Tag: doctor

  • ಚೆನ್ನೈನಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯನಿಗೆ 7 ಬಾರಿ ಚಾಕು ಇರಿತ – ಪೊಲೀಸರಿಂದ ಓರ್ವನ ಬಂಧನ

    ಚೆನ್ನೈನಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯನಿಗೆ 7 ಬಾರಿ ಚಾಕು ಇರಿತ – ಪೊಲೀಸರಿಂದ ಓರ್ವನ ಬಂಧನ

    ಚೆನ್ನೈ: ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯನಿಗೆ ರೋಗಿಯ ಮಗ ಚಾಕುವಿನಿಂದ 7 ಬಾರಿ ಮನಬಂದಂತೆ ಇರಿದಿರುವ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ.

    ವೈದ್ಯ ಡಾ.ಬಾಲಾಜಿ ಹಲ್ಲೆಗೊಳಗಾದ ವ್ಯಕ್ತಿ. ಆರೋಪಿಯನ್ನು ಪೆರುಗುಳತ್ತೂರಿನ ವಿಘ್ನೇಶ್ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಬೆಂಬಲಿಗನಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್‌ ಪಟ್ಟ

    ಚೆನ್ನೈನ ಕಲೈಂಜರ್ ಸೆಂಟಿನರಿ ಆಸ್ಪತ್ರೆಯ ಕ್ಯಾನ್ಸರ್ ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ಡಾ. ಬಾಲಾಜಿ ಕೆಲಸ ಮಾಡುತ್ತಿದ್ದ ವೇಳೆ ವಿಘ್ನೇಶ್ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ವೈದ್ಯರಿಗೆ ಏಳು ಬಾರಿ ಇರಿದಿದ್ದು, ವಿಘ್ನೇಶ್ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಅಲ್ಲಿದ್ದ ಇತರರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಠೀಕರಣ ಎಲ್ಲೆ ಮೀರಿದೆ-ಟೆಂಡರ್‌ನಲ್ಲಿ 4% ಮೀಸಲಾತಿ ವಿಚಾರಕ್ಕೆ ಶೋಭಾ ಕರಂದ್ಲಾಜೆ ಆಕ್ರೋಶ

    ವಿಘ್ನೇಶ್ ತಾಯಿ ಕಳೆದ ಕೆಲವು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ (Cancer) ಚಿಕಿತ್ಸೆ ಪಡೆದಿದ್ದರು. ಜೊತೆಗೆ ಆರು ಬಾರಿ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದರಿಂದ ಅವರನ್ನು ಮನೆಗೆ ಕರೆದೊಯ್ದಿದ್ದರು. ಕೆಲ ದಿನಗಳ ಹಿಂದೆ ಆಕೆಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇಂದು ಗಿಂಡಿಯಲ್ಲಿರುವ ಕಲೈಂಜರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದಾಗ ಬಾಲಾಜಿ ಅವರ ಕೊಠಡಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಎಲ್.ಪಾರ್ಥಸಾರಥಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮತಗಟ್ಟೆಯಲ್ಲಿ ಸರ್ಕಾರಿ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಅಭ್ಯರ್ಥಿ

    ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಡಾ.ಬಾಲಾಜಿ ಅವರಿಗೆ ರೋಗಿಯ ಕುಟುಂಬದ ಸದಸ್ಯ ಚಾಕುವಿನಿಂದ ಇರಿದಿರುವುದು ಆಘಾತಕಾರಿಯಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ತಕ್ಷಣವೇ ಬಂಧಿಸಲಾಗಿದೆ. ಎಲ್ಲಾ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ. ಬಾಲಾಜಿ ಅವರಿಗೆ ಮತ್ತು ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಸಬೇಕು ಹೇಳಿದರು. ಇದನ್ನೂ ಓದಿ: ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಮೊದಲ ಸ್ಥಾನ

    ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ನಮ್ಮ ಸರ್ಕಾರಿ ವೈದ್ಯರ ನಿಸ್ವಾರ್ಥ ಕೆಲಸ ಅಪಾರವಾಗಿದೆ. ಅವರ ಸುರಕ್ಷತೆಯನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ, ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಿಹಾರದ ಕಾರ್ಯಕ್ರಮದಲ್ಲಿ ಮೋದಿ ಪಾದಸ್ಪರ್ಶಕ್ಕೆ ನಿತೀಶ್ ಯತ್ನ – ವೀಡಿಯೋ ವೈರಲ್

  • ಬೆಂಗಳೂರು | ಕುಡಿದ ಮತ್ತಲ್ಲಿ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ವೈದ್ಯ!

    ಬೆಂಗಳೂರು | ಕುಡಿದ ಮತ್ತಲ್ಲಿ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ವೈದ್ಯ!

    ಬೆಂಗಳೂರು: ಕುಡಿದ ಮತ್ತಲ್ಲಿ ವೈದ್ಯ (Doctor) ಹಾಗೂ ನರ್ಸ್ ಸೇರಿ ಆಸ್ಪತ್ರೆಗೆ ಬಂದಿದ್ದ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ (Hospital) ನಡೆದಿದೆ.

    ನ.3ರಂದು ಯುವತಿಯೊಬ್ಬಳು ತೀವ್ರ ಜ್ವರದಿಂದ ಆಸ್ಪತ್ರೆಗೆ ಹೋಗಿದ್ದಳು. ಈ ವೇಳೆ ಡಾ.ಪ್ರದೀಪ್ ಹಾಗೂ ನರ್ಸ್ ಮಹೇಂದ್ರ ಕುಡಿದ ಮತ್ತಿನಲ್ಲಿದ್ದರು. ಈ ವೇಳೆ ಯುವತಿಗೆ ಮಹೇಂದ್ರ ಇಂಜೆಕ್ಷನ್‌ ನೀಡಿದ್ದಾನೆ. ಬಳಿಕ ಡಾ.ಪ್ರದೀಪ್‌ನನ್ನು ಕರೆದು ಚಿಕಿತ್ಸೆ ಕೊಡುವಂತೆ ಹೇಳಿದ್ದಾನೆ. ಡಾ.ಪ್ರದೀಪ್ ಇಂಜೆಕ್ಷನ್ ಹಿಡಿದು ಯುವತಿಯ ಮೈಕೈಗೆ 4-5 ಬಾರಿ ಇಂಜೆಕ್ಷನ್ ಚುಚ್ಚಿದ್ದಾನೆ. ಅಲ್ಲದೇ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

    ತಕ್ಷಣ ಯುವತಿಯ ಪೋಷಕರು ಕುಡಿದು ಬಂದಿದ್ದೀರಾ ಎಂದು ವೈದ್ಯ ಹಾಗೂ ನರ್ಸ್‌ ಮಹೇಂದ್ರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ.

    ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ‌ ಯುವತಿ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಎನ್‍ಸಿಆರ್ ದಾಖಲು ಮಾಡಿಕೊಂಡಿದ್ದಾರೆ.

  • ಹಾವೇರಿ| ಮಗನ ಹೃದಯಾಘಾತ ಸಾವಿನ ಸುದ್ದಿ ಕೇಳಿ ತಂದೆಯೂ ಹೃದಯಾಘಾತಕ್ಕೆ ಬಲಿ

    ಹಾವೇರಿ| ಮಗನ ಹೃದಯಾಘಾತ ಸಾವಿನ ಸುದ್ದಿ ಕೇಳಿ ತಂದೆಯೂ ಹೃದಯಾಘಾತಕ್ಕೆ ಬಲಿ

    ಹಾವೇರಿ/ಹುಬ್ಬಳ್ಳಿ: ಮಗ ಹೃದಯಾಘಾತದಿಂದ ಸಾವಾಗಿರುವ ಸುದ್ದಿ ಕೇಳಿ, ತಂದೆಯೂ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯಾವಿದ್ರಾವಕ ಘಟನೆ ಹಾವೇರಿ (Haveri) ಜಿಲ್ಲೆಯ ಬಸವೇಶ್ವರ ನಗರದಲ್ಲಿ ನಡೆದಿದೆ.

    ಡಾ. ವಿನಯ್ ಗುಂಡಗಾವಿ (38) ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಗ. ಡಾ. ವೀರಭದ್ರಪ್ಪ ಗುಂಡಗಾವಿ (68) ಮೃತ ತಂದೆ. ಒಂದೇ ದಿನ ತಂದೆ ಮಗ ಮೃತಪಟ್ಟಿದ್ದು, ವೃತ್ತಿಯಲ್ಲಿ ಇಬ್ಬರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇದನ್ನೂ ಓದಿ: ತಾಳೆಗರಿಯಲ್ಲಿ ಗದಾಯುದ್ಧ ಬರೆಯಲು ಮುಂದಾದ ಸಂಗಮೇಶ ಕಲ್ಯಾಣಿ

    ಮಗನ ಸಾವಿನ ಸುದ್ದಿ ಕೇಳಿದ ತಂದೆ ಡಾ.ವೀರಭದ್ರಪ್ಪ ಗುಂಡಗಾವಿಗೆ ಹಾವೇರಿಯಲ್ಲಿ ಹೃದಯಾಘಾತವಾಗಿದೆ. ಹೃದಯಾಘಾತದಿಂದ ತಂದೆಯೂ ಕೊನೆಯುಸಿರೆಳೆದಿದ್ದಾರೆ. ಮಗ ಡಾ. ವಿನಯ ಹುಬ್ಬಳ್ಳಿಯಲ್ಲಿ (Hubballi) ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ತಂದೆ ಡಾ.ವೀರಭದ್ರಪ್ಪ ಹಾವೇರಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ತಂದೆ ಮತ್ತು ಮಗ ಯಾವಾಗಲೂ ಅತ್ಯಂತ ಪ್ರೀತಿಯಿಂದಲೆ ಇರುತ್ತಿದ್ದರು. ಹೀಗಾಗಿ ಮಗ ಡಾ.ವಿನಯನ ಸಾವಿನ ಸುದ್ದಿ ಕೇಳಿದ ತಂದೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಕೆಂಗೇರಿ ಕೆರೆಗೆ ಬಿದ್ದ ಅಣ್ಣ ತಂಗಿ, 3 ಗಂಟೆಗಳಿಂದ ಸತತ ಕಾರ್ಯಾಚರಣೆ – ಅಣ್ಣನ ಮೃತದೇಹ ಪತ್ತೆ

  • Delhi | ಚಿಕಿತ್ಸೆಗೆ ಬಂದು ವೈದ್ಯನ ಗುಂಡಿಕ್ಕಿ ಹತ್ಯೆಗೈದ ಅಪ್ರಾಪ್ತರು

    Delhi | ಚಿಕಿತ್ಸೆಗೆ ಬಂದು ವೈದ್ಯನ ಗುಂಡಿಕ್ಕಿ ಹತ್ಯೆಗೈದ ಅಪ್ರಾಪ್ತರು

    ದೆಹಲಿ: ಇಲ್ಲಿನ (Delhi) ಜೈತ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ (Hospital) ಇಬ್ಬರು ಅಪ್ರಾಪ್ತರು 55 ವರ್ಷದ ವೈದ್ಯನನ್ನು (Doctor) ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಹತ್ಯೆಗೊಳಗಾದ ವೈದ್ಯನನ್ನು ಡಾ.ಜಾವೇದ್ ಅಖ್ತರ್ ಎಂದು ಗುರುತಿಸಲಾಗಿದೆ.

    ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ಇಬ್ಬರು 16-17 ವರ್ಷ ವಯಸ್ಸಿನವರು ತಡರಾತ್ರಿ ಆಸ್ಪತ್ರೆಗೆ ಬಂದಿದ್ದರು. ಅದರಲ್ಲಿ ಒಬ್ಬ ತನ್ನ ಗಾಯಗೊಂಡ ಕಾಲ್ಬೆರಳಿಗೆ ಡ್ರೆಸ್ಸಿಂಗ್ ಬದಲಾಯಿಸಲು ಕೇಳಿದ. ಆತನಿಗೆ ಚಿಕಿತ್ಸೆ ನೀಡಿ, ಡ್ರೆಸ್ಸಿಂಗ್ ಮಾಡಲಾಯಿತು. ಬಳಿಕ ತನಗೆ ಪ್ರಿಸ್ಕ್ರಿಪ್ಷನ್ ಬೇಕು ಎಂದು ಕೇಳಿದ. ಈ ವೇಳೆ ಡಾ.ಜಾವೇದ್ ಅಖ್ತರ್ ಅವರ ಕ್ಯಾಬಿನ್‌ಗೆ ಹೋದರು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಅವರ ತಲೆಗೆ ಗುಂಡು ತಗುಲಿದ್ದು ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್

    ಆರೋಪಿಗಳು 16 ಅಥವಾ 17 ವರ್ಷ ವಯಸ್ಸಿನವರಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಇದು ಉದ್ದೇಶಿತ ಹತ್ಯೆಯ ಪ್ರಕರಣವೆಂದು ತೋರುತ್ತಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಶಂಕಿತರನ್ನು ಗುರುತಿಸಲು ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: Japan| ಏರ್‌ಪೋರ್ಟ್‌ ಬಳಿ 2ನೇ ಮಹಾಯುದ್ಧದ ಕಾಲದ ಬಾಂಬ್ ಸ್ಫೋಟ – ವಿಮಾನ ಹಾರಾಟ ರದ್ದು

  • ರೋಗಿ ಕೊಳಲು ಊದುವಾಗಲೇ ಮೆದುಳು ಆಪರೇಷನ್ – 1.20 ಲಕ್ಷ ರೂ. ನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

    ರೋಗಿ ಕೊಳಲು ಊದುವಾಗಲೇ ಮೆದುಳು ಆಪರೇಷನ್ – 1.20 ಲಕ್ಷ ರೂ. ನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

    ಬೆಳಗಾವಿ: ರೋಗಿಯ ಕೈಗೆ ಕೊಳಲು (Flute) ಕೊಟ್ಟು ಊದಲು ಹೇಳಿ ವೈದ್ಯರು ಮೆದುಳು ಶಸ್ತ್ರಚಿಕಿತ್ಸೆ (Brain Operation) ಮಾಡಿ ಯಶಸ್ವಿಯಾದ ಘಟನೆ ಬೆಳಗಾವಿಯ (Belagavi) ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ಕನ್ಹೇರಿ ಮಠದ ನರಶಸ್ತ್ರಚಿಕಿತ್ಸಕ ಡಾ. ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಗೆ ತಜ್ಞ ಪ್ರಕಾಶ ಭರಮಗೌಡರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು. ಕೊಲ್ಲಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಇಸ್ರೇಲ್‌ನಿಂದ (Israel) ಬಂದಿದ್ದ ರೈತನಿಗೆ ಮೆದುಳಿನಲ್ಲಿ ಗಡ್ಡೆ ಬೆಳೆದಿತ್ತು. ಅದನ್ನು ಟ್ಯೂಮರ್ ಆಪರೇಷನ್ ಮಾಡಿ ಹೊರ ತೆಗೆಯಬೇಕಿತ್ತು. ಈ ಸಂದರ್ಭದಲ್ಲಿ ವೈದ್ಯರು ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿದ್ದಾರೆ. ಸುಮಾರು 5 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ಇದನ್ನೂ ಓದಿ: ಜಾತಿ ನಿಂದನೆ ಕೇಸ್‌- ಮುನಿರತ್ನಗೆ ಜಾಮೀನು ಮಂಜೂರು

    ಅವೇಕ್ ಕ್ರೇನಿಯೊಟಮಿ (Awake Craniotomy) ಶಸ್ತ್ರಚಿಕಿತ್ಸೆಗೆ ಹೆಸರಾಗಿರುವ ಸಿದ್ದಗಿರಿ ಆಸ್ಪತ್ರೆ ಹೆಸರುವಾಸಿಯಾಗಿದೆ. ವೈದ್ಯರು ಈ ಹಿಂದೆ ರೋಗಿಗೆ ಐಸ್‌ಕ್ರೀಮ್ ಕೊಟ್ಟು ಆಪರೇಷನ್ ಮಾಡಿದ್ದರು. ವೈದ್ಯರ ತಂಡ ಈವರೆಗೂ ಒಟ್ಟು 103 ಮೆದುಳು ಶಸ್ತ್ರಚಿಕಿತ್ಸೆ ಮಾಡಿದೆ. ವೈದ್ಯರ ಸಾಧನೆಗೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘಿಸಿದ್ದಾರೆ.

    ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಾವು ಮಾಡಿದ ಆಪರೇಷನ್ ಕುರಿತು ಡಾ ಶಿವಶಂಕರ್ ಮರಜಕ್ಕೆ ಮಾತನಾಡಿ, ಗಡ್ಡೆ ಬೆಳೆದ ಜಾಗದ ಪಕ್ಕದಲ್ಲಿ ಮಾತ್ರ ಅರಿವಳಿಕೆ ನೀಡಿ ಆಪರೇಷನ್ ಮಾಡಲಾಗಿದೆ. ಕೇವಲ 1.20 ಲಕ್ಷ ರೂ. ನಲ್ಲಿ ಶಸ್ತ್ರಚಿಕಿತ್ಸೆ ಸೇರಿ ಆಸ್ಪತ್ರೆ ಸಂಪೂರ್ಣ ವೆಚ್ಚ ಆಗಿದೆ ಎಂದರು. ಇದನ್ನೂ ಓದಿ: ಶೃಂಗೇರಿ ಬಳಿಕ ಹೊರನಾಡಲ್ಲೂ ಡ್ರೆಸ್‌ಕೋಡ್ ಜಾರಿ – ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ

  • ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯನ ಖಾಸಗಿ ಅಂಗಕ್ಕೆ ಬ್ಲೇಡ್ ಹಾಕಿ ಪಾರಾದ ನರ್ಸ್!

    ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯನ ಖಾಸಗಿ ಅಂಗಕ್ಕೆ ಬ್ಲೇಡ್ ಹಾಕಿ ಪಾರಾದ ನರ್ಸ್!

    ಪಾಟ್ನಾ: ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯರೊಬ್ಬರ ಮರ್ಮಾಂಗಕ್ಕೆ ನರ್ಸ್ ಬ್ಲೇಡ್ ಹಾಕಿ ಪಾರಾದ ಘಟನೆ ಬಿಹಾರದ (Bihar) ಸಮಸ್ತಿಪುರ್ (Samastipur) ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ಈ ಘಟನೆ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಡಾಕ್ಟರ್ ಹಾಗೂ ಆತನ ಸಹಚರರು ಮದ್ಯದ ನಶೆಯಲ್ಲಿದ್ದರು. ಸಂತ್ರಸ್ತೆ ನರ್ಸ್ ಕೆಲಸ ಮುಗಿಸಿ ಮನೆಗೆ ಹೊರಡುವ ವೇಳೆ ಡಾಕ್ಟರ್ ಹಾಗೂ ಆತನ ಸಹಚರರು ಅತ್ಯಾಚಾರವೆಸಗಲು ಮುಂದಾದರು. ಆ ಸಂದರ್ಭದಲ್ಲಿ ತನ್ನ ಆತ್ಮರಕ್ಷಣೆ ಮಾಡಿಕೊಳ್ಳಲು ಆಕೆ ವೈದ್ಯರ ಖಾಸಗಿ ಅಂಗಕ್ಕೆ ಬ್ಲೇಡ್‌ನಿಂದ ಗಾಯ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಹೊರ ಬಂದರು. ನಂತರ ಆಸ್ಪತ್ರೆಯಿಂದ ಹೊರಬಂದು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ಘಟನೆಯ ಬಗ್ಗೆ ಸಂತ್ರಸ್ತೆ ಹೇಳಿಕೆ ನೀಡಿರುವುದಾಗಿ ಸಮಸ್ತಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಸಂಜಯ್ ಕುಮಾರ್ ಪಾಂಡೆ ಗುರುವಾರ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದರು. ಇದನ್ನೂ ಓದಿ: ಸಿಇಟಿ, ನೀಟ್ 2ನೇ ಸುತ್ತಿನ ಸೀಟು ಹಂಚಿಕೆಗೆ ತಯಾರಿ ಆರಂಭ- ಕೆಇಎ

    ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಸಂತ್ರಸ್ತೆಯನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ನಂತರ ಅಧಿಕಾರಿಗಳ ತಂಡವೊಂದು ಆಸ್ಪತ್ರೆಯ ಒಳಗೆ ಹೋಗಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು, ದಲಿತರೇ ಟಾರ್ಗೆಟ್: ಛಲವಾದಿ ನಾರಾಯಣಸ್ವಾಮಿ

    ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸುವ ಮುನ್ನಾ ಡಾಕ್ಟರ್ ಹಾಗೂ ಆತನ ಸಹಚರರು ಸಿಸಿಟಿವಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿದ್ದಾರೆ. ಒಳಗಡೆಯಿಂದ ಆಸ್ಪತ್ರೆಯನ್ನು ಲಾಕ್ ಮಾಡಿದ್ದರು. ಮಹಿಳೆ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಸಂತ್ರಸ್ತೆ ನೀಡಿದ ಆಧಾರದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಿಂದ ಬ್ಲೇಡ್ ಹಾಗೂ ಇತರೆ ಸಾಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಇದನ್ನೂ ಓದಿ: ನಾಗ್ಪುರ ಆಡಿ ಕಾರು ಅಪಘಾತ – ಬಾರ್‌ನಲ್ಲಿದ್ದ ಬಿಜೆಪಿ ಮುಖಂಡನ ಪುತ್ರನ ವೀಡಿಯೋ ಮಿಸ್ಸಿಂಗ್

  • ಚಿಕ್ಕಮಗಳೂರು| ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ – ವೈದ್ಯರ ಮೇಲೆ ಮಹಿಳೆ ಚಪ್ಪಲಿಯಿಂದ ಹಲ್ಲೆ

    ಚಿಕ್ಕಮಗಳೂರು| ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ – ವೈದ್ಯರ ಮೇಲೆ ಮಹಿಳೆ ಚಪ್ಪಲಿಯಿಂದ ಹಲ್ಲೆ

    – ಒಪಿಡಿ ಬಂದ್ ಮಾಡಿ ಸಿಬ್ಬಂದಿ ಆಕ್ರೋಶ

    ಚಿಕ್ಕಮಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವೈದ್ಯರ (Doctor) ಮೇಲೆ ಮಹಿಳೆ (Woman) ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.

    ಮೂಳೆ ತಜ್ಞ ವೆಂಕಟೇಶ್ ಮೇಲೆ ಮಹಿಳೆ ಏಕಾಏಕಿ ಹಲ್ಲೆ ನಡೆಸಿದ್ದು, ಶರ್ಟ್, ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಯುವಕನೋರ್ವ ಆಸ್ಪತ್ರೆಗೆ ಬಂದಿದ್ದ. ಚಿಕಿತ್ಸೆ ನೀಡುವ ಸಮಯದಲ್ಲಿ ಮಹಿಳೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾಳೆ. ರೋಗಿಯ ಅಕ್ಕನಿಗೆ ವೈದ್ಯರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆ ಆಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು  ಯುವಕ ಆರೋಪಿಸಿದ್ದಾನೆ. ಇದನ್ನೂ ಓದಿ: Valmiki Scam| ಬಹುಕೋಟಿ ಹಗರಣದ ಮಾಸ್ಟರ್‌ ಮೈಂಡ್‌ ನಾಗೇಂದ್ರ – ಇಡಿ ಚಾರ್ಜ್‌ಶೀಟ್‌ ಸಲ್ಲಿಕೆ

    ಘಟನೆಯ ಬಳಿಕ ರಕ್ಷಣೆ ನೀಡುವಂತೆ ಆಗ್ರಹಿಸಿ ಆಸ್ಪತ್ರೆ ಸಿಬ್ಬಂದಿ ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ನ್ಯಾಯ ಕೊಡಿಸುವಂತೆ ಆಸ್ಪತ್ರೆ ಸಿಬ್ಬಂದಿ ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರೈಲು ಹಳಿ ಮೇಲೆ ಸಿಮೆಂಟ್ ಬ್ರಿಕ್ಸ್ – ಮತ್ತೊಂದು ದುಷ್ಕೃತ್ಯಕ್ಕೆ ಸಂಚು

  • ಮುಂಬೈ ಪೊಲೀಸರ ಹೆಸರಲ್ಲಿ ಚಿತ್ರದುರ್ಗದ ವೈದ್ಯನಿಗೆ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನ

    ಮುಂಬೈ ಪೊಲೀಸರ ಹೆಸರಲ್ಲಿ ಚಿತ್ರದುರ್ಗದ ವೈದ್ಯನಿಗೆ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನ

    ಚಿತ್ರದುರ್ಗ: ಮುಂಬೈ ಪೊಲೀಸರೆಂದು ನಂಬಿಸಿ ಹಿರಿಯ ವೈದ್ಯರೊಬ್ಬರಿಂದ 1.27 ಕೋಟಿ ರೂ. ದೋಚಿದ್ದ ಸೈಬರ್ ವಂಚಕರನ್ನು ಬಂಧಿಸುವಲ್ಲಿ ಚಿತ್ರದುರ್ಗದ (Chitradurga) ಸೆನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಚಿತ್ರದುರ್ಗದ ಹಿರಿಯ ವೈದ್ಯ ಶ್ರೀನಿವಾಸ್ ಶೆಟ್ಟಿಗೆ ಆಗಸ್ಟ್ 23 ರಂದು ವಾಟ್ಸಪ್ ಹಾಗೂ ನಾರ್ಮಲ್ ಕರೆ ಮಾಡಿದ್ದ ವಂಚಕರು, ನಾವು ಟಿಆರ್‌ಎಐ & ಮುಂಬೈ(Mumbai) ಪೊಲೀಸರೆಂದು ಹೇಳಿದ್ದು, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ಅಲ್ಲದೇ ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ತಮ್ಮ ಖಾತೆಗೆ 1.27 ಕೋಟಿ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ – ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆಯಲ್ಲಿ ಏರಿಕೆ

    ಇದರಿಂದಾಗಿ ಕಂಗಾಲಾದ ವೈದ್ಯ ಶ್ರೀನಿವಾಸ್ ಶೆಟ್ಟಿಯವರು ಆಗಸ್ಟ್ 26 ರಂದು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ವಂಚಕರ ಜಾಡನ್ನು ಬೆನ್ನತ್ತಿದ್ದ ಪೊಲೀಸರು, ಅಸ್ಸಾಂ ಮೂಲದ ಆರೋಪಿ ಪವನ್ ಕುಮಾರ್, ಜಾಕೀರ್ ಬೋರಾ ಎಂಬ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವಂಚಿತರಿಂದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದ 16.89 ಲಕ್ಷ ರೂ. ಫ್ರೀಜ್ ಮಾಡಲಾಗಿದೆ. ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಈ ಸಂಬಂಧ ಚಿತ್ರದುರ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು – ಪ್ರಕರಣ ಭೇದಿಸಿದ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ

  • ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ಅವಮಾನ ಸಹಿಸಲಾರದೇ ಪ್ರಾಂಶುಪಾಲ ರಾಜೀನಾಮೆ

    ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ಅವಮಾನ ಸಹಿಸಲಾರದೇ ಪ್ರಾಂಶುಪಾಲ ರಾಜೀನಾಮೆ

    ಕೋಲ್ಕತ್ತಾ: ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ಕೋಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಪ್ರಾಂಶುಪಾಲ (RG Kar Medical College Principal) ಡಾ.ಸಂದೀಪ್ ಘೋಷ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಅತ್ಯಾಚಾರ ಪ್ರಕರಣದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ (Social Media) ನನ್ನ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಈ ಅವಮಾನ ನನ್ನಿಂದ ಸಹಿಸಲಾಗುತ್ತಿಲ್ಲ ಎಂದು ಹೇಳಿ ಘೋಷ್‌ (Dr. Sandip Ghosh) ರಾಜೀನಾಮೆ ಘೋಷಿಸಿದ್ದಾರೆ. ಇದನ್ನೂ ಓದಿ: ಶ್ರಾವಣ ಸೋಮವಾರ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ – 7 ಭಕ್ತರು ಸಾವು

    ನನ್ನಿಂದ ರಾಜೀನಾಮೆ ಪಡೆಯಲು ವಿದ್ಯಾರ್ಥಿಗಳನ್ನ (Medical Student) ಎತ್ತಿಕಟ್ಟಿದ್ದಾರೆ. ಸುಮ್ಮನೆ ನನ್ನ ಮಾನಹಾನಿ ಮಾಡಲಾಗುತ್ತಿದೆ. ನಾನು ಸಂತ್ರಸ್ತರನ್ನ ನೋಯಿಸುವ ಯಾವುದೇ ಟೀಕೆ ಮಾಡಿಲ್ಲ. ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಶಿಕ್ಷೆ ಆಗಬೇಕೆಂದು ಈಗಲೂ ಬಯಸುತ್ತೇನೆ. ಮೃತ ಬಾಲಕಿ ನನ್ನ ಮಗಳಿದ್ದಂತೆ, ನನಗೂ ತಂದೆ-ತಾಯಿ ಇದ್ದಾರೆ. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ನನ್ನ ವಿರುದ್ಧ ನೀಡುತ್ತಿರುವ ಕೀಳು ಮಟ್ಟದ ಹೇಳಿಕೆಗಳಿಂದ ತುಂಬಾ ನೋವಾಗುತ್ತಿದೆ. ಆದ್ದರಿಂದ ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಪತ್ರದಲ್ಲಿ ಬರೆದಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಪ್ರೀತಿಸಿ ಎಲ್ಲಾ ಮುಗಿದ್ಮೇಲೆ ಕೈಕೊಟ್ಟ ಪ್ರಿಯಕರ – ಮದುವೆ ದಿನವೇ ಆಸಿಡ್‌ ದಾಳಿಗೆ ಮುಂದಾದ ವಿಧವೆ ಪ್ರೇಯಸಿ!

    ಕೃತ್ಯದ ನಂತರ ಸಂದೀಪ್‌ ರಾಜೀನಾಮೆ ನೀಡಲ್ಲ ಅಂತ ಎಲ್ಲರೂ ಹೇಳ್ತಿದ್ದರು. ಆದ್ರೆ ನಾನು ಪ್ರಾಮಾಣಿಕನಾಗಿ ರಾಜೀನಾಮೆ ನೀಡಿದ್ದೇನೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೆ. ಆಸ್ಪತ್ರೆಯ ಅಭಿವೃದ್ಧಿ ಮತ್ತು ರೋಗಿಗಳ ಹಿತದೃಷ್ಟಿಯಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದ್ರೆ ಈ ಘಟನೆಯನ್ನು ಕೆಲವರು ಲಾಭಕ್ಕಾಗಿ ಬಳಸಿಕೊಂಡಿದ್ದು, ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಏನಿದು ಪ್ರಕರಣ?
    ಕಳೆದ ಶುಕ್ರವಾರ ಬೆಳಗ್ಗೆ ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಮರಣೋತ್ತರ ಪರೀಕ್ಷೆ ನಡೆಸಿದಾಗ ತರಬೇತಿ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕೊಲೆ ಮಾಡಿರುವುದು ವರದಿಯಲ್ಲಿ ಬಹಿರಂಗವಾಯಿತು. ಇದನ್ನೂ ಓದಿ: ಸರ್ಕಾರಿ ಕೆಲಸ ತಿರಸ್ಕರಿಸಿದ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಕಂಚು ಗೆದ್ದ ಸರಬ್ಜೋತ್‌ ಸಿಂಗ್‌

    ಆರೋಪಿಗೆ 14 ದಿನ ಪೊಲೀಸ್ ಕಸ್ಟಡಿ:
    ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಬಂಧಿತ ಆರೋಪಿಯನ್ನು 14 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ) ಮತ್ತು 103ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ವಿಚಾರಣೆ ವೇಳೆ ಕಾಮುಕನ ಮೊಬೈಲ್‌ನಲ್ಲಿ ಸೆಕ್ಸ್‌ ವೀಡಿಯೋಗಳು ಪತ್ತೆ!

  • ಓದಿದ್ದು 10ನೇ ತರಗತಿ ಮಾಡುವುದು ಡಾಕ್ಟರ್ ವೃತ್ತಿ- ಬಾಗಲಕೋಟೆಯಲ್ಲಿದ್ದಾರೆ 384 ನಕಲಿ ವೈದ್ಯರು

    ಓದಿದ್ದು 10ನೇ ತರಗತಿ ಮಾಡುವುದು ಡಾಕ್ಟರ್ ವೃತ್ತಿ- ಬಾಗಲಕೋಟೆಯಲ್ಲಿದ್ದಾರೆ 384 ನಕಲಿ ವೈದ್ಯರು

    ಬಾಗಲಕೋಟೆ: ಜಿಲ್ಲೆಯಲ್ಲಿ ನಕಲಿ ವೈದ್ಯರ (Fake Doctor) ಹಾವಳಿ ಹೆಚ್ಚಾಗಿದೆ. ನಕಲಿ ವೈದ್ಯರ ಆಚಾತುರ್ಯಕ್ಕೆ ಒಂದು ಜೀವ ಬಲಿ ಆಗಿದೆ. ಪೊಲೀಸರ ಪರಿಶೀಲನೆ ವೇಳೆ ಬಾಗಲಕೋಟೆ ಜಿಲ್ಲೆಯಲ್ಲಿ (Bagalkot District) 384 ಜನರು ನಕಲಿ ವೈದ್ಯರು ಇರುವುದು ಪತ್ತೆಯಾಗಿದೆ.

    ಅಚ್ಚರಿ ಅಂದರೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಬಿಎ, ಬಿಕಾಂ ಓದಿದವರು ವೈದ್ಯರಾಗಿದ್ದಾರೆ. ಇದು ಜಿಲ್ಲೆಯಲ್ಲಿನ ಆರೋಗ್ಯ ಇಲಾಖೆ ಎಷ್ಟು ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

     
    ಎಲ್ಲೆಲ್ಲಿ ಎಷ್ಟೆಷ್ಟು ನಕಲಿ ವೈದ್ಯರು?
    ಜಮಖಂಡಿ – 60
    ಬೀಳಗಿ – 39
    ಮುಧೋಳ – 37
    ಕಲಾದಗಿ – 29 ಇದನ್ನೂ ಓದಿ: ಮೆದುಳು ತಿನ್ನುವ ಅಮೀಬಾ ಸೋಂಕು – ಕೇರಳದಲ್ಲಿ 4ನೇ ಪ್ರಕರಣ ಪತ್ತೆ

    50ಕ್ಕೂ ಹೆಚ್ಚು ಜನ ಬಿಎಎಂಎಸ್ ಓದಿದವರು ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಒಟ್ಟಾರೆ 384 ಜನ ನಕಲಿ ವೈದ್ಯರ ಪಟ್ಟಿ ಕೈ ಸೇರಿದೆ. ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಕವಿತಾ ಎಂಬುವರು ಪಿಯುಸಿ ಓದಿದ್ದು ಗರ್ಭಪಾತ ದಂಧೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

    ಜೂನ್ 18ರಂದು ಜಮಖಂಡಿಯಲ್ಲಿ ಸುರೇಖಾ ಚರಕಿ ಎಂಬ ನಕಲಿ ವೈದ್ಯೆ ಸಿಕ್ಕಿಬಿದ್ದಿದ್ದಾಳೆ. ಈಕೆಯ ಆಸ್ಪತ್ರೆಯಲ್ಲಿ ಗರ್ಭಪಾತ ದಂಧೆಗೆ ಬಳಸುವ ವಸ್ತುಗಳು ಸಿಕ್ಕಿವೆ. ಈಕೆ ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಆದರೆ ಮಾಡುತ್ತಿದ್ದನ್ನು ವೈದ್ಯ ವೃತ್ತಿ. ಗರ್ಭಪಾತ ಮಹಿಳೆ ಸಾವಿನ ನಂತರ ನಕಲಿ ವೈದ್ಯರ ಬಣ್ಣ ಬಯಲಾಗುತ್ತಿದೆ. ಪೊಲೀಸರು ಕೊಟ್ಟ ವರದಿ ಪ್ರಕಾರ ಆರೋಗ್ಯ ಇಲಾಖೆ ನಕಲಿ ವೈದ್ಯರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.