Tag: doctor

  • ಬುದ್ಧಿ ಸ್ವಾಧೀನ ಕಳ್ಕೊಂಡ ಜಾನುವಾರುಗಳ ಜೀವಂತ ಸಮಾಧಿ

    ಬುದ್ಧಿ ಸ್ವಾಧೀನ ಕಳ್ಕೊಂಡ ಜಾನುವಾರುಗಳ ಜೀವಂತ ಸಮಾಧಿ

    ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ಸಾಕಿ ಬೆಳೆಸಿದ ಜಾನುವಾರುಗಳನ್ನ ಸ್ವತಃ ಗ್ರಾಮಸ್ಥರೇ ಜೀವಂತ ಸಮಾಧಿ ಮಾಡಿದ ಘಟನೆ ನಡೆದಿದೆ.

    ಹುಚ್ಚು ನಾಯಿ ಕಡಿತಕ್ಕೊಳಗಾದ ಗ್ರಾಮದ ಸುಮಾರು 10 ರಾಸುಗಳು ಬುದ್ಧಿ ಸ್ವಾಧೀನ ಕಳೆದುಕೊಂಡಿದ್ದವು. ಹುಚ್ಚು ನಾಯಿ ಗ್ರಾಮದ ಜನ ಹಾಗೂ ದನಗಳ ಮೇಲೆ ದಾಳಿ ಮಾಡುತ್ತಿದ್ದವು. ಕೆಲ ದಿನಗಳಿಂದ ಹುಚ್ಚು ನಾಯಿಗಳ ಕಡಿತಕ್ಕೆ ಎಮ್ಮೆಯೊಂದು ಆಕಳುಗಳ ಮೇಲೆ ದಾಳಿ ಮಾಡಿತ್ತು. ಜೀವ ಭಯದಿಂದ ಗ್ರಾಮಸ್ಥರು ಜೆಸಿಬಿ ಮೂಲಕ ಪ್ರಾಣಿಗಳ ಜೀವಂತ ಸಮಾಧಿ ಮಾಡಿದ್ದಾರೆ.

    ಕೆಲವು ಜಾನುವಾರುಗಳು ಅನಾರೋಗ್ಯದಿಂದ ಸಾವನ್ನಪ್ಪಿವೆ. ಪಶುವೈದ್ಯರಿಗೆ ಮಾಹಿತಿ ನೀಡಿದರೂ ಸರಿಯಾದ ಸಮಯಕ್ಕೆ ಔಷಧಿ ವಿತರಣೆ ಮಾಡದ ಹಿನ್ನೆಲೆಯಲ್ಲಿ ಪಶು ಇಲಾಖೆ ಅಧಿಕಾರಿಗಳ ಹಾಗೂ ವೈದ್ಯರ ನಿಷ್ಕಾಳಜಿಯಿಂದ ಚಿಕಿತ್ಸೆ ಸಿಗದೆ ಪ್ರಾಣಿಗಳು ಸ್ವಾಧೀನ ಕಳೆದುಕೊಂಡು ದಾಳಿಮಾಡುತ್ತಿದ್ದವು.

    ಹೀಗಾಗಿ ಬೇರೆದಾರಿಯಿಲ್ಲದೆ ಗ್ರಾಮಸ್ಥರೇ ನಾಲ್ಕೈದು ಜಾನುವಾರುಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ. ಜೊತೆಗೆ ಚಿಕಿತ್ಸೆ ನೀಡದ ಪಶು ವೈಧ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಅಶ್ಲೀಲ ವಿಡಿಯೋ ವ್ಯಸನಕ್ಕೆ ಬಿದ್ದ ಬೆಂಗ್ಳೂರು ವೈದ್ಯೆ – ಪತ್ನಿಯ ವಿಡಿಯೋ ಆನ್‍ಲೈನಲ್ಲಿ ನೋಡಿ ದಂಗಾದ ಟೆಕ್ಕಿ

    ಅಶ್ಲೀಲ ವಿಡಿಯೋ ವ್ಯಸನಕ್ಕೆ ಬಿದ್ದ ಬೆಂಗ್ಳೂರು ವೈದ್ಯೆ – ಪತ್ನಿಯ ವಿಡಿಯೋ ಆನ್‍ಲೈನಲ್ಲಿ ನೋಡಿ ದಂಗಾದ ಟೆಕ್ಕಿ

    – 2018ರಲ್ಲಿ ಮದುವೆಯಾಗಿದ್ದ ಜೋಡಿ
    – ಮದ್ವೆಗೂ ಮುನ್ನ ಅನೇಕರ ಜೊತೆ ಸಂಬಂಧ
    – ಪೋರ್ನ್ ವಿಡಿಯೋದಲ್ಲಿರುವಂತೆ ಅಭಿನಯಿಸಲು ಬಲವಂತ

    ಬೆಂಗಳೂರು: 32 ವರ್ಷದ ವೈದ್ಯೆ ಟೆಕ್ಕಿ ಪತಿಗೆ ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ ಮಾಡಿದ್ದಾಳೆ. ಆದರೆ ಆಕೆಯೇ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ  ವಿಡಿಯೋ ಬಹಿರಂಗವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಇದೀಗ ಟೆಕ್ಕಿ ಪತಿ, ಪತ್ನಿ ವೈದ್ಯೆಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ ವೈದ್ಯೆ ತಮ್ಮ ಮದುವೆಯನ್ನು ಉಳಿಸಿಕೊಡಿ ಎಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಪರಿಹಾರ್ ಕುಟುಂಬ ಸಮಾಲೋಚನಾ ಕೇಂದ್ರದಲ್ಲಿ ಮನವಿ ಮಾಡಿಕೊಂಡಿದ್ದಾಳೆ.

    ಏನಿದು ಪ್ರಕರಣ?
    ಮೂಲತಃ ಕೊಲ್ಕತ್ತಾ ಮಹಿಳೆ ಉತ್ತರ ಪ್ರದೇಶದ 33ರ ವ್ಯಕ್ತಿಯನ್ನು ಮಾಟ್ರಿಮೋನಿಯದಲ್ಲಿ ಭೇಟಿ ಆಗಿದ್ದಳು. ನಂತರ ಇಬ್ಬರು ಒಪ್ಪಿ 2018ರಲ್ಲಿ ಮದುವೆಯಾಗಿದ್ದರು. ವಿವಾಹವಾದ ನಂತರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ನನಗೆ ಮದುವೆಗೂ ಮೊದಲೂ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದೆ. ಆದರೆ ನಂತರ ಇಬ್ಬರೂ ಬೇರೆಯಾದ್ದೇವೆ ಎಂದು ವೈದ್ಯೆ ಪತಿಗೆ ತಿಳಿಸಿದ್ದಳು. ಹೀಗಾಗಿ ದಂಪತಿ ಕೆಲವು ದಿನ ಇಬ್ಬರೂ ಚೆನ್ನಾಗಿ ಸಂಸಾರ ಮಾಡುತ್ತಿದ್ದರು.

    ವೈದ್ಯೆ ಯಾವಾಗಲೂ ಪತಿಗೆ ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ ಮಾಡುತ್ತಿದ್ದಳು. ಆದರೆ ಟೆಕ್ಕಿ ಪತಿ ಅಂತಹ ವಿಡಿಯೊಗಳನ್ನು ನೋಡುವ ಅಭ್ಯಾಸ ಹೊಂದಿರಲಿಲ್ಲ. ಕೊನೆಗೆ ಪತ್ನಿಯ ಆಸೆಯನ್ನು ಪೂರೈಸಲು ಪತಿ ಪೋರ್ನ್ ವಿಡಿಯೋ ನೋಡಿದ್ದಾರೆ. ಒಂದು ದಿನ ಪತ್ನಿಯ ಮೊಬೈಲ್ ಫೋನ್‍ನಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಸೆಕ್ಸ್ ಮಾಡಿರುವ ವಿಡಿಯೋವನ್ನು ನೋಡಿ ಶಾಕ್ ಆಗಿದ್ದಾರೆ. ಈ ಬಗ್ಗೆ ಕೇಳಿದಾಗ, ಆತ ನನ್ನ ಮಾಜಿ ಗೆಳೆಯ. ಹಳೆಯ ವಿಡಿಯೋವನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ಮತ್ತೆ ತೊಂದರೆ ಕೊಟ್ಟರೆ ಉಪಯೋಗವಾಗಬಹುದು ಎಂದು ವಿಡಿಯೋ ಇಟ್ಟುಕೊಂಡಿದ್ದೀನಿ ಎಂದು ಹೇಳಿದ್ದಾಳೆ.

    ಪತ್ನಿ ವೈದ್ಯೆಯ ಮಾತಿನಿಂದ ಪತಿ ಸಮಾಧಾನವಾಗಿರಲಿಲ್ಲ. ಆದರೆ ಇತ್ತೀಚೆಗೆ ಪತ್ನಿ ಮತ್ತು ಬೇರೊಬ್ಬ ವ್ಯಕ್ತಿಯ ಜೊತೆ ಸೆಕ್ಸ್ ಮಾಡಿರುವ ವಿಡಿಯೋವನ್ನು ಆನ್‍ಲೈನ್‍ನಲ್ಲಿ ನೋಡಿದ್ದಾರೆ. ಈ ಬಗ್ಗೆ ಪತ್ನಿಯ ಬಳಿ ಕೇಳಿದ್ದಾರೆ. ಆಗ ಅವಳು ಮದುವೆಗೆ ಮುನ್ನ ಅನೇಕರ ಜೊತೆ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾಳೆ. ಆದರೆ ಆನ್‍ಲೈನ್‍ನಲ್ಲಿ ವಿಡಿಯೋ ಹೇಗೆ ಅಪ್ಲೋಡ್ ಆಗಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾಳೆ.

    ಕೊನೆಗೆ ಪತಿ ಆಕೆಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಇತ್ತ ಪತ್ನಿ ಪರಿಹಾರ್ ಕೇಂದ್ರವನ್ನು ಸಂಪರ್ಕಿಸಿ ನನ್ನ ಪತಿ ತನ್ನ ಮನೆಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಆರೋಪಿಸಿದ್ದಾಳೆ. ಆಗ ಪರಿಹಾರ್ ಕೇಂದ್ರದ ಹಿರಿಯ ಸಲಹೆಗಾರ್ತಿ ಬಿ.ಎಸ್ ಸರಸ್ವತಿ ದಂಪತಿಯನ್ನು ಮುಖಾಮುಖಿಯಾಗಿ ಕೂರಿಸಿ ಮಾತನಾಡಿಸಿದ್ದಾರೆ.

    ಈ ವೇಳೆ ಪತಿ, ನನ್ನ ಪತಿ ಪೋರ್ನ್ ವಿಡಿಯೋ ನೋಡುವುದಕ್ಕೆ ವ್ಯಸನಿಯಾಗಿದ್ದಾಳೆ. ಅಲ್ಲದೇ ನನಗೆ ಅದನ್ನು ಮಾಡುವಂತೆ ಒತ್ತಾಯಿಸಿದಳು. ಜೊತೆಗೆ ಮದುವೆಗೂ ಮುನ್ನ ನಡೆದ ಘಟನೆಗಳನ್ನು ಮುಚ್ಚಿಟ್ಟಿದ್ದಾಳೆ. ಹೀಗಾಗಿ ಆಕೆಯಿಂದ ಬೇರೆಯಾಗಿದ್ದೇನೆ ಎಂದು ಹೇಳಿದ್ದಾರೆ.

    ಪತಿ ಆಕೆಯಿಂದ ವಿಚ್ಛೇದನ ಪಡೆಯಬೇಕೆಂದು ಬಯಸಿದ್ದಾರೆ. ಆದರೆ ಮಹಿಳೆ ಹಿಂದೆ ನಡೆದುದ್ದನ್ನು ಮರೆತು ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಬಯಸುತ್ತಿದ್ದಾಳೆ. ನಾವು ದಂಪತಿಗೆ ಸಲಹೆ ನೀಡಿದ್ದೇವೆ ಎಂದು ಸರಸ್ವತಿ ಹೇಳಿದರು.

  • ವೈದ್ಯಾಧಿಕಾರಿಯ ವರ್ಗಾವಣೆ ಖಂಡಿಸಿ ಅಹೋರಾತ್ರಿ ಧರಣಿ, ಸತ್ಯಾಗ್ರಹ

    ವೈದ್ಯಾಧಿಕಾರಿಯ ವರ್ಗಾವಣೆ ಖಂಡಿಸಿ ಅಹೋರಾತ್ರಿ ಧರಣಿ, ಸತ್ಯಾಗ್ರಹ

    ಶಿವಮೊಗ್ಗ: ಕರ್ತವ್ಯನಿರತ ವೈದ್ಯಾಧಿಕಾರಿಯ ವರ್ಗಾವಣೆ ಮಾಡಿದ ಜಿಲ್ಲಾ ವೈದ್ಯಾಧಿಕಾರಿಯ ಕ್ರಮ ಖಂಡಿಸಿ ಹೊಸನಗರ ತಾಲೂಕಿನ ಸೊನಲೆ ಗ್ರಾಮಸ್ಥರು ಇಂದು ಹೊಸನಗರದ ತಾಲೂಕು ಆಸ್ಪತ್ರೆ ಮುಂದೆ ಆಹೋರಾತ್ರಿ ಧರಣಿ, ಸತ್ಯಾಗ್ರಹ ನಡೆಸುತ್ತಿದ್ದಾರೆ.

    ತಾಲೂಕಿನ ಸೊನಲೆ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಡಾ.ಮಾರುತಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದು ಅವರನ್ನು ರಿಪ್ಪನ್‍ಪೇಟೆಗೆ ವರ್ಗಾವಣೆ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಇವರೊಬ್ಬರೇ ವೈದ್ಯರು ಇರುವ ಕಾರಣ ಇದೀಗ ಇರುವ ಒಬ್ಬ ವೈದ್ಯರನ್ನು ವರ್ಗಾವಣೆ ಮಾಡಿದರೇ ಇಲ್ಲಿನ ಹಲವು ರೋಗಿಗಳಿಗೆ ವೈದ್ಯರಿಲ್ಲದಂತಾಗುತ್ತದೆ.

    ಈಗಾಗಿ ವೈದ್ಯರ ವರ್ಗಾವಣೆ ಖಂಡಿಸಿ ಇಲ್ಲಿನ ಸ್ಥಳೀಯ ನಾಗರೀಕರು, ಸಂಘ-ಸಂಸ್ಥೆಗಳು, ಪಕ್ಷಾತೀತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಮಾನ್ಯ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ರವಾನಿಸಿದ್ದಾರೆ. ಈ ನಿಯೋಜನೆಯನ್ನು ರದ್ದುಗೊಳಿಸುವವರೆಗೆ ಅಹೋರಾತ್ರಿ ಧರಣಿ ಮತ್ತು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಸ್ವಾಮಿರಾವ್, ತಾ.ಪಂ ಸದಸ್ಯ ಆಲವಳ್ಳಿ ವೀರೇಶ್, ವಾಲೆಮನೆ ನಾಗೇಶ್, ಗುರುಶೆಟ್ಟಿ ಬಿಳ್ಳೋಡಿ, ನಿವಣೆ ಮಹೇಶ್ ಗೌಡ, ಸೊನಲೆ ಸುರೇಶ್, ಸೊನಲೆ ರಾಜೇಶ್, ಸೊನಲೆ ವಿಜಯೇಂದ್ರಗೌಡ, ಹರೀಶ್, ವಿದ್ಯಾ, ಸುಮಾ, ರೂಪ, ಚೈತ್ರ, ಸುಮಿತ್ರ, ಅನುಪಮ, ನವ್ಯ, ಮಹಿಳಾ ಹಾಗೂ ಪುರುಷ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

  • ಬುರ್ಖಾ ಧರಿಸಿ ವೈದ್ಯನ ಅವಾಂತರ-ಹುಡುಗಿಗಾಗಿ ವಾಚ್ ಖರೀದಿಗೆ ಬಂದು ತಗ್ಲಾಕೊಂಡ

    ಬುರ್ಖಾ ಧರಿಸಿ ವೈದ್ಯನ ಅವಾಂತರ-ಹುಡುಗಿಗಾಗಿ ವಾಚ್ ಖರೀದಿಗೆ ಬಂದು ತಗ್ಲಾಕೊಂಡ

    ಧಾರವಾಡ/ಹುಬ್ಬಳ್ಳಿ: ಹುಡುಗಿಯ ಮನವೊಲಿಸಲು ದುಬಾರಿ ಬೆಲೆಯ ಗಿಫ್ಟ್ ಗಳನ್ನ ಕೊಡೋದನ್ನ ನೀವೂ ಕೇಳಿರತೀರಿ. ಆದರೆ ಹುಡುಗಿಯ ಮನವೊಲಿಸಲು ದುಬಾರಿ ಬೆಲೆಯ ವಾಚ್ ಖರೀದಿಸಲು ಬುರ್ಖಾ ಧರಿಸಿಕೊಂಡು ಬಂದ ವೈದ್ಯನೊಬ್ಬ ಪೊಲೀಸರ ಅತಿಥಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಶಿರಸಿ ಮೂಲದ ವೈದ್ಯ ವಸಂತರಾವ್ ಭಾನುವಾರ ಸಂಜೆ ಹುಬ್ಬಳ್ಳಿಯ ನ್ಯಾಷನಲ್ ಮಾರ್ಕೆಟ್ ಗೆ ಬುರ್ಖಾ ಧರಿಸಿಕೊಂಡು ವಾಚ್ ಖರೀದಿಸಲು ಆಗಮಿಸಿದ್ದ. ಬುರ್ಖಾ ಧರಿಸಿಕೊಂಡು ಟೈಟಾನ್ ಕಂಪನಿಯ ವಾಚ್ ಶೋ ರೂಂನಲ್ಲಿ 20 ಸಾವಿರ ರೂಪಾಯಿಯ ಬೆಲೆ ಬಾಳುವ ವಾಚ್ ಖರೀದಿಸಲು ಮುಂದಾದ ವೇಳೆ ವೈದ್ಯನ ವರ್ತನೆಯಿಂದ ಅನುಮಾನಗೊಂಡ ಅಂಗಡಿಯವರು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ವೈದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಅಲ್ಲದೇ ವೈದ್ಯನ ವರ್ತನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಸಹ ನಿರ್ಮಾಣವಾದ ಘಟನೆ ನಡೆಯಿತು.

    ಎಷ್ಟೆ ಪ್ರಯತ್ನ ಮಾಡಿದ್ರು ಯಾವ ಹುಡುಗಿಯೂ ವೈದ್ಯನನ್ನ ಮದುವೆಯಾಗಲು ಒಪ್ಪದ ಪರಿಣಾಮ ವೈದ್ಯ ವಸಂತರಾವ್ ಯಾರಾದ್ರು ಹುಡುಗಿಯೊಬ್ಬಳಿಗೆ ದುಬಾರಿ ಬೆಲೆಯ ವಾಚ್ ನೀಡಿ ಮನವೊಲಿಸಲು ಮುಂದಾಗಿದ್ದನಂತೆ. ಅದಕ್ಕಾಗಿಯೇ ದುಬಾರಿ ಬೆಲೆಯ ವಾಚ್ ಖರೀದಿಸಿದ್ದು ಯಾರಿಗೂ ಗೊತ್ತಾಗಬಾರದೆಂದು ಬುರ್ಖಾ ಧರಿಸಿಕೊಂಡು ಆಗಮಿಸಿದ್ದ ಅನ್ನೋ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಬಯಲಾಗಿದೆ.

    ಮದುವೆಯಾಗದ ಪರಿಣಾಮ ಕಳೆದ ಹಲವಾರು ವರ್ಷಗಳಿಂದ ಮಾನಸಿಕವಾಗಿ ನೊಂದಿರುವ ವೈದ್ಯ ವಸಂತರಾವ್ ಇದೀಗ ಬುರ್ಖಾ ಧರಿಸಿಕೊಂಡು ಬಂದು ವಾಚ್ ಖರೀದಿಸಲು ಮುಂದಾದ ವೇಳೆ ಪೊಲೀಸರ ಅತಿಥಿಯಾಗಿದ್ದಾನೆ. ವೈದ್ಯನನ್ನ ತೀವ್ರ ವಿಚಾರಣೆ ನಂತರ ವಸಂತರಾವ್ ಮಾನಸಿಕವಾಗಿ ನೊಂದಿರುವ ವಿಚಾರ ತಿಳಿದ ಬಳಿಕ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಇದೂವರೆಗೂ ಯಾವುದೇ ದೂರು ದಾಖಲಾಗಿಲ್ಲ. ಆದರೆ ಶಹರ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ವರದಿಯಾಗಿದೆ.

  • ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಡಾಕ್ಟರ್ ಅಂದರ್

    ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಡಾಕ್ಟರ್ ಅಂದರ್

    ಮಂಗಳೂರು: ಚಿಕಿತ್ಸೆಗೆ ಬಂದಿದ್ದ ಯುವತಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದ ಡಾಕ್ಟರ್‍ನನ್ನು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ನಡೆದಿದೆ.

    ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಯ ದಂತ ವೈದ್ಯ ಸುಧಾಕರ್ ಬಂಧಿತ ಆರೋಪಿ. 23 ವರ್ಷದ ಯುವತಿಯೊಬ್ಬಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದಳು. ಈ ವೇಳೆ ವೈದ್ಯ ಸುಧಾಕರ್ ಲೈಂಗಿಕ ಕಿರುಕುಳ ನೀಡಿದ್ದ.

    ಚಿಕಿತ್ಸೆ ಕೊಡುವ ನೆಪದಲ್ಲಿ ಗುಪ್ತಾಂಗಗಳನ್ನು ಮುಟ್ಟಿ ಕಿರುಕುಳ ನೀಡುತ್ತಿದ್ದ ಡಾಕ್ಟರ್ ಸುಧಾಕರ್ ವಿರುದ್ಧ ಯುವತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಡಾ.ಸುಧಾಕರ್‍ನನ್ನು ಬಂಧಿಸಿದ್ದಾರೆ. ಈ ಮೊದಲು ಡಾಕ್ಟರ್ ಸುಧಾಕರ್ ಮೇಲೆ ಇದೆ ರೀತಿಯ ದೂರುಗಳು ಕೇಳಿ ಬಂದಿತ್ತು ಎಂದು ಬಂಧನದ ಬಳಿಕ ಬೆಳಕಿಗೆ ಬಂದಿದೆ.

  • ವೈದ್ಯರ  ಎಡವಟ್ಟಿನಿಂದ ಬಾಲಕಿ ಸಾವು

    ವೈದ್ಯರ ಎಡವಟ್ಟಿನಿಂದ ಬಾಲಕಿ ಸಾವು

    ಬೆಳಗಾವಿ: ಜಿಲ್ಲಾ ಆಸ್ಪತ್ರೆಯ ವೈದ್ಯರ ಹಾಗೂ ಬಿಮ್ಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಬಿಮ್ಸ್ ಡೈರೆಕ್ಟರ್ ಕಿರಣ್‍ಕುಮಾರ್ ಪಾಟೀಲ್ ಆರೋಪಿಸಿದರು.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕ ತಾಲೂಕಿನ ಡೋರಗಲ್ಲಿಯ ಶ್ರದ್ಧಾ ಗಂಟಲು ನೋವಿನಿಂದ ಬಳಲುತ್ತಿದ್ದಳು. ಡಿಸೆಂಬರ್ 21 ರಂದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಡಿಸೆಂಬರ್ 23 ರಂದು ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿದರು.

    ಗಂಟಲಿನ ಟಾನ್ಸಿಲ್ಸ್ ಶಸ್ತ್ರಚಿಕಿತ್ಸೆಗೆ ಡಿಸೆಂಬರ್ 21ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗಂಟಲು, ಮೂಗು ವಿಭಾಗದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಮುಂದಾಗುತ್ತಾರೆ. ಆದರೆ ಅರವಳಿಕೆ ಮದ್ದು ನೀಡಿದ ತಕ್ಷಣ ಬಾಲಕಿ ಮೃತಪಟ್ಟಿದ್ದಾಳೆ ಎಂದು ಉಡಾಫೆ ಉತ್ತರ ಹೇಳುತ್ತಾರೆ. ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕು. ಪೋಷಕರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

  • ಸಿಎಎ ಬೆಂಬಲಿಸಿ ಜನವರಿ 25 ರಂದು ಕಲಬುರಗಿಯಲ್ಲಿ ವೈದ್ಯರ ರ‍್ಯಾಲಿ

    ಸಿಎಎ ಬೆಂಬಲಿಸಿ ಜನವರಿ 25 ರಂದು ಕಲಬುರಗಿಯಲ್ಲಿ ವೈದ್ಯರ ರ‍್ಯಾಲಿ

    ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಸ್ವಾಗತಿಸಿ ಅದರ ಬಗ್ಗೆ ಜನಜಾಗೃತಿ ಮೂಡಿಸಲು ಕಲಬುರಗಿ ನ್ಯಾಷನಲ್ ಮೆಡಿಕೊಸ್ ಸಂಘಟನೆ ಜನವರಿ 25ರಂದು ಕಲಬುರಗಿ ನಗರದಲ್ಲಿ ರ‍್ಯಾಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟನೆಯ ಸದಸ್ಯೆ ಡಾ.ಪ್ರತಿಮಾ ಕಾಮರೆಡ್ಡಿ ಹಾಗೂ ಸಂಘಟಕರು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

    ಈಗಾಗಲೇ ಈ ಕಾಯ್ದೆ ಸಂಸತ್ತಿನ ಎರಡು ಮನೆಯಲ್ಲಿ ಪಾಸಾಗಿ ಈಗಾಗಲೆ ದೇಶದಾದ್ಯಂತ ಜಾರಿಯಾಗಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಆದರೆ ಕೆಲವರು ಈ ಕಾಯ್ದೆ ಕುರಿತು ಅನಾವಶ್ಯಕ ರಾಜಕಾರಣ ಮಾಡುತ್ತ ಅಲ್ಪಸಂಖ್ಯಾತರು ಇದನ್ನು ವಿರೋಧಿಸುವಂತೆ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಈ ಕಾಯ್ದೆಯ ನಿಜಾಂಶ ಜನರಿಗೆ ತಿಳಿಯುವ ಅವಶ್ಯಕತೆಯಿದ್ದು, ಇದಕ್ಕೆ ನಮ್ಮ ಹಲವು ವೈದ್ಯರು ಸಾಥ್ ನೀಡಿದ್ದಾರೆ. ಇದರ ಬಗ್ಗೆ ಜಾಗೃತಿಗಾಗಿ ವೈದ್ಯರೆಲ್ಲ ರಸ್ತೆಗಿಳಿದು ಸಿಎಎ ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. ಅದರ ಮೊದಲ ಭಾಗವಾಗಿ ಜನವರಿ 25 ರಂದು ರ‍್ಯಾಲಿ ನಡೆಸಲಾಗುತ್ತಿದ್ದು, ನಗರದ ನಗರದ ವಲ್ಲಭಭಾಯಿ ಪಟೇಲ್ ಸರ್ಕಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ರ್ಯಾಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಈ ರ‍್ಯಾಲಿಗೇ ಆರೋಗ್ಯ ಭಾರತ, ಮೆಡಿವಿಷನ್, ಆಯುಷ್ ಡಾಕ್ಟರ್ಸ್ ಫೆಡರೇಶನ್, ಫಾರ್ಮಸಿ ವಿಭಾಗ, ನರ್ಸಿಂಗ್ ವಿಭಾಗದ ಸುಮಾರು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವೈದ್ಯರು ಭಾಗವಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಸಿಎಎಗೆ ಬೆಂಬಲಿಸುವ ಮನವಿ ಪತ್ರ ನೀಡಲಾಗುವುದು. ಜೊತೆಗೆ ಈಗಾಗಲೇ ಕೆಲವೊಂದು ವೈದ್ಯರ ತಂಡ ಸಿಎಎ ವಿರುದ್ಧವಾಗಿ ಪ್ರತಿಭಟನೆ ಮಾಡಿದೆ ಅದರಲ್ಲಿ ಮೆಡಿಕಲ್ ಫೆಟರ್ನಿಟಿ ಎಲ್ಲರ ವಿರೋಧವಿದೆ ಎಂದು ಹೇಳಿಕೆ ನೀಡಲಾಗಿದೆ. ಆದರೆ ಜಿಲ್ಲೆಯ ಸಾವಿರಾರು ವೈದ್ಯರು ಸಿಎಎಗೆ ಬೆಂಬಲ ನೀಡಿದ್ದಾರೆ. ಕೇಂದ್ರ ಸರ್ಕಾರ ದೇಶದ ಭದ್ರತೆ ಹಾಗೂ ಐಕ್ಯತೆ ಸಾರಲು ಈ ಸಿಎಎ ಜಾರಿಮಾಡಲಾಗಿದೆ ಎಂದು ಕರ್ನಾಟಕ ನ್ಯಾಷನಲ್ ಮೆಡಿಕೊಸ್ ಸಂಘಟನೆಯ ಉತ್ತರ ಕರ್ನಾಟಕ ವಿಭಾಗದ ಕಾರ್ಯದರ್ಶಿಗಳಾದ ಡಾ.ಕುಮಾರ್ ಅಂಗಡಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

  • I Am Fit And Fine- ವೈದ್ಯರ ಬಳಿ ಆದಿತ್ಯ ರಾವ್ ಡೈಲಾಗ್

    I Am Fit And Fine- ವೈದ್ಯರ ಬಳಿ ಆದಿತ್ಯ ರಾವ್ ಡೈಲಾಗ್

    ಬೆಂಗಳೂರು: ನನಗೆ ಏನೂ ಆಗಿಲ್ಲ. ನಾನು ಚೆನ್ನಾಗಿದ್ದೇನೆ ಎಂದು ಆದಿತ್ಯ ರಾವ್ ವೈದ್ಯರ ಜೊತೆ ಹೇಳಿದ್ದಾನೆ

    ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಇಂದು ಬೆಳಗ್ಗೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯರು ಪರೀಕ್ಷೆ ನಡೆಸುತ್ತಿದ್ದಾಗ, “ಐ ಆ್ಯಮ್ ಆಲ್ ರೈಟ್ ಡಾಕ್ಟರ್, ಐ ಡೋಂಟ್ ನೀಡ್ ಎನಿ ಮೆಡಿಸಿನ್” ಅಂತ ಡೈಲಾಗ್ ಹೊಡೆದಿದ್ದಾನೆ. ಆರೋಪಿ ಆದಿತ್ಯ ರಾವ್ ವೈದ್ಯರ ಜೊತೆ ನಡೆಸಿದ ಸಂಭಾಷಣೆಯ ಎಕ್ಸ್ ಕ್ಲೂಸೀವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸರು ಆರೋಪಿಯನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯರು, ಏನಾದರೂ ಸಮಸ್ಯೆ ಇದ್ಯಾ? ಜ್ವರ ಶೀತ ಕೆಮ್ಮು ಏನಾದ್ರೂ ಇದೆಯೇ ಎಂದು ಪ್ರಶ್ನಿಸಿದರು. ಆಗ ಆದಿತ್ಯ ರಾವ್, ಐ ಆ್ಯಮ್ ಆಲ್ ರೈಟ್ ನಂಗೇನೂ ಸಮಸ್ಯೆಯೇ ಇಲ್ಲ. ನಂಗ್ಯಾವ ಮೆಡಿಸನ್ ಬೇಡ ಅಂತ ಹೇಳಿದ್ದಾನೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    ವೈದ್ಯರ ಎಲ್ಲಾ ತಪಾಸಣೆಗೂ ಸಕಾರಾತ್ಮಕವಾಗಿ ಸೈಕೋ ಬಾಂಬರ್ ಆದಿತ್ಯ ರಾವ್ ಸ್ಪಂದಿಸಿದ್ದಾನೆ. ಮಾನಸಿಕ ಸ್ಥಿತಿ ಬಗ್ಗೆ ನಾವೇನು ಜಡ್ಜ್ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಆತ ಮಾತಾನಾಡುವ ಶೈಲಿ ನೋಡಿದರೆ ಆತ ಮಾನಸಿಕ ಅಸ್ವಸ್ಥ ಅಂತ ಹೇಳೋದಕ್ಕೆ ಬರಲ್ಲ. ಆದರೆ ಮಂಗಳೂರು ಪೊಲೀಸರು ಆಮೇಲೆ ಆತನ ಮಾನಸಿಕ ಸ್ಥಿತಿಯ ಬಗ್ಗೆ ವೈದ್ಯರ ಅಭಿಪ್ರಾಯ ಪಡೆದೇ ಪಡೆಯುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!

    ಆತನ ಬಿಪಿ ಪಲ್ಸ್ ಶುಗರ್ ಎಲ್ಲವೂ ನಾರ್ಮಲ್ ಆಗಿದೆ. ಹೃದಯಸಂಬಂಧಿ ಸಮಸ್ಯೆಯೂ ಆತನಿಗಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ತಿಂಡಿ ಮಾಡಿದ್ರಾ ಎಂದು ವೈದ್ಯರ ಪ್ರಶ್ನೆಗೆ, ಹೌದು ಮಾಡಿದ್ದೀನಿ, ನಂಗ್ಯಾವ ಮಾತ್ರೆ ಬರೆದು ಕೊಡಬೇಡಿ. ಯಾವ ಟ್ಯಾಬ್ಲೆಟ್ ತೆಗೆದುಕೊಳ್ಳುವ ಸಮಸ್ಯೆ ನಂಗಿಲ್ಲವೆಂದು ವೈದ್ಯರಿಗೆ ಮಾಹಿತಿ ಕೊಟ್ಟಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ

  • ಕಾಂಡೋಮ್ ಬಳಸದೇ ಸೆಕ್ಸ್- ರೇಪ್ ಕೇಸ್ ದಾಖಲಿಸಿದ ಯುವತಿ

    ಕಾಂಡೋಮ್ ಬಳಸದೇ ಸೆಕ್ಸ್- ರೇಪ್ ಕೇಸ್ ದಾಖಲಿಸಿದ ಯುವತಿ

    ಲಂಡನ್: ವೈದ್ಯನೊಬ್ಬ ಸೆಕ್ಸ್ ಮಾಡುವ ವೇಳೆ ಕಾಂಡೋಮ್ ಬಳಸದಿದ್ದಕ್ಕೆ ಯುವತಿ ತನ್ನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ.

    ಮ್ಯಾಥ್ಯೂ ಸೆವೆಲ್ ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸದೆ ಈಗ ಪೊಲೀಸರ ಅಥಿತಿಯಾಗಿದ್ದಾನೆ. ಸೆವೆಲ್ ಕಾಂಡೋಮ್ ಬಳಸಲಿಲ್ಲ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಗೆ ತಾನು ಎಂದಿಗೂ ಒಪ್ಪುವುದಿಲ್ಲ ಎಂದು ಯುವತಿ ಆರೋಪಿಸಿದ್ದಾಳೆ. ಹೀಗಾಗಿ ಅತ್ಯಾಚಾರದ ಆರೋಪದ ಮೇರೆಗೆ ಸೆವೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

    23 ವರ್ಷ ಯುವತಿಯನ್ನು ಆರೋಪಿ ಸೆವೆಲ್ ಡೇಟಿಂಗ್ ಆ್ಯಪ್ ಟಿಂಡರ್ ಮೂಲಕ ಭೇಟಿಯಾಗಿದ್ದನು. ಅಲ್ಲಿ ಸೆವೆಲ್ ತನ್ನ ಪ್ರೊಫೈಲ್‍ನಲ್ಲಿ ತನಗೆ 27 ವರ್ಷ ಎಂದು ಹೇಳಿಕೊಂಡಿದ್ದನು. ಆದರೆ ವೈದ್ಯನಿಗೆ 36 ವರ್ಷ ವಯಸ್ಸಾಗಿತ್ತು.

    ಆರೋಪಿ ವೈದ್ಯ ಸುಳ್ಳು ಹೇಳಿ ಮಿಡಲ್ಸ್ ಬರೋದಲ್ಲಿನ ಬಾರಿನಲ್ಲಿ ಯುವತಿಯನ್ನು ಭೇಟಿಯಾಗಿದ್ದನು. ಅಲ್ಲಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದನು. ಈ ವೇಳೆ ಸೆವೆಲ್ ಯುವತಿಯನ್ನು ತನ್ನ ಮನೆಗೆ ಬರುವಂತೆ ಕರೆದಿದ್ದನು.

    ಮನೆಗೆ ಹೋದ ಬಳಿಕ ಯುವತಿ ಒಪ್ಪಿದ ಮೇಲೆ ಆರೋಪಿ ಸೆವೆಲ್ ಸೆಕ್ಸ್ ಮಾಡಲು ಮುಂದಾಗಿದ್ದಾನೆ. ಆದರೆ ಈ ವೇಳೆ ಸೆವೆಲ್ ಯುವತಿಗೆ ಗೊತ್ತಿಲ್ಲದಂತೆ ಕಾಂಡೋಮ್ ಅನ್ನು ತೆಗೆದು ಹಾಕಿದ್ದಾನೆ. ಆದರೆ ಯುವತಿ ಸೆವೆಲ್ ಕಾಂಡೋಮ್ ಬಳಸಿದ್ದಾನೆ ಎಂದುಕೊಂಡಿದ್ದಳು. ನಂತರ ಸೆವೆಲ್ ಕಾಂಡೋಮ್ ಬಳಸಿಲ್ಲೆಂದು ತಿಳಿಯುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

    ಯುವತಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಆತನ ವಿರುದ್ಧ ಪ್ರರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಆರೋಪಿ ಸೆವೆಲ್ ಕೂಡ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಖಾಯಂ ವೈದ್ಯಾಧಿಕಾರಿ, ನರ್ಸ್‍ಗಳು ಇಲ್ಲದೆ ರೋಗಿಗಳ ನರಳಾಟ

    ಖಾಯಂ ವೈದ್ಯಾಧಿಕಾರಿ, ನರ್ಸ್‍ಗಳು ಇಲ್ಲದೆ ರೋಗಿಗಳ ನರಳಾಟ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವಾರು ದಿನಗಳಿಂದ ಖಾಯಂ ವೈದ್ಯಾಧಿಕಾರಿಗಳು ಇಲ್ಲದೆ ರೋಗಗಳು ನರಳಾಡುತ್ತಿದ್ದಾರೆ.

    ಕೂಡಿಗೆ ವ್ಯಾಪ್ತಿಯ ರೋಗಿಗಳು ಮಾತ್ರವಲ್ಲದೆ ಮೈಸೂರು ಮತ್ತು ಹಾಸನ ಜಿಲ್ಲೆಗಳಿಂದ ರೋಗಿಗಳು ದಿನಂಪ್ರತಿ ಇಲ್ಲಿಗೆ ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳು ಇಲ್ಲದ ಕಾರಣ ಬಿಕೋ ಎನ್ನುತ್ತಿದೆ. ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ವೈದ್ಯಾಧಿಕಾರಿಗಳು ಮತ್ತು ನರ್ಸ್ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.

    ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಲಭ್ಯವಾಗದೆ ದೂರದ ಕುಶಾಲನಗರ ಮತ್ತು ಮಡಿಕೇರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಅಕ್ಕಪಕ್ಕದ ಊರಿನ ಸುಮಾರು 200ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ಕೂಡಿಗೆ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಇಲ್ಲದೆ ಕೇವಲ 20 ರಿಂದ 30 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸರ್ಕಾರ ಜನರ ಆರೋಗ್ಯದ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಜನರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಲ್ಲಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿದೆ. ಕೆಲವು ಕಡೆ ಹೊಸ ಆಸ್ಪತ್ರೆ ಕೂಡ ಮಂಜೂರು ಮಾಡಿದೆ. ಆದರೆ ಇದ್ದ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಸರಿಯಾಗಿ ವೈದ್ಯಾಧಿಕಾರಿಗಳು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಸರ್ಕಾರದ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಯಿಲೆಯಿಂದ ಬಳಲುತ್ತಿರುವವರಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿ ಚಿಕಿತ್ಸೆ ಸಿಗದ ಕಾರಣ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ ಎಂಬುದು ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.