Tag: doctor

  • ಬೀದರ್‌ನಲ್ಲಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ವೈದ್ಯ ಸಾವು

    ಬೀದರ್‌ನಲ್ಲಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ವೈದ್ಯ ಸಾವು

    ಬೀದರ್: ಟೆಂಪೋ ಟ್ರಾವೆಲ್ಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತವಾಗಿ ಸ್ಥಳದಲ್ಲೇ ವೈದ್ಯ ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಮುಸ್ತಾಪೂರ್ ಟೋಲ್ ಗೇಟ್ ಬಳಿ ನಡೆದಿದೆ.

    ಡಾ. ನೀಲಕಂಠ ಬೋಸ್ಲೆ (50) ಸಾವನ್ನಪ್ಪಿದ ವೈದ್ಯ. ಬೀದರ್ ಕಡೆಯಿಂದ ಸಂತಪೂರ್‌ಗೆ ಹೋಗುತ್ತಿದ್ದ ವೇಳೆ ಟೆಂಪೋ ಟ್ರಾವೆಲ್ಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವೈದ್ಯ (Doctor) 10 ರಿಂದ 15 ಅಡಿ ದೂರ ಹಾರಿ ಬಿದ್ದಿದ್ದಾರೆ. ಭೀಕರ ರಸ್ತೆ ಅಪಘಾತಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೈದ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ದರ್ಶನ್ & ಗ್ಯಾಂಗ್ ವಿಚಾರಣೆ ಏ.8 ಕ್ಕೆ ಮುಂದೂಡಿಕೆ

    ಔರಾದ್‌ನ ಸಂತಪುರ ಗ್ರಾಮದ ನಿವಾಸಿಯಾಗಿರುವ ವೈದ್ಯ ನೀಲಕಂಠ ಬೀದರ್‌ನಿಂದ ಸಂತಪುರ ಗ್ರಾಮದಲ್ಲಿರುವ ತನ್ನ ಕ್ಲಿನಿಕ್‌ಗೆ ಹೋಗುತ್ತಿದ್ದಾಗ ಅಫಘಾತವಾಗಿದೆ. ಸಿನಿಮೀಯಾ ರೀತಿಯಲ್ಲಿ ಭೀಕರ ರಸ್ತೆ ಅಪಘಾತದ ಭಯಾನಕ ದೃಶ್ಯಗಳು ಸಿಸಿಸಿಟಿಯಲ್ಲಿ ಸೆರೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸಂತಪೂರ್ ಪೋಲಿಸರು ಹೆಚ್ಚಿನ ತನಿಖೆ ಕೈಗೊಂಡದ್ದಾರೆ. ಇದನ್ನೂ ಓದಿ: ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದಾಗ ಅಪಘಾತ – ವಿಜಯಪುರದ ಇಬ್ಬರು ಸ್ಥಳದಲ್ಲೇ ಸಾವು

  • ಕಲಬುರಗಿ | ಜಿಮ್ಸ್ ಆಸ್ಪತ್ರೆಯ ವೈದ್ಯರ ಎಡವಟ್ಟು – ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ ಉಂಡೆ, ಹತ್ತಿ ಬಿಟ್ಟು ಹೊಲಿಗೆ

    ಕಲಬುರಗಿ | ಜಿಮ್ಸ್ ಆಸ್ಪತ್ರೆಯ ವೈದ್ಯರ ಎಡವಟ್ಟು – ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ ಉಂಡೆ, ಹತ್ತಿ ಬಿಟ್ಟು ಹೊಲಿಗೆ

    ಕಲಬುರಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ (GIMS Hospital) ವೈದ್ಯರ ಯಡವಟ್ಟು ಬಟಾಬಯಲಾಗಿದೆ. ಮಹಿಳೆಯೊಬ್ಬರಿಗೆ ಸಿಸೇರಿಯನ್‌ ಮಾಡುವ ವೇಳೆ ಹೊಟ್ಟೆಯಲ್ಲಿ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

    ಹೌದು. ಇದೇ ಫೆ.05ರಂದು ಭಾಗ್ಯಶ್ರೀ ಎಂಬ ಮಹಿಳೆಗೆ ಸಿಸೇರಿಯನ್‌ ಆಗಿತ್ತು. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊಟೆಯಲ್ಲೇ ಬಟ್ಟೆ ಹುಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದಾರೆ. ತಕ್ಷಣಕ್ಕೆ ಇದು ಮಹಿಳೆಯ ಅರಿವಿಗೆ ಬಂದಿಲ್ಲ. ಒಂದು ವಾರದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಸ್ಕ್ಯಾನಿಂಗ್‌ಗೆ ಬಂದಾಗ ವೈದ್ಯರ ಯಡವಟ್ಟು ಬಯಲಾಗಿದೆ. ಇದನ್ನೂ ಓದಿ: ಪಂದ್ಯಕ್ಕೂ ಮುನ್ನವೇ ಪಾಕ್‌ ಹೈಡ್ರಾಮಾ – ಏನೇ ಆದ್ರೂ ಭಾರತವನ್ನು ಸೋಲಿಸಬೇಕು ಎಂದ ಪಿಸಿಬಿ ಮುಖ್ಯಸ್ಥ

    ಬಳಿಕ ಅಫಜಲಪುರ ಕರಜಗಿ ಗ್ರಾಮದ ಪ್ರಾಥಮಿಕ ಕೇಂದ್ರಕ್ಕೆ ತೆರಳಿ ವೈದ್ಯರಿಂದ ಮರು ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಹೊಟ್ಟೆಯಲ್ಲಿದ್ದ ಬಟ್ಟೆ ಉಂಡೆ ಹಾಗು ಹತ್ತಿ ತೆಗೆದಿದ್ದಾರೆ. ಆದ್ರೆ ಆದರೆ ಕುಟುಂಬಸ್ಥರ ಆರೋಪವನ್ನು ಜಿಮ್ಸ್ ವೈದ್ಯರು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: Champions Trophy | ಇಂಡೋ-ಪಾಕ್ ಕಾದಾಟದ ರೋಚಕ ಇತಿಹಾಸ – ಹೈವೋಲ್ಟೇಜ್ ಕದನದಲ್ಲಿ ಯಾರ ಕೈ ಮೇಲು?

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಸರ್ಜನ್‌ ಡಾ. ಅಸ್ನಾ ಬೇಗ್, ಹೆರಿಗೆಯ ನಂತರ ಬ್ಲೀಡಿಂಗ್ ಸಲುವಾಗಿ ಪ್ಯಾಡ್ ಇಡಲಾಗಿದೆ. 2 ದಿನದ ನಂತರ ಮಹಿಳೆ ಬಂದು ಅದನ್ನ ತೆಗೆಸಿಕೊಳ್ಳಬೇಕಾಗಿತ್ತು. ಆದ್ರೆ ಅವರು ಬಂದಿರಲಿಲ್ಲ. ಸದ್ಯ ಈಗ ಮಹಿಳೆಗೆ ಯಾವುದೇ ರೀತಿಯ ತೊಂದರೆ ಇಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಆಘಾತ – ಪ್ರಾಕ್ಟೀಸ್ ವೇಳೆ ಕೊಹ್ಲಿಗೆ ಮೊಣಕಾಲು ಗಾಯ

  • ಕೊಪ್ಪಳ| ನದಿಯಲ್ಲಿ ಈಜಲು ಹೋಗಿ ಹೈದರಾಬಾದ್‌ನ ವೈದ್ಯೆ ಸಾವು

    ಕೊಪ್ಪಳ| ನದಿಯಲ್ಲಿ ಈಜಲು ಹೋಗಿ ಹೈದರಾಬಾದ್‌ನ ವೈದ್ಯೆ ಸಾವು

    ಕೊಪ್ಪಳ: ಗಂಗಾವತಿ (Gangavathi) ತಾಲೂಕಿನ ಸಣಾಪೂರ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿ ವೈದ್ಯೆ (Doctor) ಓರ್ವರು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ನಡೆದಿದೆ.

    ಮೃತ ವೈದ್ಯೆಯನ್ನು ಹೈದರಾಬಾದ್‌ನ (Hyderabad) ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯ ಮೋಹನ್ (26) ಎಂದು ಗುರುತಿಸಲಾಗಿದೆ. ಅನನ್ಯ ಸ್ನೇಹಿತರ ಜೊತೆಗೆ ರಜೆ ಕಳೆಯಲು ಸ್ಥಳೀಯ ಪ್ರವಾಸಿ ತಾಣಗಳಾದ ಅಂಜನಾದ್ರಿ, ಪಂಪಾಸರೋವರ, ಸಣಾಪೂರ ಕೆರೆಗೆ ಭೇಟಿ ನೀಡಿ, ತುಂಗಭದ್ರ ನದಿಯ ದಡದಲ್ಲಿಯೇ ಇದ್ದ ರೆಸಾರ್ಟ್ವೊಂದರಲ್ಲಿ ಮಂಗಳವಾರ ರಾತ್ರಿ ಉಳಿದುಕೊಂಡಿದ್ದಾರೆ. ಮುಂಜಾನೆ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ, ಕಲ್ಲು ಬಂಡೆಯ ಮೇಲಿಂದ ನದಿಗೆ ಜಿಗಿದಿದ್ದಾರೆ. ನದಿಯಲ್ಲಿ ಕಲ್ಲು ಬಂಡೆ ಹಾಗೂ ನದಿಯ ನೀರಿನ ರಭಸಕ್ಕೆ ಅನನ್ಯ ನೀರಿನಲ್ಲಿ ಮುಳುಗಿದ್ದಾರೆ. ಇದನ್ನೂ ಓದಿ: ಹೆತ್ತ ತಾಯಿಯ ಮೇಲೆ ಹಲ್ಲೆ ಆರೋಪ – ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಎಫ್‌ಐಆರ್ ದಾಖಲು

    ದಡದಲ್ಲಿಯೇ ಇದ್ದ ಸ್ನೇಹಿತರು ಅನನ್ಯಾ ಅವರನ್ನು ಹುಡುಕಲು ಮುಂದಾಗಿದ್ದಾರೆ. ಕೆಲ ಕಾಲದವರೆಗೆ ಅನನ್ಯ ಮೋಹನ್ ಅವರ ದೇಹ ಕಾಣಿಸಿಕೊಳ್ಳದೆ ಇರುವುದರಿಂದ ಗಾಬರಿಗೊಂಡು ಸ್ಥಳೀಯ ಹಾಗೂ ರೆಸಾರ್ಟ್ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಮೀನುಗಾರರ ಸಹಾಯದಿಂದ ಹುಡುಕಾಟ ನಡೆಸಲಾಗಿದೆ. ದೇಹ ಪತ್ತೆಯಾಗಿಲ್ಲ. ಕೂಡಲೇ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರಿನಲ್ಲಿ ಅನನ್ಯ ಅವರ ದೇಹದ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: 70 ಕೆಜಿ ರಾಡ್‌ ಕುತ್ತಿಗೆಗೆ ಬಿದ್ದು ಚಿನ್ನದ ಪದಕ ವಿಜೇತ ಪವರ್‌ಲಿಫ್ಟರ್‌ ಸಾವು

    ಅನನ್ಯ ಮೋಹನ್ ಅವರು ಕಲ್ಲು ಬಂಡೆಯ ಮೇಲಿಂದ ನೀರಿಗೆ ಹಾರುವುದನ್ನು ಸ್ನೇಹಿತರು ವೀಡಿಯೋ ಮಾಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಯವರು ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: 7 ತಿಂಗಳ ಮಗು ರೇಪ್ ಮಾಡಿದವನಿಗೆ ಗಲ್ಲು ಶಿಕ್ಷೆ – ಕೋಲ್ಕತ್ತಾ ವಿಶೇಷ ಕೋರ್ಟ್‌ನಿಂದ ತೀರ್ಪು

  • ಈ ವಾರ ನಿರ್ಣಾಯಕ – ದರ್ಶನ್‌ ಸರ್ಜರಿ ಬಗ್ಗೆ ವೈದ್ಯರಿಂದ ಸ್ಫೋಟಕ ಮಾಹಿತಿ

    ಈ ವಾರ ನಿರ್ಣಾಯಕ – ದರ್ಶನ್‌ ಸರ್ಜರಿ ಬಗ್ಗೆ ವೈದ್ಯರಿಂದ ಸ್ಫೋಟಕ ಮಾಹಿತಿ

    – ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ ನಟ

    ಮೈಸೂರು: ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ನಟ ದರ್ಶನ್ (Darshan) ಬುಧವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ (Treatment) ಒಳಗಾದರು.

    20 ದಿನಗಳ ಹಿಂದೆ ಬೆನ್ನು ನೋವಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ನಟ ದರ್ಶನ್, ಶಸ್ತ್ರಚಿಕಿತ್ಸೆಗೂ (Surgery) ಒಪ್ಪಿದ್ದರು. ಹೀಗಾಗಿ ಕೆಲವು ಮೆಡಿಸಿನ್ ನೀಡಿ ಫಿಸಿಯೋಥೆರಪಿಗೆ ಡಾ. ಅಜಯ್ ಹೆಗ್ಡೆ ಸೂಚಿಸಿದ್ದರು. ಆ ಅವಧಿ ಮುಗಿದ ಕಾರಣ ಇಂದು ನಟ ದರ್ಶನ್ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾದರು. ಇದನ್ನೂ ಓದಿ: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ – ಐರ್ಲೆಂಡ್‌ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು

    ನಟ ದರ್ಶನ್‌ಗೆ ಇವತ್ತು ಶಸ್ತ್ರಚಿಕಿತ್ಸೆ ಮಾಡಲಿಲ್ಲ. ಶಸ್ತ್ರಚಿಕಿತ್ಸೆಗೂ ಮುನ್ನ ನರ್ವ್ ರೂಟ್ ಬ್ಲಾಕ್‌ಗೆ ಎಪಿಡ್ಯೂರಲ್ ಇಂಜೆಕ್ಷನ್ (Epidural Injection) ಅನ್ನು ವೈದ್ಯರು ನೀಡಿದರು. ಈ ಇಂಜೆಕ್ಷನ್ ಹಿನ್ನೆಲೆಯಲ್ಲಿ ಒಂದು ವಾರ ನಿಗಾ ಇಡಲಾಗುತ್ತದೆ. 1 ವಾರದಲ್ಲಿ ಬ್ಲಾಕ್ ಕ್ಲಿಯರ್ ಆಗದಿದ್ದರೆ ಅಪರೇಷನ್‌ಗೆ ವೈದ್ಯರು ಸಿದ್ಧತೆ ನಡೆಸಲಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮದುವೆಗೆ 4 ದಿನ ಬಾಕಿಯಿರುವಾಗಲೇ ಪೊಲೀಸರ ಮುಂದೆ ಮಗಳನ್ನ ಗುಂಡಿಕ್ಕಿ ಕೊಂದ ತಂದೆ

    ದರ್ಶನ್ ಬೆನ್ನು ನೋವಲ್ಲಿ ಸ್ವಲ್ಪ ಗುಣಮುಖ
    ಫಿಸಿಯೋಥೆರಪಿಯಲ್ಲಿ ದರ್ಶನ್‌ಗೆ ಬೆನ್ನು ನೋವು ಸ್ವಲ್ಪ ಗುಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 20 ದಿನಗಳ ಹಿಂದೆ ಇದ್ದ ನೋವಿಗೂ ಇಂದಿಗೂ ಬಹಳ ವ್ಯತ್ಯಾಸ ಕಂಡುಬಂದಿದೆ. 20% ನಷ್ಟು ಚೇತರಿಕೆ ಆಗಿದೆ. ವೈದ್ಯರು ಹೇಳಿದ ಈ ಮಾತು ಕೇಳಿ ನಟ ದರ್ಶನ್ ಖುಷಿ ಆಗಿದ್ದಾರೆ. ಆದ್ದರಿಂದ ಫಿಸಿಯೋಥೆರಪಿ ಮುಂದುವರೆಸುವಂತೆ ವೈದ್ಯರು ನಟ ದರ್ಶನ್‌ಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಭ್ರಷ್ಟಾಚಾರ ಆರೋಪ – ರಾಜ್ಯಪಾಲರಿಗೆ ದೂರು

    ಎಪಿಡ್ಯೂರಲ್ ಇಂಜೆಕ್ಷನ್ ಕೊಡುವ ಮುನ್ನ ದರ್ಶನ್‌ಗೆ ಇಂಜೆಕ್ಷನ್ ಸೈಡ್ ಎಫೆಕ್ಟ್ ವರ್ಕ್ ಆಗುವ ರೀತಿ ಎಲ್ಲವನ್ನು ವೈದ್ಯ ಡಾ. ಅಜಯ್ ಹೆಗ್ಡೆ ವಿವರಿಸಿದ್ದಾರೆ. ವೈದ್ಯರ ವಿವರಣೆ ಕೇಳಿ ಇಂಜೆಕ್ಷನ್ ಕೊಡಲು ದರ್ಶನ್ ಸಮ್ಮತಿ ಸೂಚಿಸಿದರು. ಒಂದು ವೇಳೆ ಅಪರೇಷನ್ ನಿಶ್ಚಿತವಾದರೆ ದರ್ಶನ್, ಪತ್ನಿ ವಿಜಯಲಕ್ಷ್ಮಿ, ದರ್ಶನ್ ಸಹೋದರ ದಿನಕರ್, ಮಗ ವಿನೀಶ್ ನಾಲ್ವರನ್ನು ಕರೆಸಿ ಅಪರೇಷನ್ ಬಗ್ಗೆ, ಅಪರೇಷನ್ ನಂತರ ಆಗುವ ಪರಿಣಾಮಗಳ ಬಗ್ಗೆ ಕೌನ್ಸಿಲಿಂಗ್ ರೂಪದಲ್ಲಿ ವೈದ್ಯರು ಮಾಹಿತಿ ನೀಡಲಿದ್ದಾರೆ. ಈ ಬಗ್ಗೆ ದರ್ಶನ್‌ಗೂ ವೈದ್ಯರು ತಿಳಿಸಿದ್ದಾರೆ. ಬಳಿಕ ಒಂದು ವಾರದ ನಂತರ ಕುಟುಂಬದ ಸಮೇತ ಆಸ್ಪತ್ರೆಗೆ ಬರುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣದ ಕುಂಭಮೇಳ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ – ರಥೋತ್ಸವಕ್ಕೆ ಭಕ್ತರ ದಂಡು 

    ಅಲ್ಲಿಗೆ ಈ ಒಂದು ವಾರ ದರ್ಶನ್ ಪಾಲಿಗೆ ಬಹಳ ಮಹತ್ತರವಾದದ್ದು. ಇಂಜೆಕ್ಷನ್ ವರ್ಕ್ ಆದರೆ ಆಪರೇಷನ್ ಇಲ್ಲ. ವರ್ಕ್ ಆಗದೆ ಇದ್ದರೆ ಮುಂದಿನ ವಾರ ಆಪರೇಷನ್ ಮಾಡಿಸಿಕೊಳ್ಳುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

  • ಪಾನಮತ್ತರಾಗಿ ನಶೆಯಲ್ಲೇ ಆಸ್ಪತ್ರೆಗೆ ಬರುತ್ತಿದ್ದ ತಾಲೂಕು ವೈದ್ಯಾಧಿಕಾರಿ ಅಮಾನತು

    ಪಾನಮತ್ತರಾಗಿ ನಶೆಯಲ್ಲೇ ಆಸ್ಪತ್ರೆಗೆ ಬರುತ್ತಿದ್ದ ತಾಲೂಕು ವೈದ್ಯಾಧಿಕಾರಿ ಅಮಾನತು

    ಬಳ್ಳಾರಿ: ಪಾನಮತ್ತರಾಗಿ ನಶೆಯಲ್ಲೇ ಆಸ್ಪತ್ರೆಗೆ ಬರುತ್ತಿದ್ದ ತಾಲೂಕು ವೈದ್ಯಾಧಿಕಾರಿಯನ್ನು (Medica Officer) ಅಮಾನತು ಮಾಡಲಾಗಿದೆ.

    ಬಳ್ಳಾರಿ (Bellary) ಜಿಲ್ಲೆಯ ಸಿರಗುಪ್ಪ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಈರಣ್ಣ ನಿತ್ಯ ಕುಡಿದು ಬಂದು ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದರು. ಅನುಚಿತವಾಗಿ ವರ್ತನೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ವಾಯುಭಾರ ಕುಸಿತದ ಎಫೆಕ್ಟ್; ತಮಿಳುನಾಡಿನಾದ್ಯಂತ ಭಾರೀ ಮಳೆ, ಪ್ರವಾಹ ಮುನ್ಸೂಚನೆ!

    ಈ ಬಗ್ಗೆ ‘ಪಬ್ಲಿಕ್ ಟಿವಿ’ಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆಯುಕ್ತಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಿಂದ ತಾಲೂಕು ವೈದ್ಯಾಧಿಕಾರಿ ಡಾ. ಈರಣ್ಣ ಅವರನ್ನ ಅಮಾನತು ಮಾಡಿ ಆದೇಶಿಸಲಾಗಿದೆ.

    ಸಿರಗುಪ್ಪ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದಾಧಿಕಾರಿಯಾಗಿದ್ದ ಡಾ. ಈರಣ್ಣ ನಿತ್ಯವೂ ಪಾನಮತ್ತರಾಗಿ, ನಶೆಯಲ್ಲೇ ಆಸ್ಪತ್ರೆಗೆ ಬರುತ್ತಿದ್ದರು. ಅಲ್ಲದೇ, ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದರು. ನಶೆಯಲ್ಲೇ ಚೇಂಬರ್‌ನಲ್ಲಿ ಕುಳಿತು ಟೇಬಲ್ ಗುದ್ದಿ, ಅಸಭ್ಯವಾಗಿ ವರ್ತನೆ ತೋರಿದ್ದರು. ಈ ಕುರಿತು ‘ಪಬ್ಲಿಕ್ ಟಿವಿ’ಯಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು. ಇದನ್ನೂ ಓದಿ: ಬಿಜೆಪಿ ಸರ್ಕಾರ ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ – ಸಿದ್ದರಾಮಯ್ಯ

  • 70,000 ರೂ.ನಂತೆ 1,500 ಮಂದಿಗೆ ನಕಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಸೇಲ್‌ – 13 ಮಂದಿ ಅರೆಸ್ಟ್!

    70,000 ರೂ.ನಂತೆ 1,500 ಮಂದಿಗೆ ನಕಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಸೇಲ್‌ – 13 ಮಂದಿ ಅರೆಸ್ಟ್!

    ಗಾಂಧಿನಗರ: ನಕಲಿ ಬಿಇಎಂಎಸ್ ಪದವಿ ಪ್ರಮಾಣ ಪತ್ರ ನೀಡಿ, ನಕಲಿ ವೈದ್ಯರನ್ನು ಸೃಷ್ಟಿಸುತ್ತಿದ್ದ ಮೂವರು ಆರೋಪಿಗಳನ್ನು ಗುಜರಾತ್‌ನ ಸೂರತ್‌ (Surat) ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ನಕಲಿ ಪದವಿ ಪಡೆದು ಆಸ್ಪತ್ರೆ ನಡೆಸುತ್ತಿದ್ದ 10 ಮಂದಿಯನ್ನು ಪೊಲೀಸರು (Police) ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಆರೋಪಿಗಳು ವಿವಿಧ ಸ್ಥಳಗಳಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಬಂಧಿತರ ವಿರುದ್ಧ ಗುಜರಾತಿನ ಮೆಡಿಕಲ್ ಪ್ರಾಕ್ಟೀಷನರ್ಸ್ ಆಕ್ಟ್ (ಜಿಎಂಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.‌

    ಮೂರು ಜನ ಆರೋಪಿಗಳು ಸೂರತ್‌ನಲ್ಲಿ ನಕಲಿ ಬ್ಯಾಚುಲರ್ ಆಫ್ ಎಲೆಕ್ಟ್ರೋ-ಹೋಮಿಯೋಪತಿ ಮೆಡಿಸಿನ್ ಮತ್ತು ಸರ್ಜರಿ (ಬಿಇಎಂಎಸ್) ಪದವಿ ಪ್ರಮಾಣಪತ್ರವನ್ನು ಜನರಿಗೆ ನೀಡುತ್ತಿದ್ದರು. ದಾಳಿ ವೇಳೆ ನಕಲಿ ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳ ಕ್ಲಿನಿಕ್‌ಗಳಿಂದ ಅಲೋಪತಿ ಮತ್ತು ಹೋಮಿಯೋಪತಿ ಔಷಧಗಳು, ಚುಚ್ಚುಮದ್ದು, ಸಿರಪ್ ಬಾಟಲಿಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

    ಮೂವರು ಆರೋಪಿಗಳು ಬೋರ್ಡ್ ಆಫ್ ಎಲೆಕ್ಟ್ರೋ ಹೋಮಿಯೋಪತಿಕ್ ಮೆಡಿಸಿನ್ ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ನಡೆಸುತ್ತಿದ್ದರು. ಅದರಲ್ಲಿ ನಕಲಿ ಬಿಇಎಂಎಸ್ ಪದವಿ ಪ್ರಮಾಣ ಪತ್ರವನ್ನು 70,000 ರೂ.ಗೆ ಮಾರಾಟ ಮಾಡುತ್ತಿದ್ದರು. ಸುಮಾರು 1,500 ಮಂದಿಗೆ ಇಂತಹ ಪ್ರಮಾಣಪತ್ರ ಮಾರಾಟ ಮಾಡಿದ್ದಾರೆ. ಇವುಗಳಲ್ಲಿ ಕೇವಲರು 10ನೇ ತರಗತಿ ತೇರ್ಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಪಾಂಡೇಸರ ಪೊಲೀಸರು ಬಮ್ರೋಲಿ ಪ್ರದೇಶದ ವಿವಿಧ ವೈದ್ಯಕೀಯ ಚಿಕಿತ್ಸಾಲಯಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

  • ಕೊಯಮತ್ತೂರು | ಕಾಲೇಜಿನ ವಾಶ್‌ರೂಮ್‌ನಲ್ಲಿ ಪೆನ್ ಕ್ಯಾಮೆರಾ ಇಟ್ಟಿದ್ದ ವೈದ್ಯ‌ ಅರೆಸ್ಟ್‌

    ಕೊಯಮತ್ತೂರು | ಕಾಲೇಜಿನ ವಾಶ್‌ರೂಮ್‌ನಲ್ಲಿ ಪೆನ್ ಕ್ಯಾಮೆರಾ ಇಟ್ಟಿದ್ದ ವೈದ್ಯ‌ ಅರೆಸ್ಟ್‌

    ಚೆನ್ನೈ: ತಮಿಳುನಾಡಿನ (Tamil Nadu) ಕೊಯಮತ್ತೂರಿನ (Coimbatore) ಮೆಡಿಕಲ್‌ ಕಾಲೇಜಿನ ವಾಶ್ ರೂಮ್‌ನಲ್ಲಿ ಪೆನ್ ಕ್ಯಾಮೆರಾ ಇಟ್ಟ ಆರೋಪದ ಮೇಲೆ ಓರ್ವ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಡಾ. ವೆಂಕಟೇಶ್ (33) ಎಂದು ತಿಳಿದು ಬಂದಿದೆ. ಬಂಧಿತ ಆರೋಪಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಮಹಿಳಾ ವೈದ್ಯರೊಬ್ಬರಿಗೆ ವಾಶ್‌ರೂಮ್‌ನಲ್ಲಿ ಕ್ಯಾಮೆರಾ ಇರುವುದು ಕಂಡು ಬಂದಿದೆ. ಅವರು ಈ ವಿಚಾರವನ್ನು ಕಾಲೇಜಿನ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಹಿಡನ್ ಕ್ಯಾಮೆರಾ (Hidden Camera) ಮತ್ತು ಅದರ ಮೆಮೊರಿ ಕಾರ್ಡ್‌ನ್ನು ವಶಪಡಿಸಿಕೊಂಡಿದ್ದಾರೆ.

    ಆರೋಪಿ ವಿರುದ್ಧ ಐಟಿ ಕಾಯ್ದೆ ಮತ್ತು ಭಾರತ ನ್ಯಾಯ ಸಂಹಿತಾ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರು ಹರಿದು ಗಾಯಗೊಂಡಿದ್ದ ನಾಗರಹಾವಿಗೆ ಚಿಕಿತ್ಸೆ ನೀಡಿದ ವೈದ್ಯೆ

    ಕಾರು ಹರಿದು ಗಾಯಗೊಂಡಿದ್ದ ನಾಗರಹಾವಿಗೆ ಚಿಕಿತ್ಸೆ ನೀಡಿದ ವೈದ್ಯೆ

    ಚಿಕ್ಕಮಗಳೂರು: ಕಾರು (Car) ಹರಿದು ಗಂಭೀರವಾಗಿ ಗಾಯಗೊಂಡಿದ್ದ ಎರಡು ನಾಗರಹಾವುಗಳಿಗೆ (Snake) ಪಶುವೈದ್ಯರು (Doctor) ಚಿಕಿತ್ಸೆ ನೀಡಿದ ಅಪರೂಪದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ.

    ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾವಿನ ಮೇಲೆ ಕಾರು ಹರಿದಿದೆ. ಪರಿಣಾಮ ಹಾವು ಹಾಗೂ ಅದರ ಮರಿ ಗಂಭೀರವಾಗಿ ಗಾಯಗೊಂಡಿದ್ದವು. ಎರಡೂ ಹಾವನ್ನು ಉರಗ ತಜ್ಞ ಆರೀಫ್ ಪಶು ಆಸ್ಪತ್ರೆಗೆ ತಂದಿದ್ದರು. ಹಾವಿಗೆ ಪಶುವೈದ್ಯಾಧಿಕಾರಿ ಚೈತ್ರ ಅವರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.

    ವೈದ್ಯರು ನೀಡಿದ ಔಷಧಿಯನ್ನು ಆರೀಫ್ ಹಚ್ಚಿದ್ದಾರೆ. ಬಳಿಕ ಹಾವುಗಳು ಚೇತರಿಸಿಕೊಂಡಿದ್ದು, ಅವನ್ನು ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

  • ಗುಜರಾತ್‌ | ನಕಲಿ ವೈದ್ಯರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ – ಆಹ್ವಾನ ಪತ್ರಿಕೆಯಲ್ಲಿ ಪೊಲೀಸ್ ಕಮಿಷನರ್‌ ಹೆಸರು!

    ಗುಜರಾತ್‌ | ನಕಲಿ ವೈದ್ಯರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ – ಆಹ್ವಾನ ಪತ್ರಿಕೆಯಲ್ಲಿ ಪೊಲೀಸ್ ಕಮಿಷನರ್‌ ಹೆಸರು!

    ಸೂರತ್: ಗುಜರಾತಿನ (Gujarat) ಸೂರತ್‌ನಲ್ಲಿ ನಕಲಿ ವೈದ್ಯರು (Fake Doctor) ಕ್ಲಿನಿಕ್‌ಗಳನ್ನು ನಡೆಸುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿ ಉದ್ಘಾಟಿಸಿರುವುದು ವರದಿಯಾಗಿದೆ.

    ನಕಲಿ ವೈದ್ಯರ ಗುಂಪು ಆಸ್ಪತ್ರೆಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರದಲ್ಲಿ ಉನ್ನತ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತಾಡದೆ ಅವರ ಹೆಸರನ್ನು ಮುದ್ರಿಸಿದೆ. ಆಮಂತ್ರಣ ಪತ್ರದಲ್ಲಿ ಆಯುರ್ವೇದ ವೈದ್ಯಕೀಯ ಪದವಿ ಹೊಂದಿರುವ ವೈದ್ಯ ಎಂದು ಪರಿಚಯಿಸಲಾದ ಬಿ.ಆರ್ ಶುಕ್ಲಾ ವಿರುದ್ಧ ಗುಜರಾತ್ ವೈದ್ಯಕೀಯ ಕಾಯ್ದೆಯಡಿ ಪ್ರಕರಣವಿದೆ. ಎಲೆಕ್ಟ್ರೋ-ಹೋಮಿಯೋಪತಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿಕೊಂಡಿರುವ ಮತ್ತೊಬ್ಬ ಸಹ-ಸಂಸ್ಥಾಪಕ ಆರ್‌.ಕೆ ದುಬೆ ವಿರುದ್ಧ ಸಹ ಗುಜರಾತ್ ವೈದ್ಯಕೀಯ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿದ್ದಾನೆ. ಇವರಿಬ್ಬರು ನಕಲಿ ಪದವಿಗಳನ್ನು ಹೊಂದಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

    ಮತ್ತೊಬ್ಬ ಸಹ-ಸಂಸ್ಥಾಪಕ ಜಿ.ಪಿ ಮಿಶ್ರಾ ವಿರುದ್ಧ ಮೂರು ಪ್ರಕರಣಗಳಿವೆ. ಅವರ ಪದವಿಯನ್ನು ಇನ್ನೂ ಪರಿಶೀಲಿಸಬೇಕಾಗಿದೆ. ಇತರ ಇಬ್ಬರು ಸಹ-ಸಂಸ್ಥಾಪಕರ ಪದವಿಗಳ ಬಗ್ಗೆಯೂ ಸಂಶಯವಿದೆ. ಈ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆಸ್ಪತ್ರೆಯ ಉದ್ಘಾಟನೆಯ ಒಂದು ದಿನದ ನಂತರ ಅದನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೂರತ್ ಮುನ್ಸಿಪಲ್ ಕಮಿಷನರ್ ಶಾಲಿನಿ ಅಗರ್ವಾಲ್, ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗಹ್ಲೌತ್ ಮತ್ತು ಜಂಟಿ ಪೊಲೀಸ್ ಕಮಿಷನರ್ ರಾಘವೇಂದ್ರ ವತ್ಸಾ ಸೇರಿದಂತೆ ಉನ್ನತ ಅಧಿಕಾರಿಗಳ ಹೆಸರುಗಳು ಉದ್ಘಾಟನೆಯ ಆಹ್ವಾನ ಪತ್ರಿಕೆಯಲ್ಲಿತ್ತು. ಅಂತಹ ಯಾವುದೇ ಆಹ್ವಾನದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ್ಯಾರೂ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.

    ಆಸ್ಪತ್ರೆ ಆವರಣವನ್ನು ಸೀಲ್ ಮಾಡಲಾಗಿದೆ. ತನಿಖೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • Bidar| ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ

    Bidar| ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ

    ಬೀದರ್: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರು ಸರಿಯಾದ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ಮಾಡಿದ ಪರಿಣಾಮ ಇಂದು (ಮಂಗಳವಾರ) ಮಹಿಳೆ ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ.

    ನಾಗಮ್ಮ ನರಸಪ್ಪ (63) ಮೃತ ಮಹಿಳೆಯಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಮತ್ತು ಸಿಬ್ಬಂದಿಗಳ ನಿರ್ಲಕ್ಷಕ್ಕೆ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ವಿಕ್ರಂ ಗೌಡ ನಕ್ಸಲ್ ತಂಡ ಸೇರಿದ್ದು ಹೇಗೆ? ಮನೆ ಮನೆಗೆ ಹೇಗೆ ಬರುತ್ತಿದ್ದರು? – ಸ್ಥಳೀಯರು ಬಿಚ್ಚಿಟ್ಟ ಸತ್ಯ ಓದಿ

    ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷತನದಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪ ಮಾಡಿ ಆಸ್ಪತ್ರೆ ಮುಂದೆ ಪ್ರತಿಭಟನಾ ಧರಣಿ ಮಾಡುತ್ತಿದ್ದಾರೆ. ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಸಿಗುತ್ತಿಲ್ಲ: ಸರ್ಕಾರದ ವಿರುದ್ಧವೇ ಕೈ ಶಾಸಕ ಗವಿಯಪ್ಪ ಆಕ್ರೋಶ

    ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜ್ಞಾನೇಶ್ವರ್ ನಿರಗುಡೆ ಭೇಟಿ ನೀಡಿದ್ದು, ತರಾಟೆಯ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ. ಡಿಹೆಚ್‌ಒ ಭರವಸೆ ಮೇರೆಗೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದು ಈ ಕುರಿತು ಹಳ್ಳಿಖೇಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.  ಇದನ್ನೂ ಓದಿ: ಈಗಿನ ಸರ್ಕಾರ ಬಂದ್ಮೇಲೆ ಮತ್ತೆ ನಕ್ಸಲರ ಚಟುವಟಿಕೆಗಳು ಶುರುವಾಗಿದೆ – ಸುನೀಲ್ ಕುಮಾರ್