Tag: doctor

  • ಆರೋಗ್ಯ ಸಚಿವರ ಜೊತೆಯಲ್ಲಿ ಹೋಗಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಬ್ಲಾಕ್‍ಮೇಲ್

    ಆರೋಗ್ಯ ಸಚಿವರ ಜೊತೆಯಲ್ಲಿ ಹೋಗಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಬ್ಲಾಕ್‍ಮೇಲ್

    ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ನೆಪದಲ್ಲಿ ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿವೆ ಎಂಬ ಆರೋಪಗಳ ಮಧ್ಯೆ ಹಿರಿಯ ಆರೋಗ್ಯಾಧಿಕಾರಿ ಹಣ ಹಾಗೂ ರೆಮ್ಡಿಸಿವಿರ್ ಔಷಧಿಗಳಿಗೆ ಬ್ಲಾಕ್ ಮೇಲ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

    ಮೇ 13 ಹಾಗೂ ಮೇ 14 ರಂದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರ ಚಿಕ್ಕಬಳ್ಳಾಪುರ ಜಿಲ್ಲೆಯ ಭೇಟಿಯ ಸಮಯದಲ್ಲಿ ಜೊತೆಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಜಂಟಿ ನಿರ್ದೇಶಕ ಡಾ.ಮುರಳಿ ಕೃಷ್ಣ ಅವರು ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಬಲವಂತವಾಗಿ ಬೆದರಿಕೆ ಹಾಕಿ ಇಬ್ಬರ ಬಳಿಯೂ 5 ವಯಲ್ ರೆಮ್‍ಡಿಸಿವಿರ್ ಔಷಧಿ ಪಡೆದಿದ್ದಾರೆ.

    ಈ ಸಂಬಂಧ ಬಾಗೇಪಲ್ಲಿ ಟಿಎಚ್‍ಓ ಡಾ.ಸತ್ಯನಾರಾಯಣ ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಮುರುಳಿ ಕೃಷ್ಣ ಶಿಡ್ಲಘಟ್ಟ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರೋಪಿ ಡಾ.ಮುರಳಿಕೃಷ್ಣರಿಂದ ರೆಮ್‍ಡಿಸಿವಿರ್ ಔಷಧಿಗಳನ್ನ ವಶಪಡಿಸಿಕೊಳ್ಳಲಾಗಿದೆ.

    ಕೊರೊನಾ ಸೋಂಕನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ದೂರ್ತರು ಜನರ ಜೊತೆಯಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು, ಬೆಡ್, ವೆಂಟಿಲೇಟರ್, ಔಷಧಗಳನ್ನ ಬ್ಲಾಕ್ ನಲ್ಲಿ ಮಾರಾಟ ಮಾಡಿಕೊಂಡಿರುವ ಪ್ರಕರಣ ಜೀವಂತ ಇರುವಾಗಲೇ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ಕರ್ಮಕಾಂಡ ಬಯಲಾಗಿದೆ. ಇಲ್ಲಿ ಇವರೊಬ್ಬರೇ ಪಾಲುದಾರರಾ? ಅಥವಾ ಇನ್ನೂ ಇದ್ದಾರಾ ಎನ್ನುವ ಅನುಮಾನ ಬಲವಾಗಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ.

  • ಕೋವಿಡ್ ಕೇರ್ ಸೆಂಟರ್‍ ಗೆ ಕನ್ನ ಹಾಕಿದ ಕಳ್ಳ – ಸಿಸಿಟಿವಿಯಲ್ಲಿ ಸೆರೆ

    ಕೋವಿಡ್ ಕೇರ್ ಸೆಂಟರ್‍ ಗೆ ಕನ್ನ ಹಾಕಿದ ಕಳ್ಳ – ಸಿಸಿಟಿವಿಯಲ್ಲಿ ಸೆರೆ

    ಹುಬ್ಬಳ್ಳಿ: ಕೋವಿಡ್ ಕೇರ್ ಸೆಂಟರ್‍ ನಲ್ಲಿ ಕರ್ತವ್ಯ ನಿರತ ವೈದ್ಯರ ಮೊಬೈಲ್‍ನ್ನು ಕಳ್ಳತನ ಮಾಡಿರುವ ಘಟನೆಯೊಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದಿದೆ. ಕಳ್ಳನ ಕೈಚಳಕ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರೊಬ್ಬರು ತನ್ನ ಮೇಜಿನ ಮೇಲೆ ಮೊಬೈಲ್‍ನ್ನು ಇಟ್ಟು ರೋಗಿಗಳನ್ನು ವಿಚಾರಿಸುತ್ತಿದ್ದರು. ಈ ಸಮಯವನ್ನು ಬಳಸಿಕೊಂಡ ವ್ಯಕ್ತಿಯೋರ್ವ ಐವತ್ತು ಸಾವಿರ ಬೆಲೆಯುಳ್ಳ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಕಳ್ಳತನ ಮಾಡಿರುವ ದೃಶ್ಯ ಹಾಗೂ ಕಳ್ಳನ ಸಂಪೂರ್ಣ ಚಲನವಲನ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಾಕಿ ಕಳ್ಳ ಅಟೆಂಡರ್ ಸೋಗಿನಲ್ಲಿ ಬಂದು ಮೊಬೈಲ್ ಕಳ್ಳತನ ಮಾಡಿರುವುದು ವರದಿಯಾಗಿದೆ.

    ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದಾಗ ಮೊಬೈಲ್ ಎಗರಿಸಿದ ಕಳ್ಳನ ವಿರುದ್ಧ ವೈದ್ಯರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ನಾನು ಮಾಸ್ಕ್ ಧರಿಸೋದೇ ಇಲ್ಲ: ಡಾ.ಕಕ್ಕಿಲಾಯ ಅವಾಂತರ

    ನಾನು ಮಾಸ್ಕ್ ಧರಿಸೋದೇ ಇಲ್ಲ: ಡಾ.ಕಕ್ಕಿಲಾಯ ಅವಾಂತರ

    ಮಂಗಳೂರು : ನಾನು ಮಾಸ್ಕ್ ಧರಿಸೋದೇ ಇಲ್ಲ, ನಾನು ಸರ್ಕಾರದ ದಡ್ಡ ನಿಯಮಗಳನ್ನ ಪಾಲಿಸಲ್ಲ ಎಂದು ವೈದ್ಯರೊಬ್ಬರು ಮಾಸ್ಕ್ ಧರಿಸದೇ ಸೂಪರ್ ಮಾರ್ಕೆಟ್‍ನಲ್ಲಿ ಉಡಾಫೆ ವರ್ತನೆ ತೋರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ಸೂಪರ್ ಮಾರ್ಕೆಟ್‍ನಲ್ಲಿ ಮಾಸ್ಕ್ ಧರಿಸದೇ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ಬೇಜವಾಬ್ದಾರಿ ತನದ ಮಾತುಗಳನ್ನಾಡಿದ್ದಾರೆ. ಸೂಪರ್ ಮಾರ್ಕೆಟ್‍ನಲ್ಲಿ ಮಾಸ್ಕ್ ಧರಿಸದೇ ಡಾ.ಶ್ರೀನಿವಾಸ ಕಕ್ಕಿಲಾಯ ಶಾಪಿಂಗ್ ಮಾಡಿದ್ದಾರೆ.

    ಮಾಸ್ಕ್ ಧರಿಸದೇ ಆಗಮಿಸಿದ್ದಕ್ಕೆ ಪ್ರಶ್ನಿಸಿದ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸದೇ ನಮ್ಮಲ್ಲಿ ಬರಬೇಡಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತೆ ಎಂದು ಹೇಳಿದ್ದಾರೆ. ನಾನು ಮಾಸ್ಕ್ ಧರಿಸೋದೇ ಇಲ್ಲ, ನಾನು ಸರ್ಕಾರದ ದಡ್ಡ ನಿಯಮಗಳನ್ನ ಫಾಲೋ ಮಾಡಲ್ಲ, ನಾನು ವಿಜ್ಞಾನ ಏನ್ ಹೇಳುತ್ತೋ ಅದನ್ನಷ್ಟೇ ಪಾಲಿಸ್ತೇನೆ ಅಂತ ಶ್ರೀನಿವಾಸ್ ವಾದ ಮಾಡುತ್ತಾ ಬೇಜವಾಬ್ದಾರಿತನದ ಮಾತುಗಳನ್ನಾಡಿದ್ದಾರೆ.

    ಸೂಪರ್ ಮಾರ್ಕೆಟ್ ಮಾಲೀಕ ರಯನ್ ರೊಜಾರಿಯಾ ದೂರಿನಡಿ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲು ಬೆನ್ನಲ್ಲೇ ನೋಟೀಸ್ ಜಾರಿ ಮಾಡಲಾಗಿದೆ. ಕಕ್ಕಿಲಾಯರ ಮನೆಗೆ ತೆರಳಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

  • ಪಾಸಿಟಿವ್ ಬಂದ ಸಿಬ್ಬಂದಿಯಿಂದಲೇ ಆಸ್ಪತ್ರೆಯಲ್ಲಿ ಕೆಲಸ ಮಾಡಿಸಿದ  ವೈದ್ಯ

    ಪಾಸಿಟಿವ್ ಬಂದ ಸಿಬ್ಬಂದಿಯಿಂದಲೇ ಆಸ್ಪತ್ರೆಯಲ್ಲಿ ಕೆಲಸ ಮಾಡಿಸಿದ ವೈದ್ಯ

    ಮಡಿಕೇರಿ: ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಿಬ್ಬಂದಿಯನ್ನು ಕರೆಸಿ ಕರ್ತವ್ಯ ಮಾಡಿಸಿ ವೈದ್ಯರೊಬ್ಬರು ಎಡವಟ್ಟು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಆರೋಗ್ಯ ಕೇಂದ್ರದ ಸಿಬ್ಬಂದಿ ಲ್ಯಾಬ್ ಟೆಕ್ನಿಷಿಯನ್‍ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಎಂಟು ದಿನ ಕಳೆದ ಬಳಿಕ ಮತ್ತೆ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಅಗಲೂ ಅವರಿಗೆ ಪಾಸಿಟಿವ್ ಎಂದು ವರದಿ ಬಂದಿದೆ. ಅದ್ರೂ ಅರೋಗ್ಯ ಇಲಾಖೆ ವೈದ್ಯ ಸಿಬ್ಬಂದಿ ಕೊರತೆಯಿಂದ ಲ್ಯಾಬ್ ಟೆಕ್ನಿಷಿಯನ್ ಕರೆಸಿ ಕರ್ತವ್ಯ ಮಾಡುವಂತೆ ಸೂಚನೆ ನೀಡಿದ್ದಾರೆ.

    ಸಾರ್ವಜನಿಕರು ಅಸ್ಪತ್ರೆಯ ಸಿಬ್ಬಂದಿಯಿಂದ ಕೊರೊನಾ ಮಾಹಾಮಾರಿ ಊರಿಗೆ ಹರಡುವ ಸಾಧ್ಯತೆ ಇದೆ. ಕೆಲವು ಜನರಿಗೆ ಸೋಂಕು ಹರಡಿದೆ ಎಂದು ಸಾರ್ವಜನಿಕರು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅಲ್ಲಿನ ಪಂಚಾಯಿತಿ ಸದಸ್ಯರಿಗೆ ದೂರು ನೀಡಿದ್ದಾರೆ. ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯಿತಿಯ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಅಸ್ಪತ್ರೆಯ ವೈದ್ಯ ಜೀವನ್ ಅವರ ಬಳಿ ಕೇಳುಲು ಮುಂದಾಗುತ್ತಿದಂತೆ. ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರ ವಿರುದ್ಧವೇ ವೈದ್ಯ ಜೀವನ್ ಕರ್ತವ್ಯ ಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ವೈದ್ಯರ ದೂರು ಪಡೆದ ಠಾಣಾಧಿಕಾರಿ ಪುನೀತ್ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರುಗಳನ್ನು ಠಾಣೆಗೆ ಕರೆಸಿ ಪಂಚಾಯಿತಿ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದೀರಾ. ಪಂಚಾಯಿತಿ ಸದಸ್ಯರು ಟೆಕ್ನಿಷಿಯನ್ ಹಾಗೂ ವೈದ್ಯರ ವಿರುದ್ದವೇ ದೂರು ನೀಡಲು ಪಂಚಾಯಿತಿ ಅಡಳಿತ ಮಂಡಳಿಯಿಂದ ಮುಂದಾಗಿದ್ದರು. ಆಗ ಠಾಣಾಧಿಕಾರಿ ಪುನೀತ್ ರಾಜಿ ಮಾಡಿಕೊಳ್ಳುವಂತೆ ಹೇಳಿ ಕಳುಹಿಸಿದ್ದಾರೆ. ಸದ್ಯ ಪಾಸಿಟಿವ್ ಬಂದ ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಯನ್ನು ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಾಗಿದೆ ಎಂದು ಪಂಚಾಯತಿ ಪಿಡಿಓ ವೇಣುಗೋಪಾಲ್ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ವೈದ್ಯರೇ ಈ ರೀತಿ ಎಡವಟ್ಟು ಮಾಡಿ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

  • ಕೊರೊನಾ ಗೆದ್ದ 103ರ ವೃದ್ಧ

    ಕೊರೊನಾ ಗೆದ್ದ 103ರ ವೃದ್ಧ

    ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಮೂಲದ 103 ವರ್ಷದ ವೃದ್ಧನೋರ್ವ ಇಳಿವಯಸ್ಸಿನಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

    ವೀರೇಂದ್ರ ನಗರ ಪ್ರದೇಶದ ನಿವಾಸಿಯಾಗಿರುವ ಶಮರಾವ್ ಇಂಗ್ಲೆ ಕೊರೊನಾ ಸೋಂಕಿಗೆ ಒಳಗಾಗಿ ಪಾಲ್ಘರ್ ಗ್ರಾಮೀಣ ಆಸ್ಪತ್ರೆಗೆ ಕೋವಿಡ್-19 ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದೀಗ ಕೊರೊನಾದಿಂದ ಚೇತರಿಸಿಕೊಂಡು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಈ ಬಗ್ಗೆ ಆಸ್ಪತ್ರೆಯ ವೈದ್ಯರು, ಹಿರಿಯರಾದರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಮತ್ತು ಸಿಬ್ಬಂದಿಯೊಂದಿಗೆ ಸಹಕರಿಸಿದರು. ಶನಿವಾರ ಅವರು ಆಸ್ಪತ್ರೆಯಿಂದ ಹೊರಹೋಗುವಾಗ ನಗುಮುಖದಿಂದ ತೆರಳಿದರು ಎಂದು ಹೇಳಿದ್ದಾರೆ.

    ಶಮರಾವ್ ಇಂಗ್ಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಪಾಲ್ಘರ್ ಜಿಲ್ಲಾಧಿಕಾರಿ ಡಾ. ಮಣಿಕ್ ಗುರ್ಸಾಲ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಹೂವುಗಳನ್ನು ಹಾಕುವ ಮೂಲಕ ಬೀಳ್ಕೊಟ್ಟಿದ್ದಾರೆ.

  • ನಿಮ್ಮೊಂದಿಗೆ ನಾವಿದ್ದೇವೆ – ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ವೈದ್ಯರ ತಂಡ

    ನಿಮ್ಮೊಂದಿಗೆ ನಾವಿದ್ದೇವೆ – ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ವೈದ್ಯರ ತಂಡ

    ಬೀದರ್: ಕೊರೊನಾ ಸೋಂಕು ದೃಢಪಟ್ಟ ಕೂಡಲೇ ಜನರೆಲ್ಲಾ ಭಯಗೊಳ್ಳುತ್ತಿದ್ದಾರೆ. ಹೀಗಿರುವಾಗ ಅವರಿಗೆ ಧೈರ್ಯ ತುಂಬಿ ಸಂತೈಸಿ ಹೆಗಲು ಕೊಡುವವರು ಬೇಕಿತ್ತು. ಇದೇ ಸಮಯದಲ್ಲಿ ಬೀದರ್‍ ನ ವೈದ್ಯರ ತಂಡ ಕೊರೊನಾ ಸೋಂಕಿತರಿಗೆ ನಿಮ್ಮೊಂದಿಗೆ ನಾವಿದ್ದೇವೆಂದು ಧೈರ್ಯ ತುಂಬುವ ಕೆಲಸದಲ್ಲಿ ತೊಡಗಿಕೊಂಡಿದೆ. ಈ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯವಾಗುತ್ತಿದೆ.

    ಕೊರೊನಾದಿಂದಾಗಿ ರಾಜ್ಯದೆಲ್ಲೆಡೆ ಉಂಟಾದ ಪರಿಸ್ಥಿತಿ ನೋಡಿ ಕೋವಿಡ್ ಪಾಸಿಟಿಟ್ ವರದಿ ಕೇಳಿದಾಕ್ಷಣ ಹೆದರುವ ಸ್ಥಿತಿ ಎದುರಾಗಿದೆ. ಇದನ್ನು ಅರಿತಿರುವ ಬೀದರ್‍ ನ ವೈದ್ಯರ ತಂಡವೊಂದು ಸೋಂಕಿತರನ್ನು ಸರಿಯಾಗಿ ಉಪಚರಿಸಿ ಅವರನ್ನು ನಗಿಸುವ ಕೆಲಸ ಮಾಡುತ್ತಿದೆ. ಇದರಿಂದ ಸೋಂಕಿನಿಂದ ಹೋರಾಡಬಹುದು ಎಂಬ ಧೈರ್ಯ ರೋಗಿಗಳಿಗೆ ಬಂದಿದೆ.

    ವೈದ್ಯರ ತಂಡ ರೋಗಿಗಳಿಗೆ ನಿಮ್ಮ ಜೊತೆ ನಾವಿದ್ದೇವೆ, ಯಾವುದಕ್ಕೂ ಹೆದರಬೇಡಿ ಎಂದು ಸೋಂಕಿತರಿಗೆ ಅಭಯ ನೀಡಿದ್ದಾರೆ. ವೈದ್ಯರ ತಂಡ ನೀಡಿದ ಆತ್ಮಸ್ಥೈರ್ಯಕ್ಕೆ ಆಸ್ಪತ್ರೆಯ ಬೆಡ್ ಮೇಲೆಯೇ ಸೋಂಕಿತರು ಚಪ್ಪಾಳೆ ತಟ್ಟುವ ಮೂಲಕ ಖುಷಿಪಟ್ಟಿದ್ದಾರೆ. ಧೈರ್ಯವೊಂದೇ ರೋಗಕ್ಕೆ ಮದ್ದು ಎಂದು ತಾಲೂಕು ಆಸ್ಪತ್ರೆಯ ವೈದ್ಯರು ಸೋಂಕಿತರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

  • ವಾಕ್ಸಿನ್ ಪಡೆಯುವಾಗ ಮಮ್ಮಿ, ಮಮ್ಮಿ ಎಂದು ಕಿರುಚಾಡಿದ ಯುವತಿ

    ವಾಕ್ಸಿನ್ ಪಡೆಯುವಾಗ ಮಮ್ಮಿ, ಮಮ್ಮಿ ಎಂದು ಕಿರುಚಾಡಿದ ಯುವತಿ

    ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ರಾಜ್ಯ ಸರ್ಕಾರ ಕೋವಿಡ್ ವ್ಯಾಕ್ಸಿನ್ ನೀಡಲು ಆರಂಭಿಸಿದೆ. ಕೋವಿಡ್ ವ್ಯಾಕ್ಸಿನ್ ಸ್ವೀಕರಿಸಿದ ನಂತರ ಅನೇಕ ಮಂದಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

    ಸದ್ಯ ಯುವತಿಯೊಬ್ಬಳು ಇಂಜೆಕ್ಷನ್‍ನನ್ನು ನೋಡಿದ ತಕ್ಷಣ ಗಾಬರಿಯಿಂದ ಕಿರುಚಾಡಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 45 ಸೆಕೆಂಡ್ ಇರುವ ಈ ವೀಡಿಯೋದಲ್ಲಿ, ಯುವತಿ ಲಸಿಕೆ ಪಡೆಯಲು ಕುರ್ಚಿ ಮೇಲೆ ಕುಳಿತುಕೊಳ್ಳುತ್ತಾಳೆ. ಈ ವೇಳೆ ನರ್ಸ್ ಕೈಯಲ್ಲಿ ಇಂಜೆಕ್ಷನ್ ಹಿಡಿದು ಹತ್ತಿರ ಬರುತ್ತಿದ್ದಂತೆ, ಯುವತಿ ಕುರ್ಚಿಯಿಂದ ಎದ್ದು, ಭಯದಿಂದ ನಡುಗುತ್ತಾ, ಒಂದು ನಿಮಿಷ ಇರಿ, ಒಂದು ನಿಮಿಷ ಇರಿ ಎಂದು ಕಿರುಚಾಡುತ್ತಾಳೆ.

    ಈ ವೇಳೆ ಆಕೆಯೊಂದಿಗೆ ಬಂದಿದ್ದ ವ್ಯಕ್ತಿ ಬಾಯಿಯನ್ನು ಮುಚ್ಚಿ ಯುವತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಆಗಲೂ ಯುವತಿ ಜೋರಾಗಿ ಚಿರಾಡಲು ಆರಂಭಿಸುತ್ತಾಳೆ. ಆಗ ನರ್ಸ್‍ಗೆ ಕೋಪಬರುತ್ತದೆ. ಹಾಸ್ಯವರೆಂದರೆ ಯುವತಿ ತನಗೆ ತಾನೇ ಭಯವನ್ನು ನಿಯಂತ್ರಿಸಿಕೊಳ್ಳಲು ‘ಮಮ್ಮಿ ಮಮ್ಮಿ’ ಎಂದು ಹೇಳಬೇಕಾ ಎಂದು ಕೇಳಿಕೊಳ್ಳುತ್ತಾಳೆ. ಆಗ ವೈದ್ಯರು ಏನನ್ನು ಹೇಳಬೇಡಿ. ಶಾಂತಿಯಿಂದ ಕುಳಿತುಕೊಳ್ಳಿ ಎಂದು ತಿಳಿಸುತ್ತಾರೆ. ತದ ನಂತರ ಕಣ್ಣು ಮುಚ್ಚಿಕೊಂಡು ಯುವತಿ ಇಂಜೆಕ್ಷನ್ ಸ್ವೀಕರಿಸಿದ್ದಾಳೆ.

    ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರಿಗೆ ಮನರಂಜನೆ ನೀಡುತ್ತಿದೆ. ಇನ್ನೂ ಕೆಲವರಂತೂ ಹುಡುಗಿ ಆಡಿದ್ದನ್ನು ನೋಡಿ ಗೇಲಿ ಮಾಡುತ್ತಿದ್ದಾರೆ.

  • ಬೆಡ್ ಬ್ಲಾಕ್ ದಂಧೆ – ಖಾಸಗಿ ಆಸ್ಪತ್ರೆಗಳ ಪಿಆರ್‍ಓಗಳು, ಸಣ್ಣ ಆಸ್ಪತ್ರೆಗಳ ವೈದ್ಯರು ನೇರ ಭಾಗಿ

    ಬೆಡ್ ಬ್ಲಾಕ್ ದಂಧೆ – ಖಾಸಗಿ ಆಸ್ಪತ್ರೆಗಳ ಪಿಆರ್‍ಓಗಳು, ಸಣ್ಣ ಆಸ್ಪತ್ರೆಗಳ ವೈದ್ಯರು ನೇರ ಭಾಗಿ

    ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿದೆ. ಬ್ಲಾಕಿಂಗ್ ದಂಧೆಯಲ್ಲಿ ಇಬ್ಬರು ಮಾತ್ರ ಅಲ್ಲ 17 ಜನ ನೇರವಾಗಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿರುವ ವಿಚಾರ ಸಿಸಿಬಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಬಂಧಿತ ಆರೋಪಿಗಳಾದ ನೇತ್ರಾವತಿ ಮತ್ತು ರೋಹಿತ್ ಅವರ ಕರೆ ಡಿಟೇಲ್ ಪರಿಶೀಲಿಸಿದಾಗ ಸ್ಫೋಟಕ ವಿಚಾರಗಳು ಸಿಸಿಬಿ ಮೂಲಗಳಿಂದ ಲಭ್ಯವಾಗಿದೆ.

    ಕೆಲವು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಯ ಪಿಆರ್‍ಒಗಳು, ಸಣ್ಣ ಸಣ್ಣ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಈ ದಂಧೆಯಲ್ಲಿ ಭಾಗಿಯಾಗಿದ್ದರು. ವಾರ್ ರೂಂನ ಜೊತೆಯಲ್ಲಿ ನೇರವಾಗಿ ಸಂಪರ್ಕ ಹೊಂದಿದ್ದ ಇವರು ಆರೋಪಿಗಳಿಗೆ ನೇರವಾಗಿ ಕರೆ ಮಾಡಿದರ ಬಗ್ಗೆಯೂ ಮಾಹಿತಿಗಳು ಲಭ್ಯವಾಗಿದೆ.

    ಕಳೆದ ರಾತ್ರಿ ಜಯನಗರ ಪೊಲೀಸ್ ಠಾಣೆಗೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿ ಬೆಡ್ ಬ್ಲಾಕಿಂಗ್ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸಂಜೆಯ ವೇಳೆಗೆ ಮತ್ತಷ್ಟು ಆರೋಪಿಗಳು ಬಂಧನವಾಗುವ ಸಾಧ್ಯತೆಯಿದೆ.

  • ಆಕ್ಸಿಜನ್ ಸಮಸ್ಯೆಯಿಂದ ಬೀದರ್‌ನಲ್ಲಿ ವ್ಯಕ್ತಿ ಸಾವು

    ಆಕ್ಸಿಜನ್ ಸಮಸ್ಯೆಯಿಂದ ಬೀದರ್‌ನಲ್ಲಿ ವ್ಯಕ್ತಿ ಸಾವು

    ಬೀದರ್: ಖಾಸಗಿ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಅಬ್ದುಲ್ ಮನ್ನಾನ್ ಸೇಠ್(63) ಆಕ್ಸಿಜನ ಸಿಗದೆ ಇಂದು ಸಾವನ್ನಪ್ಪಿದ್ದಾರೆ. ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಬಿಬಿಎಸ್ ಆಸ್ಪತ್ರೆಯಲ್ಲಿ ತಡರಾತ್ರಿ ಆಕ್ಸಿಜನ್ ಮುಗಿದರು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಯ ಮಹಾ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ.

     

    ವಿಷಯ ತಿಳಿದು ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಆಕ್ಸಿಜನ್ ವ್ಯವಸ್ಥೆಮಾಡಿ 13 ಜನರ ಪ್ರಾಣ ಉಳಿದಿದ್ದು ಪೊಲೀಸರ ಸಮಯ ಪ್ರಜ್ಞೆಯಿಂದಾಗಿ 13 ಜನರು ಪ್ರಾಣಾಪಾಯದಿಂದ ಪಾರಾಗಿದ್ದರೆ. ಆದರೆ ಅಬ್ದುಲ್ ಮನ್ನಾನ್‍ಗೆ ಕೊರೊನಾ ಸೋಂಕು ಇಲ್ಲದೆ ಇದ್ದರೂ ಆಕ್ಸಿಜನ್ ಸಿಗದೆ ಉಸಿರಾಟದ ತೀವ್ರ ಸಮಸ್ಯೆಯಾಗಿ ಬ್ರೀಮ್ಸ್‍ಗೆ ದಾಖಲಾಗಿದ್ದರು, ಇಂದು ಸಾವನ್ನಪ್ಪಿದ್ದಾರೆ.

    ಆಕ್ಸಿಜನ್ ಸಮಸ್ಯೆಯೇ ನನ್ನ ಸಹೋದರನ ಸಾವಿಗೆ ಕಾರಣ ಎಂದು ಆಕ್ಸಿಜನ್ ಸಮಸ್ಯೆಯಿಂದಾಗಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದರ್‌ನಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗುತ್ತಿದ್ದು ಜಿಲ್ಲಾಡಳಿತ ಇಗಲೇ ಎಚ್ಚರಗೊಳ್ಳಬೇಕಿದೆ. ಇಲ್ಲವಾದರೆ ಚಾಮರಾಜನಗರದ ಪರಿಸ್ಥಿತಿ ಗಡಿ ಜಿಲ್ಲೆಯಲ್ಲಿ ಸಂಭವಿಸಿದರೂ ಆಶ್ಚರ್ಯವಿಲ್ಲಾ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

  • ಕೊರೊನಾದ ಮುಂದೆ ಸೋಲೊಪ್ಪಿಕೊಳ್ಳಬೇಡಿ- ಸೋಂಕಿತರಿಗೆ ಯುವ ವೈದ್ಯೆಯ ಮನದ ಮಾತು

    ಕೊರೊನಾದ ಮುಂದೆ ಸೋಲೊಪ್ಪಿಕೊಳ್ಳಬೇಡಿ- ಸೋಂಕಿತರಿಗೆ ಯುವ ವೈದ್ಯೆಯ ಮನದ ಮಾತು

    ಡೆಲ್ಲಿ: ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಯುವ ವೈದ್ಯರೊಬ್ಬರು ಬಹಳ ಆತ್ಮೀಯವಾಗಿ ಉಪಚರಿಸಿ ಧೈರ್ಯ ತುಂಬಿರುವ ಘಟನೆ ಡೆಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿ ಹಬ್ಬುತ್ತಿದ್ದಂತೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಆಸ್ಪತ್ರೆಗೆ ಸೇರುತ್ತಿರುವವರ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ. ಡೆಲ್ಲಿ ಆಸ್ಪತ್ರೆಯೊಂದರಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವ ಯುವ ವೈದ್ಯೆ ಡಾ. ಸಂದ್ರಾ ಸೆಬಾಸ್ಟಿಯನ್ ತಾನು ಕಂಡಂತಹ ಕೊರೊನಾ ಸಾವಿನ ಘಟನೆಯೊಂದಿಗೆ ಜನರು ಮಾಡುತ್ತಿರುವ ನಿರ್ಲಕ್ಷದ ಕುರಿತಾಗಿ ಮಾತನಾಡಿದ್ದಾರೆ.

    ಸಂದ್ರಾ ಸೆಬಾಸ್ಟಿಯನ್ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಕೊರೊನಾ ರೋಗಿಗಳಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸೆಬಾಸ್ಟಿನ್ ಕೊರೊನಾ ಸೋಂಕಿತರನ್ನು ಬಹಳ ಹತ್ತಿರದಿಂದ ಗಮನಿಸಿದ್ದರು. ಹಾಗಾಗಿ ಇದರ ಭೀಕರತೆ ಅವರಿಗೆ ಸರಿಯಾಗಿ ಅರ್ಥವಾಗಿದೆ. ಈ ಕುರಿತು ತಿಳಿಸಿದ ಸೆಬಾಸ್ಟಿನ್ ತನ್ನ ಕುಟುಂಬದವರೆಲ್ಲರಿಗೂ ಕೊರೊನಾ ಬಂದು ಪಟ್ಟಂತಹ ಕಷ್ಟವನ್ನು ಕಂಡು ಹಾಗೂ ತನ್ನ ಕಣ್ಣಮುಂದೆ ನೂರಾರು ಜನ ಸಾಯುವುದನ್ನು ಕಂಡು ತಾನು ವೈದ್ಯೆಯಾಗಿ ಇತರರನ್ನು ಬದುಕಿಸಬೇಕೆಂಬ ಹಂಬಲದಿಂದ ರಾತ್ರಿ ಹಗಲು ಎನ್ನದೆ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿ ಐಸಿಯುನಲ್ಲಿದ್ದ ರೋಗಿಗಳಿಗೆ ಧೈರ್ಯ ತುಂಬುವ ಮೂಲಕ ಸೋಂಕಿನಿಂದ ಹೊರಬರುವಂತೆ ಮಾಡಿದ್ದಾರೆ.

    ಆದರೂ ಕೂಡ ಕೊರೊನಾ ಎರಡನೇ ಅಲೆ ತುಂಬಾ ಕ್ರೂರವಾಗಿದ್ದು ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರ ಸಹಿತ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಎಂದು ಜನರೊಂದಿಗೆ ಮನವಿ ಮಾಡಿಕೊಂಡಿದ್ದಾರೆ.