Tag: doctor

  • ಮಿಡ್‍ನೈಟ್ ಡ್ಯೂಟಿಯಲ್ಲಿ ಡಾಕ್ಟರ್-ನರ್ಸ್ ಸೆಕ್ಸ್

    ಮಿಡ್‍ನೈಟ್ ಡ್ಯೂಟಿಯಲ್ಲಿ ಡಾಕ್ಟರ್-ನರ್ಸ್ ಸೆಕ್ಸ್

    -ಕ್ಯಾಮೆರಾದಲ್ಲಿ ಸೆರೆಯಾಯ್ತು ಇಬ್ಬರ ಕಳ್ಳಾಟ

    ಕ್ಯಾನ್ಬೆರಾ: ವೈದ್ಯನೊಬ್ಬ ನರ್ಸ್ ಜೊತೆ ಆಸ್ಪತ್ರೆಯಲ್ಲಿಯೇ ಸೆಕ್ಸ್ ಮಾಡಿ ಸಿಕ್ಕಿಬಿದ್ದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಕರ್ತವ್ಯದಲ್ಲಿದ್ದ ವೈದ್ಯ ಮತ್ತು ನರ್ಸ್ ಇಬ್ಬರೂ ಸೆಕ್ಸ್ ಮಾಡುತ್ತಿರುವ ವಿಡಿಯೋ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಾನ್ಸನ್ ಮೆಲ್ಬೋರ್ನ್ ನಲ್ಲಿ ಆಸ್ಪತ್ರೆಯೊಂದರಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದನು. ಈತ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮೆರ್ಲಿನ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು.

    ಇವರಿಬ್ಬರ ಸಂಬಂಧದ ಬಗ್ಗೆ ಆಸ್ಪತ್ರೆ ಮಾಲೀಕರಿಗೆ ದೂರು ನೀಡಿದ್ರು, ಈ ವಿಚಾರ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದೆ ಎಂದು ಆಡಳಿತ ಮಂಡಳಿ ನಿರ್ಲಕ್ಷ್ಯ ಮಾಡಿತ್ತು. ಆದರೆ ಕೆಲವು ದಿನಗಳ ಹಿಂದೆ ಜಾನ್ಸನ್ ಮತ್ತು ಮೆರ್ಲಿನ್ ಇಬ್ಬರಿಗೂ ನೈಟ್ ಡ್ಯೂಟಿ ಇತ್ತು.

    ಮಧ್ಯರಾತ್ರಿ ಜಾನ್ಸನ್ ತನ್ನ ಪ್ರಿಯತಮೆಯನ್ನು ಸೆಕ್ಸ್‌ಗೆ ಬಲವಂತ ಮಾಡಿದ್ದಾನೆ. ಆದರೆ ಆಕೆ ಆಸ್ಪತ್ರೆಯಲ್ಲಿ ಇಂತಹ ಕೆಲಸ ಮಾಡುವುದು ತಪ್ಪು ಎಂದು ಹೇಳಿದ್ದಾಳೆ. ಆದರೂ ಆತ ಬಲವಂತ ಮಾಡಿ ಕೊನೆಗೆ ರೋಗಿಗಳಿಗೆ ನಿಗದಿಪಡಿಸಿದ್ದ ರೂಮಿಗೆ ಹೋಗಿ ಇಬ್ಬರು ಸೆಕ್ಸ್ ಮಾಡಿದ್ದಾರೆ. ಈ ದೃಶ್ಯಗಳು ಆಸ್ಪತ್ರೆಯ ಭದ್ರತಾ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಗಮನಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.

    ಆಸ್ಪತ್ರೆ ಉನ್ನತ ಅಧಿಕಾರಿಗಳು ದೂರು ಪಡೆದು ಆಸ್ಪತ್ರೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ವೈದ್ಯ ಮತ್ತು ನರ್ಸ್ ಇಬ್ಬರು ರೊಮ್ಯಾನ್ಸ್ ಮಾಡಿದ್ದು, ನಂತರ ರೂಮಿಗೆ ಹೋಗಿ ಸೆಕ್ಸ್ ಮಾಡಿರುವುದು ರೆಕಾರ್ಡ್ ಆಗಿದೆ. ಪರಿಣಾಮ ತಕ್ಷಣವೇ ಇಬ್ಬರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಚಿಕಿತ್ಸೆ ನೀಡಲು 5 ಸಾವಿರ ಲಂಚ ಕೇಳಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ

    ಚಿಕಿತ್ಸೆ ನೀಡಲು 5 ಸಾವಿರ ಲಂಚ ಕೇಳಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ

    ಹಾಸನ: ಚಿಕಿತ್ಸೆ ನೀಡಲು ಐದು ಸಾವಿರ ಲಂಚಕ್ಕೆ ಆಮಿಷವೊಡ್ಡಿದ್ದ ವೈದ್ಯನೊಬ್ಬ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಹಾಸನದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯ ಡಾ.ರಾಜಶೇಖರ್ ಸಿಕ್ಕಿ ಬಿದ್ದ ವೈದ್ಯಾಧಿಕಾರಿ. ಮಹಿಳೆಗೆ ಅಳವಡಿಸಿದ್ದ ಗರ್ಭ ನಿರೋಧಕ ಸಾಧನ ತೆಗೆಯಲು ಐದು ಸಾವಿರ ಲಂಚ ಕೇಳಿದ್ದ ವೈದ್ಯ, ಆಸ್ಪತ್ರೆ ಆವರಣದಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾನೆ.

    ಮೂಡಿಗೆರೆ ತಾಲೂಕಿನ ಮಹಿಳೆಯೊಬ್ಬರ ಗರ್ಭ ಸುರಕ್ಷತಾ ಕವಚ ತೆಗೆಯಲು ಲಂಚ ಕೇಳಿದ್ದರು. ಎಸಿಬಿ ಡಿವೈಎಸ್ಪಿ ಪೂರ್ಣಚಂದ್ರ ನೇತೃತ್ವದಲ್ಲಿ ದಾಳಿ ಮಾಡಿದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದ ವೈದ್ಯನನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

  • ಹೊಟ್ಟೆನೋವೆಂದು ಬಂದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸೆಂದ ವೈದ್ಯ

    ಹೊಟ್ಟೆನೋವೆಂದು ಬಂದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸೆಂದ ವೈದ್ಯ

    ರಾಂಚಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಇಬ್ಬರು ಯುವಕರಿಗೆ ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಸರಿಯಾಗಿ ತಪಾಸಣೆ ಮಾಡದೇ, ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕೊಟ್ಟಿರುವ ಆರೋಪ ಕೇಳಿಬಂದಿದ್ದು, ಈಗ ಬಾರಿ ಚರ್ಚೆಯಾಗುತ್ತಿದೆ.

    ಜಾರ್ಖಂಡಿನ ಚತ್ರ್ ಜಿಲ್ಲೆಯ ಸಿಮಾರಿಯಾದ ರೆಫರೆಲ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 1 ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಮುಕೇಶ್ ವಿರುದ್ಧ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಗೋಪಾಲ್ ಗಂಜು(22) ಹಾಗೂ ಕಾಮೇಶ್ವರ ಗಂಜು(26) ಅವರಿಗೆ ವೈದ್ಯ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದಿದ್ದಾರೆ ಎನ್ನಲಾಗಿದೆ. ಇಬ್ಬರು ಯುವಕರು ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆದ್ದರಿಂದ ಯುವಕರನ್ನು ಅವರ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮುಕೇಶ್ ಅವರಿಬ್ಬರಿಗೂ ಕಾಟಾಚಾರಕ್ಕೆ ತಪಾಸಣೆ ಮಾಡಿ, ಎಚ್‍ಐವಿ, ಎಚ್‍ಬಿಎ, ಎಚ್‍ಸಿವಿ, ಸಿಬಿಸಿ, ಎಚ್‍ಎಚ್2 ಮತ್ತು ಎಎನ್‍ಸಿ ಪರೀಕ್ಷೆ ಮಾಡಿಕೊಂಡು ಬನ್ನಿ ಎಂದು ಚೀಟಿ ಬರೆದು ಕೊಟ್ಟಿದ್ದರು. ಜೊತೆಗೆ ಪ್ರಗ್ನೆನ್ಸಿ ಪರೀಕ್ಷೆ ಕೂಡ ಮಾಡಿಸಿಕೊಂಡು ಬರಲು ಬರೆದಿದ್ದಾರೆ.

    ಇವರಿಬ್ಬರು ವೈದ್ಯರು ಬರೆದುಕೊಟ್ಟಿದ್ದ ಚೀಟಿಯನ್ನು ಹಿಡಿದುಕೊಂಡು ಲ್ಯಾಬ್‍ಗೆ ಹೋದಾಗ ಅಲ್ಲಿನ ಸಿಬ್ಬಂದಿ ಚೀಟಿ ನೋಡಿ ದಂಗಾಗಿದ್ದಾರೆ. ಪ್ರಗ್ನೆನ್ಸಿ ಪರೀಕ್ಷೆ ನಿಮಗಲ್ಲ ಮಹಿಳೆಯರಿಗೆ ಮಾಡುವುದು ಎಂದು ತಿಳಿಸಿದ್ದಾರೆ. ಬಳಿಕ ಯುವಕರು ಯಾವ ಪರೀಕ್ಷೆಯನ್ನೂ ಕೂಡ ಮಾಡಿಸದೆ ಮನೆಗೆ ವಾಪಸ್ ಬಂದಿದ್ದಾರೆ.

    ನಂತರ ನಡೆದ ಘಟನೆ ಬಗ್ಗೆ ನಮ್ಮ ಊರಿನಲ್ಲಿ ಹೇಳಿದ್ದಾರೆ. ಈ ಸುದ್ದಿ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ತಿಳಿದು ಇಡೀ ಜಾರ್ಖಂಡಿನಲ್ಲೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದ್ರೆ ವೈದ್ಯ ಮಾತ್ರ ಇದು ಸುಳ್ಳುಸುದ್ದಿ. ನನ್ನ ಹೆಸರನ್ನು ಹಾಳು ಮಾಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಇದೊಂದು ಪಿತೂರಿ, ನಾನು ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

  • ಹಸೆಮಣೆ ಏರಬೇಕಿದ್ದ ವೈದ್ಯೆ ರಸ್ತೆ ಗುಂಡಿಗೆ ಬಲಿ

    ಹಸೆಮಣೆ ಏರಬೇಕಿದ್ದ ವೈದ್ಯೆ ರಸ್ತೆ ಗುಂಡಿಗೆ ಬಲಿ

    ಮುಂಬೈ: ಮದುವೆ ಸಂಭ್ರಮದಲ್ಲಿದ್ದ ವೈದ್ಯೆಯೊಬ್ಬರು ಶಾಪಿಂಗ್ ಮಾಡಿಕೊಂಡು ಸಹೋದರನ ಜೊತೆ ಸ್ಕೂಟರ್ ನಲ್ಲಿ ಬರುತ್ತಿದ್ದ ವೇಳೆ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ದುರಂತ ಘಟನೆ ಮುಂಬೈನಲ್ಲಿ ನಡೆದಿದೆ.

    ಪಾಲ್ಗಾರ್ ನಿವಾಸಿಯಾದ ಡಾ. ನೇಹಾ ಶೇಕ್(23) ಅಪಘಾತದಲ್ಲಿ ಸಾವನ್ನಪ್ಪಿದ ವೈದ್ಯೆ. ನೇಹಾ ಹಾಗೂ ಅವರ ಸಹೋದರ ಭಿವಾಂಡಿಗೆ ಹೋಗಿ ಶಾಪಿಂಗ್ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದರು. ರಾತ್ರಿ 10:30ರ ವೇಳೆಗೆ ಗಣೇಶ ಪುರಿಯ ಪ್ರದೇಶದಲ್ಲಿ ಸಾಗುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಯಿಂದಾಗಿ ಸ್ಕೂಟರ್ ಸ್ಕಿಡ್ ಆಗಿದೆ. ಪರಿಣಾಮ ನೇಹಾ ದೂರಕ್ಕೆ ಹಾರಿ ಬಿದ್ದಿದ್ದಾರೆ. ಅದೇ ಸಮಯಕ್ಕೆ ವೇಗದಿಂದ ಬರುತ್ತಿದ್ದ ಟ್ರಕ್ ಅವರ ಮೇಲೆ ಹರಿದು ಹೋಗಿದ್ದು, ವೈದ್ಯೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಸವಾರೆ ಮೃತಪಟ್ಟಿದ್ದನ್ನು ನೋಡಿ ಭಯಗೊಂಡ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಆವರ ಸಹೋದರ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದು, ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಜುಲೈನಿಂದ ಈವರೆಗೆ ರಸ್ತೆ ಗುಂಡಿಯಿಂದ ಅಪಘಾತಕ್ಕೀಡಾಗಿ ಮುಂಬೈನಲ್ಲಿ ಬರೋಬ್ಬರಿ 50 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಮುಂದಿನ ತಿಂಗಳು ನೇಹಾ ಅವರ ಮದುವೆ ನಿಶ್ಚಯವಾಗಿತ್ತು. ಆದ್ದರಿಂದ ಮದುವೆ ತಯಾರಿಯಲ್ಲಿದ್ದ ಅವರ ಕುಟುಂಬ ಲಗ್ನ ಪತ್ರಿಕೆಯನ್ನು ಹಂಚಲು ಆರಂಭಿಸಿತ್ತು. ಆದರೆ ನೇಹಾ ಸಾವು ಸಂಭ್ರಮದ ವಾತಾವರಣದಲ್ಲಿದ್ದ ಮನೆಯಲ್ಲಿ ಸೂತಕ ಛಾಯೆ ತಂದಿದೆ. ಈ ಅಪಘಾತಕ್ಕೆ ಸ್ಥಳೀಯರು ಹಾಗೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಸ್ತೆ ಎಲ್ಲ ಗುಂಡಿಮಯವಾಗಿದೆ. ಪ್ರತಿ ದಿನ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ರಸ್ತೆಗೆ ಬೀಳುತ್ತಿದ್ದಾರೆ. ಇದಕ್ಕೆ ರಸ್ತೆ ಗುತ್ತಿಗೆದಾರರೇ ನೇರ ಹೊಣೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಡಿದೆದ್ದಿದ್ದಾರೆ.

    ಭಾರೀ ವಾಹನಗಳ ಅತಿಯಾದ ವೇಗ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಓಡಿಸುವುದು ಕೂಡ ಅಪಘಾತ ಹೆಚ್ಚಾಗಲು ಕಾರಣವಾಗಿದೆ. ಜೊತೆಗೆ ಪಿಡಬ್ಲೂಡಿ ಅಧಿಕಾರಿಗಳು ಕಾಮಗಾರಿ ಸರಿಯಾಗಿ ಮಾಡದೇ ನಿರ್ಲಕ್ಷ್ಯ ತೋರಿರುವುದು ಕೂಡ ಅಪಘಾತಗಳಿಗೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಸದ್ಯ ಟ್ರಕ್ ಚಾಲಕನ ವಿರುದ್ಧ ಗಣೇಶಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಬೇಕೆಂದ- ಮುತ್ತು ನೀಡಲು ಬಂದಾಗ ನಾಲಿಗೆಯನ್ನೇ ಕತ್ತರಿಸಿದ

    ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಬೇಕೆಂದ- ಮುತ್ತು ನೀಡಲು ಬಂದಾಗ ನಾಲಿಗೆಯನ್ನೇ ಕತ್ತರಿಸಿದ

    ಗಾಂಧಿನಗರ: ಪತಿಯೊಬ್ಬ ತನ್ನ ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಕೇಳುವ ನೆಪದಲ್ಲಿ ಆಕೆಯ ನಾಲಿಗೆಯನ್ನೇ ಕತ್ತರಿಸಿದ ಘಟನೆ ಬುಧವಾರ ರಾತ್ರಿ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.

    ಆಯುಬ್ ಪತ್ನಿಯ ನಾಲಿಗೆ ಕತ್ತರಿಸಿದ ಪತಿ. ಆಯುಬ್ ತನ್ನ ಪತ್ನಿ ತಸ್ಲಿಮಾ ಜೊತೆ ಜಗಳವಾಡಿದ್ದಾನೆ. ಜಗಳವಾಡಿದ ಬಳಿಕ ಪತ್ನಿ ಬಳಿ ಫ್ರೆಂಚ್ ಕಿಸ್ ಬೇಕು ಎಂದು ಕೇಳಿದ್ದಾನೆ. ಆಯುಬ್ ಮಾತನ್ನು ಕೇಳಿದ ತಸ್ಲಿಮಾ ತನ್ನ ಪತಿ ಜಗಳವಾಡಿದ್ದನ್ನು ಮರೆತು ಈಗ ಪ್ಯಾಚಪ್ ಮಾಡಿಕೊಳ್ಳುತ್ತಿದ್ದಾನೆ ಎಂದು ಒಪ್ಪಿಗೆ ನೀಡಿದ್ದಾಳೆ. ತಸ್ಲಿಮಾ ಫ್ರೆಂಚ್ ಕಿಸ್ ನೀಡಲು ನಾಲಿಗೆ ಹೊರಗೆ ತೆಗೆಯುತ್ತಾಳೆ. ಈ ವೇಳೆ ಆಯುಬ್ ತನ್ನ ಪತ್ನಿಯ ನಾಲಿಗೆಯನ್ನು ಕೈಯಲ್ಲಿ ಹಿಡಿದು ಚಾಕುವಿನಿಂದ ಕತ್ತರಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಪರಾರಿಯಾದ ಆರೋಪಿ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆ ಬಗ್ಗೆ ತಸ್ಲಿಮಾ ವೆಜಲ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ನಾನು 2008ರಂದು ಆಯುಬ್‍ನನ್ನು ಮದುವೆಯಾಗಿದ್ದೇನೆ. ಇದು ನನ್ನ ಮೂರನೇ ಮದುವೆಯಾಗಿದ್ದು, ಆಯುಬ್‍ನ ಎರಡನೇ ಮದುವೆ. ನಾವು ಮದುವೆಯಾದ ಎರಡು ತಿಂಗಳು ಮಾತ್ರ ಖುಷಿಯಾಗಿದ್ದೆವು. ಬಳಿಕ ಆಯುಬ್ ಚಿಕ್ಕಚಿಕ್ಕ ವಿಷಯಕ್ಕೆ ನನ್ನ ಜೊತೆ ಜಗಳವಾಡಲು ಶುರು ಮಾಡಿದ್ದನು. ಆಯುಬ್ ಕೆಲಸದ ಬಗ್ಗೆ ಅಸಡ್ಡೆ ಹೊಂದಿದ್ದಾನೆ. ನಾನು ಕೆಲಸದ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಆತ ನನ್ನ ಮೇಲೆ ಹಲ್ಲೆ ಮಾಡಿದ್ದನು. ನನಗೆ ಈ ಮದುವೆ ಮುರಿದುಕೊಳ್ಳುವುದ್ದಕ್ಕೆ ಇಷ್ಟವಿರಲಿಲ್ಲ. ಹಾಗಾಗಿ ಎಲ್ಲವನ್ನು ಸಹಿಸಿಕೊಂಡಿದ್ದೆ ಎಂದು ತಸ್ಲಿಮಾ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

    ಆಯುಬ್ ತನ್ನ ಪತ್ನಿಯ ನಾಲಿಗೆಯನ್ನು ಕತ್ತರಿಸಿದ ಬಳಿಕ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾನೆ. ಈ ವೇಳೆ ತಸ್ಲಿಮಾ ತನ್ನ ಸಹೋದರಿಗೆ ಕರೆ ಮಾಡಿ ನಡೆದ ಘಟನೆಯನ್ನು ತಿಳಿಸಿ ಸಹಾಯ ಮಾಡಲು ಕೇಳಿಕೊಂಡಿದ್ದಾಳೆ. ಅಲ್ಲದೆ ಕಾಲೋನಿಯಲ್ಲಿದ್ದ ಜನರ ಬಳಿ ಸಹಾಯ ಪಡೆದು ತಸ್ಲಿಮಾ ಆ ರೂಮಿನಿಂದ ಹೊರ ಬಂದಿದ್ದಾಳೆ. ಬಳಿಕ ಸ್ಥಳೀಯರು ತಸ್ಲಿಮಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ತಸ್ಲಿಮಾ ನಾಲಿಗೆಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

  • ಶಸ್ತ್ರಚಿಕಿತ್ಸೆ ನಂತ್ರ ಮನೆಗೆ ಬಂದು ಮಾತ್ರೆ ಸೇವಿಸಿದ ರೋಗಿ ಸಾವು

    ಶಸ್ತ್ರಚಿಕಿತ್ಸೆ ನಂತ್ರ ಮನೆಗೆ ಬಂದು ಮಾತ್ರೆ ಸೇವಿಸಿದ ರೋಗಿ ಸಾವು

    ಶಿವಮೊಗ್ಗ: ಬಲಗೈ ಶಸ್ತ್ರಚಿಕಿತ್ಸೆ ನಂತರ ಮನೆಗೆ ಬಂದು ಮಾತ್ರೆ ಸೇವಿಸಿದ ರೋಗಿಯೋರ್ವ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ರೋಗಿ ಸಾವಿಗೆ ಕಾರಣವೆಂದು ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.

    ಮೃತ ರೋಗಿಯನ್ನು ಶಿವಮೊಗ್ಗದ ವಿದ್ಯಾನಗರ ನಿವಾಸಿ ಪ್ರತಾಪ್ ಸಿಂಗ್(23) ಎಂದು ಗುರುತಿಸಲಾಗಿದೆ. ಪ್ರತಾಪ್‍ಗೆ ಕಳೆದ 4 ವರ್ಷಗಳ ಹಿಂದೆ ಆಗಿದ್ದ ಅಪಘಾತದಲ್ಲಿ ಬಲಗೈಗೆ ಪೆಟ್ಟಾಗಿತ್ತು. ಆಗ ಆತ ಚಿಕಿತ್ಸೆ ಪಡೆದು ಸುಮ್ಮನಾಗಿದ್ದನು. ಆದರೆ ನೋವು ಮಾತ್ರ ವರ್ಷಗಳು ಕಳೆದರೂ ಕಡಿಮೆ ಆಗಿರಲಿಲ್ಲ. ಆದ್ದರಿಂದ ಪ್ರತಾಪ್ ಕಳೆದ 24ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ವೈದ್ಯರು ಆತನ ಬಲಗೈಗೆ ಶಸ್ತ್ರಚಿಕಿತ್ಸೆ ಮಾಡಿ ಔಷಧಿ, ಮಾತ್ರೆ ನೀಡಿ ಅದೇ ದಿನ ಮನೆಗೆ ಕಳುಹಿಸಿದ್ದರು.

    ಮನೆಗೆ ಬಂದು ವೈದ್ಯರು ನೀಡಿದ್ದ ಮಾತ್ರೆ ಸೇವಿಸಿದ ಬಳಿಕ ಪ್ರತಾಪ್ ಮೃತಪಟ್ಟಿದ್ದಾನೆ. ಇದಕ್ಕೆ ವೈದ್ಯರು ನಿರ್ಲಕ್ಷ್ಯ ತೋರಿರುವುದೇ ಕಾರಣ ಎಂದು ಮೃತನ ಕುಟುಂಬಸ್ಥರು ಹಾಗು ಆತನ ಸ್ನೇಹಿತರು ಆರೋಪಿಸಿದ್ದಾರೆ. ಶಸ್ತ್ರಚಿಕಿತ್ಸೆ ದಿನ ಪ್ರತಾಪ್‍ನನ್ನು ಮನೆಗೆ ಕಳುಹಿಸದೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿ ಆತ ಚೇತರಿಸಿಕೊಂಡ ಮೇಲೆ ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ವೈದ್ಯರು ನಿರ್ಲಕ್ಷ್ಯ ತೋರಿದರು. ಹೀಗಾಗಿ ಪ್ರತಾಪ್ ಸಾವಿಗೆ ನ್ಯಾಯ ಸಿಗಬೇಕು ಹಾಗು ಈ ಘಟನೆಯನ್ನು ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು, ಸ್ನೇಹಿತರು ಆಗ್ರಹಿಸಿದ್ದಾರೆ.

  • ಮುಂಜಾನೆ ವಾಕ್ ಮಾಡುವಂತೆ ಹೇಳಿದ ನರ್ಸ್- ಕುಸಿದು ಬಿದ್ದು ಗರ್ಭಿಣಿ ಸಾವು

    ಮುಂಜಾನೆ ವಾಕ್ ಮಾಡುವಂತೆ ಹೇಳಿದ ನರ್ಸ್- ಕುಸಿದು ಬಿದ್ದು ಗರ್ಭಿಣಿ ಸಾವು

    – ಮಗು ಪಾರು
    – ವೈದ್ಯರ ವಿರುದ್ಧ ಪೋಷಕರು ಆಕ್ರೋಶ

    ಮಂಡ್ಯ: ಹೆರಿಗೆ ಸಂದರ್ಭದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಡ್ಯದ ಆಶ್ರಯ ನರ್ಸಿಂಗ್ ಹೋಮ್ ನಲ್ಲಿ ನಡೆದಿದೆ.

    ಸುಶೀಲಾ (32) ಸಾವನ್ನಪ್ಪಿದ ಮಹಿಳೆ. ಈಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದ ನಿವಾಸಿ. ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಮೃತಪಟ್ಟಿರುವುದಾಗಿ ಆಕೆಯ ಪೋಷಕರು ಆರೋಪ ಮಾಡುತ್ತಿದ್ದು, ಪ್ರತಿಭಟನೆ ನಡೆಸಿದ್ದಾರೆ.

    ಗುರುವಾರ ಸುಶೀಲಾರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾನೆ 3 ಗಂಟೆ ಸುಮಾರಿಗೆ ನರ್ಸ್ ಗಳು ಗರ್ಭಿಣಿಗೆ ವಾಕ್ ಮಾಡಲು ಹೇಳಿದ್ದಾರೆ. ಗರ್ಭಿಣಿ ಜೊತೆಗೆ ನರ್ಸ್ ಬಾರದೇ ಒಬ್ಬರನ್ನೇ ವಾಕ್ ಮಾಡಲು ಬಿಟ್ಟಿದ್ದಾರೆ. ಈ ವೇಳೆ ಮಹಿಳೆ ಕುಸಿದು ಬಿದ್ದು ತೀವ್ರ ರಕ್ತಸ್ರಾವವಾಗಿದೆ.

    ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದಿದ್ದರಿಂದ ನರ್ಸ್ ಗಳೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ತಡವಾಗಿ ಆಸ್ಪತ್ರೆಗೆ ಬಂದ ವೈದ್ಯೆ ಡಾ. ಶರ್ಮಿಳಾ, ಮಗು ಬದುಕಿದೆ. ಹೈ ಬೀಪಿ, ರಕ್ತ ಸ್ರಾವದಿಂದ ಮಹಿಳೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮೃತ ಮಹಿಳೆಯ ಫೋಷಕರು, ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ವೈದ್ಯರು, ನರ್ಸ್ ಗಳ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವನ್ನಪ್ಪಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಮಂಡ್ಯ ಎಸ್ಪಿ ಪರಶುರಾಮ್ ಭೇಟಿ ನೀಡಿದ್ದಾರೆ. ಮಂಡ್ಯ ಪಶ್ಚಿಮ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    -ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಅಕ್ರಮ ದಂಧೆ

    ಚಿತ್ರದುರ್ಗ: ವೈದ್ಯೋ ನಾರಾಯಣೋ ಹರಿ ಅಂತಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ದೊಡ್ಡ ಅಕ್ರಮ ದಂಧೆ ನಡೆಯುತ್ತಿದೆ.

    ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯ ಆಯುಷ್ ಡಾಕ್ಟರ್ ಎ.ಎನ್ ಸುರೇಶ್ ಎಂಬ ಆಸಾಮಿ, ಹಣಕ್ಕಾಗಿ ತಾನೊಬ್ಬ ವೈದ್ಯ ಅನ್ನೋದನ್ನೇ ಮರೆತು ಕ್ಯಾನ್ಸರ್ ರೋಗಿಗಳಿಗೆ ಪಾರಂಪರಿಕಚಿಕಿತ್ಸೆ ಕೊಡುತ್ತೇವೆ ಎಂದು ಅವರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾನೆ. ಕುಣಿಗಲ್‍ನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೆಸರಲ್ಲಿ ಖಾಸಗಿ ವಾಹಿನಿಗಳಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ತಾ, ಕ್ಯಾನ್ಸರ್ ರೋಗಿಗಳನ್ನು ಚಿತ್ರದುರ್ಗದ ಯೋಗಾವನ ಬೆಟ್ಟಕ್ಕೆ ಸೆಳೆಯುತ್ತಾನೆ. ಅಲ್ಲದೇ ಇವರ ಅಕ್ರಮ ಬಯಲಾಗದಿರಲಿ ಎಂದು ನಕಲಿ ಖಾವಿಧಾರಿಗಳ ಬೆಂಗಾವಲಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಇಲ್ಲಸಲ್ಲದ ಚಿಕಿತ್ಸೆ ನೀಡುತ್ತಿದ್ದಾನೆ ಆರೋಪಗಳು ಕೇಳಿ ಬಂದಿವೆ.

    ಯೋಗದಿಂದ ಕ್ಯಾನ್ಸರ್ ಗುಣಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳೋ ಈ ದಂಧೆಕೋರರ ಮಾತಿಗೆ ಮರುಳಾದ ಹುಬ್ಬಳ್ಳಿ ಮೂಲದ ಬಾಲರಾಜ್ ಕುಮಾರ್ ಎಂಬ ರೋಗಿಯಿಂದ 30 ಸಾವಿರ ರೂಪಾಯಿ ಹಣ ಪಡೆದು, ಆರು ತಿಂಗಳಿಂದ ಅಲ್ಲೇ ಉಳಿದರೂ ರೋಗ ಗುಣವಾಗದೇ ಆತ ಸಾವಿನಂಚಿಗೆ ತಲುಪಿದ್ದಾನೆ. ಈ ಬಗ್ಗೆ ಕೇಳಲು ಬಂದಿದ್ದ ಬಾಲರಾಜ್ ಕುಟುಂಬದ ಮೇಲೆ ಡಾಕ್ಟರ್ ಸುರೇಶನ ಚೇಲಗಳು ದೌರ್ಜನ್ಯವೆಸಗಲು ಮುಂದಾಗಿದ್ದರು. ಆಗ ಆಕ್ರೋಶಗೊಂಡ ಕ್ಯಾನ್ಸರ್ ರೋಗಿ ಅಲ್ಲಿನ ನಕಲಿ ಖಾವಿಧಾರಿಗಳಿಗೆ ಭರ್ಜರಿ ಗೂಸಕೊಟ್ಟು ತನ್ನ ಕೋಪವನ್ನು ಈಡೇರಿಸಿಕೊಂಡಿದ್ದಾನೆ.

    ಈ ಅಕ್ರಮ ಸುಮಾರು ನಾಲ್ಕು ವರ್ಷಗಳಿಂದ ನಡೆಯುತಿದ್ದರೂ ಸಹ ಆರೋಗ್ಯ ಇಲಾಖೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇನ್ನಾದರೂ ಆರೋಗ್ಯ ಸಚಿವರು ಈ ಅಕ್ರಮಕ್ಕೆ ಹಾಕುತ್ತಾರ ಬ್ರೇಕ್ ಕಾದು ನೋಡಬೇಕಿದೆ.

  • ಚಿಕಿತ್ಸೆ ನೀಡುತ್ತಿದ್ದಂತೆ ಬಾಯಿಯಲ್ಲಿ ನೊರೆ ಬಂದು ಬಾಲಕಿ ಸಾವು

    ಚಿಕಿತ್ಸೆ ನೀಡುತ್ತಿದ್ದಂತೆ ಬಾಯಿಯಲ್ಲಿ ನೊರೆ ಬಂದು ಬಾಲಕಿ ಸಾವು

    ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮಗುವಿನ ಪೋಷಕರು ವೈದ್ಯರ ಮನೆ ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಗಳೂರು ಪಟ್ಟಣದಲ್ಲಿ ನಡೆದಿದೆ.

    ಜಗಳೂರು ತಾಲೂಕಿನ ಗುಡ್ಡದಲಿಂಗನಹಳ್ಳಿ ಹನಮಂತಪ್ಪ, ಕರಿಬಸಮ್ಮ ದಂಪತಿಯ ಪುತ್ರಿ ಸಹನಾ (3) ಮೃತ ಬಾಲಕಿ. ವೈದ್ಯ ಕೆ.ವಿ. ಶಿವಪ್ರಕಾಶ್ ನಿರ್ಲಕ್ಷ್ಯವೇ ಸಹನಾ ಸಾವಿಗೆ ಕಾರಣ ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ. ಘಟನೆಯು ಶುಕ್ರವಾರ ಸಂಜೆ ನಡೆದಿದ್ದು, ಶಿವಪ್ರಕಾಶ್ ಅವರ ಮನೆಯ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಸಹನಾಗೆ ಶುಕ್ರವಾರ ಬೆಳಗ್ಗೆ ಜ್ವರ ಬಂದಿತ್ತು. ಹೀಗಾಗಿ ಹನಮಂತಪ್ಪ ಅವರು ಮಗಳನ್ನು ಕರೆದುಕೊಂಡು ಜಗಳೂರು ಪಟ್ಟಣದಲ್ಲಿರುವ ವೈದ್ಯ ಶಿವಪ್ರಕಾಶ್ ಅವರ ಬಳಿಗೆ ಬಂದಿದ್ದರು. ಶಿವಪ್ರಕಾಶ್ ಸಹನಾಗೆ ಚಿಕಿತ್ಸೆ ನೀಡುತ್ತಿದ್ದಂತೆ ಆಕೆಯ ಬಾಯಿಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ವೈದ್ಯ ಶಿವಪ್ರಸಾದ್, ತಕ್ಷಣವೇ ಮಗುವನ್ನು ದಾವಣಗೆರೆಗೆ ಕರೆದುಕೊಂಡು ಹೋಗಿ ಎಂದು ಹನಮಂತಪ್ಪ ಅವರಿಗೆ ಹೇಳಿದ್ದಾರೆ.

    ವಾಹನ ವ್ಯವಸ್ಥೆ ಮಾಡಿಕೊಂಡು ದಾವಣಗೆರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಸಹನಾ ಸಾವನ್ನಪ್ಪಿದ್ದಾಳೆ. ಇದರಿಂದ ಕೋಪಕೊಂಡ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು, ಸಹನಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ವೈದ್ಯ ಶಿವಪ್ರಕಾಶ್ ಅವರ ಮನೆ ಮುಂಭಾಗದಲ್ಲಿ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿ, ಮನೆಗೆ ಕಲ್ಲು ಎಸೆದು ಕಿಡಕಿಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮತ್ತೊಂದು ಎಡವಟ್ಟು- ಫಿಟ್ಸ್ ಬಂದು ಒದ್ದಾಡ್ತಿದ್ರೂ ಚಿಕಿತ್ಸೆ ನೀಡದ ವೈದ್ಯರು

    ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮತ್ತೊಂದು ಎಡವಟ್ಟು- ಫಿಟ್ಸ್ ಬಂದು ಒದ್ದಾಡ್ತಿದ್ರೂ ಚಿಕಿತ್ಸೆ ನೀಡದ ವೈದ್ಯರು

    ಹುಬ್ಬಳ್ಳಿ: ಪ್ರತಿಷ್ಠಿತ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಫಿಟ್ಸ್ ಬಂದು ರೋಗಿ ಒದ್ದಾಡುತ್ತಿದ್ದರೂ ಕೂಡ ವೈದ್ಯರು ಚಿಕಿತ್ಸೆ ನೀಡದೆ ಅಮಾನವೀಯತೆ ಮೆರೆದಿದ್ದಾರೆ.

    ಆಸ್ಪತ್ರೆಯ ಮಂಚದ ಕೆಳಗೆ ಬಿದ್ದು ರೋಗಿ ಒದ್ದಾಡುತ್ತಿದ್ದ. ಆದರೆ ರೋಗಿಯನ್ನು ನೋಡಿಯೂ ನೋಡಂದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದು ಬಿಟ್ಟಿದ್ದಾರೆ. ಇದನ್ನು ಗಮನಿಸಿದ ಸಾರ್ವಜಿಕರು ಸಿಬ್ಬಂದಿ ಮಾನವೀಯತೆ ಕಳೆದುಕೊಂಡಿದ್ದರಾ ಎಂದು ಪ್ರಶ್ನಿಸಿದ್ದಾರೆ.

    ಫಿಟ್ಸ್ ಬಂದು 15 ನಿಮಿಷಗಳ ಕಾಲ ರೋಗಿ ಒದ್ದಾಟ ನಡೆಸಿದ್ದರು. ಈ ವೇಳೆ ಕಬ್ಬಿಣದ ಮಂಚಕ್ಕೆ ಫಿಟ್ಸ್ ರೋಗಿ ತಲೆ ತಾಗಿದ್ದರೆ ಮತ್ತೊಂದು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯರು ಇದ್ದರು ಕೂಡ ರೋಗಿ ನೆಲದ ಮೇಲೆ ಬಿದ್ದು ಒದ್ದಾಟ ನಡೆಸುತ್ತಿದ್ದರು ಕೂಡ ಚಿಕಿತ್ಸೆ ನೀಡಲು ತಡಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಕಿಮ್ಸ್ ಅಧೀಕ್ಷಕರಾದ ರಾಮಲಿಂಗಪ್ಪ ಅವರು, ರಾತ್ರಿ 1.30ಕ್ಕೆ ಘಟನೆ ನಡೆದಿದ್ದು, ಆ ರೋಗಿ ಫಿಟ್ಸ್ ಬಂದು ನೆಲಕ್ಕೆ ಬಿದ್ದಿರಲಿಲ್ಲ. ತುರ್ತು ಸೇವೆಯ ಅಗತ್ಯವಿದ್ದ ಕಾರಣ ಬೇರೆ ರೋಗಿಗೆ ವೈದರು ಚಿಕಿತ್ಸೆ ನೀಡುತ್ತಿದ್ದರು. ಆದ್ದರಿಂದ ಈ ರೋಗಿಗೆ ಚಿಕಿತ್ಸೆ ನೀಡಲು 5 ನಿಮಿಷ ತಡವಾಗಿತ್ತು ಎಂದರು.

    ಆಸ್ಪತ್ರೆಗೆ ನಡೆದುಕೊಂಡೆ ಬಂದಿದ್ದ ರೋಗಿ ಪಾನಮತ್ತರಾಗಿದ್ದರು. ಆದ್ದರಿಂದ ಕೆಳಕ್ಕೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಬ್ಬ ರೋಗಿಗೆ ತುರ್ತು ಚಿಕಿತ್ಸೆ ಅಗತ್ಯವಿತ್ತು. ಆದ್ದರಿಂದಲೇ ತಡವಾಗಿದೆ. ಕೂಡಲೇ ನಾವು ಈ ರೋಗಿಗೂ ಚಿಕಿತ್ಸೆ ನೀಡಿದ್ದೇವೆ. ಆಸ್ಪತ್ರೆಯ ಸಿಬ್ಬಂದಿ ಯಾವುದೇ ನಿರ್ಲಕ್ಷ್ಯ ತೋರಿಲ್ಲ. ಇನ್ನು ಮುಂದೇ ಇಂತಹ ಘಟನೆಗಳು ಪುನರವರ್ತನೆಯಾಗದಂತೆ ಹೆಚ್ಚು ಜಾಗೃತಿ ವಹಿಸುವುದಾಗಿ ಹೇಳಿದರು.