Tag: doctor

  • ವಿಮಾನದಲ್ಲಿ ಫ್ರಾನ್ಸ್ ಪ್ರಜೆ ಜೀವ ಉಳಿಸಿದ ಮೈಸೂರು ಮೂಲದ ವೈದ್ಯ

    ವಿಮಾನದಲ್ಲಿ ಫ್ರಾನ್ಸ್ ಪ್ರಜೆ ಜೀವ ಉಳಿಸಿದ ಮೈಸೂರು ಮೂಲದ ವೈದ್ಯ

    ಮೈಸೂರು: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಫ್ರಾನ್ಸ್ ಪ್ರಜೆಯೊಬ್ಬರ ಜೀವವನ್ನು ಮೈಸೂರು ಮೂಲದ ವೈದ್ಯರೊಬ್ಬರು ಉಳಿಸಿ ನಿಷ್ಠೆಯಿಂದ ಕರ್ತವ್ಯ ಪಾಲಿಸಿದ್ದಾರೆ.

    ಏರ್ ಫ್ರಾನ್ಸ್ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಫ್ರಾನ್ಸ್ ಪ್ರಜೆಯೊಬ್ಬರಿಗೆ ಸಿಂಕೋಪಾಲ್ ಸಮಸ್ಯೆ ಕಾಣಿಸಿಕೊಂಡಿದೆ. ಅದೇ ವಿಮಾನದಲ್ಲಿ ಪ್ಯಾರಿಸ್‍ನಿಂದ ಬೆಂಗಳೂರಿಗೆ ಬರುತ್ತಿದ್ದ ಮೈಸೂರಿನ ಮಕ್ಕಳ ತಜ್ಞರಾದ ಡಾ. ಪ್ರಭುಲಿಂಗಸ್ವಾಮಿ ತಕ್ಷಣ ಫ್ರಾನ್ಸ್ ಪ್ರಜೆಗೆ ವಿಮಾನದಲ್ಲೇ ಚಿಕಿತ್ಸೆ ನೀಡಿದ್ದಾರೆ. ಇದರಿಂದ ಫ್ರಾನ್ಸ್ ಪ್ರಜೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಾ. ಪ್ರಭುಲಿಂಗಸ್ವಾಮಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಏರ್ ಫ್ರಾನ್ಸ್ ಸಂಸ್ಥೆ ನೂರು ಯುರೋ ಅನ್ನು ಉಡುಗೊರೆಯಾಗಿ ನೀಡಿದೆ.

    ವಿಶ್ವದ ಅತ್ಯುನ್ನತ ವಿಮಾನಯಾನ ಸಂಸ್ಥೆಯೆನಿಸಿರುವ ಏರ್ ಫ್ರಾನ್ಸ್ ಸಂಸ್ಥೆಯೂ ಇಮೇಲ್ ಮೂಲಕ ಡಾ. ಪ್ರಭುಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸಿದೆ. ಬಿಡುವಿನಲ್ಲಿದ್ದರು ತಮ್ಮ ಕರ್ತವ್ಯವನ್ನು ಮರಿಯದ ಡಾ. ಪ್ರಭುಲಿಂಗಸ್ವಾಮಿ ಅವರ ಕೆಲಸ ನಿಜಕ್ಕೂ ಮೆಚ್ಚಲೇಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಣ್ಣು ಮಗು ಎಂದಾಕ್ಷಣ ಯಶ್ ಕಣ್ಣಲ್ಲಿ ಆನಂದಭಾಷ್ಪ: ಡಾ.ಸ್ವರ್ಣಲತಾ

    ಹೆಣ್ಣು ಮಗು ಎಂದಾಕ್ಷಣ ಯಶ್ ಕಣ್ಣಲ್ಲಿ ಆನಂದಭಾಷ್ಪ: ಡಾ.ಸ್ವರ್ಣಲತಾ

    ಬೆಂಗಳೂರು: ನಟಿ ರಾಧಿಕಾ ಅವರಿಗೆ ಆಪರೇಷನ್ ಮಾಡಿ ನಿಮಗೆ ಹೆಣ್ಣು ಮಗು ಆಗಿದೆ ಎಂದು ಹೇಳಿದಾಕ್ಷಣ ಯಶ್ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು ಎಂದು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ.ಸ್ವರ್ಣಲತಾ ಅವರು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಸ್ವರ್ಣಲತಾ ಅವರು, ರಾಧಿಕಾ ಅವರಿಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿದೆ. ಈಗ ತಾಯಿ ರಾಧಿಕಾ ನಾರ್ಮಲ್ ಆಗಿ ಮಾತನಾಡುತ್ತಿದ್ದು, ಎದ್ದು ನಡೆಯಬಹುದು. ತಾಯಿ ಮತ್ತು ಮಗಳು ತುಂಬಾ ಚೆನ್ನಾಗಿದ್ದಾರೆ ಎಂದು ಹೇಳಿದರು.

    ಮಗು ತುಂಬಾ ಚೆನ್ನಾಗಿದ್ದು, ತುಂಬಾ ಕ್ಯೂಟ್ ಆಗಿದೆ. ಮಗುವಿನ ಅಜ್ಜಿ- ತಾತ ತುಂಬಾ ಸಂತೋಷದಿಂದ ಇದ್ದಾರೆ. ಎಲ್ಲರೂ ಈಗಾಗಲೇ ಬಂದು ನೋಡಿಕೊಂಡು ಹೋಗಿದ್ದಾರೆ. ಮಗು, ತಾಯಿ ಹೇಗಿದ್ದಾರೆ ಎಂದು ಕಾತರದಿಂದ ಸ್ನೇಹಿತರೆಲ್ಲ ಈಗ ಬಂದು ಭೇಟಿಯಾಗುತ್ತಿದ್ದಾರೆ. ಯಶ್ ಕೂಡ ಸುಸ್ತಾಗಿದ್ದಾರೆ. ಆದ್ದರಿಂದ ಆ ನಂತರ ಸಂದರ್ಶನ ಕೊಡುತ್ತಾರೆ ಎಂದು ವೈದ್ಯರು ತಿಳಿಸಿದರು.

    ನಾವೆಲ್ಲಾ ಆಪರೇಷನ್ ಥಿಯೇಟರ್ ಒಳಗಡೆ ಇದ್ವಿ. ಅವರ ಮೊದಲ ರಿಯಾಕ್ಷನ್ ಹೇಳಲು ಪದಗಳ ಮೂಲಕ ಸಾಧ್ಯವಿಲ್ಲ. ಆದರೆ ತುಂಬಾ ಸಂತೋಷದಿಂದ ಇದ್ದಾರೆ. ಹೆಣ್ಣು ಮಗು ಜನಿಸಿದೆ ಎಂದು ಹೇಳಿದಾಗ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿರಬಹುದು. ಇದೊಂದು ಲವ್ಲೀ ಕ್ಷಣವಾಗಿತ್ತು ಎಂದು ಸ್ವರ್ಣಲತಾ ಅವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ- ಬಿಜಿಎಸ್ ವೈದ್ಯರಿಂದ ಸ್ಪಷ್ಟನೆ

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ- ಬಿಜಿಎಸ್ ವೈದ್ಯರಿಂದ ಸ್ಪಷ್ಟನೆ

    ಬೆಂಗಳೂರು: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡ ಸ್ಪಷ್ಟಪಡಿಸಿದೆ.

    ಶ್ರೀಗಳು ಶನಿವಾರ ತಮ್ಮ ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದರು. 6 ತಿಂಗಳ ನಂತರ ಶ್ರೀಗಳು ಜನರಲ್ ಚೆಕಪ್‍ಗೆ ಬಂದು ದಾಖಲಾಗಿದ್ದರು.

    ಡಾ. ರವೀಂದ್ರ ತಂಡ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿ ಏನೂ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಇಂದು ಬೆಳಗ್ಗೆ 5.30ರ ಸುಮಾರಿಗೆ ಎದ್ದಿರುವ ಶ್ರೀಗಳು, ಎಂದಿನಂತೆ ಲವಲವಿಕೆಯಿಂದ ಪೂಜೆ ಮಾಡಿದ್ದಾರೆ. ಮಧ್ಯಾಹ್ನದ ವೇಳೆಗೆ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.

    ಶ್ರೀಗಳ ಜೊತೆ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಸ್ವಾಮೀಜಿ ಆಗಮಿಸಿದ್ದು, ವೈದ್ಯಕೀಯ ವರದಿ ಬಳಿಕ ವೈದ್ಯರ ಸಲಹೆ ಮೇರೆಗೆ ಮಠಕ್ಕೆ ವಾಪಸ್ ಕರೆ ತರಲಾಗುವುದು ಎಂದು ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು.

    ಪೊಲೀಸ್ ಬೆಂಗಾವಲಿನಲ್ಲಿ ಶ್ರೀಗಳನ್ನು ಕೆಂಗೇರಿ ಬಿಜಿಎಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಕಳೆದ ಜೂನ್ ನಲ್ಲಿ 5 ಸ್ಟಂಟ್ ಗಳನ್ನು ಅಳವಡಿಸಲಾಗಿತ್ತು. ಬಳಿಕ 3 ಸ್ಟಂಟ್ ಅಳವಡಿಸಲಾಗಿತ್ತು. ಇದರಿಂದ 6 ತಿಂಗಳಿಗೆ ಒಮ್ಮೆ ತಪಾಸಣೆಗೆ ನಡೆಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದರು. ಹೀಗಾಗಿ ನಿನ್ನೆ ಮಧ್ಯಾಹ್ನ 3 ಗಂಟೆಗೆ ತುಮಕೂರಿನಿಂದ ಹೊರಟ ಶ್ರೀಗಳು ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಆಸ್ಪತ್ರೆಯ ಒಳಗೆ ತೆರಳಲು ವೀಲ್ಹ್ ಚೇರ್ ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿ ತಾವೇ ನಡೆದುಕೊಂಡು ತೆರಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುಡಿದ ಮತ್ತಿನಲ್ಲೇ ಶಸ್ತ್ರಚಿಕಿತ್ಸೆ- ವೈದ್ಯನ ಎಡವಟ್ಟಿಗೆ ತಾಯಿ, ಮಗು ಬಲಿ

    ಕುಡಿದ ಮತ್ತಿನಲ್ಲೇ ಶಸ್ತ್ರಚಿಕಿತ್ಸೆ- ವೈದ್ಯನ ಎಡವಟ್ಟಿಗೆ ತಾಯಿ, ಮಗು ಬಲಿ

    ಗಾಂಧಿನಗರ: ಕುಡಿತ ಮತ್ತಿನಲ್ಲೇ ವೈದ್ಯನೊಬ್ಬ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ಬಾಣಂತಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಗುಜರಾತ್ ರಾಜ್ಯದ ರಾಜ್‍ಕೋಟ್ ಜಿಲ್ಲೆಯಲ್ಲಿ ನಡೆದಿದೆ.

    ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಹಾಗೂ ಮಗುವಿನ ಸಾವಿಗೆ ಕಾರಣವಾಗಿದ್ದ ಸೋನಾವಾಲಾ ಆಸ್ಪತ್ರೆಯ ಆರ್‍ಎಂಓ(ರೆಸಿಡೆಂಟ್ ಮೆಡಿಕಲ್ ಆಫೀಸರ್) ಡಾ.ಪರೇಶ್ ಲಖಾನಿ (50)ಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ವೈದ್ಯ ಕಳೆದ 15 ವರ್ಷಗಳಿಂದ ಸೋನಾವಾಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ಸದ್ಯ ತನಿಖೆಯನ್ನು ಆರಂಭಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಾಯಿ-ಮಗು ವೈದ್ಯಕೀಯ ಕಾರಣಕ್ಕೆ ಮೃತ ಪಟ್ಟಿದ್ದಾರಾ ಅಥವಾ ವೈದ್ಯನ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆಂಬುದು ಸಾಬೀತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

    ಏನಿದು ಘಟನೆ?
    ಸೋಮವಾರ ಸಂಜೆ ಹೆರಿಗೆ ನೋವಿನಿಂದ ಬಳಲುತ್ತಿದ್ದ 22 ವರ್ಷದ ಮಹಿಳೆಯನ್ನು ರಾಜ್‍ಕೋಟ್ ನ ಸೋನಾವಾಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗರ್ಭಿಣಿಯ ಪರಿಸ್ಥಿತಿಯನ್ನು ಅರಿತ ಡಾ. ಲಖಾನಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದ್ದನು. ನಂತರ ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆಯಲಾಯಿತು.

    ಮಗು ಹುಟ್ಟುವಾಗಲೇ ಸಾವನ್ನಪ್ಪಿತ್ತು. ಇತ್ತ ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಗೆ ವಿಪರೀತ ರಕ್ತಸ್ರಾವವಾಗುತ್ತಿತ್ತು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಯತ್ನಿಸಿದ್ದರು. ಆದರೆ ಮಾರ್ಗಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾರೆ.

    ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯ ಕುಡಿದ ಅಮಲಿನಲ್ಲಿದ್ದು, ಆತನ ನಿರ್ಲಕ್ಷ್ಯದಿಂದಲೇ ತಾಯಿ-ಮಗು ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿಯ ಕೊನೆ ಕ್ಷಣದ ಬಗ್ಗೆ ವಿಕ್ರಂ ಆಸ್ಪತ್ರೆಯ ವೈದ್ಯ ಹೇಳಿದ್ದೇನು?

    ಅಂಬಿಯ ಕೊನೆ ಕ್ಷಣದ ಬಗ್ಗೆ ವಿಕ್ರಂ ಆಸ್ಪತ್ರೆಯ ವೈದ್ಯ ಹೇಳಿದ್ದೇನು?

    ಬೆಂಗಳೂರು: ರೆಬಲ್ ಸ್ಟಾರ್ ಅಂಬಿ ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾರೆ. ಹಾಗಾದ್ರೆ ಅಂಬಿಯವರಿಗೆ ಶನಿವಾರ ಸಂಜೆ ಏನಾಯ್ತು..? ಅಂಬಿಯನ್ನ ಉಳಿಸಲು ಮಾಡಿದ ಪ್ರಯತ್ನ ಹೇಗಿತ್ತು..? ಈ ಬಗ್ಗೆ ಅಂಬಿಗೆ ಚಿಕಿತ್ಸೆ ನೀಡುತ್ತಿದ್ದ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಗುರುವಾರ ಮತ್ತು ಶುಕ್ರವಾರ ಅಂಬರೀಶ್ ಅವರನ್ನು ಪರೀಕ್ಷೆ ಮಾಡಿದ್ದೆ. ವಾತಾವರಣದಿಂದಾಗಿ ಅವರಿಗೆ ಕೆಮ್ಮು, ಕಫ ಸ್ವಲ್ಪ ಜೋರಾಗಿತ್ತು. ಹೀಗಾಗಿ ಅದಕ್ಕೆ ತಕ್ಕಂತೆ ನಾನು ಚಿಕಿತ್ಸೆ ನೀಡಿದ್ದೆ.

    ಶನಿವಾರ ಸಂಜೆ ಮನೆಯಲ್ಲಿ ಅವರ ರೂಮಿಗೆ ಮಲಗಲು ಹೋಗುವ ಸಂದರ್ಭದಲ್ಲಿ ಸಡನ್ ಆಗಿ ಆಕ್ಸಿಜನ್ ಕಡಿಮೆಯಾಗಿ ಹೃದಯಾಘಾತವಾಯಿತು. ಈ ವೇಳೆ ಅವರ ಮನೆಯವರು ನನಗೆ ಕರೆ ಮಾಡಿದ್ರು. ಜೋರಾಗಿ ಅಳೋದು ಕೇಳಿತ್ತು. ಇದರಿಂದ ಗಾಬರಿಗೊಂಡ ನಾನು ಅಲ್ಲೆ ಒಬ್ಬರು ಒಳ್ಳೆಯ ನರ್ಸ್ ಇರುವುದು ನೆನಪಾಯ್ತು. ಅವನಿಗೆ 2 ವರ್ಷದಿಂದ ಅಂಬರೀಶ್ ಆರೋಗ್ಯದ ಬಗ್ಗೆ ತಿಳಿದಿದೆ. ಆದುದರಿಂದ ನಾನು ಕೂಡಲೇ ಅವನಿಗೆ ಫೋನ್ ಕೊಡಿ ಅಂತ ಹೇಳಿದೆ.

    ಅವನ ಜೊತೆ ಮಾತನಾಡಿ ಮನೆಯಲ್ಲಿ 2 ಆಕ್ಸಿಜನ್ ಇದೆ. ಎಲ್ಲಾ ಆಕ್ಸಿಜನ್ ನನ್ನು ಜಾಸ್ತಿ ಮಾಡು. ಹಾಗೆಯೇ ಹೃದಯಘಾತವಾದ ಕೂಡಲೇ ಮಾಡುವ ಮಸಾಜ್ ಮಾಡು. ಆಂಬುಲೆನ್ಸ್ ನಾನು ಕಳುಹಿಸಿಕೊಡುತ್ತೇನೆ. ನೀನೇನು ಯೋಚನೆ ಮಾಡಬೇಡ ಇಷ್ಟು ಮಾಡು. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ ಅಂತ ಸೂಚಿಸಿದೆ.

    ನಾನು ಬರೋದ್ರೊಳಗೆ ಹೃದಯಾಘಾತವಾಗಿತ್ತು. ಬಂದಾಗ ಹಾರ್ಟ್ ಬೀಟಿಂಗ್, ಬ್ಲಡ್ ಫ್ರೆಶರ್, ಪಲ್ಸ್, ಪ್ರಜ್ಞಾಹೀನರಾಗಿದ್ದರು. ನಮ್ಮ ಆಸ್ಪತ್ರೆಯಿಂದ ಅವರ ಮನೆಗೆ ಹೋಗೋಕೆ 5 ನಿಮಿಷ ಬೇಕು. ಅವರಿಗೆ ಹೃದಯಾಘಾತವಾಗಿ ಸುಮಾರು 10ರಿಂದ 15 ನಿಮಿಷ ಆಗಿರಬಹುದು. ಹೀಗಾದಾಗ ಸರಿ ಮಾಡುವುದು ಕಷ್ಟವಾಗುತ್ತದೆ. ಮನೆಯಲ್ಲಂತೂ ಸಾಧ್ಯವೇ ಇಲ್ಲ. ಆಸ್ಪತ್ರೆಯಲ್ಲೂ ಹೀಗಾದಾಗ ಕೆಲವು ಬಾರಿ ಕಷ್ಟ ಆಗುತ್ತದೆ. ಇದೇ ಅವರಲ್ಲಿ ಕೊನೆಯ ಬಾರಿ ಆದ ಘಟನೆ ಅಂತ ಅವರು ಹೇಳಿದ್ರು.

    ಹೃದಯಾಘಾತವಾಗಿ ಸುಮಾರು 1 ಗಂಟೆ ಆದ ಬಳಿಕ ಅಂಬರೀಶ್ ನಿಧನರಾಗಿದ್ದಾರೆ ಅಂತ ಘೋಷಣೆ ಮಾಡಿದ್ದೇವೆ ಅಂತ ಅವರು ಅಂಬಿಯ ಕೊನೆಯ ಕ್ಷಣಗಳನ್ನು ಮೆಲುಕು ಹಾಕಿದ್ರು.

    https://www.youtube.com/watch?v=k3Fm7XpZxlE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಪೇದೆಯಿಂದ ಹಲ್ಲೆ- ವೈದ್ಯರಿಂದ ಪ್ರತಿಭಟನೆ

    ಪೊಲೀಸ್ ಪೇದೆಯಿಂದ ಹಲ್ಲೆ- ವೈದ್ಯರಿಂದ ಪ್ರತಿಭಟನೆ

    ಕಲಬುರಗಿ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಪೊಲೀಸ್‌ ಪೇದೆಯೊಬ್ಬ ಸರ್ಕಾರಿ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಇಂದು ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.

    ಆನಂದ್ ಹಲ್ಲೆ ನಡೆಸಿರುವ ಡಿಎಆರ್ ಪೊಲೀಸ್ ಪೇದೆ. ಡಾ. ಚಂದ್ರು ಹಲ್ಲೆಗೊಳಗಾದ ವೈದ್ಯ. ಆನಂದ್ ಅವರು ಚಿಂಚೋಳಿ ತಾಲೂಕಿನ ನೀಮಾಹೊಸಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.

    ಆನಂದ್ ಅವರ ಸಂಬಂಧಿಕರೊಬ್ಬರಿಗೆ ಹುಷಾರಿಲ್ಲವೆಂದು ಚಿಂಚೋಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸೋಮವಾರ ರಾತ್ರಿ ವೈದ್ಯರು ರೋಗಿಗೆ ಚಿಕಿತ್ಸೆ ನೀಡಲು ತಡವಾಗಿ ಬಂದರೆಂದು ಕೊಪಗೊಂಡ ಪೊಲೀಸ್ ಪೇದೆ, ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಅಷ್ಟೆ ಅಲ್ಲದೆ ಆಸ್ಪತ್ರೆ ಸಿಬ್ಬಂದಿ ರತ್ನಮ್ಮ, ಸತ್ಯಮ್ಮ ಎಂಬವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು.

    ವೈದ್ಯರ ಮೇಲೆ ಆಗಿರುವ ಹಲ್ಲೆಯನ್ನು ಖಂಡಿಸಿ ಇಂದು ಚಿಂಚೋಳಿ ಸರ್ಕಾರಿ ಆಸ್ಪತ್ರೆಯ ವೈದ್ಯರೆಲ್ಲ ಸೇರಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮೂಲಕ ಹಲ್ಲೆ ಮಾಡಿದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ನಂತರ ಜಿಲ್ಲಾಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಭದ್ರತೆಯನ್ನು ನೀಡುವ ಭರವಸೆ ಕೊಟ್ಟ ಬಳಿಕ ವೈದ್ಯರೆಲ್ಲ ಪ್ರತಿಭಟನೆ ಹಿಂಪಡೆದಿದ್ದಾರೆ.

    ಘಟನೆ ಕುರಿತು ಡಾ. ಚಂದ್ರು ಪೊಲೀಸ್ ಪೇದೆ ಆನಂದ್ ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಬಿಟ್ರೆ ಯಾವುದೇ ಚಿಕಿತ್ಸೆ ಇಲ್ಲ- ರಮ್ಯಾ ಕಾಯಿಲೆ ಬಗ್ಗೆ ಮೂಳೆ ತಜ್ಞರ ಸ್ಪಷ್ಟನೆ

    ಆಪರೇಷನ್ ಬಿಟ್ರೆ ಯಾವುದೇ ಚಿಕಿತ್ಸೆ ಇಲ್ಲ- ರಮ್ಯಾ ಕಾಯಿಲೆ ಬಗ್ಗೆ ಮೂಳೆ ತಜ್ಞರ ಸ್ಪಷ್ಟನೆ

    ಮಂಡ್ಯ: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ (Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿಲ್ಲ.

    ಈ ಕಾಯಿಲೆ ಬಗ್ಗೆ ಮೂಳೆ ತಜ್ಞ ಡಾ.ಜಗನ್ನಾಥ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆ ಪ್ರಮುಖವಾಗಿ ಮೂಳೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಇದನ್ನು ಮೂಳೆ ಕ್ಯಾನ್ಸರ್ ಎಂದು ಹೇಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಇದು ಅಪರೂಪದ ಕಾಯಿಲೆಯಾಗಿದ್ದು, ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಸಮಾನಾಗಿ ಕಾಣಿಸಿಕೊಳ್ಳುತ್ತದೆ. ಇದು 2-3 ಸಾವಿರ ಮಂದಿಯಲ್ಲಿ ಒಬ್ಬರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯನ್ನು ಮೂಳೆಯಲ್ಲಿ ಬದಲಾವಣೆ ಕಂಡುಬಂದ ನಂತರ ತಿಳಿಯಬಹುದಾಗದೆ. ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆ ಮೊದಲನೇ ಹಂತದಲ್ಲಿ ಇದ್ದಾಗಲೇ ಚಿಕಿತ್ಸೆ ಪಡೆಯಬೇಕು ಇಲ್ಲವಾದರೆ ಮೂಳೆಯನ್ನು ತಿನ್ನುತ್ತಾ ಹೋಗುತ್ತದೆ ಎಂದು ಅವರು ವಿವರಿಸಿದ್ದಾರೆ.

    ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆ ಬಂದರೆ, ಮೂಳೆಗಳಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ಜಾಯಿಂಟ್‍ಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಬಂದರೆ ಓಡಾಡೋಕೆ ಆಗಲ್ಲ. ಅಲ್ಲದೇ ಕಾಯಿಲೆ ಕಾಣಿಸಿಕೊಂಡ ಜಾಗವನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಆ ಜಾಗದಲ್ಲಿ ತುಂಬಾ ನೋವಾಗುತ್ತದೆ. ಒಂದು ವೇಳೆ ಈ ಕಾಯಿಲೆ ಬಂದರೆ ಅದಕ್ಕೆ ಚಿಕಿತ್ಸೆ ಎಂದರೆ ಆಪರೇಷನ್ ಮಾತ್ರ. ಆಪರೇಷನ್ ಬಿಟ್ಟು ಬೇರೆ ಯಾವುದೇ ಚಿಕಿತ್ಸೆ ಇಲ್ಲ. ಆಪರೇಷನ್ ಮಾಡಿದ ತಕ್ಷಣ ಸಂಪೂರ್ಣ ಬೆಡ್ ರೆಸ್ಟ್ ಮಾಡಬೇಕು ಎಂದು ಡಾ.ಜಗನ್ನಾಥ್ ಹೇಳಿದ್ದಾರೆ.

    https://www.instagram.com/p/BpH55YWjMcE/?utm_source=ig_embed

    ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದ್ದು, ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದೆ. ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್‍ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

    ದೇಹದಲ್ಲಿ ಸಮಸ್ಯೆಗಳಾದರೆ ವ್ಯತಾಸ ಕಂಡು ಬಂದರೆ ಡಾಕ್ಟರ್ ಸಂಪರ್ಕಿಸಿ. ನಿರ್ಲಕ್ಷ್ಯ ಮಾಡಿದರೆ ಸೂಕ್ತ ಬೆಲೆ ತೆರಬೇಕಾಗತ್ತದೆ. ನಿರ್ಲಕ್ಷ್ಯ ಮಾಡಿ ನಾನು ಈಗ ಪಾಠ ಕಲಿತಿದ್ದೇನೆ ಅಂತ ಕಾಲಿನ ಚಿತ್ರ ಹಾಕಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಒಟ್ಟಿನಲ್ಲಿ ನಟ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದ ಮಾಜಿ ಸಂಸದೆ ರಮ್ಯಾ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ರಮ್ಯಾ ಅವರು ಅಂಬಿ ನೋಡಲು ಯಾಕೆ ಬರಲಿಲ್ಲ ಅನ್ನೋ ಅಸಲಿ ಕಾರಣ ಇದೀಗ ತಿಳಿದುಬಂದಿದೆ.

    https://www.youtube.com/watch?v=pMVHrrxwSzo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೈದ್ಯರ ಎಡವಟ್ಟಿನಿಂದ ಕೋಮಾ ಸೇರಿದ ಬಾಲಕ!

    ವೈದ್ಯರ ಎಡವಟ್ಟಿನಿಂದ ಕೋಮಾ ಸೇರಿದ ಬಾಲಕ!

    ಮೈಸೂರು: ವೈದ್ಯರ ಎಡವಟ್ಟಿನಿಂದಾಗಿ ಬಾಲಕನೊಬ್ಬ ಕೋಮಾ ಸ್ಥಿತಿ ತಲುಪಿದ ಘಟನೆ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಕಡುಬುರು ಗ್ರಾಮದ ನಿವಾಸಿ ಅಭಿ (14) ಅಸ್ವಸ್ಥಗೊಂಡ ಬಾಲಕ. ವೈದ್ಯರ ನಿರ್ಲಕ್ಷ್ಯದಿಂದಲೇ ಹೀಗೆ ಆಗಿದೆ ಎಂದು ಅಭಿ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

    ಘಟನೆಯ ವಿವರ: ಬಾಲಕ ಅಭಿಗೆ ಕಿವಿ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆ ಕೊಡಿಸಲು ಪೋಷಕರು 4 ದಿನಗಳ ಹಿಂದೆಯೇ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದರು. ವೈದ್ಯರು ನಿನ್ನೆ ರಾತ್ರಿ ಚುಚ್ಚು ಮದ್ದು ನೀಡಿದ್ದ ಪರಿಣಾಮ ಬಾಲಕ ಅಸ್ವಸ್ಥಗೊಂಡು ಕೋಮಾ ಸೇರುವಂತಾಗಿದೆ. ವೈದ್ಯರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಅಭಿ ಪೋಷಕರು ಆರೋಪ ಮಾಡಿದ್ದು, ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸೀಮಂತ ಶಾಸ್ತ್ರ ದಿನವೇ ಗುಡ್ ನ್ಯೂಸ್

    ಸೀಮಂತ ಶಾಸ್ತ್ರ ದಿನವೇ ಗುಡ್ ನ್ಯೂಸ್

    ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಅವರ ಸೀಮಂತ ಶಾಸ್ತ್ರವಿದೆ. ಆದರೆ ಸೀಮಾಂತ ಶಾಸ್ತ್ರದ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

    ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಗೌಡ್ರ ಸಂಪ್ರದಾಯದಂತೆ ಮಧ್ಯಾಹ್ನ ಸೀಮಂತ ಶಾಸ್ತ್ರ ನಡೆಯಲಿದ್ದು, ಸೀಮಂತದ ಫಂಕ್ಷನ್ ಗೆ ಸ್ಯಾಂಡಲ್ ವುಡ್ ಕಲಾವಿದರು ಭಾಗಿ ಆಗಲಿದ್ದಾರೆ.

    ಯಶ್ ಹಾಗೂ ರಾಧಿಕಾ ಡಿಸೆಂಬರ್ 9ರಂದು ಮದುವೆ ಆಗಿದ್ದರು. ಸಂತಸದ ವಿಷಯವೆಂದರೆ ಅದೇ ದಿನವೇ ಮಗು ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ಪ್ರಿನ್ಸೆಸ್ ಆಗಮನವಾಗುವ ಸಾಧ್ಯತೆ ಇದೆ.

    ಈಗಾಗಲೇ ರಾಧಿಕಾ ಹಾಗೂ ಯಶ್ ತಾಜ್ ವೆಸ್ಟೆಂಡ್ ಗೆ ಆಗಮಿಸಿದ್ದು, ಮದುವೆ ಆದ ಸ್ಥಳದಲ್ಲೇ ಸೀಮಂತ ಶಾಸ್ತ್ರ ನಡೆಯುತ್ತಿದೆ. ಈ ಸ್ಥಳ ಯಶ್ ಮತ್ತು ರಾಧಿಕಾರ ಫೇವರಿಟ್ ಸ್ಥಳವಾಗಿದೆ. ಸದ್ಯಕ್ಕೆ ಸೀಮಂತದ ಅರೇಂಜ್ ಮೆಂಟ್ಸ್ ನಡೆಯುತ್ತಿದ್ದು, ಯಶ್ ಹಾಗೂ ರಾಧಿಕಾ ಸೀಮಂತಕ್ಕೆ ರೆಡಿ ಆಗುತ್ತಿದ್ದಾರೆ. ಸಿನಿಮಾರಂಗದವರು, ಆಪ್ತರು ಮತ್ತು ಬಂಧುಗಳೆಲ್ಲರು ಸೀಮಂತಕ್ಕೆ ಹಾಜರಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ- ನವಜಾತ ಶಿಶು ಸಾವು

    ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ- ನವಜಾತ ಶಿಶು ಸಾವು

    ಡೆಹರಾಡೂನ್: ಸರ್ಕಾರಿ ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಹೆರಿಗೆಯ ನಂತರ ನವಜಾತ ಶಿಶು ಮೃತ ಪಟ್ಟಿರುವ ಘಟನೆ ಉತ್ತರಾಖಂಡದ ಡೆಹರಾಡೂನ್ ನ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.

    27 ವರ್ಷದ ಗರ್ಭಿಣಿಯು ಭಾನುವಾರ ಬೆಳಗ್ಗೆ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶೌಚಾಲಯಕ್ಕೆ ಹೋದಾಗ ಅಲ್ಲಿಯೇ ಹೆರಿಗೆಯಾಗಿದೆ. ಇದನ್ನ ಕಂಡ ಆಕೆಯ ಅಜ್ಜಿ ವೈದ್ಯರಿಗೆ ವಿಷಯ ತಿಳಿಸಿ ನರ್ಸ್ ಹಾಗೂ ವೈದ್ಯರು ಸ್ಥಳಕ್ಕೆ ಬಂದು ಮಹಿಳೆಯನ್ನು ಹೆರಿಗೆ ಕೋಣೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನವಜಾತ ಶಿಶು ಮೃತ ಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಹಿಂದೆಯೂ ಆಸ್ಪತ್ರೆಯಲ್ಲಿ ಬೆಡ್ ಇಲ್ಲದ ಕಾರಣ ಗರ್ಭಿಣಿಯೊಬ್ಬರು ಶೌಚಾಲಯದಲ್ಲಿಯೇ ಹೆರಿಗೆಯಾಗಿ ಮೃತ ಪಟ್ಟಿದ್ದರು. ಆಸ್ಪತ್ರೆಯಲ್ಲಿ ಇದು ಮೂರನೇ ಘಟನೆಯಾಗಿದ್ದು, ಜನರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಅನುಮಾನ ಪಡುವಂತಾಗಿದೆ. ಈ ವಿಚಾರವಾಗಿ ಮಗುವಿನ ಸಾವಿನ ಕುರಿತು ವಿಚಾರಣೆ ನಡೆಸಬೇಕೆಂದು ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದಾರೆ.

    ಆಸ್ಪತ್ರೆ ಸಿಬ್ಬಂದಿಯ ಪ್ರಕಾರ, ಗರ್ಭಿಣಿಗೆ 7 ತಿಂಗಳಾಗಿದ್ದು, ಮಗು ಸರಿಯಾಗಿ ಬೆಳವಣಿಗೆ ಆಗಿರಲಿಲ್ಲ. ಹಾಗಾಗಿ ಮಗುವಿಗೆ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೇ ಮೃತಪಟ್ಟಿದೆ. ಇದರಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯವಿಲ್ಲ ಎಂದು ಸಿಬ್ಬಂದಿ ಹೇಳಿಕೆಯನ್ನ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews