ಡಿಸ್ಪುರ್: ಅಸ್ಸಾಂನ ಕಮ್ರೂಪ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್)ನ ಏಳನೇ ಮಹಡಿಯಿಂದ ಬಿದ್ದು ವೈದ್ಯರೊಬ್ಬರು ಬುಧವಾರ ಸಾವನ್ನಪ್ಪಿದ್ದಾರೆ.
ಭಾರೀ ಶಬ್ಧ ಕೇಳಿದ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಸ್ಥಳಕ್ಕೆ ಧಾವಿಸಿ ನೋಡಿದಾಗ ವೈದ್ಯರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸಮೀಪದಲ್ಲಿರುವ ಖಾಸಗಿ ಆಸ್ಪತ್ರೆಗೆ ವೈದ್ಯರನ್ನು ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟ- ದೈನಂದಿನ ಪ್ರಕರಣಗಳಲ್ಲಿ 39% ಜಿಗಿತ
ಮೃತ ದುರ್ದೈವಿಯನ್ನು ಫಾಲ್ಗು ಪ್ರತಿಮ್ ದಾಸ್ ಎಂದು ಗುರುತಿಸಲಾಗಿದೆ. ಘಟನೆ ಕುರಿತಂತೆ ತನಿಖೆ ವೇಳೆ ವೈದ್ಯ ಏಳನೇ ಮಹಡಿಯಿಂದ ಕೆಳಗೆ ಬಿದ್ದಿರುವುದು ತಿಳಿದುಬಂದಿದೆ. ಇದು ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುವುದರ ಬಗ್ಗೆ ತನಿಖೆಯ ನಂತರ ತಿಳಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಷಿಂಗ್ಟನ್: ದಕ್ಷಿಣ ಕ್ಯಾಲಿಫೋರ್ನಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದೊಳಗೆ ವ್ಯಕ್ತಿಯೊಬ್ಬ ನುಗ್ಗಿ ವೈದ್ಯ ಮತ್ತು ಇಬ್ಬರು ದಾದಿಯರನ್ನು ಇರಿದ ಘಟನೆ ನಡೆದಿದೆ.
ವ್ಯಕ್ತಿಯೊಬ್ಬನ ತೋಳಿಗೆ ಗಾಯವಾಗಿತ್ತು. ಇದರಿಂದಾಗಿ ಆತ ತನ್ನ ಕಾರನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಸ್ಯಾನ್ ಫೆರ್ನಾಂಡೋ ವ್ಯಾಲಿಯಲ್ಲಿರುವ ಎನ್ಸಿನೊ ಆಸ್ಪತ್ರೆಯ ತುರ್ತು ಕೋಣೆಗೆ ತೆರಳಿದ್ದ. ಅಲ್ಲಿ ಆತ ಇದ್ದಕ್ಕಿದ್ದಂತೆ ವೈದ್ಯರು ಹಾಗೂ ದಾದಿಯರ ಮೇಲೆ ಚಾಕು ಇರಿದು ಚಿಕಿತ್ಸೆ ನೀಡುವಂತೆ ಕೇಳಿದ್ದಾನೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಷ್ಟೇ ಅಲ್ಲದೇ ಚಾಕು ಇರಿತಕ್ಕೊಳಗಾದ ಒಬ್ಬ ವೈದ್ಯ ಹಾಗೂ ಇಬ್ಬರು ನರ್ಸ್‍ಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಟ್ರಾಮಾ ಸೆಂಟರ್‍ಗೆ ಕರೆದೊಯ್ದಿದ್ದಾರೆ. ಅದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಘಟನೆ ಸಂಬಂಧಿಸಿ ವ್ಯಕ್ತಿಯನ್ನು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಆತನಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಇದನ್ನೂ ಓದಿ: ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಬಂಧನಕ್ಕೂ ಮುನ್ನ 4 ಗಂಟೆಗೂ ಹೆಚ್ಚು ಆಸ್ಪತ್ರೆಯ ಒಳಗೆ ಇದ್ದು, ಹೈಡ್ರಾಮಾ ಮಾಡಿದ್ದಾನೆ. ಘಟನೆ ಹಿನ್ನೆಲೆಯಲ್ಲಿ ಎನ್ಸಿನೊ ಆಸ್ಪತ್ರೆಯ ಮೊದಲ ಮಹಡಿ ಮತ್ತು ಹತ್ತಿರ ಕೆಲವು ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ರೋಗಿಗಳನ್ನು ಅಪಾಯದ ವಲಯದಿಂದ ಹೊರಗೆ ಸ್ಥಳಾಂತರಿಸಿದ್ದೇವೆ. ಆರೋಪಿಯು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ ಎಂದು ಲಾಸ್ ಏಂಜಲೀಸ್ ಪೊಲೀಸ್ ಅಧಿಕಾರಿ ಡ್ರೇಕ್ ಮ್ಯಾಡಿಸನ್ ತಿಳಿಸಿದರು. ಇದನ್ನೂ ಓದಿ: ಟ್ಯೂಷನ್ ನೆಪದಲ್ಲಿ ಮನೆಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ
ತುಮಕೂರು: ರಷ್ಯಾ ಉಕ್ರೇನ್ ಯುದ್ಧದಿಂದಾಗಿ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ತಾಯ್ನಾಡಿಗೆ ವಾಪಸ್ ಆದ ವಿದ್ಯಾರ್ಥಿಗಳ ನೆರವಿಗೆ ಸಿದ್ದಗಂಗಾ ಮಠ ಮುಂದಾಗಿದೆ. ಮೆಡಿಕಲ್ ವ್ಯಾಸಂಗ ಅರ್ಧಕ್ಕೆ ಮೊಟುಕುಗೊಳಿಸಿ ಬಂದ ವಿದ್ಯಾರ್ಥಿಗಳಿಗೆ ಮಠದ ಸಿದ್ದಗಂಗಾ ಮೆಡಿಕಲ್ ಕಾಲೇಜಿನಲ್ಲಿ ಉಚಿತವಾಗಿ ಪ್ರಾಕ್ಟಿಕಲ್ ವ್ಯಾಸಂಗ ಮಾಡಲು ತಾತ್ಕಾಲಿಕ ಅವಕಾಶ ಕಲ್ಪಿಸಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಸಾವಿರಾರು ವೈದ್ಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗಿದೆ. ವೈದ್ಯರಾಗುವ ಕನಸು ಕಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ ತುಮಕೂರಿನ ಸಿದ್ದಗಂಗಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ.
ತುಮಕೂರು ಜಿಲ್ಲೆಯ 27 ವೈದ್ಯ ವಿದ್ಯಾರ್ಥಿಗಳ ಕನಸು ನನಸು ಮಾಡಲು ಮುಂದಾಗಿದೆ. 5 ಮತ್ತು 6ನೇ ಸೆಮಿಸ್ಟರ್‍ನ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲಿನ ಶೈಕ್ಷಣಿಕ ಪಠ್ಯಕ್ಕೆ ತಕ್ಕಂತೆ ಇಲ್ಲಿ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್‍ಗಳಲ್ಲಿ ಪಾಲ್ಗೊಳ್ಳಲು ಹಾಗೂ ರೋಗಿಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಅದು ಮುಂದುವರಿಯಬೇಕು: ರಾಜ್ ಠಾಕ್ರೆ
ಉಕ್ರೇನ್‍ನಿಂದಲೂ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಮಾಡಲಾಗ್ತಿದೆ. ಆದರೆ ವಿದ್ಯಾರ್ಥಿಗಳು ಪ್ರಾಕ್ಟಿಲ್ ಕ್ಲಾಸ್ ಮಿಸ್ ಮಾಡಿಕೊಳ್ತಿದ್ದಾರೆ. ಇದೀಗ ಸಿದ್ದಗಂಗಾ ಮೆಡಿಕಲ್ ಕಾಲೇಜು ಈ ಕೊರಗನ್ನ ನೀಗಿಸಿದೆ. ವಿದ್ಯಾರ್ಥಿಗಳು ಮಧ್ಯಾಹ್ನದವರೆಗೂ ಆನ್‍ಲೈನ್ ತರಗತಿಯಲ್ಲಿ ಪಾಲ್ಗೊಂಡು ಮಧ್ಯಾಹ್ನದ ನಂತರ ಸಿದ್ದಗಂಗಾ ಮೆಡಿಕಲ್ ಕಾಲೇಜಿನಲ್ಲಿ ಪ್ರಾಕ್ಟಿಕಲ್ ತರಗತಿಗೆ ಹಾಜರಾಗಬಹುದಾಗಿದೆ. ಆರಂಭದ ಮೂರು ತಿಂಗಳು ಉಚಿತವಾಗಿ ಪ್ರಾಕ್ಟಿಕಲ್ ವ್ಯಾಸಾಂಗಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಿದ್ದಗಂಗಾ ಆಸ್ಪತ್ರೆ ಎಂ.ಡಿ.ಡಾ. ಪರಮೇಶ್ ತಿಳಿಸಿದ್ದಾರೆ.
ಇಲ್ಲಿ ಪ್ರಾಕ್ಟಿಕಲ್ ಕ್ಲಾಸ್‍ನಲ್ಲಿ ಕಲಿಯುವ ವಿದ್ಯಾರ್ಥಿಗಳು, ಉಕ್ರೇನ್‍ನಲ್ಲೇ ಪರೀಕ್ಷೆ ಬರೆಯಬೇಕಾಗಿದೆ. ಆದ್ರೆ ಅದು ಅಸಾಧ್ಯ. ಹೀಗಾಗಿ ಸ್ಥಳೀಯವಾಗಿಯೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಬೆಂಗಳೂರು: ಸ್ಕಿನ್ ಬ್ಯಾಂಕ್‍ನಿಂದ ಸ್ಕಿನ್ ತರಿಸಿ ಸರ್ಜರಿ ನಡೆಸಬೇಕಿದೆ ಎಂದು ಆ್ಯಸಿಡ್ ಸಂತ್ರಸ್ತೆಯ ಚಿಕಿತ್ಸೆ ಕುರಿತು ಸೇಂಟ್ ಜಾನ್ಸ್ ವೈದ್ಯರ ತಂಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಸಿಡ್ ಸಂತ್ರಸ್ತೆ ಮೂರು ದಿನಗಳ ಹಿಂದೆ ದಾಖಲಾಗಿದ್ದಾರೆ. ಆ್ಯಸಿಡ್ ದಾಳಿಯಿಂದ ಶೇ. 36ರಷ್ಟು ದೇಹದ ಹಲವು ಭಾಗಗಳು ಸುಟ್ಟಿದೆ. ಇದರಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ. ಆದರೆ ನಮ್ಮ ತಂಡವು ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದೇವೆ ಎಂದರು.
ಸಂತ್ರಸ್ತೆಯನ್ನು ಪ್ಲಾಸ್ಟಿಕ್ ಸರ್ಜರಿ ತಂಡವು ನೋಡಿಕೊಳ್ಳುತ್ತಿದೆ. ಅವರಿಗೆ ಹಂತ ಹಂತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದೇವೆ. ಮುಖ, ಕೈ ಕಾಲುಗಳ ಮೇಲೆ ಗಾಯಗಳಾಗಿದೆ. ಇದರಿಂದಾಗಿ ಅನೇಕ ಸರ್ಜರಿಗಳಾಗಬೇಕಿದೆ. ಕ್ರಮೇಣವಾಗಿ ಸ್ವಂತ ಚರ್ಮದಿಂದ ಕವರ್ ಆಗಬೇಕಾಗುತ್ತದೆ. ಚಿಕಿತ್ಸೆ ಮುಗಿಯಲು ಸರಿಸುಮಾರು 2 ತಿಂಗಳು ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ:ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚೆಕ್ ಕೊಟ್ಟ BBMP
ಬೆಂಗಳೂರು: ಶಿವರಾತ್ರಿಗೆ ಶಿವ ಶಿವ ಅಂತಾ ಚಳಿ ಹೊರಟು ಹೋಗಿ, ಬೇಸಿಗೆ ಶುರುವಾಗುತ್ತೆ ಅಂತಾರೆ. ಈ ವರ್ಷದ ಬೇಸಿಗೆ ಆರಂಭವಾಗಿದ್ದು, ಜನರಿಗೆ ಇದ್ರ ಎಫೆಕ್ಟ್ ಜನರಿಗೆ ತಟ್ಟುತ್ತಿದೆ. ಈ ಹೊತ್ತಲ್ಲಿ ಜನರ ಹೆಲ್ತ್ ಸ್ವಲ್ಪ ಕೈ ಕೊಡ್ತಿದೆ. ಬೇಸಿಗೆಯಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಬೇಕು ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಸಿಲಿಕಾನ್ ಸಿಟಿಯಲ್ಲಿ ಬೇಸಿಗೆಯ ತೀವ್ರತೆ ಹೆಚ್ಚುತ್ತಲೇ ಇದೆ. ಮಾರ್ಚ್‍ನಿಂದ ಜೂನ್‍ವರೆಗೂ ಇರುವ ಬೇಸಿಗೆಯ ತೀವ್ರತೆಯಿಂದಾಗಿ ಅದೆಷ್ಟೋ ಜನರು ಆಸ್ಪತ್ರೆಗಳಿಗೂ ದಾಖಲಾಗುತ್ತಾರೆ. ಪ್ರಮುಖವಾಗಿ ಬೇಸಿಗೆಯಲ್ಲಿ ಯಾವ ರೀತಿಯ ಕಾಯಿಲೆಗಳು ಬರುತ್ತವೆ? ಅವುಗಳ ರೋಗಲಕ್ಷಣಗಳು ಏನು? ಯಾವ ರೀತಿ ಆರೋಗ್ಯವನ್ನು ಕಾಪಾಡಬೇಕು ಅಂತ ವೈದ್ಯರು ಒಂದಷ್ಟು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ
ಬೇಸಿಗೆಯಲ್ಲಿ 3 ಹಂತಗಳಲ್ಲಿ ಬಿಸಿಲಿಗೆ ಸಂಬಂಧಿಸಿದೆ ಕಾಯಿಲೆಗಳು ಬರುತ್ತೆ. Heat Exhaustion, Heat Cramps ಹಾಗೂ ಊeಚಿಣ Heat Stroke 3 ಹಂತಗಳಲ್ಲಿ ಕಾಣಿಸಿಕೊಳ್ಳುತ್ತೆ. Heat Exhaustionನಿಂದಾಗಿ ದೇಹನದಲ್ಲಿನ ನೀರಿನ ಅಂಶ ಕ್ಷೀಣಿಸುತ್ತೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆದಾಗ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗಿ ಸುಸ್ತಾಗುತ್ತೆ. ನಂತರ 2ನೇ ಹಂತದಲ್ಲಿ Heat Cramps ನಿಂದಾಗಿ ದೇಹದ ಮಾಂಸಖಂಡಗಳು ಹಿಡಿದಂತಾಗುತ್ತೆ. ಹೊಟ್ಟೆಯ ಹಾಗೂ ಮಂಡಿಯ ಕೆಳಭಾಗದ ಕಾಲಿನಲ್ಲಿ ಹಿಡಿದಂತಾಗುತ್ತೆ. Heat Exhaustion, Heat Cramps ಆದಾಗಲೂ ನಿರ್ಲಕ್ಷ ವಹಿಸಿದರೆ 3ನೇ ಹಂತದಲ್ಲಿ Heat Stroke ಆಗುವಂತ ದಟ್ಟ ಸಾಧ್ಯತೆ ಇರುತ್ತೆ. ಇದರಿಂದಾಗಿ ಮೂತ್ರಪಿಂಡ, ಹೃದಯಕ್ಕೆ ಸಮಸ್ಯೆಯನ್ನು ನಾವೇ ತಂದುಕೊಂಡಂತಾಗುತ್ತೆ. ಇವೆಲ್ಲದರ ಜೊತೆಗೆ Loose Motion ಆಗೋದು, ಹಸಿವಾಗದೇ ಇರೋದು ಕೂಡ ಬೇಸಿಗೆಯ ಲಕ್ಷಣ ಎಂದು ವೈದ್ಯರು ಹೇಳುತ್ತಾರೆ. ಇದನ್ನೂ ಓದಿ: ಬೇಸಿಗೆಯ ಬೇಗೆಗೆ ಮಾಡಿ ತಂಪಾದ ಕಲ್ಲಂಗಡಿ ಸ್ಮೂತಿ
ಬೇಸಿಗೆಯಲ್ಲಿ ಆರೋಗ್ಯವಂತರಾಗಿರಬೇಕು ಅಂದ್ರೆ ಒಂದಿಷ್ಟು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಅಂತಾರೆ ವೈದ್ಯರು. ಯಾವುದೇ ಕಾರಣಕ್ಕೂ ಹೆಚ್ಚಿನ ಕಾಲ ಮಧ್ಯಾಹ್ನದ ಬಿಸಿಲಿನಲ್ಲಿ ಹೊರ ಹೋಗಬಾರದು. ಆಗಾಗ ನೀರು ಕುಡಿಯುತ್ತಲೇ ಇರಬೇಕು. ಮೃದುವಾಗಿರೋ ತಿಳಿ ಬಣ್ಣದ ಗಾಳಿಯಾಡುವಂತಹ ಕಾಟನ್ ಬಟ್ಟೆ ಧರಿಸಬೇಕು. ರಸ್ತೆ ಬದಿ ಕತ್ತಿರಿಸಿ ಇಡಲಾಗಿರೋ ಹಣ್ಣುಗಳನ್ನು ಸೇವಿಸಬಾರದು. ಮಾಂಸಾಹಾರ ಹಾಗೂ ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು. ಇದನ್ನೂ ಓದಿ: ಬೇಸಿಗೆಯ ಬಿಸಿಲಿಗೆ ಚರ್ಮದ ಕಾಂತಿ ರಕ್ಷಣೆ ಮಾಡೋದು ಹೇಗೆ?
ಭೋಪಾಲ್: ಆಸ್ಪತ್ರೆ ತೆರೆಯುವ ನೆಪದಲ್ಲಿ ಕಿರಾತಕನೊಬ್ಬ ಮಹಿಳಾ ವೈದ್ಯರೊಂದಿಗೆ ಸ್ನೇಹ ಮಾಡಿಕೊಂಡು ಅಶ್ಲೀಲ ವೀಡಿಯೋ ಮಾಡಿ ಕೋಟ್ಯಂತರ ರೂ. ವಸೂಲಿ ಮಾಡಿದ ಘಟನೆ ಮಧ್ಯಪ್ರದೇಶದ ದಿಂಡೋರಿಯಲ್ಲಿ ನಡೆದಿದೆ.
ಆರೋಪಿಯನ್ನು ಮನೀಶ್ ಶ್ರೀವಾಸ್ತವ್ ಎಂದು ಗುರುತಿಸಲಾಗಿದ್ದು, ಈತ ಜಬಲ್‍ಪುರದ ನಿವಾಸಿ. ಆರೋಪಿಯು ದಿಂಡೋರಿಯಲ್ಲಿ ಆಸ್ಪತ್ರೆ ತೆರೆಯುವ ನೆಪದಲ್ಲಿ ವೈದ್ಯೆಯನ್ನು ದೋಸ್ತಿ ಮಾಡಿಕೊಂಡಿದ್ದಾನೆ. ನಂತರ ಅವರನ್ನು ಪ್ರೇಮದ ಜಾಲಕ್ಕೆ ಬಿಳಿಸಿಕೊಂಡು ಅವರ ಮೇಲೆ ಅತ್ಯಾಚಾರ ಎಸಗಿ ವೀಡಿಯೋ ಮಾಡಿದ್ದಾನೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಕನಿಷ್ಟ 12 ಮಂದಿ ಪತ್ರಕರ್ತರ ಹತ್ಯೆ
ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಅವರಿಂದ ಕೋಟ್ಯಂತರ ರೂ. ವಸೂಲಿ ಮಾಡಿದ್ದಾನೆ. ಹಾಗೆಯೇ ಆರೋಪಿಯು ಸಂತ್ರಸ್ತೆಗೆ ಇನ್ನೂ ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದನು. ಮಹಿಳೆಯು ಹೆಚ್ಚಿನ ಹಣ ನೀಡಲು ನಿರಾಕರಿಸಿದಾಗ ಆರೋಪಿ ಮನೀಶ್ ಭೋಪಾಲ್ ಮೂಲದ ಸ್ನೇಹಿತ ಕುಲಭೂಷಣ್‍ನನ್ನು ಐಬಿಯ ನಕಲಿ ಅಧಿಕಾರಿಯನ್ನಾಗಿ ಮಾಡಿ ಬೆದರಿಸಿ ಹಣ ದೋಚಿದ್ದಾನೆ ಎಂದು ತಿಳಿದು ಬಂದಿದೆ.
ಅತ್ಯಾಚಾರಗೈದ ವೀಡಿಯೋ ಮತ್ತು ಫೋಟೋಗಳನ್ನು ಆರೋಪಿಯು ವೈದ್ಯೆಯ ಪತಿಗೆ ಕಳುಹಿಸುವುದಾಗಿ ಧಮ್ಕಿ ಹಾಕಿದ್ದು ಅವರಿಂದ 1 ಕೋಟಿ 80 ಲಕ್ಷ ರೂ. ದೋಚಿದ್ದಾನೆ. ಇದರ ಮೇಲಾಗಿಯೂ ಇಬ್ಬರೂ ಯುವಕರು ವೈದ್ಯೆ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಇದರಿಂದ ಬೇಸರಗೊಂಡ ಅವರು ಸಿಟಿ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ
ಪೊಲೀಸರು ಆರೋಪಿ ಮನೀಶ್ ಮತ್ತು ಕುಲಭೂಷಣ್ ಇಬ್ಬರ ವಿರುದ್ಧವೂ ಸೆಕ್ಷನ್ 376 (ಅತ್ಯಾಚಾರ), 386 (ಸುಲಿಗೆ), 429 (ದುಷ್ಕೃತ್ಯ), 506 (ಬೆದರಿಕೆ)ಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಚಿಕ್ಕೋಡಿ(ಬೆಳಗಾವಿ): ಸನಾತನ ಧರ್ಮದ ದಿವ್ಯ ಶಕ್ತಿ ಆಯುರ್ವೇದ, ಆಯುರ್ವೇದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಖ್ಯಾತ ಆಯುರ್ವೇದ ವೈದ್ಯ ಸಚ್ಚಿನ ಮಿಶ್ರಕೋಟಿ ಹೇಳಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗವನಾಳ ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ನಿಮಿತ್ತ ವಿವಿಧ ರೋಗಗಳಿಗೆ ಉಚಿತ ಔಷಧಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಾಟಿ ಔಷಧ ಅಥವಾ ಆಯುರ್ವೇದ ಔಷಧಗಳ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದರು.
ಮೂರು ತಲೆ ಮಾರಿನಿಂದ ಆಯುರ್ವೇದ ಔಷಧ ಇಂದಿಗೂ ಹೆಸರು ಉಳಿಸಿಕೊಂಡಿದೆ. ಇಲ್ಲಿನ ಗವನಾಳ ಗ್ರಾಮದ ಡಾ.ಸಚೀನ ಮಿಶ್ರಕೋಟಿ ಹಾಗೂ ಇವರ ಸಹೋದರ ಡಾ.ಪ್ರವೀಣ ಮಿಶ್ರಿಕೋಟಿ ವರ್ಷದಲ್ಲಿ ಎರಡು ದಿನ ಉಚಿತ ಔಷಧ ನೀಡುವ ಮೂಲಕ ಈ ಭಾಗದಲ್ಲಿ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಶ್ಯಾಮನೂರು ಶಿವಶಂಕರಪ್ಪನವರದ್ದು ಎಷ್ಟನೇ ಬಣ – ಸಿದ್ದುಗೆ ಬಿಜೆಪಿ ಪ್ರಶ್ನೆ
ಪ್ರತಿ ಭಾರತ ಹುಣ್ಣುಮೆ ಹಾಗೂ ಹೋಳಿ ಹುಣ್ಣಿಮೆಯ ದಿನದಂದು ಡಾ.ಸಚಿನ ಮಿಶ್ರಕೋಟಿ ಕುಟುಂಬಸ್ಥರ ಉಚಿತ ಔಷಧ ನೀಡುತ್ತಾರೆ. ಬಿಎಎಂಎಸ್ ವೈದ್ಯಕೀಯ ಶಿಕ್ಷಣ ಪಡೆದಿರುವ ಇವರು ಹೋಳಿ ಹುಣ್ಣಿಮೆಯ ದಿನದಂದು ನೂರಾರು ಜನರಿಗೆ ಉಚಿತ ಔಷಧ ನೀಡಿದ್ದಾರೆ. ಈ ಔಷಧವು ಗಿಡ ಮೂಲಿಕೆಯಿಂದ ತಯಾರಿಸಿದ್ದು, ಇದು ನಿರಂತರ ಜ್ವರ, ಕೆಮ್ಮು, ನೆಗಡಿ ಕಫ ಸೇರಿದಂತೆ ದಿರ್ಘಕಾಲ ಕಾಡುವ ಭಾದೆಗಳಿಗೆ ಉಪಚಾರ ನೀಡುತ್ತದೆ. ಹಾಗೂ ಇದನ್ನು ನಾವು ಪ್ರತಿ ಹೋಳಿ ಹುಣ್ಣಿಮೆಯ ಹಾಗೂ ಭರತ ಹುಣ್ಣುಮೆ ದಿನದಂದು ಉಚಿತವಾಗಿ ನೀಡುತ್ತೆವೆ ಎಂದರು.
ಕೀವ್: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ತೀವ್ರವಾಗುತ್ತಿದ್ದು, ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಈ ಬೆನ್ನಲ್ಲೇ ಉಕ್ರೇನ್ ನಲ್ಲಿ ಹಲವು ಭಾರತೀಯರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಕರೆತರುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಂಡಿದೆ. ಈ ನಡುವೆ ಭಾರತೀಯರು ತಮ್ಮ ಸಾಕು ಪ್ರಾಣಿಗನ್ನು ಯುದ್ಧಭೂಮಿಯಲ್ಲಿ ಬಿಟ್ಟುಬರಲು ಮನಸ್ಸಿಲ್ಲದೇ ತಮ್ಮ ಜೊತೆಗೇ ಕರೆದುಕೊಂಡು ಬರುತ್ತಿದ್ದಾರೆ. ಅದರಲ್ಲೂ ಇಲ್ಲೊಬ್ಬ ವೈದ್ಯ ತಾನು ಮುದ್ದಾಗಿ ಸಾಕಿದ ಪ್ಯಾಂಥರ್ ಮತ್ತು ಚಿರತೆಯನ್ನು ಉಕ್ರೇನ್‍ನಲ್ಲಿ ಬಿಟ್ಟು ಭಾರತಕ್ಕೆ ಬರಲು ಹಿಂದೇಟು ಹಾಕಿದ್ದಾನೆ.
ಡಾನ್‍ಬಾಸ್ ಪ್ರದೇಶದ ಸೆವೆರೊಡೊನೆಟ್ಸ್ಕ್‍ನಲ್ಲಿರುವ ಭಾರತೀಯ ವೈದ್ಯ ಡಾ.ಗಿರಿಕುಮಾರ್ ಪಾಟೀಲ್ ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದು, ತನ್ನ ನೆಲಮಾಳಿಗೆಯಲ್ಲಿ ಪ್ಯಾಂಥರ್ ಮತ್ತು ಚಿರತೆ ಸಾಕಿಕೊಂಡಿದ್ದಾರೆ. ಯುದ್ಧದ ಹಿನ್ನೆಲೆ ಗಿರಿಕುಮಾರ್ ಅವರು ತಮ್ಮ ಮನೆಯ ಕೆಳಗಿನ ಬಂಕರ್‍ನಲ್ಲಿ ವಾಸಿಸುತ್ತಿದ್ದಾರೆ. ಯುದ್ಧದ ಹಿನ್ನೆಲೆ ಗಿರಿಕುಮಾರ್ ಅವರನ್ನು ತಮ್ಮ ದೇಶಕ್ಕೆ ಮರಳುವಂತೆ ಅಧಿಕಾರಿಗಳು ಹೇಳಲಾಗಿದೆ. ಆದರೆ ಆವರು ಮಾತ್ರ ತಮ್ಮ ಪ್ರಾಣಿಗಳನ್ನು ಬಿಡಲು ಸಿದ್ಧವಿಲ್ಲ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ನಾಯಿ ಬಿಡದಿದ್ದರೆ ನಾನು ಭಾರತಕ್ಕೆ ಬರುತ್ತಿರಲಿಲ್ಲ: ರಂಜಿತ್ ರೆಡ್ಡಿ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಜೀವವನ್ನು ಉಳಿಸಲು ನಾನು ನನ್ನ ಸಾಕುಪ್ರಾಣಿಗಳನ್ನು ಎಂದಿಗೂ ಬಿಡುವುದಿಲ್ಲ. ಯುದ್ಧದ ಹಿನ್ನೆಲೆ ನನ್ನ ಕುಟುಂಬ ಸಹ ನನ್ನನ್ನು ಹಿಂತಿರುಗುವಂತೆ ಒತ್ತಾಯಿಸುತ್ತಿದೆ. ಆದರೆ ನನ್ನ ಸಾಕುಪ್ರಾಣಿಗಳು ನನ್ನ ಮಕ್ಕಳು. ನಾನು ಅವರೊಂದಿಗೆ ಇರುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಅವರನ್ನು ರಕ್ಷಿಸುತ್ತೇನೆ ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.
ಡಾ.ಪಾಟೀಲ್ 2007ರಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್‍ಗೆ ಹೋಗಿದ್ದು, ಬಳಿಕ ಡಾನ್‍ಬಾಸ್‍ನಲ್ಲೇ ನೆಲೆಸಿದರು. ಅವರು ಅಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ಮೂಳೆಚಿಕಿತ್ಸಕರಾಗಿ ಸೇರಿಕೊಂಡರು. ಅವರು ಮೃಗಾಲಯದಲ್ಲಿ ಈ ಎರಡು ಪ್ರಾಣಿಗಳನ್ನು ನೋಡಿ ಅಧಿಕಾರಿಗಳ ಅನುಮತಿ ಮೇರೆಗೆ ದತ್ತು ಪಡೆದು ಸಾಕಲು ಪ್ರಾರಂಭಿಸಿದ್ದಾರೆ. ಅಲ್ಲದೆ ಈ ಪ್ರಾಣಿಗಳಿಗೆ ಜಾಗ್ವಾರ್ ಮತ್ತು ಪ್ಯಾಂಥರ್ ಎಂದು ಹೆಸರನ್ನು ಇಟ್ಟಿದ್ದಾರೆ.
ಜಾಗ್ವಾರ್ ಗೆ 20 ತಿಂಗಳು ಮತ್ತು ಹೆಣ್ಣು ಪ್ಯಾಂಥರ್ ಆರು ತಿಂಗಳು ವಯಸ್ಸಾಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಪಾಟೀಲ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತನುಕುಗೆ ಸೇರಿದವರು. ತನ್ನ ಸಾಕುಪ್ರಾಣಿಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಭಾರತ ಸರ್ಕಾರವು ಅವಕಾಶ ನೀಡುತ್ತದೆ ಎಂದು ಪಾಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!
ಭುವನೇಶ್ವರ: ವ್ಯಕ್ತಿಯೊಬ್ಬ ತಾನೂ ವೈದ್ಯ ಎಂದು ಹೇಳಿ ಏಳು ರಾಜ್ಯಗಳಲ್ಲಿ ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದನು. ಈ ಖತರ್ನಾಕ್ ನಕಲಿ ವೈದ್ಯನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಬಿಧು ಪ್ರಕಾಶ್ ಸ್ವೈನ್(54) ಅಲಿಯಾಸ್ ರಮೇಶ್ ಸ್ವೈನ್ ಆರೋಪಿಯಾಗಿದ್ದಾನೆ. ಈತ ಒಡಿಶಾದ ಕೇಂದ್ರಪ್ಪ ಜಿಲ್ಲೆಯ ನಿವಾಸಿಯಾಗಿದ್ದಾನೆ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್‍ಗಳಲ್ಲಿ ತಾನು ವೈದ್ಯ ಎಂದು ಹೇಳಿಕೊಂಡು 14 ಮಹಿಳೆಯರನ್ನು ಮದುವೆಯಾಗಿದ್ದಾನೆ. ಸರಿಸುಮಾರು 7 ರಾಜ್ಯಗಳ ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಕೆಂಪುಕೋಟೆ ಮೇಲೆ ಸಿಖ್ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು
ಪಂಜಾಬ್, ದೆಹಲಿ, ಅಸ್ಸಾಂ, ಜಾರ್ಖಂಡ್, ಒಡಿಶಾದ ಮಧ್ಯವಯಸ್ಕ ಮಹಿಳೆಯರು ಮತ್ತು ವಿಚ್ಛೇದಿತರನ್ನು ಸ್ವೈನ್ ಟಾರ್ಗೆಟಾಗಿದ್ದರು. ಕೆಲವು ವೈವಾಹಿಕ ವೆಬ್‍ಸೈಟ್‍ಗಳ ಮೂಲಕ ಮಹಿಳೆಯರನ್ನು ಸಂಪರ್ಕಿಸಿ ತಾನು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಕೆಲಸ ಮಾಡುವ ವೈದ್ಯ ಎಂದು ಸುಳ್ಳು ಹೇಳಿ ಬಲೆ ಬೀಸುತ್ತಿದ್ದನು. ಮದುವೆಯಾಗುವ ಮಹಿಳೆಯರ ಬಳಿ ಇರುವ ಹಣ ಪಡೆಯಲು ಸಂಚು ರೂಪಿಸಿ ವಿವಾಹ ವಾಗುತ್ತಿದ್ದನು. ಮದುವೆಯ ನಂತರ ಕೆಲವು ದಿನಗಳ ಕಾಲ ಅವರೊಂದಿಗೆ ಇರುತ್ತಿದ್ದ. ನಂತರ ಭುವನೇಶ್ವರಕ್ಕೆ ಯಾವುದೋ ಕೆಲಸದ ನಿಮಿತ್ತ ಹೋಗುವ ನೆಪದಲ್ಲಿ ಆ ಹೆಣ್ಣಮಕ್ಕಳನ್ನು ಅವರ ಪೋಷಕರ ಬಳಿ ಬಿಟ್ಟು ಹೋಗುತ್ತಿದ್ದರು ದಾಶ್ ಹೇಳಿದ್ದಾರೆ. ಎಂದು ಭುವನೇಶ್ವರ ಡಿಸಿಪಿ ಉಮಾಶಂಕರ್ ದಾಶ್ ಹೇಳಿದ್ದಾರೆ. ಇದನ್ನೂ ಓದಿ:ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ್ದ ಗಾಯಕಿ ಸಂಧ್ಯಾ ಮುಖರ್ಜಿ ನಿಧನ
ಸ್ವೇನ್ ವಿವಾಹವಾದವರಲ್ಲಿ ಸುಪ್ರೀಂ ಕೋರ್ಟ್‍ನ ವಕೀಲರು, ಹಿರಿಯ ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆಗಳ ಅಧಿಕಾರಿಯೂ ಸೇರಿದ್ದಾರೆ. 10 ಲಕ್ಷದ ಆಸೆಗಾಗಿ 2018ರಲ್ಲಿ ಪಂಜಾಬ್‍ನ ಅಂPಈ ಅಧಿಕಾರಿಯನ್ನು ವಿವಾಹವಾದರು. ಬಳಿಕ ಗುರುದ್ವಾರಕ್ಕೆ ಆಸ್ಪತ್ರೆ ಮಂಜೂರು ಮಾಡುವುದಾಗಿ ಹೇಳಿ 11 ಲಕ್ಷ ರೂ.ಗಳನ್ನು ವಂಚಿಸಿದ್ದನು. ಸ್ವೇನ್ ಐದು ಮಕ್ಕಳ ತಂದೆಯಾಗಿದ್ದು, 1982 ರಲ್ಲಿ ಮೊದಲ ಬಾರಿಗೆ ವಿವಾಹವಾದರು. ನಂತರ 2002 ರಲ್ಲಿ ಮತ್ತೊಂದು ವಿವಾಹವಾದರು. 2002 ರಿಂದ 2020ರ ನಡುವೆ ಅವರು ಹಲವಾರು ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ಅವರನ್ನು ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ.
ಜುಲೈ 2021ರಲ್ಲಿ ದೆಹಲಿ ಮೂಲದ ಶಿಕ್ಷಕಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸ್ವೈನ್ ಅವರನ್ನು ಬಂಧಿಸಲಾಗಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ, ಸ್ವೈನ್ ತನ್ನನ್ನು ನವದೆಹಲಿಯ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ. ಮಹಿಳೆ ನೀಡಿದ ಭುವನೇಶ್ವರದ ಖಂಡಗಿರಿ ಪ್ರದೇಶದ ಬಾಡಿಗೆ ವಸತಿಯಿಂದ ಬಂಧಿಸಲಾಯಿತು. ಸೆಕ್ಷನ್ 498 (ಎ), 419, 468, 471 ಮತ್ತು 494 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿವಿಧ ಮ್ಯಾಟ್ರಿಮೋನಿಯಲ್ ಸೈಟ್‍ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಇನ್ನೂ 13 ಮಹಿಳೆಯರನ್ನು ಆತ ವಂಚಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.
ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಾಹಿತಿ ಕೊಟ್ಟಿದ್ದಾರೆ.
ಕಳೆದೊಂದು ತಿಂಗಳಿನಿಂದ ಮುಂಬೈನ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಥಿತಿ ಗಂಭೀರವಾಗಿದೆ. ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರ ಹೇಳಿಕೆಯ ಪ್ರಕಾರ, ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.
ಡಾ ಪ್ರತೀತ್ ಸಮ್ದಾನಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದ್ದು, ಅವರು ಗಂಭೀರರಾಗಿದ್ದಾರೆ. ಅವರನ್ನು ವೆಂಟಿಲೇಟರ್‌ನಲ್ಲಿರಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ವೈದ್ಯರ ತಂಡ ನಿಗಾವಹಿಸಿದೆ ಎಂದು ಹೇಳಿದ್ದಾರೆ.
ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಲತಾ ಮಂಗೇಶ್ಕರ್‌ಗೆ 92 ವರ್ಷವಾಗಿರುವುದರಿಂದ ಅವರ ಆರೋಗ್ಯದ ದೃಷ್ಟಿಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2019ರಲ್ಲಿ ಉಸಿರಾಟದ ತೊಂದರೆ ಅಥವಾ ಶ್ವಾಸಕೋಶದ ಸಮಸ್ಯೆಯಿಂದಾಗಿ ಲತಾ ಮಂಗೇಶ್ಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚೇತರಿಸಿಕೊಂಡಿದ್ದರು. ಆದರೆ ಇದೀಗ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ:ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ
ಭಾರತೀಯ ಚಿತ್ರರಂಗ ಕಂಡ ಮಹಾನ್ ಪ್ರತಿಭಾವಂತ ಗಾಯಕಿ ಲತಾ ಮಂಗೇಶ್ಕರ್. ಲತಾ ಮಂಗೇಶ್ಕರ್ ಅವರು 2001ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಹಲವಾರು ರಾಷ್ಟ್ರ ಪ್ರಶಸ್ತಿಗಳು ಮತ್ತು ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮ ಮೂಡಿಗೆರಿಸಿಕೊಂಡಿದ್ದಾರೆ.