Tag: doctor

  • ಯುಪಿ ಸರ್ಕಾರಕ್ಕೆ 600 ಕೋಟಿ ಆಸ್ತಿ ದಾನ ಮಾಡಿದ ವೈದ್ಯ

    ಯುಪಿ ಸರ್ಕಾರಕ್ಕೆ 600 ಕೋಟಿ ಆಸ್ತಿ ದಾನ ಮಾಡಿದ ವೈದ್ಯ

    ಲಕ್ನೋ: ಮೊರಾದಾಬಾದ್‍ನ ವೈದ್ಯ ಅರವಿಂದ್ ಗೋಯಲ್ ಅವರು ಬಡವರಿಗೆ ಸಹಾಯ ಮಾಡಲು ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಸಂಪೂರ್ಣ 600 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ.

    ಕಳೆದ 50 ವರ್ಷಗಳಿಂದ ಅರವಿಂದ್ ಗೋಯಲ್ ಅವರು ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 25 ವರ್ಷಗಳ ಹಿಂದೆಯೇ ಆಸ್ತಿಯನ್ನು ದಾನ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಮುಂದೆ ಪ್ರತಿಭಟನೆ – ಜನರನ್ನು ಚದುರಿಸಲು ಯುದ್ಧ ಟ್ಯಾಂಕರ್ ನಿಲ್ಲಿಸಿದ ಚೀನಾ

    ಲಾಕ್‍ಡೌನ್ ವೇಳೆ ಮೊರಾದಾಬಾದ್‍ನ 50 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅರವಿಂದ್ ಕುಮಾರ್ ಗೋಯಲ್ ಅವರು, ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದರು. ಅಲ್ಲದೇ ರಾಜ್ಯದಲ್ಲಿ ಬಡವರಿಗೆ ಉಚಿತ ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆಯನ್ನು ಸಹ ಆಯೋಜಿಸಿದ್ದರು. ಇದನ್ನೂ ಓದಿ: ಡಿಕೆಶಿಗೆ ಜಮೀರ್ ಡಿಚ್ಚಿ – ಸಿದ್ದರಾಮಯ್ಯಗೆ ಜಮೀರ್ ಜಿಂದಾಬಾದ್

    ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ದೇವಿ ಪಾಟೀಲ್, ಡಾ. ಎಪಿಜೆ ಅಬ್ದುಲ್ ಕಲಾಂ ಅವರು, ಡಾ. ಅರವಿಂದ್ ಗೋಯಲ್ ಅವರಿಗೆ ನಾಲ್ಕು ಬಾರಿ ಗೌರವ ಪ್ರಶಸ್ತಿಯನ್ನು ನೀಡಿದ್ದಾರೆ. ಅರವಿಂದ್ ಗೋಯಲ್ ಅವರಿಗೆ ರೇಣು ಗೋಯಲ್ ಎಂಬ ಪತ್ನಿ ಇದ್ದು, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರಿವಿಲ್ಲದೇ 20 ವರ್ಷದಿಂದ ಮುಟ್ಟಾಗ್ತಿದ್ದಾನೆ ಈ ವ್ಯಕ್ತಿ – ಸ್ತ್ರಿಯರಂತೆ ಈತನಿಗೂ ಇದೆ ಗರ್ಭಾಶಯ

    ಅರಿವಿಲ್ಲದೇ 20 ವರ್ಷದಿಂದ ಮುಟ್ಟಾಗ್ತಿದ್ದಾನೆ ಈ ವ್ಯಕ್ತಿ – ಸ್ತ್ರಿಯರಂತೆ ಈತನಿಗೂ ಇದೆ ಗರ್ಭಾಶಯ

    ಬೀಜಿಂಗ್: ತನ್ನ ಮೂತ್ರದಲ್ಲಿ ರಕ್ತ ಮತ್ತು ನಿಯಮಿತವಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 33 ವರ್ಷದ ಚೀನಾ ವ್ಯಕ್ತಿಯೊಬ್ಬ ವೈದ್ಯರನ್ನು ಸಂಪರ್ಕಿಸಿದ ಬಳಿಕ ಈತ ಅಂಡಾಶಯ ಹಾಗೂ ಗರ್ಭಾಶಯವನ್ನು ಹೊಂದಿರುವ ವಿಚಾರ ತಿಳಿದು ಆಘಾತಕ್ಕೊಳಗಾಗಿದ್ದಾನೆ.

    ಚೆನ್ ಲಿ ಎಂದು ಗುರುತಿಸಿಕೊಂಡಿರುವ ವ್ಯಕ್ತಿ, ಪ್ರೌಢಾವಸ್ಥೆಯಲ್ಲಿ ತನ್ನ ಅನಿಯಮಿತ ಮೂತ್ರ ವಿಸರ್ಜನೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅಂದರೆ ಸುಮಾರು 20 ವರ್ಷಗಳಿಂದ ಈತ ಮೂತ್ರದಲ್ಲಿ ರಕ್ತ ಮತ್ತು ಹೊಟ್ಟೆ ನೋವನ್ನು ಅನುಭವಿಸುತ್ತಿದ್ದ.

    ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರಿಂದ ವೈದ್ಯರು ವ್ಯಕ್ತಿಗೆ ಅಪೆಂಡಿಸೈಟಿಸ್ ಎಂದು ರೋಗನಿರ್ಣಯ ಮಾಡಿದರು. ಈ ರೋಗಕ್ಕಾಗಿ ಚಿಕಿತ್ಸೆ ನೀಡಿದ ನಂತರವೂ ರೋಗಲಕ್ಷಣಗಳು ಮುಂದುವರಿಯಿತು. ಇದನ್ನೂ ಓದಿ: ಅಂಬುಲೆನ್ಸ್ ಸಿಗದೇ ತಮ್ಮನ ಶವವನ್ನು ಮಡಿಲಲ್ಲಿಟ್ಟುಕೊಂಡು ಬೀದಿಯಲ್ಲಿ ಕುಳಿತ ಬಾಲಕ

    ಕಳೆದ ವರ್ಷ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಿದ ವೇಳೆ ವ್ಯಕ್ತಿ ಸ್ತ್ರೀ ಲೈಂಗಿಕ ವರ್ಣತಂತುಗಳನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಮತ್ತೊಂದು ವೈದ್ಯಕೀಯ ತಪಾಸಣೆಯಲ್ಲಿ ಈತ ಗರ್ಭಾಶಯ ಹಾಗೂ ಅಂಡಾಶಯ ಸೇರಿದಂತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿದ್ದಾನೆ ಎಂಬ ಸತ್ಯ ಬೆಳಕಿಗೆ ಬಂದಿದೆ.

    ಚೆನ್ ಲಿಗೆ ಪುರುಷ ಲೈಂಗಿಕ ಹಾರ್ಮೋನ್ ಆಂಡ್ರೊಜೆನ್ ಮಟ್ಟಗಳು ಸರಾಸರಿಗಿಂತ ಕಮ್ಮಿ ಇವೆ. ಆದರೆ ಸ್ತ್ರೀ ಲೈಂಗಿಕ ಹಾರ್ಮೋನುಗಳ ಮಟ್ಟಗಳು ಮತ್ತು ಅಂಡಾಶಯದ ಚಟುವಟಿಕೆಯು ಆರೋಗ್ಯಕರ ವಯಸ್ಕ ಮಹಿಳೆಯರಲ್ಲಿ ಕಂಡುಬರುವಂತೆಯೇ ಇದೆ. ಹೀಗಾಗಿ ಗಂಡು ಮತ್ತು ಹೆಣ್ಣು ಅಂಗಗಳೊಂದಿಗೆ ಜನಿಸಿರುವ ಇಂಟರ್ ಸೆಕ್ಸ್ ಎಂದು ವೈದ್ಯರು ಚೆನ್ ಲಿಗೆ ತಿಳಿಸಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಚೆನ್ ಲಿ ತನ್ನ ಸ್ತ್ರಿ ಸಂತಾನೋತ್ಪತ್ತಿ ಅಂಗಗಳನ್ನು ತೆಗೆದುಹಾಕಲು ನಿರ್ಧರಿಸಿ, ಕಳೆದ ತಿಂಗಳು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲೇ ಅಡುಗೆ ಮಾಡಿ ತಿಂದ ಪ್ರತಿಭಟನಾಕಾರರು

    ಈ ಹಂತದಿಂದ ವ್ಯಕ್ತಿ ಸಾಮಾನ್ಯ ಮನುಷ್ಯರಂತೆ ಜೀವನ ನಡೆಸಬಲ್ಲನು. ಆದರೆ ಅವನು ಸಂತಾನೋತ್ಪತ್ತಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವನ ವೃಷಣಗಳು ವೀರ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಇದು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರದಿದ್ದರೂ, ಇದರಿಂದ ಕೆಲವರು ಮಾನಸಿಕವಾಗಿ ಆಘಾತಕ್ಕೊಳಗಾಗುವ ಸಾಧ್ಯತೆ ಇರುತ್ತದೆ. ಸದ್ಯ ಶಸ್ತ್ರ ಚಿಕಿತ್ಸೆಯ ಬಳಿಕ ಚೆನ್ ಲಿ ಬೇಗನೆ ಗುಣಮುಖನಾಗಿದ್ದು, ಆತ್ಮವಿಶ್ವಾಸ ಮತ್ತಷ್ಟು ಬಲವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಕೇವಲ 40ರೂ.ನಲ್ಲಿ ಧೋನಿ ಮಂಡಿ ನೋವು ಗುಣಪಡಿಸಿದ ಹಳ್ಳಿ ವೈದ್ಯ!

    ಕೇವಲ 40ರೂ.ನಲ್ಲಿ ಧೋನಿ ಮಂಡಿ ನೋವು ಗುಣಪಡಿಸಿದ ಹಳ್ಳಿ ವೈದ್ಯ!

    ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವರು ತುಂಬಾ ಮೃದು ಸ್ವಭಾವ ಹಾಗೂ ಎಲ್ಲರ ಜೊತೆ ಬಹಳ ಆತ್ಮೀಯತೆಯಿಂದ ಕೂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಜಾರ್ಖಂಡ್‍ನ ಅತಿದೊಡ್ಡ ತೆರಿಗೆದಾರ ಮಹೇಂದ್ರ ಸಿಂಗ್ ಧೋನಿ ವಿಶ್ವದ ಯಾವುದೇ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಇದೀಗ ಅವರು ಸ್ಥಳೀಯ ವೈದ್ಯರಿಂದ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ಧೋನಿ ಅವರು ಕೆಲ ಸಮಯದಿಂದ ಎರಡೂ ಕಾಲುಗಳ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಇದೀಗ ಅವರು ರಾಂಚಿಯ ಸ್ಥಳೀಯ ಹಳ್ಳಿ ವೈದ್ಯರ ಬಳಿ ಕಾಡಿನಲ್ಲಿ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧ ಸೇವಿಸುತ್ತಿದ್ದಾರೆ. ಧೋನಿ ಲ್ಯಾಂಪಂಗ್‍ನ ಸ್ಥಳೀಯ ವೈದ್ಯ ವಂದನ್ ಸಿಂಗ್ ಖೇರ್ವಾರ್ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದೆ ಎಂದು ವೈದ್ಯರು ಹೇಳಿದ್ದಾರೆ.

    ಸ್ವತಃ ಎಂಎಸ್ ಧೋನಿ ಅವರೇ ಔಷಧಿ ತೆಗೆದುಕೊಂಡು ಬರಲು ರಾಂಚಿಯಿಂದ 70 ಕಿಲೋಮೀಟರ್ ಕಾರಿನಲ್ಲಿ ಕ್ರಮಿಸುತ್ತಾರೆ. ಅಲ್ಲದೆ ಅಲ್ಲಿ ಸಾಮಾನ್ಯನಂತೆ ಧೋನಿ ಮರದ ಕೆಳಗೆ ಕುಳಿತು ಔಷಧ ಸೇವಿಸುತ್ತಾರೆ. ಧೋನಿ ಇತ್ತೀಚೆಗೆ ಜೂನ್ 26 ರಂದು ಬಾಬಾ ಅವರ ಡೋಸ್ ಪಡೆಯಲು ಭೇಟಿ ನೀಡಿದ್ದರು. ಈ ವೇಳೆ ಎಂಎಸ್ ಧೋನಿ ಬಂದಿದ್ದಾರೆ ಎಂದು ತಿಳಿದ ತಕ್ಷಣ ಜನ ಅಲ್ಲಿ ನೆರೆದಿದ್ದರು.

    ಇದಾದ ನಂತರ ಎಂಎಸ್ ಧೋನಿ ತಮ್ಮ ಅಭಿಮಾನಿಗಳೊಂದಿಗೆ ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಮೊಣಕಾಲು ನೋವಿನ ಚಿಕಿತ್ಸೆಗಾಗಿ ಧೋನಿ ಅವರ ಪೋಷಕರು ಸಹ ಅವರ ಬಳಿಗೆ ಹೋಗಿದ್ದರು. ಮತ್ತು ಬಾಬಾ ಅವರು ನೀಡುವ ಔಷಧಿ ಅವರ ಕಾಯಿಲೆಯನ್ನು ಗುಣಪಡಿಸಿದೆ ಎಂದು ವೈದ್ಯರು ಹೇಳಿದರು. ಪೋಷಕರ ಯಶಸ್ವಿ ಚಿಕಿತ್ಸೆ ಬಳಿಕ ಧೋನಿ ಕೂಡ ಆ ವೈದ್ಯರ ಬಳಿಯಿಂದಲೇ ಔಷಧಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಇದನ್ನೂ ಓದಿ: ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದ – ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ

    ಎಂಎಸ್ ಧೋನಿ ಮೊದಲ ಬಾರಿಗೆ ಚಿಕಿತ್ಸೆಗಾಗಿ ತನ್ನ ಬಳಿಗೆ ಬಂದಾಗ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯ ವ್ಯಕ್ತಿಯಂತೆ ಧೋನಿ ಅವರ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡರು. ಔಷಧಿಗೆ 40 ರೂಪಾಯಿ ತೆಗೆದುಕೊಂಡೆ. ಅವರ ಕಾರನ್ನು ನೋಡಿ ಇಲ್ಲಿನ ಹುಡುಗರು ಅವರು ಧೋನಿ ಎಂದು ಹೇಳಿದ್ದರಿಂದ ನನಗೆ ಗೊತ್ತಾಯಿತು ಎಂದು ವೈದ್ಯರು ಹೇಳಿದರು.

    Live Tv

  • ಆಪರೇಷನ್ ಮಾಡಿ 15 ದಿನವಾದ್ರೂ ಹೊಲಿಗೆ ಇಲ್ಲ- ವೈದ್ಯರ ನಿರ್ಲಕ್ಷ್ಯಕ್ಕೆ ಹೋಯ್ತು ವೃದ್ಧೆ ಜೀವ

    ಆಪರೇಷನ್ ಮಾಡಿ 15 ದಿನವಾದ್ರೂ ಹೊಲಿಗೆ ಇಲ್ಲ- ವೈದ್ಯರ ನಿರ್ಲಕ್ಷ್ಯಕ್ಕೆ ಹೋಯ್ತು ವೃದ್ಧೆ ಜೀವ

    ದಾವಣಗೆರೆ: ವೈದ್ಯರ ಎಡವಟ್ಟಿನಿಂದಾಗಿ ವೃದ್ಧೆಯೊಬ್ಬರು 20 ದಿನ ನರಳಿ ನರಳಿ ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ವೃದ್ಧೆಯನ್ನು ಅನ್ನಪೂರ್ಣಮ್ಮ(65) ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರ ವಿರುದ್ಧ ಅನ್ನಪೂರ್ಣಮ್ಮ ಕುಟುಂಬದವರು ಕಿಡಿಕಾರುತ್ತಿದ್ದಾರೆ. ತಾಯಿ ಜೀವ ಕಳೆದಿದ್ದಾನೆ ಎಂದು ವೃದ್ಯರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಕೆಆರ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯ ದೀಪಕ್ ಬೊಂದಡೆಯನ್ನು ಪೊಲೀಸರು ಸುರಕ್ಷಿತವಾಗಿ ಹೊರ ಕಳಿಸಿದರು.

    ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅನ್ನಪೂರ್ಣಮ್ಮ ಅವರನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಂತೆಯೇ ಆಸ್ಪತ್ರೆಗೆ ದಾಖಲಿಸಿಕೊಂಡು ವೈದ್ಯ ದೀಪಕ್ ಬೊಂದಡೆ, ವೃದ್ಧೆಯ ಹೊಟ್ಟೆ ಕೊಯ್ದು ಹಾಗೆಯೇ ಬಿಟ್ಟಿದ್ದಾನೆ. ಹೀಗೆ ಆಪರೇಷನ್ ಮಾಡಿ 15 ದಿನ ಆದರೂ ಹೊಲಿಗೆ ಹಾಕಿಲ್ಲ. ಇದನ್ನೂ ಓದಿ: ವೃದ್ಧೆಯ ಹೊಟ್ಟೆ ಕೊಯ್ದು ಹಾಗೆ ಬಿಟ್ಟ – ವೈದ್ಯನ ಯಡವಟ್ಟಿಗೆ ವೃದ್ಧೆ ನರಳಾಟ

    ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಕೇಳಿದರೆ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುವುದು ಎಂದು ಹೇಳಿ ನಿರ್ಲಕ್ಷ್ಯ ತೋರಿದ್ದಾರೆ. ಯಾವುದೇ ಬಿಲ್ ನೀಡದೆ 3 ಲಕ್ಷಕ್ಕೂ ಅಧಿಕ ಬಿಲ್ ಕಟ್ಟಿಸಿಕೊಂಡಿದ್ದರು. ಈ ಮಧ್ಯೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ವೃದ್ಧೆಯ ಮಕ್ಕಳು ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು.

    15 ದಿನಗಳಿಂದ ಅನ್ನಪೂರ್ಣಮ್ಮ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷದಿಂದ ವೃದ್ಧೆ ಸಾವನ್ನಪ್ಪಿದ ಹಿನ್ನೆಲೆ ಖಾಸಗಿ ಆಸ್ಪತ್ರೆಯ ಮುಂದೆ ಮೃತದೇಹವನ್ನು ಇಟ್ಟು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.

    Live Tv

  • ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

    ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

    ಬೆಂಗಳೂರು: ಹಿಮಾಲಯಕ್ಕೆ ಚಾರಣ ಹೋದ ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯ ವೈದ್ಯರೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಚಂದ್ರಮೋಹನ್ (31) ನಾಪತ್ತೆಯಾಗಿರುವ ವೈದ್ಯ. ವಸಂತನಗರ ನಿವಾಸಿಯಾಗಿರುವ ಇವರು ಒಂಟಿಯಾಗಿ ಹಿಮಾಲಯ ಪರ್ವತಕ್ಕೆ ಚಾರಣ ಹೊಗಿದ್ದಾರೆ. ಹೀಗೆ ಹೋಗಿ ಜೂನ್ 20 ರ ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ. ಇದನ್ನೂ ಓದಿ: ವಿಧಾನಸೌಧದ ಆವರಣದಲ್ಲೇ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಆಗಲಿದೆ: ಸಿಎಂ ಘೋಷಣೆ

    ಚಂದ್ರಮೋಹನ್ ಅವರು ಒಂಟಿಯಾಗಿ ಚಾರಣ ಹೋಗುವ ಹವ್ಯಾಸ ಹೊಂದಿದ್ದಾರೆ. ಈ ಬಾರೀ ನೇಪಾಳಕ್ಕೆ ಚಾರಣ ಹೋಗಿದ್ದಾರೆ. ನೇಪಾಳದ ಮೂಲಕ ಹಿಮಾಲಯ ಹತ್ತಲು ಹೋಗಿದ್ದಾರೆ. ಶಿವನ ಅಪಾರ ಭಕ್ತನಾಗಿದ್ದ ಚಂದ್ರಮೋಹನ್, ಸಾಧು ಸಂತರ ಜೊತೆ ಪೂಜೆ, ಧ್ಯಾನದಲ್ಲಿ ತೊಡಗಿದ್ದರು. ಈ ಮೂಲಕ ಆಧ್ಯಾತ್ಮಿಕದ ಕಡೆ ಅತಿಯಾದ ಒಲವು ಹೊಂದಿದ್ದರು.

    ಯಾವುದೇ ಪ್ರವಾಸಿ ಗೈಡೆನ್ಸ್ ತೆಗೆದುಕೊಳ್ಳದೇ ಹೋಗಿದ್ದಾರೆ. ಹೊಸ ಹೊಸ ಸ್ಥಳಗಳನ್ನ ಅನ್ವೇಷಣೆ ಮಾಡಲು ಒಂಟಿಯಾಗಿ ಹೋಗುವ ಹವ್ಯಾಸ ಹೊಂದಿದ್ದರು. ಇದೀಗ ನಾಪತ್ತೆಯಾಗಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿರುವ ವೈದ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv

  • ಪ್ರೀತಿ ನಿರಾಕರಿಸಿದ ಮನೆಯವರು – ಲಿಂಗವನ್ನೇ  ಬದಲಾಯಿಸಿಕೊಂಡ ಯುವತಿ

    ಪ್ರೀತಿ ನಿರಾಕರಿಸಿದ ಮನೆಯವರು – ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ

    ಲಕ್ನೋ: ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರ ಸಂಬಂಧಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಯುವತಿಯೊಬ್ಬಳು ಲಿಂಗವನ್ನೇ ಬದಲಾಯಿಸಿಕೊಂಡ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

    ಸಲಿಂಗಿಗಳಾದ ಯುವತಿಯರಿಬ್ಬರ ಒಬ್ಬರನೊಬ್ಬರು ಬಹಳ ಪ್ರೀತಿಸುತ್ತಿದ್ದರು. ತಮ್ಮ ಇಬ್ಬರ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗದುಕೊಂಡು ಹೋಗಲು ಇಚ್ಛಿಸಿ ಇಬ್ಬರು ಮದುವೆಯಾಗಲು ತೀಮಾನಿಸಿದರು. ಆದರೆ ಇವರಿಬ್ಬರ ಸಂಬಂಧಕ್ಕೆ ಮನೆಯವರು ವಿರೋಧ ವ್ಯಕ್ತಿಪಡಿಸಿದ್ದಾರೆ. ಈ ವೇಳೆ ಅವರಲ್ಲಿ ಒಬ್ಬಳು ಶಸ್ತ್ರಚಿಕಿತ್ಸೆ ಮೂಲಕ ಲಿಂಗವನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದಳು.

    ಹುಚ್ಚಿಯಂತೆ ಪ್ರೀತಿಸುತ್ತಿದ್ದ ಯುವತಿ ತಮ್ಮ ಪ್ರೀತಿಗೆ ಯಾವುದೇ ಅಡ್ಡಿ, ಆತಂಕ ಬರಬಾರದು ಎಂಬ ಉದ್ದೇಶದಿಂದ ತನ್ನ ಲಿಂಗಬದಲಾಯಿಸಿಕೊಳ್ಳಲು ತೀರ್ಮಾನಿಸಿದಳು. ಯುವತಿ ತನ್ನ ಕುಟುಂಬಸ್ಥರ ಮನವೊಲಿಸಲು ನಾನಾ ಪ್ರಯತ್ನಗಳನ್ನಜು ಮಾಡಿದಳು ಆದರೆ, ಆಕೆಯ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು. ಕೊನೆಗೆ ತಮ್ಮಿಬ್ಬರ ಸಂಬಂಧ ಉಳಿಸಿಕೊಳ್ಳಲು ಆಕೆಗೆ ಬೇರೆ ದಾರಿ ಕಾಣದಿದ್ದಾಗ, ತನ್ನ ಲಿಂಗವನ್ನೇ ಬದಲಾಯಿಸಿಕೊಳ್ಳಲು ಯೋಚಿಸಿದ್ದಾಳೆ.

    ಪ್ರಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯ ವೈದ್ಯರ ತಂಡವು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಕೆ ಸಂಪೂರ್ಣ ಪುರುಷನಾಗಲು ಸುಮಾರು 1.5 ವರ್ಷಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ. ಮೋಹಿತ್ ಜೈನ್ ಹೇಳಿದ್ದಾರೆ.

    ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ನಂತರ ಯುವತಿ ಗರ್ಭಧರಿಸುವ ಮತ್ತು ಗರ್ಭಿಣಿಯಾಗುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ರೀತಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಇದೇ ಮೊದಲಾಗಿದ್ದು, ಸಂಪೂರ್ಣ ಚಿಕಿತ್ಸೆ 18 ತಿಂಗಳಿನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸದ್ಯ ಯುವತಿಯ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

    Live Tv

  • 7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    ಬೆಳಗಾವಿ: ಮೂಡಲಗಿ ಪಟ್ಟಣದ ಹಳ್ಳದಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಎಚ್‍ಒ ಮಹೇಶ್ ಕೋಣಿ, ಮೂಡಲಗಿ  ಪೊಲೀಸರ ನೇತೃತ್ವದಲ್ಲಿ ಸ್ಕ್ಯಾನಿಂಗ್ ಸೆಂಟರ್, ಆರು ಮೆಟರ್ನಿಟಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.

    belgavi

    ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಬೆಳಗಾವಿ ಡಿಎಚ್‍ಒ ನೇತೃತ್ವದ ತಂಡ ನವಜೀವನ ಆಸ್ಪತ್ರೆ ಹಾಗೂ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆಗಳ ಕೈವಾಡ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಆಸ್ಪತ್ರೆಗಳನ್ನು ಡಿಎಚ್‍ಒ ಮಹೇಶ್ ಕೋಣಿ ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ನಮ್ಮ ಆಸ್ಪತ್ರೆಯದ್ದು ಎಂದ ವೈದ್ಯೆ

    ಶುಕ್ರವಾರ ದಾಳಿ ನಡೆದಂತಹ ಸಂದರ್ಭದಲ್ಲಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ವೈದ್ಯೆ ಡಾ.ವೀಣಾ ಕಣಕರೆಡ್ಡಿ ಏಳು ಭ್ರೂಣಗಳು ತಾವೇ ಎಸೆದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಪಾಮೋಲಿನನಲ್ಲಿ ಭ್ರೂಣಗಳನ್ನು ರಕ್ಷಣೆ ಮಾಡಿ ಬಾಟಲ್‍ನಲ್ಲಿ ಇಡಲಾಗಿತ್ತು. ಅಧಿಕಾರಿಗಳ ದಾಳಿಗೆ ಹೆದರಿ ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಶಿಫ್ಟ್ ಆಗುವಾಗ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ಸಿಬ್ಬಂದಿ ಬಳಿ ಭ್ರೂಣಗಳನ್ನು ಎಸೆಯಲು ಕೊಟ್ಟಿದ್ದಾರೆ. ವೆಂಕಟೇಶ ಆಸ್ಪತ್ರೆ ಸಿಬ್ಬಂದಿ ಅವುಗಳನ್ನು ತೆಗೆದುಕೊಂಡು ಹೋಗಿ ಜೂ.23ರಂದು ಹಳ್ಳದಲ್ಲಿ ಎಸೆದಿರುವುದಾಗಿ ವೈದ್ಯೆ ಡಾ.ವೀಣಾ ಕಣಕರೆಡ್ಡಿ ತಪ್ಪು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ

    ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದ್ದು, ಶುಕ್ರವಾರ ಸಿಕ್ಕಿರುವ ಏಳು ಭ್ರೂಣ ಮೃತದೇಹಗಳು ಮೂರು ವರ್ಷಗಳ ಹಿಂದೆ ಗರ್ಭಪಾತ ಮಾಡಿದ್ದವು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಪೊಲೀಸರ ದಾಳಿ ಭೀತಿಯಿಂದ ಕಳೆದ ಜೂನ್.23ರಂದು ರಾತ್ರೋರಾತ್ರಿ ಏಳು ಭ್ರೂಣಗಳನ್ನು ಐದು ಬಾಟಲಿಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಹಳ್ಳಕ್ಕೆ ಎಸೆದಿದ್ದರು. ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಬಯಲಾಗಿದ್ದು ಈಗಾಗಲೇ ಆಸ್ಪತ್ರೆ ಸೀಜ್ ಮಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ನಿಯಮ ಗಾಳಿಗೆ ತೂರಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಲಿಂಗ ಪತ್ತೆ ಹಚ್ಚುತ್ತಿದ್ರಾ ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ಗೊತ್ತಿದ್ರೂ ಸುಮ್ಮನೆ ಕುಳಿತಿದ್ದಾರಾ ಎಂಬ ಆರೋಪ ಕೇಳಿಬಂದಿದೆ.

    Live Tv

  • ವೃದ್ಧೆಯ ಹೊಟ್ಟೆ ಕೊಯ್ದು ಹಾಗೆ ಬಿಟ್ಟ – ವೈದ್ಯನ ಯಡವಟ್ಟಿಗೆ ವೃದ್ಧೆ ನರಳಾಟ

    ವೃದ್ಧೆಯ ಹೊಟ್ಟೆ ಕೊಯ್ದು ಹಾಗೆ ಬಿಟ್ಟ – ವೈದ್ಯನ ಯಡವಟ್ಟಿಗೆ ವೃದ್ಧೆ ನರಳಾಟ

    ದಾವಣಗೆರೆ: ವೃದ್ಧೆಯೊಬ್ಬರ ಹೊಟ್ಟೆ ಕೊಯ್ದು ವೈದ್ಯನೊಬ್ಬ ಹಾಗೆ ಬಿಟ್ಟಿದ್ದಾನೆ. ಡಾಕ್ಟರ್ ಮಾಡಿದ ಯಡವಟ್ಟಿನಿಂದ ಇದೀಗ ವೃದ್ಧೆ ನರಳಾಡುತ್ತಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಗುರುನಾಥ್ ಆಸ್ಪತ್ರೆಗೆ ಹೋಗಿದ್ದ 65 ವರ್ಷದ ಅನ್ನಪೂರ್ಣಮ್ಮ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆಸ್ಪತ್ರೆಗೆ ಬಂದಿದ್ದ ವೃದ್ಧೆಗೆ ವೈದ್ಯ ದೀಪಕ್ ಬೊಂದಾಡೆ ಆಪರೇಷನ್ ಮಾಡಿದ್ದಾನೆ. ಇದನ್ನೂ ಓದಿ:  ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ಭ್ರೂಣಗಳನ್ನು ಡೆಮೋನ್‍ಸ್ಟ್ರೇಷನ್‍ಗೆ ಇಟ್ಟಿದ್ವಿ ಎಂದ ವೈದ್ಯೆ

    ಹೊಟ್ಟೆಕೊಯ್ದ ಬಳಿಕ ಹಾಗೆಯೇ ಬಿಟ್ಟಿದ್ದ ವೈದ್ಯ, ಆಪರೇಷನ್ ಮಾಡಿ 15 ದಿನ ಆದರೂ ಹೊಲಿಗೆ ಹಾಕಿರಲಿಲ್ಲ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಕೇಳಿದರೆ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುವುದು ಎಂದಿದ್ದರು. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಪರೇಷನ್ ಬಳಿಕ ವೃದ್ದೆಗೆ ಕಣ್ಣು ಕಾಣುತ್ತಿಲ್ಲ, ಊಟವೂ ಸೇರುತ್ತಿಲ್ಲ. ಯಾವುದೇ ಬಿಲ್ ನೀಡದೇ ಸುಮಾರು 3 ಲಕ್ಷಕ್ಕೂ ಅಧಿಕ ಬಿಲ್ ಕಟ್ಟಿಸಿಕೊಂಡ ಆಸ್ಪತ್ರೆಯವರು, ಔಷಧಿಯಲ್ಲೇ ಗುಣಮುಖವಾಗುವಂತೆ ಆಪರೇಷನ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಸದ್ಯ ಅನ್ನಪೂರ್ಣಮ್ಮ ರನ್ನ ಗುರುನಾಥ್ ಆಸ್ಪತ್ರೆಯಿಂದ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ವೈದ್ಯ ದೀಪಕ್ ಬೊಂದಾಡೆ ನಕಾರ ಮಾಡಿದ್ದಾನೆ. ಇದೀಗ ವೈದ್ಯರ ವಿರುದ್ಧ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ

    Live Tv

  • ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ನಮ್ಮ ಆಸ್ಪತ್ರೆಯದ್ದು ಎಂದ ವೈದ್ಯೆ

    ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ನಮ್ಮ ಆಸ್ಪತ್ರೆಯದ್ದು ಎಂದ ವೈದ್ಯೆ

    ಬೆಳಗಾವಿ: ಜಿಲ್ಲೆಯ ಮೂಡಲಗಿ ಪಟ್ಟಣದ ಸೇತುವೆ ಬಳಿಯ ಹಳ್ಳದಲ್ಲಿ ಶುಕ್ರವಾರ ದೊರೆತ 7 ಭ್ರೂಣಗಳ ಹಿಂದಿನ ಸತ್ಯವನ್ನು ಪಬ್ಲಿಕ್ ಟಿವಿ ಭೇದಿಸಿದೆ.

    ಈ ಭ್ರೂಣಗಳು ನಮ್ಮ ಆಸ್ಪತ್ರೆಗೆ ಸೇರಿದ್ದು ಅಂತ “ವೆಂಕಟೇಶ ಮೆಟರ್ನಿಟಿ ಮತ್ತು ಸ್ಕ್ಯಾನಿಂಗ್ ಸೆಂಟರ್” ಆಸ್ಪತ್ರೆ ನಡೆಸುತ್ತಿರುವ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ವೀಣಾ ಕಣಕರೆಡ್ಡಿ ಹೇಳಿದ್ದಾರೆ. ಈ ಹಿಂದೆ ನಾವು ಬಾಡಿಗೆ ಬಿಲ್ಡಿಂಗ್‍ನಲ್ಲಿ ಆಸ್ಪತ್ರೆ ನಡೆಸುತ್ತಿದ್ದಾಗ ಡೆಮೋನ್‍ಸ್ಟ್ರೇಷನ್‍ಗಾಗಿ ಬಾಟಲಿಯಲ್ಲಿ ಹಾಕಿ ಇಟ್ಟಿದ್ದೇವು. ಒಂದಕ್ಕೆ ತಲೆಯಿಲ್ಲ, ಇನ್ನೊಂದಕ್ಕೆ ಹೊಟ್ಟೆಯ ಕರಳು ಹೊರಗೆ ಬಂದಿದೆ. ಇನ್ನೆರಡು ಮಕ್ಕಳ ಎದೆ ಅಂಟಿಕೊಂಡಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ

    ಬಾಡಿಗೆ ಕಟ್ಟಡ ಬಿಟ್ಟು ನಾವು ಈ ಬಿಲ್ಡಿಂಗ್‍ಗೆ ಬಂದಾಗ ಅವು ಏನಾದವು ಅಂತ ಗೊತ್ತಿಲ್ಲ ಅಂದಿದ್ದಾರೆ. ಆದರೆ, ಮೂಡಲಗಿ ಬಸ್ ನಿಲ್ದಾಣದ ಅನತಿ ದೂರದಲ್ಲೇ ಆಸ್ಪತ್ರೆಯಿದ್ದು, ಸ್ಕ್ಯಾನಿಂಗ್ ಮಷಿನ್‍ಗೆ ಕೆಪಿಎಂಎ ರಿಜಿಸ್ಟ್ರೇಷನ್ ಇಲ್ಲ. ಜೊತೆಗೆ ಈ ಸ್ಕ್ಯಾನಿಂಗ್ ಸೆಂಟರ್ ನಡೆಸಲು ಅನುಮತಿ ಪಡೆದಿಲ್ಲ ಎನ್ನುವುದು ಚರ್ಚೆ ಆಗುತ್ತಿದೆ.  ಇದನ್ನೂ ಓದಿ: ಪೋಸ್ಟರ್ ಹರಿದಿದ್ದಕ್ಕೆ DYFI ಕಾರ್ಯಕರ್ತನ ಮೇಲೆ ಹಲ್ಲೆ – 25 ಮಂದಿ ವಿರುದ್ಧ ಕೇಸ್, ಐವರು ವಶಕ್ಕೆ

    Live Tv

  • ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಆತ್ಮಹತ್ಯೆ

    ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಆತ್ಮಹತ್ಯೆ

    ಬೆಂಗಳೂರು: ನಗರದ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆ ವೈದ್ಯರೊಬ್ಬರು ಅಪಾರ್ಟ್‍ಮೆಂಟ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ಪೃಥ್ವಿ ರಾಜ್ ರೆಡ್ಡಿ(31) ಸೂಸೈಡ್ ಮಾಡಿಕೊಂಡ ವೈದ್ಯ. ಹೆಬ್ಬಾಳದ ಗೋದ್ರೆಜ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ ಇವರು 11ನೇ ಮಹಡಿಯಿಂದ ಹಾರಿ ಜೀವ ಕಳೆದುಕೊಂಡಿದ್ದಾರೆ. ಪೃಥ್ವಿರಾಜ್, ಮೂರು ತಿಂಗಳ ಹಿಂದೆಯಷ್ಟೇ ವೈದ್ಯೆಯನ್ನ ಮದುವೆ ಆಗಿದ್ದರು. ಗಂಡ-ಹೆಂಡತಿ ಇಬ್ಬರು ಕೂಡ ವಿಕ್ಟೊರಿಯಾ ಆಸ್ಪತ್ರೆಯಲ್ಲೆ ವೈದ್ಯರಾಗಿ ಕೆಲಸ ಮಾಡಿಕೊಂಡಿದ್ದರು. ಇದನ್ನೂ ಓದಿ: ಸ್ವಯಂ ಪ್ರೇರಿತನಾಗಿ ಡ್ರಗ್ಸ್ ಸೇವಿಸಿಲ್ಲ, ಬೆಂಗಳೂರು ಪೊಲೀಸ್ ಒಳ್ಳೆಯವರು : ಬಾಲಿವುಡ್ ನಟ ಸಿದ್ಧಾಂತ್ ಕಪೂರ್

    ಇವರು ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಪೃಥ್ವಿರಾಜ್ ಡೆತ್ ನೋಟ್ ಬರೆದಿದ್ದಾರೆ. ಮೊಬೈಲ್ ನಲ್ಲಿ ತೆಲುಗು ಭಾಷೆಯಲ್ಲಿ ಡೆತ್ ನೋಟ್ ಬರೆದಿದ್ದಿಟ್ಟಿದ್ದಾರೆ. ಹೀಗಾಗಿ ಅವರ ಮೊಬೈಲ್ ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ.

    ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.