Tag: doctor

  • ಆರೋಗ್ಯಕ್ಕಾಗಿ ಹಸುವಿನ ಸಗಣಿ ತಿನ್ನುವ ವೈದ್ಯ – ವೀಡಿಯೋ ವೈರಲ್

    ಆರೋಗ್ಯಕ್ಕಾಗಿ ಹಸುವಿನ ಸಗಣಿ ತಿನ್ನುವ ವೈದ್ಯ – ವೀಡಿಯೋ ವೈರಲ್

    ತ್ತಮ ಆರೋಗ್ಯಕ್ಕಾಗಿ ಗೋ ಶಾಲೆಯಲ್ಲಿ ವೈದ್ಯರೊಬ್ಬರು ಸಗಣಿ ತಿನ್ನುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಹಸುವಿನ ಸಗಣಿ ಮತ್ತು ಮೂತ್ರವು ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಹೊಂದಿದೆ ಎಂದು ಭಾರತೀಯರು ನಂಬಿದ್ದಾರೆ. ಆದರೆ ವಿಜ್ಞಾನ ಬೇರೆ ರೀತಿಯೇ ಹೇಳುತ್ತದೆ. ಈ ನಡುವೆ ಮನೋಜ್ ಮಿತ್ತಲ್ ಎಂಬ ವೈದ್ಯರೊಬ್ಬರು ಹಸುವಿನ ಸಗಣಿ ತಿನ್ನುತ್ತಿರುವ ವೀಡಿಯೋವನ್ನು ತಮ್ಮ  ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

    ವೀಡಿಯೋದಲ್ಲಿ ಡಾ. ಮನೋಜ್ ಮಿತ್ತಲ್ ಅವರು, ನೆಲದ ಮೇಲಿದ್ದ ಹಸುವಿನ ಸಗಣಿಯನ್ನು ತೆಗೆದುಕೊಂಡು ಅದನ್ನು ಬಾಯಿಗೆ ಹಾಕಿಕೊಂಡು ಸವಿಯುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಗೋ ಮೂತ್ರ ಹಾಗೂ ಹಸುವಿನ ಸಗಣಿ ತಿನ್ನುವುದರಿಂದ ಅನೇಕ ಕಾಯಿಲೆಗಳು ದೂರವಾಗುತ್ತದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ನಟ ದುನಿಯಾ ವಿಜಯ್‍ಗೆ ಪಿತೃ ವಿಯೋಗ

    ಹೆಂಗಸರಿಗೆ ನಾರ್ಮಲ್ ಡೆಲಿವರಿ ಆಗಬೇಕೆಂದರೆ ಹಸುವಿನ ಸಗಣಿ ಸೇವಿಸಬೇಕು ಇದರಿಂದ ಸಿಸೇರಿಯನ್‍ಗೆ ಆಗುವುದನ್ನು ತಪ್ಪಿಸಬಹುದು ಎಂದಿದ್ದಾರೆ. ಜೊತೆಗೆ ಗೋವಿನಿಂದ ಸಿಗುವ ಪಂಚಗವ್ಯದ ಪ್ರತಿಯೊಂದು ಭಾಗವೂ ಮನುಕುಲಕ್ಕೆ ಅತ್ಯಮೂಲ್ಯವಾದದ್ದು, ಗೋವಿನ ಸಗಣಿ ತಿಂದರೆ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ನಮ್ಮ ಆತ್ಮ ಶುದ್ಧವಾಗುತ್ತದೆ. ಒಮ್ಮೆ ಅದು ನಮ್ಮ ದೇಹವನ್ನು ಪ್ರವೇಶಿಸಿದರೆ, ಅದು ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರ್ನಾಲ್ಕು ದಿನ ಮಳೆ ಸೂಚನೆ – ಆತಂಕದಲ್ಲಿ ಬಯಲುಸೀಮೆ ಮಂದಿ

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವೈದ್ಯರನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ವೈದ್ಯರ ಹೇಳಿಕೆಗಳನ್ನು ಕೆಲವರು ಒಪ್ಪಿದರೆ, ಮತ್ತೆ ಕೆಲವರು ಅವರ ಪದವಿಯನ್ನು ಪ್ರಶ್ನಿಸಿ, ಅಪಹಾಸ್ಯ ಮಾಡಿದ್ದಾರೆ.

  • ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ- ಚಿಕಿತ್ಸೆ ಕೊಡಲು ವೈದ್ಯರೇ ಇಲ್ಲ

    ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ- ಚಿಕಿತ್ಸೆ ಕೊಡಲು ವೈದ್ಯರೇ ಇಲ್ಲ

    ಯಾದಗಿರಿ: ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿರುವ ಆಸ್ಪತ್ರೆ ಇದು ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆಇಲ್ಲಿ ಚಿಕಿತ್ಸೆ ಕೊಡಲು ವೈದ್ಯರೇ ಇಲ್ಲವಾಗಿದೆ.

    ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಹೈರಾಣಾಗುತ್ತಿದ್ದಾರೆ. ಇಲ್ಲಿಗೆ ವೈದ್ಯರು ಬರೋದು ಅಮಾವಾಸ್ಯೆ, ಹುಣ್ಣಿಮೆಗೊಮ್ಮೆಗಾಗಿದೆ. ಇಲ್ಲಿ ಕುಡಿಯಲು ನೀರು ಸಹ ಇಲ್ಲದ ಪರಿಸ್ಥಿತಿಯಿದೆ. ಸಿಬ್ಬಂದಿ ಬಳಕೆಗೆ ತಂದಿದ್ದ ಪೀಠೋಪಕರಣಗಳು ಆಸ್ಪತ್ರೆಯ ಮೂಲೆಗೆ ಬಿದ್ದಿವೆ. ನಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಆಗರವಾಗಿದ್ದರು ಆರೋಗ್ಯ ಇಲಾಖೆ ಮಾತ್ರ ಡೋಂಟ್ ಕೇರ್ ಎನ್ನುತ್ತಿದೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

    ಸರಿಯಾದ ಸಮಯಕ್ಕೆ ವೈದ್ಯರ ಬಾರದ ಹಿನ್ನೆಲೆ PHC( primary health care) ಕೇಂದ್ರ ಖಾಲಿ ಖಾಲಿಯಾಗಿ, ಆಸ್ಪತ್ರೆಯಲ್ಲಿ ನೋಡಲು ಸೀಗುವುದು ವೈದ್ಯರ ಚೇರ್ ಮಾತ್ರ. ಈ ಗ್ರಾಮದ ಜನ ವೈದ್ಯರನ್ನು ಕಂಡ್ರೆ ಅದೇ ಪುಣ್ಯ. ಈ PHC ಕೇಂದ್ರಕ್ಕೆ ಹತ್ತಾರು ಹಳ್ಳಿಗಳು ಒಳಪಡುತ್ತದೆ. ಬೇರೆ ಬೇರೆ ಊರುಗಳಿಂದ ಬಂದು ವೈದ್ಯರಿಗಾಗಿ ಕಾದು ಕಾದು ಸುಸ್ತಾಗಬೇಕು. ತುರ್ತು ಆರೋಗ್ಯ ಸೇವೆ ಎಂದು ನಂಬಿಕೊಂಡು ಬಂದರೆ ನರಕಯಾತನೆ ಕಟ್ಟಿಟ್ಟ ಬುತ್ತಿ. ರೋಗಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಇಲ್ಲ. ಹೆರಿಗೆಯಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಆಕೆಯ ಹಾರೈಕೆಗೆ ಯಾರೂ ಇಲ್ಲ. ಇದರಿಂದಾಗಿ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ

     

  • 2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು

    2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು

    ಬೆಂಗಳೂರು: ವೈದ್ಯರು ಸತತ ಮೂರು ಗಂಟೆಗಳ ಕಾಲ ಚಿಕಿತ್ಸೆ ನೀಡಿದ್ದರೂ ಅವರ ಪ್ರಯತ್ನಕ್ಕೆ ಪುನೀತ್ ರಾಜ್‍ಕುಮಾರ್ ದೇಹ ಸ್ಪಂದಿಸಲಿಲ್ಲ.

    PUNEET RAJKUMAR

    ಹೃದಯಾಘಾತದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಇದು ಸಾಯುವ ವಯಸ್ಸು ಅಲ್ಲ: ನರೇಂದ್ರ ಮೋದಿ

    ಪ್ರತಿನಿತ್ಯ ಮಾಡುವಂತೆ ಇಂದೂ ಪುನೀತ್ ಜಿಮ್‍ನಲ್ಲಿ ಕಸರತ್ತು ನಡೆಸಿದ್ದಾರೆ. ಸತತ ಎರಡು ಗಂಟೆ ವ್ಯಾಯಾಮ ಮಾಡಿದ ಬಳಿಕ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ರು ಪುನೀತ್- ಸಿಎಂ

    ವಿಕ್ರಂ ಆಸ್ಪತ್ರೆಯ ವೈದ್ಯ ಡಾ. ರಂಗನಾಥ್ ಮಾತನಾಡಿ, ಎದೆ ನೋವು ಎಂದು ಪುನೀತ್ ರಾಜ್‍ಕುಮಾರ್ ಅವರು ಕುಟುಂಬದ ವೈದ್ಯರ ಬಳಿ ಹೋಗಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿದಾಗ ಹೃದಯಾಘಾತವಾಗಿರುವುದು ತಿಳಿದುಬಂದಿದೆ. ಅಲ್ಲಿಂದ ನೇರವಾಗಿ ವಿಕ್ರಮ ಆಸ್ಪತ್ರೆಗೆ ಪುನೀತ್ ಅವರನ್ನು ಕರೆತರಲಾಗುತ್ತಿತ್ತು. ಮಾರ್ಗ ಮಧ್ಯೆದಲ್ಲಿಯೇ ಅವರಿಗೆ ಹಾರ್ಟ್ ಅಸಿಸ್ಟೋಲ್ (ಹೃದಯದ ಚಲನೆ ನಿಲ್ಲುವುದು) ಆಗಿತ್ತು. ಭಾರೀ ಹೃದಯಾಘಾತವೇ ಆಗಿತ್ತು ಎಂದು ಹೇಳಿದ್ದಾರೆ.

    PUNEET RAJKUMAR

    ಆದರೂ ಮೂರು ಗಂಟೆಗಳ ಕಾಲ ಅವರನ್ನು ವೆಂಟಿಲೇಟರ್‍ನಲ್ಲಿಟ್ಟು ಬದುಕುಳಿಸಲು ನಾನಾ ರೀತಿಯಲ್ಲಿ ಪ್ರಯತ್ನ ಪಟ್ಟೆವು. ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದೆವು. ಆದರೆ ಅವರಿಂದ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಹಾರ್ಟ್ ಅಸಿಸ್ಟೋಲ್ ಸ್ಥಿತಿಯಲ್ಲೇ ಇತ್ತು. ವೈದ್ಯರ ತಂಡ ಸಾಕಷ್ಟು ಪ್ರಯತ್ನಪಟ್ಟರು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗುರುವಾರ ಮಧ್ಯಾಹ್ನ 2.30ರ ಹೊತ್ತಿಗೆ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಘೋಷಿಸಲೇಬೇಕಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

  • ಮುಂಬೈನಲ್ಲಿ ಕಾಲು ಆಪರೇಷನ್‍ಗೆ ಒಳಗಾದ ರೇಣುಕಾಚಾರ್ಯ

    ಮುಂಬೈನಲ್ಲಿ ಕಾಲು ಆಪರೇಷನ್‍ಗೆ ಒಳಗಾದ ರೇಣುಕಾಚಾರ್ಯ

    ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಂಭವಿಸಿದ್ದ ಅಪಘಾತದಿಂದಾಗಿ ಕಳೆದ ಕೆಲ ತಿಂಗಳಿಂದ ಕಾಲು ನೋವು ಕಾಣಿಸಿಕೊಂಡ, ಪರಿಣಾಮ ವೈದ್ಯರ ಸಲಹೆ ಮೇರೆಗೆ ಮುಂಬೈನ ಆಸ್ಪತ್ರೆಯಲ್ಲಿ ಆಪರೇಷನ್‍ಗೆ ಒಳಗಾಗಿದ್ದೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ:
    ಆತ್ಮೀಯ ಬಂಧುಗಳೇ, ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಸಂಭವಿಸಿದ್ದ ಅಪಘಾತದಿಂದಾಗಿ ಕಳೆದ ಕೆಲ ತಿಂಗಳಿಂದ ಕಾಲು ನೋವು ಕಾಣಿಸಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಮುಂಬೈ ಆಸ್ಪತ್ರೆಯಲ್ಲಿ ಆಪರೇಷನ್‍ಗೆ ಒಳಗಾಗಿದ್ದೇನೆ. ಇದನ್ನೂ ಓದಿ: ರಾಜ್ಯದಲ್ಲಿ 282 ಕೇಸ್ – 15 ಮಂದಿಯಲ್ಲಿ ಕಾಣಿಸಿಕೊಂಡ AY 12 ಪ್ರಭೇದ

    ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದದಿಂದ ಗುಣಮುಖನಾಗುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಮುಂದಿನ 15 ದಿನಗಳ ಕಾಲ ಬೆಂಗಳೂರಿನ ಆಯುರ್ವೇದಿಕ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ನಿಮ್ಮ ಅಹವಾಲುಗಳಿಗೆ ದೂರವಾಣಿ ಮೂಲಕ ನನ್ನ ಆಪ್ತ ಸಹಾಯಕರು ಸ್ಪಂದಿಸಲಿದ್ದು, ಸಹಕರಿಸಬೇಕಾಗಿ ವಿನಯಪೂರ್ವಕವಾಗಿ ವಿನಂತಿಸುತ್ತೇನೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ದೀಪಾವಳಿ ಗಿಫ್ಟ್: ತುಟ್ಟಿ ಭತ್ಯೆ ಹೆಚ್ಚಳ

  • ಬರ್ತ್‍ಡೇ ಪಾರ್ಟಿಯಲ್ಲಿ ವೈದ್ಯೆ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ

    ಬರ್ತ್‍ಡೇ ಪಾರ್ಟಿಯಲ್ಲಿ ವೈದ್ಯೆ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ

    ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಮೇಲೆ ಬರ್ತ್‍ಡೇ ಪಾರ್ಟಿಯಲ್ಲಿ ತನ್ನ ಹಿರಿಯ ಸಹೋದ್ಯೋಗಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಾರೆ.

    ಸೆಪ್ಟೆಂಬರ್ 26ರಂದು ಈ ಘಟನೆ ನಡೆದಿದ್ದು, ಅಕ್ಟೋಬರ್ 11 ರಂದು ಈ ಬಗ್ಗೆ ಮಾಹಿತಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ಪೊಲೀಸರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯನ್ನು ವಿಚಾರಿಸಿದಾಗ, ಬರ್ತ್‍ಡೇ ಸೆಲೆಬ್ರೆಟ್ ಮಾಡಲು ತನ್ನ ಹಿರಿಯ ಸಹೋದ್ಯೋಗಿ ರೂಮಿಗೆ ಹೋದಾಗ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ. ಆರೋಪಿಗೆ ಮದುವೆಯಾಗಿದ್ದು, ಆತ ಕುಟುಂಬದೊಂದಿಗೆ ಏಮ್ಸ್ ವಸತಿ ಸಮುಚ್ಚದಲ್ಲಿ ವಾಸಿಸುತ್ತಿದ್ದನು. ಆದರೆ ಆರೋಪಿಯ ಕುಟುಂಬದವರು ಊರಿಗೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಇದೀಗ ಪಾರ್ಟಿಯಲ್ಲಿ ಭಾಗಿಯಾಗಿದ್ದ ಇತರ ವೈದ್ಯರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬರ್ತ್‍ಡೇ ಪಾರ್ಟಿಯಲ್ಲಿ ಸಂತ್ರಸ್ತೆ ಹಾಗೂ ಆಕೆಯ ಸಹೋದ್ಯೋಗಿ ಇಬ್ಬರು ಮದ್ಯ ಸೇವಿಸಿದ್ದರು ಮತ್ತು ರಾತ್ರಿ ತಡವಾಗಿದ್ದರಿಂದ ಸಂತ್ರಸ್ತೆ ಅಲ್ಲಿಯೇ ತಂಗಿದ್ದರು. ಆದರೆ ನಂತರ ಆರೋಪಿ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹಬ್ಬದಂದು ಹಳೆಯ ಫೋಟೋ ಹಂಚಿಕೊಂಡ ರಮ್ಯಾ- ಅಭಿಮಾನಿಗಳು ಹೇಳಿದ್ದೇನು?

    ಇದೀಗ ಸಂತ್ರಸ್ತೆ ಹೇಳಿಕೆ ಆಧಾರದ ಮೇಲೆ, ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬೆನಿಟಾ ಮೇರಿ ಜೈಕರ್ ಹೇಳಿದ್ದಾರೆ.

  • ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

    ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

    ಮಾಸ್ಕೋ: ವ್ಯಕ್ತಿಯೋರ್ವನ ಹೊಟ್ಟೆಯಿಂದ 1ಕಿಲೋಗ್ರಾಂಗಿಂತಲೂ ಹೆಚ್ಚು ಮೊಳೆಗಳು, ಬೋಲ್ಟ್‌ಗಳು, ತಿರುಪು ಇರುವುದನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ.

    ಹೌದು, ಮದ್ಯವ್ಯಸನನಾಗಿದ್ದ ವ್ಯಕ್ತಿ, ಮದ್ಯ ಸೇವನೆಯನ್ನು ತ್ಯಜಿಸಿದ ನಂತರ ಲೋಹದಂತಹ ವಸ್ತುಗಳನ್ನು ಸೇವಿಸಲು ಆರಂಭಿಸಿದ್ದಾನೆ. ಆದರೆ ನಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತನನ್ನು ಬಾಲ್ಟಿನ್ ನಗರದ ಕ್ಲೈಪೆಡಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:  ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

    Nail bolt

    ಈ ವೇಳೆ ವ್ಯಕ್ತಿ ಹೊಟ್ಟೆಯನ್ನು ಎಕ್ಸ್ ರೇ ಮಾಡಿದ ವೈದ್ಯರಿಗೆ 4 ಇಂಚಿರುವ ಆತನ ಹೊಟ್ಟೆಯಲ್ಲಿ ಲೋಹದ ತುಂಡುಗಳಿರುವ ವಿಚಾರ ತಿಳಿದುಬಂದಿದೆ. ಮನುಷ್ಯ ದೇಹದಲ್ಲಿ ಇಷ್ಟೆಲ್ಲಾ ಇದ್ದರೂ ಆತ ಇದ್ದಾನೆ ಎಂದರೆ ಇದು ಸಾಮಾನ್ಯವಾದಂತಹ ಪ್ರಕರಣವಲ್ಲ. ಇದೊಂದು ವಿಭಿನ್ನವಾದಂತಹ ಪ್ರಕರಣ ಎಂದು ವೈದ್ಯರು ತಿಳಿಸಿದ್ದಾರೆ.

    ನಂತರ ಸತತ ಮೂರಗಂಟೆಗಳ ಎಲ್ಲಾ ಲೋಹದ ವಸ್ತುಗಳನ್ನು ಹೊರ ತೆಗೆಯುವ ಮೂಲಕ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತಂತೆ ವೈದ್ಯ ಸರುನಾಸ್ ಡೈಲಿಡೆನಾ, ಎಕ್ಸ್ ರೇ ಬಳಿಕ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ವ್ಯಕ್ತಿಯ ಹೊಟ್ಟೆಯಿಂದ ಎಲ್ಲಾ ವಿದೇಶಿ ಲೋಹಗಳನ್ನು ಹೊರತೆಗೆಯಲಾಯಿತು. ಈ ವೇಳೆ ಸಣ್ಣ, ಸಣ್ಣ ಲೋಹಗಳನ್ನು ಹೊಟ್ಟೆಯಿಂದ ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಜನಸಂದಣಿ ಮಧ್ಯೆಯೇ ಮಹಿಳೆ ಬರ್ಬರ ಹತ್ಯೆ – ಬೆಚ್ಚಿಬಿದ್ದ ದೆಹಲಿ ಮಂದಿ

    ಈ ಸಂಬಂಧ ಕ್ಲೈಪೆಡಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಆಲ್ಗಿರ್ದಾಸ್ ಸ್ಪೆಪಾವಿಸಿಯಸ್ ನಾವು ಈ ರೀತಿಯ ಪ್ರಕರಣವನ್ನು ಇಲ್ಲಿಯವರೆಗೂ ನೋಡೆ ಇಲ್ಲ. ಕಳೆದ ಒಂದು ತಿಂಗಳ ಹಿಂದೆ ಮದ್ಯಸೆವನೆಯನ್ನು ನಿಲ್ಲಿಸಿದ ನಂತರ ಲೋಹಗಳನ್ನು ನುಂಗಲು ವ್ಯಕ್ತಿ ಆರಂಭಿಸಿದ. ಇದೀಗ ವ್ಯಕ್ತಿ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.

  • ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಕಾರವಾರ: ಕುಮಟಾ ಪಟ್ಟಣದ ಸುಭಾಸ್ ರಸ್ತೆಯ ಪ್ರಸಿದ್ಧ ಡಾ.ಜಾನು ಆಸ್ಪತ್ರೆಯಲ್ಲಿ ಗರ್ಭಿಣಿ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ್ದು, ತಾಯಿ, ಮಗು ಸುರಕ್ಷಿತರಾಗಿದ್ದಾರೆ.

    ಜಿಲ್ಲೆಯಲ್ಲಿಯೇ ಪ್ರಸಿದ್ಧಿಗಳಿಸಿರುವ ಡಾ.ಜಾನು ಮಣಕಿಕರ್ಸ್ ಮೆಟರ್ನಿಟಿ ಮತ್ತು ನರ್ಸಿಂಗ್ ಹೋಂನಲ್ಲಿ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದವರು ಗೋಕರ್ಣದ ಗಂಗಾವಳಿ ನಿವಾಸಿಯಾದ 24 ವರ್ಷದ ಹಲೀಮಾ ಸಾದಿಕ್ ಸಾಬ್. ಇವರಿಗೆ 7ನೇ ತಿಂಗಳಿನಲ್ಲೇ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣ ಜಾನು ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಗರ್ಭಿಣಿಯನ್ನು ಪರೀಕ್ಷಿಸಿದ ಡಾ.ಪ್ರಶಾಂತ್ ಮಣಕಿಕರ್ ಅವರು ನಾರ್ಮಲ್ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಸುರಕ್ಷಿತ ಮತ್ತು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದರಿಂದ ಹಲೀಮಾ ಸಾದಿಕ್ ಸಾಬ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 664 ಪಾಸಿಟಿವ್ ಕೇಸ್, 8 ಸಾವು

    ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಆದರೂ ಚಿಕ್ಕ ಶಿಶುಗಳ ಆರೋಗ್ಯ ಸುರಕ್ಷತಾ ದೃಷ್ಠಿಯಿಂದ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಶಿಶುಗಳನ್ನು ಮಣಿಪಾಲ ಆಸ್ಪತ್ರೆಯ ಶಿಶು ಸುರಕ್ಷತಾ ಕೇಂದ್ರದಲ್ಲಿ ಇರಿಸಲಾಗಿದೆ. ಜಾನು ಆಸ್ಪತ್ರೆಯ ಡಾ ಪ್ರಶಾಂತ ಮಣಕಿಕರ್ ಅವರು ಉತ್ತಮ ಸ್ತ್ರೀರೋಗ ತಜ್ಞ ವೈದ್ಯರಾಗಿದ್ದು, ಅವರು 10 ವರ್ಷಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗಲೂ ಎರಡು ಗರ್ಭೀಣಿಯರಿಗೆ ಈ ರೀತಿ ಯಶಸ್ವಿ ಹೆರಿಗೆ ಮಾಡಿಸಿದ್ದು, ಅವರು ಕೂಡ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅದರಂತೆ ಡಾ ಪ್ರಶಾಂತ್ ಮಣಕಿಕರ್ ಅವರ ಅಜ್ಜ ಜಾನು ಮಣಕಿಕರ್ ಮತ್ತು ತಂದೆ ಕಮಲಾಕರ್ ಮಣಕಿಕರ್ ಪ್ರಸಿದ್ಧ ವೈದ್ಯರಾಗಿದ್ದರು. ಇದನ್ನೂ ಓದಿ: ಮಕ್ಕಳ ಸ್ನೇಹ ಬೆಳೆಸಿದ ಕಾಡು ಗಿಳಿ- ಫೋಟೋ ವೈರಲ್

    ಡಾ ಜಾನು ಎಂದರೆ ಇಡೀ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡ ವೈದ್ಯರಾಗಿದ್ದರು. ಅಜ್ಜ ಮತ್ತು ತಂದೆಯವರ ಸೇವಾಭಾವವನ್ನು ಡಾ.ಪ್ರಶಾಂತ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದು, ತಮ್ಮ ಅಜ್ಜನ ಹೆಸರಿನಲ್ಲಿರುವ ಆಸ್ಪತ್ರೆಯಲ್ಲೂ ಬಡ ಜನರಿಗೆ ಅತೀ ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ 1964ರಲ್ಲಿ ಆರಂಭವಾದ ಡಾ.ಜಾನು ಮಣಕಿಕರ್ಸ್ ಮೆಟರನಿಟಿ ಮತ್ತು ನರ್ಸಿಂಗ್ ಹೋಮ್ 57 ವರ್ಷಗಳಿಂದ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ ಜಿಲ್ಲೆಯಲ್ಲಿಯೇ ಹೆಸರುಗಳಿಸಿದೆ. ಈ ಪ್ರಸಿದ್ಧ ಆಸ್ಪತ್ರೆಗೆ ನ್ಯಾಷನಲ್ ಎಕ್ರಿಡೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ ಆ್ಯಂಡ್ ಹೆಲ್ತ್ ಕೇರ್ ಪ್ರೊವೈಡರ್ ಎಂಬ ಪ್ರಮಾಣ ಪತ್ರ ಕೂಡ ದೊರೆತ್ತಿರುವುದು ರೋಗಿಗಳಿಗೆ ವೈದ್ಯರ ಬಗ್ಗೆ ಇನ್ನು ಹೆಚ್ಚಿನ ವಿಶ್ವಾಸ ಮೂಡುವಂತೆ ಮಾಡಿದೆ.

  • ವೈದ್ಯರ ಎಡವಟ್ಟು- ಕೊರೊನಾ ಲಸಿಕೆ ಬದಲು ರೇಬಿಸ್ ವ್ಯಾಕ್ಸಿನ್

    ವೈದ್ಯರ ಎಡವಟ್ಟು- ಕೊರೊನಾ ಲಸಿಕೆ ಬದಲು ರೇಬಿಸ್ ವ್ಯಾಕ್ಸಿನ್

    ಮುಂಬೈ: ವ್ಯಕ್ತಿಯೋರ್ವನಿಗೆ ಕೋವಿಡ್ ಲಸಿಕೆ ಬದಲು ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗಿದೆ. ಇದರಿಂದ ಆ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‍ನನ್ನು ಅಮಾನತು ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡಿರುವ ವಿಷಯ ಗೊತ್ತಾಗುತ್ತಿದ್ದಂತೆ ನಿರ್ಲಕ್ಷ್ಯ ವಹಿಸಿದ ವೈದ್ಯ ಹಾಗೂ ನರ್ಸ್‍ನನ್ನು ಅಮಾನತು ಮಾಡಲಾಗಿದೆ. ಇಲ್ಲಿನ ಸ್ಥಳೀಯರಾದ ರಾಜಕುಮಾರ್ ಯಾದವ್ ಕಲ್ವಾದಲ್ಲಿರುವ ಸರ್ಕಾರಿ ಮೆಡಿಕಲ್ ಸೆಂಟರ್‍ನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ತೆರಳಿದ್ದರು. ಆದರೆ ಅಲ್ಲಿ ಆ್ಯಂಟಿ ರೇಬಿಸ್ ಲಸಿಕೆಯ ಕ್ಯೂನಲ್ಲಿ ನಿಂತ ಅವರಿಗೆ ವೈದ್ಯರು ಯಾವ ಪ್ರಶ್ನೆಯನ್ನೂ ಕೇಳದೆ ಆ್ಯಂಟಿ ರೇಬಿಸ್ ಲಸಿಕೆ ಹಾಕಿದ್ದಾರೆ.

    ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡ ಬಳಿಕ ಎರಡನೇ ಲಸಿಕೆಗೆ ಯಾವಾಗ ಬರಬೇಕೆಂದು ಕೇಳಿದಾಗ ಅಲ್ಲಿನ ಸಿಬ್ಬಂದಿ ಆತನಿಗೆ ನೀಡಿದ್ದು ರೇಬಿಸ್ ಲಸಿಕೆ ಎಂದು ತಿಳಿಸಿದ್ದಾರೆ. ಇದರಿಂದ ಆಘಾತಗೊಂಡ ಆ ವ್ಯಕ್ತಿ ಬೇರೆ ವೈದ್ಯರ ಬಳಿ ಹೋಗಿ ವಿಷಯ ತಿಳಿಸಿದ್ದಾರೆ. ಆ ವ್ಯಕ್ತಿ ಆರೋಗ್ಯದಿಂದಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಆದರೆ ಯಾವ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ ಎಂಬುದನ್ನು ವಿಚಾರಿಸದೆ ನಿರ್ಲಕ್ಷ್ಯ ತೋರಿದ್ದಕ್ಕೆ ವೈದ್ಯರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್

    ತನಗೆ ತಪ್ಪು ಲಸಿಕೆ ನೀಡಿದ ಬಗ್ಗೆ ರಾಜಕುಮಾರ್ ಯಾದವ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಜೆಕ್ಷನ್ ನೀಡಿದ ವೈದ್ಯೆ, ನರ್ಸ್‍ನನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ

    ಈ ರೀತಿಯ ಘಟನೆಗಳು ನಮ್ಮ ಆಸ್ಪತ್ರೆಯಲ್ಲಿ ಹಿಂದೆ ನಡೆದಿಲ್ಲ, ಅವರು ತಪ್ಪಾಗಿ ಬೇರೆ ಕ್ಯೂನಲ್ಲಿ ನಿಂತಿದ್ದರಿಂದ ಈ ರೀತಿ ತಪ್ಪಾಗಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಭರವಸೆ ನೀಡಿದ್ದಾರೆ. ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೈದ್ಯರ ತಪ್ಪಿನಿಂದ ಆ ವ್ಯಕ್ತಿಗೆ ಏನಾದರೂ ತೊಂದರೆ ಆಗಿದ್ದರೆ ಯಾರು ಜವಾಬ್ದಾರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ..

  • ಕೋವಿಡ್ ಸಂದರ್ಭ ವಿಶಿಷ್ಟ ಸೇವೆ ಸಲ್ಲಿಸಿದ ಡಾ.ಎ.ಅನಿಲ್ ಕುಮಾರ್​ಗೆ ಚಾಣಕ್ಯ ಪ್ರಶಸ್ತಿ

    ಕೋವಿಡ್ ಸಂದರ್ಭ ವಿಶಿಷ್ಟ ಸೇವೆ ಸಲ್ಲಿಸಿದ ಡಾ.ಎ.ಅನಿಲ್ ಕುಮಾರ್​ಗೆ ಚಾಣಕ್ಯ ಪ್ರಶಸ್ತಿ

    ಬೆಂಗಳೂರು: ಸಮಾಜದ ವಿವಿಧ ರಂಗಗಳಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಮತ್ತು ಕೊಡುಗೆಗಳನ್ನು ನೀಡಿರುವ ಸಾಧಕರಿಗೆ ಮಾಧ್ಯಮ ಸಂವಹನ ಕ್ಷೇತ್ರದ ಸಂಸ್ಥೆಯಾದ ಭಾರತದ ಸಾರ್ವಜನಿಕ ಸಂಬಂಧಗಳ ಮಂಡಳಿ- ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಸಿ.ಆರ್.ಐ.) ಕೊಡುವ ಪ್ರತಿಷ್ಟಿತ ‘ಚಾಣಕ್ಯ ಪ್ರಶಸ್ತಿ’ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ವೈದ್ಯ ಡಾ. ಎ.ಅನಿಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

    ಈ ಸಂಸ್ಥೆಯು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತಿದ್ದು ಈ ವರ್ಷದಲ್ಲಿ ವಿಶೇಷವಾಗಿ ಕೋವಿಡ್-19 ಸಂಕಷ್ಟದಲ್ಲಿ ಪಬ್ಲಿಕ್ ಸರ್ವೀಸ್ ಹೀರೋ(ಸಾರ್ವಜನಿಕ ಸೇವಾ ನಾಯಕ) ಎನ್ನುವ ಪ್ರಶಸ್ತಿಯನ್ನು ಡಾ.ಅನಿಲ್ ಕುಮಾರ್ ಅವುಲಪ್ಪ ಅವರಿಗೆ ನೀಡಲು ಆಯ್ಕೆ ಮಂಡಳಿ ನಿರ್ಧರಿಸಿದ್ದು, ಕೋವಿಡ್ ಸೋಂಕಿನ ಸಂಕಷ್ಟದ ಕಾಲದಲ್ಲಿ ಡಾ.ಅನಿಲ್ ಕುಮಾರ್ ಅವರು ಬಾಗೇಪಲ್ಲಿ ತಾಲೂಕಿನಲ್ಲಿ ಮುತುವರ್ಜಿ ವಹಿಸಿ ವಿಶೇಷ ಚಿಕಿತ್ಸಾ ವಿಧಾನದ ಮೂಲಕ ಜನ ಜಾಗೃತಿ ಮತ್ತು ಸುಮಾರು 160 ಹಳ್ಳಿಗಳಲ್ಲಿ ಸೋಂಕು ತಡೆ ಮತ್ತು ನಿರ್ಣಾಯಕ ಸ್ಥಿತಿಯಲ್ಲಿ ಚಿಕಿತ್ಸೆಯನ್ನು ನೀಡಿರುವುದನ್ನು ಸಂಸ್ಥೆಯು ಶ್ಲಾಘಿಸಿ ಸಾರ್ವಜನಿಕ ಆರೋಗ್ಯ ಸಂರಕ್ಷಣೆಯ ವಿಶಿಷ್ಠ ಸೇವೆಯನ್ನು ಗುರುತಿಸಿದೆ. ಇದನ್ನೂ ಓದಿ: ಸರ್ಕಾರಿ ಕಾರಿನಲ್ಲಿ ಶಾಸಕರ ಮಗನ ಖಾಸಗಿ ದರ್ಬಾರ್

    ಆರೋಗ್ಯ ವ್ಯವಸ್ಥೆಯತ್ತ ಜನ ಬರುವುದಕ್ಕೆ ಬದಲಾಗಿ ಜನರತ್ತ ಆರೋಗ್ಯ ವ್ಯವಸ್ಥೆ ತೆರಳಬೇಕು ಎನ್ನುವ ಮಹತ್ವದ ತಾತ್ವಿಕ ನಿಲುವನ್ನು ಆಧಾರವಾಗಿರಿಸಿಕೊಂಡು ಗ್ರಾಮಗಳಲ್ಲಿ ಸ್ವಯಂಸೇವಕರ ತಂಡಗಳನ್ನು ಕಟ್ಟಿ ಆ ಮೂಲಕ ಗುರುತರ ಸೇವೆ ಸಲ್ಲಿಸುತ್ತಿರುವ ಅನಿಲ್ ಕುಮಾರ್ ಅವರಿಗೆ ಈ ಮಹತ್ವದ ಕಾರ್ಯಕ್ಕೆ ಅನೇಕ ಸಾರ್ವಜನಿಕ ಸೇವಾ ಸಂಸ್ಥೆಗಳು ಮತ್ತು ಜನಪರ ಸಂಘಟನೆಗಳು ಬೆನ್ನೆಲುಬಾಗಿ ನಿಂತಿವೆ. ಈ ಅನುಭವವನ್ನು ರಾಜ್ಯದ ಇತರೆಡೆಯೂ ವಿಸ್ತರಿಸಿದ ಅವರು ವಿಶೇಷವಾಗಿ ಪಶ್ಚಿಮಘಟ್ಟದಲ್ಲಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮುಂತಾದ ಜಿಲ್ಲೆಗಳ ಆದಿವಾಸಿ ಸಮುದಾಯಗಳ ನಡುವೆಯೂ ವೈದ್ಯಕೀಯ ಸೇವೆ ನೀಡಿದ್ದಾರೆ.

    12ನೇ ಸರಣಿಯ ಚಾಣಕ್ಯ ಪ್ರಶಸ್ತಿ -2021 ನ್ನು ಇದೇ 2021ರ ಸೆಪ್ಟೆಂಬರ್ 17 ಮತ್ತು 18ರಂದು ಗೋವಾದ ಪಣಜಿಯಲ್ಲಿ ನಡೆಯುವ 15ನೇಯ ಜಾಗತಿಕ ಸಂವಹನಾ ಸಮಾವೇಶದ ಸಂದರ್ಭದಲ್ಲಿ ನೀಡಲಾಗುವುದು. ಈ ಪ್ರಶಸ್ತೀಯನ್ನು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ರವರು ಪ್ರಧಾನ ಮಾಡಲಿದ್ದಾರೆ ಎಂದು ಸಂಸ್ಥೆಯು ತಿಳಿಸಿದೆ. ಎ.ಬಿ.ಸಿ.ಐ ಸಂಸ್ಥೆಯ ಅದ್ಯಕ್ಷರಾದ ಯೋಗೀಶ್ ಜೋಶಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಪಿ.ಸಿ.ಅರ್.ಐ. ಸಂಸ್ಥೆಯ ಗೌರವ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಎಂ.ಬಿ.ಜಯರಾಮ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇದನ್ನೂ ಓದಿ: ಜನರ ಭಾವನೆಗಳನ್ನ ಕೆಡವಿದವರು ಈಗ ದೇವಸ್ಥಾನ ಕೆಡವಿದ್ದಾರೆ: ಯು.ಟಿ.ಖಾದರ್

    ಈಗಾಗಲೇ ಡಾ.ಎ ಅನಿಲ್ ಕುಮಾರ್ ರವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರೋಟರಿಯಂತಹ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವದ ಬೆಂಬಲ ಸೂಚಿಸಿವೆ. ಈಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಸಂಘ-ಸಂಸ್ಥೆಗಳು, ಹಿತೈಷಿಗಳು ಅವರನ್ನು ಅಭಿನಂದಿಸಿದ್ದಾರೆ. ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕ ರಂಗದಲ್ಲಿ ಬಹುಮುಖಿ ಕೊಡುಗೆ ನೀಡಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ: 7 ಕೋಟಿ ಮೊತ್ತದ ಅಡಿಕೆಯ ಜೊತೆ 7 ಲಾರಿ ಜಪ್ತಿ – 7 ಮಂದಿ ಅರೆಸ್ಟ್

     

  • ಮೊಬೈಲ್ ನುಂಗಿ 4 ದಿನ ಹೊಟ್ಟೆಯಲ್ಲಿಟ್ಟುಕೊಂಡ

    ಮೊಬೈಲ್ ನುಂಗಿ 4 ದಿನ ಹೊಟ್ಟೆಯಲ್ಲಿಟ್ಟುಕೊಂಡ

    ವಾಷಿಂಗ್ಟನ್: ಫೋನನ್ನು ವ್ಯಕ್ತಿ ನುಂಗಿದ್ದು, ಆಪರೇಷನ್ ಮೂಲಕವಾಗಿ ಹೊರಗೆ ತೆಗೆದಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

    33 ವರ್ಷದ ಫಿನ್ನಿಷ್ ಕಫನಿಯ ಮಾಜಿ ಊದ್ಯೋಗಿ ಫೋನ್ ನುಂಗಿದ್ದ ವ್ಯಕ್ತಿಯಾಗಿದ್ದಾನೆ. ಮೊಬೈಲ್ ನಾಲ್ಕು ದಿನಗಳಕಾಲ ವ್ಯಕ್ತಿಯ ಹೊಟ್ಟೆಯಲ್ಲಿ ಇತ್ತು. ಮೊಬೈಲ್ ಡೈಜೆಸ್ಟ್ ಆಗಿಲ್ಲ. ಹೀಗಾಗಿ ಆಪರೇಷನ್ ಮೂಲಕವಾಗಿ ಹೊರತಗೆ ತೆಗೆಯಬೇಕಾಯಿತ್ತು. ಮೂಬೈಲ್ ಬ್ಯಾಟರಿಯಲ್ಲಿರುವ ಕೊರ್ರೊಸಿವ್ ಆ್ಯಸಿಡ್ ಲೀಕ್ ಆಗುವ ಸಾಧ್ಯತೆ ಇತ್ತು. ಇದರಿಂದ ಪ್ರಾಣವೇ ಹೋಗುವ ಸಾಧ್ಯತೆ ಇತ್ತು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ:  ಒಟ್ಟಾಗಿ ಹೋಗೋಣವೆಂದು ಹೆಚ್‍ಡಿಕೆಗೆ ಹೇಳಿದ್ದೇನೆ: ಮೈತ್ರಿ ಬಗ್ಗೆ ಸಿಎಂ ಸ್ಪಷ್ಟನೆ

    ಹೊಟ್ಟೆಯೊಳಗೆ ಮೊಬೈಲ್ ಮೂರು ತುಂಡುಗಳಾಗಿರುವುದು ಸ್ಕ್ಯಾನ್‍ನಲ್ಲಿ ಕಾಣಿಸಿಕೊಂಡಿತ್ತು. ನಂತರ ವೈದ್ಯರು ಆಪರೇಷನ್ ಪ್ರಾರಂಭಿಸಿದ್ದಾರೆ. ಇದೀಗ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ ಯಾವ ಕಾರಣಕ್ಕಾಗಿ ಮೊಬೈಲ್ ನುಂಗಿದ್ದಾನೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.