Tag: doctor

  • ಸಿಎಂಗೆ ಹೊಟ್ಟೆ ನೋವು – ಎಲ್ಲ ಕಾರ್ಯಕ್ರಮಗಳು ರದ್ದು

    ಸಿಎಂಗೆ ಹೊಟ್ಟೆ ನೋವು – ಎಲ್ಲ ಕಾರ್ಯಕ್ರಮಗಳು ರದ್ದು

    ಬೆಂಗಳೂರು: ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಯದೇವ ಆಸ್ಪತ್ರೆಗೆ ತೆರಳಿದ್ದು, ಸದ್ಯಕ್ಕೆ ಚೆಕಪ್ ಮಾಡಿಸಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

    ಅನಾರೊಗ್ಯದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಜಯದೇವ ಆಸ್ಪತ್ರೆಗೆ ತೆರಳಿ ಜನರಲ್ ಚೆಕಪ್ ಮಾಡಿದ್ದಾರೆ. ಈ ವೇಳೆ ಹೊಟ್ಟೆ ನೋವು ಇರುವುದರಿಂದ ಎಂಆರ್‍ಐ ಮಾಡಿಸುವಂತೆ ವೈದ್ಯರು ಸೂಚಿಸಿದ್ದರು. ವೈದ್ಯರು ಸೂಚಿಸಿದ ಡಾ.ಮಂಜುನಾಥ್ ನೇತೃತ್ವದಲ್ಲಿ ಸಿಎಂ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

    ಕಳೆದ ನಾಲ್ಕು ದಿನದ ಹಿಂದೆ ಸಿಎಂ ರೂಟೀನ್ ಚೆಕಪ್ ಗೆ ಜಯದೇವ ಆಸ್ಪತ್ರೆಗೆ ತೆರಳಿದ್ದರು. ವಾಲ್ವ್ ರಿಪ್ಲೇಸ್ ಮೆಂಟ್ ಆಗಿರುವುದರಿಂದ ರೂಟೀನ್ ಚೆಕಪ್ ಮಾಡಿಸಿದ್ದರು. ಆದರೆ ಸ್ವಲ್ಪ ಶುಗರ್ ಕಂಟ್ರೋಲ್ ಮಾಡುವಂತೆ ಸಿಎಂಗೆ ಮೊನ್ನೆಯೇ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಸೂಚನೆ ಕೊಟ್ಟಿದ್ದರು. ಇಂದು ಮತ್ತೆ ಹೊಟ್ಟೆನೋವಿನ ಹಿನ್ನೆಲೆಯಲ್ಲಿ ತಪಾಸಣೆ ಮಾಡಲಾಗಿದೆ ಎಂದು ಜಯದೇವ ಆಸ್ಪತ್ರೆಯ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ದಸರಾ ಬಳಿಕ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಹೊಟ್ಟೆನೋವು ಮತ್ತು ಭೇದಿ ಸಮಸ್ಯೆ ಇತ್ತು. ಇಂದು ತಲೆನೋವು ಸುಸ್ತು ಇದ್ದಿದ್ದರಿಂದ ಆಸ್ಪತ್ರೆಗೆ ಬಂದಿದ್ದರು. ಒಂದು ದಿನ ರೆಸ್ಟ್ ಮಾಡುವಂತೆ ಸೂಚಿಸಿದ್ದೇವೆ. ಯಾವುದೇ ಸಮಸ್ಯೆ ಇಲ್ಲ. ಎಂಆರ್‍ಐ ಮಾಡಿದ್ದೇವೆ ನಾರ್ಮಲ್ ಆಗಿದೆ. ಎಲ್ಲಾ ಪ್ರೊಸಿಜರ್ ಮುಗಿಸಿ ಮನೆಗೆ ತೆರಳಿದ್ದಾರೆ ಎಂದು ಪಬ್ಲಿಕ್ ಟಿವಿಗೆ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲು ಇದ್ದ ಎಲ್ಲ ಕಾರ್ಯಕ್ರಮಗಳನ್ನ ರದ್ದು ಪಡಿಸಲಾಗಿದೆ. ಸಿಎಂ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸವನ್ನು ಕೈಗೊಳ್ಳಬೇಕಿತ್ತು, ಜೊತೆಗೆ ಧರ್ಮಸ್ಥಳಕ್ಕೂ ಹೋಗಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಎಲ್ಲ ಪ್ರವಾಸವನ್ನು ರದ್ದು ಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೈದ್ಯೆಗೆ ಕಿರುಕುಳ- ಪೇದೆ ಅಮಾನತಿಗೆ ಅಧಿಕಾರ ಸ್ವೀಕರಿಸಿದ 2 ದಿನದಲ್ಲೇ ಅಣ್ಣಾಮಲೈ ಆದೇಶ

    ವೈದ್ಯೆಗೆ ಕಿರುಕುಳ- ಪೇದೆ ಅಮಾನತಿಗೆ ಅಧಿಕಾರ ಸ್ವೀಕರಿಸಿದ 2 ದಿನದಲ್ಲೇ ಅಣ್ಣಾಮಲೈ ಆದೇಶ

    ಬೆಂಗಳೂರು: ಡೆಂಟಲ್ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸ್ ಪೇದೆ ಸುದರ್ಶನ್ ಆಸ್ಕಿನ್ ನನ್ನು ಅಮಾನತು ಮಾಡುವಂತೆ ದಕ್ಷಿಣ ವಲಯ ಡಿಸಿಪಿ ಕೆ.ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ.

    ಗಿರಿನಗರ ಠಾಣೆಯ ಪೇದೆ ಸುದರ್ಶನ್ ಆಸ್ಕಿನ್ ಡೆಂಟಲ್ ಡಾಕ್ಟರ್ ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪೇದೆ ವಿರುದ್ಧ ದೂರು ದಾಖಲಿಸಿದ್ದರು. ಈಗ ಕಿರುಕುಳ ನೀಡುತ್ತಿದ್ದ ಪೇದೆಯನ್ನು ಕೆಲಸದಿಂದ ಅಮಾನತು ಮಾಡುವಂತೆ ಅಣ್ಣಾಮಲೈ ಅವರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ:  ಅಣ್ಣಾಮಲೈ ಅಧಿಕಾರ ಸ್ವೀಕಾರ- ನಾನು ಈಗ ಮಗು ಆಗಿದ್ದೀನಿ ಎಂದ್ರು ಡಿಸಿಪಿ

     

    ಏನಿದು ಪ್ರಕರಣ?
    ಪೇದೆ ಸುದರ್ಶನ್ ಆಸ್ಕಿನ್ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ನೀಡುತ್ತಿರುವುದಾಗಿ ವೈದ್ಯೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2013ರಲ್ಲಿ ಸುದರ್ಶನ್ ಹಲ್ಲಿನ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ನನ್ನ ಫೋನ್ ನಂಬರ್ ಇಟ್ಟುಕೊಂಡು ಚಿಕಿತ್ಸೆ ನೆಪ ಹೇಳಿಕೊಂಡು ಮಾತನಾಡುತ್ತಿದ್ದನು. ನಾನು ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಬಳಿಕ ಅವನು ನೇರವಾಗಿ ಕ್ಲಿನಿಕ್ ಗೆ ಬಂದು ನಾನು ಏನು ತೊಂದರೆ ಕೊಡುವುದಿಲ್ಲ ನನ್ನ ಬಳಿ ಮಾತನಾಡು ಎಂದು ಹೇಳುತ್ತಿದ್ದನು.

    ಮನೆ ಬದಲಾಯಿಸಿದರೂ ಫೋನ್ ಮಾಡುವುದನ್ನು ಬಿಡಲಿಲ್ಲ. ಹಿಂಬಾಲಿಸುಕೊಂಡು ಮಾತನಾಡುತ್ತಿದ್ದನು. ಒಂದೇ ವೇಳೆ ನಾನು ಆತನ ಬಳಿ ಮಾತನಾಡಲು ನಿರಾಕರಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದನು ಎಂದು ಸಂತ್ರಸ್ತೆ ವೈದ್ಯೆ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಜ್ಞಾನ ಭಾರತಿ ಠಾಣೆಯಲ್ಲಿ ಸೆಕ್ಷನ್ 354, 506 ಆಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಮಾಡಿ ಎಸ್.ಪಿ ಅಣ್ಣಾಮಲೈ ಅವರು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.

    ಸೋಮವಾರ ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಅಣ್ಣಾಮಲೈ ಅವರು ಅಧಿಕಾರ ಸ್ವೀಕಾರ ಮಾಡಿದ್ದರು. ಸೌತ್ ಎಂಡ್ ಸರ್ಕಲ್ ನಲ್ಲಿರುವ ಡಿಸಿಪಿ ಕಚೇರಿಯಲ್ಲಿ ಹಿಂದಿನ ಡಿಸಿಪಿ ಡಾ ಶರಣಪ್ಪ ಶರಣಪ್ಪರಿಂದ ಅಣ್ಣಾಮಲೈ ಅಧಿಕಾರ ಸ್ವೀಕಾರ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ಪೇದೆಯಿಂದ ಡೆಂಟಲ್ ವೈದ್ಯೆಗೆ ಲೈಂಗಿಕ ಕಿರುಕುಳ

    ಪೊಲೀಸ್ ಪೇದೆಯಿಂದ ಡೆಂಟಲ್ ವೈದ್ಯೆಗೆ ಲೈಂಗಿಕ ಕಿರುಕುಳ

    ಬೆಂಗಳೂರು: ಪೊಲೀಸ್ ಪೇದೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಡೆಂಟಲ್ ವೈದ್ಯೆಯೊಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ.

    ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ವೈದ್ಯೆ ಗಿರಿನಗರ ಠಾಣೆಯ ಪೇದೆ ಸುದರ್ಶನ್ ಆಸ್ಕಿನ್ ಮೇಲೆ ದೂರು ದಾಖಲಿಸಿದ್ದಾರೆ. ಪೇದೆ ಸುದರ್ಶನ್ ಆಸ್ಕಿನ್ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ನೀಡುತ್ತಿರುವುದಾಗಿ ವೈದ್ಯೆ ದೂರಿನಲ್ಲಿ ತಿಳಿಸಿದ್ದಾರೆ.

    ದೂರಿನಲ್ಲಿ ಏನಿದೆ?
    2013ರಲ್ಲಿ ಸುದರ್ಶನ್ ಹಲ್ಲಿನ ಚಿಕಿತ್ಸೆಗೆಂದು ಬಂದಿದ್ದನು. ಈ ವೇಳೆ ನನ್ನ ಫೋನ್ ನಂಬರ್ ಇಟ್ಟುಕೊಂಡು ಚಿಕಿತ್ಸೆ ನೆಪ ಹೇಳಿಕೊಂಡು ಮಾತನಾಡುತ್ತಿದ್ದನು. ಮೊದಲಿಗೆ ಮಾಮೂಲಿಯಾಗಿದ್ದ ಸುದರ್ಶನ್ ನಂತರ ಫೋನಿನಲ್ಲಿ ಅಸಭ್ಯವಾಗಿ ವರ್ತನೆ ಮಾಡಲು ಶುರುಮಾಡಿದನು. ಮತ್ತೆ ಮತ್ತೆ ಫೋನ್ ಮಾಡಿ ಹಿಂಸೆ ಕೊಡುತ್ತಿದ್ದನು. ನಾನು ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಬಳಿಕ ಅವನು ನೇರವಾಗಿ ಕ್ಲಿನಿಕ್ ಗೆ ಬಂದು ನಾನು ಏನು ತೊಂದರೆ ಕೊಡುವುದಿಲ್ಲ ನನ್ನ ಬಳಿ ಮಾತನಾಡು ಎಂದು ಹೇಳುತ್ತಿದ್ದನು.

     

    ಅವರ ಕಾಟ ಸಹಿಸಲಾಗದೇ ನಂತರ ನಾನು ಮನೆ ಬದಲಾಯಿಸಿದ್ದೆ. ಆದರೆ ಆತ ಮನೆ ಬದಲಾಯಿಸಿದರೂ ಫೋನ್ ಮಾಡುವುದನ್ನು ಬಿಡಲಿಲ್ಲ. ಹಿಂಬಾಲಿಸಿ ಕೊಂಡು ಮಾತನಾಡುತ್ತಿದ್ದನು. ಸಲುಗೆಯಿಂದ ವರ್ತಿಸಲಿಲ್ಲ ಎಂದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದನು. ಬಳಿಕ ನಾನು ಜ್ಞಾನ ಭಾರತಿ ಠಾಣೆಯಲ್ಲಿ ದೂರು ನೀಡಿದ್ದೆ. ಅಲ್ಲಿ ಅಧಿಕಾರಿಗಳು ಸುದರ್ಶನ್ ಕರೆಸಿ ಮಾತನಾಡಿ ಅವರಿನಿಂದ ಮುಚ್ಚಳಿಕೆ ಬರೆಯಿಸಿಕೊಂಡು ರಾಜಿ ಸಂಧಾನ ಮಾಡಲಾಗಿತ್ತು. ಪೊಲೀಸರು ರಾಜಿ ಸಂಧಾನ ಮಾಡಿಸಿದರೂ ಸುದರ್ಶನ್ ಪುನಃ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ವೈದ್ಯೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯಕ್ಕೆ ಸುದರ್ಶನ್ ನಡೆಯಿಂದ ಬೆಸರಗೊಂಡ ವೈದ್ಯೆ ಮತ್ತೆ ದೂರು ದಾಖಲು ಮಾಡಿದ್ದಾರೆ. ಈಗ ಜ್ಞಾನ ಭಾರತಿ ಠಾಣೆಯಲ್ಲಿ ಸೆಕ್ಷನ್ 354, 506 ಆಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೇಣು ಬಿಗಿದುಕೊಂಡು ಬೆಂಗಳೂರು ವೈದ್ಯೆ ಆತ್ಮಹತ್ಯೆ

    ನೇಣು ಬಿಗಿದುಕೊಂಡು ಬೆಂಗಳೂರು ವೈದ್ಯೆ ಆತ್ಮಹತ್ಯೆ

    ಬೆಂಗಳೂರು: ನೇಣು ಬಿಗಿದುಕೊಂಡು ವೈದ್ಯೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಂದಿನಿ ಲೇಔಟ್‍ನ ಸಾಕಮ್ಮ ಬಡಾವಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಅಶ್ವಿನಿ (32) ಆತ್ಮಹತ್ಯೆಗೆ ಶರಣಾದ ವೈದ್ಯೆ. ನಂದಿನಿ ಲೇಔಟ್‍ನ ಕೃಷ್ಣಾನಂದ ನಗರದಲ್ಲಿರುವ ಬಿಬಿಎಂಪಿ ಆಸ್ಪತ್ರೆಯಲ್ಲಿ ಅಶ್ವಿನಿಯವರು ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ತವರು ಮನೆಯಾದ ನಂದಿನಿ ಲೇಔಟ್‍ನ ಸಾಕಮ್ಮ ಬಡಾವಣೆಯಲ್ಲಿ ತಮ್ಮ ತಾಯಿಯೊಂದಿಗೆ ವಾಸವಾಗಿದ್ದರು. ಸೋಮವಾರ ರಾತ್ರಿ ಮನೆಗೆ ಬಂದ ಅವರು ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ.

    ಇಂದು ಕೊಠಡಿಯನ್ನು ಪರೀಕ್ಷಿಸಿದಾಗ ಅಶ್ವಿನಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಮೂರು ವರ್ಷದ ಹಿಂದೆ ಡಾ.ಲೋಹಿತ್ ಎಂಬಾತನೊಂದಿಗೆ ಅಶ್ವಿನಿ ಮದುವೆ ನಡೆದಿತ್ತು. ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು, ನಮ್ಮ ಜೊತೆಯಲ್ಲೇ ವಾಸವಾಗಿದ್ದಳು. ಪತಿಯ ಕಿರುಕುಳದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಶ್ವಿನಿ ಕುಟುಂಬದವರು ಪತಿ ಲೋಹಿತ್ ಮೇಲೆ ಆರೋಪ ಮಾಡಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮಾವಾಸ್ಯೆಯೆಂದು ಚಿಕಿತ್ಸೆ ನೀಡದೆ ಮಾನವೀಯತೆ ಮರೆತ ಸರ್ಕಾರಿ ವೈದ್ಯೆ

    ಅಮಾವಾಸ್ಯೆಯೆಂದು ಚಿಕಿತ್ಸೆ ನೀಡದೆ ಮಾನವೀಯತೆ ಮರೆತ ಸರ್ಕಾರಿ ವೈದ್ಯೆ

    ಮಡಿಕೇರಿ: ಕಣ್ಣಿಗೆ ಕಾಣುವ ದೇವರು ಎಂದು ಜನಸಾಮಾನ್ಯರು ನಂಬುವ ವೈದ್ಯ ಕುಲಕ್ಕೆ ಅವಮಾನವಾಗುವಂತೆ ವೈದ್ಯನೊಬ್ಬ ಮಹಾಲಯ ಅಮಾವಾಸ್ಸೆಗೆ ರಜೆ ಇದೆ ಎಂದು ನೆಪವೊಡ್ಡಿ ರೋಗಿಗೆ ಚಿಕಿತ್ಸೆ ನೀಡದೆ ಮಾನವೀಯತೆಯನ್ನು ಮರೆತಿದ್ದಾರೆ.

    ಕುಶಾಲನಗರದ ವೈದ್ಯಾಧಿಕಾರಿ ವಸುಂದರಾ ಹೆಗ್ಡೆ ರೋಗಿಗೆ ಚಿಕಿತ್ಸೆ ನೀಡದೇ ಅಸಡ್ಡೆಯ ಉತ್ತರ ನೀಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಬೈಚನಳ್ಳಿಯ ನಿವಾಸಿಯಾಗಿರುವ ತಾಳಮ್ಮ ಎಂಬ ವೃದ್ಧೆಗೆ ಯಾರು ಇಲ್ಲದೆ ಇರುವುದನ್ನು ಮನಗಂಡು ಅನೇಕ ದಿನಗಳಿಂದ ಮರಿಯಾ ಜಿಜೆಶ್ ದಂಪತಿ ಆರೈಕೆ ಮಾಡುತ್ತಿದ್ದಾರೆ.

    ಆದರೆ ಮಹಾಲಯ ಅಮಾವಾಸ್ಯೆ ದಿನದಂದು ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿ ವಸುಂಧರಾ ಹೆಗ್ಡೆ, ಮಹಾಲಯ ಅಮಾವಾಸ್ಯೆ ಸಲುವಾಗಿ ಸರ್ಕಾರಿ ರಜೆ ಇದ್ದುದ್ದರಿಂದ ಅವರಿಗೆ ಇಂಜೆಕ್ಷನ್ ಕೊಡಲಾಗುವುದಿಲ್ಲ. ಅಲ್ಲದೇ ರೋಗಿಗಳಿಂದ ಒಂದು ಹಬ್ಬದ ದಿನವೂ ನೆಮ್ಮದಿ ಇಲ್ಲಾ ಎಂದು ಹೇಳಿ, ನರ್ಸ್ ಇಂಜೆಕ್ಷನ್ ಕೊಟ್ಟರೆ ತೆಗೆದುಕೊಂಡು ಹೋಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಂತರ ನರ್ಸ್ ಗಳಲ್ಲಿ ವಿನಂತಿಸಿಕೊಂಡ ಬಳಿಕ ವೃದ್ಧೆಗೆ ಚಿಕಿತ್ಸೆ ನೀಡಿ ಇಂಜೆಕ್ಷನ್ ಕೊಟ್ಟಿದ್ದಾರೆ. ಇದನ್ನು ಗಮನಿಸಿದ ವೈದ್ಯಾಧಿಕಾರಿ ನರ್ಸ್ ಗಳನ್ನು ತರಾಟೆಗೆ ತೆಗೆದುಕೊಂಡು ರಜಾದಿನಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಚಾರವಾಗಿ ನರ್ಸ್ ಗಳಿಗೆ ಬೈದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈದ್ಯಾಧಿಕಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ವಸುಂಧರಾ ಹೆಗ್ಡೆ ಅವರು ಈ ಮೊದಲೇ ಹಲವಾರು ರೋಗಿಗಳಿಗೆ ಚಿಕಿತ್ಸೆ ಕೊಡುವ ವಿಚಾರದಲ್ಲಿ ಅವರ ರಾಕ್ಷಸಿ ರೂಪ ಬಯಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಗಮನ ಹರಿಸಿ ವಸುಂಧರಾ ಹೆಗ್ಡೆ ಅಂತಹ ವೈದ್ಯಾಧಿಕಾರಿ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರದ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾದುಕಾದು ಸುಸ್ತಾದ 51 ಜನ ಗರ್ಭಿಣಿಯರು – ಕಡೆಗೂ ಸಿಗಲಿಲ್ಲ ಚಿಕಿತ್ಸೆ

    ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾದುಕಾದು ಸುಸ್ತಾದ 51 ಜನ ಗರ್ಭಿಣಿಯರು – ಕಡೆಗೂ ಸಿಗಲಿಲ್ಲ ಚಿಕಿತ್ಸೆ

    ದಾವಣಗೆರೆ: ತಪಾಸಣೆಗೆ ಬಂದಿದ್ದ 50ಕ್ಕೂ ಹೆಚ್ಚು ಗರ್ಭಿಣಿಯರು ಚಿಕಿತ್ಸೆ ಸಿಗದೇ ಮರಳಿದ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಪ್ರಾಥಮಿಕ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.

    ಪ್ರಧಾನಮಂತ್ರಿ ಮಾತೃತ್ವ ಕಾರ್ಯಕ್ರಮ ಯೋಜನೆಯಡಿ ಪ್ರತಿ ತಿಂಗಳ 9ರಂದು ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗುತಿತ್ತು. ಹೀಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಟ್ನನಹಳ್ಳಿ, ಫಣಿಯಾಪುರ, ಕೆಂಚಾಪುರ, ಕರಡಿದುರ್ಗ, ಕುರೇಮಾಗನಹಳ್ಳಿ, ಕಲ್ಲಹಳ್ಳಿ, ಬೇವಿನಹಳ್ಳಿ ಗ್ರಾಮಗಳಿಂದ ಗರ್ಭಿಣಿಯರು ಬಂದಿದ್ದರು.

    ಬಹಳ ಸಮಯ ಕಳೆದರೂ ವೈದ್ಯ ಸುರೇಶ್ ಬಾರದೇ ಇದ್ದಾಗ, ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಕರೆ ಮಾಡಿದ್ದಾರೆ. ಆದರೆ ಫೋನ್ ತೆಗೆಯದೇ ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಗೆ ಕರೆ ಮಾಡಿದ ಸುರೇಶ್ ನಾನು ಇವತ್ತು ರಜೆ ತೆಗೆದುಕೊಂಡಿದ್ದೇನೆ. ಹೀಗಾಗಿ ಆಸ್ಪತ್ರೆಗೆ ಬರುವುದಿಲ್ಲ ಅಂತ ದಿಢೀರ್ ಹೇಳಿದ್ದಾರೆ.

    ತಿಂಡಿ, ನೀರು ಇಲ್ಲದೆ ಗರ್ಭಿಣಿಯರು ಬೆಳಗ್ಗೆಯಿಂದ ವೈದ್ಯರಿಗಾಗಿ ಕಾಯುತ್ತ ಕುಳಿತಿದ್ದರು. ಸಂಜೆಯವರೆಗೆ ವೈದ್ಯರ ಬರುವಿಕೆಗಾಗಿ ಕಾದು ಚಿಕಿತ್ಸೆ ಇಲ್ಲದೇ ಗರ್ಭಿಣಿಯರು ನರಳುವಂತಾಯಿತು. ಬಡವರಿಗಾಗಿಯೇ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಅಹಿತಕರ ಘಟನೆ ನಡೆದಿದ್ದಕ್ಕೆ ಸ್ಥಳೀಯರು ಹಾಗೂ ಗರ್ಭಿಣಿಯರ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

    ವೈದ್ಯರ ನಿರ್ಲಕ್ಷ್ಯ ಹೀಗೆ ಮುಂದುವರಿದರೆ ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಹಾಗೂ ವೈದ್ಯರ ಬಗ್ಗೆ ಗೌರವ ಇಲ್ಲದಂತಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಮಹಿಳೆಯರು ಮತ್ತೊಮ್ಮೆ ತಪಾಸಣೆಗೆ ಆಸ್ಪತ್ರೆಗೆ ಬರುವುದು ಕಷ್ಟವಾಗುತ್ತದೆ. ಬಸ್ಸಿನಲ್ಲಿ ಪ್ರಯಾಣ ಮಾಡಲು ಅವರಿಗೆ ಕಷ್ಟವಾಗುತ್ತದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಮತ್ತೊಮ್ಮೆ ಆಸ್ಪತ್ರೆಗೆ ಬರುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಕೂಟರಿನಲ್ಲಿ ಹೋಗ್ತಿದ್ದ ವೈದ್ಯೆಗೆ ಮೃತ್ಯುವಾದ ಗಾಳಿಪಟ!

    ಸ್ಕೂಟರಿನಲ್ಲಿ ಹೋಗ್ತಿದ್ದ ವೈದ್ಯೆಗೆ ಮೃತ್ಯುವಾದ ಗಾಳಿಪಟ!

    ಮುಂಬೈ: 26 ವರ್ಷದ ವೈದ್ಯೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಗಾಳಿಪಟ ದಾರ ಬಂದು ಕುತ್ತಿಗೆಗೆ ಸಿಕ್ಕಿ ಹಾಕಿಕೊಂಡ ಪರಿಣಾಮ ವೈದ್ಯೆ ದಾರುಣವಾಗಿ ಮೃತಪಟ್ಟಿರುವ ಘಟನೆ ಪುಣೆಯ ಬೋಸಾರಿ ಪ್ರದೇಶದಲ್ಲಿ ನಡೆದಿದೆ.

    ಡಾ. ಕೃಪಾಲಿ ನಿಕ್ಕಂ ಮೃತ ವೈದ್ಯೆ. ಇವರು ಭಾನುವಾರ ಸ್ಕೂಟರ್ ನಲ್ಲಿ ಪುಣೆಯಿಂದ ಬೋಸಾರಿ ಪ್ರದೇಶಕ್ಕೆ ತೆರಳುತ್ತಿದ್ದರು. ನಾಶಿಕ್ ಪ್ಲೈಓವರ್ ಮೇಲೆ ಹೋಗುತ್ತಿದ್ದ ವೇಳೆ ಗಾಳಿಪಟ ಹಾರಿಸುತ್ತಿದ್ದ ದಾರ ಬಂದು ಅವರ ಕೊರಳಲ್ಲಿ ಸುತ್ತಿಕೊಂಡಿದೆ.

    ಪರಿಣಾಮ ವೈದ್ಯೆ  ನಿಯಂತ್ರಣ ತಪ್ಪಿ ಫ್ಲೈಓವರ್ ನಿಂದ ಕೆಳಗೆ ಬಿದ್ದಿದ್ದಾರೆ. ಗಾಳಿಪಟ್ದ ದಾರ ಅವರ ಕುತ್ತಿಗೆಯನ್ನು ಬಿಗಿಯಾಗಿ ಸುತ್ತಿಕೊಂಡಿದ್ದರಿಂದ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದೆ. ತಕ್ಷಣ ಅವರನ್ನು ಸ್ಥಳದಲ್ಲಿದ್ದವರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅತಿಯಾದ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಅಂತ ಇನ್ಸ್ ಪೆಕ್ಟರ್ ಸುನಿಲ್ ಗಾಡೆ ಅವರು ತಿಳಿಸಿದ್ದಾರೆ.

    ವೈದ್ಯೆ ಇದ್ದಕ್ಕಿದ್ದಂತೆಯೇ ಸ್ಕೂಟರ್ ನಿಂದ ಕೆಳಗೆ ಬಿದ್ದರು. ನಾನು ಹತ್ತಿರ ಹೋದಾಗ ಅವರು ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಗಾಳಿಪಟ ದಾರದಿಂದ ಕುತ್ತಿಗೆ ಕಟ್ ಆಗಿದ್ದರಿಂದ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಮೃತ ವೈದ್ಯೆ ಪಿಂಪ್ಲಿ ಸೌದಾಗರ್ ಪ್ರದೇಶದ ನಿವಾಸಿ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅತಿಯಾದ ವಯಾಗ್ರ ಸೇವಿಸಿ ದೃಷ್ಟಿ ಹೋಯ್ತು!

    ಅತಿಯಾದ ವಯಾಗ್ರ ಸೇವಿಸಿ ದೃಷ್ಟಿ ಹೋಯ್ತು!

    ನವದೆಹಲಿ: ಎಲ್ಲದಕ್ಕೂ ಒಂದು ಮಿತಿಯಿರುತ್ತದೆ. ಅದರ ವ್ಯಾಪ್ತಿಯನ್ನು ದಾಟಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಇದಕ್ಕೆ ಉದಾರಹಣೆ ಎಂಬಂತೆ ವ್ಯಕ್ತಿಯೊಬ್ಬರು ಲೈಂಗಿಕ ತೃಪ್ತಿಯಾಗಿ ಹೆಚ್ಚು ವಯಾಗ್ರ ಸೇವಿಸಿ, ದೃಷ್ಟಿ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.

    ಹೌದು, ವ್ಯಕ್ತಿಯೊಬ್ಬರು ಆನ್‍ಲೈನ್ ಮೂಲಕ ವಯಾಗ್ರ ಖರೀದಿಸಿದ್ದು, ನಿತ್ಯವೂ 50 ಗ್ರಾಂ ಗಿಂತ ಹೆಚ್ಚಿನ ಪ್ರಮಾಣದಲ್ಲಿ ವಯಾಗ್ರಾ ಸೇವಿಸಿದ್ದಾರೆ. ಹೀಗಾಗಿ ಅವರ ಎರಡೂ ಕಣ್ಣುಗಳು ಕೆಂಪಾಗಿ ದೃಷ್ಟಿ ದೋಷಕ್ಕೆ ತುತ್ತಾಗಿದ್ದಾರೆ. ಅವರ ಮುಂದಿರುವ ವ್ಯಕ್ತಿ ಹಾಗೂ ವಸ್ತುಗಳು ಮಂಜು ಮಂಜಾಗಿ ಕಾಣಿಸಲು ಪ್ರಾರಂಭಿಸಿವೆ. ತಮಗೆ ಎದುರಾದ ವಿಚಿತ್ರ ಸಮಸ್ಯೆಯಿಂದ ಭಯಗೊಂಡ ಅವರು ವೈದ್ಯರನ್ನು ಭೇಟಿಯಾಗಿದ್ದಾರೆ. ಇದನ್ನೂ ಓದಿ: ಕಾಂಡೋಮ್ ಬಳಸಿ ಆಸ್ಪತ್ರೆ ಸೇರಿದ! ವೈದ್ಯರು ಹೇಳಿದ್ದು ಏನು?

    ತಪಾಸಣೆಗೆ ಒಳಪಡಿಸಿ ನಂತರ ರೋಗಿಯನ್ನು ವಿಚಾರಿಸಿದ ವೈದ್ಯರು, ಅತಿಯಾದ ವಯಾಗ್ರ ಸೇವನೆ ಮಾಡಿದ್ದೆ ಈ ಸಮಸ್ಯೆಗೆ ಕಾರಣ ಎಂದು ಖಚಿತಪಡಿಸಿದ್ದಾರೆ. ಕೆಲವು ಪುರುಷರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಶಿಶ್ನ ನಿಮಿರುವಿಕೆ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದಾಗಿ ತಮ್ಮ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ವಯಾಗ್ರ ಸೇವಿಸುತ್ತಾರೆ. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ

    ಕೆಲವರು ತಮಗಿರುವ ಲೈಂಗಿಕ ಕ್ರಿಯೆಯ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅವರು ವೈದ್ಯರ ಸಲಹೆ ಪಡೆಯದೇ ಔಷಧಗಳನ್ನು ತೆಗೆದುಕೊಂಡ ಪರಿಣಾಮ ದೃಷ್ಟಿ ದೋಷದಂತಹ ಸಮಸ್ಯೆಗಳು ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋ ‘ಕಾಂಡೋಮ್ ಚಾಲೆಂಜ್’ ಟ್ರೈ ಮಾಡ್ಬೇಡಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರು ಡಾಕ್ಟರ್ ಜೊತೆಗಿನ ಏಕಾಂತದ ಫೋಟೋ ಹರಿಬಿಟ್ಟ ಮಾಜಿ ಪ್ರಿಯಕರ!

    ಬೆಂಗ್ಳೂರು ಡಾಕ್ಟರ್ ಜೊತೆಗಿನ ಏಕಾಂತದ ಫೋಟೋ ಹರಿಬಿಟ್ಟ ಮಾಜಿ ಪ್ರಿಯಕರ!

    ಬೆಂಗಳೂರು: ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಮಾಜಿ ಪ್ರಿಯಕರ ಹಳೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾನೆ ಎಂದು ವೈದ್ಯೆಯೊಬ್ಬರು ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದಾರೆ.

    ಚೆನ್ನೈ ಮೂಲದ 26 ವರ್ಷದ ಸೌಮ್ಯಾ(ಹೆಸರು ಬದಲಾಯಿಸಲಾಗಿದೆ) ವೈದ್ಯೆಯಾಗಿ ಬೆಂಗಳೂರಿನಲ್ಲಿ ವೃತ್ತಿ ಮಾಡುತ್ತಿದ್ದಾರೆ. ನರೇಶ್ (ಹೆಸರು ಬದಲಾಯಿಸಲಾಗಿದೆ) ಮಾನಸಿಕವಾಗಿ ಕಿರುಕುಳ ನೀಡುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾನೆ ಎಂದು ದೂರಿದ್ದಾರೆ.

    ನಡೆದದ್ದು ಏನು?
    ಕಾಲೇಜು ದಿನಗಳಲ್ಲಿ ಸೌಮ್ಯಾ ಹಾಗೂ ನರೇಶ್ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಬಳಿಕ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇಬ್ಬರು ಎರಡು ವರ್ಷ ವಾಸವಾಗಿದ್ದರು. ನರೇಶ್ ಡಿಪ್ಲೋಮಾ ಪೂರೈಸಿದ್ದ. ಇಬ್ಬರಲ್ಲಿ ಮನಸ್ತಾಪ ಉಂಟಾಗಿ ಈಗ ಬೇರೆಯಾಗಿದ್ದಾರೆ. ಆದರೆ ನರೇಶ್ ಸೌಮ್ಯಾ ಬಳಿ ಪ್ಯಾನ್ ಕಾರ್ಡ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮತ್ತು ಬಂಗಾರದ ಆಭರಣಗಳನ್ನು ಪಡೆದು, ತನ್ನ ಬಳಿ ಇಟ್ಟುಕೊಂಡಿದ್ದ.

    ತನಗಾದ ಅನ್ಯಾಯದಿಂದ ಸೌಮ್ಯಾ ವನಿತಾ ಸಹಾಯವಾಣಿ ಮೂಲಕ ಪೊಲೀಸ್ ಹಾಗೂ ಪರಿಹಾರ್ ಎನ್‍ಜಿಓ ಮೊರೆ ಹೋಗಿದ್ದಳು. ವಕೀಲರೊಂದಿಗೆ ಕೋರ್ಟ್‍ಗೆ ಹಾಜರಾಗಿದ್ದ ನರೇಶ್ ಸೌಮ್ಯಾ ಬಳಿ ಪಡೆದುಕೊಂಡಿದ್ದ 2 ಲಕ್ಷ ರೂ. ಹಾಗೂ ವಸ್ತುಗಳನ್ನು ಮರಳಿಸುವುದಾಗಿ ಒಪ್ಪಿಕೊಂಡಿದ್ದ. ಆದರೆ ನರೇಶ್ ಕಳೆದ ಎರಡು ತಿಂಗಳಿನಿಂದ ತನ್ನ ವರಸೆ ಬದಲಿಸಿ, ಸೌಮ್ಯಾ ಜೊತೆಗಿದ್ದ ಏಕಾಂತದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ತನ್ನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅಂತಾ ಸೌಮ್ಯಾ ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ನರೇಶ್‍ಗಾಗಿ ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೋಷಕರೇ.., ಮಕ್ಕಳ ಕೈಗೆ ನಾಣ್ಯ ಕೊಡುವ ಮುನ್ನ ಎಚ್ಚರ

    ಪೋಷಕರೇ.., ಮಕ್ಕಳ ಕೈಗೆ ನಾಣ್ಯ ಕೊಡುವ ಮುನ್ನ ಎಚ್ಚರ

    ಮಂಡ್ಯ: ನಾಲ್ಕು ವರ್ಷದ ಮಗು 5 ರೂ. ನಾಣ್ಯ ನುಂಗಿದ್ದರಿಂದ ತಂದೆ-ತಾಯಿ ಆತಂಕದಿಂದ ಮಗುವಿನೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ನಡೆದಿದೆ.

    ಅಕ್ಮಲ್ ಮತ್ತು ಶಾಜಿಯಾ ದಂಪತಿಯ ಪುತ್ರ ಮಹಮದ್ ನಾಣ್ಯ ನುಂಗಿದ್ದಾನೆ. ಮಗುವಿನ ಕೈಗೆ ಕೊಟ್ಟಿದ್ದರಿಂದ ಆಟವಾಡುತ್ತಾ ಆತ ನಾಣ್ಯವನ್ನು ನುಂಗಿದ್ದಾನೆ. ಇದನ್ನು ನೋಡಿದ ಪೋಷಕರು ಆತಂಕದಿಂದ ಮಗುವನ್ನು ಅಶ್ವಿನಿ ಕ್ಲೀನಿಕ್‍ನ ಡಾಕ್ಟರ್ ಸಿದ್ದರಾಜು ಬಳಿ ಕರೆ ತಂದಿದ್ದಾರೆ.

    ಮಗುವಿನ ಎಕ್ಸ್ ರೇ ತೆಗೆದು ನೋಡಿದಾಗ ಆತನ ಹೊಟ್ಟೆಯಲ್ಲಿ 5ರೂ. ನಾಣ್ಯವಿರುವುದು ಪತ್ತೆಯಾಗಿದೆ. ಪೋಷಕರಿಗೆ ಸಾಂತ್ವನ ಹೇಳಿದ ವೈದ್ಯರು ಸದ್ಯಕ್ಕೆ ಏನೂ ತೊಂದರೆಯಿಲ್ಲ ಎಂದು ಹೇಳಿ ಎರಡು ದಿನ ಬಿಟ್ಟು ಮತ್ತೆ ಪರೀಕ್ಷೆಗೆ ಬರುವಂತೆ ತಿಳಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ವೈದ್ಯರು, ಮಕ್ಕಳ ಕೈಗೆ ನಾಣ್ಯ ಕೊಡುವುದು ಅಪಾಯಕಾರಿ. ಯಾಕಂದ್ರೆ ಇದನ್ನು ಮಕ್ಕಳು ನುಂಗಿದಾಗ ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರವಾಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಮಕ್ಕಳ ಕೈಗೆ ಕಾಯಿನ್ ಕೊಡಬೇಡಿ ಎಂದು ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv