಬುಲೆನ್ಸ್ ನಲ್ಲಿ ವೈದ್ಯ ತನ್ನ ಮನೆ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಸಾರ್ಜಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರವಿ ಕಟ್ಟಿಮನಿ ಎಂಬಾತ ವಿಜಯಪುರದಿಂದ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ನಲ್ಲಿ ತನ್ನ ಮನೆಯ ಸಾಗ್ರಿಗಳನ್ನು ಕೊಂಡೊಯ್ಯುತ್ತಿದ್ದ. ಈ ವೇಳೆ ವಿಜಯಪುರದ ಹೊರವಲಯದಲ್ಲಿ ಸಾರ್ವಜನಿಕರ ಕೈಗೆ ವೈದ್ಯ ಮತ್ತು ಆಂಬುಲೆನ್ಸ್ ಚಾಲಕ ಸಿಕ್ಕಿ ಬಿದ್ದಿದ್ದಾರೆ.

    ಆಂಬುಲೆನ್ಸ್ ನಲ್ಲಿ ಮನೆಯ ಸಾಮಗ್ರಿಗಳನ್ನು ನೋಡಿ ಜನರು ವೈದ್ಯನಿಗೆ ಛೀಮಾರಿ ಹಾಕಿದರು.

    https://youtu.be/eVyBwDKejJI

  • ಚೆನ್ನಾಗಿದ್ರೂ ಏಡ್ಸ್ ಬಂದಿದೆ ಅಂತಾನೆ, ನರ್ಸ್ ಗೆ ಬಿಪಿ ಚೆಕ್ ಮಾಡ್ಬೇಕು ಏಪ್ರಾನ್ ಬಿಚ್ಚು ಅಂತಾನೆ- ಚಿಕ್ಕಮಗಳೂರಲ್ಲಿ ಮೆಂಟಲ್ ಡಾಕ್ಟರ್

    ಚೆನ್ನಾಗಿದ್ರೂ ಏಡ್ಸ್ ಬಂದಿದೆ ಅಂತಾನೆ, ನರ್ಸ್ ಗೆ ಬಿಪಿ ಚೆಕ್ ಮಾಡ್ಬೇಕು ಏಪ್ರಾನ್ ಬಿಚ್ಚು ಅಂತಾನೆ- ಚಿಕ್ಕಮಗಳೂರಲ್ಲಿ ಮೆಂಟಲ್ ಡಾಕ್ಟರ್

    ಚಿಕ್ಕಮಗಳೂರು: ರಕ್ತ ಟೆಸ್ಟ್ ಮಾಡ್ತೀನಿ ಅಂತ ಸೂಜಿಯಲ್ಲಿ ಮುಖಕ್ಕೆ ಚುಚ್ತಾನೆ. ನಿಮಗೆ ಏಡ್ಸ್ ಇದೆ ಅಂತಾನೆ. ನರ್ಸ್‍ಗೆ ನಿನ್ನ ಏಪ್ರಾನ್ ಬಿಚ್ಚು, ಬಿಪಿ ಟೆಸ್ಟ್ ಮಾಡ್ಬೇಕು ಅಂತಾ ಎಳೆದಾಡ್ತಾನೆ. ರಾತ್ರಿ ಆಸ್ಪತ್ರೆಗೆ ಬರೋ ರೋಗಿಗಳಿಂದ ಒಂದೊಂದು ಬಾಟಲಿ ರಕ್ತ ತೆಗೆದುಕೊಳ್ಳಿ ಎಂದು ಶೂಶ್ರುಕಿಯರಿಗೆ ಸೂಚಿಸ್ತಾನೆ. ಹೌದು ಚಿಕ್ಕಮಗಳೂರನಲ್ಲಿ ಇಂತಹ ಮೆಂಟಲ್ ಡಾಕ್ಟರ್‍ವೊಬ್ಬ ಇದ್ದಾನೆ.

    ಆತನ ಹೆಸರು ವೀರೇಶ್ ವೈ ನರೇಗಲ್. ಎಂಬಿಬಿಎಸ್, ಡಿ ಆರ್ಥೋ ಅಂಡ್ ಎಂಎಸ್ ಆರ್ಥೋ ಓದಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್. 35 ವರ್ಷ ಸರ್ವೀಸ್ ಇರೋ ಈತ ಇಲ್ಲಿಗೆ ಬಂದು ವರ್ಷವಾಗಿದೆ. ಸುಸ್ತು, ಜ್ವರ ಅಂತ ಆಸ್ಪತ್ರೆಗೆ ಬಂದ ರೋಗಿಗೆ ಯಾವುದೇ ರೀತಿಯ ಬ್ಲಡ್ ಟೆಸ್ಟ್ ಮಾಡ್ದೆ ನಿನಗೆ ಏಡ್ಸ್ ಇದೆ. ಬೆಂಗಳೂರು ಅಥವಾ ಮಂಗಳೂರಿಗೆ ಹೋಗಿ ಅಂತ ರೆಫರ್ ಮಾಡಿದ್ದಾನೆ. ಹೀಗಾಗಿ ರೋಗಿ ಭಯ ಬಿದ್ದು ಬ್ಲಡ್ ಟೆಸ್ಟ್ ಮಾಡಿಸಿದ್ರೆ ಯಾವ ಏಡ್ಸ್ ಕೂಡ ಇರಲಿಲ್ಲ.

    ಇನ್ನೊಂದು ಕೇಸ್ ನೋಡೋದಾದ್ರೆ ಕಾಲು ನೋವು ಅಂತಾ ವಯೋವೃದ್ಧೆಯೊಬ್ಬರು ಬಂದ್ರೆ ರಕ್ತ ಟೆಸ್ಟ್ ಮಾಡ್ತೀನಿ ಅಂತಾ ಸೂಜಿ ತಗೊಂಡು ಮೂಗು, ಮುಖ, ಹಣೆಗೆಲ್ಲಾ ರಕ್ತ ಬರುವಂತೆ ಚುಚ್ಚಿದ್ದಾನೆ. ಡ್ಯೂಟಿ ಮಾಡ್ತಿದ್ದ ಸಿಸ್ಟರ್ ಬಳಿ ಬಂದು ನಿನ್ನ ಏಪ್ರೋನ್ ಬಿಚ್ಚು, ನಿನಗೆ ಬಿಪಿ ಚೆಕ್ ಮಾಡ್ಬೇಕು ಅಂತ ಹಿಂಸೆ ನೀಡಿದ್ದಾನೆ.

    ಈ ಡಾಕ್ಟರ್‍ನ ಇನ್ನಷ್ಟು ಪುರಾಣ ನೋಡೋದಾದ್ರೆ, ಹೆರಿಗೆಯಾದ ಮಹಿಳೆಗೆ ಯಾವ್ಯಾವುದೋ ಔಷಧಿ ಕೊಡ್ತಾನೆ. ನೈಟ್ ಡ್ಯೂಟಿ ಮಾಡೋ ಡಿ ದರ್ಜೆ ನೌಕರರ ಮೇಲೆ ಕಾರಣವಿಲ್ಲದೆ ಕಂಪ್ಲೆಂಟ್ ಕೊಡ್ತಾನೆ. ಹೀಗಾಗಿ ಡಾಕ್ಟರ್ ಮೇಲೆ ನರ್ಸ್‍ಗಳೇ ದೂರು ನೀಡಿದ್ದಾರೆ.

    ಒಟ್ನಲ್ಲಿ ಈ ವೈದ್ಯನ ಹುಚ್ಚಾಟಕ್ಕೆ ಆಸ್ಪತ್ರೆಯ ಸಿಬ್ಬಂದಿಗಳೇ ಬೆಚ್ಚಿ ಬಿದ್ದಿದ್ದಾರೆ.

     

  • ವೈದ್ಯರ ಎಡವಟ್ಟಿನಿಂದಾಗಿ ಕೊಪ್ಪಳದಲ್ಲಿ 8 ರ ಬಾಲಕಿ ಕೈ ಕಳೆದುಕೊಂಡ್ಳು!

    ವೈದ್ಯರ ಎಡವಟ್ಟಿನಿಂದಾಗಿ ಕೊಪ್ಪಳದಲ್ಲಿ 8 ರ ಬಾಲಕಿ ಕೈ ಕಳೆದುಕೊಂಡ್ಳು!

    ಕೊಪ್ಪಳ: ವೈದ್ಯೋ ನಾರಾಯಣೋ ಹರಿ ಅಂತಾರೆ. ಈ ಕಾರಣಕ್ಕಾಗಿಯೇ ರೋಗಿಗಳು ತಮ್ಮಲ್ಲಿನ ಎಲ್ಲ ನೋವನ್ನು ಡಾಕ್ಟರ್ ಮುಂದೆ ಹೇಳಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ವೈದ್ಯ ಮೊಣಕೈ ಮುರಿದುಕೊಂಡಿದ್ದ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡೋದಾಗಿ ಕೈ ಕತ್ತರಿಸಿ, ಅರ್ಧಕ್ಕೆ ಬಿಟ್ಟಿದ್ದಾರೆ. ಇದ್ರಿಂದ ಬಾಲಕಿ ಪಾಲಕರು ದಿಕ್ಕುತೋಚದಂತಾಗಿದ್ದು, ಕಣ್ಣೀರಿಡ್ತಿದ್ದಾರೆ.

    ಹೌದು. ಗಂಗಾವತಿ ತಾಲೂಕಿನ ಬಸವರಾಜ ಹಾಗೂ ಅಂಬಮ್ಮ ದಂಪತಿಯ 8 ವರ್ಷದ ಪುತ್ರಿ ಅಂಕಿತಾ ಕಳೆದ 21ರಂದು ಮನೆಯಲ್ಲಿ ಬಿದ್ದು ಮೊಣಕೈ ಮುರಿದುಕೊಂಡಿದ್ದಳು. ಬಳಿಕ ಪೋಷಕರು ಅಂಕಿತಾಳನ್ನ ಕೊಪ್ಪಳದ ಜಿಲ್ಲಾಸ್ಪತ್ರೆಗೆ ಸೇರಿಸಿದ್ರು. ವೈದ್ಯರು ಮಾತ್ರ ಎಕ್ಸ್‍ರೇ ಮಾಡಿದ 4 ದಿನಗಳ ಬಳಿಕ ಅಂದ್ರೆ ಗುರುವಾರ ಆಪರೇಷನ್ ಶುರುಮಾಡಿದ್ದಾರೆ. ಆದರೆ ಆಪರೇಷನ್ ಶುರು ಮಾಡಿದಾಗ ಇದು ನನ್ನ ಕೈಲಿ ಆಗಲ್ಲ ಅಂತಾ ಡಾಕ್ಟರ್ ವಿಜಯ ಸಂಕದ ಅವರಿಗೆ ಗೊತ್ತಾಗಿದೆ, ತಕ್ಷಣ ಬ್ಯಾಂಡೇಜ್ ಸುತ್ತಿ, ಬೇರೆ ಆಸ್ಪತ್ರೆಗೆ ಹೋಗಿ ಎಂದು ಕೈತೊಳೆದುಕೊಂಡಿದ್ದಾರೆ. ಇದರಿಂದ ಪೋಷಕರು ಆತಂಕ್ಕೆ ಈಡಾಗಿದ್ದಾರೆ.

    ಆದರೆ ಎಕ್ಸರೇಯಲ್ಲಿ ಎಲ್ಲ ಸಮಸ್ಯೆ ಗೊತ್ತಾಗಲ್ಲ. ಆಪರೇಷನ್ ಶುರುಮಾಡಿದಾಗ ಗೊತ್ತಾಯ್ತು. ಅದಕ್ಕೆ ಬೇರೆ ಕಡೆಗೆ ರೆಫರ್ ಮಾಡಿದ್ದೇನೆ ಅಂತ ಇದೀಗ ವೈದ್ಯ ಡಾ. ವಿಜಯ ಸುಂಕದ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ನಾಲ್ಕೈದು ದಿನ ಆದ್ಮೇಲೆ ಡಾಕ್ಟರ್ ಹೀಗೆ ಮಾಡಿರುವುದರಿಂದ ಇದೀಗ ಬಡ ಕುಟುಂಬಕ್ಕೆ ದಿಕ್ಕುತೋಚದಂತಾಗಿದೆ.

  • ಕತ್ತು ಸೀಳಿದ ಸ್ಥಿತಿಯಲ್ಲಿ 26ರ ವೈದ್ಯರ ಶವ ಆಸ್ಪತ್ರೆಯಲ್ಲಿ ಪತ್ತೆ!

    ಕತ್ತು ಸೀಳಿದ ಸ್ಥಿತಿಯಲ್ಲಿ 26ರ ವೈದ್ಯರ ಶವ ಆಸ್ಪತ್ರೆಯಲ್ಲಿ ಪತ್ತೆ!

    ನವದೆಹಲಿ: ಇಲ್ಲಿನ ಟಿಸ್ ಹಜಾರಿಯಲ್ಲಿರೋ ಆಸ್ಪತ್ರೆಯಲ್ಲಿ 26 ವರ್ಷದ ವೈದ್ಯರೊಬ್ಬರ ಮೃತದೇಹವು ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮೃತ ವೈದ್ಯರನ್ನು ಶಾಶ್ವತ್ ಪಾಂಡೇ ಎಂದು ಗುರುತಿಸಲಾಗಿದೆ. ಇವರು ಅಲಹಾಬಾದ್ ನಿವಾಸಿ. ನಗರದ ಸೇಂಟ್ ಸ್ಟೀಫನ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಆಸ್ಪತ್ರೆಯ ಒಂದು ಕೋಣೆಯಲ್ಲಿ ಶಾಶ್ವತ್ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಸರ್ಜಿಕಲ್ ಬ್ಲೇಡ್ ನಿಂದ ಕತ್ತು ಸೀಳಿದ ಸ್ಥಿತಿಯಲ್ಲಿ ಶವ ಬಿದ್ದಿತ್ತು. ಪ್ರಾಥಮಿಕ ವರದಿ ಪ್ರಕಾರ ಶಾಶ್ವತ್ ಸಹೋದ್ಯೋಗಿಗಳಲ್ಲೇ ಯಾರೋ ಈ ಕೃತ್ಯ ಎಸಗಿರಬಹುದೆಂದು ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.

    ಅಧಿಕಾರಿಗಳು ಹಾಗೂ ಅಪರಾಧ ಪತ್ತೆ ತಂಡ ಸ್ಥಳಕ್ಕೆ ದೌಡಾಯಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

  • ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು: ಕುಟುಂಬಸ್ಥರ ಆಕ್ರೋಶ

    ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು: ಕುಟುಂಬಸ್ಥರ ಆಕ್ರೋಶ

    ಚಿತ್ರದುರ್ಗ: ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ತಾಲೂಕಿನ ತುರುವನೂರು ಗ್ರಾಮದ ಟಿ.ದೇವರಾಜ (45) ಮೃತ ದುರ್ದೈವಿ. ತಡರಾತ್ರಿ ಎದೆನೋವು ಕಾಣಿಸಿಕೊಂಡ ಕೂಡಲೇ ಜಿಲ್ಲಾಸ್ಪತ್ರೆಗೆ ಟಿ.ದೇವರಾಜ್ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೆ ರಾತ್ರಿ 12 ಗಂಟೆಯಿಂದಲೂ ಚಿಕಿತ್ಸೆಗಾಗಿ ಪರದಾಡಿದರೂ ದೇವರಾಜ್‍ಗೆ ಸೂಕ್ತ ಚಿಕಿತ್ಸೆ ಸಿಗಲೇ ಇಲ್ಲ.

    ದೇವರಾಜ್ ಕುಟುಂಬಸ್ಥರು ಚಿಕಿತ್ಸೆಗಾಗಿ ಅಂಗಲಾಚಿದರೂ ಬೆಳಗಿನ ಜಾವ 3 ಗಂಟೆಯವರೆಗೂ ಆಸ್ಪತ್ರೆಯತ್ತ ಯಾವುದೇ ವೈದ್ಯರು ತಿರುಗಿ ನೋಡಲೇ ಇಲ್ಲ. ಪರಿಣಾಮ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ದೇವರಾಜ್ ಮೃತಪಟ್ಟಿದ್ದಾರೆ.

    ದೇವರಾಜ್ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅನ್ನೋದು ಕುಟುಂಬಸ್ಥರ ಆರೋಪ. ಅಲ್ಲದೆ ಸ್ಥಳಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಬರೋವರೆಗೂ ಮೃತ ವ್ಯಕ್ತಿಯ ಶವ ಪಡೆಯಲು ಕುಟುಂಬಸ್ಥರು ಹಾಗೂ ಸಂಬಂಧಿಕರು ನಿರಾಕರಿಸಿದ್ದಾರೆ.