Tag: doctor

  • ವ್ಯಕ್ತಿಯ ಹೊಟ್ಟೆಯಿಂದ 600ಕ್ಕೂ ಹೆಚ್ಚು ಮೊಳೆ ಹೊರತೆಗೆದ ವೈದ್ಯರು!

    ವ್ಯಕ್ತಿಯ ಹೊಟ್ಟೆಯಿಂದ 600ಕ್ಕೂ ಹೆಚ್ಚು ಮೊಳೆ ಹೊರತೆಗೆದ ವೈದ್ಯರು!

    ಕೊಲ್ಕತ್ತಾ: ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ವೈದ್ಯರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಹೊಟ್ಟೆಯಿಂದ 600 ಕ್ಕೂ ಹೆಚ್ಚು ಕಬ್ಬಿಣದ ಮೊಳೆಗಳನ್ನ ಹೊರತೆಗೆದಿರೋ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

    ರಾಜ್ಯದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಈ ಶಸ್ತ್ರಚಿಕ್ತೆಯನ್ನು ಮಾಡಿ ಯಶಸ್ವಿಯಾಗಿದ್ದು, ಈಗ ರೋಗಿಗೆ ಯಾವುದೇ ತೊಂದರೆ ಇಲ್ಲ, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ರೋಗಿಯ ಕುಟುಂಬಸ್ಥರು ಕಳೆದ ತಿಂಗಳು ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ರೋಗಿಗೆ ಯುಎಸ್‍ಜಿ ಟೆಸ್ಟ್ ಮಾಡಿಸಿದ ನಂತರ ರೋಗಿಯ ಹೊಟ್ಟೆಯಲ್ಲಿ ಬಹಳಷ್ಟು ಮೊಳೆಗಳು ಇರುವುದು ಕಂಡುಬಂದಿತ್ತು.

    ರೋಗಿ ಒಬ್ಬ ಮಾನಸಿಕ ಅಸ್ವಸ್ಥರಾಗಿದ್ದು, ಅನ್ಯ ವಸ್ತುಗಳನ್ನು ನುಂಗುವ ಅಭ್ಯಾಸವನ್ನು ಹೊಂದಿದ್ದರು. ಆದರೆ ಅವರ ಹೊಟ್ಟೆಯಲ್ಲಿ ಬಹಳಷ್ಟು ಮೊಳೆಗಳು ಇರಬಹುದು ಎಂದು ಕಲ್ಪನೆಯನ್ನು ಸಹ ಮಾಡಿರಲಿಲ್ಲ ಎಂದು ರೋಗಿಯ ಸಂಬಂಧಿ ತಿಳಿಸಿದ್ದಾರೆ.

    ಈ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಅಪಾಯಕಾರಿಯಾಗಿತ್ತು. ಆದರೂ ನಾವು ರಿಸ್ಕ್ ತೆಗೆದುಕೊಂಡು ಯಶಸ್ವಿಯಾಗಿ ಆಪರೇಷನ್ ಮಾಡಿದ್ದೇವೆ. ಈಗ ರೋಗಿ ಆರೋಗ್ಯವಾಗಿದ್ದಾರೆ. ಆದರೆ ಅಚ್ಚರಿ ಎಂದರೆ ತುಂಬಾ ದಿನಗಳ ಕಾಲ ಮೊಳೆಗಳು ಹೊಟ್ಟೆಯಲ್ಲಿದ್ದರೂ ಇದರಿಂದ ರೋಗಿಗೆ ಒಂದು ಸಣ್ಣ ಗಾಯವೂ ಆಗಿಲ್ಲ. ಜೊತೆಗೆ ಮೊಳೆಗಳು ಚುಚ್ಚಿಕೊಂಡಿಲ್ಲ ಎಂದು ವೈದ್ಯಕೀಯ ತಂಡದ ನೇತೃತ್ವ ವಹಿಸಿದ ಶಸ್ತ್ರಚಿಕಿತ್ಸಕ ಸಿದ್ಧಾರ್ಥ ಬಿಸ್ವಾಸ್ ಅವರು ಹೇಳಿದ್ದಾರೆ.

    ರೋಗಿಯ ಹೊಟ್ಟೆ ಸಾಮಾನ್ಯಕ್ಕಿಂತ ದೊಡ್ಡದಾಗಿತ್ತು. ಅದರ ತುಂಬಾ ಬರಿ ಮೊಳೆಗಳೇ ತುಂಬಿದ್ದವು. ನಾವು ಆಪರೇಷನ್ ಮಾಡುವಾಗ ಅವರ ಹೊಟ್ಟೆಯ ಒಂದು ಭಾಗದಲ್ಲಿ ಕುಯ್ದು ಒಂದು ಮ್ಯಾಗ್ನೆಟ್ ಬಳಸಿಕೊಂಡು ಒಂದೊಂದೇ ಮೊಳೆಗಳನ್ನು ಹೊರತೆಗೆದೆವು. ಒಟ್ಟಾರೆ 600 ಮೊಳೆಗಳಿದ್ದವು. ರೋಗಿ ನುಂಗಿದ್ದ ಎಲ್ಲಾ ಮೊಳೆಗಳನ್ನು ಹೊರತೆಗೆದಿದ್ದೇವೆ ಎಂದು ಡಾ.ಸಿದ್ಧಾರ್ಥ ಅವರು ಖಚಿತಪಡಿಸಿದ್ದಾರೆ.

     

     

  • ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು- ಒದ್ದಾಡುತ್ತಿದ್ರೂ ವಾರ್ಡ್‍ಗೆ ವೈದ್ಯರು ಬರ್ಲಿಲ್ಲವೆಂದು ಕುಟುಂಬಸ್ಥರ ಆಕ್ರೋಶ

    ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು- ಒದ್ದಾಡುತ್ತಿದ್ರೂ ವಾರ್ಡ್‍ಗೆ ವೈದ್ಯರು ಬರ್ಲಿಲ್ಲವೆಂದು ಕುಟುಂಬಸ್ಥರ ಆಕ್ರೋಶ

    ಧಾರವಾಡ: ವೈದ್ಯರ ನಿರ್ಲಕ್ಷದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಧಾರವಾಡ ತಾಲೂಕಿನ ಜೋಡಳ್ಳಿ ಗ್ರಾಮದ ನಿವಾಸಿಯಾಗಿದ್ದ ಸೋಮಶೇಖರ ಹಡಪದ (42) ಮೃತ ದುರ್ದೈವಿ. ಮೂರು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗಿನ ಜಾವ 6 ಗಂಟೆ ಸುಮಾರಿಗೆ ತೀವ್ರ ಅನಾರೋಗ್ಯಕ್ಕೆ ಒಳಗಾದ ಸೋಮಶೇಖರ ಅವರು ಒದ್ದಾಡಿ ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ರೋಗಿಯ ಸ್ಥಿತಿಯ ಕುರಿತು ವೈದ್ಯರಿಗೆ ಮಾಹಿತಿ ನೀಡಿದರೂ ವೈದ್ಯರು ವಾರ್ಡ್‍ಗೆ ಬಂದು ಚಿಕಿತ್ಸೆ ನೀಡಿಲ್ಲ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಸ್ಪತ್ರೆ ವೈದ್ಯರಾದ ನಾಡಗೌಡ, ಮೃತ ವ್ಯಕ್ತಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಮದ್ಯಪಾನ ಮಾಡದಂತೆ ಸೂಚಿಸಿದ್ದೆವು. ಆದರೆ ಅವರು ನಿರಂತರ ಮದ್ಯಪಾನ ಮಾಡುತ್ತಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

    ಆಸ್ಪತ್ರೆಯ ಇತರೆ ರೋಗಿಗಳು ವೈದ್ಯರ ನಿರ್ಲಕ್ಷದಿಂದಲೇ ಸಾವು ಸಂಭವಿಸಿದೆ ಎಂದಿದ್ದು, ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿ ಯಾವುದೇ ಚಿಕಿತ್ಸೆಯನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

  • ವೈದ್ಯನ ಎಡವಟ್ಟಿನಿಂದ ಯುವಕನ ಪ್ರಾಣಕ್ಕೆ ಕುತ್ತು – ಇಂಜೆಕ್ಷನ್ ನೀಡಿದ ಜಾಗ ಕೊಳೆತೇ ಹೋಯ್ತು

    ವೈದ್ಯನ ಎಡವಟ್ಟಿನಿಂದ ಯುವಕನ ಪ್ರಾಣಕ್ಕೆ ಕುತ್ತು – ಇಂಜೆಕ್ಷನ್ ನೀಡಿದ ಜಾಗ ಕೊಳೆತೇ ಹೋಯ್ತು

    ವಿಜಯಪುರ: ವೈದ್ಯನ ಎಡವಟ್ಟಿಗೆ ಯುವಕನ ಜೀವಕ್ಕೆ ಕುತ್ತು ಬಂದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಸತೀಶ ಎಂಬ ಯುವಕ ಜ್ವರ ಬಂದ ಕಾರಣ ಗ್ರಾಮದ ಸುನೀಲ ಕುಸಗಲ್ ಎಂಬ ವೈದ್ಯನ ಹತ್ತಿರ ಚಿಕಿತ್ಸೆ ಪಡೆದಿದ್ದರು. ಆದ್ರೆ ವೈದ್ಯ ಸುನೀಲ ನೀಡಿದ ಚುಚ್ಚು ಮದ್ದು ರಿಯಾಕ್ಷನ್ ಆಗಿ ಸತೀಶನ ಹಿಂಭಾಗದಲ್ಲಿ ಶೇಕಡ 90 ರಷ್ಟು ಭಾಗ ಹುಳು ಹತ್ತಿದೆ.

    ಅಲ್ಲದೆ ಈ ಚುಚ್ಚು ಮದ್ದಿನಿಂದ ಕಿಡ್ನಿ ವೈಫಲ್ಯದ ಸಂಭವವಿದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ.

    ನನ್ನ ಕಾಲುಗಳೆರಡೂ ನೋವಾಗ್ತಿತ್ತು. ಆಸ್ಪತ್ರೆಗೆ ಬಂದಾಗ ವೈದ್ಯರು ಇರ್ಲಿಲ್ಲ. ನಂತರ 12 ಗಂಟೆಗೆ ವೈದ್ಯರು ಬಂದು ಇಂಜೆಕ್ಷನ್ ಕೊಟ್ರು ಎಂದು ಸತೀಶ್ ಹೇಳಿದ್ದಾರೆ.

    ಸತೀಶ ಬಹಳ ದಿನ ಬದುಕುವುದು ಸಂಶಯ ಎಂದು ವೈದ್ಯರು ಹೇಳಿದ್ದಾರೆ. ವೈದ್ಯ ಸುನೀಲ ಸದ್ಯಕ್ಕೆ ಕ್ಲಿನಿಕ್ ಮುಚ್ಚಿ ಪರಾರಿಯಾಗಿದ್ದಾನೆ.

  • ಅಲೋಪತಿ ಚಿಕಿತ್ಸೆ ನೀಡಿ ಯುವಕನ ಜೀವಕ್ಕೆ ಕುತ್ತು ತಂದ ಹೋಮಿಯೋಪತಿ ವೈದ್ಯ!

    ಅಲೋಪತಿ ಚಿಕಿತ್ಸೆ ನೀಡಿ ಯುವಕನ ಜೀವಕ್ಕೆ ಕುತ್ತು ತಂದ ಹೋಮಿಯೋಪತಿ ವೈದ್ಯ!

    ಬೆಳಗಾವಿ: ಜ್ವರ ಬಂದಿದೆ ಎಂದು ವ್ಯಕ್ತಿಯೊಬ್ಬರು ಯಾರದ್ದೋ ಮಾತು ಕೇಳಿ ಡಾಕ್ಟರ್ ಹತ್ತಿರ ಹೋದರು. ಆದರೆ ಆ ಡಾಕ್ಟರ್ ಮಹಾಶಯ ಬೇಕಾಬಿಟ್ಟಿ ಇಂಜೆಕ್ಷನ್ ಕೊಟ್ಟು ವ್ಯಕ್ತಿಯ ಬದುಕಿಗೇ ಕುತ್ತು ತಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ರಸ್ತೆಯಿಂದ ಕುಂಟುತ್ತಾ ಇಳಿಯುತ್ತಿರುವ ಯುವಕನಿಗೆ ಇದೀಗ ಆಸ್ಪತ್ರೆಯ ಬೆಡ್‍ ನಲ್ಲಿ ಯಾರಿಗೂ ಬೇಡವಾದ ನರಳಾಟ. ಈ ಅಮಾಯಕನ ಶೋಚನಿಯ ಸ್ಥಿತಿಗೆ ಕಾರಣ ಗುರುನಾಥ್ ಪಾಟೀಲ್ ಅನೆನ್ನೋ ಹೋಮಿಯೋಪತಿ ಡಾಕ್ಟರ್ ಮಾಡಿರುವ ಮಹಾ ಎಡವಟ್ಟು.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಗೋಟೂರಿನ ನಿವಾಸಿ ಶಂಕರ್. ಕಳೆದ ತಿಂಗಳು ಸಣ್ಣ ಮಟ್ಟಿಗೆ ಜ್ವರ ಬಂದಿತ್ತು. ಆಗ ಸೀದಾ ಹೋಗಿದ್ದು ಈ ಹೋಮಿಯೋಪತಿ ವೈದ್ಯ ಗುರುನಾಥ್ ಬಳಿಗೆ. ಚೆಕ್ ಮಾಡಿದ ಡಾಕ್ಟರ್ ಭರ್ಜರಿಯಾಗಿ ಎರಡು ಇಂಜೆಕ್ಷನ್ ಚುಚ್ಚಿದ್ದರು. ಔಷಧಿ ಕೊಟ್ಟು ಇದನ್ನು ನುಂಗು, ನೀನು ನೂರಕ್ಕೆ ನೂರು ಸರಿ ಹೋಗ್ತಿಯಾ ಎಂದು ಮನೆಗೆ ಕಳಸಿಕೊಟ್ಟರು.

    ಡಾಕ್ಟರ್ ಗುರುನಾಥ್ ಅದ್ಯಾವ ನರದ ಮೇಲೆ ಸೂಜಿ ಚುಚ್ಚಿದರೋ ಗೊತ್ತಿಲ್ಲ ಚುಚ್ಚಿದ ಜಾಗದಲ್ಲಿ ಕೀವಾಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಅಸಲಿಗೆ ಹೋಮಿಯೋಪತಿ ವೈದ್ಯರಾಗಿರೋ ಗುರುನಾಥ್ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕರ್ನಾಟಕ ಖಾಸಗಿ ವೈದ್ಯಕೀಯ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಸದ್ಯ ಈ ಕೇಸ್ ಸಂಕೇಶ್ವರ ಪೊಲೀಸರ ಕೈಯಲ್ಲಿದ್ದು, ನ್ಯಾಯ ಕೊಡಿಸಬೇಕಿದೆ.

  • ಮಂಡ್ಯ: ವೈದ್ಯರು, ದಾದಿಯರಿಲ್ಲದೇ ಆಸ್ಪತ್ರೆ ಮುಂದೆಯೇ ಕಣ್ಣೀರು ಹಾಕುತ್ತಾ ನರಳಾಡಿದ ತುಂಬುಗರ್ಭಿಣಿ !

    ಮಂಡ್ಯ: ವೈದ್ಯರು, ದಾದಿಯರಿಲ್ಲದೇ ಆಸ್ಪತ್ರೆ ಮುಂದೆಯೇ ಕಣ್ಣೀರು ಹಾಕುತ್ತಾ ನರಳಾಡಿದ ತುಂಬುಗರ್ಭಿಣಿ !

    ಮಂಡ್ಯ: ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರಿಲ್ಲದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಅರ್ಧಗಂಟೆಗೂ ಹೆಚ್ಚು ಕಾಲ ಆಸ್ಪತ್ರೆ ಮುಂದೆ ನರಳಾಡಿದ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಳವಳ್ಳಿ ತಾಲೂಕಿನ, ಬೆಳಕವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಮುಂಭಾಗ ಚಿಕ್ಕಗಾಣಿಗರ ಬೀದಿ ನಿವಾಸಿ ಮಂಜು ಎಂಬವರ ಪತ್ನಿ 22 ವರ್ಷದ ದಿವ್ಯ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ವೈದ್ಯರಾಗಲೀ, ದಾದಿಯರಾಗಲೀ ಇರದ ಕಾರಣ ಗರ್ಭಿಣಿ ನೋವಿನಿಂದ ಕಣ್ಣೀರು ಹಾಕುತ್ತಾ ನರಳಾಡಿದ್ದಾರೆ.

    ಗರ್ಭಿಣಿಯ ಸಂಕಟ ನೋಡಿ ಜೊತೆಯಲ್ಲಿದ್ದ ಸಂಬಂಧಿಕರು ಹಾಗೂ ಸ್ಥಳೀಯರು ಕೂಡ ಕಣ್ಣೀರು ಹಾಕಿದ್ದಾರೆ. ತಕ್ಷಣ ಆಂಬುಲೆನ್ಸ್ ವ್ಯವಸ್ಥೆಯೂ ಆಗಿಲ್ಲ. ಕೊನೆಗೆ ಮಳವಳ್ಳಿಯಿಂದ ಆಂಬುಲೆನ್ಸ್ ಕರೆಸಿ ಗರ್ಭಿಣಿಯನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗರ್ಭಿಣಿ ನರಳಾಡುವ ದೃಶ್ಯವನ್ನ ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

    ಬೆಳಕವಾಡಿ ಪ್ರಾಥಮಿಕ ಆರೋಗ್ಯಕೇಂದ್ರದ ನೂತನ ಕಟ್ಟಡ ಈಗಾಗಲೇ ಉದ್ಘಾಟನೆಯಾಗಿದ್ದರೂ ತಾತ್ಕಾಲಿಕವಾಗಿ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸಕಾಲಕ್ಕೆ ವೈದ್ಯರು, ದಾದಿಯರು ಸಿಗದ ಕಾರಣ ಆಸ್ಪತ್ರೆಗೆ ಬರುವ ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

    ಸದ್ಯ ದಿವ್ಯ ಅವರು ಮಳವಳ್ಳಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

    https://youtu.be/hRtYZaDX28s

  • ಬೀದರ್ ಶಾಕಿಂಗ್: 10ನೇ ಕ್ಲಾಸ್ ಓದಿರೋ ವೈದ್ಯರ ಸಹಾಯಕನಿಂದ ರೋಗಿಗಳಿಗೆ ಇಂಜೆಕ್ಷನ್!

    ಬೀದರ್ ಶಾಕಿಂಗ್: 10ನೇ ಕ್ಲಾಸ್ ಓದಿರೋ ವೈದ್ಯರ ಸಹಾಯಕನಿಂದ ರೋಗಿಗಳಿಗೆ ಇಂಜೆಕ್ಷನ್!

    ಬೀದರ್: 10ನೇ ಕ್ಲಾಸ್ ಪಾಸಾಗಿರೋ ವೈದ್ಯರ ಸಹಾಯಕ ರೋಗಿಗಳಿಗೆ ಇಂಜೆಕ್ಷನ್ ಹಾಗೂ ಔಷಧಿ ನೀಡಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಸಾವಿನ ಮನೆಗೆ ಕಳಿಸುತ್ತಿರುವ ಭಯಾನಕ ಪ್ರಕರಣವೊಂದು ಬೀದರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಔರಾದ್ ತಾಲೂಕಿನ ತೋರಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 10 ಹಾಸಿಗೆಗಳ ಹೆರಿಗೆ ಆಸ್ಪತ್ರೆಯಲ್ಲಿರುವ ವೈದ್ಯರ ಸಹಾಯಕ ಶ್ರೀಕಾಂತ್ ಕೆಲಸ ಈಗ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಆಸ್ಪತ್ರೆಗೆ ವೈದ್ಯರು ವಾರಕ್ಕೆ ಒಂದು ಅಥವಾ ಎರಡು ದಿನ ಬಂದು ಇನ್ನುಳಿದ ದಿನ ಗೈರಾಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಶ್ರೀಕಾಂತ್ ವೈದ್ಯರ ಕೆಲಸವನ್ನು ಕ್ಷಣದಲ್ಲೇ ಮಾಡಿ ಮುಗಿಸುತ್ತಾನೆ.

    10ನೇ ಕ್ಲಾಸ್ ಓದಿರುವ ಶ್ರೀಕಾಂತ್‍ಗೆ ಎಂಬಿಬಿಎಸ್ ನೀರು ಕುಡಿದಷ್ಟೆ ಸಲಿಸಾಗಿದೆ ಎಂದರೆ ನೀವು ನಂಬಲೇಬೇಕು. ಎರಡು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಶ್ರೀಕಾಂತ್ ವೈದ್ಯರ ಸಹಾಯವಿಲ್ಲದೆ ರೋಗಿಗಳಿಗೆ ಇಂಜೆಕ್ಷನ್ ನೀಡುತ್ತಾನೆ.

    ವೈದ್ಯರ ಸಹಾಯಕ ಇಂಜೆಕ್ಷನ್ ಹಾಗೂ ಔಷಧಿ ಕೊಡುತ್ತಿರುವುದರಿಂದ ಭಯಭೀತರಾಗಿರುವ ರೋಗಿಗಳು, ಗರ್ಭಿಣಿಯರು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಒಂದು ತಿಂಗಳಿನಿಂದ ಫಾಲೋಅಪ್ ಮಾಡಿ ಆಸ್ಪತ್ರೆಗೆ ಭೇಟಿ ನೀಡಿದ ಟಿವಿ ಕ್ಯಾಮೆರಾಗೆ ರೆಡ್ ಹ್ಯಾಂಡಾಗಿ ಈ ಸಹಾಯಕನ ಬಣ್ಣ ಬಯಲು ಮಾಡಿದೆ.

    ಕ್ಯಾಮೆರಾ ನೋಡುತ್ತಿದಂತೆ ಕಕ್ಕಾಬಿಕ್ಕಿಯಾದ ಸಹಾಯಕರು ಹೌದು ಸಾರ್ ನಾನು ವೈದ್ಯರು ಹೇಳಿದರೆ ಮಾತ್ರ ರೋಗಿಗಳಿಗೆ ಚಿಕಿತ್ಸೆ ನೀಡತ್ತೇವೆ ಎಂದು ಒಪ್ಪಿಕೊಂಡಿದ್ದಾನೆ.

  • ತಾಯಿ ಶವವನ್ನು ಹೆಗಲ ಮೇಲೆ ಹೊತ್ತೊಯ್ದ ಮಗ- ಬಳ್ಳಾರಿಯಲ್ಲೊಂದು ಮನಕಲಕುವ ಘಟನೆ

    ತಾಯಿ ಶವವನ್ನು ಹೆಗಲ ಮೇಲೆ ಹೊತ್ತೊಯ್ದ ಮಗ- ಬಳ್ಳಾರಿಯಲ್ಲೊಂದು ಮನಕಲಕುವ ಘಟನೆ

    ಹೊಸಪೇಟೆ: ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡದೆ ತನ್ನ ಪೋಷಕರಿಬ್ಬರೂ ಒಂದೇ ದಿನ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬ, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರತಿಭಟನಾರ್ಥವಾಗಿ ತಾಯಿ ಶವವನ್ನು ಹೆಗಲ ಮೆಲೇಯೇ ಹೊತ್ತು ಹೊರನಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಚಿತ್ರಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೂಲತಃ ಬಳ್ಳಾರಿ ತಾಲೂಕಿನ ಕೊರ್ಲಗುಂದಿಯ ಮಾರೆಪ್ಪ (76) ಹಾಗೂ ಅವರ ಪತ್ನಿ ತಿಪ್ಪಮ್ಮ (70) ಅವರನ್ನು ಭಾನುವಾರ ಬೆಳಗ್ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ಮಾರೆಪ್ಪ ಮೃತಪಟ್ಟರೆ, ರಾತ್ರಿ ತಿಪ್ಪಮ್ಮ ಮೃತಪಟ್ಟಿದ್ದಾರೆ. ಹೀಗಾಗಿ ಸರಿಯಾಗಿ ಚಿಕಿತ್ಸೆ ನೀಡದೇ ಇರುವುದರಿಂದಲೇ ತನ್ನ ತಂದೆ-ತಾಯಿ ಮೃತ ಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಮೃತ ದಂಪತಿಯ ಮಗ ರವಿ, ವೈದ್ಯರಿಗೂ ತಿಳಿಸದೆ, ಸ್ಟ್ರೆಚರ್ ನೆರವೂ ಕೇಳದೆ ತನ್ನ ತಾಯಿಯ ಶವವನ್ನು ಹೊತ್ತು ಹೊರ ನಡೆದಿದ್ದಾರೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರವಿ ಅವರ ಹಿರಿಯ ಸಹೋದರ ತಿರುಪತಿ, ಬೆಳಿಗ್ಗೆಯೇ ಆಸ್ಪತ್ರೆಗೆ ದಾಖಲಿಸಿದ್ದರೂ ಅಲ್ಲಿಯ ಸಿಬ್ಬಂದಿ ಸಂಜೆವರೆಗೂ ವೃಥಾ ಕಾಲಹರಣ ಮಾಡಿದ್ದರು. ಅಪ್ಪನ ಶವವನ್ನು ಸಾಗಿಸುವ ಸಿದ್ಧತೆಯಲ್ಲಿದ್ದಾಗಲೇ ರಾತ್ರಿ ತಾಯಿಯೂ ತೀರಿಕೊಂಡರು. ಅಲ್ಲಿನ ಸಿಬ್ಬಂದಿ ಸ್ಟ್ರೆಚರ್, ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಿಕೊಡಲಿಲ್ಲ. ಇದರಿಂದ ಬೇಸತ್ತ ನನ್ನ ತಮ್ಮ, ತಾನೇ ಶವ ಹೊತ್ತು ಸಾಗಿಸಿದ ಎಂದು ಹೇಳಿದರು. ಹೊಸಪೇಟೆ ತಾಲೂಕಿನ ಗಾಳೆಮ್ಮನ ಗುಡಿ ಗ್ರಾಮದಲ್ಲಿ ಸೋಮವಾರ ಸಂಜೆ ಇಬ್ಬರದ್ದೂ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ಅವರು ತಿಳಿಸಿದರು.

    ಈ ಘಟನೆಯಲ್ಲಿ ವೈದ್ಯರಲ್ಲಿ ಮಾನವೀಯತೆಯೇ ಮರೆತು ಹೋಗಿದ್ದು, ಚಿಕಿತ್ಸೆ ನೀಡಲು ನಿರ್ಲಕ್ಷ್ಯವಹಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಅಗ್ರಹಿಸಿದ್ದಾರೆ.

    https://www.youtube.com/watch?v=zIOOhuEd6fE

  • ಎಲ್ಲಾ ಕಾಯಿಲೆಗೆ ಸಂಗೀತವೇ ಸಂಜೀವಿನಿ: ಯೋಗಪಟು ವೈದ್ಯರು ಇಲ್ಲಿ ದೈವಸ್ವರೂಪಿ

    ಎಲ್ಲಾ ಕಾಯಿಲೆಗೆ ಸಂಗೀತವೇ ಸಂಜೀವಿನಿ: ಯೋಗಪಟು ವೈದ್ಯರು ಇಲ್ಲಿ ದೈವಸ್ವರೂಪಿ

    ಧಾರವಾಡ: ಸಾಮಾನ್ಯವಾಗಿ ಡಾಕ್ಟರ್ ಅಂದರೆ ಇಂಜೆಕ್ಷನ್, ಔಷಧಿ ಕೊಟ್ಟು ರೋಗ ಗುಣಪಡಿಸುತ್ತಾರೆ. ಆದರೆ ಇವತ್ತಿನ ಧಾರವಾಡದ ನಮ್ಮ ಪಬ್ಲಿಕ್ ಹೀರೋ ಡಾಕ್ಟರ್ ವಿನೋದ್ ಕುಲಕರ್ಣಿ. ಅವರು ಹಾಡು ಮತ್ತು ಸಂಗೀತದ ಮೂಲಕ ರೋಗ ಗುಣಪಡಿಸುತ್ತಾರೆ.

    ಮೂಲತಃ ವಿಜಯಪುರ ಜಿಲ್ಲೆಯವರಾದ ವಿನೋದ್ ಕುಲಕರ್ಣಿ ಅವರು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಮಾನಸಿಕ ತಜ್ಞರಾಗಿ ಹೆಸರು ಗಳಿಸಿರುವ ಇವರು ಕಿಮ್ಸ್‍ನಿಂದ ನಿವೃತ್ತರಾಗಿದ್ದು ಈಗ ವಿದ್ಯಾ ನಗರದ ಮಾನಸಾ ನರ್ಸಿಂಗ್ ಹೋಮ್ ನಡೆಸುತ್ತಿದ್ದಾರೆ. ಮಾನಸಿಕ ರೋಗಿಗಳು, ಮದ್ಯವ್ಯಸನ, ಮದುಮೇಹಕ್ಕೆ ಸಂಗೀತ ಥೆರಪಿ ಮೂಲಕ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ನರ್ಸಿಂಗ್ ಹೋಮ್‍ನಲ್ಲಿ ಇದಕ್ಕಾಗಿ ವಿಶೇಷ ಸೌಲಭ್ಯ ಮಾಡಲಾಗಿದೆ.

    ಕುಲಕರ್ಣಿ ಅವರು ವೈದ್ಯವೃತ್ತಿ ಮತ್ತು ಸಂಗೀತದ ಜೊತೆಗೆ ಹಾಡುಗಾರರೂ ಆಗಿದ್ದಾರೆ. 150ಕ್ಕೂ ಹೆಚ್ಚು ಸಂಗೀತ ಕಛೇರಿಯನ್ನು ನಡೆಸಿದ್ದಾರೆ. ಯೋಗಪಟುವೂ ಆಗಿದ್ದು ಅತೀ ಹೆಚ್ಚು ಸಮಯದವರೆಗೂ ಶೀರ್ಷಾಸನ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ರೋಗಿಗಳಿಗೆ ಯೋಗವನ್ನೂ ಹೇಳಿಕೊಡುತ್ತಾರೆ. ಬಡ ರೋಗಿಗಳಿಗೆ ಉಚಿತವಾಗಿಯೂ ಚಿಕಿತ್ಸೆ ನೀಡೋ ಇವರನ್ನು ಉತ್ತರ ಕರ್ನಾಟಕದ ಮಂದಿ ದೇವರು ಎಂದು ಕರೆದು ಗೌರವಿಸುತ್ತಿದ್ದಾರೆ.

  • ವೈದ್ಯರಿಗೆ ಚಾಕುವಿನಿಂದ ಇರಿದ 75 ವರ್ಷದ ವೃದ್ಧ ರೋಗಿ

    ವೈದ್ಯರಿಗೆ ಚಾಕುವಿನಿಂದ ಇರಿದ 75 ವರ್ಷದ ವೃದ್ಧ ರೋಗಿ

    ಬೆಳಗಾವಿ: ವೈದ್ಯರ ಮೇಲೆ ವೃದ್ಧ ರೋಗಿಯೊಬ್ಬರು ಚಾಕುವಿನಿಂದ ಹಲ್ಲೆ ಮಾಡಿರೋ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಪುಣೆಯ ಸಿಂಹಘಡ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಹೆಚ್ಚಿಗೆ ಬಿಲ್ ಯಾಕೆ ಮಾಡಿದ್ದೀರಿ ಎಂದು ಆಕ್ರೋಶಗೊಂಡ 75 ವರ್ಷದ ರೋಗಿ ಡಾಕ್ಟರ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

    ಡಾ. ಸಂತೋಷ್ ಆವಾರಿ ಆ ರೋಗಿಯ ಬಳಿ ರೊಟೀನ್ ಚೆಕಪ್‍ಗೆ ಹೋದ ಸಂದರ್ಭದಲ್ಲಿ ಮಲಗಿದ ಜಾಗಿದಂದಲೇ ವೈದ್ಯರ ಮೇಲೆ ಇದ್ದಕ್ಕಿದ್ದಂತೆ ದಾಳಿ ನಡೆದಿದೆ. ರೋಗಿ ತನ್ನ ತಲೆದಿಂಬಿನ ಬಳಿ ಇದ್ದ ಚಾಕು ತೆಗೆದುಕೊಂಡು ವೈದ್ಯರಿಗೆ ಇರಿಯೋ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

    ರೋಗಿ ಆಯತಪ್ಪಿ ಹಾಸಿಗೆಯಿಂದ ಕೆಳಗೆ ಬಿದ್ದಿದ್ದು, ಕೂಡಲೇ ಸ್ಥಳದಲ್ಲಿದ್ದವರು ಓಡಿಬಂದು ಅವರನ್ನು ಹಿಡಿದುಕೊಂಡಿದ್ದಾರೆ. ಘಟನೆಯಲ್ಲಿ ಡಾಕ್ಟರ್ ಸಂತೋಷ್ ಅವರ ಹೊಟ್ಟೆ ಮತ್ತು ಕೈಗೆ ಗಂಭೀರ ಗಾಯವಾಗಿದೆ.

    https://www.youtube.com/watch?v=BmYleC0xhhU&feature=youtu.be

  • ಹಳ್ಳಿ ಹೆಂಗಸರೇ ಡಾಕ್ಟರ್ಸ್ ಆದ್ರು- ವೈದ್ಯರಿಲ್ಲದ ಆಸ್ಪತ್ರೆಯಲ್ಲಿ ಮಹಿಳೆಯರಿಂದ್ಲೇ ಹೆರಿಗೆ

    ಹಳ್ಳಿ ಹೆಂಗಸರೇ ಡಾಕ್ಟರ್ಸ್ ಆದ್ರು- ವೈದ್ಯರಿಲ್ಲದ ಆಸ್ಪತ್ರೆಯಲ್ಲಿ ಮಹಿಳೆಯರಿಂದ್ಲೇ ಹೆರಿಗೆ

    ವಿಜಯಪುರ: ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಇರದ ಕಾರಣ ಗ್ರಾಮಸ್ಥರೇ ಮಹಿಳೆಗೆ ಹೆರಿಗೆ ಮಾಡಿಸಿದ ಅಪರೂಪದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಜಿಲ್ಲೆಯ ಇಂಡಿ ತಾಲೂಕಿನ ಜಿಗಜೇವಣಗಿ ಗ್ರಾಮದ ಶಶಿಕಲಾ ಬಿರಾದಾರ ಎಂಬ ಮಹಿಳೆಗೆ ಮಂಗಳವಾರ ಬೆಳಗ್ಗೆ ತೀವ್ರ ಹೆರಿಗೆನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಜಿಗಜೇವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಶಿಕಲಾ ಅವನ್ನ ಕರೆತಂದಿದ್ದರು. ಆದ್ರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹತ್ತಿರದ ಇಂಚಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದ್ರೆ ಅಲ್ಲೂ ಕೂಡ ಒಬ್ಬರು ವೈದ್ಯರೂ ಅಥವಾ ನರ್ಸ್ ಕೂಡ ಇರಲಿಲ್ಲವಂತೆ.

    ಈ ನಡುವೆ ಶಶಿಕಲಾಗೆ ತೀವ್ರ ರಕ್ತಸ್ರಾವ ಮತ್ತು ಹೆರಿಗೆನೋವು ಹೆಚ್ಚಾಗಿತ್ತು. ಆಗ ಸ್ಥಳೀಯ ಕೆಲ ಯುವಕರು ಇವರ ಸಹಾಯಕ್ಕೆ ಬಂದು ಗ್ರಾಮದ ಕೆಲ ಮಹಿಳೆಯರನ್ನು ಕರೆತಂದಿದ್ದಾರೆ. ಗ್ರಾಮಸ್ಥರೇ ಕೈಗೆ ಗ್ಲೌಸ್ ಹಾಕಿಕೊಂಡು ಶಶಿಕಲಾಗೆ ಹೆರಿಗೆ ಮಾಡಿಸಿದ್ದಾರೆ.

    ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು ಯಶಸ್ವಿ ಹೆರಿಗೆ ಮಾಡಿಸಿದ್ದಾರೆ. ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಎರಡು ಜೀವಗಳು ಮರುಜೀವ ಪಡೆದುಕೊಂಡಿವೆ. ಆದ್ರೆ 24*7 ಅಂತಾ ಬೋರ್ಡ್ ಹಾಕ್ಕೊಂಡು ಯಾರೊಬ್ಬರು ಆಸ್ಪತ್ರೆಯಲ್ಲಿ ಇರದೇ ಇದ್ದರೆ ಇಂತಹ ಆಸ್ಪತ್ರೆಗಳು ಯಾಕೆ ಬೇಕು ಅಂತಾ ನೊಂದವರು ಹಿಡಿಶಾಪ ಹಾಕುತ್ತಿದ್ದಾರೆ.