Tag: doctor

  • ಸಿಎಂ ಮನೆಯಲ್ಲಿ ಶ್ವಾನ ಸಾವು – ವೈದ್ಯನ ವಿರುದ್ಧ ಎಫ್‍ಐಆರ್

    ಸಿಎಂ ಮನೆಯಲ್ಲಿ ಶ್ವಾನ ಸಾವು – ವೈದ್ಯನ ವಿರುದ್ಧ ಎಫ್‍ಐಆರ್

    ಹೈದರಾಬಾದ್: ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸದ ಸಾಕು ನಾಯಿ ಸಾವನ್ನಪ್ಪಿದ ಕಾರಣ ಪಶುವೈದ್ಯರೊಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಪಶುವೈದ್ಯ ರಂಜಿತ್ ಎಂಬುವರ ಮೇಲೆ ಎಫ್‍ಐಆರ್ ದಾಖಲಾಗಿದೆ. ಕೆ. ಚಂದ್ರಶೇಖರ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಸೇರಿದ್ದ ಸಾಕು ನಾಯಿ 11 ತಿಂಗಳ ಹಸ್ಕಿ ಮೃತಪಟ್ಟಿದ್ದು, ಈ ನಾಯಿಗೆ ಚಿಕಿತ್ಸೆ ನೀಡಿದ್ದ ಡಾಕ್ಟರ್ ವಿರುದ್ಧ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಇದ್ದ ಒಂಬತ್ತು ಸಾಕು ನಾಯಿಗಳ ಪೈಕಿ ಸೆಪ್ಟೆಂಬರ್ 10 ರಂದು ಹಸ್ಕಿ ನಾಯಿ ಆಹಾರವನ್ನು ಸೇವಿಸದೆ ಅನಾರೋಗ್ಯಕ್ಕೆ ಒಳಗಾಗಿತ್ತು. ಮರುದಿನ ಅಲ್ಲಿನ ಸಿಬ್ಬಂದಿ ಪಶುವೈದ್ಯರನ್ನು ಕರೆಸಿ ಪರೀಕ್ಷೆ ಮಾಡಿಸಿದ್ದಾರೆ. ಅವರು ನಾಯಿಗೆ ತುಂಬಾ ಜ್ವರ ಬಂದಿದೆ ಎಂದು ಹೇಳಿದ್ದಾರೆ. ಇದ್ದರಿಂದ ನಾಯಿಯನ್ನು ರಂಜಿತ್ ಅವರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಸೆಪ್ಟಂಬರ್ 11 ರಂದು ರಂಜಿತ್ ಅವರು ಆ ನಾಯಿಯನ್ನು ಪರೀಕ್ಷೆ ಮಾಡಿ ಜ್ವರ ಕಡಿಮೆ ಆಗುವಂತೆ ಒಂದು ಇಂಜೆಕ್ಷನ್‍ನನ್ನು ಕೊಟ್ಟಿದ್ದಾರೆ. ನಂತರ ನಾಯಿ ರಂಜಿತ್ ಅವರ ಆಸ್ಪತ್ರೆಯಲ್ಲೇ ಮೃತಪಟ್ಟಿದೆ. ಈ ಕಾರಣದಿಂದ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಂಜಿತ್ ಅವರ ವಿರುದ್ಧ ದೂರು ನೀಡರುವ ಪ್ರಗತಿ ಭವನದಲ್ಲಿ ನಾಯಿಗಳನ್ನು ನಿರ್ವಹಣೆ ಮಾಡುವ ನೌಕರ ಆಸಿಫ್ ಅಲಿ ಖಾನ್ ವೈದ್ಯರ ನಿರ್ಲಕ್ಷ್ಯದಿಂದ ನಾಯಿ ಸಾವನ್ನಪ್ಪಿದೆ ಎಂದು ದೂರು ಕೊಟ್ಟ ಕಾರಣ ರಜಿಂತ್ ವಿರುದ್ಧ ಐಪಿಸಿ ಸೆಕ್ಷನ್ 429 (ಬೆಲೆಯುಳ್ಳ ಪ್ರಾಣಿ ಹತ್ಯೆ) ಮತ್ತು 1960ರ ಪ್ರಾಣಿ ತಡೆ ಕಾಯ್ದೆಯ ಸೆಕ್ಷನ್ 11 ರ ಡ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಮಹಿಳೆಯ ಎದೆ ಭಾಗ ಪ್ರೆಸ್ ಮಾಡಿ ವೈದ್ಯನಿಂದ ಅಸಭ್ಯ ವರ್ತನೆ: ವಿಡಿಯೋ ವೈರಲ್

    ಮಹಿಳೆಯ ಎದೆ ಭಾಗ ಪ್ರೆಸ್ ಮಾಡಿ ವೈದ್ಯನಿಂದ ಅಸಭ್ಯ ವರ್ತನೆ: ವಿಡಿಯೋ ವೈರಲ್

    ಕೋಲಾರ: ಆರೋಗ್ಯ ತಪಾಸಣೆ ನೆಪದಲ್ಲಿ ಮಹಿಳೆಯೊಂದಿಗೆ ವೈದ್ಯನೊಬ್ಬ ಅಸಭ್ಯವಾಗಿ ವರ್ತನೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಅರವಳಿಕೆ ತಜ್ಞ ಡಾ.ದೇವರಾಜ್ ಪುಂಗನ್ ಅಸಭ್ಯವಾಗಿ ವರ್ತಿಸಿದ ವೈದ್ಯ. ಡಾ. ದೇವರಾಜ್ ಚಿಕಿತ್ಸೆಗೆ ಬಂದಿದ್ದ ಮಹಿಳೆಯ ಎದೆ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಚಿಕಿತ್ಸೆಗೆಂದು ಬರುವವರನ್ನು ತಪಾಸಣೆ ನೆಪದಲ್ಲಿ ಮಹಿಳೆಯ ಎದೆ ಭಾಗವನ್ನು ಪ್ರೆಸ್ ಮಾಡುವ ವೈದ್ಯನ ಕೀಚಕ ಕೃತ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಹಿಳೆಯ ಎದೆಯನ್ನು ಪ್ರೆಸ್ ಮಾಡುವ ವಿಡಿಯೋವನ್ನು ಕೆಲ ಮಹಿಳೆಯರು ಕಿಟಿಕಿಯಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋ ಮಾಡುತ್ತಾ ನೋಡೆ ವೈದ್ಯರು ಹೆಂಗೆ ವರ್ತಿಸುತ್ತಿದ್ದಾರೆ ಎಂದು ಮಹಿಳೆಯರೇ ವೈದ್ಯನ ಬಗ್ಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಸಂಬಂಧ ಆಸ್ಪತ್ರೆಯ ಹೊರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೇದೆ ವೈದ್ಯರ ವಿರುದ್ಧ ರಾಬರ್ಟ್ಸ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವೈದ್ಯರ ವಿಡಿಯೋ ಮಾಡಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಸ್ತ್ರ ಚಿಕಿತ್ಸಕ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಪರ ವಿರೋಧ ಪ್ರಕರಣಗಳು ದಾಖಲಾಗಿದೆ.

  • ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಮುಂದೆ ಡಾಕ್ಟರ್ ದಂಪತಿಯಿಂದ ರೋಗಿಗಳಿಗೆ ಫ್ರೀ ಊಟ

    ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಮುಂದೆ ಡಾಕ್ಟರ್ ದಂಪತಿಯಿಂದ ರೋಗಿಗಳಿಗೆ ಫ್ರೀ ಊಟ

    – ವೃದ್ಧಾಶ್ರಮ, ಗರ್ಭಿಣಿಯರಿಗೆ ವೈದ್ಯಕೀಯ ಸೇವೆ

    ಚಿಕ್ಕಬಳ್ಳಾಪುರ: ಸರ್ಕಾರವೇ ಉಚಿತವಾಗಿ ಊಟ ಕೊಡುವುದಕ್ಕೆ ಆಗಲ್ಲ ಎಂದು 5 ರೂ., 10 ರೂ. ಪಡೆದು ಊಟ ಎಂದು ಬಂದ ಬಡವರಿಗೆ ಇಂದಿರಾ ಕ್ಯಾಂಟೀನ್ ನೀಡುತ್ತಿದೆ. ಆದರೆ, ಚಿಕ್ಕಬಳ್ಳಾಪುರದ ಮಧುಕರ್-ಸುಷ್ಮಾ ದಂಪತಿ ಉಚಿತವಾಗಿ ರೋಗಿಗಳಿಗೆ ಊಟ ಕೊಡುವ ಮೂಲಕ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಮಾನಸ ಖಾಸಗಿ ಆಸ್ಪತ್ರೆಯ ವೈದ್ಯರಾದ ಮಧುಕರ್-ಸುಷ್ಮಾ ಸಮಾಜ ಸೇವೆಗೆ ತುಡಿಯೋ ದಂಪತಿ. ಚಿಕ್ಕಬಳ್ಳಾಪುರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಬರೋ ರೋಗಿಗಳು, ಸಾರ್ವಜನಿಕರಿಗೆ ಪ್ರತಿದಿನ ಮಧ್ಯಾಹ್ನ ಉಚಿತ ಊಟ ಕೊಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ಒಳರೋಗಿಗಳಿಗೆ ಸರ್ಕಾರ ಊಟ ಕೊಡುತ್ತದೆ. ಆದರೆ ಹೊರ ರೋಗಿಗಳು, ರೋಗಿಗಳ ಜೊತೆ ಬರುವ ಬಡವರಿಗೆ ಈ ವೈದ್ಯ ದಂಪತಿ ಕಳೆದ ಅಕ್ಷಯ ತೃತೀಯದಿಂದ `ಅನ್ನಪೂರ್ಣ’ ಅನ್ನೋ ಹೆಸರಿಟ್ಟು ಉಚಿತ ಊಟ ನೀಡುತ್ತಿದ್ದಾರೆ.

    ಪ್ರತಿ ದಿನ ಮಧ್ಯಾಹ್ನ 1 ಗಂಟೆಗೆ ಅನ್ನಪೂರ್ಣ ಹೆಸರಿನ ಮಾರುತಿ ಓಮ್ನಿ ಕಾರು ಜಿಲ್ಲಾಸ್ಪತ್ರೆಯ ಎದುರು ಹಾಜರಾಗುತ್ತದೆ. ಊಟ, ನೀರು, ತಟ್ಟೆ, ಲೋಟ ಸೇರಿದಂತೆ ಡಸ್ಟ್ ಬಿನ್ ಸಮೇತ ಅದರಲ್ಲೇ ಇರುತ್ತದೆ. ಈ ಅನ್ನಪೂರ್ಣ ಕಾರ್ಯಕ್ಕಂತಲೇ ಐದಾರು ಮಂದಿ ಸಿಬ್ಬಂದಿ ಇದ್ದಾರೆ. 200 ರಿಂದ 300 ಮಂದಿ ಪ್ರತಿದಿನ ಅನ್ನಪೂರ್ಣ ಯೋಜನೆಯ ಅನ್ನ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆಗೆ ಆಸ್ಪತ್ರೆ ಒಳಗೆ ವೈದ್ಯಾಧಿಕಾರಿ ಜಾಗ ಕೊಟ್ಟಿಲ್ಲ ಎಂದು ಡಾ ಸುಷ್ಮಾ ಹೇಳಿದ್ದಾರೆ.

    ಮಧುಕರ್-ಸುಷ್ಮಾ ದಂಪತಿ ವೃದ್ಧಾಶ್ರಮವನ್ನೂ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿ ಇರುವ ಈ ವೃದ್ಧಾಶ್ರಮದಲ್ಲಿ 20 ಮಂದಿ ವೃದ್ಧರು ಆಶ್ರಯ ಪಡೆದಿದ್ದಾರೆ. ಈ ವೃದ್ಧಾಶ್ರಮದಲ್ಲಿ ಅನ್ನಪೂರ್ಣ ಯೋಜನೆಗೆ ಊಟ ತಯಾರಿಯಾಗುತ್ತದೆ. ಜೊತೆಗೆ, ಆಗಾಗ್ಗೆ ಹಳ್ಳಿ ಹಳ್ಳಿಗೂ ತೆರಳಿ ಗರ್ಭಿಣಿಯರಿಗೆ ಉಚಿತ ವೈದ್ಯಕೀಯ ಸಲಹೆ ಕೊಡುವ ಮೂಲಕ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ.

  • “ಹೆಲ್ತ್ ಮಿನಿಸ್ಟರ್ ಕೈಯಲ್ಲೇ ಆಗಲ್ಲ, ನೀವೇನ್ ಮಾಡ್ಕೊಳ್ತೀರಾ ಮಾಡ್ಕೊಳ್ಳಿ”

    “ಹೆಲ್ತ್ ಮಿನಿಸ್ಟರ್ ಕೈಯಲ್ಲೇ ಆಗಲ್ಲ, ನೀವೇನ್ ಮಾಡ್ಕೊಳ್ತೀರಾ ಮಾಡ್ಕೊಳ್ಳಿ”

    -ಸರ್ಕಾರಿ ಸಂಬಳ ಬೇಕು ಆದ್ರೆ ಬಡವರ ಸೇವೆ ಬೇಡ
    -ಯಾದಗಿರಿಯಲ್ಲಿದ್ದಾನೆ ಯಮಕಿಂಕರ ವೈದ್ಯ

    ಯಾದಗಿರಿ: ಸರ್ಕಾರಿ ಸಂಬಳ ಬೇಕು ಆದರೆ ಬಡವರ ಸೇವೆ ಮಾಡಲ್ಲ, ಹಳ್ಳಿಗೆ ಬಂದು ಚಿಕಿತ್ಸೆ ನೀಡಲು ಆಗಲ್ಲ ಎಂದು ಯಾದಗಿರಿಯ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿಯ ವೈದ್ಯನೊಬ್ಬ ದರ್ಪ ಮೆರೆದಿದ್ದಾನೆ. ಗ್ರಾಮಸ್ಥರೊಬ್ಬರು ಕರೆ ಮಾಡಿ ಆಸ್ಪತ್ರೆಗೆ ಬನ್ನಿ ಎಂದಿದ್ದಕ್ಕೆ ಅವರಿಗೆ ಸಿಕ್ಕಾಪಟ್ಟೆ ಅವಾಜ್ ಹಾಕಿದ್ದಾನೆ.

    ಹೌದು. ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಖ್ಯ ವೈದ್ಯ ಪ್ರಕಾಶ್ ರೋಗಿಗಳ ಮೇಲೆ ದರ್ಪ ಮೆರೆದಿದ್ದಾನೆ. ಈತನಿಗೆ ಹಳ್ಳಿಗೆ ಬಂದು ಚಿಕಿತ್ಸೆ ನೀಡಲು ಆಗಲ್ಲವಂತೆ. ಆದರೆ ತಿಂಗಳ ಸಂಬಳ ಮಾತ್ರ ಬೇಕಂತೆ. ಅಲ್ಲದೆ ಹುಣಸಗಿ ಪಟ್ಟಣದಲ್ಲಿ ವಾಸವಿರುವ ಡಾ.ಪ್ರಕಾಶ್ ಮೇಲೆ ಕಾನೂನು ಬಾಹಿರವಾಗಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಆರೋಪ ಸಹ ಕೇಳಿಬಂದಿದೆ. ಜೊತೆಗೆ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಬಂದು ರೋಗಿಗಳಿಗೆ ಚಿಕಿತ್ಸೆ ಕೊಡಿ ಎಂದು ಗ್ರಾಮಸ್ಥರು ಕರೆ ಮಾಡಿದರೆ, ಆರೋಗ್ಯ ಸಚಿವರೇ ನನ್ನ ಏನು ಕೇಳಲ್ಲ, ಇನ್ನೂ ನಿಮಗೆ ಯಾಕೆ ಬೇಕು? ಹಳ್ಳಿಗೆ ಬಂದು ಅಲ್ಲಿಯ ವಾತಾವರಣದಲ್ಲಿ ಯಾರಾದರೂ ಕೆಲಸ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ದರ್ಪ ತೋರಿದ್ದಾನೆ.

    ಡಾ. ಪ್ರಕಾಶ್ ಕಳೆದ 8 ವರ್ಷದ ಹಿಂದೆ ಕಲ್ಲದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಮುಖ್ಯ ವೈದ್ಯಾಧಿಕಾರಿಯಾಗಿ ನೇಮಕವಾಗಿದ್ದಾನೆ. ಆದರೆ ಇಷ್ಟು ವರ್ಷದಲ್ಲಿ ಅವರು ಆಸ್ಪತ್ರೆಗೆ ಬಂದು ಕೆಲಸ ಮಾಡಿದ್ದು ಬೆರಳೆಣಿಕೆಯಷ್ಟು ದಿನ ಮಾತ್ರ. ತಿಂಗಳಲ್ಲಿ ಒಂದು, ಹೆಚ್ಚೆಂದರೆ ಮೂರು ದಿನ ಬರುವ ಈತ, ಬರೀ ಫೋನ್ ಕಾಲ್‍ನಲ್ಲಿ ಎಲ್ಲಾ ಚಿಕಿತ್ಸೆ ನೀಡುತ್ತಾನೆ. ಆಸ್ಪತ್ರೆಗೆ ಬನ್ನಿ ಸಾರ್ ತುಂಬಾ ಸಿರಿಯಸ್ ಇದೆ ಎಂದು ಗ್ರಾಮಸ್ಥರು ಕರೆ ಮಾಡಿದರೆ ಸಾಕು, ಸಿಡಿಮಿಡಿಗೊಂಡು ಕರೆ ಮಾಡಿದವರ ಮೇಲೆ ಸಿಟ್ಟಿಗೇಳುತ್ತಾನೆ.

    ಸರ್ಕಾರಿ ಆಸ್ಪತ್ರೆಗಳೆಂದರೆ ಜನರು ಮೂಗು ಮುರಿಯುತ್ತಾರೆ. ಅಂತದ್ರಲ್ಲಿ ಹಳ್ಳಿಯ ಸರ್ಕಾರಿ ಆಸ್ಪತ್ರೆಯಂದರೆ ಈತನಿಗೆ ಅಲರ್ಜಿಯುಂತೆ. ಒಂದು ವೇಳೆ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯವಿಲ್ಲದ ಪರಿಸ್ಥಿತಿ ಇದ್ದರೆ ವೈದ್ಯ ಆಸ್ಪತ್ರೆಗೆ ಬರೋದಿಲ್ಲ ಅನ್ನೊದಕ್ಕೆ ಕಾರಣವಾಗುತ್ತದೆ. ಆದರೆ ಈ ಊರಿನಲ್ಲಿ ಒಳ್ಳೆಯ ಕಟ್ಟಡ, ಚಿಕಿತ್ಸೆಗೆ ಬೇಕಾದ ಸೌಲಭ್ಯವಿದೆ. ಕಲ್ಲದೇವನಹಳ್ಳಿ ಹೆಬ್ಬಾಳ, ದೇವನೂರು, ಸಿದ್ದಾಪುರ, ಕಚ್ಚಕನೂರು ಸೇರಿದಂತೆ ಹತ್ತಾರು ಹಳ್ಳಿಯ ಗ್ರಾಮಸ್ಥರಿಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರವೇ ಆಸರೆಯಾಗಿದೆ. ನುರಿತ ವೈದ್ಯರು, ಸುಸಜ್ಜಿತವಾದ ಆಸ್ಪತ್ರೆ ಇದ್ದರೂ ಸಹ ವೈದ್ಯಾಧಿಕಾರಿ ಪ್ರಕಾಶ್ ನಿರ್ಲಕ್ಷ್ಯದಿಂದ ನೂರಾರು ಅಮಾಯಕ ಜೀವಗಳು ನಲುಗುವಂತಾಗಿದೆ.

    ಪ್ರಕಾಶ್ ವಿರುದ್ಧ ಕೂಡಲೇ ಸರ್ಕಾರ ಕ್ರಮಕೈಗೊಳ್ಳಬೇಕು. ಜೊತೆಗೆ ಕಲ್ಲದೇವನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಒಳ್ಳೆಯ ವೈದ್ಯರನ್ನು ನೇಮಕ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಹೆರಿಗೆಯಾದ 10 ನಿಮಿಷದಲ್ಲೇ ನವಜಾತ ಶಿಶು ಸಾವು

    ಹೆರಿಗೆಯಾದ 10 ನಿಮಿಷದಲ್ಲೇ ನವಜಾತ ಶಿಶು ಸಾವು

    ಯಾದಗಿರಿ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಡರಾತ್ರಿ ಹುಟ್ಟಿದ 10 ನಿಮಿಷದಲ್ಲೇ ಮಗು ಮೃತಪಟ್ಟಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿರುವ ಆರೋಪ ಕೇಳಿಬರುತ್ತಿದೆ.

    ಸುರಪುರ ತಾಲೂಕಿನ ಏವೂರ ತಾಂಡದ ಕಾಜಲ್ ಎಂಬವರು, ಸಂಜೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಾಜಲ್ ಗೆ ತಡರಾತ್ರಿ ಹೆರಿಗೆಯಾಗಿತ್ತು. ಹೆರಿಗೆ ಆದ ಬಳಿಕ ನವಜಾತ ಶಿಶುವಿಗೆ ಸಕಾಲಕ್ಕೆ ನೀಡಬೇಕಾದ ಚಿಕಿತ್ಸೆ ಸಿಗದೆ ಇರುವುದಕ್ಕೆ ಹೆರಿಗೆಯಾದ ಹತ್ತೆ ನಿಮಿಷದಲ್ಲಿ ಮಗು ಸಾವನ್ನಪ್ಪಿದೆ ಎನ್ನಲಾಗುತ್ತಿದೆ.

    ಕಳೆದ ಆರು ತಿಂಗಳಿಂದ ಈ ಆಸ್ಪತ್ರೆಯಲ್ಲಿ ನುರಿತ ವೈದ್ಯರೇ ಇಲ್ಲ. ಹೀಗಾಗಿ ಹೆರಿಗೆಯಾದ ಬಾಣಂತಿಗೆ ಮತ್ತು ಮಗುವಿಗೆ ಸರಿಯಾಗಿ ಆರೈಕೆ ಮಾಡುವವರಿಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

  • ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗ್ಳೂರಿನ ವೈದ್ಯೆ ರನ್ನರ್ ಅಪ್

    ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗ್ಳೂರಿನ ವೈದ್ಯೆ ರನ್ನರ್ ಅಪ್

    ಒಟ್ಟಾವಾ: ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ವೈದ್ಯೆ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದಾರೆ.

    ಡಾ. ಪ್ರಿಯಾ ಶರತ್, ಡೆರ್ಮಾಟೋಲೊಜಿಸ್ಟ್ (ಚರ್ಮರೋಗ ತಜ್ಞೆ) ಹಾಗೂ ಕಾಸ್ಮೆಟಾಲಜಿಸ್ಟ್ ಆಗಿದ್ದು, ಇತ್ತೀಚೆಗೆ ಟೊರೊಂಟೊದಲ್ಲಿ ನಡೆದ ಮಿಸೆಸ್ ಯೂನೈಟೆಡ್ ನೇಶನ್ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆ 2019ರಲ್ಲಿ ಭಾಗವಹಿಸಿದ್ದರು. ಪ್ರಿಯಾ ಶರತ್ ಈ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು.

    2018ರಲ್ಲಿ ಮಿಸೆಸ್ ಇಂಡಿಯಾ ಗ್ಯಾಲೆಕ್ಸಿ ಸ್ಪರ್ಧೆಯಲ್ಲಿ ಪ್ರಿಯಾ ತನ್ನ ಸಾಮಾಜಿಕ ಕೆಲಸಕ್ಕಾಗಿ ಮಿಸೆಸ್ ಸೋಶಿಯಲ್ ಐಕಾನ್ ಕಿರೀಟವನ್ನು ಗೆದಿದ್ದರು. ಬಳಿಕ ಪ್ರಿಯಾ ಅವರು ನವದೆಹಲಿಯಲ್ಲಿ ನಡೆದ ಮಿಸೆಸ್. ಇಂಡಿಯಾ ಯೂನೈಟೆಡ್ ನೇಶನ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಗೆಲ್ಲಲು ಹೋಗಿದ್ದರು.

    ಪ್ರಿಯಾ ಶರತ್ ಮೂಲತಃ ಮಂಗಳೂರಿನವರಾಗಿದ್ದು, ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದಿದ್ದರು. ಬಳಿಕ  ಮಂಗಳೂರಿನ ಮುಲ್ಲರ್ ಕಾಲೇಜಿನಿಂದ ಎಂಡಿ ಪದವಿಯನ್ನು ಪಡೆದುಕೊಂಡಿದ್ದರು. ಸದ್ಯ ಪ್ರಿಯಾ ಅವರು ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಹಾಗೂ ರಿಸರ್ಚ್ ಸೆಂಟರ್ ನಲ್ಲಿ ಚರ್ಮರೋಗ ತಜ್ಞೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ನಾನು ರ‍್ಯಾಂಪ್‌ ಮೇಲೆ ನಡೆಯಬೇಕು ಎಂಬುದು ನನ್ನ ಬಾಲ್ಯದ ಕನಸು. ನಾನು ಕಾಲೇಜಿನಲ್ಲಿ ಇದ್ದಾಗ ಓದುವುದರಲ್ಲಿ ಬ್ಯುಸಿಯಿದ್ದೆ. ಬಳಿಕ ನನ್ನ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡೆ. ಈಗ ನನ್ನ ಮಗ ಅನುಜ್ 8ನೇ ತರಗತಿ ಓದುತ್ತಿದ್ದು, ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತಾನೆ. ಹಾಗಾಗಿ ನಾನು ಮಾಡೆಲಿಂಗ್ ಮಾಡೋಣ ಎಂದುಕೊಂಡೆ ಎಂದು ಪ್ರಿಯಾ ತಿಳಿಸಿದ್ದಾರೆ.

    ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರ ಜೊತೆ ಕೆಲಸ ಮಾಡುವುದು ನನ್ನ ಕನಸು. ಅವರು ನನ್ನ ಮೊದಲ ಆದ್ಯತೆಯಾಗಿರುತ್ತಾರೆ. ನನ್ನ ಬಳಿ ಈಗ ಒಂದು ಯೋಜನೆ ಇದೆ. ನಾನು ಈಗಾಗಲೇ ಈ ಯೋಜನೆ ಬಗ್ಗೆ ಕೆಲವರ ಹತ್ತಿರ ಮಾತನಾಡಿದ್ದೇನೆ. ಅವರು ಕೂಡ ಈ ಯೋಜನೆಗೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಯ ನಿರ್ವಹಣೆ ಮಾಡುವುದು ಒಂದು ಸವಾಲಾಗಿದೆ. ನನ್ನ ಕುಟುಂಬಸ್ಥರ ಹಾಗೂ ಸ್ನೇಹಿತರ ಬೆಂಬಲದಿಂದ ನಾನು ಇಲ್ಲಿಗೆ ಬರಲು ಸಾಧ್ಯವಾಯಿತು ಎಂದು ಪ್ರಿಯಾ ಹೇಳಿದ್ದಾರೆ.

  • ಡಾಕ್ಟರ್ ಭೇಟಿಯಾಗಲು 20 ಕಿ.ಮೀ ನಡೆದ ಆದಿವಾಸಿ ಗರ್ಭಿಣಿ ಸಾವು

    ಡಾಕ್ಟರ್ ಭೇಟಿಯಾಗಲು 20 ಕಿ.ಮೀ ನಡೆದ ಆದಿವಾಸಿ ಗರ್ಭಿಣಿ ಸಾವು

    ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬುಡಕಟ್ಟು ಜನಾಂಗದ ತುಂಬು ಗರ್ಭಿಣಿಯೊಬ್ಬರು ಮಗು ಸಮೇತ ಮೃತಪಟ್ಟ ಹೀನಾಯ ಘಟನೆಯೊಂದು ನಡೆದಿದೆ.

    ಈ ಘಟನೆ ಕಳೆದ ವಾರ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಮಹಿಳೆಯ ಮನೆಯ ಹತ್ತಿರಲ್ಲಿ ಯಾವುದೇ ಹೆಲ್ತ್ ಕೇರ್ ಸೆಂಟರ್ ಇಲ್ಲದೇ ಇರುವುದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಗರ್ಭಿಣಿ ಮಗುವಿಗೆ ಜನ್ಮ ನೀಡಲು ಕೆಲ ದಿನಗಳಷ್ಟೇ ಬೇಕಾಗಿತ್ತು. ಆದರೆ ಅದಕ್ಕಿಂತಲೇ ಮೊದಲೇ ವಿಪರೀತ ರಕ್ತಸ್ರಾವವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ 28 ವರ್ಷದ ತುಂಬು ಗರ್ಭಿಣಿ ವೈದ್ಯರನ್ನು ಭೇಟಿಯಾಗಲು ನಗರ ಪ್ರದೇಶಕ್ಕೆ ಬರಲು ಸುಮಾರು 20 ಕಿ.ಮೀ ದೂರ ನಡೆದಿದ್ದೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.

    ಆಸ್ಪತ್ರೆಗೆ ಬಂದು ವೈದ್ಯರನ್ನು ಬೇಟಿ ಮಾಡಿ ವಾಪಸ್ ಹೋಗುವವರಿದ್ದರು. ಆದರೆ ಅದಾಗಲೇ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಯೊಳಗೆ ಕರೆದೊಯ್ಯಲಾಯಿತು. ಆದರೆ ಕೆಲ ನಿಮಿಷಗಳಲ್ಲೇ ಮಹಿಳೆಗೆ  ವಿಪರೀತ ರಕ್ತಸ್ರಾವವಾಗಿದ್ದು, ಹೊಟ್ಟೆಯೊಳಗಿದ್ದ ಮಗು ಸಮೇತ ಸಾವನ್ನಪ್ಪಿದ್ದಾರೆ.

    ಘಟನೆ ಸಂಬಂಧ ಪೆಡಬಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಅಂಬುಲೆನ್ಸ್ ವಿಳಂಬದಿಂದಾಗಿ ಹೆದ್ದಾರಿಯಲ್ಲೇ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು.

  • ಅಂಕಲ್ ಬಳಿಕ ವೈರಲ್ ಆಯ್ತು ಡಾಕ್ಟರ್ ಡ್ಯಾನ್ಸ್

    ಅಂಕಲ್ ಬಳಿಕ ವೈರಲ್ ಆಯ್ತು ಡಾಕ್ಟರ್ ಡ್ಯಾನ್ಸ್

    ಹೈದರಾಬಾದ್: ಅಂಕಲ್ ಒಬ್ಬರು ಡ್ಯಾನ್ಸ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಬೆನ್ನಲ್ಲೇ ಆಂಧ್ರಪ್ರದೇಶದ ವೈದ್ಯರೊಬ್ಬರು ತೆಲಗು ನಟ ಅಕ್ಕಿನೇನಿ ನಾಗೇಶ್ವರ್ ರಾವ್ ಅವರಂತೆ ಸ್ಟೆಪ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಯ (ಕೆಜಿಎಚ್) ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಕೆ ಸೂರ್ಯನಾರಾಯಣ ಅವರು ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗಿದೆ. ಕೆಜಿಎಚ್‍ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವೈದ್ಯರ ಸೂರ್ಯನಾರಾಯಣ ಅವರು ಡ್ಯಾನ್ಸ್ ಮಾಡಿದ್ದಾರೆ. ಇದನ್ನು ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ವಯಸ್ಸು ನಂಬರ್ ಅಷ್ಟೇ ಎನ್ನುವಂತೆ ಅಂಕಲ್ ಹಾಕಿದ್ರು ಸಖತ್ ಸ್ಟೆಪ್- ವಿಡಿಯೋ ವೈರಲ್

    ದಿವಂಗತ ನಟ ಎ.ನಾಗೇಶ್ವರ ರಾವ್ ಅವರ ಪ್ರಸಿದ್ಧ ತೆಲುಗು ಗೀತೆಗಳಿಗೆ ಡಾ.ಸೂರ್ಯನಾರಾಯಣ್ ನೃತ್ಯ ಮಾಡಿದ್ದಾರೆ. ನಾಗೇಶ್ವರ್ ಅವರನ್ನು ಅನುಕರಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಹಾಗೂ ಸಹೋದ್ಯೋಗಿಗಳನ್ನು ಮಂತ್ರಮುಗ್ಧಗೊಳಿಸಿದರು.

    ಈ ಕುರಿತು ಮಾತನಾಡಿದ ಅವರು, ನಾನು ಎ.ನಾಗೇಶ್ವರ ರಾವ್ ಅವರ ಅಭಿಮಾನಿ. ನಾನು ಹಲವು ವರ್ಷಗಳಿಂದ ನೃತ್ಯ ಮಾಡುತ್ತಿದ್ದೇನೆ. 11ನೇ ವಯಸ್ಸಿನಿಂದಲೂ ನಾಗೇಶ್ವರ್ ಅವರನ್ನು ಅನುಕರಣೆ ಮಾಡುತ್ತಾ ಬೆಳೆದೆ. 200ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. 1996ರಲ್ಲಿ ಚೆನ್ನೈನಲ್ಲಿ ನೃತ್ಯ ಪ್ರದರ್ಶನಕ್ಕೆ ಆಯ್ಕೆಯಾಗಿದ್ದೆ. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಗೇಶ್ವರ್ ಅವರು ವಿಮಾನ ಪ್ರಯಾಣ ಕೈಗೊಂಡಿದ್ದರಿಂದ ನಿಲ್ದಾಣಕ್ಕೆ ಬೇಗ ಹೋದರು. ಹೀಗಾಗಿ ನನ್ನ ಡ್ಯಾನ್ಸ್ ಅನ್ನು ಅವರು ನೋಡಲಿಲ್ಲ ಎಂದು ನೆನೆದಿದ್ದಾರೆ.

    ನಾಗೇಶ್ವರ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಅವರು ನನ್ನ ನೃತ್ಯವನ್ನು ನೋಡಿ ಸಂತೋಷಗೊಂಡರು. ನೃತ್ಯವನ್ನು ಅಷ್ಟು ಸುಲಭವಾಗಿ ಕಲೆಯಲು ಸಾಧ್ಯವಿಲ್ಲ ಎಂದು ವೈದ್ಯ ಸೂರ್ಯನಾರಾಯಣ ಹೇಳಿದ್ದಾರೆ.

    ಈ ದಿನಗಳಲ್ಲಿ ನೀವು ಯಾವುದೇ ಹಾಡನ್ನು ಯೂಟ್ಯೂಬ್‍ನಲ್ಲಿ ಮತ್ತೆ ಮತ್ತೆ ನೋಡಬಹುದು. ಆದರೆ ನಾನು ಚಿತ್ರಮಂದಿರಗಳಲ್ಲಿ ಮತ್ತೆ ಮತ್ತೆ ಸಿನಿಮಾಗಳನ್ನು ನೋಡಿ ನೃತ್ಯದ ಎಲ್ಲಾ ಹಂತಗಳನ್ನು ಕಲಿತಿದ್ದೇನೆ. ನನ್ನ ಸ್ಟೆಪ್ ಗಳನ್ನು ಸರಿಪಡಿಸಲು ಬಹಳಷ್ಟು ಸಿನಿಮಾಗಳನ್ನು ನೋಡಿದ್ದೇನೆ ಎಂದು ತಿಳಿಸಿದರು.

  • ಮತ್ತು ಬರೋ ಜ್ಯೂಸ್ ಕೊಟ್ಟು ಕಾಂಪೌಂಡರ್ ರೇಪ್ – ವಿಡಿಯೋ ನೋಡಿದ್ದೇವೆಂದು ಮತ್ತಿಬ್ಬರು ಗ್ಯಾಂಗ್‍ರೇಪ್

    ಮತ್ತು ಬರೋ ಜ್ಯೂಸ್ ಕೊಟ್ಟು ಕಾಂಪೌಂಡರ್ ರೇಪ್ – ವಿಡಿಯೋ ನೋಡಿದ್ದೇವೆಂದು ಮತ್ತಿಬ್ಬರು ಗ್ಯಾಂಗ್‍ರೇಪ್

    ಜೈಪುರ್: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ಆಸ್ಪತ್ರೆಯ ಮೂವರು ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.

    ಆಸ್ಪತ್ರೆಯ ಕಾಂಪೌಂಡರ್ ಅಶೋಕ್, ವೈದ್ಯ ಡಾ.ಸುರೇಂದ್ರ ಮಹರ್ಷಿ ಮತ್ತು ಆತನ ಸಹೋದರ ಮೂವರೂ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದರು. ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆಗೆ ಮದುವೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ರಾತ್ರಿ ಸಹೋದ್ಯೋಗಿ ಅಶೋಕ್ ಆಕೆಯ ರೂಮಿಗೆ ಬಂದು ಒಂದು ಗ್ಲಾಸ್ ಜ್ಯೂಸ್ ಕೊಟ್ಟಿದ್ದಾನೆ. ಅದನ್ನು ಕುಡಿದು ಸಂತ್ರಸ್ತೆ ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ಆರೋಪಿ ಕಾಂಪೌಂಡರ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು. ಆ ವಿಡಿಯೋ ಮೂಲಕ ಸಂತ್ರಸ್ತೆಗೆ ಬ್ಲ್ಯಾಕ್‍ಮೇಲ್ ಮಾಡಿ ನಿರಂತರವಾಗಿ ರೇಪ್ ಮಾಡುತ್ತಿದ್ದನು.

    ಕೆಲವು ತಿಂಗಳುಗಳ ನಂತರ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ ಡಾ.ಸುರೇಂದ್ರ ಮಹರ್ಷಿ, ಕಾಂಪೌಂಡರ್ ಜೊತೆಯಲ್ಲಿ ನೀನು ಸೆಕ್ಸ್ ಮಾಡಿರುವ ವಿಡಿಯೋ ಬಗ್ಗೆ ನನಗೆ ತಿಳಿದಿದೆ ಎಂದು ಸಂತ್ರಸ್ತೆಯನ್ನು ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿ ವೈದ್ಯನೂ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೆಲವು ದಿನಗಳ ನಂತರ ವೈದ್ಯನ ಸಹೋದರ ನಡೆದಿರುವ ಘಟನೆಯ ಬಗ್ಗೆ ತಿಳಿದುಕೊಂಡು ಆತನೂ ನರ್ಸ್ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಮೂವರೂ ಆರೋಪಿಗಳು ವಿಡಿಯೋ ಮೂಲಕ ಬ್ಲ್ಯಾಕ್‍ಮೇಲ್ ಮಾಡುತ್ತಾ ನರ್ಸ್ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ ಸಂತ್ರಸ್ತೆ ನಡೆದ ಘಟನೆಯನ್ನು ಕುಟುಂಬದವರಿಗೆ ತಿಳಿಸಿದ್ದಾರೆ. ನಂತರ ಸಂತ್ರಸ್ತೆ  ಪೊಲೀಸ್ ಠಾಣೆಗೆ ತೆರಳಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟ ವೈದ್ಯ

    ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟ ವೈದ್ಯ

    ಶಿಮ್ಲಾ: ಹೈದರಾಬಾದ್ ಮೂಲದ ವೈದ್ಯರೊಬ್ಬರು ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದಿದೆ.

    ಚಂದ್ರಶೇಖರ್ ಮೃತಪಟ್ಟ ವೈದ್ಯ. ಚಂದ್ರಶೇಖರ್ ಹೈದರಾಬಾದ್‍ನ ಇಸಿಐಎಲ್ ಏರಿಯಾದ ಆಸ್ಪತ್ರೆವೊಂದರಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ ಚಂದ್ರಶೇಖರ್ ಅವರು ಪ್ಯಾರಗ್ಲೈಡಿಂಗ್‍ಗೆ ಹೋಗಿದ್ದರು. ಈ ವೇಳೆ ಪ್ಯಾರಗ್ಲೈಡಿಂಗ್ ಅವಘಡದಿಂದ ಮೃತಪಟ್ಟಿದ್ದಾರೆ.

    ಗುರುವಾರದಿಂದ ನನ್ನ ಸಹೋದರ ಚಂದ್ರಶೇಖರ್ ಕುಲ್ಲು ಮನಾಲಿಯಲ್ಲಿ ರಜೆ ದಿನಗಳನ್ನು ಕಳೆಯಲು ಹೋಗಿದ್ದನು. ಶನಿವಾರ ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ನನ್ನ ಸಹೋದರ ಮೃತಪಟ್ಟಿದ್ದಾನೆ ಎಂಬ ಮಾಹಿತಿ ನಮಗೆ ದೊರೆಯಿತು ಎಂದು ಚಂದ್ರಶೇಖರ್ ಸಹೋದರಿ ಉಮಾ ಮಹೇಶ್ವರಿ ಪ್ರತಿಕ್ರಿಯಿಸಿದ್ದಾರೆ.

    ಈ ಅಪಘಾತದಿಂದ ಕೆಳಗೆ ಬಿದ್ದಾಗ ಚಂದ್ರಶೇಖರ್ ಗೆ ಗಂಭೀರ ಗಾಯಗಾಳಾಗಿದೆ. ಅಲ್ಲದೆ ಚಂದ್ರಶೇಖರ್ ಜೊತೆಯಲ್ಲಿದ್ದ ಪ್ಯಾರಚ್ಯೂಟ್ ಅಪರೇಟರ್ ಗೆ ಫ್ರ್ಯಾಕ್ಚರ್ ಆಗಿದೆ. ಕುಲ್ಲು ಮನಾಲಿಯಲ್ಲಿ ಚಂದ್ರಶೇಖರ್ ಮತ್ತು ಪ್ಯಾರಚ್ಯೂಟ್ ಅಪರೇಟರ್ ಫ್ಲೈಟ್ ಹತ್ತಿದ್ದರು.

    ನನ್ನ ಸಹೋದರ ಚಂದ್ರಶೇಖರ್ ಕೆಳಗೆ ಬಿದ್ದ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದೇವು. ಆದರೆ ಅಷ್ಟರಲ್ಲಿ ವೈದ್ಯರು ಆತನು ಮೃತಪಟ್ಟಿದ್ದಾರೆ ಎಂದು ಹೇಳಿದರು ಎಂದು ಉಮಾ ಮಹೇಶ್ವರಿ ತಿಳಿಸಿದ್ದಾರೆ.

    ಚಂದ್ರಶೇಖರ್ ಮೃತದೇಹವನ್ನು ಹೈದರಾಬಾದ್‍ಗೆ ತರಲು ಸರ್ಕಾರದ ಸಹಾಯ ಕೇಳಿದ್ದೇವೆ. ಅಲ್ಲದೆ ನಮ್ಮ ಇಡೀ ಕುಟುಂಬ ಅವನನ್ನು ಅವಲಂಬಿತವಾಗಿತ್ತು ಎಂದು ಉಮಾ ಮಹೇಶ್ವರಿ ಹೇಳಿದ್ದಾರೆ.