Tag: doctor

  • ಗರ್ಭಿಣಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಸಾಬೀತು – 11 ಲಕ್ಷ ದಂಡ

    ಗರ್ಭಿಣಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಸಾಬೀತು – 11 ಲಕ್ಷ ದಂಡ

    ಹಾಸನ: ಗರ್ಭಿಣಿಯ (Pregnant) ಸಾವಿಗೆ ವೈದ್ಯರ (Doctor) ನಿರ್ಲಕ್ಷ್ಯವೇ ಕಾರಣ ಎಂಬುದು ಸಾಬೀತಾದ ಹಿನ್ನೆಲೆ ಸಕಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಗೆ 11 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಹಾಸನದ (Hassan)ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಪುರುಷೋತ್ತಮ್‌ಗೆ ದಂಡ ವಿಧಿಸಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶ ಹೊರಡಿಸಿದೆ.

    ಘಟನೆಯೇನು?
    ಸಕಲೇಶಪುರ ತಾಲೂಕಿನ ಆನೆಮಹಲ್ ಗ್ರಾಮದ ನಿವಾಸಿ ಹಾಗೂ ಹೆಚ್‌ಎಂ ಮೋಹನ್‌ಕುಮಾರ್ ಅವರ ಪತ್ನಿ ವಿಎಂ ಆಶಾ 2021ರ ಮಾರ್ಚ್ 26ರಂದು ಬೆಳಗ್ಗೆ 11 ಗಂಟೆ ವೇಳೆಗೆ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಹೆರಿಗೆ ಪೂರ್ವ ತಪಾಸಣೆಗಾಗಿ ಬಂದಿದ್ದರು. ಬೆಳಗ್ಗೆ ಬಂದಿದ್ದ ಆಶಾ ಅವರನ್ನು ಡಾ. ಪುರುಷೋತ್ತಮ್ ಸಂಜೆ 4 ಗಂಟೆ ವೇಳೆಗೆ ಬನ್ನಿ ಎಂದು ತಿಳಿಸಿದ್ದರು. 4 ಗಂಟೆಗೆ ಬಂದಾಗ ಆಶಾ ಅವರನ್ನು ಪರೀಕ್ಷಿಸಲಾಗಿದ್ದು, ಸ್ಕ್ಯಾನ್ ವರದಿಯನ್ವಯ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ ಎಂದು ಪುರುಷೋತ್ತಮ್ ತಿಳಿಸಿದ್ದರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಚಾಲನೆ – ಡಿಗ್ರಿ ನಂತರದ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಬನ್ನಿ

    ಇದಕ್ಕೂ ಮೊದಲು ಆಶಾ ಪತಿ ಮೋಹನ್‌ಕುಮಾರ್ ಪತ್ನಿಗೆ ಶಸ್ತ್ರ ಚಿಕಿತ್ಸೆ ಮಾಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದರು. ಆದರೆ ಮೋಹನ್‌ಕುಮಾರ್ ಮನವಿ ತಿರಸ್ಕರಿಸಿ, ಶಸ್ತ್ರಚಿಕಿತ್ಸೆಯನ್ನು ಮಾಡದೇ ಪುರುಷೋತ್ತಮ್ ಕೇವಲ ಇಂಜೆಕ್ಷನ್ ನೀಡಿದ್ದರು. ಅದೇ ದಿನ ರಾತ್ರಿ ಆಶಾ ತೀವ್ರ ಹೊಟ್ಟೆನೋವಿನಿಂದ ನರಳಾಡಿ ಕೋಮಾ ಸ್ಥಿತಿಗೆ ಹೋಗಿದ್ದರು.

    ಮರುದಿನ ಬೆಳಗ್ಗೆ ಆಶಾ ಅವರನ್ನು ಪುರುಷೋತ್ತಮ್ ಬಂದು ಪರೀಕ್ಷಿಸಿದ್ದು, ಆಕೆಯ ಆರೋಗ್ಯದ ಗಂಭೀರತೆ ಅರಿತು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದರು. ಬಳಿಕ ಅಲ್ಲಿ ಆಶಾಳಿಗೆ ಶಸ್ತ್ರಚಿಕಿತ್ಸೆ ಮಾಡಿ, ಮಾಚ್ 29 ರಂದು ಹೆಚ್ಚಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಪತ್ನಿ ಆಶಾ ಸಾವಿಗೆ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪುರುಷೋತ್ತಮ್ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಮೋಹನ್‌ಕುಮಾರ್ ಆರೋಪಿಸಿ, ಪರಿಹಾರಕ್ಕಾಗಿ ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಇದನ್ನೂ ಓದಿ: ಸಿಕ್ಕಿಂ ಹಠಾತ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 53ಕ್ಕೆ ಏರಿಕೆ – 140 ಮಂದಿ ಕಣ್ಮರೆ

    ವಿಚಾರಣೆ ನಡೆಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಸಿ.ಎಂ. ಚಂಚಲ, ಸದಸ್ಯ ಹೆಚ್.ವಿ ಮಹಾದೇವ ಹಾಗೂ ಮಹಿಳಾ ಸದಸ್ಯೆ ಆರ್ ಅನುಪಮ ಒಳಗೊಂಡ ಪೀಠ ಡಾ.ಪುರುಷೋತ್ತಮ್ ಅವರ ವೈದ್ಯಕೀಯ ನಿರ್ಲಕ್ಷ್ಯದಿಂದ ಆಶಾ ಸಾವು ಸಾಬೀತಾಗಿದೆ ಎಂದು ತಿಳಿಸಿದೆ. ಡಾ. ಪುರುಷೋತ್ತಮ್‌ಗೆ ದಂಡ ವಿಧಿಸಿ ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷೆ ಸಿ.ಎಂ ಚಂಚಲ ತೀರ್ಪು ಪ್ರಕಟಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾತ್ರಿಯಿಡೀ ಎಸಿ ಆನ್ ಮಾಡಿ ಮಲಗಿದ ವೈದ್ಯ – ಎರಡು ನವಜಾತ ಶಿಶುಗಳು ಸಾವು

    ರಾತ್ರಿಯಿಡೀ ಎಸಿ ಆನ್ ಮಾಡಿ ಮಲಗಿದ ವೈದ್ಯ – ಎರಡು ನವಜಾತ ಶಿಶುಗಳು ಸಾವು

    ಲಕ್ನೋ: ಖಾಸಗಿ ಕ್ಲಿನಿಕ್‌ನಲ್ಲಿ (Clinic) ವೈದ್ಯ ಹವಾನಿಯಂತ್ರಣವನ್ನು (AC) ರಾತ್ರಿಯಿಡೀ ಆನ್ ಮಾಡಿ ಮಲಗಿದ ಪರಿಣಾಮ ಎರಡು ನವಜಾತ ಶಿಶುಗಳು (Newborn Baby) ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ (Uttar Pradesh) ಶಾಮ್ಲಿ (Shamli) ಜಿಲ್ಲೆಯಲ್ಲಿ ನಡೆದಿದೆ.

    ಕ್ಲಿನಿಕ್‌ನ ಮಾಲೀಕ ಡಾಕ್ಟರ್ (Doctor) ನೀತು, ಚೆನ್ನಾಗಿ ನಿದ್ದೆ ಮಾಡುವ ಸಲುವಾಗಿ ಹವಾನಿಯಂತ್ರಣ (ಎಸಿ) ಆನ್ ಮಾಡಿದ್ದಾನೆ. ತಂಪು ವಾತಾವರಣದಿಂದಾಗಿ ಎರಡು ನವಜಾತ ಶಿಶುಗಳು ಮೃತಪಟ್ಟಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಚಿನ್ನದಂಗಡಿ ಗೋಡೆ ಒಡೆದು 25 ಕೋಟಿ ರೂ. ಮೌಲ್ಯದ ಆಭರಣ ದರೋಡೆ

    ನವಜಾತ ಶಿಶುಗಳು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಜನಿಸಿದ್ದು, ಅದೇ ದಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಕ್ಕಳನ್ನು ಚಿಕಿತ್ಸೆಗೆಂದು ಫೋಟೋಥೆರಪಿ ಘಟಕದಲ್ಲಿ ಇರಿಸಲಾಗಿತ್ತು. ಈ ವೇಳೆ ವೈದ್ಯ ಮಲಗಲೆಂದು ಎಸಿ ಆನ್ ಮಾಡಿದ್ದು, ಮರುದಿನ ಬೆಳಗ್ಗೆ ಕುಟುಂಬಸ್ಥರು ಮಕ್ಕಳನ್ನು ನೋಡಲೆಂದು ಹೋದಾಗ ಎರಡೂ ಶಿಶುಗಳು ಶವವಾಗಿ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 5ನೇ ತರಗತಿ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಆರೋಪ

    ಘಟನೆಗೆ ಸಂಬಂಧಿಸಿದಂತೆ ಮೃತ ಶಿಶುಗಳ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದು, ವೈದ್ಯನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ವೈದ್ಯನ ವಿರುದ್ಧ ಐಪಿಸಿ ಸೆಕ್ಷನ್ 304 ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಎಸ್‌ಹೆಚ್‌ಒ ನೇತ್ರಪಾಲ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿಯ ಕುತ್ತಿಗೆಗೆ 30 ಬಾರಿ ಚುಚ್ಚಿ, ಕಬ್ಬಿಣದ ಬಾಣಲೆಯಲ್ಲಿ ಹೊಡೆದು ಕೊಂದ ಪಾಪಿ ಮಗಳು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಷಲ್ ನುಂಗಿದ್ದ ಬಾಲಕನಿಗೆ ಸರಿಯಾದ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ – ವಿಮ್ಸ್ ವಿರುದ್ಧ ಎಸ್ಪಿಗೆ ದೂರು

    ವಿಷಲ್ ನುಂಗಿದ್ದ ಬಾಲಕನಿಗೆ ಸರಿಯಾದ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ – ವಿಮ್ಸ್ ವಿರುದ್ಧ ಎಸ್ಪಿಗೆ ದೂರು

    ಬಳ್ಳಾರಿ: ಸದಾ ಯಾವುದಾದರೂ ಸುದ್ದಿಯಲ್ಲಿರುವ ವಿಮ್ಸ್ (VIMS) ಆಸ್ಪತ್ರೆ (Hospital), ಬಾಲಕನೊಬ್ಬನಿಗೆ ಚಿಕಿತ್ಸೆಯಲ್ಲಿ ಎಡವಟ್ಟು ಮಾಡಿ ಮತ್ತೊಮ್ಮೆ ಸುದ್ದಿಯಾಗಿದೆ. ವಿಷಲ್ ನುಂಗಿದ್ದ ಬಾಲಕನಿಗೆ ಸರಿಯಾದ ಚಿಕಿತ್ಸೆ ನೀಡದೆ ಹಾಗೇ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಬಾಲಕನ ಪೋಷಕರು ಎಸ್‍ಪಿಗೆ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

    8 ವರ್ಷದ ಬಾಲಕನೊಬ್ಬ ಆಟ ಆಡುವಾಗ ವಿಷಲ್ ನುಂಗಿ ಅಸ್ವಸ್ಥನಾಗಿದ್ದ. ಆತನನ್ನು ಪೋಷಕರು ವಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಎರಡು ತಿಂಗಳ ಬಳಿಕ ಮತ್ತೆ ಮಗುವಿಗೆ ಉಸಿರಾಟದ ಸಮಸ್ಯೆಯಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗಲೂ ಚಿಕಿತ್ಸೆ ಕೊಟ್ಟು ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿ ಕಳುಹಿಸಿದ್ದರು. ಇದನ್ನೂ ಓದಿ: ತಲೆಮರೆಸಿಕೊಂಡಿದ್ದ ಹಾಲಶ್ರೀ ಒಡಿಸ್ಸಾದಲ್ಲಿ ಅರೆಸ್ಟ್

    ಈಗ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ ಬೇರೆಡೆ ಚಿಕಿತ್ಸೆಗೆ ಕರೆದೊಯ್ದಾಗ ಶ್ವಾಸಕೋಶದ ಬಳಿ ವಿಷಲ್ ಸಿಲುಕಿರುವುದು ಬೆಳಕಿಗೆ ಬಂದಿದೆ. ಪದೇ ಪದೇ ಮಗು ಅನಾರೋಗ್ಯಕ್ಕೆ ತುತ್ತಾಗಿ ಐದಾರು ತಿಂಗಳು ಆಸ್ಪತ್ರೆಗೆ ಅಲೆದಾಡಿದ ಬಳಿಕ, ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ತೋರಿಸಿದಾಗ ಮಗುವಿನ ಶ್ವಾಸಕೋಶದ ಬಳಿ ವಿಷಲ್ ಇರುವುದು ಪತ್ತೆಯಾಗಿದೆ. ಕೂಡಲೇ ಚಿಕಿತ್ಸೆ ನೀಡಿ ವೈದ್ಯರು ವಿಷಲ್‍ನ್ನು ಹೊರ ತೆಗೆದಿದ್ದಾರೆ.

    ಬಳಿಕ ವಿಮ್ಸ್ ವೈದ್ಯರ (Doctor) ವಿರುದ್ಧ ಬಾಲಕನ ತಂದೆ ಗವಿಸಿದ್ದಪ್ಪ ಎಸ್ಪಿಗೆ ದೂರು ನೀಡಿದ್ದಾರೆ. ವಿಮ್ಸ್ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇದು ಅಸಂಬದ್ಧ, ಪ್ರೇರಿತ- ಕೆನಡಾ ಆರೋಪ ತಿರಸ್ಕರಿಸಿದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೂಜೆಗೆ ತೆರಳಿದ್ದ ವೈದ್ಯ ಹೇಮಾವತಿ ನದಿಯಲ್ಲಿ ಮುಳುಗಿ ಸಾವು

    ಪೂಜೆಗೆ ತೆರಳಿದ್ದ ವೈದ್ಯ ಹೇಮಾವತಿ ನದಿಯಲ್ಲಿ ಮುಳುಗಿ ಸಾವು

    ಹಾಸನ: ಪೂಜೆಗೆ ತೆರಳಿದ್ದ ವೈದ್ಯರೊಬ್ಬರು (Doctor) ಹೇಮಾವತಿ ನದಿಯ (Hemavati River) ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಖೋನಾಪುರದಲ್ಲಿ ನಡೆದಿದೆ.

    ಮೃತರನ್ನು ಡಾ.ಚಂದ್ರಶೇಖರ್ (31) ಎಂದು ಗುರುತಿಸಲಾಗಿದೆ. ಅವರು ಹೊಳೆನರಸಿಪುರದ (Holenarasipur) ಕೆರಗೋಡಿನಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕರ್ತವ್ಯಕ್ಕೆ ತೆರಳುವ ಮುನ್ನ ಖೋನಾಪುರದ ಐಲ್ಯಾಂಡ್‍ನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಈ ವೇಳೆ ನದಿಗೆ ಸ್ನಾನಕ್ಕೆ ತೆರಳಿದ್ದಾಗ ಈ ಅವಘಡ ನಡೆದಿದೆ. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು

    ಹಲವು ವರ್ಷಗಳಿಂದಲೂ ಚಂದ್ರಶೇಖರ್ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಅದರಂತೆ ಚಂದ್ರಶೇಖರ್ ಶುಕ್ರವಾರ ಸಹ ಪೂಜೆಗೂ ಮುನ್ನ ನದಿಗೆ ಇಳಿದಿದ್ದರು. ಹೇಮಾವತಿ ನದಿ ನೀರು ಸಂಪೂರ್ಣ ಕಡಿಮೆಯಾಗಿದ್ದು, ಆಳ ಅರಿಯದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ರಾತ್ರಿ ಆದರೂ ಮನೆಗೆ ವಾಪಸ್ ಆಗದ ಹಿನ್ನೆಲೆ ಪೋಷಕರು ಚಂದ್ರಶೇಖರ್‌ಗೆ ಕರೆ ಮಾಡಿದ್ದಾರೆ. ಫೋನ್ ರಿಸೀವ್ ಮಾಡದೇ ಇದ್ದಾಗ ಗಾಬರಿಗೊಂಡ ಪೋಷಕರು ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಗೊರೂರು ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು, ಗಸ್ತಿನಲ್ಲಿದ್ದ ಗೊರೂರು ಪೊಲೀಸರು ಒಂದೇ ಸ್ಥಳದಲ್ಲಿ ಕಾರು ನಿಂತಿದ್ದನ್ನು ಗಮನಿಸಿದ್ದರು. ಈ ವೇಳೆ ಹುಡಕಾಟ ನಡೆಸಿದಾಗ ನದಿಯ ದಡದಲ್ಲಿ ಚಂದ್ರಶೇಖರ್ ಬಟ್ಟೆ ಪತ್ತೆಯಾಗಿತ್ತು. ಬಳಿಕ ನದಿಯಲ್ಲಿ ಚಂದ್ರಶೇಖರ್ ಶವ ತೇಲುತ್ತಿರುವುದು ಪತ್ತೆಯಾಗಿತ್ತು.

    ನಂತರ ಪೊಲೀಸರು ಶವವನ್ನು ಹೊರಗೆ ತೆಗೆದಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವರ್ಗಾವಣೆ ಮಾಡಿದರೂ ಜಾಗ ಖಾಲಿ ಮಾಡದ ಮುಕ್ತ ವಿವಿ ಹಣಕಾಸು ಅಧಿಕಾರಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಐಸಿಯು ವೈದ್ಯರ ಕೊರತೆ!

    ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಐಸಿಯು ವೈದ್ಯರ ಕೊರತೆ!

    ಬೆಂಗಳೂರು: ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದುರಾಗಿದೆ. 50 ಐಸಿಯು ಬೆಡ್ (ICU Bed) ಇದ್ದರೂ ವರ್ಕ್ ಆಗ್ತಾ ಇರೋದು ಮಾತ್ರ 20 ಅಷ್ಟೇ. ವೈದ್ಯರ ಕೊರತೆಯಿಂದ ಐಸಿಯು ಚಿಕಿತ್ಸೆ ಕಷ್ಟ ಆಗ್ತಾ ಇದೆ. ವೈದ್ಯರ ಕೊರತೆ ಬಗ್ಗೆ ಆರೋಗ್ಯ ಇಲಾಖೆ ಗಮನಕ್ಕೆ ತರಲಾಗಿದೆ. ವೈದ್ಯರ ಕೊರತೆ ಬಗ್ಗೆ ಸರ್ಕಾರಿ ಆಸ್ಪತ್ರೆ ವೈದ್ಯರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

    ಹೌದು. ಕೆ.ಸಿ ಜನರಲ್ ಆಸ್ಪತ್ರೆಗೆ (K.C General Hospital) ದಿನಕ್ಕೆ ಸಾವಿರಾರು ರೋಗಿಗಳು ಬರುತ್ತಾರೆ. ಬೇರೆ ಬೇರೆ ಖಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರೋದು ಬಯಲಾಗಿದೆ. ಒಟ್ಟು 50 ಐಸಿಯು ಬೆಡ್ ಇದ್ದು ಅದರಲ್ಲಿ 15 ರಿಂದ 20 ಬೆಡ್ ವರ್ಕ್ ಆಗ್ತಿದೆ. ವೆಂಟಿಲೇಟರ್ ಬೆಡ್ ಇರುವ 30 ಬೆಡ್‍ಗಳಲ್ಲಿ ಚಿಕಿತ್ಸೆ ಸರಿಯಾಗಿ ಸಿಗ್ತಿಲ್ಲ ಕಾರಣ ವೈದ್ಯರ ಕೊರತೆ. ಈ ಬಗ್ಗೆ ಆರೋಗ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

    ಐಸಿಯು ಪೇಷೆಂಟ್‍ಗಳ ಸಂಖ್ಯೆ ಹೆಚ್ಚಾದ್ರೆ ಸಿವಿ ರಾಮನ್ ನಗರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡುತ್ತಾರಂತೆ. ಇರುವ ಸಿಬ್ಬಂದಿಯಲ್ಲೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿ ಕೊರತೆ ಇರೋದನ್ನ ಬಹಿರಂಗವಾಗಿ ಒಪ್ಪಿಕೊಳ್ತಿದ್ದು ಸಮಸ್ಯೆ ಶೀಘ್ರದಲ್ಲೇ ಕ್ಲಿಯರ್ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ – ಉದ್ದೇಶ ಒಳ್ಳೆಯದಿದ್ದರೆ ಬೆಂಬಲ ಎಂದ ಪ್ರಶಾಂತ್ ಕಿಶೋರ್

    ಒಟ್ಟಾರೆ ಕೆಸಿ ಜನರಲ್ ಆಸ್ಪತ್ರೆ ಬೆಂಗಳೂರಿನಲ್ಲಿ ಪ್ರಮುಖ ಆಸ್ಪತ್ರೆ. ಸರ್ಕಾರ ಕೂಡಲೇ ಈ ಆಸ್ಪತ್ರೆಯಲ್ಲಿ ಇರುವ ಸಮಸ್ಯೆಗಳನ್ನ ಸರಿಪಡಿಸುತ್ತಾ ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹಿತನನ್ನು ರಕ್ಷಿಸಲು ಹೋಗಿ ವೈದ್ಯ ಸಮುದ್ರಪಾಲು

    ಸ್ನೇಹಿತನನ್ನು ರಕ್ಷಿಸಲು ಹೋಗಿ ವೈದ್ಯ ಸಮುದ್ರಪಾಲು

    ಮಂಗಳೂರು: ಸ್ನೇಹಿತನನ್ನು (Friend Rescue) ರಕ್ಷಿಸಲು ಹೋಗಿ ವೈದ್ಯನೊಬ್ಬ ಸಮುದ್ರಪಾಲಾದ ಘಟನೆ ಭಾನುವಾರ ತಡರಾತ್ರಿ ಉಳ್ಳಾಲದಲ್ಲಿ ನಡೆದಿದೆ.

    ಡಾ.ಆಶೀಕ್ ಗೌಡ (30) ಸಮುದ್ರ ಪಾಲಾದ ವೈದ್ಯ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂಟನ್ರ್ಶಿಪ್ ಮಾಡುತ್ತಿದ್ದ ಐವರು ವೈದ್ಯರ ತಂಡವೊಂದು ತಡರಾತ್ರಿ ಸಮುದ್ರ ವಿಹಾರಕ್ಕೆ ಬಂದಿತ್ತು. ಇದನ್ನೂ ಓದಿ: ಕಾಲುವೆಗೆ ಬಿದ್ದಿದ್ದ ಕುದುರೆ ರಕ್ಷಣೆ ಮಾಡಿದ ಯುವಕ

    ಅಂತೆಯೇ ಇವರು ಸೋಮೇಶ್ವರ ಬೀಚ್ (Someshwara Beach) ನ ರುದ್ರಪಾದೆ ಮೇಲೆರಿದ್ದರು. ಈ ವೇಳೆ ಡಾ.ಪ್ರದೀಪ್ ಎಂಬವರು ಬಂಡೆಯ ಮೇಲಿಂದ ಬಿದ್ದಿದ್ದರು. ಕೆಳಗೆ ಬಂಡೆಯನ್ನ ಹಿಡಿದು ಸಹಾಯಕ್ಕೆ ಯಾಚಿಸಿದ್ರು. ಈ ವೇಳೆ ಪ್ರದೀಪ್ ರಕ್ಷಣೆಗೆ ಡಾ.ಆಶೀಕ್ ಗೌಡ ಪ್ರಯತ್ನಿಸಿದ್ದರು. ಆಗ ಆಶೀಕ್ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ.

    ಇತ್ತ ಪ್ರದೀಪ್ ಕಲ್ಲುಗಳ ಆಸರೆ ಪಡೆದು ಮೇಲೆ ಬಂದಿದ್ದಾರೆ. ಕೂಡಲೇ ಪ್ರದೀಪ್ ಪೊಲೀಸರಿಗೆ ಘಟನೆಯ ಮಾಹಿತಿ ನೀಡಿದ್ದಾರೆ. ಇಂದು ರುದ್ರಪಾದೆಯ ಸಮೀಪದಲ್ಲೇ ಆಶೀಕ್ ಮೃತ ದೇಹ ಪತ್ತೆಯಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಣಂತಿ, ಶಿಶುವಿಗೆ ಚಿಕಿತ್ಸೆ ನಿರ್ಲಕ್ಷ್ಯ – ಪ್ರಶ್ನೆ ಮಾಡಿದ್ದಕ್ಕೆ ರೌಡಿ ರೀತಿ ವರ್ತಿಸಿದ ಜಿಲ್ಲಾಸ್ಪತ್ರೆ ವೈದ್ಯ

    ಬಾಣಂತಿ, ಶಿಶುವಿಗೆ ಚಿಕಿತ್ಸೆ ನಿರ್ಲಕ್ಷ್ಯ – ಪ್ರಶ್ನೆ ಮಾಡಿದ್ದಕ್ಕೆ ರೌಡಿ ರೀತಿ ವರ್ತಿಸಿದ ಜಿಲ್ಲಾಸ್ಪತ್ರೆ ವೈದ್ಯ

    ಗದಗ: ಬಾಣಂತಿ ಹಾಗೂ ನವಜಾತ ಶಿಶುವಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ವೈದ್ಯನೊಬ್ಬ (Doctor) ರೌಡಿಸಂ ರೀತಿ ಅವಾಜ್ ಹಾಕಿರುವ ಘಟನೆ ಗದಗ (Gadag) ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಹೆರಿಗೆ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಗೌತಮ್, ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿಯ ಸಂಬಂಧಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಸೂರಣಗಿ ಗ್ರಾಮದ ಹುಸೇನಬಿ ಹೊಳಲ ಎಂಬವರ ಹೆರಿಗೆಯಾಗಿದೆ. ಮಗು ಕಾಮಾಲೆ, ಅಸ್ತಮಾ ರೋಗದಿಂದ ಬಳಲುತ್ತಿದೆ. ಈ ವೇಳೆ ಸರಿಯಾಗಿ ಚಿಕಿತ್ಸೆ ನೀಡದ್ದಕ್ಕೆ ಪತಿ ಮುಸ್ತಾಕ್ ಅಲಿ ವೈದ್ಯನನ್ನು ಪ್ರಶ್ನೆ ಮಾಡಿದ್ದಾರೆ. ರಾಜಕೀಯ ಮುಖಂಡನಿಗೆ ಫೋನ್ ಮೂಲಕ ಮಾಹಿತಿಯೂ ನೀಡಿದ್ದಕ್ಕೆ, ವೈದ್ಯರು ಹಾಗೂ ಸಿಬ್ಬಂದಿ ಅವರ ಮೇಲೆ ಮತ್ತಷ್ಟು ಕುಪಿತಗೊಂಡಿದ್ದಾರೆ ಎನ್ನಲಾಗಿದೆ.

    ಮುಸ್ತಾಕ್ ಅಲಿ ಮೇಲೆ ವೈದ್ಯ ಗೌತಮ್ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ರೋಗಿಗಳದ್ದಾಗಿದೆ. ಇಲ್ಲಿ ನಾನಾಡಿದ್ದೇ ಆಟ, ನಾನೇ ಡಾಕ್ಟರ್ ನಾ ಹೇಗಿರಬೇಕು ಹಾಗೆ ಇರ್ತೀನಿ ಅದನ್ನು ಹೇಳಕ್ಕೆ ನೀನ್ಯಾರು? ಎಫ್ರಾನ್, ಸ್ಕೆತಸ್ಕೋಪ್ ಹಾಕಿಕೊಂಡ್ರೆ ವೈದ್ಯ, ಕೈಯಲ್ಲಿ ಲಾಂಗ್, ಮಚ್ಚು ಹಿಡಿದ್ರೆ ರೌಡಿ. ಇಲ್ಲಿ ಡಿಸಿ, ಎಸ್‌ಪಿ, ಮೀಡಿಯಾ ಯಾರೇ ಬಂದ್ರೂ ಏನೂ ಮಾಡಿಕೊಳ್ಳೋಕೆ ಆಗಲ್ಲ ಎಂದು ಸಿನಿಮಾ ಡೈಲಾಗ್ ರೀತಿಯಲ್ಲಿ ಅವಾಜ್ ಹಾಕಿದ್ದಾನೆ. ಇದನ್ನೂ ಓದಿ: ಸೊಸೆಯನ್ನು ರಕ್ಷಿಸಲು ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತ್ನಿ!

    ಶರ್ಟ್ ಕಳೆದು ಹೇಗೆ ಬೇಕು ಹಾಗೆ ವರ್ತಿಸುತ್ತಾನೆ. ಏನ್ ಮಾಡ್ಕೋತಿಯ ಮಾಡ್ಕೋ, ಪ್ರೆಸ್ ಮೀಟ್ ಮಾಡುತ್ತೀಯಾ ಫೇಸ್ ಬುಕ್‌ನಲ್ಲಿ ಲೈವ್ ಬಿಡ್ತೀಯಾ ಬಿಟ್ಕೊ, ಬಾ ನನ್ನ ಊರಿಗೆ ಗದಗ ಜಿಲ್ಲೆ ರೋಣ ತಾಲೂಕಿನ ಕುರಹಟ್ಟಿಗೆ ಬಾ ಅಲ್ಲಿ ನೋಡ್ಕೋತೀನಿ. ಇಲ್ಲಿ ನಾನೇ ಬಾಸ್ ಇದು ನನ್ನ ಆಸ್ಪತ್ರೆ ಎಂದು ಹೇಳಿ ತನ್ನ ಶರ್ಟ್ ಬಿಚ್ಚಿ ದರ್ಪ ತೋರಿದ್ದಾನೆ.

    ವೀಡಿಯೋ ಮಾಡಿದ್ರೆ ಹೊಡೆತ ತಿಂತೀಯಾ ಹುಷಾರ್, ಎಷ್ಟು ದಿನ ಅಂತ ಇಲ್ಲೇ ತಿನ್ಕೊಂಡು ಬಿದ್ದಿರ್ತೀರಾ? ಮನೆಗೆ ಹೋಗ್ರಿ, ಇವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ರದ್ದು ಮಾಡಿ. ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಂತೆ ಮಾಡಿ ಎಂದು ಅಲ್ಲಿಯ ಸಿಬ್ಬಂದಿ ಹೇಳಿದ್ದಾನೆ.

    ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತ ದರ್ಪ ತೋರಿದ ವೈದ್ಯನ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಇವನಿಂದ ಆಗುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಲಾಂಛನಕ್ಕೆ ಅಗೌರವ – ಕೊಳಚೆ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿರುವ ಅಶೋಕ ಚಕ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈದ್ಯರ ನಿರ್ಲಕ್ಷ್ಯ ಆರೋಪ- 5 ವರ್ಷದ ಬಾಲಕಿ ಸಾವು

    ವೈದ್ಯರ ನಿರ್ಲಕ್ಷ್ಯ ಆರೋಪ- 5 ವರ್ಷದ ಬಾಲಕಿ ಸಾವು

    ತುಮಕೂರು: ವೈದ್ಯರ (Doctor) ನಿರ್ಲಕ್ಷ್ಯದಿಂದ ಐದು ವರ್ಷದ ಬಾಲಕಿ ಸಾವನ್ನಪ್ಪಿರುವುದಾಗಿ ಪೋಷಕರು ಆರೋಪಿಸಿ ಆಕ್ರೋಶ ಹೊರಹಾಕಿದ ಘಟನೆ ತುಮಕೂರು (Tumakuru) ಜಿಲ್ಲೆ ಗುಬ್ಬಿ (Gubbi) ತಾಲೂಕಿನಲ್ಲಿ ನಡೆದಿದೆ.

    ತನು (5) ಮೃತ ಬಾಲಕಿ. ವೆಂಕಟೇಗೌಡನ ಪಾಳ್ಯದ ನಿವಾಸಿ ಸತೀಶ್ ಹಾಗೂ ಶಿಲ್ಪಾ ದಂಪತಿ ಪುತ್ರಿ ತನುಗೆ ರಾತ್ರಿ ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿದೆ. ಕೂಡಲೇ ಸಿ.ಎಸ್.ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪಾಲಕರು ಕರೆದೊಯ್ದಿದ್ದ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ. ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗಿಲ್ಲ. ನರ್ಸ್ ಮಗುವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ ಹಿನ್ನೆಲೆ ಖಾಸಗಿ ವಾಹನದಲ್ಲಿ ಗುಬ್ಬಿಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯೆ ಬಾಲಕಿ (Girl) ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಪ್ರತಿಭಾ ಕಾರಂಜಿ ಕಾರ್ಯಕ್ರಮ ವೇಳೆ ಪೆಟ್ರೋಲ್ ಬಳಸಿ ಅವಾಂತರ – ವಿದ್ಯಾರ್ಥಿಗೆ ಸುಟ್ಟ ಗಾಯ

    ಸಿ.ಎಸ್.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇದ್ದಿದ್ದರೆ ನಮ್ಮ ಮಗು ಸಾವನ್ನಪ್ಪುತ್ತಿರಲಿಲ್ಲ. ಇದು 24×7 ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ನಮ್ಮ ಮಗು ಸಾವನ್ನಪ್ಪಿದೆ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಮೃತಪಡುತ್ತಿರಲಿಲ್ಲ. ವೈದ್ಯರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ- ಚರ್ಚ್ ಫಾದರ್ ವಿರುದ್ಧ ಎಫ್‍ಐಆರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ

    ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ

    ನವದೆಹಲಿ: ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು (500 rs Fake Note) ಕೊಟ್ಟು ಯಾಮಾರಿಸಿದ ರೋಗಿ ಯಾಮಾರಿಸಿರುವ ಘಟನೆ ನಡೆದಿದೆ. ನಕಲಿ ನೋಟಿನ ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಡಾಕ್ಟರ್‌, ಇದೊಂದು ಫನ್ನಿ ಮೂಮೆಂಟ್‌ ಅಂತ ಬರೆದುಕೊಂಡಿದ್ದಾರೆ.

    ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಡಾ.ಮಾನನ್‌ ವೊರ ಬಳಿ ರೋಗಿಯೊಬ್ಬರು ವೈದ್ಯಕೀಯ ತಪಾಸಣೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಶುಲ್ಕವಾಗಿ 500 ರೂ. ಮುಖಬೆಲೆ ನೋಟನ್ನು ಕೊಟ್ಟಿದ್ದರು. ಆದರೆ ಇದು ನಕಲಿ ನೋಟು ಎಂದು ನಂತರ ವೈದ್ಯರಿಗೆ ಗೊತ್ತಾಗಿದೆ. ಇದನ್ನೂ ಓದಿ: ಹಿಮಾಚಲದಲ್ಲಿ ಭಾರೀ ಮಳೆ – ಕೊಚ್ಚಿ ಹೋಯ್ತು ಕಾರು, ಕುಸಿದು ಬಿದ್ದವು ಅಂಗಡಿಗಳು

    ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನೋಟಿನೊಂದಿಗೆ ಡಾ. ಮಾನನ್‌ ವೊರ ಅವರು ಪೋಸ್ಟ್‌ವೊಂದನ್ನು ಹಾಕಿದ್ದಾರೆ. ವೈದ್ಯಕೀಯ ತಪಾಸಣೆಗೆ ಬಂದಿದ್ದ ರೋಗಿಯೊಬ್ಬರು ನಕಲಿ ನೋಟನ್ನು ಕೊಟ್ಟು ಹೋಗಿದ್ದಾರೆ. ನಮ್ಮ ಸಿಬ್ಬಂದಿ ಕೂಡ ಅದನ್ನು ಸರಿಯಾಗಿ ಗಮನಿಸಿಲ್ಲ. ಕೊನೆಗೆ ಅದು ನನ್ನ ಬಳಿಗೆ ಬಂದಿದೆ. ಈ ನೋಟನ್ನು ನೋಡಿ ನನಗೆ ನಗು ಬಂತು. ಆ ರೋಗಿ ನನ್ನ ಬಳಿ ದರೋಡೆ ಮಾಡಿದ್ದಾರೆ. ಆದರೂ ಇದು ಫನ್ನಿಯಾಗಿದೆ. ಈ ನೆನಪಿಗಾಗಿ ಆ ನೋಟನ್ನು ಇಟ್ಟುಕೊಳ್ಳುತ್ತೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ವೈದ್ಯರ ಈ ಪೋಸ್ಟ್‌ನ್ನು ಅನೇಕರು ಲೈಕ್‌ ಮಾಡಿದ್ದಾರೆ. ಇನ್ನೂ ಕೆಲವು ನೆಟ್ಟಿಗರು ಕಾಮೆಂಟ್‌ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಸ್ತೆಬದಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಡೆಲಿವರಿ ಮಾಡಿಸಿದ ಸರ್ಕಾರಿ ವೈದ್ಯ

    ರಸ್ತೆಬದಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಡೆಲಿವರಿ ಮಾಡಿಸಿದ ಸರ್ಕಾರಿ ವೈದ್ಯ

    ಚಿಕ್ಕಮಗಳೂರು: ರಸ್ತೆ ಬದಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಗೆ ವೈದ್ಯರು ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

    ಮೂಲತಃ ಅಜ್ಜಂಪುರ ತಾಲೂಕಿನ ಗಡಿರಂಗಾಪುರ ಗ್ರಾಮದ ಯಶೋದಾಗೆ 9 ತಿಂಗಳು ತುಂಬಿತ್ತು. ಬಿ ನೆಗೆಟಿವ್ ರಕ್ತದ ಗುಂಪು ಹೊಂದಿರುವ ಯಶೋದಾ ಚಿಕಿತ್ಸೆಗೆಂದು ಶಿವಮೊಗ್ಗ (Shivamogga) ದ ಮೆಗ್ಗಾನ್ ಆಸ್ಪತ್ರೆಗೆ ಹೊರಟಿದ್ದರು. ಆಕೆ ಜೊತೆ ಬೇರೊಬ್ಬ ಮಹಿಳೆ ಕೂಡ ಇದ್ದರು. ಅಜ್ಜಂಪುರದಿಂದ ತರೀಕೆರೆಗೆ ಬಂದು ಶಿವಮೊಗ್ಗ ತೆರಳಲು ಬಸ್ ಕಾಯುವಾಗ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಗ ಸ್ಥಳದಲ್ಲಿದ್ದ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ.

    ಮಹಿಳೆ ಆಸ್ಪತ್ರೆ ಮುಟ್ಟುವ ಮುನ್ನವೇ ಆಸ್ಪತ್ರೆಯ ತುಸು ದೂರದಲ್ಲಿ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ತಾಲೂಕು ವೈದ್ಯಾಧಿಕಾರಿ ಹಾಗೂ ಮೂಳೆ ತಜ್ಞ ಆರ್. ದೇವರಾಜ್ ಆಕೆಯನ್ನ ಆಸ್ಪತ್ರೆಗೆ ಸೇರಿಸಿ ಪ್ರಸೂತಿ ವೈದ್ಯ ನಟರಾಜ್ (Doctor Nataraj) ಅವರನ್ನ ಕರೆಸಿ ಹೆರಿಗೆ ಮಾಡಿಸಿದ್ದು, ಇದೀಗ ತಾಯಿ ಹಾಗೂ ಹೆಣ್ಣು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.  ಇದನ್ನೂ ಓದಿ: ನನ್ನನ್ನು ಎದುರು ಹಾಕೊಂಡು ಯಾರೂ ಗೆಲ್ಲೋಕ್ಕಾಗಲ್ಲ- ಕೆ.ಎನ್.ರಾಜಣ್ಣ ದರ್ಪದ ಮಾತು ವೈರಲ್

    ಯಶೋದಾ ಬಿ ನೆಗೆಟಿವ್ ಸಿಗುವುದು ತುಂಬಾ ಕಡಿಮೆ ಎಂದು ರಕ್ತಕ್ಕಾಗಿಯೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗುತ್ತಿದ್ದರು. ವೈದ್ಯರು ನಿನಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ನಾವಿದ್ದೇವೆ ಎಂದು ಧೈರ್ಯ ತುಂಬಿ ಹೆರಿಗೆ ಮಾಡಿಸಿದ್ದಾರೆ. ಆರಂಭದ ಮೂರು ತಿಂಗಳು ಖಾಸಗಿ ಆಸ್ಪತ್ರೆಗೆ ತೋರಿಸಿದ್ದ ಯಶೋದಾ ಅಲ್ಲಿ ಹೆರಿಗೆಗೆ 30,000 ಹಣ ಕೇಳಿದರು ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗುತ್ತಿದ್ದರು. ಸರ್ಕಾರಿ ಆಸ್ಪತ್ರೆ ವೈದ್ಯರ ಕೆಲಸಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶೋದಾ ಕೂಡ ತರೀಕೆರೆ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]