Tag: doctor

  • ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ತಿರುವನಂತಪುರಂ: ಕೇರಳದ ಆಲಪ್ಪುಳದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ವಾರ ಆಲಪ್ಪುಳ ಜಿಲ್ಲೆಯ ಕೋಟ್ಟನಾಡ್‍ನಲ್ಲಿ ರೈತರೊಬ್ಬರು ಸಾಕಿದ್ದ ಸಾವಿರಾರು ಬಾತುಕೋಳಿಗಳು ಮತ್ತು ಸ್ಥಳೀಯ ಹಕ್ಕಿಗಳು ಸತ್ತ ಹಿನ್ನೆಲೆ ಅಧಿಕಾರಿಗಳು ಭೋಪಾಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‍ಗೆ ಮಾದರಿಗಳನ್ನು ಕಳುಹಿಸಿದ್ದರು. ಇದೀಗ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿದೆ.

    ಹೀಗಾಗಿ ಹಕ್ಕಿ ಜ್ವರ ಹರಡದಂತೆ ರೋಗ ಪೀಡಿತ ಪ್ರದೇಶದಲ್ಲಿರುವ ಬಾತುಕೋಳಿಗಳನ್ನು ಕೊಲ್ಲಲು ಪಶುವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಇದೀಗ ಪ್ರಕರಣ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು ಮತ್ತು ಇತರ ಪಕ್ಷಿಗಳನ್ನು ನಾಶಗೊಳಿಸಲು ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ಸೋಂಕು ಹರಡುವುದನ್ನು ತಡೆಗಟ್ಟಲು 12 ಕಿ.ಮೀ. ದೂರದಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು, ಗೊಬ್ಬರ ಮತ್ತು ಇತರ ಹಕ್ಕಿಗಳ ಚಲನೆಯ ಮೇಲೆ ನಿರ್ಬಂಧ ಹೇರಲಾಗಿದೆ. ಈ ವರ್ಷ ಕೇರಳದಲ್ಲಿ ಎರಡನೇ ಬಾರಿಗೆ ಹಕ್ಕಿ ಜ್ವರ ದೃಢಪಟ್ಟಿದೆ. ಇದನ್ನೂ ಓದಿ: ರಾವತ್, ಸೇನಾಧಿಕಾರಿಗಳ ಮರಣ ಸಂಭ್ರಮಿಸಿದ ಕಿಡಿಗೇಡಿಗಳ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ

  • ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ಮೆಕ್ಸಿಕೋ: ವಲಸಿಗರನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಪಲ್ಟಿಯಾಗಿ 49 ಮಂದಿ ಸಾವನ್ನಪ್ಪಿದ್ದು, 58 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಮೆಕ್ಸಿಕೋದಲ್ಲಿ ನಡೆದಿದೆ.

    ಈ ಕುರಿತಂತೆ ರಾಜ್ಯ ನಾಗರಿಕ ರಕ್ಷಣಾ ಕಚೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆನೊ ಅವರು, ಘಟನೆಯಲ್ಲಿ 49 ಮಂದಿ ಸಾವನ್ನಪ್ಪಿದ್ದು, 58 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿಯೂ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾವತ್, ಸೇನಾಧಿಕಾರಿಗಳ ಮರಣ ಸಂಭ್ರಮಿಸಿದ ಕಿಡಿಗೇಡಿಗಳ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ

    ಮಧ್ಯ ಅಮೆರಿಕದಿಂದ ಬಂದ ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಟ್ರೈಲರ್ ಗುರುವಾರ ಚಿಯಾಪಾಸ್ ರಾಜ್ಯದ ರಾಜಧಾನಿ ಟಕ್ಸ್‌ಟ್ಲಾ ಗುಟೈರೆಜ್ ಕಡೆಗೆ ತೆರಳುವಾಗ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಆದರೆ ಮೃತರನ್ನು ತಮ್ಮ ರಾಷ್ಟ್ರದವರೆಂದು ಅಲ್ಲಿನ ಸರ್ಕಾರ ದೃಢಪಡಿಸಿಲ್ಲ. ಇನ್ನೂ ಅಪಘಾತದಲ್ಲಿ ಬದುಕುಳಿದಿರುವ ಕೆಲವರನ್ನು ನೆರೆಯ ದೇಶವಾದ ಗ್ವಾಟೆಮಾಲಾದಿಂದ ಬಂದವರು ಎಂದು ಮೊರೆನೊ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಯುವ ಮುಖಂಡನನ್ನು ಚಾಕುವಿನಿಂದ ಇರಿದು ಕೊಂದ್ರು!

    ಟ್ರಕ್‍ನಲ್ಲಿ ಬಹಳಷ್ಟು ಜನ ಇದ್ದಿದ್ದರಿಂದ ಹೆಚ್ಚಿನ ಭಾರವೇ ಅಪಘಾತಕ್ಕೆ ಕಾರಣವಾಗಿರಬಹುದು. ಇನ್ನೂ ಘಟನೆ ವೇಳೆ 107 ಮಂದಿ ಟ್ರಕ್‍ನಲ್ಲಿದ್ದರು. ದಕ್ಷಿಣ ಮೆಕ್ಸಿಕೋದಲ್ಲಿ ಸರಕು ಸಾಗಣೆ ಟ್ರಕ್‍ಗಳಲ್ಲಿ ವಲಸಿಗರ ಕಳ್ಳಸಾಗಣೆ ಸಾಮಾನ್ಯವಾಗಿದ್ದು, ಇದೇ ರೀತಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ ವೇಳೆ ಸಾಕಷ್ಟು ಮಂದಿ ವಲಸಿಗರಿದ್ದರು. ಮತ್ತೆ ಕೆಲ ವಲಸಿಗರು ಬಂಧನ ಭೀತಿಯಿಂದ ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾರೆ.

  • ಚಿಕಿತ್ಸೆ ನೆಪದಲ್ಲಿ ರೋಗಿಗೆ ಲೈಂಗಿಕ ಕಿರುಕುಳ – ಸರ್ಕಾರಿ ವೈದ್ಯನ ಅಮಾನತು

    ಚಿಕಿತ್ಸೆ ನೆಪದಲ್ಲಿ ರೋಗಿಗೆ ಲೈಂಗಿಕ ಕಿರುಕುಳ – ಸರ್ಕಾರಿ ವೈದ್ಯನ ಅಮಾನತು

    ಚೆನ್ನೈ: ಚಿಕಿತ್ಸೆ ಹೆಸರಿನಲ್ಲಿ ವೈದ್ಯನೊಬ್ಬ ರೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಮಿಳುನಾಡಿನ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ನಡೆದಿದೆ.

    24 ವರ್ಷದ ರೋಗಿಯೊಬ್ಬರು ವೈದ್ಯ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ. ಈ ಪ್ರಕರಣ ಕುರಿತಂತೆ ತನಿಖೆ ನಡೆಸಲು ಆಸ್ಪತ್ರೆಯು ಆಂತರಿಕ ಸಮಿತಿಯನ್ನು ರಚಿಸಿತು. ಸಮಿತಿಯ ಪ್ರಾಥಮಿಕ ಫಲಿತಾಂಶದ ಆಧಾರದ ಮೇಲೆ ಇದೀಗ ಆರೋಪಿ ವೈದ್ಯರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ:  ಅಫ್ಘಾನ್ ಹುಡುಗಿಯರ ಪರ ನಿಂತ ಮಲಾಲಾ ಯೂಸುಫ್ ಝಾಯಿ

    ಕಿಡ್ನಿ ಕಸಿ ಮಾಡಿಸಿಕೊಂಡಿರುವ ರೋಗಿ ಸ್ಕ್ಯಾನಿಂಗ್‍ಗಾಗಿ ಆಸ್ಪತ್ರೆಗೆ ಹೋಗಿದ್ದ ವೇಳೆ ವೈದ್ಯ ತನಗೆ ರೇಡಿಯಾಲಜಿಸ್ಟ್ ಪರೀಕ್ಷೆಯ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನವೆಂಬರ್ 27ರಂದು ಆಸ್ಪತ್ರೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಪ್ರಕರಣ ಪತ್ತೆ – ಇಬ್ಬರಿಗೆ ಸೋಂಕು

    ಆಕೆಯ ದೂರಿನ ಆಧಾರದ ಮೇಲೆ ಆರೋಪಿ ಡಾ. ಚಕ್ರವರ್ತಿ ವಿರುದ್ಧ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಆಸ್ಪತ್ರೆಯ ಡೀನ್ ಹೇಳಿದ್ದಾರೆ. ಆಸ್ಪತ್ರೆಯ ಸಮಿತಿಯು ಶುಕ್ರವಾರ ಸಂಜೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಬಳಿಕ ವೈದ್ಯರನ್ನು ಅಮಾನತುಗೊಳಿಸಲಾಗಿದೆ.

  • ಓಮಿಕ್ರಾನ್ ಖಿನ್ನತೆಯಿಂದ ಮಡದಿ, ಮಕ್ಕಳನ್ನು ಕೊಂದ ವೈದ್ಯ

    ಓಮಿಕ್ರಾನ್ ಖಿನ್ನತೆಯಿಂದ ಮಡದಿ, ಮಕ್ಕಳನ್ನು ಕೊಂದ ವೈದ್ಯ

    ಲಕ್ನೋ: ಖಿನ್ನತೆಗೆ ಒಳಗಾಗಿದ್ದ ವೈದ್ಯನೊಬ್ಬ ಪತ್ನಿ ಹಾಗೂ ಮಕ್ಕಳನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಕಲ್ಯಾಣ್‍ಪುರ ಪ್ರದೇಶದಲ್ಲಿ ನಡೆದಿದೆ.

    ಘಟನೆ ಬಳಿಕ ಪರಾರಿಯಾಗಿರುವ ವೈದ್ಯ ಕೊರೊನಾ ಹೊಸ ರೂಪಾಂತರ ತಳಿ ಓಮಿಕ್ರಾನ್ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗುತ್ತಿದೆ. ಕೊಲೆ ಮಾಡಿರುವ ವಿಚಾರ ಕುರಿತಂತೆ ಆರೋಪಿ ತನ್ನ ಸಹೋದರನಿಗೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಮುಂಚೂಣಿ ಕಾರ್ಯಕರ್ತರಾಗಿ 10 ತಿಂಗಳ ಬಳಿಕ ಲಸಿಕೆಯ ಮೊದಲ ಡೋಸ್‌ ಪಡೆದ ʼಮಹಾʼ ಸರ್ಕಾರದ ಸಿಎಸ್‌

    ಆರೋಪಿಯ ಸಹೋದರ ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ತನ್ನ ಪತ್ನಿ ಹಾಗೂ ಮಕ್ಕಳಿಬ್ಬರನ್ನು ಹತ್ಯೆಗೈದು ನಂತರ ವಾಟ್ಸಾಪ್‍ನಲ್ಲಿ ಸಹೋದರನಿಗೆ ಮಾಹಿತಿ ನೀಡಿದ್ದು, ತಾನು ಖಿನ್ನತೆಗೆ ಒಳಗಾಗಿರುವುದಾಗಿ ತಿಳಿಸಿದ್ದಾನೆ. ಸದ್ಯ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ

  • ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ?

    ಬೆಂಗಳೂರು: ಓಮಿಕ್ರೋನ್ ವೈರಸ್ ಸೋಂಕಿತ ವೈದ್ಯನ ಪತ್ನಿಗೂ  ಸೋಂಕು ದೃಢಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.

    ಬೆಂಗಳೂರಿನಲ್ಲಿ ಗುರುವಾರ ಇಬ್ಬರು ವ್ಯಕ್ತಿಗಳಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಸೊಂಕಿತ ವೈದ್ಯರೊಬ್ಬರ ಪತ್ನಿಗೂ ಇದೀಗ ಓಮಿಕ್ರೋನ್ ವೈರಸ್ ತಗುಲಿರುವ ಅನುಮಾನ ವ್ಯಕ್ತವಾಗುತ್ತಿದೆ. ಸದ್ಯ ಈ ಸಂಬಂಧ ಆರೋಗ್ಯ ಇಲಾಖೆ ಇಂದು ಸಂಜೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಆಫ್ರಿಕಾದಿಂದ ಬಂದವರಲ್ಲಿ, ಬೆಂಗಳೂರಿಂದ ಎಲ್ಲೂ ಹೋಗದವರಲ್ಲಿ ಕಾಣಿಸಿತು ಒಮಿಕ್ರಾನ್!

    ಓಮಿಕ್ರಾನ್ ಸೊಂಕಿತನ ಪತ್ನಿ ಕೂಡ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ವೈದ್ಯೆಯ ಸಂಪರ್ಕಕ್ಕೆ ಬಂದಿದ್ದ 30 ಜನ ಪ್ರಾಥಮಿಕ, 90 ದ್ವಿತೀಯ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ವೈದ್ಯೆಗೆ 41 ವರ್ಷವಾಗಿದ್ದು, ಮೊದಲು ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ನಂತರ ಜಿನೊಮ್ ಸೀಕ್ವೆನ್ಸ್ ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಜಿನೊಮ್ ಸೀಕ್ವೆನ್ಸ್ ವರದಿಯಲ್ಲಿ ವೈದ್ಯೆಗೆ ಓಮಿಕ್ರಾನ್ ಸೋಂಕು ಧೃಡಪಟ್ಟಿದೆ ಎನ್ನಲಾಗುತ್ತಿದೆ.  ಸೋಂಕಿತ ವೈದ್ಯೆಯ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತರನ್ನು ಐಸೋಲೇಟ್ ಮಾಡಲಾಗಿದೆ: ಅಶ್ವಥ್ ನಾರಾಯಣ್

    ಸೋಂಕಿತ ವೈದ್ಯೆಯ ಟ್ರಾವೆಲ್ ಹಿಸ್ಟರಿ:
    * ಖಾಸಗಿ ಹೋಟೆಲ್‍ನಲ್ಲಿ ತುಂಬಾ ಜನರ ಸಂಪರ್ಕಕ್ಕೆ ಬಂದಿರುವ ವೈದ್ಯೆ
    * ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದರೆ ಸಾಕಷ್ಟು ರೋಗಿಗಳ ಸಂಪರ್ಕಕ್ಕೆ ಬಂದಿರುವ ವೈದ್ಯೆ
    * ಮಹಾದೇವಪುರ ವಲಯದಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ವೈದ್ಯೆ
    * ಮಹಾದೇವಪುರದಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಜನರ ಸಂಪರ್ಕಕ್ಕೆ ಬಂದಿರುವ ವೈದ್ಯೆ

    ಸದ್ಯ ಸೋಂಕಿತ ಪತಿ ಹಾಗೂ ಪತ್ನಿ ಇಬ್ಬರಿಗೂ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಓಮಿಕ್ರಾನ್ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಮುಂದೆ ಇನ್ನಷ್ಟು ಅನಾಹುತ ಸೃಷ್ಟಿಸುತ್ತದೆಯೋ ಎಂಬ ಆತಂಕ ಜನರಲ್ಲಿ ಮೂಡಿದೆ.

  • ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

    ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

    ಲಂಡನ್: ತನ್ನ ಜನನ ಮಾಡಿಸಿದ ವೈದ್ಯರ ಮೇಲೆ ಕೇಸು ಹಾಕಿ ಮಹಿಳೆ ಗೆದ್ದಿರುವ ವಿಚಿತ್ರ ಘಟನೆ ಲಂಡನ್‍ನಲ್ಲಿ ನಡೆದಿದೆ.

    ಮೆದುಳು ಬಳ್ಳಿ ಮತ್ತು ಬೆನ್ನು ಮೂಳೆ ಸರಿಯಾಗಿ ಜೋಡಣೆಯಾದಿರುವಂತಹ ಸ್ಟೈನಾ ಬಿಫಿಡಾ ಖಾಯಿಲೆಯಿಂದ ಬಳಲುತ್ತಿರುವ ಇವಿ ಟೂಂಬಿಸ್ ಎಂಬ ಮಹಿಳೆ ತನ್ನ ತಾಯಿಯ ವೈದ್ಯ ಡಾ.ಫಿಲಿಪ್ ವಿಡುದ್ಧ ದೂರು ನೀಡಿದ್ದಾರೆ. ತನ್ನ ತಾಯಿ ಗರ್ಭಿಣಿಯಾಗಿದ್ದಾಗ ವೈದರು ಸರಿಯಾದ ಮಾರ್ಗದರ್ಶನ ನೀಡಿದ್ದರೆ, ಅವರು ಗರ್ಭಿಣಿಯಾಗುವುದನ್ನು ಮುಂದೂಡುತ್ತಿದ್ದರು. ಆಗ ಈ ಸಮಸ್ಯೆ ತನ್ನನ್ನು ಕಾಡುತ್ತಿರಲಿಲ್ಲ. ಆದರೆ ವೈದ್ಯರು ಸರಿಯಾದ ಮಾರ್ಗದರ್ಶನ ನೀಡದೇ ಇದ್ದುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ. ತನ್ನಾ ಆರೋಗ್ಯ ಸಮಸ್ಯೆಗೆ ತನ್ನ ತಾಯಿಯ ವೈದ್ಯರೇ ಕಾರಣ ಎಂದು  ಪ್ರಕರಣ ದಾಖಲಿಸಿ ಗೆದ್ದ ಘಟನೆ ಲಂಡನ್‍ನಲ್ಲಿ ನಡೆದಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!

    20 ವರ್ಷದ ಇವಿ ದಾಖಲಿಸಿರುವ ಮೊಕದ್ದಮೆಯನ್ನು ಆಲಿಸಿರುವ ಲಂಡನ್ ಹೈಕೋರ್ಟ್, ಇವರ ಈ ಪರಿಸ್ಥಿತಿಗೆ ಅವರ ತಾಯಿಯ ವೈದ್ಯರೇ ಕಾರಣ ಎಂದು ತೀರ್ಪುನೀಡಿದ್ದು, ಅವರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ

  • ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಗೆ ಹೃದಯಾಘಾತ

    ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಗೆ ಹೃದಯಾಘಾತ

    ಹೈದರಾಬಾದ್: ಹೃದಯಾಘಾತವಾದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯನಿಗೂ ಹೃದಯಾಘಾತವಾಗಿ ಇಬ್ಬರೂ ಸಾವನ್ನಪಿರುವ ಘಟನೆ ನಡೆದಿದೆ.

    ಲಕ್ಷ್ಮಣ್, ಸರ್ಜು ಮೃತರಾಗಿದ್ದಾರೆ. ಹೃದಯಾಘಾತವಾದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯನೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ತೆಲಂಗಾಣದ ಕಾಮಾರೆಡ್ಡಿಯ ಜಿಲ್ಲೆಯ ಗಾಂಧಾರಿ ಮಂಡಲದ ಗುಜ್ಜುತಾಂಡ ಎಂಬ ಪ್ರದೇಶಕ್ಕೆ ಸೇರಿದ ಸರ್ಜು ಎಂಬಾತನಿಗೆ ಹೃದಯಾಘಾತವಾಗಿತ್ತು. ಕುಟುಂಬಸ್ಥರು ತಕ್ಷಣ ಆತನನ್ನು ಗಾಂಧಾರಿ ಪ್ರದೇಶಲ್ಲಿರುವ ಖಾಸಗಿ ನಸಿರ್ಂಗ್ ಹೋಮ್‍ಗೆ ಕರೆ ತಂದಿದ್ದರು. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ

    ಖಾಸಗಿ ನಸಿರ್ಂಗ್ ಹೋಮ್‍ನಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯ ಲಕ್ಷ್ಮಣ್ ಅವರಿಗೂ ಹೃದಯಾಘಾತವಾಗಿದ್ದೂ, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಮಧ್ಯೆ, ರೋಗಿಯ ಸಂಬಂಧಿಕರು ತಕ್ಷಣ ಸರ್ಜು ಅವರನ್ನು ಕಾಮರೆಡ್ಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ರೋಗಿ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಇದನ್ನೂ ಓದಿ:  ಅಪ್ಪು ಚಿತ್ರದ ದೃಶ್ಯಗಳನ್ನ ವೇದಿಕೆಯಲ್ಲಿ ಮರುಸೃಷ್ಟಿದ ಕಿರುತರೆ ಕಲಾವಿದರ ತಂಡ

    ಡಾ.ಲಕ್ಷ್ಮಣ್ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದ ಕಾಮರೆಡ್ಡಿ ನಿವಾಸಿಗಳು ಆಸ್ಪತ್ರೆಯ ಬಳಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಸದಾ ಆರೋಗ್ಯವಂತರಾಗಿ ಕಾಣುತ್ತಿದ್ದ ಯುವ ವೈದ್ಯನ ಸಾವಿನಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

  • ಆಸ್ಪತ್ರೆಯಲ್ಲೇ ಮಂಗಳೂರಿನ ವೈದ್ಯಾಧಿಕಾರಿಯ ರಂಗಿನಾಟ – ಮಹಿಳಾ ಸಿಬ್ಬಂದಿ ಜೊತೆ ಚೆಲ್ಲಾಟ

    ಆಸ್ಪತ್ರೆಯಲ್ಲೇ ಮಂಗಳೂರಿನ ವೈದ್ಯಾಧಿಕಾರಿಯ ರಂಗಿನಾಟ – ಮಹಿಳಾ ಸಿಬ್ಬಂದಿ ಜೊತೆ ಚೆಲ್ಲಾಟ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬನ ಕಾಮಪುರಾಣ ಬಯಲಾಗಿದೆ.

    ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟ ಆಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ಆಸ್ಪತ್ರೆಯ 9 ಮಂದಿ ಮಹಿಳಾ ಸಿಬ್ಬಂದಿ ಜೊತೆಗೆ ರತ್ನಾಕರ್ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ತೊಡೆಯ ಓರ್ವ ಮಹಿಳೆಯನ್ನು ಕೂರಿಸಿದ್ದಾನೆ. ಮಹಿಳಾ ಸಿಬ್ಬಂದಿ ಮೂಲಕ ರತ್ನಾಕರ್ ಪಾದ ಸೇವೆ ಮಾಡಿದ್ದಾನೆ. ಇಬ್ಬಿಬ್ಬರು ಮಹಿಳಾ ಸಿಬ್ಬಂದಿಯನ್ನು ಕೂರಿಸಿಕೊಂಡು ರತ್ನಾಕರ್ ಆಸ್ಪತ್ರೆಯಲ್ಲಿಯೇ ರಂಗಿನಾಟ ಆಡಿದ್ದಾನೆ. ಇದನ್ನೂ ಓದಿ: ಆಫ್ರಿಕಾದಲ್ಲಿ ರೂಪಾಂತರ ಕೋವಿಡ್ ತಳಿ ಪತ್ತೆ – ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

    ಸರ್ಕಾರಿ ವೈದ್ಯನಾಗಿರುವ ರತ್ನಾಕರ್ ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿದ್ದಾನೆ. ಒಂದು ವೇಳೆ ರತ್ನಾಕರ್ ಜೊತೆಗೆ ಸಹಕರಿಸದ ಸಿಬ್ಬಂದಿಯನ್ನು ಕೆಲಸದಿಂದ ತೆಗೆಸುವ ಅಥವಾ ಟ್ರಾನ್ಸ್‍ಫರ್ ಮಾಡಿಸುವ ಹೀಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ. ಈ ಭಯಕ್ಕೆ ಮಹಿಳಾ ಸಿಬ್ಬಂದಿ ಆತ ಹೇಳಿದಂತೆ ಕೇಳುತ್ತಿದ್ದರು.

    ರತ್ನಾಕರ್ ಮಹಿಳಾ ಸಿಬ್ಬಂದಿ ಜೊತೆ ಆಗಾಗ ಟ್ರಿಪ್ ಹೋಗುತ್ತಿದ್ದ. ಈ ಸಂದರ್ಭದಲ್ಲೂ ಆತ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ರತ್ನಾಕರ ಕಿರುಕುಳದಿಂದ ನೊಂದ ಮಹಿಳೆಯರು ಆರೋಪಿ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

  • ಎರಡು ಲಸಿಕೆ ಪಡೆದಿದ್ದರೂ ಕೊರೊನಾಗೆ ವೈದ್ಯೆ ಬಲಿ

    ಎರಡು ಲಸಿಕೆ ಪಡೆದಿದ್ದರೂ ಕೊರೊನಾಗೆ ವೈದ್ಯೆ ಬಲಿ

    ಭೋಪಾಲ್: ಕೋವಿಡ್-19 ಎರಡೂ ಡೋಸ್ ಲಸಿಯನ್ನು ಪಡೆದ 54 ವರ್ಷದ ಮಹಿಳೆಯೊಬ್ಬರು ಕೊರೊನಾ ವೈರಸ್‍ನಿಂದ ಮೃತಪಟ್ಟಿರುವ ಘಟನೆ ಭೋಪಾಲ್‍ನಲ್ಲಿ ನಡೆದಿದೆ. ಒಂದು ವಾರದೊಳಗೆ ಸೋಂಕಿಗೆ ಎರಡನೇ ಬಲಿ ಇದಾಗಿದ್ದು, ಇಬ್ಬರೂ ಕೂಡ ಎರಡು ಡೋಸ್ ಕೊರೊನಾ ಲಸಿಕೆ ಪಡೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭೋಪಾಲ್‍ನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಮಹಿಳೆ ಎರಡೂ ಡೋಸ್  ಲಸಿಕೆಗಳನ್ನು ತೆಗೆದುಕೊಂಡಿದ್ದರು ಎಂದು ಭೋಪಾಲ್‍ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ ಪ್ರಭಾಕರ್ ತಿವಾರಿ ದೃಢಪಡಿಸಿದ್ದಾರೆ.

    ಮೃತ ಮಹಿಳೆ ಭೋಪಾಲ್‍ನ ಖ್ಯಾತ ವೈದ್ಯರಾಗಿದ್ದು, ಕೊರೊನಾ ವೈರಸ್ ದೃಢಪಟ್ಟ ನಂತರ ಅವರನ್ನು ನವೆಂಬರ್ 15ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ

    ಮಹಿಳೆಗೆ 54 ವರ್ಷ ವಯಸ್ಸಾದ್ದು, ಗುರುವಾರ ಮಧ್ಯ ರಾತ್ರಿ 12:30ರ ಸುಮಾರಿಗೆ ಭೋಪಾಲ್‍ನ ಏಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಮಹಿಳೆಗೆ ಯಾವುದೇ ಕಾಯಿಲೆಗಳಿರಲಿಲ್ಲ. ಆದರೆ ಅವರಗೆ ಕೊಂಚ ರಕ್ತದೊತ್ತಡದ ಸಮಸ್ಯೆ ಇತ್ತು. ಅದು ಕೂಡ ನಾರ್ಮಲ್ ಆಗಿತ್ತು ಹೇಳಲಾಗುತ್ತಿದೆ. ಇನ್ನೂ ಮಹಿಳೆಯ ಪತಿ ಕೂಡ ವೈದ್ಯರಾಗಿದ್ದಾರೆ. ಕಳೆದ ವಾರ ಇಂದೋರ್ ನಗರದಲ್ಲಿ ಸಂಪೂರ್ಣ ಲಸಿಕೆ ಪಡೆದ 69 ವರ್ಷದ ವ್ಯಕ್ತಿ ಸೋಂಕಿನಿಂದ ಸಾವನ್ನಪ್ಪಿದ್ದರು. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

  • ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಕಾನೂನು ಕ್ರಮ: ಕಮಿಷನರೇಟ್ ಖಡಕ್ ಎಚ್ಚರಿಕೆ

    ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಕಾನೂನು ಕ್ರಮ: ಕಮಿಷನರೇಟ್ ಖಡಕ್ ಎಚ್ಚರಿಕೆ

    ಹುಬ್ಬಳ್ಳಿ: ವೈದ್ಯರ ಮೇಲೆ ರೋಗಿಗಳ ಸಂಬಂಧಿಕರು ಹಲ್ಲೆ ನಡೆಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹುಬ್ಬಳ್ಳಿ, ಧಾರವಾಡ ಪೊಲೀಸ್ ಕಮಿಷನರೇಟ್ ಲಾಬೂರಾಮ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲೆ ನಡೆಯುವ ಹಲ್ಲೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ನಗರದ ಖ್ಯಾತ ಮನೋರೋಗ ತಜ್ಞ ಡಾ. ವಿನೋದ್ ಕುಲಕರ್ಣಿ (ಪಿಐಎಲ್) ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ವೈದ್ಯರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಇದನ್ನೂ ಓದಿ: ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    ನಗರದ ಕಿಮ್ಸ್ ಸೇರಿ ಎಲ್ಲಾ ಆಸ್ಪತ್ರೆಗಳಲ್ಲಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ, ಕಂಟ್ರೋಲ್ ರೂಮ್ ನಂಬರ್ ಕಡ್ಡಾಯವಾಗಿ ಪ್ರಚಾರ ಪಡಿಸುವಂತೆ ನ್ಯಾಯಾಲಯ ಹೇಳಿತ್ತು. ಈ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಕಮಿಷನರೇಟ್, ಡಾ. ವಿನೋದ ಕುಲಕರ್ಣಿ ಅವರಿಗೆ ಪತ್ರ ಬರೆದು ವೈದ್ಯರಿಗೆ ತೊಂದರೆಯಾದಲ್ಲಿ ದೂರವಾಣಿ ಸಂಖ್ಯೆ ಅಥವಾ ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿದರೆ ಕೂಡಲೇ ಸ್ಥಳಕ್ಕೆ ಆಗಮಿಸಿ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ತೀರ್ಥದಲ್ಲಿ ಕೈ ತೊಳೆದ ಕೇರಳದ ದೇವಸ್ವಂ ಸಚಿವ